ವಿಭಾಗಗಳು

ಸುದ್ದಿಪತ್ರ


 

ಕೊರೋನಾ ಎಫೆಕ್ಟ್; ಮನೇಲ್ ಕೂತು ಏನ್ ಮಾಡ್ತೀರಾ?

ವೈರಸ್ಸು ಸಕರ್ಾರದ ಮೂಲಕ ನಮಗೊಂದಷ್ಟು ದಿಗ್ಬಂಧನ ಹಾಕಿಸಿದೆ. ಈ ಅವಕಾಶ ಬಳಸಿಕೊಂಡು ನಮಗೆ ನಾವೂ ಒಂದಷ್ಟು ಚೌಕಟ್ಟು ಹಾಕಿಕೊಳ್ಳೋಣ. ಈ ಒಂದು ವಾರ ಮನೆಯಲ್ಲಿ ಟೀವಿ ಹಾಕಬೇಡಿ. ಫೇಸ್ಬುಕ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಮೊಬೈಲ್ನಿಂದ ತೆಗೆದು ಹಾಕಿಬಿಡಿ. ಇದರಿಂದ ಏಕಾಕಿ ಕನಿಷ್ಠಪಕ್ಷ ಹತ್ತು ವರ್ಷಗಳಷ್ಟು ಹಿಂದೆ ಹೋದ ಅನುಭವ ನಿಮಗೆ ದಕ್ಕಿಬಿಡುತ್ತದೆ. ನಿಮಗೇ ಗೊತ್ತಿಲ್ಲದಂತೆ ಯೌವ್ವನ ಸಿದ್ಧಿಸಿದಂತೆ ಭಾಸವಾಗುತ್ತದೆ.

ಜಗತ್ತು ಎಷ್ಟೊಂದು ಚಿಕ್ಕದಾಗಿದೆ ಅಲ್ಲವೇ? ಕಣ್ಣಿಗೆ ಕಾಣದ ಜೀವಿಯೊಂದು ಇಡಿಯ ಜಗತ್ತನ್ನು ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿದೆ. ಜಗತ್ತನ್ನೆಲ್ಲಾ ನಾಶ ಮಾಡುವ ಬೆದರಿಕೆ ಹಾಕಿದ ಘಟಾನುಘಟಿ ರಾಷ್ಟ್ರಗಳನೇಕ ಮುಂದೇನು ಮಾಡಬೇಕೆಂದು ತೋಚದೇ ಪತರಗುಟ್ಟಿ ಹೋಗಿವೆ. ಅವರೆಲ್ಲರ ತೋಳ್ಬಲವು ಕಣ್ಣಿಗೆ ಕಾಣದ ವೈರಸ್ ಒಂದರ ಮುಂದೆ ಉಡುಗಿ ಹೋಗಿದೆ. ಹಾಗೆ ನೋಡಿದರೆ ಚೀನಾದೊಂದಿಗೆ ಸಾವಿರಾರು ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಳ್ಳುವ ಭಾರತವೇ ಈಗಲೂ ಶಾಂತಿಯಿಂದಿರೋದು. ಕೊರೋನಾದ ಪ್ರಭಾವ ನಮ್ಮ ಮೇಲೂ ಆಗಿರುವುದು ನಿಜವಾದರೂ ದೂರದ ಯೂರೋಪಿನಲ್ಲಿ ಅದು ಹುಟ್ಟಿಸಿರುವ ತಲ್ಲಣ ಭಾರತದಲ್ಲಿ ಸೃಷ್ಟಿಯಾಗಿಲ್ಲ! ಆದರೂ ಅದಕ್ಕೆ ಸಂಬಂಧಪಟ್ಟ ಮುನ್ನೆಚ್ಚರಿಕೆಯನ್ನು, ನಿರ್ಣಯಗಳನ್ನು ಭಾರತ ಕೈಗೊಳ್ಳುತ್ತಿರುವ ಪರಿ ನಿಜಕ್ಕೂ ಭಾರತಕ್ಕೇ ಸಾಟಿಯಾಗುವಂಥದ್ದು. ನಾವೀಗ ನಮ್ಮ ರಕ್ಷಣೆಯ ಹೊಣೆಯನ್ನಲ್ಲದೇ ಸಾಕರ್್ ರಾಷ್ಟ್ರಗಳಲ್ಲೂ ಈ ಮಾರಿಯ ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ಹೊತ್ತಿದ್ದೇವೆ.

2

ಕನರ್ಾಟಕದಲ್ಲಿ ಒಂದು ವಾರಗಳ ಕಾಲ ಎಲ್ಲಕ್ಕೂ ರಜೆ. ಆಫೀಸಿಗೆ ಹೋಗಬೇಕೆಂದಿಲ್ಲ, ಶಾಲಾ-ಕಾಲೇಜುಗಳು ನಡೆಯುತ್ತಿಲ್ಲ, ಮನೆಯಿಂದ ಹೊರಹೋದರೆ ಮಾಲ್ಗಳಿಲ್ಲಾ, ಸಿನಿಮಾ ಥಿಯೇಟರುಗಳಿಲ್ಲ, ಕೊನೆಗೆ ಊರಿಗೆ ಊರೇ ಭಣಗುಡುವ ಜೀರೋ ಟ್ರಾಫಿಕ್ನಂತಹ ವ್ಯವಸ್ಥೆ. ಮನೆಯದ್ದೇನೂ ಪರಿಸ್ಥಿತಿ ಭಿನ್ನವಾಗಿಲ್ಲ. ಟಿವಿ ಹಾಕಿದರೆ 24 ತಾಸೂ ಕೊರೋನಾ ವೈಭವ ಸ್ತುತಿಯಲ್ಲೇ ನಿರತವಾಗಿ ಪಾರಾಯಣ, ಪ್ರವಚನಗಳನ್ನು ಮಾಡುವ ಟಿವಿ ಚಾನೆಲ್ಲುಗಳು. ಅದನ್ನು ಮೀರಿದರೂ ಗಂಡ-ಹೆಂಡತಿ, ಅಪ್ಪ-ಮಕ್ಕಳ ಕದನ ಕಾಳಗಗಳು. ಎಲ್ಲವನ್ನೂ ಮರೆತು ಸುತ್ತಾಡಲು ಹೋಗೋಣವೆಂದರೆ ಅಲ್ಲಿಯೂ ಕೂಡ ಎಲ್ಲದಕ್ಕೂ ರಜೆ. ರಾಜ್ಯ ಬಿಟ್ಟು ಹೊರಹೋಗಲು ವಿಮಾನ ಹತ್ತಿದರೆ ಕೊರೋನಾ ನೇರವಾಗಿ ಬಂದು ಅಪ್ಪಿಕೊಳ್ಳುವ ಭೀತಿ. ಮುಂದಿನ ಒಂದು ವಾರ ಖಂಡಿತವಾಗಿಯೂ ಭಯಾನಕವಾಗಿರಲಿದೆ. ಅದಾಗಲೇ ಎರಡು ದಿನಗಳನ್ನು ಹೀಗೆ ಕಳೆದಿರುವವರಿಗೆ ಕೊರೋನಾ ಕೊಲ್ಲುವ ಮುನ್ನ ತಾವೇ ದೇಹ ಬಿಟ್ಟುಬಿಡುವ ಭಯ ಕಾಡಿದ್ದರೂ ಸುಳ್ಳಲ್ಲ!

ಈ ಒಂದು ವಾರ ಭಗವಂತ ನಮಗೆ ಕೊಟ್ಟಿರುವ ವಿಶೇಷ ಅವಧಿ ಎಂದೇ ನಾವೀಗ ಭಾವಿಸಬೇಕಿದೆ. ದಿನನಿತ್ಯದ ಧಾವಂತದ ಬದುಕಿಗೆ ಮನಸ್ಸು ಒಗ್ಗಿಹೋಗಿತ್ತು. ಸಮಯಕ್ಕೆ ಸರಿಯಾಗಿ ಶಾಲೆಯ ಬಸ್ಸನ್ನು ಹಿಡಿಯಲು ಓಡುವ ಮಗುವಿನಿಂದ ಹಿಡಿದು ಆಫೀಸಿಗೆ ಓಡಿ ಹೋಗಿ ಹೆಬ್ಬೆರಳ ಮುದ್ರೆ ಒತ್ತಿ ಸಮಯಕ್ಕೆ ಸರಿಯಾಗಿ ಬಂದಿದ್ದೇನೆ ಎಂದು ಹೇಳುವ ಕಾರಕೂನರವರೆಗೆ ಇಷ್ಟು ಪುರಸೊತ್ತನ್ನು ಕಂಡವರೇ ಇಲ್ಲ. ಬೆಳಗ್ಗಿನ ಬಸ್ಸು ತಪ್ಪಿದರೆ, ನಲ್ಲಿಯಲ್ಲಿ ನೀರು ಕಡಿಮೆಯಾದರೆ, ವಾಷಿಂಗ್ಮಿಷನ್ನಲ್ಲಿ ಹಾಕಿರುವ ಬಟ್ಟೆ ಐದು ನಿಮಿಷ ಕರೆಂಟ್ ಇಲ್ಲದೇ ಸುಮ್ಮನೆ ನಿಂತುಬಿಟ್ಟರೆ, ಮಿಕ್ಸಿಗೆ ಹಾಕಿರುವ ಚಟ್ನಿ ಒಂದು ನಿಮಿಷ ರುಬ್ಬುವುದರಲ್ಲಿ ತಡವಾದರೆ, ಕೊನೆಗೆ ಟ್ರಾಫಿಕ್ನಲ್ಲಿ ಸಿಕ್ಕಿಕೊಂಡಾಗ ಚಡಪಡಿಕೆ, ಧಾವಂತದಿಂದ ಕಂಡ-ಕಂಡವರ ಮೇಲೆಲ್ಲಾ ಆಕ್ರೋಶಗೊಳ್ಳುತ್ತಾ ಒಮ್ಮೆ ಕರೆಂಟಿನವನನ್ನು, ಮತ್ತೊಮ್ಮೆ ನೀರಿನವನನ್ನು, ಇನ್ನೊಮ್ಮೆ ರಸ್ತೆ ಬದಿಯಲ್ಲಿ ಹೋಗುವ ಚಾಲಕರನ್ನು, ಕೊನೆಗೊಮ್ಮೆ ಅಕ್ಕ-ಪಕ್ಕದ ಮನೆಯವರನ್ನು ಬೈಯ್ಯುತ್ತಾ ಕಾಲ ದೂಡಿದೆವಲ್ಲಾ ಇವೆಲ್ಲಕ್ಕೂ ಈ ಧಾವಂತವೇ ಕಾರಣ. ಈಗ ಒಂದು ವಾರಗಳ ಕಾಲ ಯಾವ ತುತರ್ು ಅವಶ್ಯಕತೆಯೂ ಇಲ್ಲದೇ ನಿರಮ್ಮಳವಾಗಿರುವ ಅವಕಾಶ ದೊರೆತಿದೆ. ಬದುಕು ಅದೆಷ್ಟು ಕಷ್ಟ ಎನ್ನುವುದು ಅನೇಕರಿಗೆ ಅರ್ಥವಾಗೋದು ಈಗಲೇ! ಸದಾ ತಿರುಗುವ ಭೂಮಿ ಅಕಸ್ಮಾತ್ ಒಂದು ಕ್ಷಣ ನಿಂತುಬಿಟ್ಟರೆ ಭೂಮಿಯ ಮೇಲಿನ ವಸ್ತುಗಳೆಲ್ಲಾ ಭೂಮಿಯನ್ನು ಬಿಟ್ಟು ಹಾರಿಹೋಗುತ್ತವಂತೆ. ನಮಗೂ ಅಂಥದ್ದೇ ಅನುಭವ ಆದರೆ ಈಗ ಆಶ್ಚರ್ಯವಿಲ್ಲ. ಹೀಗಾಗಿಯೇ ಕೊರೋನಾದ ರಜೆ ಭಗವಂತ ನಮಗೆ ಕೊಟ್ಟಿರುವ ಅಪರೂಪದ ಅವಕಾಶ ಎಂದು ಹೇಳಿದ್ದು!

No social network symbol isolated on white backgroun

ವೈರಸ್ಸು ಸಕರ್ಾರದ ಮೂಲಕ ನಮಗೊಂದಷ್ಟು ದಿಗ್ಬಂಧನ ಹಾಕಿಸಿದೆ. ಈ ಅವಕಾಶ ಬಳಸಿಕೊಂಡು ನಮಗೆ ನಾವೂ ಒಂದಷ್ಟು ಚೌಕಟ್ಟು ಹಾಕಿಕೊಳ್ಳೋಣ. ಈ ಒಂದು ವಾರ ಮನೆಯಲ್ಲಿ ಟೀವಿ ಹಾಕಬೇಡಿ. ಫೇಸ್ಬುಕ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಮೊಬೈಲ್ನಿಂದ ತೆಗೆದು ಹಾಕಿಬಿಡಿ. ಇದರಿಂದ ಏಕಾಕಿ ಕನಿಷ್ಠಪಕ್ಷ ಹತ್ತು ವರ್ಷಗಳಷ್ಟು ಹಿಂದೆ ಹೋದ ಅನುಭವ ನಿಮಗೆ ದಕ್ಕಿಬಿಡುತ್ತದೆ. ನಿಮಗೇ ಗೊತ್ತಿಲ್ಲದಂತೆ ಯೌವ್ವನ ಸಿದ್ಧಿಸಿದಂತೆ ಭಾಸವಾಗುತ್ತದೆ. ಆದರೆ ಇಷ್ಟೂ ದಿನಗಳ ಕಾಲ ನಿಮ್ಮ ಬದುಕನ್ನು ಆಕ್ರಮಿಸಿಕೊಂಡಿರುವ ಈ ವಸ್ತುಗಳನ್ನು ಹೊರದಬ್ಬಿರುವುದರಿಂದ ಅಲ್ಲೊಂದು ದೊಡ್ಡ ನಿವರ್ಾತ ಸೃಷ್ಟಿಯಾಗಿದೆಯಲ್ಲಾ, ಈ ನಿವರ್ಾತವನ್ನು ತುಂಬಲು ಒಂದು ಪುಟ್ಟ ಪ್ರಯೋಗ ಮಾಡಿ. ಹಾಗೇ ಕುಳಿತುಕೊಂಡು ಜೀವನದಲ್ಲಿ ಇಷ್ಟೂ ದಿನಗಳವರೆಗೆ ಭೇಟಿಯಾಗಿರುವ ಅಪರೂಪದ ವ್ಯಕ್ತಿಗಳು, ಅವರ ಮಾತುಗಳನ್ನು ಸ್ಮರಿಸಿಕೊಳ್ಳಿ, ನಿಮ್ಮ ಹಳೆಯ ದಿನಗಳಲ್ಲಿ ತಂದೆ-ತಾಯಿ, ಅಕ್ಕ-ಅಣ್ಣಂದಿರು, ಜೊತೆಗೆ ನೀವೂ ಕೂಡ ಪಟ್ಟ ಕಷ್ಟವನ್ನು ಮೆಲುಕು ಹಾಕಿ. ಜೊತೆಗೆ ಪ್ರತಿನಿತ್ಯ ನಿಮ್ಮ ಮನೆಗೆ ಪೇಪರ್ ಹಾಕುವ, ಹಾಲು ಕೊಡುವ ವ್ಯಕ್ತಿಗಳ ಮುಖವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ, ಅಮೇರಿಕಾದಲ್ಲಿರುವ ವ್ಯಕ್ತಿಯೊಬ್ಬನನ್ನು ಫೇಸ್ಬುಕ್ಕಿನ ಮೂಲಕ ಗುರುತಿಸುವ ನಾವು ನಮ್ಮ ದಿನನಿತ್ಯದ ಬದುಕನ್ನು ಹಸನುಗೊಳಿಸುವ ವ್ಯಕ್ತಿಯ ಮುಖವನ್ನೇ ನೋಡಿಲ್ಲವೆಂಬುದು ಅರಿವಾಗಿಬಿಡುತ್ತದೆ. ಮರುದಿನ ಬೆಳಿಗ್ಗೆಯೇ ಅವರುಗಳು ಬಂದಾಗ ಒಮ್ಮೆ ಮಾತನಾಡಿಸಿ. ಮನಸ್ಸು ಪೂರ್ಣ ಹಗುರವಾಗುತ್ತದೆ!

ಓದುವ ಹವ್ಯಾಸ ಬಿಟ್ಟೇಹೋಗಿದೆಯಲ್ಲವೇ? ವಾಟ್ಸಪ್ಗಳಲ್ಲಿ ಬಂದಿರುವ ಒಂದಷ್ಟು ತಮಾಷೆಯ ಸಾಲುಗಳನ್ನೋ, ಭಡಕಾಯಿಸುವ ವಿಚಾರಗಳನ್ನೋ ಓದಿ ಫಾರ್ವಡರ್್ ಮಾಡಿದ್ದೇವೆ. ಹೆಚ್ಚೆಂದರೆ ಫೇಸ್ಬುಕ್ಕಿನಲ್ಲಿ ‘ಹೀಗೇಕೆ ಗೊತ್ತಾ’ ಎಂಬ ಪದಗಳನ್ನು ಹೊತ್ತು ಬರುವ ಕೆಲಸಕ್ಕೇ ಬಾರದ ಒಂದಷ್ಟು ವರದಿಗಳನ್ನು ಓದಿರಬಹುದು. ಈಗ ಮನಸ್ಸಿಗೆ ಮುದಕೊಡಬಲ್ಲ ಒಂದಾದರೂ ಪುಸ್ತಕವನ್ನು ಓದಲು ಶುರುಮಾಡಿ. ಹತ್ತನೇ ತರಗತಿಗೆ ಬಂದಾಗ ಹೆಚ್ಚು ಅಂಕ ಗಳಿಸುವ ಹಠಕ್ಕೆ ಬಿದ್ದು ಚಿತ್ರ ಬಿಡಿಸುವುದನ್ನು ಬಿಟ್ಟು ಬಿಟ್ಟಿದ್ದೀರಲ್ಲಾ, ಆಮೇಲಿನ ಬದುಕಿನಲ್ಲಿ ಮತ್ತೆ ಅದನ್ನು ಮಾಡುವ ಅವಕಾಶವೇ ಸಿಕ್ಕಿರಲಿಲ್ಲವಲ್ಲಾ, ಕರೋನಾ ಒದಗಿಸಿಕೊಟ್ಟಿದೆ. ಮಕ್ಕಳ ಕಪಾಟಿನಿಂದ ಬಣ್ಣದ ಪೆನ್ಸಿಲ್ಗಳನ್ನು, ಬಣ್ಣದ ಕುಡಿಕೆಗಳನ್ನು ತೆಗೆದು ಚಿತ್ರ ಬಿಡಿಸಲು ಆರಂಭಿಸಿ, ಬಣ್ಣ ತುಂಬಿ. ಮಗುವಿನ ಶಾಲೆಯ ಚೀಲದಲ್ಲಿ ಜೇಡಿಮಣ್ಣಿದ್ದರೆ ಒಂದಷ್ಟು ಆಕೃತಿಯನ್ನು ಮಗುವಿನೊಂದಿಗೆ ಸೇರಿ ನೀವೂ ರಚಿಸಿ. ನೀವೀಗ ಯೌವ್ವನವನ್ನಲ್ಲ ಬಾಲ್ಯವನ್ನೂ ಮರಳಿ ಗಳಿಸಿಕೊಂಡುಬಿಡುತ್ತೀರಾ.

4

ಇವೆಲ್ಲದರೊಟ್ಟಿಗೆ ಒಂದು ಹೆಜ್ಜೆ ಮುಂದೆ ಹೋಗಿ ಅಡುಗೆ ಮನೆಯಲ್ಲಿ ಸ್ವಲ್ಪ ಕೆಲಸ ಆರಂಭಿಸಿ. ಅದು ಅಡುಗೆ ಮಾಡುವುದರಿಂದ ಹಿಡಿದು ಕೊನೆಗೆ ಪಾತ್ರೆ ತಿಕ್ಕುವವರೆಗೆ ಏನಾದರೂ ಸರಿ. ತರಕಾರಿ ಹೆಚ್ಚುವುದು, ಫ್ರೈಯಿಂಗ್ ಪ್ಯಾನ್ನಲ್ಲಿ ಅದನ್ನು ಹುರಿದು ಬೇಕಾಗಿರುವ ಮಸಾಲೆಗಳನ್ನು ಹಾಕಿ ಅಡುಗೆ ಮಾಡಿ ತಿನ್ನುವುದು ಇವೆಲ್ಲವೂ ಮಜವಾದ ಅನುಭವವನ್ನು ಕೊಡುತ್ತದೆ. ಎಲ್ಲಕ್ಕೂ ಮಿಗಿಲಾಗಿ ಖಾರ ಹೆಚ್ಚಾದಾಗ, ಉಪ್ಪು ಕಡಿಮೆಯಾದಾಗ ಕೂಗಾಡದೇ ತಿನ್ನಬೇಕೆಂಬ ಮೊದಲ ಪಾಠವನ್ನು ಸ್ಪಷ್ಟವಾಗಿ ಕಲಿಸುತ್ತದೆ. ನಮ್ಮಲ್ಲನೇಕರು ಬಾಲ್ಯದಲ್ಲಿ ಅಮ್ಮನ ಕೈ ಅಡುಗೆ ತಿಂದವರು, ಯೌವ್ವನದಲ್ಲಿ ಹೋಟೆಲ್ಲು, ಮದುವೆಯ ನಂತರ ಹೆಂಡತಿಯದ್ದೋ, ಕೆಲಸದವಳ ಕೈಯ್ಯದ್ದೋ ಅಡುಗೆ ಉಂಡು ಬೆಳೆದವರು. ಹೀಗಾಗಿಯೇ ರುಚಿಯನ್ನು ಆನಂದಿಸುವ ಕಲೆ ಕಳೆದುಕೊಂಡುಬಿಟ್ಟಿದ್ದೇವೆ. ಏನು ಕೊಟ್ಟರೂ ಮನಸ್ಸಿಗೆ ಸಮಾಧಾನವೆನ್ನುವುದೇ ಇಲ್ಲ. ನಾವೇ ಅಡುಗೆ ಮಾಡುವಾಗ ಅಡುಗೆ ಕೋಣೆಯ ಭಿನ್ನ-ಭಿನ್ನ ಸಮಸ್ಯೆಗಳು ಕಣ್ಣೆದುರು ಕಾಣುತ್ತವೆ. ಸಣ್ಣ-ಪುಟ್ಟ ತಪ್ಪುಗಳಿಗೆ ಕೂಗಾಡಬಾರದು ಎಂಬ ಸತ್ಯ ಅರಿವಾಗುತ್ತದೆ. ಮನೆಯೊಳಗಿನ ಮಂದಿಯ ನಡುವೆ ಆನಂತರದ ದಿನಗಳಲ್ಲಿ ನೆಮ್ಮದಿಯ ಬಾಂಧವ್ಯ ಇದು ಬೆಸೆಯುತ್ತದೆ. ಗಂಡ-ಹೆಂಡಿರ ನಡುವೆ ಕೊರೋನಾ ಮಾರಿ ಕಳೆಯುವುದರೊಳಗೆ ಪ್ರೀತಿಯ ಫೆವಿಕಾಲ್ ಜೋರಾಗಿ ಬೆಸೆದರೆ ಯಾರೂ ಅಚ್ಚರಿ ಪಡಬೇಕಿಲ್ಲ!

5

ಮೊದಲ ಬಾರಿಗೆ 24 ಗಂಟೆ ಎಂದರೆ ಅದೆಷ್ಟು ದೊಡ್ಡದ್ದು ಎಂಬುದು ನಿಮಗೀಗ ಅರ್ಥವಾಗುತ್ತದೆ. ಹೀಗಾಗಿ ಟೀವಿ ನೋಡಲೇಬೇಕೆಂಬ ತುಡಿತವುಂಟಾದರೆ ನ್ಯಾಷನಲ್ ಜಿಯೋಗ್ರಫಿ ಚಾನೆಲ್ ಅನ್ನು ಟ್ಯೂನ್ ಮಾಡಿ ಪ್ರಾಣಿ ಲೋಕದ ವಿಸ್ಮಯವನ್ನು ಸವಿಯಲಾರಂಭಿಸಿ. ಸಿಂಹದೊಂದಿಗೆ ಸೆಣೆಸುವ ಕಾಡೆಮ್ಮೆಗಳು, ಮೊಸಳೆಯ ಬಾಯಿಗೆ ಸಿಕ್ಕು ತಪ್ಪಿಸಿಕೊಂಡು ಬಂದ ಮರಿಜಿಂಕೆ, ತನ್ನ ಭವಿಷ್ಯದ ಪೀಳಿಗೆಯನ್ನು ರಕ್ಷಿಸಲಿಕ್ಕಾಗಿ ಧೀಮಂತವಾಗಿ ಅಡ್ಡಾಡುವ ಹುಲಿ-ಸಿಂಹಗಳು, ಹಿಂಡಿನಲ್ಲಿ ಒಂದು ಆನೆ ತೀರಿಕೊಂಡರೂ ಕಣ್ಣೀರಿಡುವ ಇತರೆಲ್ಲಾ ಜೊತೆಗಾರರು, ಗೂಡು ಕಟ್ಟುವ ಮುನ್ನ ಎಚ್ಚರಿಕೆಯಿಂದ ಒಬ್ಬರಿಗೊಬ್ಬರು ಸಂಪರ್ಕ ಸಾಧಿಸಿ ನಿರ್ಣಯ ಕೈಗೊಳ್ಳುವ ಇರುವೆಗಳು.. ಓಹ್! ಸೃಷ್ಟಿಲೋಕದ ಅದ್ಭುತ ಬದುಕಿನತ್ತ ಮತ್ತೊಮ್ಮೆ ಹೊಸ ದೃಷ್ಟಿಯನ್ನು ಬೀರಲು ನಿಮಗೊಂದು ಅವಕಾಶ ಮಾಡಿಕೊಳ್ಳಿ. ನಿಮಗರಿವಿಲ್ಲದಂತೆಯೇ ನಮಗೊಂದು ಈ ಬಗೆಯ ಬದುಕನ್ನು ಕೊಟ್ಟ ಭಗವಂತನಿಗೆ ಧನ್ಯವಾದ ಸಮಪರ್ಿಸಬೇಕೆನಿಸುತ್ತದೆ. ಇಷ್ಟೂ ದಿನ ಇಲ್ಲದಿರುವುದರ ಕುರಿತಂತೆ ಆಲೋಚನೆ ಮಾಡುತ್ತಾ ರೇಸಿನಲ್ಲಿ ಓಡುವ ಕುದುರೆಗಳಂತೆ ಆನಂದದ ಲೋಕವನ್ನೇ ಬಿಟ್ಟು ಓಡುತ್ತಿದ್ದೆವಲ್ಲಾ ಎಂಬುದು ಅರಿವಾಗಿಬಿಡುತ್ತದೆ. ಈ ಆನಂದವನ್ನು ಸದಾ ಪಡೆಯುವುದು ಹೇಗೆಂಬ ಆಲೋಚನೆಯೂ ಶುರುಮಾಡಿ. ಭಗವಂತ ನಮಗೆಂದು ಕೊಟ್ಟಿರುವ ಅರವತ್ತೋ ಎಪ್ಪತ್ತೋ ವರ್ಷದ ಬದುಕಲ್ಲಿ ಅದಾಗಲೇ 60 ಪ್ರತಿಶತ ಮುಗಿಸಿಬಿಟ್ಟಿದ್ದೇವೆ. ಕೆಲವರಂತೂ ಮುಕ್ಕಾಲು ಭಾಗವನ್ನೂ ಕಳೆದುಬಿಟ್ಟಿದ್ದಾರೆ. ಇನ್ನುಳಿದ ಸ್ವಲ್ಪ ಬದುಕಿನಲ್ಲಿ ಕೂಡಿ ಹಾಕಲೆಂದು ಓಡುತ್ತಿರುವುದರ ಬದಲು ಇಷ್ಟು ದಿನ ಅನವಶ್ಯಕವಾದ್ದನ್ನು ಕೂಡಿಸಿಕೊಂಡಿದ್ದೇವಲ್ಲಾ ಅದರಿಂದ ಮುಕ್ತಿ ಪಡೆಯುವುದರ ಕುರಿತಂತೆ ಆಲೋಚಿಸಿ. ಒಂದು ಕ್ಷಣ ಕಣ್ಣು ಮುಚ್ಚಿದೊಡನೆ ಹುಚ್ಚೆದ್ದು ಓಡುತ್ತಿರುವ ಮನಸ್ಸು ಧುತ್ತೆಂದು ನಿಲ್ಲುತ್ತದೆ. ಅದಕ್ಕೆ ಲಗಾಮು ಹಾಕಿ ಎಳೆತಂದು, ಕುಳಿತುಕೊಳ್ಳುವಂತೆ ಮಾಡುವ ಪ್ರಯತ್ನಕ್ಕೆ ಮೊದಲ ಹೆಜ್ಜೆ ಇಟ್ಟೆವೆಂದಾದರೆ ಕೊರೋನಾ ಬಂದಿದ್ದು ಸಾರ್ಥಕ. ಆಮೇಲೇನು ಗೊತ್ತೇ? ಇಷ್ಟೂ ದಿನದ ಬದುಕಿಗಿಂತ ಮನಸ್ಸಿನ ಲೋಕದಲ್ಲಿ ವಿಹರಿಸುವ ಬದುಕು ಹೆಚ್ಚು ಸುಂದರ ಎಂಬುದು ಖಾತ್ರಿಯಾದೊಡನೆ ಸಾವೂ ಕೂಡ ನಿಮ್ಮನ್ನು ಹೆದರಿಸಲಾರದು. ಆಗ ಕೊರೋನಾ ಅಥವಾ ಅದರಂತಹ ಯಾವ ಮಾರಿಯನ್ನು ಕಂಡಾಗಲೂ ಭಯವುಂಟಾಗಲಾರದು. ಅಲ್ಲಿಗೆ ಉಪನಿಷತ್ತುಗಳು ಹೇಳಿದ ನಿಭರ್ೀತ ಬದುಕು ನಮ್ಮದಾಗುತ್ತದೆ. ಸತ್ತರೇನು ಮತ್ತೊಂದು ದೇಹವನ್ನು ಪಡೆದು ವಾಪಸ್ಸು ಬರುವುದು ತಾನೇ ಎಂದೇನಾದರೂ ಆಲೋಚಿಸಲಾರಂಭಿಸಿದರೆ ಸಾವನ್ನೇ ಕಾಳಿಯಾಗಿ ಪೂಜಿಸಿ, ಎರಡೂ ಕೈ ಚಾಚಿ ಅದನ್ನು ಆಹ್ವಾನಿಸುವ ತಾಕತ್ತು ಪಡೆದುಕೊಂಡುಬಿಡುತ್ತೇವೆ. ಭಾರತದ ಶಕ್ತಿ ಅಡಗಿರುವುದು ಇಲ್ಲೇ. ಸ್ವಾತಂತ್ರ್ಯ ಕಾಲಘಟ್ಟದಲ್ಲಿ ಬ್ರಿಟೀಷರು ನೇಣಿಗೇರಿಸುವಾಗಲೂ ನಮ್ಮವರು ಹೆಮ್ಮೆಯಿಂದ ಧಾವಿಸುತ್ತಿದ್ದರಲ್ಲಾ, ಅವರ ಹಿಂದೆ ಇದ್ದುದು ಇದೇ ನಿಭರ್ೀತಿಯ ತಾಕತ್ತು. ಕೊರೋನಾ ಆ ದಿಕ್ಕಿನತ್ತಲೇ ನಮ್ಮನ್ನು ಕೊಂಡೊಯ್ಯುವುದಾದರೆ ಹಳೆಯ ಶಕ್ತಿಶಾಲಿ ಭಾರತ ಮರುಕಳಿಸಿದಂತೆಯೇ ಸರಿ!

ಎಲ್ಲವೂ ಪಟ್ಟಣಿಗರಿಗೇ ಆಯ್ತು. ಹಳ್ಳಿಯ ಮಂದಿ ಏನು ಮಾಡಬೇಕು? ಅವರಿಗೆ ಧಾವಂತ ಎನ್ನುವುದೇ ಇಲ್ಲವಲ್ಲಾ? ತನ್ನ ಬದುಕನ್ನು ಪ್ರಕೃತಿಯ ಮಡಿಲಲ್ಲಿ ಕಳೆಯುತ್ತಾ ಹಾಯಾಗಿದ್ದಾನಲ್ಲಾ, ಅವನೇನು ಮಾಡಬೇಕು? ಏನಿಲ್ಲಾ, ಈ ಅವಕಾಶವನ್ನು ಬಳಸಿಕೊಂಡು ಒಮ್ಮೆ ಪಟ್ಟಣಕ್ಕೆ ಬಂದೇ ಬಿಡಬೇಕು. ಪ್ರಕೃತಿಯನ್ನು ಹಾಳುಮಾಡಿ ನಗರ ಕಟ್ಟಿದವರು ಕಣ್ಣಿಗೆ ಕಾಣದ ವೈರಸ್ಸಿಗೆ ಹೆದರಿ ಹೇಗೆ ಅಡಗಿ ಕೂರುತ್ತಾರೆ ಎಂಬುದನ್ನು ಕಣ್ಣಾರೆ ನೋಡಬೇಕು. ಆಗ ಅವನು ಮತ್ತೆ ಊರಿಗೆ ಮರಳುವಾಗ ತನ್ನ ಹಳ್ಳಿಯ ಕುರಿತಂತೆ, ತನ್ನ ಜೀವನಶೈಲಿಯ ಕುರಿತಂತೆ ಹೆಮ್ಮೆ ಪಡಬಲ್ಲ!

Comments are closed.