ವಿಭಾಗಗಳು

ಸುದ್ದಿಪತ್ರ


 

‘ಗೋವು ಉಳಿಸಿ’ ಹಿಂದೂಗಳಿಗೆ ಪಾಠ?!

ಗೋವುಗಳನ್ನು ಸಂತುಷ್ಟವಾಗಿಡುವುದನ್ನು ಹಿಂದೂಗಳಿಗೆ ಯಾರೂ ಹೇಳಿಕೊಡಬೇಕಿಲ್ಲ. ಕೃಷ್ಣನ ಹೆಸರೇ ಗೋಪಾಲ. ಇಂದಿಗೂ ಭಾರತದ ಕೋಟ್ಯಂತರ ಜನ ಗೋವಿನ ಆಧಾರದ ಮೇಲೆಯೇ ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಗೋಶಾಲೆಗಳು ಗೋವುಗಳ ರಕ್ಷಣೆಗೆ ಕೆಲಸ ನಿರ್ವಹಿಸುತ್ತಿವೆ. ಜೀವವನ್ನೇ ಪಣಕ್ಕಿಟ್ಟು ನೂರಾರು ತರುಣರು ಗೋರಕ್ಷಣೆಗೆ ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಹೀಗಿರುವಾಗ ಹಿಂದೂಗಳಿಗೇ ಪಾಠ ಮಾಡಲು ಬಂದ ಪೆಟಾದ ಕ್ರಮ ಎಷ್ಟು ಸರಿ ಎಂಬ ಪ್ರಶ್ನೆಗೆ ಸ್ವತಃ ಅವರ ಬಳಿಯೂ ಉತ್ತರವಿರಲಿಲ್ಲ.

‘ಸಂಸ್ಕೃತಿಯೊಂದನ್ನು ನಾಶ ಮಾಡಬೇಕೆಂದರೆ ಅದರ ಬುಡಕ್ಕೆ ಕೈ ಹಾಕಬೇಕು’ ಎಂದು ಬಲ್ಲವರು ಹೇಳುತ್ತಾರೆ. ಬ್ರಿಟೀಷರು ತಮ್ಮ ಆಳ್ವಿಕೆಗೆ ಭೂಮಿಕೆಯನ್ನು ರೂಪಿಸಿಕೊಳ್ಳಲು ಈ ಪ್ರಯತ್ನವನ್ನು ಸಾಕಷ್ಟು ಮಾಡಿದ್ದರು. ಅದು ಅಮೇರಿಕಾ ಇರಲಿ, ಆಸ್ಟ್ರೇಲಿಯಾವೇ ಇರಲಿ ಅಲ್ಲೆಲ್ಲಾ ಅವರು ತಳವೂರಿದ್ದು ಇದೇ ಆಧಾರದ ಮೇಲೆ. ಭಾರತದಲ್ಲಿ ಮತಾಂತರ ಮಾಡುವ ಪ್ರಕ್ರಿಯೆಯನ್ನು ವ್ಯಾಪಕವಾಗಿ ಆರಂಭಿಸಿದ್ದೂ ಈ ಕಾರಣಕ್ಕಾಗಿಯೇ. ಆದರೆ ಸನಾತನ ಧರ್ಮದ ಬೇರುಗಳು ಎಷ್ಟು ಆಳಕ್ಕೆ ಮತ್ತು ವಿಸ್ತಾರವಾಗಿ ಹರಡಿಕೊಂಡಿದ್ದವೆಂದರೆ ಇವರು ಕೊನೆಗೂ ತಾಯಿ ಬೇರಿನವರೆಗೂ ಹುಡುಕಿಕೊಂಡು ಬರಲು ಸಾಧ್ಯವೇ ಆಗಲಿಲ್ಲ. ತಮ್ಮ ಕೈಗೆ ಸಿಕ್ಕಿದ್ದನ್ನೇ ಬೇರೆಂದು ಭಾವಿಸಿ ಅದನ್ನು ನಾಶ ಮಾಡಿ ಬೀಗುವ ಹೊತ್ತಿಗೆ ಮತ್ತಷ್ಟು ಬೇರುಗಳು ಕಂಡು ಹೈರಾಣಾಗಿ ಹೋಗುತ್ತಿದ್ದರು. ಸ್ವಲ್ಪಮಟ್ಟಿಗೆ ಈಶಾನ್ಯ ರಾಜ್ಯಗಳಲ್ಲಿ ಯಶಸ್ಸು ಕಂಡಂತಾದರೂ ಅರುಣಾಚಲ ಪ್ರದೇಶ ಮತ್ತೆ ತನ್ನ ಸನಾತನ ಚಿಂತನೆಗಳಿಗೆ ಮರಳುತ್ತಿರುವ ಲಕ್ಷಣಗಳು ಗೋಚರಿಸುತ್ತಿದೆ. ಇತ್ತೀಚೆಗೆ ಪಾದ್ರಿಯೊಬ್ಬ ಸ್ಥಳೀಯರ ದೇವತೆ ಡೋನ್ಯೊ ಪೋಲೊ ಮಂದಿರವನ್ನು ನಾಶ ಮಾಡಿದ್ದಾನೆಂಬ ಕಾರಣಕ್ಕೆ ಅಲ್ಲಿ ದೊಡ್ಡ ಪ್ರತಿಭಟನೆ ನಡೆದಿದ್ದನ್ನು ಸ್ಮರಿಸಿಕೊಳ್ಳಬಹುದು. ಅನೇಕ ದಶಕಗಳಿಂದ ನಡೆಸಿಕೊಂಡು ಬಂದಿದ್ದ ಪ್ರಯತ್ನಗಳೆಲ್ಲವೂ ನೀರಿನಲ್ಲಿನ ಹೋಮದಂತಾಗುತ್ತಿದೆಯಲ್ಲಾ ಎಂಬ ನೋವು ಪೋಪ್ಗೆ ಕಾಡಿರಲು ಸಾಕು. ಹುಟ್ಟಿದ ನಾಡಿನಲ್ಲೇ ಸತ್ವವನ್ನು ಕಳೆದುಕೊಳ್ಳುತ್ತಿರುವ ಕ್ರಿಶ್ಚಿಯಾನಿಟಿ ಪ್ರಬಲವಾದ ನೆಲೆಕಟ್ಟನ್ನು ಪಡೆದುಕೊಂಡಿದ್ದ ಏಷ್ಯಾದಲ್ಲೂ ಛೀಮಾರಿಗೊಳಗಾಗುವ ಲಕ್ಷಣಗಳು ನಿಚ್ಚಳವಾಗುತ್ತಿವೆ. ಹೀಗಾಗಿಯೇ ಕೊನೆಯದಾಗಿ ಮತ್ತೊಮ್ಮೆ ಸನಾತನ ಧರ್ಮದ ಬೇರುಗಳನ್ನು ಹುಡುಕುವ ಪ್ರಯತ್ನ ತೀವ್ರವಾಗಿದೆ. ಪಶ್ಚಿಮದಲ್ಲಿ ಕಳೆದು ಹೋಗುತ್ತಿರುವ ವೈಭವವನ್ನು ಪೂರ್ವದಲ್ಲಿ ಹುಡುಕಿಕೊಳ್ಳುವ ಅಂತಿಮ ಯುದ್ಧ ಇದು. ಇದಕ್ಕಾಗಿಯೇ ಅನೇಕ ಸಂಘ-ಸಂಸ್ಥೆಗಳನ್ನು ಬಳಸಿಕೊಂಡು ಸಾಕಷ್ಟು ಹಣವನ್ನು ಅದಕ್ಕೆ ತಲುಪಿಸಿ ಹಿಂದೂಧರ್ಮದ ವಿರುದ್ಧದ ಚಟುವಟಿಕೆಗಳನ್ನು ಸ್ಥಳೀಯರೇ ನಡೆಸುವಂತೆ ಮಾಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ತಮಿಳುನಾಡಿನ ತೂತುಕುಡಿಯಲ್ಲಿ ಸ್ಟಲರ್ೈಟ್ ಕಂಪೆನಿಯ ವಿರುದ್ಧ ನಡೆದ ಪ್ರತಿಭಟನೆ ಇದರದ್ದೇ ಒಂದು ಅಂಗವಾಗಿತ್ತು ಅಷ್ಟೇ. ಸಿಎಎ ಪ್ರತಿಭಟನೆಗಳ ಹೊತ್ತಿನಲ್ಲಿ ಮಿಷನರಿಗಳು ಯಾವ ಪಕ್ಷಕ್ಕೂ ಬೆಂಬಲವಿಲ್ಲವೆಂಬಂತೆ ತೋರಿಕೊಂಡರಾದರೂ ಪ್ರಬಲವಾಗುತ್ತಿರುವ ಭಾರತೀಯ ರಾಷ್ಟ್ರೀಯತೆಯನ್ನು ಧ್ವಂಸಗೊಳಿಸಲು ಮುಸಲ್ಮಾನರ ಪಕ್ಷ ವಹಿಸುವುದೇ ಸರಿಯಾದ ಮಾರ್ಗವೆಂದು ಅವರು ನಿಶ್ಚಯಿಸಿದ್ದರು. ಈಗ ಪೆಟಾ ಇಂಡಿಯಾ ಹಿಂದೂಧರ್ಮವಿರೋಧಿ ಚಟುವಟಿಕೆಗಳಿಂದ ಮುಂಚೂಣಿಯಲ್ಲಿ ಕದನ ನಡೆಸುತ್ತಿದೆ. ಭಾರತದಲ್ಲಿ ಸಾಮಾನ್ಯ ಶಕ 2000ದಲ್ಲಿ ಶುರುವಾದ ಈ ಪೆಟಾ ಇಂಡಿಯಾ ಆರಂಭದಿಂದಲೂ ಪ್ರಾಣಿ ರಕ್ಷಣೆಯ ಹೆಸರಿನಲ್ಲಿ ಹಿಂದೂಧರ್ಮದ ವಿರುದ್ಧ ಆಘಾತ ಮಾಡುತ್ತಲೇ ಬಂದಿತ್ತು. ಪ್ರತಿ ಹಿಂದೂ ಹಬ್ಬಕ್ಕೂ ಪ್ರಾಣಿಗಳನ್ನುಳಿಸುವ ಸಂದೇಶಗಳನ್ನು ಕೊಡುವ ಮೂಲಕ ಅಪಹಾಸ್ಯ ಮಾಡುವ ಯತ್ನ ಮಾಡುತ್ತಲಿತ್ತು. ಆದರೆ ವ್ಯಾಪಕವಾಗಿ ಅದರ ಈ ಚಟುವಟಿಕೆ ಸಮಾಜದ ಕಣ್ಣೆದುರಿಗೆ ರಾಚಿದ್ದು ಜಲ್ಲಿಕಟ್ಟು ಪ್ರತಿಭಟನೆಯ ವೇಳೆಗೆ. ಅನೂಚಾನವಾಗಿ ತಮಿಳುನಾಡಿನಲ್ಲಿ ಆಚರಿಸಿಕೊಂಡು ಬಂದಿರುವ ಜಲ್ಲಿಕಟ್ಟು ಅಲ್ಲಿನ ವಾಷರ್ಿಕ ಚಟುವಟಿಕೆ ಇದ್ದಂತೆ. ಹೋರಿಯೊಂದನ್ನು ಚೆನ್ನಾಗಿ ತಿಂದು ಬೆಳೆಯುವಂತೆ ಮಾಡಿ ಅದರ ಶಕ್ತಿಯನ್ನು ಕ್ರೀಡೆಯ ರೂಪದಲ್ಲಿ ಪ್ರದಶರ್ಿಸುವ ಚಟುವಟಿಕೆಯೇ ಜಲ್ಲಿಕಟ್ಟು. ಈ ಓಟದಲ್ಲಿ ಭಾಗವಹಿಸುವ ಹೋರಿ ಬಲಾಢ್ಯವಾಗಿರಬೇಕಲ್ಲದೇ ಚುರುಕುಮತಿಯುಳ್ಳದ್ದೂ ಆಗಿರಬೇಕು. ಇದು ಹೋರಿಗಳ ತಳಿಯನ್ನು ರಕ್ಷಿಸಲು ಬಹುಶಃ ಪ್ರಾಚೀನರು ಮಾಡಿಕೊಂಡ ಉಪಾಯವಿರಬೇಕು. ಈ ಕ್ರೀಡೆಯಲ್ಲಿ ಗೆಲ್ಲಬೇಕೆಂಬ ಕಾರಣಕ್ಕೆ ರೈತನೊಬ್ಬ ಹೋರಿಯನ್ನು ಪೊಗದಸ್ತಾಗಿ ಬೆಳೆಸುತ್ತಾನೆ. ಅದರೊಂದಿಗೆ ಆತನ ಬಾಂಧವ್ಯ ಘನಿಷ್ಠವಾಗಿಬಿಡುತ್ತದೆ. ಮತ್ತು ಇಂತಹ ಪ್ರಬಲ ತಳಿಯ ಹೋರಿಗಳು ಅಷ್ಟೇ ಪ್ರಬಲವಾಗಿರುವಂತಹ ಭವಿಷ್ಯದ ಸಂತಾನಕ್ಕೂ ಕಾರಣವಾಗುತ್ತವೆ. ಪೆಟಾ ಇಂಡಿಯಾ ಇದ್ದಕ್ಕಿದ್ದಂತೆ ಈ ಕ್ರೀಡೆಯ ವಿರೋಧದ ನೆಪದಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಿತು. ಹೋರಿಗಳನ್ನು ಬೇಕೆಂತಲೇ ಗಾಬರಿಗೊಳಿಸುವಂತಹ ಪರಿಸ್ಥಿತಿಯಲ್ಲಿ ಇಡಲಾಗುತ್ತದೆ, ಈ ಹೋರಿಗಳಿಗೆ ಹೆಂಡ ಕುಡಿಸಿ ಅದರ ಬಾಲವನ್ನು ಸುರುಳಿ ಸುತ್ತಿ ಕಚ್ಚಲಾಗುತ್ತದಲ್ಲದೇ ಅವುಗಳಿಗೆ ಕೆಟ್ಟದಾಗಿ ಬಡಿಯಲಾಗುತ್ತದೆ ಮತ್ತು ಮೂಗುದಾರವನ್ನು ಬಲವಾಗಿ ಎಳೆದು ಹಿಂಸೆಕೊಟ್ಟು ಅದನ್ನು ಓಡಿಸಲಾಗುತ್ತದೆ; ಹೋರಿಗಳು ಜಲ್ಲಿಕಟ್ಟಿನಲ್ಲಿ ಓಡುವುದಕ್ಕೆ ಕಾರಣ ಅದನ್ನು ಓಡಿಸುವವ ಮೊಳೆ ಚುಚ್ಚಿದ ಕೋಲಿನಿಂದ ಅದಕ್ಕೆ ಹೊಡೆಯುವುದರಿಂದ ಎಂಬೆಲ್ಲಾ ಸುಳ್ಳುಗಳನ್ನು ಜಾಗತಿಕ ಮಟ್ಟದಲ್ಲಿ ಹರಡಿಸಿತು. ಆದರೆ ಈ ಕ್ರೀಡೆಗಳಲ್ಲಿ ಬರಿಗೈಯಿಂದಲೋ ಅಥವಾ ಸಾಮಾನ್ಯವಾದ ಬಾರುಕೋಲನ್ನು ಮಾತ್ರ ಬಳಸಿ ಹೋರಿಯನ್ನು ಓಡಿಸಲಾಗುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಹೋರಿಗಳನ್ನು ಈ ಸ್ಪಧರ್ೆಯಲ್ಲಿ ಓಡಲೆಂದೇ ಸಿದ್ಧಗೊಳಿಸಿರುವುದರಿಂದ ಅದಕ್ಕೆ ಸಾಕಷ್ಟು ಪೂರ್ವತಯಾರಿಯನ್ನು ಕೊಡಲಾಗುತ್ತದಲ್ಲದೇ ಆವೇಶವುಕ್ಕಿ ಓಡಲು ಬೇಕಾದಂತಹ ಪದಾರ್ಥಗಳನ್ನೇ ತಿನ್ನಿಸಿ ತಯಾರು ಮಾಡಲಾಗುತ್ತದೆ. ಅದು ಓಡಲಿಲ್ಲವೆಂದರೆ ನಿಂತಿರುವ ಜನರ ಮೇಲೆ ನುಗ್ಗಿ ತನ್ನ ಶಕ್ತಿಯನ್ನು ತೀರಿಸಿಕೊಳ್ಳುತ್ತದೆ. ಹೀಗಾಗಿ ಆ ಟ್ರಾಕಿನಲ್ಲಿ ಅದು ಓಡುವುದು ಅನಿವಾರ್ಯ. ಇವೆಲ್ಲವೂ ಸಾಮಾನ್ಯ ವ್ಯಕ್ತಿಗೂ ಗೊತ್ತಿರುವಂಥದ್ದೇ. ಆದರೆ ಪೆಟಾ ಇಂಡಿಯಾ ಅದನ್ನು ಮನಸ್ಸಿಗೆ ಬಂದಂತೆ ವರದಿ ಮಾಡಿತು. ಕೊನೆಗೆ ಆಟ ನೋಡಲು ಬಂದ ಜನರು ಉರುಳಿಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ ಎಂಬ ಮಾನವೀಯತೆಯ ದೃಷ್ಟಿಯನ್ನೂ ಸೇರಿಸಿಬಿಟ್ಟಿತು. ಜಲ್ಲಿಕಟ್ಟುವಿನ ಈ ವಿರೋಧದ ಪರಿಧಿಯೊಳಗೆ ಕನರ್ಾಟಕದ ಕಂಬಳವೂ ಸೇರಿಕೊಂಡುಬಿಟ್ಟಿತ್ತು. ಕಂಬಳ ಉಳಿಸಿ ಎಂಬ ಹೋರಾಟ ಅನಿವಾರ್ಯವಾಗಿತ್ತು ಏಕೆಂದರೆ ಆ ನೆಪದಲ್ಲಿ ಹೋರಿಗಳನ್ನು ನಾಶಮಾಡಿಬಿಡುವ ಈ ವಿದೇಶಿ ಷಡ್ಯಂತ್ರಕ್ಕೆ ಮೂಗುದಾರ ಹಾಕಬೇಕಿತ್ತು!

2

ಪೆಟಾ ಇಂಡಿಯಾ ಇಲ್ಲಿಗೇ ನಿಲ್ಲಲಿಲ್ಲ. ಪ್ರಿಯಾಂಕ ಚೊಪ್ರಾ ಮದುವೆಯಾದಾಗ ಗಂಡ-ಹೆಂಡತಿ ಇಬ್ಬರೂ ಕುದುರೆಯ ಮೇಲೆ ಕುಳಿತು ಬಂದಿದ್ದರು ಎಂಬ ಕಾರಣಕ್ಕೆ ಟ್ವೀಟ್ ಮಾಡಿ ವಿವಾದವೊಂದನ್ನು ಮೈಮೇಲೆಳೆದುಕೊಂಡಿತ್ತು. ಇದಕ್ಕೂ ಹಿಂದುತ್ವದ ವಿಚಾರಕ್ಕೂ ಸಾಮ್ಯವಿಲ್ಲವಾದರೂ ಉತ್ತರ ಭಾರತದ ಬಹುತೇಕ ಮದುವೆಗಳು ಕುದುರೆಗಳನ್ನು ಬಳಸುತ್ತವೆ ಎಂಬ ಸಂಗತಿ ಬಲುಮುಖ್ಯವಾಗುತ್ತದೆ. ಇದೇ ಪೆಟಾ ಕೃಷ್ಣ ಜನ್ಮಾಷ್ಟಮಿ ಬಂದೊಡನೆ ‘ಈ ಕೃಷ್ಣಾಷ್ಟಮಿಗೆ ವೀಗನ್ ತುಪ್ಪ ಬಳಸೋಣ, ಗವ್ಯ ಉತ್ಪನ್ನಗಳಿಂದ ದೂರವಿದ್ದು ಹಸುಗಳನ್ನು ಸಂತೋಷವಾಗಿಡೋಣ’ ಎಂದು ಟ್ವೀಟ್ ಮಾಡಿತ್ತು. ವೀಗನ್ ಎನ್ನುವುದು ಪಶ್ಚಿಮದಲ್ಲಿ ವ್ಯಾಪಕವಾಗಿ ಚಾಲ್ತಿಗೆ ಬಂದಿರುವ ಜೀವನ ಪದ್ಧತಿ. ಮಾಂಸಾಹಾರ ತ್ಯಜಿಸುವುದಷ್ಟೇ ಅಲ್ಲದೇ ಪ್ರಾಣಿಗಳಿಂದ ಉತ್ಪನ್ನಗೊಂಡಿರುವ ವಸ್ತುಗಳನ್ನೂ ಬಿಡಬೇಕೆಂಬುದು ಇದರಲ್ಲಿ ಸೇರಿದೆ. ಹೀಗಾಗಿ ಕೃಷ್ಣ ಜನ್ಮಾಷ್ಟಮಿಗೆ ತುಪ್ಪ ಬಳಸಬಾರದೆಂಬ ನೇರ ಆಕ್ರಮಣ ಪೆಟಾದ್ದು. ಗೋವುಗಳನ್ನು ಸಂತುಷ್ಟವಾಗಿಡುವುದನ್ನು ಹಿಂದೂಗಳಿಗೆ ಯಾರೂ ಹೇಳಿಕೊಡಬೇಕಿಲ್ಲ. ಕೃಷ್ಣನ ಹೆಸರೇ ಗೋಪಾಲ. ಇಂದಿಗೂ ಭಾರತದ ಕೋಟ್ಯಂತರ ಜನ ಗೋವಿನ ಆಧಾರದ ಮೇಲೆಯೇ ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಗೋಶಾಲೆಗಳು ಗೋವುಗಳ ರಕ್ಷಣೆಗೆ ಕೆಲಸ ನಿರ್ವಹಿಸುತ್ತಿವೆ. ಜೀವವನ್ನೇ ಪಣಕ್ಕಿಟ್ಟು ನೂರಾರು ತರುಣರು ಗೋರಕ್ಷಣೆಗೆ ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಹೀಗಿರುವಾಗ ಹಿಂದೂಗಳಿಗೇ ಪಾಠ ಮಾಡಲು ಬಂದ ಪೆಟಾದ ಕ್ರಮ ಎಷ್ಟು ಸರಿ ಎಂಬ ಪ್ರಶ್ನೆಗೆ ಸ್ವತಃ ಅವರ ಬಳಿಯೂ ಉತ್ತರವಿರಲಿಲ್ಲ. ಹಾಲು, ಮೊಸರು, ತುಪ್ಪ, ಸಗಣಿ ಮತ್ತು ಗಂಜಲ ಇವೆಲ್ಲವೂ ಹಿಂದೂವೊಬ್ಬನ ಪಾಲಿಗೆ ಅತ್ಯಂತ ಪವಿತ್ರವಾದವು. ಅಷ್ಟೇ ಅಲ್ಲ, ಆಯುವರ್ೇದ ರೀತ್ಯಾ ಚಿಕಿತ್ಸೆಗೂ ಬಳಸಲ್ಪಡುತ್ತವೆ. ಹೀಗಿರುವಾಗ ಪೆಟಾ ಹೀಗೊಂದು ಮಾತು ಹೇಳಿದೆ ಎಂದರೆ ಅದನ್ನು ಸಾಮಾನ್ಯವಾಗಿ ಸ್ವೀಕರಿಸುವುದಾದರೂ ಹೇಗೆ? ಹಸುವಿನ ಹಾಲಿನ ಬಳಕೆಯಾಗುತ್ತಿರುವುದರಿಂದಲೇ ಜನ ಹಸುವನ್ನು ಸಾಕುತ್ತಿದ್ದಾರೆ ಮತ್ತು ಅವುಗಳ ರಕ್ಷಣೆ ಮಾಡುತ್ತಿದ್ದಾರೆ ಎಂಬ ಸಾಮಾನ್ಯ ಸಂಗತಿ ಗೊತ್ತಿಲ್ಲದೇ, ಹಾಲನ್ನೇ ಬಳಸಬೇಡಿ ಎಂದು ಪೆಟಾ ಹೇಳಿದ್ದಾದರೂ ಏಕೆ? ಆ ಮೂಲಕ ಗೋವುಗಳ ರಕ್ಷಣೆ ಕಷ್ಟವಾಗಿ ಹಿಂದೂ ಸಮಾಜದ ಮೂಲ ಚಿಂತನೆಗೆ ಧಕ್ಕೆ ಬರಲೆಂಬ ಆಶಯವಿದ್ದಿರಬಹುದೇ? ಸಂಸ್ಥೆಯೇ ಉತ್ತರಿಸಬೇಕು.

ಕರೋನಾ ವೈರಸ್ನ ಹಬ್ಬುವಿಕೆ ತೀವ್ರವಾಗುತ್ತಿರುವಾಗಲೇ ಪೆಟಾ ಇಂಡಿಯಾ ಸದ್ದಿಲ್ಲದೇ ಚೀನಾವನ್ನು ಬೆಂಬಲಿಸುವ ಕೆಲಸವನ್ನೂ ಮಾಡಿಬಿಟ್ಟಿತು. ಭಾರತದ ಮಾಂಸ ಮಾರಾಟದ ಸ್ಥಳಗಳು ಚೀನಾದ ಮಾಂಸ ಮಾರಾಟ ಮಾಡುವ ಸ್ಥಳಗಳಿಗಿಂತ ಕೆಟ್ಟದ್ದಾಗಿ ನಿರ್ವಹಿಸಲ್ಪಟ್ಟಿದ್ದು ಅವುಗಳ ಮೇಲೆ ತಕ್ಷಣವೇ ನಿಷೇಧ ಹೇರಬೇಕೆಂದು ಸಕರ್ಾರಕ್ಕೆ ಪತ್ರ ಬರೆಯಿತು. ಅಷ್ಟೇ ಅಲ್ಲ, ಕರೋನಾದಂತಹ ವೈರಸ್ಸೊಂದು ಮುಂದಿನ ದಿನಗಳಲ್ಲಿ ಭಾರತದಿಂದ ಹರಡಲಿದೆ ಎಂಬ ಭವಿಷ್ಯವಾಣಿಯನ್ನೂ ನುಡಿಯಿತು. ಭಾರತವನ್ನು ಜಾಗತಿಕವಾಗಿ ಹೀಗಳೆಯುವ ಪೆಟಾದ ಈ ಪ್ರಯತ್ನಕ್ಕೆ ಎಲ್ಲಿಂದಾದರೂ ಹಣ ಸಂದಾಯವಾಗಿದೆಯಾ? ಬಹುಶಃ ತನಿಖೆಯೇ ಉತ್ತರ ಹೇಳಬೇಕಷ್ಟೇ. ಏಕೆಂದರೆ ಆಮ್ನೆಸ್ಟಿ ಇಂಟರ್ನ್ಯಾಷನಲ್ನ ಭಾರತ ಘಟಕದ ಮೇಲೆ ಈ ಬಗೆಯ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ದೆಹಲಿಯ ದಂಗೆಗಳನ್ನು ಪ್ರಚೋದಿಸುವಲ್ಲಿ ರಾಜೀವ್ಗಾಂಧಿ ಫೌಂಡೇಶನ್ನ ಪ್ರಮುಖರು ಕೆಲವರು ಕೈಜೋಡಿಸಿದ್ದು ಕಂಡು ಬಂತು. ಎಲ್ಲವನ್ನೂ ತಾಳೆ ಹಾಕಿ ನೋಡಿದರೆ ಸಕರ್ಾರೇತರ ಸಂಸ್ಥೆಗಳ ನೆಪದಲ್ಲಿ ಒಂದಷ್ಟು ಸಂಸ್ಥೆಗಳು ವಿದೇಶಿಗರ ನೆರವು ಪಡೆದು ಭಾರತವನ್ನು ಸತ್ವಹೀನಗೊಳಿಸುತ್ತಿವೆ. ಇದಕ್ಕೆ ಸಮಾಜ ಈಗಲೇ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ!

3

ಪೆಟಾದ ಮೇಲೆ ಈ ಬಗೆಯ ಅನುಮಾನ ಖಾತ್ರಿಯಾಗಲು ಮತ್ತೂ ಒಂದು ಕಾರಣವಿದೆ. ತಮಿಳುನಾಡಿನ ಕೆಲವು ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುವ ಕ್ರಮಕ್ಕೆ ಅದು ವಿರೋಧ ವ್ಯಕ್ತಪಡಿಸಿತ್ತಲ್ಲದೇ ಇಂತಹ ಒಂದು ಆನೆಯನ್ನು ಮರಳಿ ಕಾಡಿಗೆ ಬಿಡಬೇಕೆಂದು ಕೋಟರ್ಿನ ಮೆಟ್ಟಿಲೂ ಏರಿತ್ತು. ಪುದುಚೆರಿಯ ದೇವಸ್ಥಾನವೊಂದರಲ್ಲಿ ಲಕ್ಷ್ಮಿ ಎಂಬ ಆನೆಯೊಂದಿದ್ದು ಅದರ ಕುರಿತಂತೆ ಈ ರೀತಿಯ ಪ್ರಯತ್ನಗಳು ನಡೆದಾಗ ಪ್ರತಿಭಟನೆ ಭುಗಿಲೆದ್ದಿತ್ತು. ದೇವಸ್ಥಾನ ಆನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೆಂಬ ಕಾರಣವನ್ನು ಅದು ಕೊಟ್ಟಿತ್ತು. ದೇವಸ್ಥಾನದ ಆಡಳಿತ ಮಂಡಳಿಯವರು ಹೇಳುವ ಪ್ರಕಾರ ಗುಂಪಿನಿಂದ ಹೊರಬಿದ್ದಿದ್ದ ಈ ಆನೆ ಒಂಟಿಯಾಗಿದ್ದು ಕಾಡಿನಲ್ಲಿ ಅನಾಥವಾದಂತಿತ್ತು. ಅಂಥದ್ದನ್ನು ದತ್ತು ಪಡೆದು ಬಲುಪ್ರೀತಿಯಿಂದ ಸಾಕಿದ್ದಲ್ಲದೇ ಭಕ್ತರೊಂದಿಗೆ ಅದರ ಘನಿಷ್ಠವಾದ ಸಂಬಂಧವೂ ಏರ್ಪಡುವಂತೆ ನೋಡಿಕೊಂಡಿದ್ದರು. ದೇವಸ್ಥಾನಗಳಲ್ಲಿ ಈ ರೀತಿ ವೈಭವದಿಂದ ಆನೆಗಳು ನಿಂತಿರುವುದನ್ನು ನೋಡಿ ಸಹಿಸಲಾಗದ ಪೆಟಾ ಆರೋಗ್ಯದ ಕಾರಣವೊಡ್ಡಿ ಮರಳಿ ಕಾಡಿಗೆ ಸೇರಿಸುವ ಪ್ರಯತ್ನವನ್ನು ಮಾಡಿಬಿಟ್ಟಿತು. ಆರೋಗ್ಯ ಚೆನ್ನಾಗಿದೆ ಎನ್ನುವ ವರದಿ ಬರುವವರೆಗೂ ಕಾಯದೇ ದೇವಸ್ಥಾನದಿಂದ ಕಸಿದುಕೊಂಡೂಬಿಟ್ಟಿತು! ಇಂದು ಮಕ್ಕಳ್ ಕಚ್ಚಿ ಸಂಘಟನೆಯ ಹೋರಾಟಗಾರರು ಹಠ ಹಿಡಿದು ಇತರ ಸಂಘಟನೆಗಳೊಂದಿಗೆ ಸೇರಿ ಮತ್ತೆ ಅದನ್ನು ದೇವಸ್ಥಾನಕ್ಕೆ ಕರೆತಂದರು. ಸಂಘಟನೆಯ ಪ್ರಮುಖ ಮುರಳೀಧರನ್ ಈ ರೀತಿಯ ಸಂಘಟನೆಗಳಿಗೂ ಕ್ರಿಶ್ಚಿಯನ್ ಮಿಷನರಿಗಳಿಗೂ ಇರುವ ಸಂಬಂಧವನ್ನು ವಿಸ್ತಾರವಾಗಿ ಹೇಳಿದ್ದರಲ್ಲದೇ ಹಿಂದೂಧರ್ಮವನ್ನು ಒಳಗಿಂದೊಳಗೇ ನಾಶ ಮಾಡಲು ಇವರೆಲ್ಲಾ ಮಾಡುತ್ತಿರುವ ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ವಿವರಿಸಿದ್ದರು.

4

ಇದಕ್ಕೆ ಪೂರಕವಾಗಿ ಎಂಬಂತೆ ಬಕ್ರೀದ್ನ ಕೆಲವು ದಿನಗಳ ಮುನ್ನ ‘ನನ್ನನ್ನು ಜೀವವಾಗಿ ನೋಡಿ, ಮಾಂಸವಾಗಿ ಅಲ್ಲ’ ಎಂದು ಕುರಿಯ ಚಿತ್ರ ಹಾಕಿದ ಹೋಡರ್ಿಂಗ್ ಅನ್ನು ಮೌಲ್ವಿಗಳು ಪ್ರತಿಭಟಿಸಿದರೆಂಬ ಒಂದೇ ಕಾರಣಕ್ಕೆ ಪೆಟಾ ತೆಗಿಸಿಹಾಕಿತು. ಅದರರ್ಥ ಪ್ರಾಣಿ ರಕ್ಷಣೆ ಮುಖವಾಡ ಮಾತ್ರ, ಹಿಂದುತ್ವದ ವಿರೋಧ ಅಂತರಂಗದೊಳಗೆ ಎಂಬುದು ಸಾಬೀತಾಯ್ತು. ಈ ಬಾರಿ ಹಿಂದೂಗಳು ತಿರುಗಿಬಿದ್ದಿದ್ದಾರೆ. ಪೆಟಾಕ್ಕೆ ಹಿಂದೆಂದೂ ಇಲ್ಲದಷ್ಟು ವ್ಯಾಪಕ ಪ್ರತಿಕ್ರಿಯೆ ದಕ್ಕಿದೆ. ಸ್ವತಃ ಪೆಟಾ ವಿರೋಧಿಗಳಿಗೆ ಖಡಕ್ಕು ಉತ್ತರ ಕೊಡಬೇಕೆಂದು ಪ್ರಯತ್ನಿಸಿ ಮತ್ತೂ ಬೆತ್ತಲಾಗಿದೆ. ಹಿಂದೂವಿನ ವಿರುದ್ಧ ಮತ್ತು ರಾಷ್ಟ್ರದ ವಿರುದ್ಧ ಗುಪ್ತವಾಗಿ ಕೆಲಸ ಮಾಡುತ್ತಿದ್ದ ಈ ಬಗೆಯ ಸಂಸ್ಥೆಗಳು ಮುಕ್ತ ಬೆಳಕಿಗೆ ಈಗ ಬಂದಿದ್ದಾರೆ. ಹಿಂದೂ ಜಾಗೃತವಾಗಿರುವ ಹೊತ್ತು ಇದು ಅಂತ ಎಲ್ಲರೂ ಹೇಳುತ್ತಿರುವುದು ಈ ಕಾರಣಕ್ಕೇ!!

Comments are closed.