ವಿಭಾಗಗಳು

ಸುದ್ದಿಪತ್ರ


 

ಕೊನೆಯ ಅರ್ಧಗಂಟೆ!

ಕೃತಕ ಉಸಿರಾಟ ನಡೆಯುತ್ತಿತ್ತು.
ಅರೆ ಪ್ರಜ್ಞೆ.
‘ಇನ್ನರ್ಧ ಗಂಟೆ ಇರಬಹುದೇನೋ.
ಮತ್ತೊಬ್ಬರನ್ನು ಇಲ್ಲಿಗೆ
ತರಲು ಸಿದ್ಧರಾಗಿ’
ಎಂದರು ವೈದ್ಯರು.
ನನಗೆ ಕೇಳಿದ್ದು ಅದೊಂದೇ.

ಎದೆ ಝಲ್ಲಂತು.
ಬದುಕಿನ ದಿನಗಳು ಹಾರರ್ ಸಿನಿಮಾದಂತೆ
ಹಾದುಹೋದವು.
ಹಣಕ್ಕಾಗಿ, ಜಮೀನಿಗಾಗಿ, ಅಧಿಕಾರಕ್ಕಾಗಿ
ಬಡಿದಾಡಿದೆ. ಬಂಧುತ್ವ-ಗೆಳೆತನ ಎಲ್ಲಕ್ಕೂ ಕೊಳ್ಳಿಯಿಟ್ಟೆ.
ಈಗ ಏಕಾಂಗಿ. ಮನೆಯವರೂ ಇಲ್ಲ.
‘ಇನ್ನಾರು ತಿಂಗಳು ಕೊಡು,
ಎಲ್ಲ ಸರಿ ಮಾಡಿ ಬರುವೆ.
ಗಳಿಸಿದ್ದನ್ನು ಹಂಚಿಬಿಡುವೆ.
ಕಳಕೊಂಡದ್ದನ್ನು ಕಾಡಿ ಬೇಡಿ ಪಡೆವೆ’
ಮನಸ್ಸು ಅರಚಾಡುತ್ತಿತ್ತು.

ಅರ್ಧಗಂಟೆ ಕಳೆಯಿತು.
ದೇಹವನ್ನು ನೀಲಿ ಕವರಿನಲ್ಲಿ ಸುತ್ತಿದರು
ಹಾಸಿಗೆಯ ಹೊದಿಕೆ ಬದಲಿಸಿ
ಮತ್ತೊಬ್ಬನನ್ನು ಮಲಗಿಸಿದರು.

ಯಾಕೋ ನನಗೀಗ ಈ ಕೋಣೆಯ ಎಸಿಯೂ ಛಳಿ ಎನಿಸುತ್ತಿಲ್ಲ!

#ಕೊರೋನಾಕಥೆ

Comments are closed.