ವಿಭಾಗಗಳು

ಸುದ್ದಿಪತ್ರ


 

ಕೊತ್ತಿಮೀರಿ ಸೊಪ್ಪಿನೊಳಗೆ ಅಡಗಿಹೋಯ್ತು ದಂಗೆ!!

ಎಲ್ಲೆಲ್ಲಿ ಪಿಎಫ್ಐ ತನ್ನ ಕಬಂಧ ಬಾಹುಗಳನ್ನು ಚಾಚಿದೆಯೋ ಅಲ್ಲೆಲ್ಲಾ ಷರಿಯಾ ನ್ಯಾಯಪದ್ಧತಿಯನ್ನು ಅನುಸರಿಸುವ ಮತ್ತು ಭಾರತೀಯ ನ್ಯಾಯವ್ಯವಸ್ಥೆಯನ್ನು ಧಿಕ್ಕರಿಸುವ ಮಾತುಗಳು ಸಹಜವಾಗಿ ಕೇಳಿಬರುತ್ತವೆ. ತನಗೆ ಬೇಕಾಗಿರುವ ತರುಣ ಪೀಳಿಗೆಯನ್ನು ಜೋಡಿಸಿಕೊಳ್ಳುವುದಕ್ಕೆಂದೇ ಈ ಸಂಘಟನೆ ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ಯಾಂಪಸ್ ಫ್ರಂಟ್ನ ಮೂಲಕ ಕೆಲಸ ಮಾಡುತ್ತಿದೆ.

ದೆಹಲಿ ದಂಗೆಯ ರಂಗು-ರಂಗಿನ ಸುದ್ದಿಗಳು ಹೊರ ಬರುತ್ತಲೇ ಇವೆ. ದೆಹಲಿ ದಂಗೆ ಈಗ ಭಾರತಕ್ಕಷ್ಟೇ ಸೀಮಿತವಾಗುಳಿದಿಲ್ಲ. ಈ ದಂಗೆಗಳ ಸಾಕಾರಕ್ಕಾಗಿ ಜಾಜರ್್ ಸೊರೋಸ್ನಂತಹ ವ್ಯಕ್ತಿಗಳಲ್ಲದೇ ಗಲ್ಫ್ ರಾಷ್ಟ್ರಗಳಿಂದಲೂ ಹಣ ಹರಿದು ಬಂದಿರುವುದು ಬೆಳಕಿಗೆ ಬರುತ್ತಿದೆ. ಅದರ ಹಿಂದು-ಹಿಂದೆಯೇ ನಡೆದ ವ್ಯವಸ್ಥಿತವಾದ ಬೆಂಗಳೂರಿನ ದಂಗೆಗಳ ಜಾಡೂ ಕೂಡ ಇದೇ ದಿಕ್ಕಿನಲ್ಲಿ ಸಾಗುತ್ತಿರುವುದು ಅಚ್ಚರಿಯ ಮತ್ತು ಗಾಬರಿ ಹುಟ್ಟಿಸುವ ಸಂಗತಿ! ಲೇಖನದ ಮುಂದಿನ ಹಂತಕ್ಕೆ ಹೋಗುವ ಮುನ್ನವೇ ಕೆ.ಜೆ ಹಳ್ಳಿ ದಂಗೆಯ ನಂತರ ಎಮ್.ಎಸ್ ರಾಮಯ್ಯ ಕಾಲೇಜಿನಲ್ಲಿ ವೈದ್ಯಕೀಯ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾಥರ್ಿಯೊಬ್ಬ ಐಸಿಸ್ಗೆ ಸಹಕಾರ ಕೊಡುತ್ತಿದ್ದ ಸ್ಫೋಟಕ ಸಂಗತಿಯೊಂದು ಬೆಳಕಿಗೆ ಬಂದಿದೆ. ವಿದ್ಯಾರ್ಹತೆಯ ಮುಖವಾಡದ ಹಿಂದೆ ಇವರುಗಳೆಲ್ಲ ದೇಶವನ್ನು ಒಡೆಯುವ ಕೃತ್ಯ ಮಾಡುತ್ತಿರುವುದು ದುರದೃಷ್ಟಕರವೇ ಸರಿ.

3

ಆದರೆ, ಒಟ್ಟಾರೆ ಸಮಾಜವಾಗಿ, ಸಕರ್ಾರವಾಗಿ ನಾವು ಸಾಗುತ್ತಿರುವ ದಿಕ್ಕು ಶಾಶ್ವತ ಪರಿಹಾರದೆಡೆಗೆ ನಮ್ಮನ್ನೊಯ್ಯುತ್ತಿರುವಂತೆ ಕಾಣುತ್ತಿಲ್ಲ. ತಾತ್ಕಾಲಿಕ ಲಾಭದಾಸೆಗೆ ನಾವು ದೀರ್ಘಕಾಲದ ಬದಲಾವಣೆಯ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೇವೆ ಎನಿಸುತ್ತಿದೆ. ಈ ಶತಮಾನದ ಆರಂಭದ ಹೊತ್ತಿನಲ್ಲಿಯೇ ಕನರ್ಾಟಕ, ಕೇರಳ, ತಮಿಳುನಾಡು, ಆಂಧ್ರಗಳನ್ನು ಕೇಂದ್ರವಾಗಿರಿಸಿಕೊಂಡು ಮುಸ್ಲೀಂ ಸಂಘಟನೆಗಳು ತೀವ್ರ ಪ್ರಮಾಣದಲ್ಲಿ ಕೆಲಸ ನಿರ್ವಹಿಸುತ್ತವೆ ಎಂಬ ಮಾಹಿತಿ ಸಕರ್ಾರಗಳಿಗಿತ್ತು. ಅದರಲ್ಲೂ 1993ರಲ್ಲೇ ಬಾಬ್ರಿ ಕಟ್ಟಡ ಉರುಳಿದುದರ ನೆಪದಲ್ಲಿ ಕೇರಳದಲ್ಲಿ ಹುಟ್ಟಿಕೊಂಡ ನ್ಯಾಷನಲ್ ಡೆವಲಪ್ಮೆಂಟ್ ಫ್ರಂಟ್ ತನ್ನನ್ನು ತಾನು ವಿಸ್ತರಿಸಿಕೊಂಡ ರೀತಿ ಹೆದರಿಕೆ ಹುಟ್ಟಿಸುವಂಥದ್ದಾಗಿತ್ತು. ಮುಸಲ್ಮಾನರನ್ನು ಸಾಮಾಜಿಕವಾಗಿ, ಆಥರ್ಿಕವಾಗಿ ಮೇಲಕ್ಕೆತ್ತುವ ಕಲ್ಪನೆಯೊಂದಿಗೆ ಹುಟ್ಟಿಕೊಂಡ ಈ ಸಂಸ್ಥೆ ಮೇಲ್ನೋಟಕ್ಕೆ ಈ ಕೆಲಸಗಳನ್ನು ಮಾಡುತ್ತಿತ್ತಾದರೂ ಆಂತರ್ಯದಲ್ಲಿ ತೀವ್ರತರವಾದ ಭಯೋತ್ಪಾದಕ ಕೃತ್ಯಗಳಲ್ಲೇ ತೊಡಗಿತ್ತು. 2003ರಲ್ಲಿ ಕೊಯ್ಕೊಡ್ನಲ್ಲಿ ಹಿಂದುಗಳ ಮಾರಣಹೋಮ ನಡೆಸುವಲ್ಲಿ ಈ ಸಂಘಟನೆಯ ಪಾತ್ರ ಬೆಳಕಿಗೆ ಬಂದ ನಂತರ ಇದು ಸಮಾಧಿಗೊಂಡು ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಹುಟ್ಟಿಕೊಂಡಿತು. ಎನ್ಡಿಎಫ್ ಕೇರಳಕ್ಕಷ್ಟೇ ಸೀಮಿತವಾಗಿದ್ದರೆ ಹೊಸದಾಗಿ ಹುಟ್ಟಿಕೊಂಡ ಈ ಸಂಸ್ಥೆ ಕನರ್ಾಟಕದ ಫೋರಮ್ ಫಾರ್ ಡಿಗ್ನಿಟಿ, ಗೋವಾ ಸಿಟಿಜನ್ಸ್ ಫೋರಂ, ತಮಿಳುನಾಡಿನ ನೀತಿ ಪಸಾರೈ ಮೊದಲಾದ ಸಂಘಟನೆಗಳನ್ನು ಸೇರಿಸಿಕೊಂಡು ವಿಸ್ತಾರವಾಗಿ ಹಬ್ಬಿತ್ತು. ನಿಷೇಧಿತ ಸಿಮಿಯೊಂದಿಗೂ ಈ ಸಂಘಟನೆಯ ಸಂಪರ್ಕಗಳು ಸೂಕ್ಷ್ಮ ಮಟ್ಟದಲ್ಲಿ ಕಂಡು ಬಂದಿದ್ದವು. ಇದುವರೆಗೂ ಈ ಸಂಘಟನೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವುದರ ಕುರಿತಂತೆ ಯಾವ ಪುರಾವೆಗಳನ್ನೂ ಒದಗಿಸಲಾಗಲಿಲ್ಲ, ನಿಜವೇ. ಆದರೆ ಕಟ್ಟರ್ ಇಸ್ಲಾಮಿ ಪಂಥದ ಪ್ರತಿಪಾದಕನಾಗಿ ತಾನು ಕಾಲಿಟ್ಟೆಡೆಯಲ್ಲೆಲ್ಲಾ ಅಶಾಂತಿಯನ್ನು ಹಬ್ಬಿಸುವಲ್ಲಿ ಅದರ ಪಾತ್ರ ಬಲು ಜೋರಾಗಿದೆ. ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಪ್ರವಾದಿಯವರಿಗೆ ಅವಮಾನವಾಗುವಂತೆ ಪ್ರಶ್ನೆ ಕೇಳಿದ್ದಾರೆಂಬ ಕಾರಣಕ್ಕೆ ಪ್ರಾಧ್ಯಾಪಕ ಟಿ.ಜೆ ಕುರಿಯನ್ರ ಕೈ ಕತ್ತರಿಸಿದಾಗ ಈ ಸಂಘಟನೆಯ 37 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಅದೇ ಕೇರಳದಲ್ಲಿ ಅನೇಕ ಆರ್ಎಸ್ಎಸ್ ಮತ್ತು ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದ ಕಾರ್ಯಕರ್ತರ ಹತ್ಯೆಯಲ್ಲಿ ಸಂಘಟನೆ ಭಾಗಿಯಾಗಿದೆ ಎಂದು ಸ್ವತಃ ಕೇರಳ ಸಕರ್ಾರ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಅದಾದ ಎರಡೇ ವರ್ಷಗಳಲ್ಲಿ ಈ ಸಂಘಟನೆಯ ಮೇಲೆ ಹತ್ಯೆಗೆ ಪ್ರಯತ್ನ ಮಾಡಿದ 86 ಪ್ರಕರಣಗಳು ದಾಖಲಾಗಿದ್ದವು! ಇವೆಲ್ಲಕ್ಕಿಂತಲೂ ವಿಕಟವಾದ ಕೃತ್ಯವೆಂದರೆ ಹಿಂದೂ ಮತ್ತು ಕ್ರಿಶ್ಚಿಯನ್ ತರುಣ-ತರುಣಿಯರನ್ನು ಮತಾಂತರ ಮಾಡುವಲ್ಲಿ ಈ ಸಂಘಟನೆಯ ಪಾತ್ರ. ಇದರ ಸಹೋದರಿ ಸಂಸ್ಥೆ ನ್ಯಾಷನಲ್ ವುಮೆನ್ಸ್ ಫ್ರಂಟ್ನ ಅಧ್ಯಕ್ಷೆಯ ಮೇಲೆ ಸ್ಟಿಂಗ್ ಆಪರೇಶನ್ ಮಾಡಿದಾಗ ಈ ಕುರಿತ ಅನೇಕ ಸಂಗತಿಗಳು ಹೊರ ಬಂದಿದ್ದವು.

ಪಿಎಫ್ಐ ಧಾಮರ್ಿಕ ಚಟುವಟಿಕೆಗಳನ್ನು ನಡೆಸುವುದು ಮೇಲ್ನೋಟಕ್ಕೆ ನಿಜವಾಗಿದ್ದರೂ ಅದರ ಮುಖ್ಯ ಅಜೆಂಡಾ ಇಸ್ಲಾಮಿನ ರಾಜಕೀಯ ಚಿಂತನೆಗಳನ್ನು ಹಬ್ಬಿಸುವುದೇ ಆಗಿದೆ. ತಮ್ಮದ್ದೇ ರಾಜಕೀಯ ವಿಭಾಗವೆನಿಸಿರುವ ಎಸ್ಡಿಪಿಐನ ಮೂಲಕ ಅವರು ಕಟ್ಟರ್ಪಂಥಿ ಇಸ್ಲಾಮಿ ರಾಜ್ಯವನ್ನು ನಿಮರ್ಾಣ ಮಾಡುವ ತಯಾರಿಯಲ್ಲಿ ತೊಡಗಿರುವುದು ಬಲು ಸೂಕ್ಷ್ಮವಾದ ಸಂಗತಿ. ಎಲ್ಲೆಲ್ಲಿ ಪಿಎಫ್ಐ ತನ್ನ ಕಬಂಧ ಬಾಹುಗಳನ್ನು ಚಾಚಿದೆಯೋ ಅಲ್ಲೆಲ್ಲಾ ಷರಿಯಾ ನ್ಯಾಯಪದ್ಧತಿಯನ್ನು ಅನುಸರಿಸುವ ಮತ್ತು ಭಾರತೀಯ ನ್ಯಾಯವ್ಯವಸ್ಥೆಯನ್ನು ಧಿಕ್ಕರಿಸುವ ಮಾತುಗಳು ಸಹಜವಾಗಿ ಕೇಳಿಬರುತ್ತವೆ. ತನಗೆ ಬೇಕಾಗಿರುವ ತರುಣ ಪೀಳಿಗೆಯನ್ನು ಜೋಡಿಸಿಕೊಳ್ಳುವುದಕ್ಕೆಂದೇ ಈ ಸಂಘಟನೆ ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ಯಾಂಪಸ್ ಫ್ರಂಟ್ನ ಮೂಲಕ ಕೆಲಸ ಮಾಡುತ್ತಿದೆ. ನೆನಪಿಡಿ, ಇಷ್ಟನ್ನೂ ಹೇಳುತ್ತಿರುವುದರ ಉದ್ದೇಶವೆಂದರೆ ಕೆ.ಜೆ ಹಳ್ಳಿಯಲ್ಲಿ ನಡೆದ ದಂಗೆಗಳು ಮೇಲ್ನೋಟಕ್ಕೆ ಒಂದಷ್ಟು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆಯಷ್ಟೇ ಅಲ್ಲ. ಆಳ ಹೊಕ್ಕು ನೋಡಿದರೆ ಪಿಎಫ್ಐ ತನ್ನ ಬಾಹುಗಳನ್ನು ವಿಸ್ತರಿಸುವ ಕಿಡಿ ಹಚ್ಚಿದ ಘಟನೆ ಅದು.

2

ಹಾಗೆ ನೋಡಿದರೆ ಇವರೆಲ್ಲ ಹೇಳುವುದು ಸತ್ಯವೇ. ಬಾಬ್ರಿ ಕಟ್ಟಡ ಉರುಳಿದ ನಂತರ ಮತಾಂಧತೆಯನ್ನು ಹಬ್ಬಿಸಲು ಇವರೆಲ್ಲರಿಗೂ ಒಂದು ಅಸ್ತ್ರ ದೊರೆತಂತಾಯ್ತು. ಉಗ್ರ ಹಿಂದುತ್ವದ ಪ್ರತಿಪಾದನೆಗೂ ಬಾಬ್ರಿ ಕಟ್ಟಡ ಉಪಯೋಗವಾಗಿತ್ತೆಂಬುದನ್ನು ನಾವು ಮರೆಯುವಂತಿಲ್ಲ. ಈ ಕಟ್ಟಡ ಉರುಳುತ್ತಿರುವ ದೃಶ್ಯಗಳನ್ನು ತೋರಿಸಿಯೇ ತರುಣ ಪೀಳಿಗೆಯ ಮುಸಲ್ಮಾನರನ್ನು ಕಟ್ಟರ್ಪಂಥಿಯರು ಆಕಷರ್ಿಸಲು ಸಾಧ್ಯವಾಗಿದ್ದು. ಧರ್ಮದ ವಿಚಾರ ಬಂದಾಗ ಪ್ರತಿಯೊಬ್ಬ ಮುಸಲ್ಮಾನನೂ ಕಟ್ಟರ್ಪಂಥೀಯನೇ. ಅದು ಧರ್ಮದ ಮೂಲಕವೇ ಅವರಿಗೆ ಸಿದ್ಧಿಸಿದ್ದು. ಪ್ರತಿನಿತ್ಯವೂ ಅಲ್ಲಾಹ್ನು ಮಾತ್ರವೇ ದೇವರು. ಮೊಹಮ್ಮದ್ರೇ ಕೊನೆಯ ಪ್ರವಾದಿ ಎಂದು ಶ್ರದ್ಧೆಯಿಂದ ಉಚ್ಚರಿಸುವವನಿಗೆ ಮತ್ತೊಬ್ಬ ದೇವರನ್ನು ಸಹಿಸಿಕೊಳ್ಳುವ, ಒಪ್ಪಿಕೊಳ್ಳುವ ಗುಣ ಬರುವುದು ಬಲುಕಷ್ಟವೇ. ಆದರೂ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಅನೇಕ ಮುಸಲ್ಮಾನ ಪಂಥಗಳು ಅನುಸರಿಸಿಕೊಂಡು ನಡೆಯುವ ಗುಣವನ್ನು ಪಡೆಯುವುದು ಸತ್ಯವೇ. ಆ ದೃಷ್ಟಿಯಿಂದ ನೋಡಿದರೆ ಭಾರತದ ವಿಚಾರದಲ್ಲಿ ಶಿಯಾಗಳು, ಸೂಫಿಗಳು, ಬರೇಲ್ವಿ, ಬೊಹ್ರಾಗಳು ಸಾಧಾರಣಮಟ್ಟಿಗೆ ಹಿಂದೂಗಳೊಂದಿಗೆ ಸಹಬಾಳ್ವೆಯನ್ನೇ ನಡೆಸಿದ್ದಾರೆ. ಆದರೆ ಇತ್ತೀಚೆಗೆ ವ್ಯಾಪಕಗೊಳ್ಳುತ್ತಿರುವ ವಹಾಬಿ ಮತ್ತು ಸಲಫಿಗಳು, ದೇವ್ಬಂದಿಗಳು, ಅಹಲ್-ಎ-ಹದೀಸ್, ಶಫಾಯ್, ಹನಫಿ, ಹನ್ಬಲಿಗಳು ಬಲು ಕಟ್ಟರ್ಗಳೆ. ಯಾರು ಪ್ರವಾದಿ ಮೊಹಮ್ಮದ್ರ ಕಾಲಘಟ್ಟದ ಇಸ್ಲಾಮನ್ನು ಪ್ರತಿಪಾದಿಸುತ್ತಾರೋ ಅವರು ಅತೀ ಹೆಚ್ಚು ಕಟ್ಟರ್ಗಳೆಂದು ಮತ್ತು ಅನುಸರಿಸಲು ಯೋಗ್ಯರಾದವರೆಂದು ಇತರರು ಭಾವಿಸುತ್ತಾರೆ. ಅಂಥವರಿಗೆ ಹೆಚ್ಚು ಅರಬ್ನ ಹಣ ಹರಿದು ಬರುವುದೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ತಮ್ಮನ್ನು ತಾವು ಅರಬ್ಗೆ ಹತ್ತಿರವೆಂದು ಸಾಬೀತುಪಡಿಸಿಕೊಳ್ಳಲು ಇವರು ಪಡುವ ಪಾಡು ಅಂತಿಂತದ್ದಲ್ಲ. ಜಮಾತ್ನ ಹೆಸರಲ್ಲಿ ಊರೂರು ತಿರುಗುವ ಮತ ಪ್ರಚಾರಕರನ್ನು ಒಮ್ಮೆ ನೋಡಿ. ಅವರು ಹಾಕುವ ಬಟ್ಟೆ, ಗಡ್ಡ-ಮೀಸೆಗಳ ರೂಪುರೇಷೆ, ಟೋಪಿ ಹಾಕಿಕೊಳ್ಳುವ ಶೈಲಿ ಪ್ರತಿಯೊಂದೂ ಕೂಡ ಅರಬ್ರಿಗೆ ಹತ್ತಿರವಿರುವಂತೆ ಕಾಣುತ್ತದೆ. ಹಾಗೆ ನೋಡಿದರೆ 18ನೇ ಶತಮಾನದ ಕೊನೆಯವೇಳೆಗೆ ವಹಾಬಿಸಂ ಭಾರತದಲ್ಲಿ ನೆಲೆ ಕಂಡುಕೊಂಡಿತು. ಮಹಾತ್ಮಾ ಗಾಂಧೀಜಿ ಖಿಲಾಫತ್ ಚಳುವಳಿಗೆ ಬೆಂಬಲ ಕೊಟ್ಟು ಖಲೀಫಾರಿಗೆ ಗೌರವ ಕೊಡಬೇಕೆನ್ನುವುದರೊಂದಿಗೆ ಇದು ತೀವ್ರಘಟ್ಟವನ್ನು ಮುಟ್ಟಿತ್ತು. ದ್ವಿರಾಷ್ಟ್ರ ಸಿದ್ಧಾಂತದ ಬೀಜಾವಾಪವಾಗಿದ್ದು ಅಲ್ಲಿಂದಲೇ! ಅರಬ್ಬರ ವಹಾಬಿಸಂಗೆ ಸಂವಾದಿಯಾಗಿ ಸುನ್ನಿಗಳೊಳಗೆ ಸುಧಾರಣೆಯ ರೂಪದಲ್ಲಿ ಭಾರತದಲ್ಲೇ ಹುಟ್ಟಿಕೊಂಡಿದ್ದು ದೇವ್ಬಂಧಿ ಪಂಥ. 1857ರ ಸ್ವಾತಂತ್ರ್ಯ ಸಂಗ್ರಾಮ ಅಂದುಕೊಂಡ ಪ್ರತಿಫಲ ಕೊಡದೇ ಹೋದಾಗ ಹುಟ್ಟಿಕೊಂಡದ್ದಿದು. ಇಸ್ಲಾಮನ್ನು ಗಟ್ಟಿಗೊಳಿಸುತ್ತಾ ಬ್ರಿಟೀಷರ ವಿರುದ್ಧ ಹೋರಾಡಲು ಅವರನ್ನು ತಯಾರು ಮಾಡುತ್ತ ಬಲಗೊಂಡವರಿವರು. ಸ್ವಾತಂತ್ರ್ಯದ ಕಾಲಘಟ್ಟದಲ್ಲೂ ಬ್ರಿಟೀಷರ ಜೊತೆಯಾಗಿ ನಿಲ್ಲದೇ ಪಾಕಿಸ್ತಾನದ ಸ್ಥಾಪನೆಯನ್ನು ವಿರೋಧಿಸಿದ್ದರು ಇವರು. ಹಾಗಂತ ಅಪ್ಪಟ ದೇಶಭಕ್ತರೆಂಬ ಭ್ರಮೆ ಏನೂ ಬೇಕಾಗಿಲ್ಲ. ಸಣ್ಣ ತುಂಡು ಪಾಕಿಸ್ತಾನದ ನಿಮರ್ಾಣ ಮಾಡುವುದಕ್ಕಿಂತ ವಿಸ್ತಾರವಾದ ಹಿಂದೂಸ್ಥಾನವನ್ನೇ ಪರಿವರ್ತನೆಗೊಳಿಸುವುದೊಳಿತೆಂಬುದು ಅವರ ಉದ್ದೇಶವಾಗಿತ್ತು. ಇಂದು ದೇಶದಾದ್ಯಂತ ವ್ಯಾಪಕವಾಗಿ ಹಬ್ಬಿರುವ ಇಸ್ಲಾಮಿನ ಪಂಥವಾಗಿ ಇವರು ಬೆಳೆದು ನಿಂತಿದ್ದಾರೆ. ಇವರಂತೆಯೇ ಉತ್ತರ ಪ್ರದೇಶದ ಬರೇಲ್ವಿಯಲ್ಲಿ ಹುಟ್ಟಿಕೊಂಡ ಮತ್ತೊಂದು ಪಂಥ ಬರೇಲ್ವಿ ಇಸ್ಲಾಂ. ಆಂತರಿಕವಾಗಿ ತಮ್ಮನ್ನು ತಾವು ರೂಪಿಸಿಕೊಳ್ಳಬೇಕೆಂಬ ಚಿಂತನೆಯೊಂದಿಗೆ ಈ ಪಂಥ ಹೆಚ್ಚು-ಹೆಚ್ಚು ಸೂಫಿ ತತ್ವದ ಕಡೆಗೆ ವಾಲಿಕೊಂಡಿತು. ಸದ್ಯದಮಟ್ಟಿಗೆ ಭಾರತದಲ್ಲಿರುವ ಹೆಚ್ಚಿನ ಸಂಖ್ಯೆಯ ಮುಸಲ್ಮಾನರು ಇವರೇ. ದೇವ್ಬಂದಿಗಳಷ್ಟು ಕಟ್ಟರ್ಪಂಥಿಗಳಲ್ಲದ ಈ ಮುಸಲ್ಮಾನರು ಸಾಮಾಜಿಕ, ಆಥರ್ಿಕ ದೃಷ್ಟಿಯಿಂದ ಸಾಕಷ್ಟು ಹಿಂದುಳಿದವರೇ. ಸಹಜವಾಗಿಯೇ ಮುಂದುವರಿದ ಶಿಕ್ಷಿತ ದೇವ್ಬಂದಿ, ಸಲಫಿ, ವಹಾಬಿ ಮುಸಲ್ಮಾನರು ಬರೇಲ್ವಿ ಪಂಥದ ತರುಣರನ್ನು ತಮ್ಮತ್ತ ಸೆಳೆದುಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಈ ಪಂಥದ ಅನೇಕರು ಗೋರಿಗಳು ಪೂಜೆ ಮಾಡುವುದನ್ನು ಕಟ್ಟರ್ಪಂಥಿಗಳು ವಿರೋಧಿಸುತ್ತಾರೆ. ಜ್ಯೋತಿಷ್ಯ ಕೇಳುವ, ಅದಕ್ಕೆ ತಕ್ಕಂತೆ ತಮ್ಮ ಮನೆಯ ಕಾರ್ಯಗಳನ್ನು ನಡೆಸುವ ಅನೇಕ ಮಂದಿ ಕಂಡುಬರುವುದು ಈ ಪಂಥದಲ್ಲಿಯೇ. ಹಿಂದೂಗಳಿಗೆ ಬಲು ಹತ್ತಿರವೆನಿಸುವ ಈ ಆಚರಣೆಗಳನ್ನು ಕಟುವಾಗಿ ನಿಂದಿಸುತ್ತಲೇ ಈ ತರುಣರನ್ನು ಉಳಿದವರು ಸೆಳೆಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇವರುಗಳ ನಡುವೆ ಅತ್ಯಂತ ಕೆಟ್ಟ ಸಂಘರ್ಷಗಳು ಭಾರತದಲ್ಲಿ ನಡೆದಿವೆ. ಜಾಕಿರ್ ನಾಯ್ಕ್ನ ಭಾಷಣಗಳನ್ನು ನಾವಷ್ಟೇ ವಿರೋಧಿಸುತ್ತೇವೆ ಎಂದು ಭಾವಿಸಬೇಡಿ. ಷಿಯಾಗಳು, ಸೂಫಿಗಳು, ಬರೇಲ್ವಿಗಳು ಕೊನೆಗೆ ಸುನ್ನಿಗಳಲ್ಲೂ ಒಂದಷ್ಟು ಪಂಥದವರು ಕಟುವಾಗಿ ವಿರೋಧಿಸುತ್ತಾರೆ. ಆತ ದೇಶಬಿಟ್ಟು ಓಡಿಹೋದಾಗ ನಮಗಿಂತ ಹೆಚ್ಚು ಸಂಭ್ರಮಿಸಿದವರು ಅವರೇ!

4

ದುರದೃಷ್ಟಕರ ಸಂಗತಿ ಏನು ಗೊತ್ತೇ? ಈ ಯಾವ ವಿಚಾರಗಳೂ ಕೂಡ ನಮ್ಮ ನಾಯಕರುಗಳಿಗಾಗಲೀ ಈ ಘಟನೆಗಳನ್ನು ವಿಚಾರಣೆ ನಡೆಸುವ ಸ್ಥಳೀಯ ಅಧಿಕಾರಿಗಳಿಗಾಗಲೀ ಖಂಡಿತ ಗೊತ್ತಿಲ್ಲ. ಅವರ ಪಾಲಿಗೆ ಎಲ್ಲ ಮುಸಲ್ಮಾನರೂ ಒಂದೇ. ಬೆಂಗಳೂರಿನ ಘಟನೆಯ ಹಿಂದಿರುವ ಪಿಎಫ್ಐ ಸಲಫಿ ಚಿಂತನೆಗಳ ಹಬ್ಬಿಸಲೆಂದೇ ನಿಂತಿರುವಂಥದ್ದು. ಇವರುಗಳನ್ನು ವಿರೋಧಿಸುವ ಅನೇಕ ಪಂಗಡಗಳು ಬೆಂಗಳೂರಿನಲ್ಲಿವೆ. ದಂಗೆಗಳಿಗೆ ಕಿಡಿ ಹಚ್ಚಿ ಮಾಯವಾಗಿಬಿಡುವ ಈ ಸಂಘಟನೆಯ ಮುಖಂಡರು ಆನಂತರ ಸಿಕ್ಕಿ ಹಾಕಿಕೊಳ್ಳುವ ತಮ್ಮ ವಿರೋಧಿ ಪಾಳಯದವರನ್ನೇ ಜೈಲಿನಿಂದ ಬಿಡಿಸಿಕೊಂಡು ಬಂದು ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ನೀವು ನಂಬಲಾರಿರಿ, ಬರೇಲ್ವಿ ಸೂಫಿ ಪಂಥಕ್ಕೆ ಸೇರಿದ ಅನೇಕ ತರುಣರು ಅದಾಗಲೇ ಸಲಫಿಗಳತ್ತ ವಾಲುತ್ತಿದ್ದಾರೆ. ತಮ್ಮ ಮಸೀದಿಗಳಲ್ಲಿ ಹೇಳುವ ವಿಚಾರಗಳನ್ನು ಕೇಳದೇ ಸಾಮಾಜಿಕ ಜಾಲತಾಣಗಳಲ್ಲಿ ಸಲಫಿಗಳು ಹರಿಬಿಡುವ ಕಟ್ಟರ್ ಚಿಂತನೆಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಇದನ್ನು ಸಮರ್ಥವಾಗಿ ಅರಿತುಕೊಂಡಿರುವ ಮೋದಿ ಷಿಯಾಗಳಿಗೆ, ಸೂಫಿಗಳಿಗೆ ಹೆಚ್ಚಿನ ಬೆಲೆ ಕೊಡುತ್ತಾ ಈ ಕಟ್ಟರ್ಪಂಥಿಗಳನ್ನು ಅಧಿಕಾರ ಕೇಂದ್ರಗಳಿಂದ ದೂರವಿರಿಸುತ್ತಿದ್ದಾರೆ. ಇತರೆ ರಾಜಕಾರಣಿಗಳಿಗೆ ಇವೆಲ್ಲವೂ ಅರ್ಥವಾಗಲು ಇನ್ನೊಂದು ಜನ್ಮವೇ ಬೇಕಾಗಬಹುದೇನೋ. ಉತ್ತರಕನ್ನಡದಲ್ಲಿ ಪರೇಶ್ ಮೇಸ್ತಾ ತೀರಿಕೊಂಡಾಗ ಉಗ್ರ ಭಾಷಣ ಮಾಡಿದವರ್ಯಾರಿಗೂ ಇಂದು ಆತನ ಕೊಲೆಗಡುಕರಿಗೇನಾಯ್ತು ಎಂಬ ವಿಚಾರ ಬೇಕಿಲ್ಲ. ಆದರೆ ಈ ಮಾತುಗಳಿಂದಾಗಿ ಅಲ್ಲಿನ ಮುಸಲ್ಮಾನ್ ತರುಣರು ಕಟ್ಟರ್ಪಂಥಿ ಚಿಂತನೆಗಳ ದಿಕ್ಕಿಗೆ ತಿರುಗಿಕೊಂಡು ಬಿಟ್ಟಿದ್ದಾರಲ್ಲ, ಅವರನ್ನು ಕರೆತರುವುದು ಇನ್ನು ಸಾಧ್ಯವೇ ಇಲ್ಲ. ಮೊನ್ನೆ ಕೆ.ಜೆ ಹಳ್ಳಿಯ ಘಟನೆಯಾದಾಗಲು ಅಷ್ಟೇ. ವೋಟುಗಳನ್ನುಳಿಸಿಕೊಳ್ಳಲು ಕಾಂಗ್ರೆಸ್ಸು ಕೊಟ್ಟ ಒಂದೊಂದು ಹೇಳಿಕೆಯೂ ಭಾರತದ ಪುನರ್ ನಿಮರ್ಾಣಕ್ಕೆ ತಡೆಗೋಡೆಯನ್ನೇ ಕಟ್ಟುವಂತಿದ್ದವು. ಏಕೆಂದರೆ ಕಟ್ಟರ್ಪಂಥಿ ಮುಸಲ್ಮಾನರ ಸೌಧ ಮೂರು ಹಂತಗಳದ್ದು. ಆಂತರಿಕ ವಾದ ಕಟ್ಟರ್ಪಂಥಿ ಸಂಘಟನೆಗಳ ತಿರುಳಾದರೆ ಅದರ ಸುತ್ತಲೂ ಅದನ್ನು ಅನುಸರಿಸುವ ಜನ, ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳಿವೆ. ಮೂರನೇ ಹಂತದ ಕವಚವಾಗಿ ಬುದ್ಧಿಜೀವಿಗಳು, ಮಾನವ ಹಕ್ಕು ಹೋರಾಟಗಾರರು ರಕ್ಷಣೆಗೆಂದು ಸದಾ ನಿಂತಿರುತ್ತಾರೆ. ಬೆಂಗಳೂರಿನ ಘಟನೆಯಲ್ಲೂ ಹಾಗೇ ಆಯ್ತು ನೋಡಿ. ಪಿಎಫ್ಐನ ಅಂಗಸಂಸ್ಥೆ ಎಸ್ಡಿಪಿಐ ಬೆಂಕಿ ಹಚ್ಚಿತು. ಅದನ್ನು ಸಮಥರ್ಿಸಿಕೊಳ್ಳಲು ಕಾಂಗ್ರೆಸ್ಸು ಧಾವಿಸಿ ಬಂತು. ನಾವುಗಳು ಇಡಿಯ ಪ್ರಕರಣದ ತೀವ್ರತೆಯನ್ನು ಕೊತ್ತಿಮೀರಿ ಸೊಪ್ಪಿನ ಲೇವಡಿಯ ಮೂಲಕ ಹಾಳುಗೆಡವುವ ವೇಳೆಗೆ ಅದನ್ನೇ ಆಧಾರವಾಗಿಟ್ಟುಕೊಂಡು ಬುದ್ಧಿಜೀವಿಗಳು ಗಲಾಟೆಕೋರರಿಗೆ ರಕ್ಷಣಾಗೋಡೆಯನ್ನೇ ನಿಮರ್ಿಸಿಬಿಟ್ಟರು!

ಮತಾಂಧತೆಯ ಈ ಓಟದ ಕುರಿತಂತೆ ನಾವು ತಿಳಿದುಕೊಳ್ಳಬೇಕಾದ್ದು ಬಹಳ ಇದೆ..

Comments are closed.