ವಿಭಾಗಗಳು

ಸುದ್ದಿಪತ್ರ


 

ಚಿನ್ನದ ಬೇಟೆಯಾಡುತ್ತಿರುವ ಹಳ್ಳಿಯ ಹುಡುಗಿ!

ಹೀಮಾದಾಸ್ ಅಸ್ಸಾಮಿನ ನಗಾಂವ್ ಜಿಲ್ಲೆಯ ಧೀಂಗ್ ಎನ್ನುವ ಹಳ್ಳಿಯ ಹೆಣ್ಣುಮಗಳು. ಈಗವಳಿಗೆ ಇನ್ನೂ 19 ವರ್ಷವಷ್ಟೇ. ತಂದೆ ಒಬ್ಬ ಸಾಮಾನ್ಯ ಕೃಷಿಕ. ತಮ್ಮ ಭೂಮಿಯಲ್ಲಿ ಭತ್ತವನ್ನು ಬೆಳೆದು ಅಕ್ಕಿ ಮಾಡಿ ಮಾರಾಟಮಾಡಿ ಜೀವಿಸುತ್ತಿದ್ದ ಕುಟುಂಬ ಅದು. ಒಟ್ಟು ಆರು ಮಕ್ಕಳಲ್ಲಿ ಹೀಮಾ ಕೊನೆಯವಳು.

ಕೆಲವು ತಿಂಗಳ ಹಿಂದೆ ಭಾರತಕ್ಕೆ ಮೊತ್ತಮೊದಲ ಅಥ್ಲೆಟಿಕ್ ಚಿನ್ನ ತಂದುಕೊಟ್ಟ ಹೆಣ್ಣುಮಗಳೆಂಬ ಖ್ಯಾತಿಗೆ ಪಾತ್ರಳಾದ ಹುಡುಗಿಯೊಬ್ಬಳ ವಿಡಿಯೊವೊಂದು ಓಡಾಡುತ್ತಿತ್ತು. ಸಹಜ ಹೆಮ್ಮೆಯಿಂದ ಆ ವಿಡಿಯೊ ನೋಡುತ್ತಾ ಹೋದಂತೆ ಕೆಲವು ಸೆಕೆಂಡುಗಳ ಕಾಲ ಹೃದಯವೇ ನಿಂತುಹೋದಂತೆನಿಸಿತ್ತು. ಟ್ರ್ಯಾಕ್ನಲ್ಲಿ ನಾಲ್ಕನೇ ಸಾಲಿನಲ್ಲಿದ್ದ ಈ ಹುಡುಗಿ ಓಟದಲ್ಲೂ ನಾಲ್ಕನೇ ಸ್ಥಾನದಲ್ಲೇ ಇದ್ದಳು. ವೀಕ್ಷಕ ವಿವರಣೆಗಾರರು ಮುಂದೆ ಹೋಗುತ್ತಿದ್ದವರಿಬ್ಬರ ಕುರಿತಂತೆ ಜೋರು-ಜೋರಾಗಿಯೇ ಹೇಳುತ್ತಿದ್ದರು. ಕೊನೆಯ 20 ಸೆಕೆಂಡುಗಳಲ್ಲಿ ಎಲ್ಲವೂ ಬದಲಾಯಿತು. ಯಾರೂ ಊಹಿಸಿರದ ರೀತಿಯಲ್ಲಿ ಭಾರತದ ಈ ಹುಡುಗಿ ಓಡುತ್ತಾ ಬಂದು ಎಲ್ಲರನ್ನೂ ಹಿಂದೆ ಹಾಕಿ ಕೊನೆಗೂ ಗುರಿಯ ಗೆರೆಯನ್ನು ಮುಟ್ಟಿಯೇಬಿಟ್ಟಳು. ಓಹ್! ಆ ಕೊನೆಯ 20 ಸೆಕೆಂಡುಗಳು ಇಂದಿಗೂ ರೋಮಾಂಚನವುಂಟುಮಾಡುವಂಥದ್ದು. ಭಾರತದ ಪಾಲಿಗೆ ಇತಿಹಾಸ ಬರೆದ ಆ ಕ್ಷಣ ಮಾಸಿಹೋಗಲು ಅದೆಷ್ಟೋ ವರ್ಷಗಳು ಕಳೆಯಬೇಕೇನೋ! ಹೀಮಾದಾಸ್. ನನ್ನಂತಹ ಅನೇಕ ಭಾರತೀಯರ ಹೃದಯದಲ್ಲಿ ಅಚ್ಚಳಿಯದ ನೆನಪಾಗಿಬಿಟ್ಟಿದ್ದಾಳೆ.

7

ಹಾಗಂತ ಇದು ಅಚಾನಕ್ಕಾಗಿ ಒಲಿದು ಬಂದ ಗೆಲುವಲ್ಲ. ಕೆಲವೊಮ್ಮೆ ಹೇಗೆ ಗೆದ್ದೆವೆಂದು ಗೆದ್ದವನಿಗೂ ಗೊತ್ತಿರುವುದಿಲ್ಲ. ಅದು ಆಕಸ್ಮಿಕವಷ್ಟೇ ಆಗಿರುತ್ತದೆ. ಹೀಮಾಳದ್ದು ಹಾಗಲ್ಲ. ಕಳೆದ 20 ದಿನಗಳಲ್ಲಿ ಆಕೆ ಅಂತರರಾಷ್ಟ್ರೀಯ ಮಟ್ಟದ ಐದು ಚಿನ್ನಗಳನ್ನು ಗೆದ್ದು ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸಿದ ನಂತರವಂತೂ ಭಾರತೀಯನೆನಿಸಿಕೊಂಡವನಿಗೆ ಆಕೆಯ ಕುರಿತಂತೆ ಹೆಮ್ಮೆ ಪಡದೇ ಬೇರೆ ಮಾರ್ಗವೇ ಇಲ್ಲ. ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ಸೋತಿದ್ದನ್ನು ದಿನಗಟ್ಟಲೆ ಚಚರ್ೆ ಮಾಡಿದ್ದೇವೆ. ನೆನಪಿಸಿಕೊಂಡು ಈಗಲೂ ಕಣ್ಣೀರು ಹಾಕುತ್ತಿರುತ್ತೇವೆ. ಆದರೆ ಅದರ ಅರ್ಧಪಾಲು ಜನವಷ್ಟಾದರೂ ಹೀಮಾದಾಸ್ಳ ಈ ಅದ್ಭುತ ಗೆಲುವಿನ ಕುರಿತಂತೆ ಚಚರ್ೆ ಮಾಡಲೇ ಇಲ್ಲ!

ಹೀಮಾದಾಸ್ ಅಸ್ಸಾಮಿನ ನಗಾಂವ್ ಜಿಲ್ಲೆಯ ಧೀಂಗ್ ಎನ್ನುವ ಹಳ್ಳಿಯ ಹೆಣ್ಣುಮಗಳು. ಈಗವಳಿಗೆ ಇನ್ನೂ 19 ವರ್ಷವಷ್ಟೇ. ತಂದೆ ಒಬ್ಬ ಸಾಮಾನ್ಯ ಕೃಷಿಕ. ತಮ್ಮ ಭೂಮಿಯಲ್ಲಿ ಭತ್ತವನ್ನು ಬೆಳೆದು ಅಕ್ಕಿ ಮಾಡಿ ಮಾರಾಟಮಾಡಿ ಜೀವಿಸುತ್ತಿದ್ದ ಕುಟುಂಬ ಅದು. ಒಟ್ಟು ಆರು ಮಕ್ಕಳಲ್ಲಿ ಹೀಮಾ ಕೊನೆಯವಳು. ಈಶಾನ್ಯರಾಜ್ಯದ ಎಲ್ಲ ಮಕ್ಕಳಂತೆ ಈಕೆಯೂ ಫುಟ್ಬಾಲ್ನತ್ತ ಆಕಷರ್ಿತಳಾಗಿದ್ದ ಹೆಣ್ಣುಮಗಳು. ಚೆನ್ನಾಗಿಯೇ ಆಡುತ್ತಿದ್ದಳು. ಆದರೆ ಒಂದು ಹಂತದಿಂದ ಮತ್ತೆ ಮೇಲೇರಲು ವಿಶೇಷ ತರಬೇತಿಯ ಅಗತ್ಯ ಅಲ್ಲಿತ್ತು. ಆ ತರಬೇತಿಗೆ ಹಣ ಹೊಂದಿಸಲು ಹೀಮಾಳ ತಂದೆಗೆ ಸಾಧ್ಯವಾಗಲಾರದೆಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಹೀಗಾಗಿ ಆಕೆ ಶಾಲೆ ಕಳೆಯುವುದರೊಳಗೆ ಆಡುವುದನ್ನೇ ಬಿಟ್ಟುಬಿಟ್ಟಳು. ಆಗ ಸಹಾಯಕ್ಕೆ ಬಂದಿದ್ದು ಆಕೆಯ ತರಬೇತುದಾರ. ‘ಫುಟ್ಬಾಲ್ ಆಡದಿದ್ದರೆ ಪರವಾಗಿಲ್ಲ. ಮೈದಾನದಲ್ಲಿ ಚುರುಕಾಗಿ ಓಡಬಲ್ಲೆಯಾದ್ದರಿಂದ ಓಟವನ್ನೇ ನೀನು ಆಯ್ಕೆ ಮಾಡಿಕೊಳ್ಳಬಾರದೇಕೆ?’ ಎಂದು ಸಲಹೆಕೊಟ್ಟರು. ಆಕೆಗೆ ಸರಿ ಎನ್ನಿಸಿತು ಕೂಡ. ಫುಟ್ಬಾಲ್ಗಿಂತ ಓಡುವುದು ಸುಲಭ. ಬರಿ ಓಡಬೇಕಷ್ಟೇ ಅಲ್ಲವೇ. ನಾಲ್ಕಾರು ಜನರಿಗೆ ಹೊಂದಿಕೊಂಡು, ಅವರಿಗೆ ತಕ್ಕಂತೆ ತನ್ನನ್ನು ರೂಪಿಸಿಕೊಂಡು, ಆಟದಲ್ಲಿ ಗೆಲ್ಲುವ ಯೋಜನೆಗಳನ್ನು ತಯಾರಿಸಿಕೊಂಡು, ಪಡಿಪಾಟಲು ಪಡುವ ಅಗತ್ಯವೇನೂ ಅಲ್ಲಿರಲಿಲ್ಲ. ಆಕೆಗೆ ಓಡುವುದು ಗೊತ್ತಿದ್ದರೆ ಸಾಕಿತ್ತು ಅಷ್ಟೇ! ಹೀಮಾ ಓಡಲು ಶುರುಮಾಡಿದಳು. ಓಡುತ್ತ-ಓಡುತ್ತಾ ಆಕೆ ಶಾಲೆಯಲ್ಲಿರುವಾಗ ರಾಜ್ಯಮಟ್ಟದ ಸ್ಪಧರ್ೆಯಲ್ಲಿ ಕಂಚಿನ ಪದಕವನ್ನೂ ಗೆದ್ದುಬಿಟ್ಟಳು. ಅಲ್ಲಿಯವರೆಗೂ ಯಾರ ಕಣ್ಣಿಗೂ ಬೀಳದಿದ್ದ ಈ ಹೆಣ್ಣುಮಗಳು ಇದ್ದಕ್ಕಿದ್ದಂತೆ ಎಲ್ಲರ ಚಚರ್ೆಗೆ ಗ್ರಾಸವಾಗಿದ್ದಳು. ಇಷ್ಟೂ ವರ್ಷಗಳ ಕಾಲ ಟ್ರ್ಯಾಕ್ನಲ್ಲಿ ಕಾಣದ ಹುಡುಗಿ ಏಕಾಏಕಿ ಕಂಚಿನ ಪದಕ ಗೆದ್ದುಬಿಟ್ಟಳಲ್ಲಾ ಎಂಬುದೇ ಎಲ್ಲರಿಗೂ ಅಚ್ಚರಿ! ಅಲ್ಲಿಂದ ಮುಂದೆ ಹೋಗುವ ಕನಸು ಆಗಂತೂ ಹೀಮಾಳಿಗಿರಲಿಲ್ಲ. ಬಹುಶಃ ಒಂದು ವರ್ಷ ಕಳೆದೇ ಹೋಗಿರಬೇಕು. ಆಗ ಅಸ್ಸಾಮಿನ ಕ್ರೀಡಾ ಕಲ್ಯಾಣ ವಿಭಾಗದ ಅಥ್ಲೆಟಿಕ್ಸ್ನ ತರಬೇತುದಾರರಾದ ನಿಪುಣ್ದಾಸ್ ಕಣ್ಣಿಗೆ ಹೀಮಾ ಬಿದ್ದಳು. ಆಕೆಯ ಓಡುವ ಶೈಲಿ, ಆಕೆಯ ಕಾಲ್ಗಳಲ್ಲಿದ್ದ ಕಸುವು, ನಿರಾಯಾಸವಾಗಿ ಆಕೆ ಕ್ರಮಿಸುತ್ತಿದ್ದ ದೂರ ಇವೆಲ್ಲವನ್ನೂ ಗಮನಿಸಿ ಆತ ಅವಾಕ್ಕಾಗಿ ಹೋದ. ಹೀಮಾಳಿಗೆ ಬೇಕಾಗಿದ್ದ ತರಬೇತಿಯನ್ನೂ, ಅಗತ್ಯವಿದ್ದ ವ್ಯವಸ್ಥೆಯನ್ನೂ, ಹಣಕಾಸು ನೆರವನ್ನೂ ಕೊಟ್ಟು ಆಕೆಯನ್ನು ಇನ್ನೂ ಹೆಚ್ಚಿನ ಸ್ಪಧರ್ೆಗಳಿಗೆ ತಯಾರಾಗುವಂತೆ ಮಾಡಿದರು. ಅಲ್ಲಿಂದಾಚೆಗೆ ಹೀಮಾ ಹಿಂದಿರುಗಿ ನೋಡಲೇ ಇಲ್ಲ. ಬಹುಶಃ ಆ ತರಬೇತುದಾರರು ಸಿಗದೇ ಹೋಗಿದ್ದರೆ ಹೀಮಾ ಮನೆಯಲ್ಲಿ ಇಂದು ಅಡುಗೆ ಮಾಡುತ್ತಲೋ ಭತ್ತವನ್ನು ಕುಟ್ಟಿ ಅಕ್ಕಿ ಮಾಡುತ್ತಲೋ ಸಮಯ ಕಳೆದಿರುತ್ತಿದ್ದಳು. ಆದರಿಂದು ಆಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕಿದ್ದ ದೋಷವನ್ನು ಪರಿಹರಿಸಿ ಓಟದಲ್ಲಿ ಚಿನ್ನ ತರುತ್ತಿದ್ದಾಳೆ. ಅಕ್ಷರಶಃ ಚಿನ್ನದ ಹಡುಗಿ ಆಕೆ!

8

ಹೀಮಾಳನ್ನು ನೋಡಿದಾಗಲೆಲ್ಲಾ ಆಕೆಯ ಓಟದಲ್ಲಿನ ನಿಖರತೆ ಕಣ್ಸೆಳೆಯುತ್ತದೆ. ಅದರಲ್ಲೂ ಅಷ್ಟು ದೂರ, ಅಷ್ಟು ವೇಗವಾಗಿ ಓಡಿ ಆಕೆಯ ಹಿಂದೆ ಬಂದವರು ಬಸವಳಿದು ಕುಸಿದು ಬಿದ್ದಿದ್ದರೆ, ಈಕೆ ಪ್ರೇಕ್ಷಕರನ್ನೇ ಹುರಿದುಂಬಿಸುತ್ತಾ ಇನ್ನೂ ಹೆಚ್ಚಿನ ಚಪ್ಪಾಳೆಗೆ ಆಹ್ವಾನಿಸುವುದನ್ನು ನೋಡಿದಾಗ ಎಂಥವನಿಗೂ ರೋಮಾಂಚನವಾಗಿ ಬಿಡುತ್ತದೆ. ಮಹಿಳಾವಾದದ ಹೆಸರಿನಲ್ಲಿ ಟೌನ್ಹಾಲಿನ ಮುಂದೆ ಎದೆಬಡಿದುಕೊಳ್ಳುವ ಜನ ಒಮ್ಮೆಯಾದರೂ ಈ ದೇಶದ ಹೆಣ್ಣುಮಗಳು ಹೀಮಾದಾಸ್ರ ಕುರಿತಂತೆ ಮಾತನಾಡಿದ್ದಾರಾ? ನಾವು ಕಟ್ಟಿದ ತೆರಿಗೆಯ ದುಡ್ಡಿನಲ್ಲಿ ಕಾಲ ಪೋಲು ಮಾಡುತ್ತಾ ತಿಂದು ಕೊಬ್ಬಿ ಬೆಳೆದಿರುವ ಜೆಎನ್ಯುನ ಶೆಹ್ಲಾ ರಶೀದ್ನಂಥವರು ದೇಶಕ್ಕೆ ಹೊರೆಯಷ್ಟೇ. ಹೀಮಾ ಈ ದೇಶದ ರತ್ನ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಅನೇಕ ಸ್ತ್ರೀ ರತ್ನಗಳು ಬೆಳಕಿಗೆ ಬರುತ್ತಿವೆ. ಅದೇ ಅಸ್ಸಾಮಿನ ಸಪ್ನಾ ಬರ್ಮನ್ ಕೂಡ ಇದೇ ಥರದ ಬದುಕಿನವಳು. ಇವರೆಲ್ಲರನ್ನೂ ಕಂಡಾಗ ಅವರ ರಾಷ್ಟ್ರನಿಷ್ಠೆ, ಮತ್ತು ರಾಷ್ಟ್ರಕ್ಕಾಗಿ ಬದುಕುವ ಛಲ ಖಂಡಿತವಾಗಿಯೂ ಸ್ಫೂತರ್ಿ ಎನಿಸುತ್ತದೆ. ಇಂತಹ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು-ಹೆಚ್ಚು ವಧರ್ಿಸಲಿ!

Comments are closed.