ವಿಭಾಗಗಳು

ಸುದ್ದಿಪತ್ರ


 

ಜಗತ್ತನ್ನೇ ವ್ಯಾಪಿಸಿದ ಬುದ್ಧ ಧರ್ಮ ಹುಟ್ಟಿದ ನಾಡಲ್ಲೇ ಉಳಿಯಲಿಲ್ಲ ಅದೇಕೆ?

ರಾಜಕೀಯ ಪ್ರತಿಷ್ಠೆ ಗಳಿಸಿದ ಟರ್ಕರು ಇಸ್ಲಾಂ ಧರ್ಮಕ್ಕೆ ಪರಿವತರ್ಿತರಾಗಿ ಮಿಡತೆಯ ಹಿಂಡುಗಳಂತೆ ನುಗ್ಗಿದರು. ಅವರು ಚಚರ್ೆ ನಡೆಸಿ ವಾದಗಳನ್ನು ಮಾಡಿ ಮತಸ್ಥಾಪನೆ ಮಾಡುವ ವೈದಿಕ ವಿದ್ವಾಂಸರಾಗಿರಲಿಲ್ಲ. ಸಂಖ್ಯೆ ಹೆಚ್ಚಿಸಲೆಂದು ಗೂಳಿಗಳಂತೆ ನುಗ್ಗಿ ಇರಿಯುವ ಸ್ವಭಾವದವರಾಗಿದ್ದರು. ಅವರಿಗೆ ಸುಲಭದ ತುತ್ತಾದವರು ಭಿಕ್ಷುಗಳು. ಸಾಮೂಹಿಕ ಕಗ್ಗೊಲೆಯೇ ನಡೆದು ಹೋಯ್ತು. ಅನೇಕ ಕಡೆಗಳಲ್ಲಿ ಸಂಘವಾಸಿಗಳು ಸಾಮೂಹಿಕ ಮತಾಂತರಕ್ಕೊಳಗಾದರು. ಬಹುಶಃ ಭಾರತದ ಮತ್ತೊಂದು ಮನ್ವಂತರಕ್ಕೆೆ ಇದು ಮೂಲ ವಸ್ತುವನ್ನೇ ಒದಗಿಸಿತು!

b2
‘ಭಾರತವನ್ನು ಕಂಡು ಹಿಡಿದವರಾರು?’ ಹಾಗೊಂದು ಪ್ರಶ್ನೆ ಶಾಲೆಯ ಮಕ್ಕಳನ್ನು ಕೇಳಿನೋಡಿ. ತಕ್ಷಣವೇ ‘ವಾಸ್ಕೋಡಗಾಮ’ ಎಂಬ ಉತ್ತರ ತೂರಿ ಬರುತ್ತದೆ. ವಾಸ್ಕೋಡಗಾಮ ಭಾರತಕ್ಕೆ ಬರುವ ಸಾವಿರಾರು ವರ್ಷಗಳ ಮುಂಚಿನಿಂದಲೂ ಈ ರಾಷ್ಟ್ರ ಅಸ್ತಿತ್ವದಲ್ಲಿತ್ತು ಎಂದು ನೆನಪಿಸಿ; ಅವನು ಭಾರತಕ್ಕೆ ಜಲಮಾರ್ಗ ಕಂಡುಹಿಡಿದನೆಂಬ ಉತ್ತರ ಸಿದ್ಧವಾಗಿರುತ್ತದೆ. ಅಸಲು ಆತ ಹುಟ್ಟುವ ಸಾವಿರಾರು ವರ್ಷಗಳ ಮುಂಚಿನಿಂದಲೂ ಭಾರತದ ನೌಕಾಯಾತ್ರೆ ಜಗನ್ಮುಖಿಯಾಗಿತ್ತು. ಕಳೆದ ಕೆಲವು ವಾರಗಳಲ್ಲಿ ಏಷ್ಯಾದ ಬೇರೆ ಬೇರೆ ಭಾಗಗಳಲ್ಲಿ ಹರಡಿಕೊಂಡಿದ್ದ ಭಾರತೀಯ ಸಂಸ್ಕೃತಿಯ ಕುರುಹುಗಳನ್ನು ಅರಿತೆವಲ್ಲ. ಒಂದಷ್ಟು ಪ್ರಶ್ನೆಗಳು ಅನೇಕರನ್ನು ಕಾಡಿವೆ. ಜಗತ್ತಿನೊಂದಿನ ಭಾರತದ ಸಂಪರ್ಕ ಬುದ್ಧನ ನಂತರದ್ದೋ ಅದಕ್ಕೂ ಮುಂಚಿನದ್ದೋ?
ಹಡಗಿನ ಆಧಾರವನ್ನೇ ಹಿಡಕೊಂಡು ಹೊರಟರೆ ನಮ್ಮ ‘ವಿಶ್ವಗುರು’ತ್ವ ಋಗ್ವೇದ ಕಾಲಕ್ಕೆ ಹೋಗಿ ನಿಲ್ಲುತ್ತದೆ. ‘ಸಾಗರ ಸಂಪತ್ತು’, ‘ವ್ಯಾಪಾರದ ಲಾಭಗಳು’, ‘ನೂರು ಹುಟ್ಟುಗಳ ಹಡಗು’, ‘ನೌಕಾಘಾತ’ ಮೊದಲಾದ ಪದಗಳನ್ನು ಋಗ್ವೇದದಲ್ಲಿ ಗುರುತಿಸಿದ ವಿದ್ವಾಂಸರು ಆರಂಭದಲ್ಲಿ ಅದನ್ನು ಸಿಂಧೂ ನದಿಗೆ ಮಾತ್ರ ಸೀಮಿತಗೊಳಿಸಿದ್ದರು. ಆದರೆ ಕಾಲಕ್ರಮದಲ್ಲಿ ಸಂಶೋಧನೆಗಳಾಗುತ್ತಿದ್ದಂತೆ ಇದು ಜಗದ್ವ್ಯಾಪಿಯಾಯಿತು. ಋಗ್ವೇದ ಯುಗದಲ್ಲಿಯೇ ಸುಮೇರ್ ಪ್ರಾಂತದೊಡನೆ ನೌಕಾಸಂಬಂಧ ಇದ್ದುದು ದೃಢವಾಯ್ತು. ಅಷ್ಟೇ ಅಲ್ಲ. ಅಲ್ಲಿ ಉಲ್ಲೇಖಗೊಂಡ ಕುಭಾ, ಕ್ರುಮ, ಸುವಾಸ್ತು, ಗೋಮತಿಗಳು ಕ್ರಮವಾಗಿ ಕಾಬೂಲ್, ಕುರ್ರಂ, ಸ್ವಾತ್ ಮತ್ತು ಗೋಮಲ್ಗಳನ್ನು ಸೂಚಿಸುತ್ತವೆಂಬುದು ಪಕ್ಕಾ ಆಯ್ತು. ಸುಮೇರಿಯಾದ ಒಡವೆಗಳಲ್ಲಿ ಬಳಕೆಯಾಗುತ್ತಿದ್ದ ರತ್ನಗಳು ಭಾರತದ ಗಡಿಭಾಗದಿಂದ ರಫ್ತಾಗುತ್ತಿದ್ದವು. ಸಾಂಸ್ಕೃತಿಕ ಉಡುಗೆ ತೊಡುಗೆಯೂ ಹೊಂದುವಂತೆಯೇ ಇದ್ದುವು. ಅಲ್ಲೆಲ್ಲಾ ಭಾರತದಿಂದ ಹೋದ ಹತ್ತಿಯನ್ನು ‘ಸಿಂದನ್’ ಅಂತ ಕರೆಯುತ್ತಿದ್ದರು ಏಕೆ ಗೊತ್ತೆ? ಸಿಂಧೂ ಕಣಿವೆಯಿಂದ ಬಂದದ್ದು ಅಂತ.
ಇರಾನಿನಲ್ಲಿ ಆರ್ಯನ್ ದೇವತೆಗಳ ಪೂಜೆಗೈಯ್ಯುವ ಮತ್ತು ಆರ್ಯ ಸೇನೆಯ ಅಶ್ವಪಾಲನೆ ಮಾಡುವ ‘ಮರ್ಯಾನ್ನಿ’ ಎಂಬ ವಂಶವೊಂದಿತ್ತು. ಬೇಬಿಲೋನಿಯನ್ ನಾಗರಿಕತೆಯ ಹಿಂದಿರುವ ಭಾರತೀಯ ಪ್ರಭಾವವನ್ನೂ ಅನೇಕರು ಉಲ್ಲೇಖಿಸುತ್ತಾರೆ. ಅಲ್ಲೆಲ್ಲಾ ಹಕ್ಕಿಗಳೇ ವಿರಳವಾಗಿದ್ದರಿಂದ ಭಾರತದಿಂದ ಒಯ್ದ ಹಕ್ಕಿಗಳಿಗೆ ಅಪಾರ ಬೇಡಿಕೆ ಇತ್ತಂತೆ. ಇಲ್ಲಿನ ವರ್ತಕರು ಒಯ್ದ ಕಾಗೆಯೊಂದು ಬಲುವಾಗಿ ಪ್ರಶಂಸೆ ಗಳಿಸಿತ್ತಂತೆ! ನೆನಪಿಡಿ. ಇವೆಲ್ಲವೂ ಬುದ್ಧನ ಕಾಲಕ್ಕಿಂತಲೂ ಮುನ್ನವೇ!
ಇಲ್ಲಿಂದ ಹೊರಟ ಪ್ರತಿಯೊಬ್ಬ ವರ್ತಕನೂ ಭಾರತೀಯ ಸಂಸ್ಕೃತಿಯ ವಾಹಕನೇ ಆಗಿದ್ದ. ಆತನೊಂದಿಗೆ ಇಲ್ಲಿನ ಧರ್ಮ, ದರ್ಶನಗಳೂ ಆಯಾ ನಾಡನ್ನು ಮುಟ್ಟುತ್ತಿದ್ದವು. ಹೀಗಾಗಿಯೇ ಜಗತ್ತಿನ ಅನೇಕ ಮತ-ಪಂಥಗಳ ಮೇಲೂ ಭಾರತೀಯ ಚಿಂತನೆಗಳ ಪ್ರಭಾವ ಖಂಡಿತ ಇದೆ.
ಭಾರತೀಯ ದರ್ಶನಕಾರರು ಸಾಕ್ರಟೀಸ್ನನ್ನು ಭೇಟಿ ಮಾಡಿದ ಉಲ್ಲೇಖ ಗ್ರೀಕ್ ಸಾಹಿತ್ಯದಲ್ಲಿ ಕಂಡು ಬರುತ್ತದೆ. ಹೀಗಾಗಿಯೇ ಮುಂದೆ ಅರಿಸ್ಟಾಟಲ್ ಹೇಳುವ ಅನೇಕ ಅಂಶಗಳ ಮೂಲವನ್ನು ನಾವು ಭಾರತದ ದರ್ಶನಗಳಲ್ಲಿ ಅರಸಬಹುದು ಎಂದು ಅನೇಕರು ನಂಬುತ್ತಾರೆ. ಪೈಥಾಗರಸನ ಧಾಮರ್ಿಕ-ತಾತ್ವಿಕ ಮತ್ತು ಗಣಿತ ಶಾಸ್ತ್ರೀಯ ಸಿದ್ಧಾಂತಗಳಿಗೂ ಭಾರತದಲ್ಲಿ ಪ್ರಚಲಿತವಾಗಿದ್ದ ಅಂತಹ ಚಿಂತನೆಗಳಿಗೂ ಸಾಮ್ಯ ಗುರುತಿಸಬಹುದು. ಇವುಗಳ ಕುರಿತಂತೆ ಅಧ್ಯಯನ ನಡೆಸಿರುವ ಫ್ರೀಡರ್ ಭಾರತದಲ್ಲಿ ಅಂತಹ ಚಿಂತನೆಗಳ ಉದಯಕ್ಕೆ ಬೇಕಾದ ವಾತಾವರಣವಿತ್ತು. ಗ್ರೀಕ್ನಲ್ಲಿರಲಿಲ್ಲ. ಹೀಗಾಗಿ ಇವುಗಳ ಮೂಲ ಪೈಥಾಗರೋಸ್ನದೇ ಎಂದು ಒಪ್ಪುವುದು ಕಷ್ಟ ಎನ್ನುತ್ತಾನೆ.
ಮತ್ಸ್ಯಾವತಾರದ ಕಥೆಯಂತೂ ಜಗತ್ತಿನ ಯಾವ ಮತ-ಪಂಥವನ್ನೂ ಬಿಟ್ಟಂತೆ ಕಾಣುವುದಿಲ್ಲ. ಮತ್ತು ಪ್ರತಿಯೊಬ್ಬರೂ ಅದನ್ನು ಅಕ್ಷರಶಃ ನಮ್ಮದೇ ಕಥೆಯಂತೆ ವಣರ್ಿಸುತ್ತಾರೆ. ಇದು ಬುದ್ಧನಿಗಿಂತಲೂ ಮುನ್ನ ಜಗತ್ತನ್ನು ಭಾರತ ಆಕ್ರಮಿಸಿದ್ದ ರೀತಿ.
ಕಾಲಕ್ರಮದಲ್ಲಿ ಭಾರತ ಆಂತರಿಕವಾಗಿ ಕುಸಿಯಿತು. ತನ್ನನ್ನು ತಾನು ಸಂಭಾಳಿಸಿಕೊಳ್ಳುವುದರಲ್ಲಿಯೇ ಹೈರಾಣಾಯಿತು. ಶಿಥಿಲಗೊಳ್ಳುತ್ತ ನಡೆದ ಸಮಾಜಕ್ಕೆ ಮರು ಚೈತನ್ಯ ತುಂಬಿದ್ದು ಬುದ್ಧನೇ. ಶಾಸ್ತ್ರಗಳನ್ನು, ದೇವರನ್ನು ಸಾಮಾನ್ಯರಿಂದ ದೂರವಿರಿಸುವ ಪರಂಪರೆ ಶುರುವಾದಾಗ ಬುದ್ಧ ತನ್ನ ಪ್ರೇಮ ಮಂತ್ರದಿಂದಲೇ ಎಲ್ಲರನ್ನೂ ಸೆಳೆದುಕೊಂಡ. ಪ್ರಸ್ಥಾಪಿತ ಅನೇಕ ಸತ್ಯಗಳನ್ನು ಧಿಕ್ಕರಿಸಿದ. ರೂಢಿಗತ ಆಚರಣೆಗಳನ್ನೇ ಬುಡಮೇಲುಗೊಳಿಸಿ ಶೋಷಣೆಯ ವಿರುದ್ಧ ತೊಡೆತಟ್ಟಿ ನಿಂತ. ತಪಸ್ಸಿಗೆ, ಸಾಧನೆಗೆ ಮಹತ್ವ ಕೊಟ್ಟ. ಸ್ವತಃ ಚಕ್ರವತರ್ಿ ಕುಲದವನಾಗಿದ್ದರಿಂದ ರಾಜಾಶ್ರಯ ಬಲುಬೇಗ ದೊರೆಯಿತು. ನೋಡನೋಡುತ್ತಿದ್ದಂತೆ ಬೌದ್ಧ ಧರ್ಮ ವ್ಯಾಪಕವಾಗಿ ಬೆಳೆದುಬಿಟ್ಟಿತು. ಬುದ್ಧನ ಹಿಂದೆ ಅನೇಕರು ಭಿಕ್ಷುಗಳಾಗಿ ಹೊರಟರು.
ಹಾಗೆ ನೋಡಿದರೆ ಬೌದ್ಧ ಧರ್ಮದ ಮೊದಲ ವ್ಯಾಪಕ ವಿಶ್ವಯಾತ್ರೆ ಶುರುವಾಗಿದ್ದು ಅಶೋಕನ ಕಾಲಕ್ಕೆ. ಅಶೋಕ ಸ್ವತಃ ತನ್ನ ಮಕ್ಕಳನ್ನೇ ಪ್ರಚಾರಕ್ಕೆಂದು ಜಗತ್ತಿನಾದ್ಯಂತ ರವಾನಿಸಿದ. ಅಲ್ಲೆಲ್ಲ ಭಾರತದ ಕುರಿತಂತೆ ಇದ್ದ ಗೌರವವನ್ನೂ ಈ ಭಿಕ್ಷುಗಳು ಉಳಿಸಿಕೊಂಡರು ಮತ್ತು ಕಾಲಕ್ರಮದಲ್ಲಿ ಅದನ್ನು ನೂರ್ಮಡಿಗೊಳಿಸಿದರು.
ಮೊದಲಿನಿಂದಲೂ ಬೌದ್ಧ ಧರ್ಮ ಸಾಂಪ್ರದಾಯಿಕವಾದ ಪುರೋಹಿತ ವರ್ಗದೊಂದಿಗೆ ಕಾದಾಡಬೇಕಿತ್ತು. ಹೀಗಾಗಿ ಬುದ್ಧಿವಂತ ಬ್ರಾಹ್ಮಣರೊಂದಿಗೆ ಕಾದಾಡಲು ಬೌದ್ಧಾನುಯಾಯಿಗಳು ಸಮರ್ಥವಾದ ತಾತ್ವಿಕವಾದ ಕೃತಿ ರಚನೆ ಮಾಡಿದರು. ತರ್ಕಶಾಸ್ತ್ರ, ತತ್ತ್ವಶಾಸ್ತ್ರಗಳ ಮೇಲೆ ಪಾಂಡಿತ್ಯಗಳಿಸಿ ವಾದದಲ್ಲಿ ಎಲ್ಲರನ್ನೂ ಖಂಡಿಸಿ ಬಿಡುತ್ತಿದ್ದರು. ನಾಗಾಜರ್ುನ, ದಿಂಗ್ನಾಗ, ಧರ್ಮಕೀತರ್ಿಯರಂತಹ ಶ್ರೇಷ್ಠ ಆಚಾರ್ಯರು ನಲಂದಾದಂತಹ ವಿಶ್ವವಿದ್ಯಾಲಯದಲ್ಲಿ ನೂರಾರು ಶಿಷ್ಯರನ್ನು ಈ ವಿಚಾರಕ್ಕಾಗಿ ತಯಾರು ಮಾಡಿ ಸಮಾಜಕ್ಕೆ ಸಮಪರ್ಿಸುತ್ತಿದ್ದರು. ಕಾಲಕ್ರಮದಲ್ಲಿ ಈ ಆಚಾರ್ಯರ ತಾತ್ತ್ವಿಕ ಚಿಂತನೆಗಳು ವೈದಿಕ ಪರಂಪರೆಯವರೂ ಮೆಚ್ಚುವಂತೆ ಮಾಡಿದವು. ಅನೇಕ ಬಾರಿ ಕೆರಳಿದ ಚಚರ್ೆಗಳು ರಾಷ್ಟೀಯ ಬುದ್ಧಿ ಶಕ್ತಿಯನ್ನು ಅರಳಿಸಿತು. ಸಹಜವಾಗಿಯೇ ಈ ಬೌದ್ಧಿಕ ಅಲೆ ಜಗತ್ತನ್ನೆಲ್ಲ ತಟ್ಟಿತು.
ತಮ್ಮೆಲ್ಲ ಸಂಸ್ಕೃತಿ, ಆಚಾರ-ವಿಚಾರಗಳಿಗೆ, ದರ್ಶನ-ಶಾಸ್ತ್ರಗಳಿಗೆ ಭಾರತದತ್ತಲೇ ಮುಖಮಾಡಿ ಕುಳಿತಿದ್ದ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಭಾರತದಲ್ಲಾದ ಬೌದ್ಧಿಕ ಉತ್ಕ್ರಾಂತಿ ಅಚ್ಚರಿಯನ್ನು ತಂದಿತ್ತು. ಅದನ್ನು ಸ್ವೀಕರಿಸಿಬಿಡಬೇಕೆಂಬ ಹಂಬಲವನ್ನೂ ತುಂಬಿಬಿಟ್ಟಿತ್ತು. (ಪಶ್ಚಿಮದಲ್ಲಾಗುವ ವೈಜ್ಞಾನಿಕ ಅನ್ವೇಷಣೆಗಳ ಪ್ರಭಾವಕ್ಕೆ ಈಗ ನಾವು ಒಳಗಾಗುತ್ತಿಲ್ಲವೇ?) ಹೀಗಾಗಿ ಅನೇಕ ರಾಷ್ಟ್ರಗಳು ಭಾರತವನ್ನು ಬೌದ್ಧಿಕವಾಗಿ ಗೆದ್ದ ಬುದ್ಧ ಚಿಂತನೆಗಳ ಅಧ್ಯಯನಕ್ಕೆ ಸಹಜವಾಗಿ ಮನಸು ಮಾಡಿದವು. ಇಲ್ಲಿನ ಪಂಡಿತರನ್ನು, ಭಿಕ್ಷುಗಳನ್ನು ತಾವಾಗಿಯೇ ಆಹ್ವಾನಿಸಿದವು.
ಭಾರತದಲ್ಲಿ ನಿಂತು ನೋಡಿದರೆ ಆ ಕಾಲ ಬ್ರಾಹ್ಮಣರ ಸಂಕಟದ ಕಾಲ. ಆದರೆ ಅಚ್ಚರಿಯೇನು ಗೊತ್ತೇ? ಬೌದ್ಧ ಧರ್ಮದ ಕಟು ವಿರೋಧಿಗಳು ಬ್ರಾಹ್ಮಣರಾಗಿದ್ದಂತೆ ಅದರ ಬೌದ್ಧಿಕ ಸಾಮಥ್ರ್ಯದ ಮೂಲವೂ ಬ್ರಾಹ್ಮಣರೇ ಆಗಿದ್ದರು. ಮೊದಲಿನಿಂದಲೂ ಅವರೇ ಅದರ ಆಧಾರ ಸ್ತಂಭಗಳಾಗಿದ್ದರು. ಸಾರಿಪುತ್ರ, ಮೌದ್ಗಲ್ಯಾಯನ, ಮಹಾಕಶ್ಯಪರೆಲ್ಲ ಬ್ರಾಹ್ಮಣರೇ. ಆನಂತರದ ದಿನಗಳಲ್ಲಿ ಸಂಘಶಕ್ತಿಗೆ ಕಾರಣರಾದ ಅಶ್ವಘೋಷ, ನಾಗಾಜರ್ುನ, ಆರ್ಯದೇವ, ಅಸಂಗ, ವಸುಬಂಧು, ದಿಂಗ್ನಾಗ, ಧರ್ಮಕೀತರ್ಿ, ಧಮರ್ೋತ್ತರರಂತಹವರು ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದವರೇ. ವೈದಿಕ ಶಿಕ್ಷಣ ಪಡೆದು ಮೇರು ಸದೃಶ ಬೌದ್ಧಿಕ ಸಾಮಥ್ರ್ಯ ಪಡೆದವರೇ. ಹೀಗಾಗಿ ಯಾವ ಆಧಾರದ ಮೇಲೆ ಬ್ರಾಹ್ಮಣರ ವಾದಗಳನ್ನು ಧಿಕ್ಕರಿಸಬೇಕೆಂಬ ಅರಿವು-ಅಧ್ಯಯನ ಚೆನ್ನಾಗಿಯೇ ಇದ್ದುದರಿಂದ ಖಂಡನೆ-ಮಂಡನೆಗಳಿಂದ ಬುದ್ಧ ಚಿಂತನೆ ವ್ಯಾಪಕವಾಗಿ ಹಬ್ಬಿತು.
ಹಾಗಂತ ಬುದ್ಧಿಗೆ ಗ್ರಾಹ್ಯವಾದುದಷ್ಟೇ ಆಗಿರಲಿಲ್ಲ ಬೌದ್ಧಧರ್ಮ. ಅದರ ಶಕ್ತಿ ಅಡಗಿದ್ದುದು ಮನಮೋಹಕವಾದ ನೀತಿಶಾಸ್ತ್ರದಲ್ಲಿ, ಸರ್ವಗ್ರಾಹ್ಯವಾದ ಚಚರ್ೆಯಲ್ಲಿ. ಎಲ್ಲಕ್ಕೂ ಮಿಗಿಲಾಗಿ ಬುದ್ಧನ ಅಖಂಡವಾದ ಪ್ರೇಮವಿತ್ತಲ್ಲ ಅದು ಮನುಕುಲವನ್ನು ಆಕಷರ್ಿಸಿತ್ತು. ತಪ್ಪು ಮಾಡದೇ ಇರಲಾಗದ ಮಾನವನ ವ್ಯಕ್ತಿತ್ವದ ಕುರಿತಂತೆ ಆತ ತೋರುತ್ತಿದ್ದ ಅನುಕಂಪ ಎಂತಹವರನ್ನೂ ಸೆಳೆದಿತ್ತ್ತು. ಹೀಗಾಗಿ ವೇದಕಾಲದಲ್ಲಿ ಶುರುವಾದ ಸಂಸ್ಕೃತಿಯ ಹರಡುವಿಕೆ ರಾಮಾಯಣ-ಮಹಾಭಾರತ ಕಾಲಕ್ಕೆ ವಿಸ್ತಾರಗೊಂಡಿತ್ತು. ಮತ್ತೀಗ ಅದು ಬುದ್ಧ ಚಿಂತನೆಗಳ ಮೂಲಕ ಮತ್ತೊಮ್ಮೆ ವಿಶ್ವವ್ಯಾಪಿಯಾಗಿ ನಿಂತಿತು!
ಕಾಲಕ್ರಮದಲ್ಲಿ ಬುದ್ಧ ಧರ್ಮ ಶಿಥಿಲಾವಸ್ಥೆಯತ್ತ ಸಾಗಿತು. ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ ಸಶಕ್ತರಾದವರು ಕಾಲಕಳೆದಂತೆ ಕಡಿಮೆಯಾಗತೊಡಗಿದರು. ಕೂತುಣ್ಣಬಲ್ಲವರಷ್ಟೇ ಸೇರ್ಪಡೆಯಾಗತೊಡಗಿದರು. ಆರಂಭದಲ್ಲಿ ಅದು ವಿರಕ್ತ ಪಂಥವೇ ಆಗಿತ್ತು. ಆದರೆ ಬರುಬರುತ್ತ ಇಂತಹ ವಿರಕ್ತರ ಸಂಖ್ಯೆ ಬಲುದೊಡ್ಡ ಮಟ್ಟದಲ್ಲಿರಲು ಕಾರಣ ಸಾಧಕನಲ್ಲಿದ್ದ ವೈರಾಗ್ಯವಲ್ಲ ಬದಲಿಗೆ ಸ್ವಾರ್ಥವೇ ಆಗಿತ್ತು ರಾಜಾಶ್ರಯವೂ ವಿಫುಲವಾಗಿ ದೊರಕುತ್ತಿದ್ದುದರಿಂದ ಭಿಕ್ಷುಗಳು ಸ್ವಾವಲಂಬನೆಯ ಹಾದಿಯನ್ನೇ ಬಿಟ್ಟರು. ಅಶೋಕನ ಕಾಲದಲ್ಲಂತೂ ಭಿಕ್ಷು ಸಮೂಹ ಮೈಗಳ್ಳರ, ಮಂದ ಬುದ್ಧಿಗಳ ಸಂಚಾರ ಸ್ಥಾನವಾಯಿತು. ಸ್ವತಃ ಅಶೋಕ ಇಂತಹವರನ್ನು ಗುರುತಿಸಿ ಓಡಿಸಬೇಕಾದ ಪರಿಸ್ಥಿತಿ ಬಂತು. ಕೂತುಣ್ಣುವವರನ್ನು ಸಂಭಾಳಿಸುವುದು ರಾಜ್ಯವ್ಯವಸ್ಥೆಗೂ ಕಠಿಣವಾದುದರಿಂದ ಕಾಲಕ್ರಮದಲ್ಲಿ ರಾಜಾಶ್ರಯವೂ ಕಡಿಮೆಯಾಯಿತು ಆಗಲೇ ಇಂಡೋನೇಶಿಯಾ, ಬಾಲಿಗಳ ರಾಜರು ನಲಂದಾದಲ್ಲಿ ಆಶ್ರಯತಾಣಗಳನ್ನು ಕಟ್ಟಲು ಮುಂದೆ ಬಂದಿದ್ದು! ಅದೇ ವೇಳೆಗೇ ಈ ದೇಶದಿಂದ ಬಲು ದೊಡ್ಡ ಸಂಖ್ಯೆಯಲ್ಲಿ ಬೌದ್ಧಭಿಕ್ಷುಗಳು ಜಗತ್ತಿನಾದ್ಯಂತ ಪ್ರಯಾಣ ಬೆಳೆಸಿದ್ದು.

b1

ಅತ್ತ ಬೌದ್ಧದೇವತಾಪಂಕ್ತಿಯೂ ವಿಸ್ತಾರಗೊಂಡು ಅನೇಕ ದೇವ-ದೇವಿಯರನ್ನು ಸೃಷ್ಟಿಸಲಾಯ್ತು. ಸೃಷ್ಟಿಯಾದ ಮೇಲೆ ಅವರನ್ನು ತೃಪ್ತಿ ಪಡಿಸುವ ಆಚರಣೆಗಳೂ ಸಾಕಷ್ಟಾದವು. ಯಾವ ಮೂಲ ತತ್ತ್ವಗಳಿಂದ ದೂರವಿದ್ದು ಬೌದ್ಧ ಧರ್ಮದ ತಳಹದಿ ನಿಮರ್ಿಸಲಾಗಿತ್ತೋ ಈಗ ಅತ್ತ ಕಡೆಯೆ ಹೊರಳಿತ್ತು ಅದರ ಚಿಂತನೆ. ಇದನ್ನು ಸಮಥರ್ಿಸಿಕೊಳ್ಳಲಾಗದೇ ಅನೇಕರು ವಿಮುಖರಾದರು. ಬಹುಶಃ ಈ ಹಂತದಲ್ಲಿಯೇ ಅದು ಮಹಾಯಾನ, ಹೀನಯಾನ, ವಜ್ರಯಾನಗಳಾಗಿ ಮೂರು ಭಾಗಗಳಾಗಿ ಟಿಸಿಲೊಡೆಯಿತು. ಒಂದೊಂದು ಪಂಥದವರೂ ಮತ್ತೆ ತಂತಮ್ಮ ಭಿಕ್ಷುಗಳನ್ನು ಜಗತ್ತಿನ ಮೂಲೆ ಮೂಲೆಗೆ ಕಳಿಸಿದರು. ಹೌದು. ಜಗತ್ತಿಗೆಲ್ಲ ಬುದ್ಧ ಪ್ರಭೆ ಹಬ್ಬಿತ್ತು ನಿಜ. ಆದರೆ ಹುಟ್ಟಿದ ನಾಡಿನಲ್ಲಿಯೇ ಅದು ನಿಸ್ತೇಜವಾಗಿತ್ತು.
ಅಷ್ಟೇ ಅಲ್ಲ. ವೈಧಿಕ ಧರ್ಮವನ್ನು ವಿರೋಧಿಸಿದ ಬುದ್ಧನ ಚಿಂತನೆಯ ತಳಹದಿಯನ್ನು ಅರಿಯದೇ ಕಾಲಕ್ರಮದಲ್ಲಿ ಬೌದ್ಧ ಧಮರ್ೀಯರು ವೇದ ಮತಾವಲಂಬಿಗಳ ವಿರುದ್ಧ ದ್ವೇಷ ಭಾವನೆ ಬೆಳೆಸಿಕೊಂಡರು. ದ್ವೇಷವನ್ನು ಪ್ರೀತಿಯಿಂದ ಗೆಲ್ಲಬೇಕು ಎಂದ ಬುದ್ಧನ ಮಾತು ಈಗ ನಿರರ್ಥಕವಾಯಿತು.
ಅಲ್ಲಿಗೇ ಮುಗಿಯಲಿಲ್ಲ. ಈ ಸಂಘವಾಸಿಗಳ ದೈಹಿಕ ಸಾಮಥ್ರ್ಯವೂ ಕಡಿಮೆಯಿದ್ದುದರಿಂದ ಆಕ್ರಮಣಕಾರರಾಗಿ ಬಂದವರ ಕತ್ತಿಗೆ ಮೊದಲ ಆಹಾರವಾಗುತ್ತಿದ್ದವರು ಇವರೇ. ಹೂಣ ದೊರೆ ಮಿಹಿರಗುಲನಿಂದಾದ ಕಿರುಕುಳ ಹೇಳತೀರದ್ದು. ಆನಂತರದ ದಿನಗಳಲ್ಲಿ ಮುಸಲ್ಮಾನರ ಆಕ್ರಮಣಕ್ಕೆ ಸಾಮೂಹಿಕವಾಗಿ ಬಲಿಯಾದವರೂ ಬೌದ್ಧನುಯಾಯಿಗಳೇ.
ರಾಜಕೀಯ ಪ್ರತಿಷ್ಠೆ ಗಳಿಸಿದ ಟರ್ಕರು ಇಸ್ಲಾಂ ಧರ್ಮಕ್ಕೆ ಪರಿವತರ್ಿತರಾಗಿ ಮಿಡತೆಯ ಹಿಂಡುಗಳಂತೆ ನುಗ್ಗಿದರು. ಅವರು ಚಚರ್ೆ ನಡೆಸಿ ವಾದಗಳನ್ನು ಮಾಡಿ ಮತಸ್ಥಾಪನೆ ಮಾಡುವ ವೈದಿಕ ವಿದ್ವಾಂಸರಾಗಿರಲಿಲ್ಲ. ಸಂಖ್ಯೆ ಹೆಚ್ಚಿಸಲೆಂದು ಗೂಳಿಗಳಂತೆ ನುಗ್ಗಿ ಇರಿಯುವ ಸ್ವಭಾವದವರಾಗಿದ್ದರು. ಅವರಿಗೆ ಸುಲಭದ ತುತ್ತಾದವರು ಭಿಕ್ಷುಗಳು. ಸಾಮೂಹಿಕ ಕಗ್ಗೊಲೆಯೇ ನಡೆದು ಹೋಯ್ತು. ಅನೇಕ ಕಡೆಗಳಲ್ಲಿ ಸಂಘವಾಸಿಗಳು ಸಾಮೂಹಿಕ ಮತಾಂತರಕ್ಕೊಳಗಾದರು. ಬಹುಶಃ ಭಾರತದ ಮತ್ತೊಂದು ಮನ್ವಂತರಕ್ಕೆೆ ಇದು ಮೂಲ ವಸ್ತುವನ್ನೇ ಒದಗಿಸಿತು!
ಸಾವರ್ಕರರು ತಮ್ಮ ‘ಇತಿಹಾಸದ ಆರು ಸ್ವಣರ್ಿಮ ಪುಟಗಳು’ ಎಂಬ ಕೃತಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಈ ಆಕ್ರಮಣಕಾರಿಗಳನ್ನು ದೇಶದೊಳಕ್ಕೆ ಆಹ್ವಾನಿಸುವಲ್ಲಿ ಸಂಘವಾಸಿಗಳ ಪಾತ್ರವನ್ನೂ ಉಲ್ಲೇಖಿಸಿದ್ದಾರೆ.. ಹ್ಯುಯೆನ್ತ್ಸಾಂಗ್ ಕೂಡ ಇದನ್ನು ಸಮಥರ್ಿಸಿದ್ದಾನೆ. ಬಂಗಾಳ-ಮಗಧಗಳಲ್ಲಿ ವಧರ್ಿಸುತ್ತಿದ್ದ ಬೌದ್ಧ ಧರ್ಮವು ಸಿಂಧ ಪ್ರಾಂತ್ಯಗಳಲ್ಲಿ ಪ್ರಭಾವ ಕಳೆದುಕೊಳ್ಳುತ್ತಿದ್ದುದನ್ನೂ ಆತ ಗಮನಿಸಿದ್ದ. ಈ ಭಾಗದ ಭಿಕ್ಷುಗಳು ಸೋಮಾರಿಗಳೂ, ಸುಖಾಪೇಕ್ಷಿಗಳೂ ಆಗಿದ್ದನ್ನು ಆತ ಗುರುತಿಸಿದ್ದ. ಇದೇ ಭಿಕ್ಷುಗಳು ಕ್ರಿ.ಶ. 712ರಲ್ಲಿ ಅರಬ್ಬೀ ದಾಳಿಕೋರರಿಗೆ ಸಹಾಯ ಮಾಡಿ ಸಿಂಧ್ ಪ್ರಾಂತದ ಬ್ರಾಹ್ಮಣ ವಂಶದ ನಾಶಕ್ಕೆ ಕಾರಣವಾಗಿದ್ದೂ ಇತಿಹಾಸದ ಪುಟಗಳಲ್ಲಿ ಸುರಕ್ಷಿತ.
ವೈದಿಕ ಪರಂಪರೆಯ ಹೊಸ ಶಕೆ ಶುರುವಾಯಿತು. ಕುಮಾರಿಲ ಭಟ್ಟರಿಂದ ಶುರುವಾಗಿ ಶಂಕರಾಚಾರ್ಯರವರೆಗೆ ಹೊಸ ಪರಂಪರೆ ಅಂತಪ್ರ್ರವಾಹವನ್ನು ಮರು ಜಾಗೃತಗೊಳಿಸಿತು. ಅಷ್ಟೇ ಅಲ್ಲ. ಬೌದ್ಧ ಧರ್ಮದ ಮೂಲಕ ಸೃಷ್ಟಿಯಾಗಿದ್ದ ಹೊಸ ದೇವ ದೇವಿಯರನ್ನು ತನ್ನೊಳಗೆ ಸೇರಿಸಿಕೊಳ್ಳಲು ಅದು ಹಿಂದೆ ಮುಂದೆ ನೋಡಲಿಲ್ಲ. ಅದು ಬಿಡಿ. ಸ್ವತಃ ಬುದ್ಧನನ್ನೇ ಅವತಾರವೆಂದು ಘೋಷಿಸಿ ತನ್ನೊಳಗೆ ಒಂದು ಮಾಡಿಕೊಂಡು ಭರದಿಂದ ಮುನ್ನುಗ್ಗಿತು. ಭಾರತದಲ್ಲಿ ಕಂಡು ಬಂದ ಈ ಬದಲಾವಣೆ ಜಗತ್ತಿನಲ್ಲಿ ಪ್ರತಿಫಲಗೊಳ್ಳಲು ಶುರುವಾಗಿತ್ತಷ್ಟೇ. ಅಷ್ಟರೊಳಗೆ ಇಸ್ಲಾಂ ಕ್ರಿಶ್ಚಿಯನ್ನರ ಆಕ್ರಮಣಗಳನ್ನೆದುರಿಸುತ್ತಾ ಭಾರತ ಹೈರಾಣಾಯ್ತು.
ಜಗತ್ತನ್ನು ಗಮ್ಯದೆಡೆಗೆ ಕರೆದೊಯ್ಯುವ ಗುರಿಯಿಂದ ಭಾರತ ಒಂದು ಕ್ಷಣ ವಿಚಲಿತವಾಯ್ತು! ಅಷ್ಟರೊಳಗೆ ಜಗತ್ತಿನಲ್ಲಿ ಆಗಬಾರದ ಅನೇಕ ಅನಾಹುತಗಳು ನಡೆದು ಹೋಗಿದ್ದವು..

Comments are closed.