ವಿಭಾಗಗಳು

ಸುದ್ದಿಪತ್ರ


 

ಕೊರೋನಾ: ಭಾರತದಿಂದ ಜಗತ್ತು ಕಲಿತ ಪಾಠ!

ಚೀನಾ ವೈರಸ್ಸನ್ನು ಸೃಷ್ಟಿಸಿದೆ ಎಂಬ ವಾದವನ್ನು ಒಪ್ಪುವುದೇ ಆದರೆ ಜಗತ್ತೆಲ್ಲವನ್ನೂ ಬಯಸಿದಾಗ ಬಾಯಿ ಮುಚ್ಚುವಂತೆ ಮಾಡಬಲ್ಲ ತಾಕತ್ತು ಅದಕ್ಕಿದೆ ಎಂಬುದು ನಿಸ್ಸಂಶಯವಾಗಿ ಸಿದ್ಧವಾಗುತ್ತದೆ. ಅಂದರೆ ಮೂರನೇ ಜಾಗತಿಕ ಯುದ್ಧವನ್ನು ಚೀನಾ ಶಾಂತವಾಗಿಯೇ ಗೆದ್ದುಬಿಟ್ಟಿದೆ!

ಜಗತ್ತನ್ನು ಎರಡನೇ ಮಹಾಯುದ್ಧದ ನಂತರ ಈ ಪರಿ ಆತಂಕಕ್ಕೆ ದೂಡಿದ ಸಂಗತಿ ಮತ್ತೊಂದಿಲ್ಲ. ಈ ಹೊತ್ತಿನಲ್ಲಿ ಎಲ್ಲರ ಕಣ್ಣು ಚೀನಾದತ್ತ ಇದೆ. ಸ್ವಲ್ಪ ಎಡವಟ್ಟಾದರೂ ಅಮೇರಿಕಾ ತನ್ನ ಸಾರ್ವಭೌಮತೆಯನ್ನು ಕಳೆದುಕೊಂಡು ಚೀನಾದೆದುರು ತಲೆ ಬಾಗಲೇಬೇಕಾದ ಸ್ಥಿತಿಗೆ ಬಂದು ನಿಂತುಕೊಳ್ಳುತ್ತದೆ. ಹಾಗಲ್ಲದೇ ಈ ಯುದ್ಧವನ್ನು ಅಮೇರಿಕಾ ಗೆದ್ದು ಜಗತ್ತಿನ ಮೇಲೆ ತನ್ನ ಪ್ರಭಾವವನ್ನು ಹೀಗೇ ಉಳಿಸಿಕೊಳ್ಳಲು ಸಾಧ್ಯವಾಯೆಂ್ತದರೆ ಚೀನಾ ತಿಪ್ಪರಲಾಗ ಹೊಡೆಯಬೇಕಾಗುತ್ತದೆ. ಈಗಾಗಲೇ ಎರಡೂ ಬಗೆಯ ದೃಶ್ಯಗಳೂ ಕಂಡುಬರುತ್ತಿವೆ. ಚೀನಾದೊಂದಿಗೆ ಬದ್ಧವೈರವಿರುವ ಜಪಾನ್ ಅದಾಗಲೇ ತನ್ನೆಲ್ಲಾ ಉತ್ಪಾದಕ ಕಂಪೆನಿಗಳನ್ನು ಚೀನಾ ಬಿಟ್ಟು ಮರಳಿ ತವರಿಗೆ ಬರುವಂತೆ ಕೇಳಿಕೊಂಡಿದೆ. ಇದಕ್ಕೆ ಬೇಕಾದ ಬಿಲಿಯನ್ಗಟ್ಟಲೆ ಹಣಸಹಾಯಕ್ಕೆ ಅದು ಸಿದ್ಧವೂ ಆಗಿಬಿಟ್ಟಿದೆ! ಅತ್ತ ಅಮೇರಿಕಾ ಚೀನಾದ ಸಂವಹನ ಮಾಧ್ಯಮಕ್ಕೆ ಸಂಬಂಧಪಟ್ಟ ಎಲ್ಲಾ ಚೀನಿ ಉಪಕರಣಗಳನ್ನು ರಾಷ್ಟ್ರೀಯ ಸುರಕ್ಷತೆಯ ಹಿನ್ನೆಲೆಯಿಂದ ಬಳಸಬಾರದೆಂದು ಹೇಳಿಯಾಗಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಚೀನಾವನ್ನು ಮತ್ತು ಅದರ ಈ ಪ್ರಯತ್ನಕ್ಕೆ ಬೆಂಬಲಕೊಟ್ಟ ವಿಶ್ವ ಆರೋಗ್ಯ ಸಂಸ್ಥೆಯನ್ನು ಶಿಕ್ಷಿಸಬೇಕೆಂದು ರೊಚ್ಚಿಗೆದ್ದು ಕೂಗಾಡುತ್ತಿವೆ. ಮತ್ತೊಂದೆಡೆ ಸದ್ದಿಲ್ಲದೇ ಅರಬ್ ರಾಷ್ಟ್ರಗಳು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡು ಇಳಿಯುತ್ತಿರುವ ತೈಲಬೆಲೆಗೆ ಕಡಿವಾಣ ಹಾಕಲು ನಿರ್ಧರಿಸಿಬಿಟ್ಟಿವೆ. ಭೂಮಿಯಿಂದ ತೆಗೆಯುವ ತೈಲದ ಪ್ರಮಾಣವನ್ನು ಕಡಿಮೆ ಮಾಡಿದರೆ ಅದರ ಬೆಲೆ ಸಹಜವಾಗಿಯೇ ಏರುತ್ತದೆ. ಆದರೆ ಕಳೆದ ಅನೇಕ ವರ್ಷಗಳಿಂದ ಇದಕ್ಕೊಪ್ಪದ ರಷ್ಯಾ ತನ್ನ ಪಾಡಿಗೆ ತಾನು ನುಗ್ಗುತ್ತಾ ಈ ಸವಾಲು ಅಂತ್ಯವಾಗದಂತೆ ನೋಡಿಕೊಂಡಿತ್ತು. ಇದ್ದಕ್ಕಿದ್ದಂತೆ ಅದರ ಆಲೋಚನೆ ಬದಲಾಗಿರುವುದರಲ್ಲಿ ಮಹತ್ವದ ಸಂದೇಶವಂತೂ ಅಡಗಿದೆ. ಅಮೇರಿಕಾ ಮೆಕ್ಸಿಕೋದ ಜನರನ್ನು ತನ್ನ ಗಡಿಯೊಳಕ್ಕೆ ಬಿಡುವುದಿಲ್ಲ ಎಂದು ಹೇಳುತ್ತಿತ್ತಲ್ಲಾ, ಈಗ ಅದೇ ಮೆಕ್ಸಿಕೋದ ಪ್ರಧಾನಿ ಸೋಂಕಿತ ಅಮೇರಿಕನ್ನರನ್ನು ತಮ್ಮ ಗಡಿಯೊಳಕ್ಕೆ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಅಮೇರಿಕಾದ ಬದ್ಧವೈರಿಯಾಗಿರುವ ಚೀನಾ ಈ ವೈರಸ್ನ ಕುರಿತಂತೆ ಹಂಚಿಕೊಳ್ಳುತ್ತಿರುವ ಮಾಹಿತಿಯಿಂದಾಗಿ ತಾನು ಇದರ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿದೆ ಎಂಬ ಹೇಳಿಕೆಯನ್ನು ಕೊಟ್ಟು ಜಗತ್ತನ್ನು ಅಚ್ಚರಿಗೆ ತಳ್ಳಿದೆ! ಎಲ್ಲಾ ರಾಷ್ಟ್ರಗಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ಚೀನಾಗೆ ಈಗ ಸಾಕಷ್ಟು ಸಮಯವಿದೆ. ಅಮೇರಿಕಾದ ವಿರುದ್ಧ ಎಲ್ಲರನ್ನೂ ಒಟ್ಟುಗೂಡಿಸಿ ತನ್ನ ಸಾಮಥ್ರ್ಯದೆದುರಿಗೆ ಅವರೆಲ್ಲರನ್ನೂ ತಲೆಬಾಗುವಂತೆ ಮಾಡಿ ತಾನು ಹಿರಿಯಣ್ಣನಾಗುವ ಎಲ್ಲ ಲಕ್ಷಣಗಳನ್ನು ತೋರಿದೆ. ಅದಾಗಲೇ ಶೇರು ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡು ಒದ್ದಾಡುತ್ತಿರುವ ಇಂಗ್ಲೆಂಡಿನ ಕಂಪೆನಿಗಳನ್ನು ಕೊಂಡುಕೊಳ್ಳುವುದಕ್ಕೆ ಕೈ ಹಾಕಿಬಿಟ್ಟಿದೆ. ಅಲ್ಲಿನ ಸಕರ್ಾರ ಮಧ್ಯಪ್ರವೇಶಿಸಿ ಚೀನಾದ ಈ ಸಾರ್ವಭೌಮತೆಯನ್ನು ತಡೆಯಲೋಸುಗ ಹರಸಾಹಸ ಮಾಡುತ್ತಿದೆ.

6

ಚೀನಾ ವೈರಸ್ಸನ್ನು ಸೃಷ್ಟಿಸಿದೆ ಎಂಬ ವಾದವನ್ನು ಒಪ್ಪುವುದೇ ಆದರೆ ಜಗತ್ತೆಲ್ಲವನ್ನೂ ಬಯಸಿದಾಗ ಬಾಯಿ ಮುಚ್ಚುವಂತೆ ಮಾಡಬಲ್ಲ ತಾಕತ್ತು ಅದಕ್ಕಿದೆ ಎಂಬುದು ನಿಸ್ಸಂಶಯವಾಗಿ ಸಿದ್ಧವಾಗುತ್ತದೆ. ಅಂದರೆ ಮೂರನೇ ಜಾಗತಿಕ ಯುದ್ಧವನ್ನು ಚೀನಾ ಶಾಂತವಾಗಿಯೇ ಗೆದ್ದುಬಿಟ್ಟಿದೆ! ಈ ಒಟ್ಟಾರೆ ವಿಷಯವನ್ನು ಮತ್ತೊಂದು ದೃಷ್ಟಿಕೋನದಿಂದ ನೋಡುವುದಾದರೆ ದ್ವಿತೀಯ ಮಹಾಯುದ್ಧದ ಹೊತ್ತಲ್ಲಿ ಜಪಾನ್ ಪಲರ್್ಹಾರ್ಬರ್ ಮೇಲೆ ದಾಳಿ ಮಾಡಿ ಅಮೇರಿಕಾವನ್ನು ರೊಚ್ಚಿಗೆಬ್ಬಿಸಿ ಆನಂತರ ಶರಣಾಗುವ ಸ್ಥಿತಿಗೆ ಬಂದಿತ್ತು. ಪಲರ್್ಹಾರ್ಬರ್ ಘಟನೆಯೇ ಸುಳ್ಳು. ಅಮೇರಿಕಾ ಜಗತ್ತಿನ ಮುಂದೆ ತಾನು ಮಾಡಲಿರುವ ಕೃತ್ಯವನ್ನು ಸಮಥರ್ಿಸಿಕೊಳ್ಳಲೆಂದೇ ಈ ವೇದಿಕೆ ಸೃಷ್ಟಿಸಿಕೊಂಡಿದೆ ಎಂದೂ ಹೇಳಲಾಗುತ್ತಿತ್ತು. ಒಂದು ವೇಳೆ ಅದು ನಿಜವೇ ಆದರೆ ಭವಿಷ್ಯ ಇನ್ನೂ ಕೆಟ್ಟದ್ದಾಗಿರಬಹುದು. ಟ್ರಂಪ್ ಜಾಗತಿಕ ಬೆಂಬಲ ಪಡೆದು ಚೀನಾವನ್ನು ಪ್ರತ್ಯೇಕಿಸುವ, ಆಥರ್ಿಕ ನಿಷೇಧ ಹೇರುವ ಪ್ರಯತ್ನವನ್ನೂ ಮಾಡಬಹುದು. ಎಲ್ಲದಕ್ಕೂ ನಾವಿನ್ನೂ ಕಾಯಬೇಕಿದೆ.

7

ಈ ಎಲ್ಲದರ ನಡುವೆ ಜಗತ್ತಿನಲ್ಲೆಲ್ಲಾ ಗೌರವ ಸಂಪಾದಿಸುತ್ತಿರುವುದು ಭಾರತವೇ. ಆಥರ್ಿಕವಾಗಿ ಅನೇಕ ಪ್ರಮುಖ ರಾಷ್ಟ್ರವನ್ನೆಲ್ಲಾ ಹಿಂದಿಕ್ಕಿ ಮುಂದೋಡಿದ ಭಾರತ ಬೆಳವಣಿಗೆಯ ವೇಗವನ್ನು ತೋರುತ್ತಿರುವಾಗಲೇ ಕೊರೋನಾ ಅಮರಿಕೊಂಡಿದ್ದು. ಇತರೆಲ್ಲಾ ರಾಷ್ಟ್ರಗಳು ರೋಗ ಬಂದ ನಂತರವೂ ತಲೆಕೆಡಿಸಿಕೊಳ್ಳದೇ ಹೋದಾಗ ನರೇಂದ್ರಮೋದಿ ಜನತಾಕಫ್ಯರ್ೂ ಕೇಳಿ ನಂತರ ಲಾಕ್ಡೌನ್ ಅನ್ನೇ ಹೇರಿದರು. ಮುಂದುವರೆದ ರಾಷ್ಟ್ರಗಳು ಅವಾಕ್ಕಾದವಲ್ಲದೇ ತಾವೂ ಲಾಕ್ಡೌನ್ ಅನ್ನು ತಮ್ಮ-ತಮ್ಮ ದೇಶಗಳಲ್ಲಿ ಹೇರಿ ಜನರ ಜೀವ ಉಳಿಸುವ ಪ್ರಯತ್ನ ಆರಂಭಿಸಿದವು. ಕೊರೋನಾ ರೋಗಿಗಳನ್ನು ಪರೀಕ್ಷಿಸುವ ವಿಚಾರದಲ್ಲೂ ಭಾರತ ಇಟ್ಟ ಹೆಜ್ಜೆ ಇತರರಿಗೆ ಮಾದರಿಯೇ ಆಗಿತ್ತು. ಹುಚ್ಚಾಪಟ್ಟೆ ಕಂಡ-ಕಂಡವರೆಲ್ಲರ ಸ್ಯಾಂಪಲ್ ಪಡೆಯದೇ ಒಬ್ಬ ರೋಗಿಯ ಸಂಪರ್ಕಕ್ಕೆ ಬಂದವರ ಜಾಡನ್ನು ಹಿಡಿದು ಅವರವರನ್ನೇ ಪರೀಕ್ಷಿಸುತ್ತಾ ನಡೆದಿದ್ದು ತುಂಬಾ ಸಮರ್ಥಶಾಲಿ ಉಪಾಯವಾಗಿತ್ತು. ಜಗತ್ತೆಲ್ಲಾ ಆನಂತರ ಅದನ್ನು ಸೂಕ್ಷ್ಮವಾಗಿ ಅನುಸರಿಸುವ ಪ್ರಯತ್ನ ಮಾಡುತ್ತಿದೆ. ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವೈನ್ ಹೊಸತೇನೂ ಅಲ್ಲ. ಭಾರತ ಜಗತ್ತಿಗೆ ರಫ್ತು ಮಾಡುತ್ತಿದ್ದುದೇ. ಈ ಹೊತ್ತಲ್ಲಿ ಎಲ್ಲಾ ರಾಷ್ಟ್ರಗಳಿಗೂ ತಮ್ಮಲ್ಲಿದ್ದ ದಾಸ್ತಾನನ್ನು ಅಗತ್ಯ ಪ್ರಮಾಣದಲ್ಲಿ ಹಂಚುವ ಮೂಲಕ ಭಾರತ ತೋರಿದ ಔದಾರ್ಯ ಮರೆಯಲಾಗದ್ದಂಥದ್ದು. ಒಂದೆಡೆ ಚೀನಾ ವೈರಸ್ ಕೊಡುಗೆಯಾಗಿ ಕೊಟ್ಟರೆ, ಭಾರತ ಅದರ ನಿವಾರಣೆಗೆ ಔಷಧಿಯನ್ನು ಕೊಟ್ಟಿತು. ಜಗತ್ತು ಗೌರವಿಸದೇ ಇರುತ್ತದೇನು?! ಇಷ್ಟೇ ಅಲ್ಲ, ಭಾರತ ರೂಪಿಸಿದ ಆರೋಗ್ಯ ಸೇತು ಎಂಬ ಅಪ್ಲಿಕೇಶನ್ನು ಜಗದ ಜನರ ಮನಸೂರೆಗೊಂಡಿದೆ. ಅಂತಹುದ್ದೇ ಅಪ್ಲಿಕೇಶನ್ನಿನ ಮೂಲಕ ತಮ್ಮ ಜನರನ್ನು ತಲುಪುವ ಪ್ರಯತ್ನವನ್ನು ಅನೇಕ ರಾಷ್ಟ್ರಗಳು ಈಗ ಆರಂಭಿಸಿವೆ. ದೇಸೀ ಕಂಪೆನಿಗಳೇನೂ ಹಿಂದೆ ಬಿದ್ದಿಲ್ಲ. ಕಾರು ತಯಾರಿಕಾ ಕಂಪೆನಿ ಮಹೀಂದ್ರಾ ತನ್ನ ಕಾರಿನ ಬಿಡಿ ಭಾಗಗಳನ್ನೇ ಬಳಸಿಕೊಂಡು ವೆಂಟಿಲೇಟರ್ಗಳನ್ನು ತಯಾರಿಸುವ ಕೆಲಸ ಆರಂಭಿಸಿದೆ. ಅನೇಕ ಹೊಸ ಸ್ಟಾಟರ್್ಅಪ್ಗಳು ಕಡಿಮೆ ಬೆಲೆಯ ವೆಂಟಿಲೇಟರ್ಗಳನ್ನು ತಯಾರಿಸುವ ಮೂಲಕ ಆಪತ್ಕಾಲಕ್ಕೆ ಬೇಕಾದ ಶಕ್ತಿ ತುಂಬುತ್ತಿವೆ. ಬಹುಶಃ ಬರಲಿರುವ ದಿನಗಳಲ್ಲಿ ಜಗತ್ತಿಗೆ ವೆಂಟಿಲೇಟರ್ಗಳನ್ನು ತಲುಪಿಸುವ ಜವಾಬ್ದಾರಿ ನಮ್ಮ ಹೆಗಲಿಗೆ ಬಿದ್ದರೆ ಅದನ್ನೂ ನಿಭಾಯಿಸಬಲ್ಲ ಸಾಮಥ್ರ್ಯ ನಮಗಿದೆ ಎಂದು ಸಾಬೀತುಪಡಿಸಿಕೊಂಡಂತಾಗಿದೆ.

8

ಅತ್ತ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸನ್ಯಾಸಿಯೊಬ್ಬ ಎಷ್ಟು ಕರ್ಮಯೋಗಿಯಾಗಿರಬಲ್ಲ ಎಂದು ಸಾಬೀತುಪಡಿಸುತ್ತಿದ್ದಾರೆ. ಭಾರತದ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿಯೂ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ, ಕೇರಳಗಳಿಗಿಂತಲೂ ಸಾಕಷ್ಟು ಕಡಿಮೆ ರೋಗಿಗಳನ್ನು ಹೊಂದಿರುವ ರಾಜ್ಯವಾಗಿದೆ. ಅವರಿಗೆ ಕೊಟ್ಟ ಕಾಟ ಒಂದೇ, ಎರಡೇ. ದೆಹಲಿಯಲ್ಲಿ ಉಳಿದುಕೊಂಡಿದ್ದ ಉತ್ತರಪ್ರದೇಶದ ಕಾಮರ್ಿಕರನ್ನು ಊಟ ಕೊಡದೇ ಅರವಿಂದ್ ಕೇಜ್ರಿವಾಲ್ ಓಡಿಸುವಾಗ ಕೊರೋನಾ ವ್ಯಾಪಕವಾಗಿ ಹಬ್ಬಬಲ್ಲ ಎಲ್ಲ ಲಕ್ಷಣ ತೋರಿತ್ತು. ಆದರೆ ಯೋಗಿ ಬಿಡಬೇಕಲ್ಲಾ. ಹಳ್ಳಿ-ಹಳ್ಳಿಗಳನ್ನೇ ಲಾಕ್ಡೌನ್ ಮಾಡಿಸಿ ಕೊರೋನಾ ಹಬ್ಬದಂತೆ ಸಾಕಷ್ಟು ಪ್ರಯತ್ನ ಮಾಡಿದರು. ಹೀಗಾಗಿಯೇ ಇಂದು ದೇಶದಲ್ಲಿ ಕೊರೋನಾ ನಿಭಾಯಿಸುವಲ್ಲಿ ಅಪರೂಪದ ಮುಖ್ಯಮಂತ್ರಿಯಾಗಿ ಅವರು ಕಂಡು ಬರುತ್ತಿದ್ದಾರೆ. ಇವೆಲ್ಲವೂ ಜಗತ್ತಿಗೆ ಪಾಠವೇ. ಜನಸಂಖ್ಯಾ ಬಾಹುಳ್ಯವಿದ್ದಾಗ್ಯೂ ಭಾರತ ಎಂಟ್ಹತ್ತು ಸಾವಿರಕ್ಕಿಂತ ಹೆಚ್ಚು ರೋಗಿಗಳನ್ನು ಹೊಂದಿಲ್ಲವೆಂಬುದು ಹೆಮ್ಮೆ ಪಡಬೇಕಾದ ಸಂಗತಿಯೇ ಸರಿ. ದ್ವಿತೀಯ ಮಹಾಯುದ್ಧದ ನಂತರ ಭಾರತಕ್ಕೆ ಸ್ವಾತಂತ್ರ್ಯ ಲಾಭವಾಗಿತ್ತು. ಕೊರೋನಾ ಯುದ್ಧದ ನಂತರ ಭಾರತ ಹೊಸತನ್ನೆನಾದರೂ ಪಡೆದುಕೊಳ್ಳಲಿದೆಯೇ? ಕಾಲವೇ ಉತ್ತರಿಸಬೇಕು!!

Comments are closed.