ವಿಭಾಗಗಳು

ಸುದ್ದಿಪತ್ರ


 

ಕೊರೋನಾ; ಇನ್ನೆಷ್ಟು ದಿನ ಹೆದರಿಕೆ?!

ನನಗೆ ಗೊತ್ತು. ಇವಿಷ್ಟನ್ನೂ ಹೇಳುವ ಅಧಿಕಾರ ನಿಮಗೇನಿದೆ ಎಂದು ಅನೇಕರು ಕೇಳಬಹುದು. ನಾನು ವೈದ್ಯನಾಗಿ ಇವೆಲ್ಲವನ್ನೂ ಹೇಳುತ್ತಿಲ್ಲ. ಆದರೆ, ರೋಗಿಯಾಗಿ ಈ ವೈರಸ್ಸನ್ನು ಎಂಟ್ಹತ್ತು ದಿನಗಳ ಕಾಲ ದೇಹದೊಳಗೆ ಸಾಕಿಕೊಂಡ ಅನುಭವದ ಆಧಾರದ ಮೇಲೆ ಈ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇಷ್ಟಕ್ಕೂ ಸಂಶೋಧನೆ ನಡೆಯುವುದು ಸಿಗುವ ಡಾಟಾಗಳ ಆಧಾರದ ಮೇಲೆ.

ಸದ್ದಿಲ್ಲದೇ ಒಂದು ವಿಶ್ವದಾಖಲೆ ನಿಮರ್ಾಣಗೊಂಡಿದೆ. ಮೊನ್ನೆ 29ಕ್ಕೆ ಒಂದೇ ದಿನದಲ್ಲಿ 78,903 ಕೊವಿಡ್ ಪ್ರಕರಣಗಳು ಬೆಳಕಿಗೆ ಬರುವುದರೊಂದಿಗೆ ಒಂದು ದಿನದಲ್ಲೇ ಅತ್ಯಂತ ಹೆಚ್ಚು ಪ್ರಕರಣಗಳು ದಾಖಲಾದ ಕೀತರ್ಿ ಭಾರತದ ಪಾಲಿಗಿದೆ. ಇದನ್ನು ಕೀತರ್ಿ ಎನ್ನುತ್ತೀರೋ ಅಪಕೀತರ್ಿ ಎನ್ನುತ್ತೀರೋ ತಡವಾಗಿ ನಿಧರ್ಾರವಾಗಲಿದೆ. ಆದರೆ ಸದ್ಯಕ್ಕಂತೂ ಒಂದು ದಿನದಲ್ಲಿ 78,427 ಪ್ರಕರಣಗಳನ್ನು ಗುರುತಿಸಿದ ಅಮೇರಿಕಾವನ್ನು ದಾಟಿ ಭಾರತ ಮುಂದಡಿಯಿಟ್ಟಿದೆ. ಆದರೆ ಗಮನಿಸಬೇಕಾದ ಒಂದು ಮಹತ್ವದ ಸಂಗತಿ ಎಂದರೆ ಅಮೇರಿಕಾ ಈ ಸಂಖ್ಯೆಯನ್ನು ಮುಟ್ಟಿದ್ದು ಜುಲೈ ಕೊನೆಯ ವಾರದಲ್ಲಿ. ಭಾರತ ಆಗಸ್ಟ್ ಕೊನೆಯ ವಾರಕ್ಕೆ ಈ ಸಂಖ್ಯೆಯನ್ನು ತಲುಪಿದೆ. ಜನಸಂಖ್ಯೆಯ ವಿಚಾರಕ್ಕೆ ಬಂದರೆ ತುಲನೆಗೂ ಮೀರಿದ ಅಂತರವಿದೆ. ಹೀಗಿರುವಾಗ ಭಾರತ ಇಡಿಯ ಕೊವಿಡ್ ಅನ್ನು ನಿರ್ವಹಿಸಿರುವ ರೀತಿಯನ್ನು ಕುರಿತಂತೆ ನಿಸ್ಸಂಶಯವಾಗಿ ಹೆಮ್ಮೆ ಪಡಬೇಕು. ಜಗತ್ತಿನ ಅತ್ಯಂತ ಮುಂದುವರಿದ, ಆರೋಗ್ಯದ ವಿಚಾರದಲ್ಲಿ ಅತ್ಯಾಧುನಿಕವೆನಿಸಿಕೊಳ್ಳುವ ರಾಷ್ಟ್ರಗಳೆಲ್ಲವೂ ಕೊವಿಡ್ನ ಕಾಲಕ್ಕೆ ಮುರಿದುಬಿದ್ದವು. ಆದರೆ 130 ಕೋಟಿ ಜನಸಂಖ್ಯೆಯುಳ್ಳ ಭಾರತ ಇದನ್ನು ಹೇಗೆ ಜೀಣರ್ಿಸಿಕೊಳ್ಳುವುದು ಎಂಬ ಆತಂಕಕ್ಕೆ ಈಗ ತೆರೆ ಬಿದ್ದಿದೆ. ಮಿತ್ರರೊಬ್ಬರು ತಮಾಷೆಯಾಗಿ ಹೇಳುತ್ತಿದ್ದರು ‘ಕೊರೋನಾ ಹೊರದೇಶಗಳಿಗೆ ಬರುವ ಮುನ್ನ ಭಾರತಕ್ಕೇ ಬಂದುಬಿಟ್ಟಿದ್ದರೆ ಜಗತ್ತು ನೆಮ್ಮದಿಯಿಂದಿರುತ್ತಿತ್ತು. ಏಕೆಂದರೆ ಭಾರತೀಯರು ಅದನ್ನು ಹೊಸಕಿ ಹಾಕಿರುತ್ತಿದ್ದರು’ ಅಂತ!

1

ಇಂದು ಒಮ್ಮೆ ಹಿಂದಿರುಗಿ ನೋಡಿದರೆ ಕೊರೋನಾ ಕುರಿತಂತೆ ನಾವು ಹೆದರಿದ್ದೇ ಹೆಚ್ಚಾಯ್ತಾ ಎಂದೆನಿಸುತ್ತಿದೆ. ಈಗಾಗಲೇ ಭಾರತದಲ್ಲಿರುವ ಪ್ರಕರಣ ಎಷ್ಟಿದೆಯೋ ಕನಿಷ್ಠಪಕ್ಷ ಅದರ ನಾಲ್ಕುಪಟ್ಟು ಜನರಾದರೂ ಈ ವೈರಸ್ನಿಂದ ಬಾಧಿತರಾಗಿದ್ದಾರೆ. ಅವರ್ಯಾರೂ ಪರೀಕ್ಷೆಗೆಂದು ಹೋಗುತ್ತಿಲ್ಲ ಅಷ್ಟೆ. ಏಕೆಂದರೆ ಪರೀಕ್ಷೆ ಮಾಡಿಸಿಕೊಂಡು ವೈರಸ್ ಇದೆ ಎಂದು ಗೊತ್ತಾದರೆ ಆ ವೈರಸ್ಗಿಂತಲೂ ಹೆಚ್ಚಿನ ಕಾಟವನ್ನು ಸುತ್ತಮುತ್ತಲಿನವರು ಕೊಟ್ಟುಬಿಡುತ್ತಾರೆ ಎಂಬ ಭಯ. ಹೀಗಾಗಿಯೇ ನಮಗರಿವಿಲ್ಲದೆಯೇ ನಮ್ಮ ಸುತ್ತಲೂ ಜೀವಂತ ವೈರಸ್ಸಿನ ಸಮುದ್ರವೇ ಇದೆ ಎಂಬುದನ್ನು ನಾವು ಮರೆಯುವುದು ಬೇಡ. ಕೊರೋನಾ ಸಾಮಾನ್ಯವಾದ ಜ್ವರದಂತೆ ಕಾಡುವಂತಹ ಒಂದು ರೋಗ. ವೈರಸ್ ದೇಹ ಪ್ರವೇಶಿಸಿದ ನಂತರ ಮೈ-ಕೈ ನೋವು ಆರಂಭವಾಗುತ್ತದೆ. ಅದರ ಜೊತೆ-ಜೊತೆಗೇ ಸಹಿಸಲಸಾಧ್ಯವಾದ ತಲೆನೋವು. ಕೆಲವರಿಗೆ ಜ್ವರ ಕಾಣಿಸಿಕೊಳ್ಳಬಹುದು. ಆದರೆ ಬಹುತೇಕರಿಗೆ ಜ್ವರ ಒಂದು ಲಕ್ಷಣವೇ ಅಲ್ಲ. ತಲೆನೋವು ಕಡಿಮೆಯಾಗುತ್ತಿದ್ದಂತೆ ಮೂಗು ವಾಸನೆ ಗ್ರಹಿಸುವುದನ್ನು ನಿಲ್ಲಿಸಿಬಿಡುತ್ತದೆ. ಮೂಗಿನ ಬಳಿಗೇ ವಸ್ತುವನ್ನೋಯ್ದರೂ ಅದರ ವಾಸನೆ ಅರಿಯಲಾಗದೇ ಒಮ್ಮೆ ಚಡಪಡಿಕೆ ಶುರುವಾಗುತ್ತದೆ. ಹೀಗಾಗುವ ವೇಳೆಗೆ ವೈರಸ್ಸು ದೇಹದೊಳಗೆ ಸಾಕಷ್ಟು ಕೆಲಸ ಮಾಡಿದೆ ಎಂದೇ ಅರ್ಥ. ಇದರೊಟ್ಟಿಗೆ ಅಸಾಧ್ಯವಾದ ಸುಸ್ತು ಕಾಡುತ್ತದೆ. ಮೊದಲೆಲ್ಲಾ ಮುಲಾಜಿಲ್ಲದೇ ನಾಲ್ಕಾರು ಕಿಲೋಮೀಟರ್ ನಡೆದಾಡುತ್ತಿದ್ದವ ಈಗ 40 ಮೀಟರ್ಗೂ ಏದುಸಿರುಬಿಡುತ್ತಾನೆ. ಮೆಟ್ಟಿಲು ಹತ್ತಿ ಬಂದರಂತೂ ಒಂದೆರಡು ನಿಮಿಷ ಸುಧಾರಿಸಿಕೊಳ್ಳಬೇಕೆನಿಸುತ್ತದೆ. ವಾರದ ಹಿಂದೆ ಗಟ್ಟಿಮುಟ್ಟಾಗಿದ್ದವ ಇಷ್ಟು ಸೊರಗಿದ್ದೇಕೆ ಎಂಬುದು ಅರ್ಥವೇ ಆಗುವುದಿಲ್ಲ. ವೈರಸ್ಸು ಶ್ವಾಸಕೋಶದ ಮೇಲೆ ಮಾಡಿರುವ ಪರಿಣಾಮ ಅದು! ನಿಧಾನವಾಗಿ ವಾಸನೆ ಗ್ರಹಿಸುವ ಶಕ್ತಿ ಮೂಗಿಗೆ ಮರಳಿ ಬರುತ್ತದೆ. ಅಲ್ಲಿಗೆ ದೇಹ ವೈರಸ್ಸಿನೊಂದಿಗೆ ಸೆಣಸಾಟ ಮಾಡಿ ಗೆದ್ದಿದೆ ಎಂದರ್ಥ. ಮೈ-ಕೈ ನೋವು, ತಲೆನೋವು ಯಾವುದೂ ಈಗ ಕಾಡುವುದಿಲ್ಲ. ಕೆಲವರಲ್ಲಿ ಈ ಹಂತದಲ್ಲಿ ಕೆಮ್ಮು ಕಾಣಿಸಿಕೊಳ್ಳುತ್ತದೆ. ಇನ್ನೂ ಕೆಲವರಿಗೆ ಹೊಟ್ಟೆ ಅಜೀರ್ಣದಿಂದ ನರಳುತ್ತದೆ. ಸರಿಯಾದ ಊಟ, ಸೂಕ್ತ ನಿದ್ದೆ ಇವೆರಡೂ ದೇಹವನ್ನು ಎರಡು ವಾರಗಳೊಳಗೆ ಸಹಜ ಸ್ಥಿತಿಗೆ ತರುತ್ತದೆ. ಇಡಿಯ ಕೊರೋನಾದ ಕೆಟ್ಟ ಅನುಭವವೆಂದರೆ ಕೂತಲ್ಲೆಲ್ಲಾ ನಿದ್ದೆ ಬರುವುದು. ಹೀಗಾಗಿಯೇ ಈ ವೈರಸ್ಸಿನಿಂದ ಬಾಧಿತರು ಆದಷ್ಟು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಹೇಳೋದು. ಸಾಧಾರಣವಾಗಿ ಸರಿಯಾದ ಆಹಾರ ಮತ್ತು ನಿದ್ದೆ ದೊರೆತರೆ ವ್ಯಕ್ತಿಯೊಬ್ಬ ಸರಾಸರಿ ಏಳು ದಿನಗಳೊಳಗೆ ತಯಾರಾಗಿಬಿಡುತ್ತಾನೆ. 14 ದಿನವೆನ್ನುವುದು ಆತ ದೇಹವನ್ನು ಪೂತರ್ಿ ತಯಾರಿ ಮಾಡಿಕೊಂಡು ಮತ್ತೆ ಮರಳಲು ಬೇಕಾದ ಸಮಯ. ಅನೇಕ ಆಸ್ಪತ್ರೆಗಳಲ್ಲಿ ಕೊರೋನಾಕ್ಕೆ ಚಿಕಿತ್ಸೆ ಎಂದರೆ ಕಾಣಿಸಿಕೊಳ್ಳುವ ಲಕ್ಷಣಗಳಿಗೆ ಚಿಕಿತ್ಸೆಯಷ್ಟೇ. ಮೈ-ಕೈ ನೋವು, ತಲೆ ನೋವು, ಹೊಟ್ಟೆಯ ಬಾಧೆ, ಇವುಗಳಿಗೆ ಸೂಕ್ತವಾದ ಮದ್ದನ್ನು ಕೊಡುತ್ತಾ ಕಷ್ಟವನ್ನೆದುರಿಸುವ ಶಕ್ತಿಯನ್ನು ತುಂಬುವ ಪ್ರಯತ್ನ ಮಾಡುತ್ತಾರೆ. ಅನೇಕ ಕಡೆಗಳಲ್ಲಿ ಎಂಟ್ಹತ್ತು ದಿನಗಳ ಕಾಲ ಒಂದೂ ಮಾತ್ರೆಯನ್ನೂ ತೆಗೆದುಕೊಳ್ಳದೇ ಕೊರೋನಾ ವಾಸಿಯಾಗಿ ಮರಳಿದವರಿದ್ದಾರೆ. ಅದರರ್ಥ ಆಯುವರ್ೇದ ಹೇಳುವಂತೆ ಆಂತರಿಕ ಶಕ್ತಿಯನ್ನು ಬಲಗೊಳಿಸಿಕೊಂಡರೆ ಕೊರೋನಾವನ್ನೆದುರಿಸುವುದು ಕಷ್ಟವಲ್ಲ ಎನ್ನುವುದು ಅಕ್ಷರಶಃ ಸತ್ಯ. ಯಾರು ಏನೇ ಹೇಳಲಿ, ಕಜೆಯವರ ಮತ್ತು ಪತಂಜಲಿಯವರ ಔಷಧಿಗಳು ಕೆಲಸ ಮಾಡುತ್ತವೆನ್ನುವುದು ನಿಜಕ್ಕೂ ಸತ್ಯ. ಹೀಗಾಗಿ ಯಾವ ಹೆದರಿಕೆಗೂ ಕಾರಣವಿಲ್ಲ. ಧೈರ್ಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಬಳಸುವ ಮೂಲಕ ನಮ್ಮ ದೈನಂದಿನ ಚಟುವಟಿಕೆಗಳನ್ನು ನಿಭಾಯಿಸುವುದೊಳಿತು.

ನನಗೆ ಗೊತ್ತು. ಇವಿಷ್ಟನ್ನೂ ಹೇಳುವ ಅಧಿಕಾರ ನಿಮಗೇನಿದೆ ಎಂದು ಅನೇಕರು ಕೇಳಬಹುದು. ನಾನು ವೈದ್ಯನಾಗಿ ಇವೆಲ್ಲವನ್ನೂ ಹೇಳುತ್ತಿಲ್ಲ. ಆದರೆ, ರೋಗಿಯಾಗಿ ಈ ವೈರಸ್ಸನ್ನು ಎಂಟ್ಹತ್ತು ದಿನಗಳ ಕಾಲ ದೇಹದೊಳಗೆ ಸಾಕಿಕೊಂಡ ಅನುಭವದ ಆಧಾರದ ಮೇಲೆ ಈ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇಷ್ಟಕ್ಕೂ ಸಂಶೋಧನೆ ನಡೆಯುವುದು ಸಿಗುವ ಡಾಟಾಗಳ ಆಧಾರದ ಮೇಲೆ. ನಾನು ಮತ್ತು ನನ್ನೊಂದಿಗಿನ ಎಂಟ್ಹತ್ತು ಜನ ತರುಣರು, ಈ ವೈರಸ್ನ ಪ್ರಭಾವಕ್ಕೆ ಒಳಗಾದ ಎಲ್ಲರ ಅನುಭವವೂ ಇದೇ ಆಗಿದೆ. ಈಗಲೂ ಅಧಿಕೃತವಾಗಿ ಪಾಸಿಟಿವ್ ಎಂದು ಗೊತ್ತಾದವರ ಅನುಭವಗಳನ್ನು ಕೇಳುವಾಗ ಅದು ಹೆಚ್ಚು ಸಾಮ್ಯ ಹೊಂದಿದೆ ಎಂಬುದೂ ತಿಳಿದುಬರುತ್ತಿದೆ.

IMG-20200726-WA0005 (1)

ಇಷ್ಟಕ್ಕೂ ನಮಗೆ ಕೊರೋನಾ ಮೇಲಿನ ಹೆದರಿಕೆ ಕಡಿಮೆಯಾಗಲು, ಅದನ್ನೆದುರಿಸುವಲ್ಲಿ ಧೈರ್ಯ ಹೆಚ್ಚಾಗಲು ಶಕ್ತಿ ಬಂದಿದ್ದು ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತೆಗೆಂದು ಹೋದ ನಂತರವೇ. ವಿಶೇಷಾಧಿಕಾರಿ ಬಾಲಾಜಿ ಪೈ ಅವರು ಮಿತ್ರ ತನ್ವೀರ್ ಅಹ್ಮದ್ರ ಮೂಲಕ ನಮ್ಮನ್ನು ಸಂಪಕರ್ಿಸುವಾಗ ನಿಜಕ್ಕೂ ವಿಕ್ಟೋರಿಯಾದಲ್ಲಿ ಸಮಸ್ಯೆಯಿತ್ತು. ಗುತ್ತಿಗೆಯಲ್ಲಿರುವ ಡಿ ಗ್ರೂಪ್ ನೌಕರರು ಕೊರೋನಾದ ಅಪಾಯವನ್ನು ಎದುರಿಸುವ ಧೈರ್ಯ ಸಾಲದೇ ಕೆಲಸಕ್ಕೇ ರಾಜಿನಾಮೆ ಕೊಟ್ಟಿದ್ದರು. ಇಡಿಯ ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಗೆ ಊಟ-ತಿಂಡಿ ಕೊಡುವ ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಸಾಕಷ್ಟು ಕಷ್ಟವಾಗುತ್ತಿತ್ತು. ಆಗ ಬೆಂಗಳೂರಿನಲ್ಲೇ ಠಿಕಾಣಿ ಹೂಡಿರುವ, ವಯಸ್ಸಾದ ಹಿರಿಯರಿಂದ ದೂರವಿರುವ ಸುಮಾರು 15 ಜನರ ತಂಡವೊಂದನ್ನು ಕಟ್ಟಿಕೊಂಡು ಆವರ್ತನದಂತೆ ಬೆಳಿಗ್ಗೆ 7 ರಿಂದ 10 ಗಂಟೆಯವರೆಗೂ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆವು. ಸವಾಲು ಸುಲಭದ್ದಾಗಿರಲಿಲ್ಲ. ಪಿಪಿಇ ಕಿಟ್ಗಳನ್ನು ಧರಿಸುವುದರಿಂದ ವೈರಸ್ಸು ನಮ್ಮನ್ನಾಕ್ರಮಿಸುವುದು ಸಾಧ್ಯವಿಲ್ಲವೆಂಬ ವಿಶ್ವಾಸವೇನೋ ಇತ್ತು. ಆದರೆ ಮನೆಯಲ್ಲಿರುವ ಹಿರಿಯರನ್ನು, ಆತಂಕಪಡುವ ಹಿತೈಷಿಗಳನ್ನು ಒಪ್ಪಿಸುವುದು ಹೇಗೆ? ಎಲ್ಲರದ್ದೂ ಒಂದೇ ಪ್ರಶ್ನೆ ‘ಅದಕ್ಕಾಗಿಯೇ ಕೆಲಸದವರಿರುವಾಗ ನೀವೇಕೆ?’ ಅಂತ. ಹೋಗಬಾರದೆನ್ನುವುದಕ್ಕೆ ಅವರು ಕೊಡುವ ಕಾರಣ ವೈರಸ್ ಆಕ್ರಮಿಸಿದರೆ ದೇಹ ದುರ್ಬಲವಾಗುತ್ತದೆ ಎಂಬುದಷ್ಟೇ. ಈ ದೇಹ ದೌರ್ಬಲ್ಯ ಆ ಡಿ ಗ್ರೂಪಿನ ನೌಕರರನ್ನೂ ಕಾಡುತ್ತದೆನ್ನುವುದಾದರೆ ಅವರೂ ಸವಾಲನ್ನೆದುರಿಸುತ್ತಿದ್ದಾರೆ ಎಂದೇ ಅರ್ಥವಲ್ಲವೇ? ನಮ್ಮ ಕೆಲಸ ಅವರಿಗೆ ಸನ್ಮಾನ ಮಾಡುವುದು ಮಾತ್ರವೋ ಅಥವಾ ಅವರೊಟ್ಟಿಗೆ ಕೈಜೋಡಿಸುವುದೂ ಕೂಡ ಇದೆಯೋ? ನಾವು ಎರಡನೆಯದನ್ನು ಆರಿಸಿಕೊಂಡೆವು. ಅದನ್ನೇ ಆಧಾರವಾಗಿಟ್ಟುಕೊಂಡು ಇತರರನ್ನು ಒಪ್ಪಿಸಿದೆವೂ ಕೂಡ. ಆಸ್ಪತ್ರೆಯ ಒಳ ಹೋದ ಮೇಲೇ ಗೊತ್ತಾಗಿದ್ದು ಲಕ್ಷಣಗಳಿಲ್ಲದ ಕೊರೋನಾ ಬಂದಿರುವ ರೋಗಿಗಳು ಆಸ್ಪತ್ರೆಯ ಹಾಸಿಗೆಗಳ ಮೇಲೆ ಮೊಬೈಲ್ನಲ್ಲಿ ಸಿನಿಮಾ ನೋಡುತ್ತಲೋ, ಆಟವಾಡುತ್ತಲೋ ಹಾಯಾಗಿದ್ದಾರೆ ಅಂತ! ಈ ರೋಗಿಗಳು ಕುಣಿದು ಕುಪ್ಪಳಿಸುವ, ಕ್ರಿಕೆಟ್ ಆಡುವ ಯಾವ ದೃಶ್ಯಾವಳಿಗಳೂ ಸುಳ್ಳಲ್ಲವೆಂಬ ಅರಿವಾಗಿದ್ದೇ ಆಗ. ಕೊರೋನಾ ಎಂದರೆ ಇಷ್ಟೆ ಎಂಬ ನಿರ್ಣಯಕ್ಕೆ ನಾವು ಬಂದುಬಿಟ್ಟೆವು. ಈ ಧೈರ್ಯ ನಮಗೊಂದು ಹೊಸ ಶಕ್ತಿಯನ್ನು ತಂದುಕೊಟ್ಟಿತು. ಸುಮಾರು 17 ದಿನಗಳ ಕಾಲ ಪ್ರತಿನಿತ್ಯ ರೋಗಿಗಳನ್ನು ಸಂಪಕರ್ಿಸುವ, ಅವರಿಗೆ ಧೈರ್ಯ ತುಂಬುವ ಕೆಲಸ ನಮ್ಮದ್ದಾಗಿತ್ತು. ಹೀಗಾಗಿಯೇ ಸ್ವತಃ ವೈರಸ್ ನಮ್ಮನ್ನಾವರಿಸಿಕೊಂಡಾಗ ಹೆದರುವ ಪ್ರಮೇಯವೇ ಬರಲಿಲ್ಲ.

3

ಇವಿಷ್ಟನ್ನೂ ಏಕೆ ಹೇಳಬೇಕಾಯ್ತೆಂದರೆ ಕಮ್ಯುನಿಟಿ ಸ್ಪ್ರೆಡ್ ಹಂತಕ್ಕೆ ತಲುಪಿರುವ ಈ ವುಹಾನ್ ವೈರಸ್ಸಿನಿಂದ ಈಗ ತಪ್ಪಿಸಿಕೊಂಡು ತಿರುಗಾಡುವುದು ಸುಲಭವೇನಲ್ಲ. ಸರಿಯಾಗಿ ಟೆಸ್ಟ್ ಮಾಡಿದರೆ ನಮ್ಮಲ್ಲಿ ಬಹುತೇಕರು ಕೊರೋನಾ ರೋಗಿಗಳೇ. ದುರದೃಷ್ಟಕರವೆಂದರೆ ನಾವು ಬಳಸುತ್ತಿರುವ ಟೆಸ್ಟ್ ಕಿಟ್ಗಳು ಸರಿಯಾದ ವರದಿಯನ್ನು ಕೊಡುತ್ತಿಲ್ಲವೆಂಬ ಆರೋಪ ಅಕ್ಷರಶಃ ಸತ್ಯ. ನಮ್ಮ ಗುಂಪಿನಲ್ಲಿಯೇ ಲಕ್ಷಣವೇ ಇರದಿದ್ದ ಹುಡುಗನಿಗೆ ಪಾಸಿಟಿವ್ ಫಲಿತಾಂಶ ಬಂದಿದ್ದರೆ ಎಲ್ಲಾ ಲಕ್ಷಣಗಳಿದ್ದೂ ಜೀರ್ಣವಾಗಿದ್ದ ಹುಡುಗನ ಫಲಿತಾಂಶ ನೆಗೆಟಿವ್ ಎಂದಿತ್ತು. ಹೀಗಾಗಿ ತುಂಬ ತಲೆಕೆಡಿಸಿಕೊಳ್ಳದೇ ನಮ್ಮಿಂದ ಮತ್ತೊಬ್ಬರಿಗೆ ಈ ವೈರಸ್ಸು ಹಬ್ಬದಂತೆ ಕಾಪಾಡಿಕೊಳ್ಳುವಲ್ಲಿ ನಾವು ಬಲಗೊಳ್ಳಬೇಕಿದೆ ಅಷ್ಟೇ. ಇಷ್ಟಕ್ಕೂ ಕಳೆದ ಆರು ತಿಂಗಳಿಂದ ಈ ವೈರಸ್ಸು ನಮ್ಮನ್ನು ಸಾಕಷ್ಟು ಹೈರಾಣುಗೊಳಿಸಿದೆ. ಬೆಂಗಳೂರಿನ ಅರ್ಧದಷ್ಟು ಹೊಟೆಲ್ಗಳು ಅದಾಗಲೇ ಮುಚ್ಚಿಹೋಗಿವೆ. ಅನೇಕರು ಬಾಡಿಗೆ ಕಟ್ಟಲಾಗದೇ ಪರಿತಪಿಸುತ್ತಿದ್ದಾರೆ. ಇಲ್ಲೆಲ್ಲಾ ಕೆಲಸ ಮಾಡುತ್ತಿದ್ದ ಸಾವಿರಾರು ಮಂದಿ ತಮ್ಮ-ತಮ್ಮ ಮನೆಗಳಿಗೆ ಹೋಗಿ ತಿಂಗಳುಗಳುರುಳಿವೆ. ಕೂಡಿಟ್ಟಿದ್ದೆಲ್ಲಾ ಖಾಲಿಯಾಗಿ ಈಗ ಸಂಕಟ ಶುರುವಾಗಿದೆ. ಇನ್ನು ವೈರಸ್ಸಿಗೆ ಹೆದರಿ ಮನೆಯೊಳಗೆ ಕುಳಿತರೆ ಪರಿಸ್ಥಿತಿ ಗಂಭೀರವಾಗುತ್ತಲೇ ಸಾಗುತ್ತದೆ. ನಾವೆಲ್ಲರೂ ಹಂತ-ಹಂತವಾಗಿ ನಮ್ಮ ನಮ್ಮ ಚಟುವಟಿಕೆಗಳಲ್ಲಿ ಮಗ್ನರಾಗೋಣ. ಅದಾಗಲೇ ವ್ಯಾಕ್ಸಿನ್ಗಾಗಿ ನಡೆಯುತ್ತಿರುವ ಸಂಶೋಧನೆ ಅಂತಿಮ ಹಂತವನ್ನು ಮುಟ್ಟಿರುವುದರಿಂದ, ಕೇಂದ್ರಸಕರ್ಾರವು ಅದನ್ನು ಕೊನೆಯ ವ್ಯಕ್ತಿಯವರೆಗೂ ತಲುಪಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿರುವುದರಿಂದ ಕೊರೋನಾ ಗೆಲ್ಲುವ ಅಸ್ತ್ರ ಹತ್ತಿರದಲ್ಲಿದೆ. ಹೆದರಿಕೆ ಬೇಕಾಗಿಲ್ಲ. ಭಾರತ ಈಗ ಪುನರ್ ನಿಮರ್ಾಣದ ಹೊಸ್ತಿಲಲ್ಲಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಬೆಲೆ ಹಿಂದೆಂದಿಗಿಂತಲೂ ಹೆಚ್ಚಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಚೀನಾವನ್ನೆದುರಿಸುವುದಕ್ಕೆ ಜಗತ್ತೆಲ್ಲ ಭಾರತದ ಪರವಾಗಿ ನಿಂತಿರುವುದಿರಲಿ, ವ್ಯಾಕ್ಸಿನ್ ಉತ್ಪಾದನೆಗೆ ರಷ್ಯಾ ಭಾರತದ ಸಹಾಯ ಕೇಳಿಕೊಂಡಿರುವುದಿರಲಿ, ಶ್ರೀಲಂಕಾದ ಅಧ್ಯಕ್ಷ ಚೀನಾದೊಂದಿಗೆ ಸಂಬಂಧ ಗಟ್ಟಿಮಾಡಿಕೊಂಡಿದ್ದ ನಮ್ಮ ಬಲುದೊಡ್ಡ ತಪ್ಪು ಎಂದು ಹೇಳಿದ್ದಾಗಲೀ ಚೀನಾ 5ಜಿ ವಿಚಾರದಲ್ಲಿ ಹುವೈ ಕಂಪೆನಿಗೆ ಅವಕಾಶ ಮಾಡಿಕೊಡಬೇಕೆಂಬ ವಿನಂತಿಯನ್ನು ಮಂಡಿಸಿರುವುದಾಗಲೀ ಇವೆಲ್ಲವೂ ಭಾರತ ವಿಶ್ವಶಕ್ತಿಯಾಗಿ ಬೆಳೆದು ನಿಲ್ಲುತ್ತಿರುವುದನ್ನು ಸೂಚಿಸುತ್ತಿದೆ. ಈ ಹೊತ್ತಿನಲ್ಲಿ ಆಂತರಿಕವಾಗಿ ಇದನ್ನು ಸದೃಢಗೊಳಿಸುವ ಹೊಣೆಗಾರಿಕೆ ನಮ್ಮದಿದೆ. ನಡೆಯಲೇಬೇಕಿದ್ದ ಯಾವ ಕೆಲಸವನ್ನೂ ನಿಲ್ಲಿಸಬೇಕೆಂದು ಆಗ್ರಹಿಸುವುದು ಬೇಡ. ಪರೀಕ್ಷೆಗಳಿರಲಿ, ವ್ಯಾಪಾರ-ಉದ್ದಿಮೆಗಳೇ ಇರಲಿ, ಇವೆಲ್ಲವೂ ಮತ್ತೆ ಹಳಿಗೆ ಮರಳಬೇಕಿದೆ. ಶಾಲಾ-ಕಾಲೇಜುಗಳು ಎಂದಿನಂತೆ ಪುನರಾರಂಭಗೊಳ್ಳಬೇಕಿದೆ. ಸಾಮಾಜಿಕ ಅಂತರದಿಂದ ಮಾಸ್ಕ್ ಬಳಕೆಯಿಂದ ಮತ್ತು ಸ್ವಲ್ಪ ಎಚ್ಚರಿಕೆಯಿಂದ ವೈರಸ್ಸನ್ನು ತಡೆಯಲು ಸಾಧ್ಯವಾಗುತ್ತದೆಂದು ಗೊತ್ತಿರುವಾಗ ನಾವು ಮುಕ್ತವಾಗಬೇಕಾಗಿದೆ. ಧೈರ್ಯವಾಗಿ ಮುನ್ನುಗ್ಗುತ್ತಾ ಇತರರಿಗೂ ಧೈರ್ಯ ತುಂಬಬೇಕಿದೆ!

Comments are closed.