ವಿಭಾಗಗಳು

ಸುದ್ದಿಪತ್ರ


 

ಕುಮಾರಸ್ವಾಮಿಗೆ ಗೆಲ್ಲುವ ಒಂದೇ ಅವಕಾಶವಿತ್ತು!!

ಮುಂದೇನು? ಗಾಬರಿಗೊಳ್ಳಬೇಡಿ. ಮಧ್ಯಂತರ ಚುನಾವಣೆಗೆ ಹೋಗುವ ಸಾಮಥ್ರ್ಯ ಯಾವ ಪಕ್ಷದವರಿಗೂ ಇಲ್ಲ. ಹೀಗಾಗಿ ಶತಾಯ-ಗತಾಯ ಈ ಸಾರ್ಕರವನ್ನು ಉಳಿಸಿಕೊಳ್ಳುತ್ತಾರೆ. ಆದರೆ ಬಂಡಾಯದವರೆಲ್ಲಾ ರಾಜಿನಾಮೆ ಮರಳಿ ಪಡೆದು ಸೇರಿಕೊಂಡರೆ ಕ್ರೆಡಿಟ್ಟು ಮಾತ್ರ ಸಿದ್ದರಾಮಯ್ಯನಿಗೆ.

ರಾಜಕೀಯ ಪ್ರಹಸನ ನಿಲ್ಲುವಂತೆ ಕಾಣುತ್ತಿಲ್ಲ. ಈ ಸಕರ್ಾರ ಇರುವವರೆಗೂ ಇದು ಹೀಗೆಯೇ ನಡೆಯುತ್ತದೆಯೇನೋ! ಟ್ವೆಂಟಿ-ಟ್ವೆಂಟಿ ಸಕರ್ಾರದ ಕಾಲಕ್ಕೆ ಎಷ್ಟೆಲ್ಲಾ ಗೌರವವನ್ನು ಕುಮಾರಸ್ವಾಮಿಯವರು ಗಳಿಸಿಕೊಂಡಿದ್ದರೋ ಈ ಸಕರ್ಾರದಲ್ಲಿ ಅವೆಲ್ಲವನ್ನೂ ಕಳೆದುಕೊಂಡುಬಿಟ್ಟಿದ್ದಾರೆ. ಈಗಂತೂ ರಾಜಿನಾಮೆ ಕೊಟ್ಟ ಕಾಂಗ್ರೆಸ್ ನಾಯಕರ ನಾಟಕದ ನಡುವೆ ಹೀರೋ ಆಗಿದ್ದು ಸಿದ್ದರಾಮಯ್ಯನವರೇ ಹೊರತು ಮತ್ಯಾರೂ ಅಲ್ಲ. ಕಳೆದ ಕೆಲವಾರು ದಿನಗಳ ಒಟ್ಟಾರೆ ರಾಜಕೀಯವನ್ನು ಗಮನಿಸಿ. ಸಿದ್ದರಾಮಯ್ಯ ಕೆಲ ದಿನಗಳ ಹಿಂದೆ ರಾಹುಲ್ನನ್ನು ಭೇಟಿ ಮಾಡಲು ಹೋಗಿದ್ದರು. ಉದ್ದೇಶವೇನಿತ್ತು ಗೊತ್ತೇ? ಈ ಸಕರ್ಾರವನ್ನು ವಿಸಜರ್ಿಸಿ ಮಧ್ಯಂತರ ಚುನಾವಣೆಗೆ ಹೋಗೋಣವೆಂಬ ಸಲಹೆಕೊಡಲು! ಇಷ್ಟಕ್ಕೂ ಈಗೊಂದು ಚುನಾವಣೆಯ ಅಗತ್ಯ ಸಿದ್ದರಾಮಯ್ಯನವರಿಗೆ ಏಕೆ ಹೇಳಿ? ಅಥರ್ೈಸಿಕೊಳ್ಳಲು ರಾಜಕೀಯ ಪಂಡಿತನೇ ಆಗಬೇಕೆಂದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಹೀನಾಯ ಸೋಲು ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಿಬಿಟ್ಟಿತು. ಮೈತ್ರಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದರೂ ಅವರ ಮಾತಿಗೆ ನಯಾಪೈಸೆ ಕಿಮ್ಮತ್ತಿರಲಿಲ್ಲ. ಅತ್ತ ಜೆಡಿಎಸ್ನ ಜಿ.ಟಿ ದೇವೇಗೌಡರು ಜೆಡಿಎಸ್ಗೆ ವಿರುದ್ಧವಾಗಿದ್ದಂತೆ ನಟಿಸುತ್ತಲೇ ಮೈಸೂರಿನಲ್ಲಿ ಸಿದ್ದರಾಮಯ್ಯನವರ ವಿರುದ್ಧ ಮನಸೋಇಚ್ಛೆ ಮಾತನಾಡತೊಡಗಿದರು. ಇದು ಸಿದ್ದರಾಮಯ್ಯನವರನ್ನು ಮುಗಿಸುವ ದೇವೇಗೌಡರ ಹಳೆಯ ತಂತ್ರವೆಂಬುದು ಅವರಿಗೆ ಗೊತ್ತಾಗದ ಸಂಗತಿಯೇನೂ ಅಲ್ಲ. ಈಗ ಸಿದ್ದರಾಮಯ್ಯ ತೀಕ್ಷ್ಣವಾದ ನಡೆಯೊಂದನ್ನು ಇರಿಸದೇ ಹೋಗಿದ್ದರೆ ರಾಜಕೀಯವಾಗಿ ಅವರು ಸತ್ತೇ ಹೋಗುತ್ತಿದ್ದರು. ಹೀಗಾಗಿಯೇ ಅವಧಿಗೆ ಮುನ್ನ ಚುನಾವಣೆಗೆ ಹೋಗುವ ಐಡಿಯಾ ರಾಹುಲ್ಗೆ ಕೊಡಲೆಂದು ಹೊರಟಿದ್ದು. ಇವೆಲ್ಲವನ್ನೂ ಅಥರ್ೈಸಿಕೊಂಡು ರಾಹುಲ್ ಪ್ರಮುಖರನ್ನು ಕರೆಸಿ ಸಿದ್ದರಾಮಯ್ಯನವರಿಗೆ ಮತ್ತು ಅವರ ಕಡೆಯವರಿಗೆ ಸೂಕ್ತ ಗೌರವ ಸಿಗುವಂತೆ ಮಾಡಿಬಿಟ್ಟಿದ್ದರೆ ರಾಜಿನಾಮೆ ಯಾರೂ ಕೊಡುತ್ತಲೇ ಇರಲಿಲ್ಲ. ಹಾಗಾಗಲಿಲ್ಲ. ಅಲ್ಲಿಂದ ಮರಳಿ ಬಂದ ಸಿದ್ದರಾಮಯ್ಯ. ಇಲ್ಲಿ ಇನ್ನೂ ಹೆಚ್ಚು ಅವಮಾನಕ್ಕೆ ಒಳಗಾದರು. ವೇಣುಗೋಪಾಲ್ ಅವರು ಬಿಡಿ, ಸ್ಥಳೀಯ ಕಾಂಗ್ರೆಸ್ ನಾಯಕರೂ ಸಿದ್ದರಾಮಯ್ಯನವರನ್ನು ಮಾತನಾಡಿಸುವುದನ್ನೇ ಬಿಟ್ಟರು. ಆಗ ಅವರು ಎಸೆದದ್ದು ಈ ರಾಜಿನಾಮೆಯ ದಾಳ! ಕಾಂಗ್ರೆಸ್ನಲ್ಲಿ ಅತೃಪ್ತರು ಮೊದಲ ದಿನದಿಂದಲೂ ಇದ್ದಾರೆ. ಅತೃಪ್ತಿ ಎನ್ನೋದೇ ಹಾಗೆ. ಅದು ಯಾವಾಗಲೂ ಎಲ್ಲೆಲ್ಲೂ ಇದ್ದೇ ಇರುತ್ತದೆ. ಸಮ್ಮಿಶ್ರ ಸಕರ್ಾರದಲ್ಲಿ ಒಂದುತೂಕ ಹೆಚ್ಚು. ಇಷ್ಟೂ ದಿನ ಕಾಂಗ್ರೆಸ್ಸು ಹೈಕಮ್ಯಾಂಡಿನ ಬಲಾಢ್ಯತೆಯ ಕಾರಣ್ಕಕಾಗಿ ಎಲ್ಲರನ್ನೂ ಬಾಯ್ಮುಚ್ಚಿ ಕೂರುವಂತೆ ಮಾಡಿಕೊಂಡಿತ್ತು. ಯಾವಾಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಲ ಕ್ಷೀಣಿಸಿತೋ ಸಹಜವಾಗಿಯೇ ಹೈಕಮ್ಯಾಂಡಿನ ಸಾಮಥ್ರ್ಯವೂ ಕಡಿಮೆಯಾಗಿಬಿಟ್ಟಿತು. ಅವರ ಪ್ರತಿನಿಧಿಯಾಗಿದ್ದ ವೇಣುಗೋಪಾಲ್ನಂತೂ ಕೇಳಲೇಬೇಡಿ. ವೇಣುಗೋಪಾಲ್ರನ್ನೇ ನಂಬಿ ಬದುಕಿದ್ದ ಇಲ್ಲಿನ ಪ್ರಮುಖ ನಾಯಕರು ಹತಾಶರಾಗಿದ್ದರು. ಹಾಗಂತ ಜುಟ್ಟನ್ನು ಸಿದ್ದರಾಮಯ್ಯನವರ ಕೈಗೆ ಕೊಡಲು ಅವರು ತಯಾರಿರಲಿಲ್ಲ. ಸಿದ್ದರಾಮಯ್ಯನವರದು ಒಂದು ರೀತಿ ಹಿಂದೂವೊಬ್ಬ ಇಸ್ಲಾಮಿಗೆ ಮತಾಂತರಗೊಂಡಂತಹ ಬದುಕೇ. ಹೀಗೆ ಮತಾಂತರಗೊಂಡವನಿಗೆ ಹೊಸ ತಂಡ ತಮ್ಮ ಸಮ-ಸಮ ಸ್ಥಾನವನ್ನಂತೂ ಕೊಡುವುದಿಲ್ಲ, ಆದರೆ ಇತರೆ ಹಿಂದುಗಳನ್ನು ಮತಾಂತರಿಸಲು ಅವನನ್ನು ಚೆನ್ನಾಗಿ ಬಳಸಿಕೊಳುತ್ತದೆ. ಸಿದ್ದರಾಮಯ್ಯನವರ ಕಥೆಯೂ ಹಾಗೆಯೇ. ಮೂಲ ಕಾಂಗ್ರೆಸ್ಸಿಗರಿಗೆ ಅವರೆಂದಿದ್ದರೂ ಅಸಡ್ಡೆಯ ವಸ್ತುವೇ. ಆದರೆ ಮತ ಸೆಳೆಯಲು ಮಾತ್ರ ಸಿದ್ದರಾಮಯ್ಯ ಬೇಕೇ ಬೇಕು! ಮುಖ್ಯಮಂತ್ರಿಯಾದಮೇಲಂತೂ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಬಲಾಢ್ಯಗೊಳಿಸಿಕೊಂಡುಬಿಟ್ಟಿದ್ದಾರೆ. ಅವರ ಮಾತಿಗೆ ಕಟ್ಟುಬಿದ್ದು ನಡೆಯುವ ಶಾಸಕರಿದ್ದಾರೆ. ಸಕರ್ಾರವನ್ನು ಉರುಳಿಸುವ ತಾಕತ್ತೂ ಅವರಿಗೀಗಿದೆ. ಡಿ.ಕೆ ಶಿವಕುಮಾರ್ರಂತಹ ಘಟಾನುಘಟಿಗಳು ಏನೂ ಮಾಡಲಾಗದೇ ಮಂಡಿಯೂರಿ ಕುಳಿತುಬಿಡುವಂತಾಗಿದೆ!

2

ಇಡೀ ಪ್ರಕರಣವನ್ನು ನೋಡಿ. ಶಿವರಾಮ್ ಹೆಬ್ಬಾರ್ ಬಹಳ ದಿನಗಳಿಂದಲೂ ರಾಜಿನಾಮೆ ನೀಡಬೇಕೆಂದು ಕಾತರಿಸಿಕೊಂಡೇ ಇದ್ದರು. ಅಧಿಕಾರಿಗಳು ತನ್ನ ಮಾತು ಕೇಳುತ್ತಿಲ್ಲವೆಂಬ ಕೊರಗು ಅವರಿಗಿತ್ತು. ರಾಮಲಿಂಗಾರೆಡ್ಡಿ, ಬಿ.ಸಿ ಪಾಟೀಲರಿಗೂ ತಮಗೆ ಸೂಕ್ತ ಸ್ಥಾನಮಾನ, ಗೌರವ ಸಿಗಲಿಲ್ಲವೆಂಬ ಕೊರಗು ಇದ್ದೇ ಇತ್ತು. ಹಿಂದೆಲ್ಲಾ ರಮೇಶ್ ಜಾರಕೀಹೊಳಿ ಇವರೆಲ್ಲರನ್ನೂ ಸಂಘಟಿಸಿಲು ಪ್ರಯತ್ನಿಸಿ ಸೋತಿದ್ದು ಯಾರಿಗೂ ಗೊತ್ತಿರದ ಸಂಗತಿಯೇನಲ್ಲ. ಆದರೆ ಏಕಾಕಿ ಈ ಬಾರಿ ಇಷ್ಟು ಜನ ರಾಜಿನಾಮೆಗೆ ಒಪ್ಪಿದ್ದಾದರೂ ಹೇಗೆ.? ಎಲ್ಲಾ ಬಂಡಾಯ ಕಾಂಗ್ರೆಸ್ಸಿಗರ ನಡುವೆ ಸಿದ್ದರಾಮಯ್ಯನ ಮೇಲೆ ಅಪಾರ ನಿಷ್ಠೆ ಹೊಂದಿರುವ ಬೈರತಿ ಬಸವರಾಜ್ ಸೇರ್ಪಡೆಗೊಳ್ಳಲು ಹೇಗೆ ಸಾಧ್ಯವಾಯ್ತು? ಇದು ಪರಿಸ್ಥಿತಿಯ ನಿಚ್ಚಳತೆಯನ್ನು ತೋರಬಲ್ಲ ಪ್ರಶ್ನೆ. ತನ್ನ ಗೌರವ ಕಡಿಮೆಯಾಗುತ್ತಿದೆ ಎಂದೆನಿಸಿದಾಗ ಅತೃಪ್ತರನ್ನೆಲ್ಲಾ ತನ್ನ ಶಿಷ್ಯನ ಮೂಲಕವೇ ಗುಡ್ಡೆ ಹಾಕಿಸಿ, ಏಕಾಕಿ ರಾಜಿನಾಮೆ ಕೊಡುವಂತೆ ಮಾಡಿ, ರಾತೋ-ರಾತ್ರಿ ವೇಣುಗೋಪಾಲ್, ದಿನೇಶ್ ಗುಂಡೂರಾವ್ ಮುಂತಾದ ನಾಯಕರೆಲ್ಲಾ ತನ್ನ ಮನೆಗೇ ಬರುವಂತೆ ಮಾಡಿಕೊಂಡಿದ್ದು ಸಿದ್ದರಾಮಯ್ಯ. ಅಷ್ಟೇ ಅಲ್ಲ. ಅಮೇರಿಕಾಕ್ಕೆ ಹೋಗಿ ಎಲ್ಲ ಜಂಜಡಗಳಿಂದ ದೂರವಿದ್ದ ಕುಮಾರಸ್ವಾಮಿಯವರು ಎಲ್ಲ ಪ್ರವಾಸವನ್ನು ಮೊಟಕುಗೊಳಿಸಿ ಧಾವಿಸಿ ಬರುವಂತಾಯ್ತುಲ್ಲ. ಇದು ನಿಸ್ಸಂಶಯವಾಗಿ ಮೈತ್ರಿ ಸಕರ್ಾರದ ಬಲಶಾಲಿ ವ್ಯಕ್ತಿ ಸಿದ್ದರಾಮಯ್ಯ ಎಂಬುದನ್ನು ಸಾಬೀತುಪಡಿಸಿಬಿಟ್ಟಿತು. ಉಳಿದವರೆಲ್ಲರೂ ಸಂಧಾನ ನಡೆಸುವಾಗಲೂ ಮಾಧ್ಯಮಗಳಿಗೆ ಹಬ್ಬವಷ್ಟೇ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾಗಿ ಗೊತ್ತಿತ್ತು, ಸರಿಪಡಿಸಬಲ್ಲವ ಸಿದ್ದರಾಮಯ್ಯ ಮಾತ್ರ!

ಮುಂದೇನು? ಗಾಬರಿಗೊಳ್ಳಬೇಡಿ. ಮಧ್ಯಂತರ ಚುನಾವಣೆಗೆ ಹೋಗುವ ಸಾಮಥ್ರ್ಯ ಯಾವ ಪಕ್ಷದವರಿಗೂ ಇಲ್ಲ. ಹೀಗಾಗಿ ಶತಾಯ-ಗತಾಯ ಈ ಸಾರ್ಕರವನ್ನು ಉಳಿಸಿಕೊಳ್ಳುತ್ತಾರೆ. ಆದರೆ ಬಂಡಾಯದವರೆಲ್ಲಾ ರಾಜಿನಾಮೆ ಮರಳಿ ಪಡೆದು ಸೇರಿಕೊಂಡರೆ ಕ್ರೆಡಿಟ್ಟು ಮಾತ್ರ ಸಿದ್ದರಾಮಯ್ಯನಿಗೆ. ಇಷ್ಟೇ ಅಲ್ಲ. ಸಿದ್ದರಾಮಯ್ಯ ಅದಾಗಲೇ ಪರಮೇಶ್ವರ್ರಿಂದ ಗೃಹಖಾತೆಯನ್ನು ಕಿತ್ತುಕೊಂಡಾಗಿದೆ. ಈ ಬಾರಿ ಬಹುಶಃ ನಗರಾಭಿವೃದ್ಧಿಯನ್ನು ರಾಮಲಿಂಗಾರೆಡ್ಡಿಗೆ ಕೊಡಿಸಬಹುದು. ಹಾಗಾದರೆ ಪರಮೇಶ್ವರ್ ನಾಮಮಾತ್ರಕ್ಕೆ ಉಪಮುಖ್ಯಮಂತ್ರಿ, ಹಲ್ಲಿಲ್ಲದ ಹಾವು! ಪಕ್ಷಕ್ಕೆ ತನ್ನನ್ನು ಮೀರಿ ಬೆಳೆಯಬಹುದಾಗಿದ್ದ ನಾಯಕನೊಬ್ಬನನ್ನು ಅವರು ಶಾಶ್ವತವಾಗಿ ಕೊಂದುಬಿಡಲಿದ್ದಾರೆ. ಇನ್ನು ಕುಮಾರಸ್ವಾಮಿ ನಿಂತಾಗ, ಕುಳಿತಾಗ ಸಿದ್ದರಾಮಯ್ಯನವರಿಗೆ ಕೈ ಮುಗಿಯದೇ ಬೇರೆ ದಾರಿಯೇ ಇಲ್ಲ. ಹಾಗೊಂದು ಮೂಗುದಾರ ಹಾಕಿಬಿಟ್ಟಿದ್ದಾರೆ. ಎಲ್ಲಾ ದೇವೇಗೌಡರಿಂದಲೇ ಕಲಿತ ಪಾಠ ಎಂದು ಎಂಥವನಿಗೂ ಅರಿವಾಗುತ್ತದೆ.

3

ಒಂದೇ ಒಂದು ಅವಕಾಶ ಕುಮಾರಸ್ವಾಮಿಯವರಿಗಿತ್ತು. ಈ ಎಲ್ಲಾ ನಾಟಕದ ನಡುವೆ ರಾಜಿನಾಮೆ ಕೊಟ್ಟು ಭಾವನಾತ್ಮಕವಾಗಿ ಜನರೊಂದಿಗೆ ಬೆರೆತು ಕನರ್ಾಟಕದ ಒಳಿತಿಗಾಗಿ ಭಾಜಪಕ್ಕೆ ಹೊರಗಿನಿಂದ ಬೆಂಬಲ ಕೊಟ್ಟುಬಿಟ್ಟಿದ್ದರೆ ಅವರು ಬಲಾಢ್ಯರಾಗುತ್ತಿದ್ದರಷ್ಟೇ ಅಲ್ಲ, ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸುವ ಅನೇಕ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದರು. ಶತ್ರುವಿನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರೆ ಆತನ ಕೈ ಯಾವಾಗಲೂ ಮೇಲೆ. ನಾವು ತಾಳವನ್ನೇ ಕಸಿದಿಟ್ಟುಕೊಂಡುಬಿಟ್ಟರೆ, ನಮ್ಮದ್ದೇ ತಾಳ, ನಮ್ಮದ್ದೇ ನೃತ್ಯ. ಅಚಾನಕ್ಕು ದಾಳಿಗಳು ಗೆಲುವು ತಂದುಕೊಡುತ್ತವೆನ್ನುವುದನ್ನು ಕುಮಾರಸ್ವಾಮಿ ಮರೆಯಬಾರದಿತ್ತು.

ಈ ಎಲ್ಲಾ ರಾಜಕೀಯ ದೊಂಬರಾಟದ ನಡುವೆ ರಾಜ್ಯ ಸೊರಗಿಹೋಗುತ್ತಿದೆ ಎನ್ನುವುದೇ ಕಳವಳಕಾರಿ ಸಂಗತಿ!

Comments are closed.