ವಿಭಾಗಗಳು

ಸುದ್ದಿಪತ್ರ


 

ಚೀನಾದೊಂದಿಗೆ ಸೋಲಿನ ಕಳಂಕ ತೊಡೆಯಲು ಮೋದಿಯೇ ಬರಬೇಕಾಯ್ತು!

ನಿಸ್ಸಂಶಯವಾಗಿ ಈಗ ಕಾಂಗ್ರೆಸ್ಸು ಕೈ-ಕೈ ಹಿಸುಕಿಕೊಳ್ಳುತ್ತಿದೆ. ಗಾಲ್ವಾನ್ ಕಣಿವೆಯಲ್ಲಿ ಚೀನಿಯರು ಬಂದಾಗ ಅದನ್ನು ದೊಡ್ಡ ಸುದ್ದಿ ಮಾಡಿ ಕರೋನಾ ಹೊತ್ತಲ್ಲಿ ಮೋದಿಯವರನ್ನು ಹಣಿಯಬೇಕೆಂಬ ಮುಂದಾಲೋಚನೆ ಕಾಂಗ್ರೆಸ್ಸಿಗಿತ್ತು. ಹಾಗೆಂದೇ ಅವರು ಐವತ್ತಾರಿಂಚಿನ ಎದೆಯ ಮೋದಿ ‘ಈಗ ಯುದ್ಧ ಮಾಡಲಿ ನೋಡೋಣ’ ಎಂದು ಸವಾಲೆಸೆದುಬಿಟ್ಟಿದ್ದರು.

ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರು ಡೇರೆ ಹೂಡಿದ್ದಾರೆ ಎಂಬ ಸುದ್ದಿ ಬಂದಾಗ ಭಾರತದ ಎಡಪಂಥೀಯರು, ಕಾಂಗ್ರೆಸ್ಸಿಗರು ಮೋದಿಗೆ ಸಂಕಟ ಬಂತಲ್ಲ ಎಂದು ಕುಣಿದಾಡಿಬಿಟ್ಟರು. ಆದರೆ ಈ ಸಂಕಟ ಇಡಿಯ ಭಾರತಕ್ಕೆ ಬಂದಿರುವುದು ಎಂಬ ಸಾಮಾನ್ಯಪ್ರಜ್ಞೆಯನ್ನು ಅವರು ಕಳಕೊಂಡಿದ್ದರು. ಅವರ ಪಾಲಿಗೆ ಮೋದಿ ಮತ್ತು ದೇಶ ಈಗ ಒಂದೇ ಆಗಿಬಿಟ್ಟಿದೆ. ಮೋದಿಯನ್ನು ಟೀಕಿಸುವ ಭರದಲ್ಲಿ ಮುಲಾಜಿಲ್ಲದೇ ದೇಶವನ್ನೂ ಟೀಕಿಸಿಬಿಡುತ್ತಾರೆ. ಭಾರತಮಾತೆಗೆ ಜಯಕಾರ ಹಾಕುವುದನ್ನು ಸಂವಿಧಾನ ವಿರೋಧಿ ಎನ್ನುವುದರಿಂದ ಹಿಡಿದು ಚೀನೀ ಸೈನಿಕರನ್ನು ರಣಭೂಮಿಯಲ್ಲಿ ಕೊಲ್ಲುವುದು, ನೆಹರೂ ಅಲಿಪ್ತನೀತಿಯ ವಿರೋಧ ಎನ್ನುವವರೆಗೂ ಇವರುಗಳು ಹೇಳದ ದೇಶದ್ರೋಹದ ಮಾತುಗಳೇ ಇಲ್ಲ. ಒಂದಂತೂ ಸತ್ಯ. ಪ್ರತೀ ಬಾರಿ ಆತಂಕ ಎದುರಾದಾಗಲೂ ಅದನ್ನೇ ಅವಕಾಶದ ಮೆಟ್ಟಿಲಾಗಿ ಪರಿವತರ್ಿಸಿಕೊಂಡು ಮೋದಿ ಇನ್ನೂ ಎತ್ತರಕ್ಕೆ ಬೆಳೆದುಬಿಡುತ್ತಾರೆ. ಚೀನಾದ ಸೈನಿಕರು ಗಡಿಭಾಗದಲ್ಲಿರುವಾಗ ಮಾತುಕತೆ ನಡೆಸುತ್ತಾ ಕಾಲ ತಳ್ಳಬಹುದಾಗಿದ್ದ ಮೋದಿ ಸರಿಯಾದ ಪಾಠ ಕಲಿಸಲು ಸಿದ್ಧರಾಗಿಯೇಬಿಟ್ಟಿದ್ದರು. ಇದು ಏಕಾಕಿ ಬಂದಿರುವಂತಹ ಶಕ್ತಿಯಲ್ಲ. ಅಧಿಕಾರಕ್ಕೆ ಬಂದಾಗಿನಿಂದಲೂ ಚೀನಾದೊಂದಿಗೆ ಸಹಜವಾದ ಬಾಂಧವ್ಯವನ್ನಿಟ್ಟುಕೊಂಡೇ ಗಡಿಯಗುಂಟ ರಸ್ತೆಗಳನ್ನು ನಿಮರ್ಾಣ ಮಾಡುತ್ತಾ ಬಂದಿದ್ದರು. ಸದ್ದಿಲ್ಲದೇ ಸೈನ್ಯವನ್ನು ಆಧುನಿಕಗೊಳಿಸುತ್ತಾ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿದ್ದರು. ಮೇಲ್ನೋಟಕ್ಕೆ ಇವೆಲ್ಲವೂ ಪಾಕಿಸ್ತಾನದ ವಿರುದ್ಧ ತಯಾರಿ ಎನಿಸುತ್ತಿದ್ದರೂ ಮೋದಿ ಸೈನ್ಯವನ್ನು ಸಜ್ಜುಗೊಳಿಸುತ್ತಿದ್ದುದು ಚೀನಾದ ವಿರುದ್ಧ ಗುಟುರು ಹಾಕಲೆಂದೇ ಎಂಬುದು ಎಂಥವನಿಗೂ ಗೊತ್ತಾಗುತ್ತಿತ್ತು. ಅಮೇರಿಕಾದ ಅತ್ಯಾಧುನಿಕ ಎಫ್-16 ವಿಮಾನಗಳನ್ನು ಹೊಂದಿದ್ದೂ ನಮ್ಮ ಹಳೆಯದಾಗಿರುವ ಮಿಗ್ ವಿಮಾನಗಳನ್ನೆದುರಿಸಲಾಗದ ಪಾಕಿಸ್ತಾನವನ್ನು ಮಟ್ಟಹಾಕಲು ರಫೇಲ್ ಖಂಡಿತವಾಗಿಯೂ ಬೇಡವಾಗಿತ್ತು. ದಿನ ಬೆಳಗಾದರೆ ಗಡಿ ನುಸುಳಿ ಬರುವ ಭಯೋತ್ಪಾದಕರನ್ನು ಮುನ್ಸಿಪಾಲಿಟಿಯವರು ಹುಚ್ಚುನಾಯಿಯನ್ನು ಕೊಲ್ಲುವುದಕ್ಕಿಂತಲೂ ಕೆಟ್ಟದ್ದಾಗಿ ಕೊಲ್ಲುತ್ತಿರುವ ನಮ್ಮ ವಿಶೇಷ ಸೈನಿಕರ ಪಡೆಗೆ ಈಗಿರುವುದಕ್ಕಿಂತ ಹೆಚ್ಚಿನ ಸವಲತ್ತು ಅಗತ್ಯವೇನೂ ಇರಲಿಲ್ಲ. ಅವೆಲ್ಲವೂ ಬೇಕಾಗಿದ್ದುದು ಗುಡ್ಡದ ಮೇಲೆ ಚೀನಿಯರೊಂದಿಗೆ ಕಾದಾಡಲೆಂದೇ. ಐದು ವರ್ಷಗಳ ಕಾಲ ಇವ್ಯಾವುವನ್ನೂ ಹೊರಹಾಕದೇ ಸೇನೆಯನ್ನು ಬಲಾಢ್ಯಗೊಳಿಸುತ್ತಾ ಬಂದ ಮೋದಿ ಈಗ ಏಕಾಕಿ ಗಡಿತುದಿಯಲ್ಲಿ ಅದನ್ನು ನಿಲ್ಲಿಸಿ ಚೀನಾದ ಮಂದಿಯನ್ನು ಅಂಜುವಂತೆ ಮಾಡಿಬಿಟ್ಟರು. ಈಗ ನೋಡಿ, ಚೀನೀ ಪಡೆ ಎರಡು ಕಿ.ಮೀನಷ್ಟು ಹಿಂದೆ ಸರಿಯಲು ಸಜ್ಜಾಗಿದೆ. ಫಿಂಗರ್ ಪಾಯಿಂಟ್ಗಳನ್ನು ಬಿಟ್ಟುಬಿಡಲು ತಯಾರಾಗಿದೆ! ಆದರೆ ಇದೇ ವೇಳೆಗೆ ಸೈನ್ಯದ ಆಧುನೀಕರಣಕ್ಕಿದ್ದ ತೊಂದರೆಗಳನ್ನೆಲ್ಲಾ ನರೇಂದ್ರಮೋದಿ ನಿವಾರಿಸಿಕೊಂಡುಬಿಟ್ಟಿದ್ದಾರೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಖಾಸಗಿಯವರಿಗೆ ಮುಕ್ತ ಪರವಾನಗಿ ಕೊಟ್ಟಿದ್ದಾರೆ. ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲೂ ಪರಿಸರ ಇಲಾಖೆಯವರು ಮೂಗು ತೂರಿಸುವಂತಿಲ್ಲ ಎಂಬ ಕಾಯ್ದೆ ತಂದಿದ್ದಾರೆ. ರಕ್ಷಣಾ ವಸ್ತುಗಳ ಖರೀದಿಯಲ್ಲಾಗುತ್ತಿದ್ದ ವಿಳಂಬಗಳಿಗೆ ತೆರೆ ಎಳೆಯುವ ಪ್ರಯತ್ನವನ್ನೂ ಮಾಡಿ ಮುಗಿಸಿದ್ದಾರೆ. ಈ ಧಾವಂತ ಹೇಗಿದೆ ಎಂದರೆ ಡಿಆರ್ಡಿಒ ಐಐಟಿಗಳಲ್ಲಿ ಶಾಖೆಯನ್ನು ತೆರೆದು ಸಂಶೋಧನಾ ಕ್ಷೇತ್ರವನ್ನು ವಿಸ್ತಾರಗೊಳಿಸಿಕೊಂಡಿದೆ. ಯುದ್ಧಕಾಲದ ನೆಪ ಹೇಳುತ್ತಾ ಭಾರತ ಒಂದು ಸಮರ್ಥ ಸೈನ್ಯ ಶಕ್ತಿಯಾಗಿ ನಿಲ್ಲುವಲ್ಲಿ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮೋದಿ ಮಾಡಿಕೊಳ್ಳುತ್ತಿದ್ದಾರೆ!

2

ನಿಸ್ಸಂಶಯವಾಗಿ ಈಗ ಕಾಂಗ್ರೆಸ್ಸು ಕೈ-ಕೈ ಹಿಸುಕಿಕೊಳ್ಳುತ್ತಿದೆ. ಗಾಲ್ವಾನ್ ಕಣಿವೆಯಲ್ಲಿ ಚೀನಿಯರು ಬಂದಾಗ ಅದನ್ನು ದೊಡ್ಡ ಸುದ್ದಿ ಮಾಡಿ ಕರೋನಾ ಹೊತ್ತಲ್ಲಿ ಮೋದಿಯವರನ್ನು ಹಣಿಯಬೇಕೆಂಬ ಮುಂದಾಲೋಚನೆ ಕಾಂಗ್ರೆಸ್ಸಿಗಿತ್ತು. ಹಾಗೆಂದೇ ಅವರು ಐವತ್ತಾರಿಂಚಿನ ಎದೆಯ ಮೋದಿ ‘ಈಗ ಯುದ್ಧ ಮಾಡಲಿ ನೋಡೋಣ’ ಎಂದು ಸವಾಲೆಸೆದುಬಿಟ್ಟಿದ್ದರು. ಒಂದೆಡೆ ಹಬ್ಬುತ್ತಿರುವ ಕೊರೋನಾ ಸಂಭಾಳಿಸಲಾಗದ ಕಠಿಣ ಸ್ಥಿತಿಯಾದರೆ ಮತ್ತೊಂದೆಡೆ ಚೀನಾದೊಂದಿಗೆ ಹೋರಾಡುವ ಕ್ಷಮತೆ ಇಲ್ಲದಿರುವ ಭಾರತೀಯ ಸೈನ್ಯ, ಇವೆರಡರ ನಡುವೆ ಮೋದಿ ಚಿತ್ರಾನ್ನವಾಗಿ ಬಿಡುತ್ತಾರೆ ಎಂದು ಅದು ಖಂಡಿತವಾಗಿಯೂ ಎಣಿಸಿತ್ತು. ಅದಕ್ಕೆ ಎರಡು ಕಾರಣ. ಒಂದು ಚೀನಾ ಬಲು ಶಕ್ತಿಶಾಲಿ ಎಂದು ತಾನು ಕೊಟ್ಟ ವರದಿಗಳ ಆಧಾರದ ಮೇಲೆ ಕಾಂಗ್ರೆಸ್ ತಾನೇ ನಂಬಿಕೊಂಡುಬಿಟ್ಟಿತ್ತು. ಮತ್ತೊಂದು ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಕಮಿಟಿಯಲ್ಲಿದ್ದಾಗ್ಯೂ ಹನ್ನೊಂದೂ ಸಭೆಗಳಿಗೆ ಹೋಗದೇ ಬೇಜವಾಬ್ದಾರಿತನ ತೋರಿದ ರಾಹುಲ್ಗೆ ಸೈನ್ಯ ಎಷ್ಟು ಬೆಳೆದಿದೆ ಎಂಬ ಕಲ್ಪನೆಯೇ ಇಲ್ಲದಿದ್ದಿರಬಹುದು. ಅಷ್ಟೇ ಅಲ್ಲ, ಕೆಲವಾರು ತಿಂಗಳುಗಳ ಹಿಂದೆ ಈ ಕಮಿಟಿಯ ಸದಸ್ಯರೆಲ್ಲಾ ಲಡಾಖ್ನ ಗಡಿಭಾಗಗಳಿಗೆ ಅಧ್ಯಯನದ ಹಿನ್ನೆಲೆಯಲ್ಲಿ ಹೋಗಿದ್ದಾಗ್ಯೂ ರಾಹುಲ್ ಅವರೊಂದಿಗೆ ಸೇರಿಕೊಂಡಿರಲಿಲ್ಲ. ಹೀಗಾಗಿ ನೆಲಮಟ್ಟದ ಚಿಂತನೆಗಳಿಂದ ಪೂರಾ ದೂರವಾಗಿದ್ದು ಕಾಂಗ್ರೆಸ್ಸು 2024ರಲ್ಲಿ ಮೋದಿಯ ಸೋಲಿಗೆ ಮೊದಲ ಹೆಜ್ಜೆ ಎಂಬ ಕನಸನ್ನು ಕಾಣುತ್ತಾ ಆಕಾಶದಲ್ಲೇ ಇತ್ತು. ಮೊನ್ನೆ ಕದನಭೂಮಿಗೆ ಹೋಗಿ ಅಲ್ಲಿನ ಸೈನಿಕರನ್ನು ಪ್ರೇರೇಪಿಸುವ ಭಾಷಣವನ್ನು ಮೋದಿ ಮಾಡಿದ ಮೇಲೆ ಕಾಂಗ್ರೆಸ್ಸಿಗರು ಭೂಮಿಗಿ ಬರುವುದಿರಲಿ ಪಾತಾಳದಲ್ಲಿ ಹೂತು ಹೋಗಿದ್ದಾರೆ. ನರೇಂದ್ರಮೋದಿ ಮತ್ತೆ ಹೊಳೆಯುವ ನಕ್ಷತ್ರವಾಗಿ ಕಣ್ಣೆದುರು ನಿಂತಿದ್ದಾರೆ!

3

ಕಾಂಗ್ರೆಸ್ಸಿನ ಕಥೆ ಹೀಗಾದರೆ ಚೀನಾದ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ತನ್ನ ಗಡಿಯಾಗಿರುವ ಬಹುತೇಕ ಎಲ್ಲ ರಾಷ್ಟ್ರಗಳೊಂದಿಗೂ ತಂಟೆ-ತಕರಾರು ಹೊಂದಿರುವ ಚೀನಾ ಗಡಿಯೇ ಅಲ್ಲದ ಅಮೇರಿಕಾ, ಯುರೋಪ್ಗಳಂತಹ ರಾಷ್ಟ್ರಗಳೊಂದಿಗೂ ಕಾಲುಕೆರಕೊಂಡು ಜಗಳಕ್ಕಿಳಿದಿದೆ. ಹೀಗಿರುವಾಗ ಚೀನಾದ್ದೇ ಸೈನ್ಯದ ಮಾಜಿ ಅಧಿಕಾರಿಯಾದ ಜಿಯಾನ್ಲಿ ಯಾಂಗ್ ಗಾಲ್ವಾನ್ ಕಣಿವೆಯಲ್ಲಿ ನಡೆದ ಕದನದಲ್ಲಿ ಚೀನಾದ ನೂರಕ್ಕೂ ಹೆಚ್ಚು ಸೈನಿಕರು ಮೃತಗೊಂಡಿದ್ದಾರೆ ಎಂದು ಹೇಳಿ ಅಚ್ಚರಿ ಮೂಡಿಸಿಬಿಟ್ಟಿದ್ದಾರೆ! ನಿಧಾನವಾಗಿ ಚೀನಾದಲ್ಲಿ ಜನರ ಆಕ್ರೋಶ ಘನೀಭವಿಸುತ್ತಿದೆ. ಅವರೆಲ್ಲರೂ ಒಟ್ಟಾಗಿ ದಂಗೆಯೇಳುವ ದಿನಗಳು ದೂರವಿಲ್ಲವೆಂದು ಮುನ್ಸೂಚನೆ ನುಡಿಯಲಾಗುತ್ತಿದೆ. ಈ ನಡುವೆ ಷಿ ಇವೆಲ್ಲವನ್ನೂ ಸಂಭಾಳಿಸುವುದು ಬಿಟ್ಟು ಜಪಾನ್, ಭೂತಾನ್, ಹಾಂಗ್ಕಾಂಗ್, ತೈವಾನ್, ಮಲೇಷಿಯಾ, ಇಂಡೋನೇಷಿಯಾ ಕೊನೆಗೆ ಭಾರತ ಮತ್ತು ರಷ್ಯಾಗಳೊಂದಿಗೂ ತಗಾದೆ ತೆಗೆದು ಕುಳಿತಿದ್ದಾನೆ. ಎಲ್ಲ ಭೂಪ್ರದೇಶಗಳನ್ನೂ ನುಂಗಿ ನೀರು ಕುಡಿಯಬೇಕೆಂಬ ಆತನ ಆಕಾಂಕ್ಷೆ ಅದೆಷ್ಟಿದೆ ಎಂದರೆ ಸಾಮಾಜಿಕ ಜಾಲತಾಣಗಳು ಆತನನ್ನು ಹಿಟ್ಲರ್ಗೆ ಹೋಲಿಸಿ ಷಿಟ್ಲರ್ ಎಂಬ ಹೆಸರಿನಿಂದ ಕರೆಯುತ್ತಿವೆ. ಗಾಯದ ಮೇಲೆ ಬರೆ ಹಾಕಲೆಂದೇ ಚೀನಾಕ್ಕೆ ಹೊಸ ರೋಗವೊಂದು ಪ್ಯುಬಾನಿಕ್ ಪ್ಲೇಗ್ ಎಂಬ ಹೆಸರಿನಲ್ಲಿ ಅಮರಿಕೊಂಡಿದೆ. ಎಸರ್ೀನಿಯಾ ಪೆಸ್ಟಿಸ್ ಎಂಬ ಹೆಸರಿನ ಬ್ಯಾಕ್ಟೀರಿಯಾ ಕಾರಣಕ್ಕೆ ಹಬ್ಬುವ ಈ ರೋಗ ಬಲು ಭಯಾನಕವಾದ್ದು. ಸೂಕ್ತ ಚಿಕಿತ್ಸೆ ಲಭ್ಯವಿಲ್ಲದೇ ಹೋದರೆ ಈ ರೋಗ ಅಮರಿಕೊಂಡವರಲ್ಲಿ ಅರ್ಧಕ್ಕೂ ಹೆಚ್ಚು ಜನ ಸಾಯುವ ಸಾಧ್ಯತೆಗಳಿವೆ. ಎಂಟ್ಹತ್ತು ವರ್ಷಗಳ ಹಿಂದೆ ಈ ಕಾಯಿಲೆ ಒಮ್ಮೆ ಚೀನಾವನ್ನು ಬಾಧಿಸಿತ್ತು. ಈಗ ಮತ್ತೆ ಶುರುವಾಗಿದೆ. ಇತ್ತ ಭಾರತ ಕೊರೋನಾದೊಂದಿಗೆ ಜೂಜಾಡುತ್ತಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಸಾಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಜೊತೆಗೆ ಆಥರ್ಿಕ ವಲಯದಿಂದಲೂ ಒಳ್ಳೆಯ ಸುದ್ದಿಯೇ ಬರುತ್ತಿದೆ. ಜೂನ್ ತಿಂಗಳಲ್ಲಿ ಸುಮಾರು ಒಂದು ಮುಕ್ಕಾಲು ಲಕ್ಷ ಪ್ರಯಾಣಿಕರ ವಾಹನಗಳು ಮಾರಾಟವಾಗಿವೆ, 12 ಲಕ್ಷ ದ್ವಿಚಕ್ರವಾಹನಗಳು ಮಾರಾಟಗೊಂಡಿವೆ, ಪ್ರತಿನಿತ್ಯ 44ಸಾವಿರಕ್ಕೂ ಹೆಚ್ಚು ಗಾಡಿಗಳು ನೋಂದಾಯಿಸಲ್ಪಟ್ಟಿವೆ. ಯಾರನ್ನು ಕೇಳಿದರೂ ಎರಡು ತಿಂಗಳ ಅವಧಿಯ ಒಟ್ಟು ಮಾರುಕಟ್ಟೆ ಏಕಾಕಿ ಸಿಕ್ಕಿದೆ ಎಂದು ಖುಷಿ ಪಡುತ್ತಾರೆ. ಸಹಜವಾಗಿಯೇ ಇದು ಭಾರತೀಯರಿಗೆ ಶುಭ ಸುದ್ದಿ. ಚೀನಾವನ್ನು ಗೌರವಿಸುತ್ತಾ ಯುದ್ಧದಲ್ಲಿ ಚೀನಾ ಭಾರತಿಯರಿಗೆ ಮಣ್ಣು ಮುಕ್ಕಿಸಲಿ, ತನ್ಮೂಲಕ ಮೋದಿಗೆ ಅವಮಾನವಾಗಲಿ ಎಂದು ಕಾಯುತ್ತಿದ್ದ ಚೀನೀ ಏಜಂಟರಿಗೆ ಮಾತ್ರ ಬಲುಕೆಟ್ಟ ಸುದ್ದಿ!

4

ಈ ನಡುವೆ ಸೋನಿಯಾ ಮಗಳಾದ ಪ್ರಿಯಾಂಕ ದೆಹಲಿಯ ಆಯಕಟ್ಟಿನ ಜಾಗದಲ್ಲಿರುವ ಸಕರ್ಾರಿ ಬಂಗಲೆಯನ್ನು ತೆರವುಗೊಳಿಸಬೇಕಾಗಿ ಬಂದಿದ್ದು ಪ್ರತಿಯೊಬ್ಬ ಕಾಂಗ್ರೆಸ್ಸಿಗನಿಗೂ ಹೃದಯವೇ ಕಿತ್ತು ಬಂದಿದೆ ಎನಿಸುತ್ತಿದೆ. ಎರಡೂವರೆ ಸಾವಿರ ಚದುರ ಮೀಟರ್ಗಳಿಗಿಂತಲೂ ದೊಡ್ಡದ್ದಾಗಿರುವ ಈ ಬಂಗಲೆಗೆ ಕಟ್ಟಬೇಕಾಗಿದ್ದ ಹಣದಲ್ಲಿ ರಿಯಾಯಿತಿಯನ್ನು ಕೇಳಿ ಅತ್ಯಂತ ಕಡಿಮೆ ಬಾಡಿಗೆಯನ್ನು ಕಟ್ಟುತ್ತಿದ್ದುದು ಆಕೆ. ಬಿಲಿಯನೇರ್ಗಳಾಗಿದ್ದು ಸ್ವತಃ ಪತಿ ವಾದ್ರಾ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಮಾಡಿರುವ ಆರೋಪವನ್ನೆದುರಿಸುತ್ತಿರುವಾಗ ತೆರಿಗೆದಾರರ ಹಣದಲ್ಲಿ ದೊಡ್ದದೊಂದು ಬಂಗಲೆಯಲ್ಲಿರುವ ಆಕೆಗೆ ಮನಸ್ಸಾದರೂ ಹೇಗೆ ಬಂತು? ಆಕೆ ತನ್ನ ಸುತ್ತಲೂ ನಿಲ್ಲುವ ಎಸ್ಪಿಜಿ ಕಮ್ಯಾಂಡೊಗಳನ್ನು ತೋರಿಸಿ ಈ ರಕ್ಷಣೆಯ ಕಾರಣಕ್ಕಾಗಿಯೇ ಸಕರ್ಾರಿ ಬಂಗಲೆ ಬೇಕು ಎಂಬ ಸಮಜಾಯಿಷಿಯನ್ನು ವಾಜಪೇಯಿ ಕಾರಣಕ್ಕೆ ಕೊಟ್ಟಿದ್ದಳಂತೆ ಮೋದಿ ಯುಗದಲ್ಲಿ ಇವಕ್ಕೆಲ್ಲಾ ಅವಕಾಶವೇ ಇಲ್ಲ. ಆಕೆಯ ರಕ್ಷಣೆಗೆ ಅನವಶ್ಯಕವಾಗಿ ಎಸ್ಪಿಜಿ ನೀಡಲಾಗಿದೆ ಎಂದರಿತ ಅವರು ಅದನ್ನು ಮೊದಲು ಹಿಂತೆಗೆದುಕೊಂಡರು. ಸಹಜವಾಗಿಯೇ ಈ ಮನೆಯನ್ನೂ ಕೂಡ ಆಕೆ ಬಿಡಬೇಕಾಗಿ ಬಂತು. ಕಾಂಗ್ರೆಸ್ಸು ಇಷ್ಟು ದಿನಗಳ ಕಾಲ ಜನರಿಂದ ಮುಚ್ಚಿದ್ದೆಲ್ಲವೂ ಈಗ ಬಟಾಬಯಲಾಗುತ್ತಿದೆ. ಅವರು ಜೈಲಿಗೆ ಹೋಗಿಬಿಟ್ಟಿದ್ದಿದ್ದರೆ ಇವೆಲ್ಲವೂ ಬಯಲಿಗೆ ಬರುವ ಅವಕಾಶವೇ ಇರಲಿಲ್ಲ ಹೀಗಾಗಿಯೆ ಮೋದಿ ಅವರನ್ನು ಹೊರಗಿಟ್ಟುಕೊಂಡೇ ಒಂದಾದ ಮೇಲೊಂದು ಹಗರಣವನ್ನು ಬಯಲಿಗೆ ತರುತ್ತಿದ್ದಾರೆ.

ಒಳ್ಳೆಯದ್ದೇ ಆಯ್ತು ಬಿಡಿ. ದೇಶಕ್ಕೆ ಸತ್ಯ, ಸುಳ್ಳುಗಳ ಸ್ಪಷ್ಟ ದರ್ಶನವಾಯ್ತು!!

Comments are closed.