ವಿಭಾಗಗಳು

ಸುದ್ದಿಪತ್ರ


 

ಚುನಾವಣೆಗೆ ಮುನ್ನವೇ ಗೆದ್ದಿರುವುದು ಸಿದ್ದರಾಮಯ್ಯ!

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ನ ಯಾರಿಗೂ ಸುಲಭವಾಗಿ ಗೆಲ್ಲುವ ವಾತಾವರಣವೇ ಇಲ್ಲ. ಉತ್ತರಕನ್ನಡ, ಚಿಕ್ಕಮಗಳೂರು ಜೆಡಿಎಸ್ನ ಕೋಟೆಯಲ್ಲ. ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರ ಗೆಲುವು ಖಾತ್ರಿ. ಹಾಸನ, ಮಂಡ್ಯ ಕಾಂಗ್ರೆಸ್ಸಿಗರಂತೂ ವಿರೋಧಿಯಾಗಿದ್ದಾರೆ, ಪರಿವಾರ ರಾಜಕಾರಣಕ್ಕೆ ಬೇಸತ್ತ ಜೆಡಿಎಸ್ನವರ ಕುರಿತಂತೆಯೂ ಯಾರಿಗೂ ಭರವಸೆ ಉಳಿದಿಲ್ಲ.

ಏನೇ ಹೇಳಿ, ಚುನಾವಣೆ ನಡೆಯುವ ಮುನ್ನವೇ ಈ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಿರೋದು ಸಿದ್ದರಾಮಯ್ಯ. ಅಧಿಕಾರದ ದಾಹ, ಪರಿವಾರ ವ್ಯಾಮೋಹಕ್ಕೆ ಬಲಿಬಿದ್ದು ಚಾಣಾಕ್ಷ ರಾಜಕಾರಣಿ ದೇವೇಗೌಡರಂಥವರೂ ಸಿದ್ದರಾಮಯ್ಯನೆದುರು ಸಂಧಾನದ ಮೇಜಿನಲ್ಲಿ ತಲೆತಗ್ಗಿಸಿ ಕೂತಿರಬೇಕೆಂದರೆ ಸಾಮಾನ್ಯವಾದ ಮಾತಲ್ಲ ಇದು!

6

ಜಾತಿಯ ಲೆಕ್ಕಾಚಾರದ ಮೂಲಕವೇ ರಾಜಕಾರಣ ಮಾಡಿಕೊಂಡು ಬಂದವರಿಗೆ ಇದೇ ಸಮಸ್ಯೆ. ಅವರಿಗೆ ಅಧಿಕಾರವನ್ನು ಮತ್ತೆ ಮತ್ತೆ ಪಡೆಯುವ ಶಕ್ತಿಯನ್ನು ತುಂಬುವುದು ಅವರ ಜಾತಿಗಳೇ. ಹೀಗಾಗಿ ಗೌಡರ ವೋಟಿನ ಜೊತೆಗೆ ಮುಸಲ್ಮಾನರ ವೋಟುಗಳನ್ನೂ ಕಬಳಿಸುವ ಹವಣಿಕೆಯಲ್ಲಿರುವ ಗೌಡರು ದಿನಬೆಳಗಾದರೆ ಕಿರುಕುಳವನ್ನೇ ಕೊಡುವ ಕಾಂಗ್ರೆಸ್ಸಿನವರೊಂದಿಗೆ ಸಹಿಸಿಕೊಂಡೇ ಸಕರ್ಾರ ರಚಿಸಿದರು. ಹಾಗೆ ಕಾಂಗ್ರೆಸ್ಸಿನ ತೆಕ್ಕೆಗೆ ಗೌಡರು ಬಿದ್ದ ದಿನವೇ ಅವರ ಸೋಲು. ಸಿದ್ದರಾಮಯ್ಯನೇನೂ ಕಡಿಮೆಯಲ್ಲ. ಚುನಾವಣೆಯಲ್ಲಿ ಸಕರ್ಾರ ರಚಿಸುವಷ್ಟು ಬಹುಮತ ದೊರೆಯದೇ ಹೋದೊಡನೆ ಯಾರಿಗೂ ಕಾಯದೇ ದಳಕ್ಕೆ ಮುಖ್ಯಮಂತ್ರಿ ಪದವಿಯನ್ನು ಬೇಷರತ್ತಾಗಿ ಬಿಟ್ಟುಕೊಡುತ್ತೇವೆಂಬ ಹೇಳಿಕೆ ಕೊಟ್ಟರು. ವಾಸ್ತವವಾಗಿ ಆಗ ಅವರ ಮನಸ್ಸಿನಲ್ಲಿದ್ದಿದ್ದು ಜಿ.ಪರಮೇಶ್ವರ್ರನ್ನು ತುಳಿಯುವ ಹುನ್ನಾರ. ಷರತ್ತುಗಳಿರಲಿಲ್ಲ ಎಂಬುದು ನಿಜವಾಗಿದ್ದರೂ ಮುಂದಿನ ದಿನಗಳಲ್ಲಿ ತಾನು ಹೇಳಿದಂತೆಯೇ ಸಕರ್ಾರ ನಡೆಯುವಂತೆ ನೋಡಿಕೊಂಡಿದ್ದು ಸಿದ್ದರಾಮಯ್ಯ. ಆ ಕಿರುಕುಳವನ್ನು ತಾಳಲಾರದೇ ವಿಕ್ಸನ್ನಿಟ್ಟುಕೊಂಡಾದರೂ ಸರಿಯೇ ಕುಮಾರಸ್ವಾಮಿ ಪದೇ ಪದೇ5 ಅತ್ತು ಕನರ್ಾಟಕದ ರಾಜಕಾರಣದಲ್ಲಿ ಅಳುವಿಗಿದ್ದ ಮಹತ್ವವನ್ನೇ ಹಾಳುಮಾಡಿಬಿಟ್ಟರು. ಈಗ ಯಾರು ಅತ್ತರೂ ಅದಕ್ಕೆ ಕುಮಾರಸ್ವಾಮಿಯ ಅಳುವಿನ ಬಣ್ಣ ಬಲುಬೇಗ ಮೆತ್ತಿಕೊಂಡುಬಿಡುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಾಂಗ್ರೆಸ್ಸಿನೊಂದಿಗೆ ಅಧಿಕಾರ ಮಾಡುವ ಬದಲು ಬಿಜೆಪಿಯೊಂದಿಗೆ ಸೇರಿಕೊಂಡಿದ್ದಿದ್ದರೆ ಲೋಕಸಭಾ ಚುನಾವಣೆಯ ದೃಷ್ಟಿಯಿಂದಾದರೂ ಬಿಜೆಪಿ ಕುಮಾರಸ್ವಾಮಿಯ ನಡೆಗಳನ್ನು ಅವಡುಗಚ್ಚಿ ಸಹಿಸಿಕೊಂಡಿರುತ್ತಿತ್ತು. ಆತ ಬಿಜೆಪಿಯವರ ಮೇಲೆ ಸವಾರಿ ಮಾಡಿ ಒಳ್ಳೆಯ ಮುಖ್ಯಮಂತ್ರಿ ಎಂಬ ಹೆಸರನ್ನೂ ಗಳಿಸಿಬಿಟ್ಟಿರುತ್ತಿದ್ದ. ದೊಡ್ಡಗೌಡರ ಜಾತಿ ಲೆಕ್ಕಾಚಾರ ಇದಕ್ಕೆ ಅಡ್ಡ ಬಂದಿತ್ತು. ಬಿಜೆಪಿಯೊಂದಿಗೆ ಸೇರಿಕೊಂಡರೆ ಮುಸಲ್ಮಾನರ ವೋಟುಗಳು ಕಳೆದುಹೋಗಿಬಿಡುತ್ತವೆ ಎಂಬ ಹೆದರಿಕೆ. ಸಿದ್ದರಾಮಯ್ಯ ತನಗೆ ಶತ್ರುವಾಗಬಹುದಾಗಿದ್ದ ಕುಮಾರಸ್ವಾಮಿಯನ್ನು ಸದ್ದಿಲ್ಲದೇ ಮುಗಿಸಿಬಿಟ್ಟರು.

7

ಲೋಕಸಭೆ ಚುನಾವಣೆ ಘೋಷಣೆಯಾದಮೇಲಂತೂ ಅಧಿಕಾರ ಪೂರ ಸಿದ್ದರಾಮಯ್ಯನ ಮಡಿಲಲ್ಲೇ ಇದೆ. ಗೌಡರ ಪರಿವಾರದ ಕುಡಿಗಳು ಗೆಲ್ಲಬೇಕೆಂದರೆ ಸಿದ್ದರಾಮಯ್ಯನ ಸಹಕಾರವಿಲ್ಲದೇ ಸಾಧ್ಯವೇ ಇಲ್ಲವೆಂಬುದು ನಾಡಿನ ಪ್ರತಿಯೊಬ್ಬರಿಗೂ ಗೊತ್ತಿದೆ. ಹೀಗಾಗಿಯೇ ಟಿಕೆಟ್ ಹಂಚಿಕೆಯ ವೇಳೆಯಲ್ಲಿಯೇ ಗೌಡರನ್ನು ತುಮಕೂರಿಗಾಗಿ ಹಠ ಹಿಡಿಯುವಂತೆ ಮಾಡಿದ ಸಿದ್ದರಾಮಯ್ಯ ಮೈಸೂರನ್ನು ಉಳಿಸಿಕೊಂಡುಬಿಟ್ಟರು. ಆ ಮೂಲಕ ತನ್ನ ಕ್ಷೇತ್ರದಲ್ಲಿ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದರೊಂದಿಗೆ ತುಮಕೂರಿನಲ್ಲಿ ಪರಮೇಶ್ವರ್ರನ್ನು ನಾಶಮಾಡಿಬಿಟ್ಟರು. ಹಾಗಂತ ಎಲ್ಲವೂ ಇಲ್ಲಿಗೇ ಮುಗಿಯಲಿಲ್ಲ. ಗೌಡರು ಈಗ ಎಷ್ಟು ತೆಪ್ಪಗಿರಬೇಕೆಂದರೆ ಮಂಡ್ಯದಲ್ಲಿ ಮೊಮ್ಮಗ ನಿಖಿಲ್ ಗೆಲ್ಲಬೇಕೆಂದರೆ ಅವರು ಸಿದ್ದರಾಮಯ್ಯನ ಎದುರು ಕೈಕಟ್ಟಿ ತಲೆಬಾಗಿ ನಿಲ್ಲಲೇಬೇಕು. ಅತ್ತ ಪ್ರಜ್ವಲ್ನ ಗೆಲುವಿಗೂ ಸಿದ್ದರಾಮಯ್ಯ ಓಡಾಡಿದರೆ ಮಾತ್ರ ಸಾಧ್ಯ. ಪರಿವಾರದ ರಾಜಕಾರಣಕ್ಕೆ ಪಟ್ಟುಬಿದ್ದ ದೇವೇಗೌಡರು ಒಂದು ಕಾಲದ ತಮ್ಮ ಶತ್ರು ಸಿದ್ದರಾಮಯ್ಯನೆದುರು ಅಂಗಲಾಚಿ ನಿಲ್ಲುವಂತಾಗಿದ್ದು ರಾಜಕಾರಣದ ವಿಪಯರ್ಾಸ. ಸುದ್ದಿಗಳನ್ನು ನಂಬುವುದಾದರೆ ಅದಾಗಲೇ ರೇವಣ್ಣ ಮತ್ತು ಆತನ ಪತ್ನಿ ಪ್ರಜ್ವಲ್ನನ್ನು ಗೆಲ್ಲಿಸಿಕೊಡಲು ಸಿದ್ದರಾಮಯ್ಯನ ಸಹಕಾರ ಕೇಳಿದ್ದಾರೆಂದು ಗೊತ್ತಾದೊಡನೆ ನಿಖಿಲ್ನ ತಾಯಿಯೂ ಅಲ್ಲಿಗೆ ಹೋಗಿಬಂದಿದ್ದರಂತೆ. ಅದರರ್ಥ ಎರಡೂ ಕುಟುಂಬಕ್ಕೂ ಸಿದ್ದರಾಮಯ್ಯನ ಮುಂದೆ ತಲೆಬಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ ಅಂತ. ಇದು ಸಹಜವಾಗಿಯೇ ಸಿದ್ದರಾಮಯ್ಯನ ಗೆಲುವು.

ಹಾಗಂತ ಇಲ್ಲಿಗೇ ಎಲ್ಲವೂ ಮುಗಿಯಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ನ ಯಾರಿಗೂ ಸುಲಭವಾಗಿ ಗೆಲ್ಲುವ ವಾತಾವರಣವೇ ಇಲ್ಲ. ಉತ್ತರಕನ್ನಡ, ಚಿಕ್ಕಮಗಳೂರು ಜೆಡಿಎಸ್ನ ಕೋಟೆಯಲ್ಲ. ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರ ಗೆಲುವು ಖಾತ್ರಿ. ಹಾಸನ, ಮಂಡ್ಯ ಕಾಂಗ್ರೆಸ್ಸಿಗರಂತೂ ವಿರೋಧಿಯಾಗಿದ್ದಾರೆ, ಪರಿವಾರ ರಾಜಕಾರಣಕ್ಕೆ ಬೇಸತ್ತ ಜೆಡಿಎಸ್ನವರ ಕುರಿತಂತೆಯೂ ಯಾರಿಗೂ ಭರವಸೆ ಉಳಿದಿಲ್ಲ. ತುಮಕೂರು ಗೆಲುವು ಸುಲಭವೆನಿಸುವಂತೆ ಕಂಡರೂ ಕಾಂಗ್ರೆಸ್ಸು ಪ್ರತಿರೋಧವೆಸಗಿದರೆ ನೇರ ಹಣಾಹಣಿಯಲ್ಲಿ ಬಿಜೆಪಿಯ ಗೆಲುವು ಕಷ್ಟವೇನಲ್ಲ. ಹೇಗೆ ಅಳೆದು ನೋಡಿದರೂ ಲೋಕಸಭೆಯಲ್ಲಿ ಪ್ರಧಾನಿ ಹುದ್ದೆ ಅಲಂಕರಿಸುವುದು ದೂರ ಗೌರವ ಸಿಗಬಲ್ಲಷ್ಟು ಸ್ಥಾನವನ್ನೂ ದೊಡ್ಡಗೌಡರು ಉಳಿಸಿಕೊಳ್ಳುವುದು ಕಷ್ಟ. ಹಾಗಾದೊಡನೆ ಸ್ವತಃ ರಾಜ್ಯಸಕರ್ಾರದಲ್ಲೂ ಕೂಡ ಆಗ್ರಹ ಮಾಡಿ ಚೌಕಶಿ ಮಾಡಿಕೊಳ್ಳಬಹುದಾದ ಸಾಮಥ್ರ್ಯವನ್ನು ಕುಮಾರಸ್ವಾಮಿ ಕಳೆದುಕೊಳ್ಳುತ್ತಾರೆ. ಸಕರ್ಾರ ರಕ್ಷಣೆಯಲ್ಲಿ ಎಡವಟ್ಟಾದರೆ ಸಕರ್ಾರ ಉರುಳಿ ಹೊಸ ಸಕರ್ಾರ ರಚನೆಯಾಗಲು ಸೋತರೆ ಸಿದ್ದರಾಮಯ್ಯ ಮತ್ತೊಮ್ಮೆ ಪ್ರಭಾವಿ ನಾಯಕರಾಗಿ ಅಷ್ಟೇ ಅಲ್ಲದೇ ಕಾಂಗ್ರೆಸ್ಸಿನ ಏಕೈಕ ನಾಯಕರಾಗಿ ಹೊರಹೊಮ್ಮಿಬಿಡುತ್ತಾರೆ! ಭರವಸೆ ಕಳೆದುಕೊಂಡಿರುವ ಯಡಿಯೂರಪ್ಪ ಬಿಜೆಪಿಗೆ ಮುಳುವಾಗುವರಲ್ಲದೇ ಮುಂದಿನ ಸಾಲಿನ ನಾಯಕರ ಕೊರತೆಯಿಂದ ಗಳಿಸಿದ್ದೆಲ್ಲವನ್ನೂ ಕಳೆದುಕೊಂಡರೂ ಅಚ್ಚರಿ ಪಡಬೇಕಿಲ್ಲ.

8

ಇವೆಲ್ಲವೂ ಕಣ್ಣಮುಂದೆ ಕಾಣುತ್ತಿರುವ ಚುಕ್ಕಿಗಳನ್ನು ಜೋಡಿಸಿದಾಗ ಕಂಡು ಬರುವ ಚಿತ್ತಾರವಷ್ಟೇ. ಸ್ವಲ್ಪ ಯಡವಟ್ಟಾಗಿ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವೆ ಸಂಧಾನ ಏರ್ಪಟ್ಟು ಮಂಡ್ಯದಲ್ಲಿ ಸಿದ್ದರಾಮಯ್ಯ ಪ್ರಬಲವಾಗಿ ಪ್ರಚಾರಕ್ಕೆ ನಿಂತರೆ ದೇವೇಗೌಡರು ಮೈಸೂರಿನಲ್ಲಿ ಕಾಂಗ್ರೆಸ್ಸನ್ನು ಉಳಿಸಿಕೊಳ್ಳಲಿಕ್ಕಾಗಿ ಹೋರಾಟ ಆರಂಭಿಸಿಬಿಟ್ಟರೆ ಇದು ರಾಜ್ಯಕ್ಕೆ ದೊಡ್ಡ ಸಂದೇಶವನ್ನು ಕೊಟ್ಟುಬಿಡುತ್ತದೆ. ಇವರೀರ್ವರ ಈ ಏಕತೆ ಬಿಜೆಪಿಯ ಎಲ್ಲಾ ವ್ಯೂಹಗಳನ್ನು ಧ್ವಂಸಗೊಳಿಸಿಬಿಡಬಲ್ಲುದು. ಈಗಾಗಲೇ ಹಂಚಿರುವ ಕಾಂಗ್ರೆಸ್ಸಿನ ಟಿಕೆಟುಗಳನ್ನು ನೋಡಿದರೆ ಬಲು ಬುದ್ಧಿವಂತಿಕೆಯಿಂದ ಬಿಜೆಪಿಯ ಎಂಪಿಗಳ ವಿರುದ್ಧ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ದೃಷ್ಟಿಯಿಂದಲೇ ನೀಡಲಾಗಿರುವಂಥದ್ದು ಎಂಬುದು ಸಲೀಸಾಗಿ ಅರಿವಾಗುತ್ತದೆ. ಇತ್ತ ಬಿಜೆಪಿಯಾದರೂ ಬದಲಾವಣೆಗೆ ಅವಕಾಶವಿರುವೆಡೆಯಲ್ಲಿಯೂ ಬದಲಾವಣೆ ಮಾಡದೇ ಜನರೊಡನೆ ಸಮರ್ಥವಾಗಿ ಸಂಪರ್ಕವಿಟ್ಟುಕೊಂಡಿದ್ದ ತೇಜಸ್ವಿನಿ ಅನಂತಕುಮಾರ್ರಂಥವರನ್ನು ಪಕ್ಕಕ್ಕೆ ಸರಿಸಿ ಕಾರ್ಯಕರ್ತರೊಂದಿಗೆ ಬೆರೆತು ಹೆಸರು ಗಳಿಸದ ತೇಜಸ್ವಿಯಂಥವರನ್ನು ಕಣಕ್ಕಿಳಿಸುವುದನ್ನು ಯೊಚಿಸುತ್ತಿರುವುದನ್ನು ನೋಡಿದರೆ ನಿರ್ಣಯಗಳು ಬಾಲಿಶವೆನಿಸುತ್ತವೆ.

ಮೋದಿಯ ಸಾಧನೆಗಳು, ಮೋದಿ ಅಭಿಮಾನಿಗಳು ಮಾಡಿರುವ ಕೆಲಸವೆಲ್ಲವೂ ನಿಷ್ಪ್ರಯೋಜಕವಾಗಿ ಸಿದ್ದರಾಮಯ್ಯನ ರಾಜಕೀಯದ ಆಟವೇ ಮೇಲುಗೈ ಆಗಿಬಿಡಬಹುದೇ ಎಂಬ ಆತಂಕವಂತೂ ಇದ್ದೇ ಇದೆ. ಆದರೆ ಒಂದೇ ಒಂದು ಧೈರ್ಯ. ಆಪ್ತರೆಲ್ಲರ ಬಳಿ ದೇವೇಗೌಡರ ಚಾಣಾಕ್ಷ ಪಟ್ಟುಗಳ ಕುರಿತಂತೆ ಆಡಿಕೊಳ್ಳುವ ಸಿದ್ದರಾಮಯ್ಯ ಅವರ ಯಾವ ನಡೆಗೂ ಬಗ್ಗಲಾರರು ಎಂಬುದರಲ್ಲಿ ಅನುಮಾನವೇ ಇಲ್ಲ. ಕಾದು ನೋಡುವುದಷ್ಟೇ ನಮ್ಮ ಕೆಲಸ.

Comments are closed.