ವಿಭಾಗಗಳು

ಸುದ್ದಿಪತ್ರ


 

ಜನಪ್ರಿಯ ಘೋಷಣೆಗಳು ವರ್ಸಸ್ ಪ್ರಗತಿಯ ಹೆಜ್ಜೆಗಳು!

ನರೇಂದ್ರಮೋದಿಯವರು ಈಗ ಇದ್ದಕ್ಕಿದ್ದಂತೆ ಮಧ್ಯಮವರ್ಗದವರ ವಿರೋಧಿಯಾಗಿದ್ದಾರೆ, ಮುಸಲ್ಮಾನರ ವಿರೋಧಿಯಾಗಿದ್ದಾರೆ, ದಲಿತರ ವಿರೋಧಿಯಾಗಿದ್ದಾರೆ, ಬ್ರಾಹ್ಮಣರ ವಿರೋಧಿಯಾಗಿದ್ದಾರೆ. ಒಟ್ಟಾರೆ ಅವರು ದೇಶದ ಪರವಾಗಿ ಮಾತ್ರ ಇರೊದು. ದುರಂತವೆಂದರೆ ಅವರನ್ನು ಬೆಂಬಲಿಸಿಕೊಂಡು ಬಂದಿದ್ದವರೆಲ್ಲಾ ಅವರ ಸೋಲಿಗೆ ಕಾರಣವನ್ನು ವಿಶ್ಲೇಷಿಸುವ ಭರದಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ.

ಐದು ರಾಜ್ಯಗಳ ಚುನಾವಣೆ ಮತ್ತು ಆನಂತರದ ಬೆಳಣಿಗೆಗಳ ಚಚರ್ೆ ಇನ್ನೂ ನಿಂತೇ ಇಲ್ಲ. ಏಕೆಂದರೆ ಅದು ಬರಲಿರುವ ಲೋಕಸಭಾ ಚುನಾವಣೆಗೆ ಬಲು ಹತ್ತಿರದ ಪೂರ್ವಭಾವಿ ಚುನಾವಣೆ. ಬಹುಶಃ ಹರಿಯಾಣಾದಲ್ಲಿ ಮುನ್ಸಿಪಾಲಿಟಿ ಚುನಾವಣೆಗಳಲ್ಲಿ ಭಾಜಪ ಎದುರಾಳಿಗಳನ್ನು ಕ್ಲೀನ್ ಸ್ವೀಪ್ ಮಾಡಿರದೇ ತಾನೇ ಪೂರಾ ಸ್ವೀಪ್ ಆಗಿಬಿಟ್ಟಿದ್ದರೆ ಕಾಂಗ್ರೆಸ್ಸು 2019ರ ಚುನಾವಣೆಯನ್ನು ಗೆದ್ದೇಬಿಟ್ಟೆ ಎಂದು ಬೀಗಿಬಿಡುತ್ತಿತ್ತೇನೋ! ಈ ಚುನಾವಣೆಗಳಲ್ಲಿ ರೈತರ ಬೆಲೆಗೆ ಕನಿಷ್ಠ ಬೆಂಬಲ ಬೆಲೆ ನಿಗಧಿ ಪಡಿಸುವುದು, ಪೂರ್ಣ ಸಾಲಮನ್ನಾ ಮಾಡುವುದು, ನಿರುದ್ಯೋಗಿಗಳಿಗೆ ಭತ್ಯೆ ಕೊಡುವುದು ಈ ಬಗೆಯ ಜನಪ್ರಿಯ ಘೋಷಣೆಗಳನ್ನು ಜನರ ಮುಂದಿರಿಸಿಯೇ ಚುನಾವಣೆಯನ್ನು ಗೆದ್ದದ್ದೆಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ, ಚುನಾವಣೆ ಗಲ್ಲಲೆಂದೇ ಜನಪ್ರಿಯ ಘೋಷಣೆಗಳನ್ನು ಮಾಡಬೇಕಾದ ಪರಿಸ್ಥಿತಿಯೇ ಇನ್ನೂ ರಾಷ್ಟ್ರವನ್ನು ನಿಲ್ಲಿಸಿರುವುದು ಅದೆಷ್ಟು ಸರಿ ಎಂಬುದೇ ಪ್ರಶ್ನಾರ್ಹ ಸಂಗತಿ. ರೈತರ ಸಾಲಮನ್ನಾ ಎಂಬ ಸಂಗತಿಯೊಂದು ರಾಜ್ಯದ, ದೇಶದ ಪ್ರಗತಿಗಿಂತ ಮಹತ್ವದ ಅಂಶವಾಗಿ ಚಚರ್ೆಯಾಗುವುದು ದುರದೃಷ್ಟಕರವೇ ಸರಿ. ಇಷ್ಟಕ್ಕೂ ರೈತರ ಸಾಲಮನ್ನಾ ಎಂಬುದೇ ಮೂಗಿಗೆ ತುಪ್ಪ ಸವರುವ ಆಟ, ವ್ಯವಸ್ಥಿತವಾದ ಮೋಸ. ರೈತರ ಹೆಸರಲ್ಲಿ ಮುಂದೆ ನಿಲ್ಲುವವರೇ ಬೇರೆ, ನಿಜವಾದ ರೈತರೇ ಬೇರೆ ಎಂಬುದನ್ನು ಅರ್ಥಮಾಡಿಕೊಳ್ಳಲಾರದ ಸಾಮಾನ್ಯರ ತಾಕಲಾಟ. ಹಾಗೆ ಸುಮ್ಮನೆ ಆಲೋಚಿಸಿ ನೋಡಿ. ಅನೇಕರು ನಮ್ಮನ್ನೇ ನಾವು ಸಾಕಷ್ಟು ಬಾರಿ ಕೇಳಿಕೊಂಡಿರುತ್ತೇವೆ, ರೈತರಿಗಾಗಿ ನಾವೇನು ಮಾಡಿದ್ದೇವೆ ಅಂತ. ಸಾಮಾನ್ಯ ಜನರಾಗಿ ನಾವು ಅವರಿಂದ ವಸ್ತುಗಳನ್ನು ಖರೀದಿಸಿದ್ದೇವೆ. ಬೆಲೆ ದುಪ್ಪಟ್ಟಾದಾಗಲೂ ತೆಗೆದುಕೊಳ್ಳಬೇಕಾದ್ದನ್ನು ತೆಗೆದುಕೊಂಡೇ ಇದ್ದೇವೆ, ರೈತನ ಬೆಲೆ ಹಾಳಾದಾಗ ಮತ್ತೇನೂ ಮಾಡಲಾಗದಿದ್ದರೂ ಒಂದಷ್ಟು ಮರುಗಿದ್ದೇವೆ. ಅವನಿಗೆ ಬೆಳೆ ನಷ್ಟವಾದಾಗ ಸಕರ್ಾರ ಬೆಂಬಲ ಘೋಷಿಸಿರುವುದು ನಾವು ಕಟ್ಟಿದ ತೆರಿಗೆ ಹಣದಲ್ಲೇ. ಎಲ್ಲ ಸಕ್ಕರೆ ಕಾಖರ್ಾನೆಗಳೂ ಮಂತ್ರಿ ಮಾಗಧರದ್ದೇ. ಆದರೆ, ರೈತರಿಗೆ ಕುಂಟು ನೆಪಗಳನ್ನು ಹೇಳಿ ಹಣಕೊಡದೇ ಸತಾಯಿಸಿ ವ್ಯವಸ್ಥಿತವಾಗಿ ಬೀದಿಗಿಳಿಯುವಂತೆ ಮಾಡಿ ಕೆಲವು ಗೂಂಡಾಗಳ ಮೂಲಕ ಸಕರ್ಾರಿ ಆಸ್ತಿ-ಪಾಸ್ತಿಗಳನ್ನು ನಾಶಗೈದು, ಅವರು ಮತ್ತೆ ಹಾಳು ಮಾಡುವಂತೆ ಮಾಡಿದ್ದು ನಾನು-ನೀವು ಕಟ್ಟಿದ ತೆರಿಗೆ ಹಣದ ವಸ್ತುಗಳನ್ನೇ. ಇಷ್ಟೆಲ್ಲಾ ರಾದ್ಧಾಂತದ ನಂತರ ಸಕರ್ಾರ ಕೃತಕ ಒತ್ತಡವನ್ನು ಸೃಷ್ಟಿಸಿಕೊಂಡು ಸಾವಿರಾರು ಕೋಟಿ ರೂಪಾಯಿಯ ಬೆಂಬಲ ಬೆಲೆಯನ್ನು ಕಬ್ಬು ಬೆಳೆಗಾರರಿಗೆ ಘೋಷಿಸಿತ್ತಲ್ಲ, ಅದರಲ್ಲಿ ಎಷ್ಟು ಕಾಖರ್ಾನೆ ಮಾಲೀಕರಿಗೆ ಸೇರುತ್ತದೋ ಎಷ್ಟು ಬೆಳೆಗಾರರಿಗೆ ಸೇರುವುದೋ ದೇವರೇ ಬಲ್ಲ! ಆದರೆ, ನಾ ಕಟ್ಟಿದ ತೆರಿಗೆಯ ಹಣವಂತೂ ರೈತರ ಹೆಸರಲ್ಲಿ ಹೇಗೆ ಬಳಕೆಯಾಯ್ತೆಂಬುದೂ ಗೊತ್ತಾಗಲಿಲ್ಲ. ಸಾಲಮನ್ನಾದ್ದೂ ಅದೇ ಕಥೆ. ಸಕರ್ಾರಿ ಬ್ಯಾಂಕುಗಳಿಗೇ ಬರದ ರೈತ ಖಾಸಗಿಯವರ ಬಳಿ ಸಾಲ ತೆಗೆದುಕೊಳ್ಳುತ್ತಾನೆ. ಏಕೆಂದರೆ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಳ್ಳಲು ರೈತರಿಗೆ ತೀರಿಸುವ ಸಾಮಥ್ರ್ಯವಿದೆಯೋ ಇಲ್ಲವೋ ನೋಡುತ್ತಾರೆ. ತೀರಿಸುವ ಸಾಮಥ್ರ್ಯ ಇದ್ದವ ಸಾಲವನ್ನು ಆಲೋಚಿಸಿ ಪಡೆದುಕೊಳ್ಳುತ್ತಾನೆ. ಅತ್ತ ಖಾಸಗಿಯವರ ಬಳಿ ಸಾಲ ತೆಗೆದುಕೊಂಡ ರೈತ ಅದನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನಲ್ಲಾ, ಅವನ ಶವವನ್ನು ಮುಂದಿಟ್ಟುಕೊಂಡು ಕಣ್ಣೀರ್ಗರೆಯುವ, ಬೀದಿಗಿಳಿಯುವ ಈ ಸಿರಿವಂತರು ಸಾಲಮನ್ನಾಕ್ಕಾಗಿ ಕೂಗಾಡಲಾರಂಭಿಸುತ್ತಾರೆ. ಪಕ್ಷಗಳು ಚುನಾವಣೆಗೆ ಆ ಸಾಲಮನ್ನಾದ ಭರವಸೆ ಕೊಟ್ಟೇ ಮುಂದಡಿಯಿಡುತ್ತಾರೆ. ಕನರ್ಾಟಕದ ಚುನಾವಣೆ ನೆನಪಿರಬೇಕಲ್ಲ. ಅವೈಜ್ಞಾನಿಕವಾಗಿ ಪೂರ್ಣ ಸಾಲಮನ್ನಾ ಎಂದು ಭರವಸೆ ಕೊಟ್ಟ ಕುಮಾರಸ್ವಾಮಿಯವರಿಗೆ ತಾವು ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ ಎಂಬ ಸ್ಪಷ್ಟ ಪರಿಕಲ್ಪನೆ ಇತ್ತು. ಹೇಗೋ ಅಧಿಕಾರಕ್ಕೆ ಬಂದೊಡನೆ ಮುಂದೇನು ಮಾಡಬೇಕೆಂದು ತೋಚದೇ ಹೋರಾಟ ಮಾಡುತ್ತಿರುವ ರೈತರು ರೈತರೇ ಅಲ್ಲ ಎಂದುಬಿಟ್ಟರು. ಕೆಲವು ಸತ್ಯ ನಾಯಕರುಗಳಿಗೆ ಮಾತ್ರ ಗೊತ್ತಿರುತ್ತದೆ. ಏಕೆಂದರೆ ಹೋರಾಟದ ರೂಪು-ರೇಷೆಯನ್ನು ಕಾಲಕಾಲಕ್ಕೆ ಅವರೇ ಹಾಕಿಕೊಟ್ಟಿರುತ್ತಾರಲ್ಲ! ಆದರೆ ಮತ್ತೆ ವಿಷಯಕ್ಕೆ ಬನ್ನಿ. ಕೊನೆಗೂ ಸಕರ್ಾರಗಳು ಅಧಿಕಾರಕ್ಕೆ ಬಂದು ರೈತರ ಸಾಲಮನ್ನಾ ಮಾಡುತ್ತವಲ್ಲ, ಮತ್ತದು ನಾನು-ನೀವು ಕಟ್ಟಿದ ತೆರಿಗೆ ಹಣವೇ. ದೇಶದ, ನಾಡಿನ ಅಭಿವೃದ್ಧಿಗೆಂದು ಕಟ್ಟಿದ ತೆರಿಗೆಯನ್ನು ಹೀಗೆ ರೈತರ ಸಾಲಮನ್ನಾ, ವಾಣಿಜ್ಯೋದ್ಯಮಿಗಳ ಸಾಲಮನ್ನಾ ಎನ್ನುತ್ತಾ ಹಣಕೊಟ್ಟು ಕೈ ತೊಳೆದುಕೊಳ್ಳುತ್ತಾ ಕುಳಿತರೆ ಇದು ವ್ಯವಸ್ಥಿತವಾದ ಸಮಸ್ಯೆಯೊಂದನ್ನು ಹುಟ್ಟುಹಾಕಿದಂತಾಗಲಾರದೇ? ಅಷ್ಟೆ ಅಲ್ಲದೇ, ಕಷ್ಟಪಟ್ಟು ದುಡಿದು ಸಕರ್ಾರಕ್ಕೆ ತೆರಿಗೆಯನ್ನು ಕಟ್ಟುವ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನತೆ ಒಟ್ಟಾರೆ ಅಭಿವೃದ್ಧಿ ಮತ್ತು ಪ್ರಗತಿಯನ್ನು ಕಾಣುವುದೇ ಬೇಡವಾ?!

ಹಾಗಂತ ಈ ಸಮಸ್ಯೆ ಇಲ್ಲಿ ಮಾತ್ರವಲ್ಲ. ಇಂಗ್ಲೆಂಡು ಕೂಡ ಇಂಥದ್ದೇ ಜ್ವಾಲಾಮುಖಿಯೊಂದರ ಮೇಲೆ ಕುಳಿತಿದೆ. ಅಲ್ಲಿ ಬಹಳ ಹಿಂದಿನಿಂದಲೂ ರಾಷ್ಟ್ರೀಯ ಆರೋಗ್ಯ ಯೋಜನೆಯೊಂದು ಜಾರಿಯಲ್ಲಿದೆ. ಇಂಗ್ಲೆಂಡಿನ ನಾಗರಿಕರಾದವರಿಗೆ ಆರೋಗ್ಯದ ನಿರ್ವಹಣಾ ವೆಚ್ಚ ಅಲ್ಲಿ ಸಂಪೂರ್ಣ ಉಚಿತ. ಅದು ಐದು ರೂಪಾಯಿ ಆಗಬಹುದು, 50 ಲಕ್ಷವೇ ಆಗಬಹುದು. ಹಾಗಂತ ಅದು ಅಲ್ಲಿ ಕಾಟಾಚಾರದ ವ್ಯವಸ್ಥೆ ಅಲ್ಲ. ಸಕರ್ಾರ ಇದಕ್ಕಾಗಿ ತೆರಿಗೆದಾರರ ಸಾವಿರಾರು ಕೋಟಿ ರೂಪಾಯಿ ಹಣವನ್ನು ಸುರಿ-ಸುರಿದು ಪಾತ್ರೆ ಬರಿದು ಮಾಡುತ್ತಿದೆ. ಪ್ರತಿ ಚುನಾವಣೆಯಲ್ಲೂ ಅವರ ಚಚರ್ೆಯ ಕೇಂದ್ರಬಿಂದು ಈ ಆರೋಗ್ಯ ಯೋಜನೆಯೇ. ಇದಕ್ಕೆ ಹೆಚ್ಚು ಹಣ ಕೊಡುತ್ತೇನೆನ್ನುವವರು ಗೆದ್ದು ಬರುತ್ತಾರೆ. ವ್ಯವಸ್ಥೆಯನ್ನು ಸರಿಪಡಿಸುತ್ತೇನೆನ್ನುವವರು ಮನೆಗೆ ಹೋಗುತ್ತಾರೆ. ಇಂಗ್ಲೆಂಡಿನಲ್ಲಿ ಅದಾಗಲೇ ತುಂಬಿಕೊಳ್ಳುತ್ತಿರುವ ನಿರಾಶ್ರಿತರೂ ಇದರ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ತೆರಿಗೆದಾರ ಈಗ ಬಾಯಿ-ಬಾಯಿ ಬಿಡುತ್ತಿದ್ದಾನೆ. ಬ್ರೆಕ್ಸಿಟ್ನ ಹಿಂದಿರುವ ಒಂದು ಪ್ರಮುಖವಾದ ಚಚರ್ೆಯೂ ಇದೇ ಆಗಿತ್ತು. ಇಂಗ್ಲೆಂಡ್ ಆಥರ್ಿಕ ಮುಗ್ಗಟ್ಟಿಗೆ ಸಿಲುಕಿ ಜಗತ್ತಿನ ರಾಷ್ಟ್ರಗಳ ಮುಂದೆ ದಯನೀಯ ಸ್ಥಿತಿಗೆ ಬಂದಿರುವುದೇ ಈ ಕಾರಣದಿಂದ ಎಂದೂ ಮಾತನಾಡಿಕೊಳ್ಳಲಾಗುತ್ತದೆ.

2

ನರೇಂದ್ರಮೋದಿಯವರ ಆಗಮನದ ನಂತರ ಈ ಥರದ ಎಲ್ಲಾ ಕುರುಡು ಯೋಜನೆಗಳಿಗೆ ನಿಸ್ಸಂಶಯವಾಗಿ ಬ್ರೇಕ್ ಬಿದ್ದಿತ್ತು. ಆಥರ್ಿಕ ಸೌಲಭ್ಯವನ್ನು ನೇರವಾಗಿ ಆಯಾ ವ್ಯಕ್ತಿಗಳ ಅಕೌಂಟಿಗೆ ಸೇರುವಂತೆ ಮಾಡುವ ಮೊದಲ ಪ್ರಯಾಸದಿಂದಲೇ ಅನೇಕ ಬಗೆಯ ಭ್ರಷ್ಟಾಚಾರಗಳು ನಿಂತಿದ್ದವು. ರೈತರ ವಿಚಾರದಲ್ಲಿ ಮೋದಿ ವ್ಯವಸ್ಥೆಯನ್ನೇ ಪುನರ್ ರೂಪಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಪ್ರತಿಯೊಬ್ಬ ರೈತನಿಗೂ ಮಣ್ಣಿನ ಆರೋಗ್ಯದ ಕಾಡರ್್ ವಿತರಿಸುವ ಅವರ ಪ್ರಯತ್ನ ರೈತನನ್ನು ಸ್ಥಳೀಯ ಕೃಷಿ ಕಾಲೇಜುಗಳೊಂದಿಗೆ ಜೋಡಿಸುವುದಾಗಿತ್ತು. ಅದರರ್ಥ ರೈತ ಮತ್ತು ಆಧುನಿಕ ವಿಜ್ಞಾನವನ್ನು ಬೆಸೆಯುವುದು. ಹಾಗಂತ ಎಲ್ಲವನ್ನೂ ಆಧುನಿಕಗೊಳಿಸಿಬಿಡುವ ಹುಚ್ಚೇನು ಅವರಿಗಿರಲಿಲ್ಲ. ವಿಜ್ಞಾನಿಯೂ ರೈತನ ಮಾತು ಕೇಳುವಂತಾಗಲೆಂದು ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ಜಾರಿಗೆ ತಂದರು. ಅದು ರೈತನ ಪರಂಪರಾನುಗತ ಕೃಷಿ ಪದ್ಧತಿಗೆ ವಿಜ್ಞಾನದ ಮುದ್ರೆಯೊತ್ತುವ ಪರಿ. ರೈತ ಬರಿ ಕೃಷಿಯಷ್ಟೇ ಅಲ್ಲದೇ ಅದಕ್ಕೆ ಪೂರಕವಾದ ಕೆಲಸಗಳಲ್ಲೂ ತೊಡಗಲೆಂದೇ ಡೈರಿಗೆ ಸಂಬಂಧಪಟ್ಟ ಮೂಲಸೌಕರ್ಯದ ಅಭಿವೃದ್ಧಿಗೆ ಹಣವನ್ನು ಮೀಸಲಿಟ್ಟಿದ್ದೂ ಮೋದಿ ಸಕರ್ಾರವೇ. ಕೃಷಿ ಮಾರುಕಟ್ಟೆಯನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅಭಿವೃದ್ಧಿಗೊಳಿಸಿ ಅದನ್ನು ಬಲು ಸುಂದರ ರೂಪದಲ್ಲಿ ರೈತರ ಮುಂದಿರಿಸುವ ಪ್ರಯತ್ನ ಮಾಡಿದ್ದು ಇದೇ ಸಕರ್ಾರ. ಕೃಷಿಯಲ್ಲಿ ಆವಿಷ್ಕಾರವನ್ನು ಬೆಂಬಲಿಸುವ ಅಗ್ರಿ-ಉಡಾನ್ ಯೋಜನೆಯನ್ನು ತಂದು ಕೃಷಿಕರಿಗೆ ನೂತನ ಸಂಶೋಧನೆಗೆ ಪ್ರೇರಣೆ ನೀಡಿದ್ದೂ ಮೋದಿಯವರೇ. ಎಲ್ಲ ಬಿಟ್ಟರೂ ಬೆಳೆಗಳಿಗೆ ಮುನ್ನವೇ ವಿಮೆ ಮಾಡಿಸಿ ಬೆಳೆ ನಷ್ಟಗೊಂಡರೆ ಅದಕ್ಕೆ ಸೂಕ್ತವಾದ ವಿಮೆ ಹಣ ದೊರಕುವಂತೆ ವೈಜ್ಞಾನಿಕವಾಗಿ ಆಲೋಚನೆ ನಡೆಸಿದ್ದೂ ನರೇಂದ್ರಮೋದಿಯವರೇ. ಅವರ ಫಸಲ್ ಬಿಮಾ ಯೋಜನೆ ಆರಂಭದ ತೊಡಕುಗಳ ನಡುವೆಯೂ ಕೂಡ ಅನೇಕರಿಗೆ ಸಾಕಷ್ಟು ನಷ್ಟವನ್ನು ಸರಿದೂಗಿಸಿಕೊಟ್ಟಿದೆ ಎಂಬುದನ್ನಂತೂ ಅಲ್ಲಗಳೆಯಲಾಗದು. ಮತ್ತು ಈ ಯೋಜನೆಯಲ್ಲಿ ಮಧ್ಯವತರ್ಿಗಳ ಬದುಕು ನಡೆಯದಿರುವುದರಿಂದ ಅವರೆಲ್ಲರೂ ಇದರಲ್ಲಿ ತಪ್ಪುಗಳನ್ನು ಹುಡುಕುತ್ತಾ ಕೂತಿದ್ದಾರೆ.

3

ಸಂತೋಷವೇ. ನರೇಂದ್ರಮೋದಿಯವರು ಈಗ ಇದ್ದಕ್ಕಿದ್ದಂತೆ ಮಧ್ಯಮವರ್ಗದವರ ವಿರೋಧಿಯಾಗಿದ್ದಾರೆ, ಮುಸಲ್ಮಾನರ ವಿರೋಧಿಯಾಗಿದ್ದಾರೆ, ದಲಿತರ ವಿರೋಧಿಯಾಗಿದ್ದಾರೆ, ಬ್ರಾಹ್ಮಣರ ವಿರೋಧಿಯಾಗಿದ್ದಾರೆ. ಒಟ್ಟಾರೆ ಅವರು ದೇಶದ ಪರವಾಗಿ ಮಾತ್ರ ಇರೊದು. ದುರಂತವೆಂದರೆ ಅವರನ್ನು ಬೆಂಬಲಿಸಿಕೊಂಡು ಬಂದಿದ್ದವರೆಲ್ಲಾ ಅವರ ಸೋಲಿಗೆ ಕಾರಣವನ್ನು ವಿಶ್ಲೇಷಿಸುವ ಭರದಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಸ್ವತಃ ಕಾಂಗ್ರೆಸ್ಸಿಗರೇ ನಾಚುವಷ್ಟರ ಮಟ್ಟಿಗೆ ಭಾಜಪದ ಬೆಂಬಲಿಗರೇ ಮೋದಿಯವರನ್ನು ಆಡಿಕೊಳ್ಳುತ್ತಿದ್ದಾರಷ್ಟೇ ಅಲ್ಲದೇ ಮೋದಿಯವರೂ ಒಂದಷ್ಟು ಜನಪ್ರಿಯ ಘೋಷಣೆಗಳನ್ನು ಮಂಡಿಸಿಬಿಡಬೇಕೆಂದು ಬಯಸುತ್ತಿದ್ದಾರೆ. ಸ್ವಾತಂತ್ರ್ಯದ 70 ವರ್ಷಗಳ ನಂತರ ಮೊದಲ ಬಾರಿಗೆ ಭಾರತ ಹೊಸ ಬಗೆಯ ರಾಜನೀತಿಯತ್ತ ಕಾಲಿಡುತ್ತಿದೆ. ಈ ರಾಜನೀತಿಯಲ್ಲಿ ರಾಷ್ಟ್ರಹಿತವೇ ಮುಖ್ಯವಾಗಿದೆಯೇ ಹೊರತು, ವ್ಯಕ್ತಿಯ, ಕುಟುಂಬದ, ಜಾತಿಯ ಹಿತವಲ್ಲ. ಇಂತಹ ಹೊತ್ತಿನಲ್ಲಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡದೇ ಹೋದರೆ ಬಲುದೊಡ್ಡ ಅಪಾಯಕ್ಕೆ ಮುನ್ಸೂಚನೆ ಹಾಡಿದಂತಾಗುತ್ತದೆ. ನರೇಂದ್ರಮೋದಿಯವರನ್ನು ಬಿಟ್ಟು ನಾವು ಆಯ್ಕೆ ಮಾಡಿಕೊಳ್ಳಲು ಹೊರಟಿರುವ ಮತ್ತೊಂದು ಮುಖ ರಾಹುಲ್ನದ್ದು ಎಂದು ಕೇಳಲಿಕ್ಕೆ ನನಗೆ ನಾಚಿಕೆಯೆನಿಸುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಮುನ್ನ ಗುಲಾಮ್ ನಬಿ ಆಜಾದ್ರ ಅಹ್ಮದ್ ಪಟೇಲರ ಮತ್ತು ಜ್ಯೋತಿರಾದಿತ್ಯ ಸಿಂಧ್ಯಾನ ಮಾತನ್ನು ಕೇಳಿ ಉತ್ತರಿಸುವ ರಾಹುಲ್ ಭಾರತವನ್ನು ಪ್ರತಿನಿಧಿಸಿದರೆ ನಮ್ಮ ಅಂತರರಾಷ್ಟ್ರೀಯ ಗೌರವದ ಬೆಲೆಯೆಷ್ಟಿರಬಹುದೆಂದು ಊಹಿಸಲೂ ಕಷ್ಟವೆನಿಸುತ್ತದೆ. ಹಾಗೇನಾದರೂ ಈ ಚುನಾವಣೆಯಲ್ಲಿ ಭಾರತದ ಆಯ್ಕೆ ಮಹಾಘಟಬಂಧನದ ಈ ಮುಖಗಳೇ ಎನ್ನುವುದಾದರೆ ಖಂಡಿತವಾಗಿಯೂ ಸೋಲು ನರೇಂದ್ರಮೋದಿಯವರದ್ದಾಗಿರುವುದಿಲ್ಲ, ಸಮಗ್ರ ಭಾರತದ್ದೇ ಆಗಿರುತ್ತದೆ. ಹೀಗಾಗಿಯೇ ಈ ಬಾರಿ ಗೆಲ್ಲಬೇಕಿರುವುದು ಮೋದಿಯಲ್ಲ ಭಾರತ!

4

ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಅಪಾರವಾದ ಸಾಧನೆಯನ್ನು ನಮಗಾಗಿ ಮಾಡಿಟ್ಟಿದ್ದಾರೆ. ಎಲ್ಲ ಪಕ್ಷಗಳು ಹೆಣಗಾಡುತ್ತಿದ್ದ ಜಿಎಸ್ಟಿಯನ್ನು ಜಾರಿಗೆ ತಂದು ನಮ್ಮ ಬದುಕನ್ನು ಸರಳಗೊಳಿಸಿದ್ದಾರೆ. ನೋಟ್ ಬಂದಿಯ ಮೂಲಕ ಸಾವಿರಾರು ಜನ ತೆರಿಗೆ ಕಳ್ಳರನ್ನು ಮುಖ್ಯವಾಹಿನಿಗೆ ತಂದುಬಿಟಿದ್ದಾರೆ. ಜನ್ಧನ್ ಮೂಲಕ ಹಳ್ಳಿಯ ಅಜ್ಜಿಯನ್ನು ಆಥರ್ಿಕ ಅಪ್ಪುಗೆಯಿಂದ ಬಂಧಿಸಿದ್ದಾರೆ. ಕುಸಿಯಬಹುದಾಗಿದ್ದ ಆಥರ್ಿಕತೆಯ ಪಟ್ಟಿಯಲಿದ್ದ ಭಾರತವನ್ನು ಜಗತ್ತಿನ ಶ್ರೇಷ್ಠ ಐದು ಸ್ಥಿತಿವಂತ ರಾಷ್ಟ್ರಗಳ ಸಾಲಿಗೆ ಸೇರಿಸಿದ್ದಾರೆ. ವ್ಯಾಪಾರ ಮಾಡುವ ಅಂತರರಾಷ್ಟ್ರೀಯ ಮಟ್ಟದ ರ್ಯಾಂಕಿಂಗ್ನಲ್ಲಿ ನಾವು ಸಾಕಷ್ಟು ಮೇಲಕ್ಕೇರಿಯಾಗಿದೆ. ಮನಸೋ ಇಚ್ಛೆ ಲೂಟಿಗೈಯ್ಯುತ್ತಿದ್ದ ರಿಯಲ್ ಎಸ್ಟೇಟ್ ಧಂಧೆಕೋರರು ಈಗ ತಹಬಂದಿಗೆ ಬಂದಿದ್ದಾರೆ. ಪಾಸ್ಪೋಟರ್್ಗೆ ತಿಂಗಳುಗಟ್ಟಲೆ ಅಲೆದಾಡಬೇಕಾಗುತ್ತಿತ್ತು. ಈಗ ಮೂರು ವಾರಗಳೊಳಗೆ ಪಾಸ್ಪೋಟರ್್ ನಿಮ್ಮ ಕೈ ಸೇರುತ್ತದೆ. ಹೈವೆಗಳು ಅತ್ಯಂತ ವೇಗವಾಗಿ ನಿಮರ್ಾಣಗೊಳ್ಳುತ್ತಿವೆ. ಗ್ರಾಮೀಣ ರಸ್ತೆಗಳು, ಗಡಿ ರಸ್ತೆಗಳು ಹಿಂದೆಂದೂ ಊಹಿಸದಷ್ಟು ವೇಗವಾಗಿ ನಿಮರ್ಾಣಗೊಳ್ಳುತ್ತಿವೆ. ಕನರ್ಾಟಕದಲ್ಲಿರಲಿ, ದೇಶದಲ್ಲಿರಲಿ ಪರಿವಾರದ ನಾಯಕರುಗಳನ್ನು ಮಾತನಾಡಿಸಿದರೆ ಆ ಪರಿವಾರದ ಗುಲಾಮರು ಕಚ್ಚಲು ಕಾಯುತ್ತಿರುತ್ತಾರೆ. ಆದರೆ, ಮೋದಿ ತಂಡದ ಪ್ರತಿಯೊಬ್ಬ ಮಂತ್ರಿಯೂ ಒಂದು ಟ್ವೀಟ್ಗೂ ಉತ್ತರಿಸುತ್ತಾನೆ. ಮೋದಿ ಬರುವ ಮುನ್ನ ಮೆಡಿಕಲ್ ಮಾಫಿಯಾ ನಡೆಯುತ್ತಿತ್ತು. ಆ ಜಾಗದಲ್ಲಿ ಕೈಗೆಟಕುವ ಜನರಿಕ್ ಅಂಗಡಿಗಳು ಬಂದಿವೆ. ಎಸಿ ಟ್ರೈನ್ಗಳಲ್ಲಿ ಹೋಗುವುದನ್ನೇ ಸಿರಿವಂತಿಕೆ ಎಂದು ಭಾವಿಸುತ್ತಿದ್ದ ಮಧ್ಯಮವರ್ಗದ ಜನ ಉಡಾನ್ನ ಮೂಲಕ ವಿಮಾನದಲ್ಲಿ ಸಲೀಸಾಗಿ ಪ್ರಯಾಣಿಸುತ್ತಿದ್ದಾರೆ.

ಇವೆಲ್ಲವೂ ಜನಪ್ರಿಯ ಘೋಷಣೆಗಳಲ್ಲ. ರಾಷ್ಟ್ರದ ಅಭಿವೃದ್ಧಿಗೆ ಬೇಕಾಗಿರುವಂತಹ ಪಥದರ್ಶಕಗಳು. ಉಳಿದವರೆಲ್ಲಾ ಘೋಷಣೆಗಳನ್ನು ಮಾಡಿ ವೋಟು ಪಡೆದುಕೊಂಡರೆ ಮೋದಿ ವೋಟು ಪಡೆದ ನಂತರ ಅವಡುಗಚ್ಚಿ ಕೆಲಸ ಮಾಡಿದರು. ಹೀಗಾಗಿಯೇ ಮೋದಿಯವರ ಮುಖದಲ್ಲಿ ಮಂದಹಾಸ ಮಾಯವಾಯ್ತೆಂದೆನಿಸಿದೊಡನೆ ಅನೇಕರಿಗೆ ಸಂಕಟವಾದಂತೆನಿಸುತ್ತದೆ. ಅವರನ್ನು ಗೆಲ್ಲಿಸಿಕೊಳ್ಳಲೇಬೇಕೆಂಬ ತುಡಿತಕ್ಕೆ ಒಳಗಾಗುತ್ತಾರೆ. ಅದಾಗಲೇ ಅನೇಕ ತಾಯಂದಿರು ಮನೆಯಲ್ಲಿ ಉಪವಾಸ ವ್ರತವನ್ನು ಆರಂಭಿಸಿಯಾಗಿದೆ. ಅನೇಕ ಕಡೆಯಲ್ಲಿ ಹೋಮಗಳು ಆರಂಭವಾಗಿವೆ. ಅನೇಕ ಸಂತರು ಜಪ-ತಪಾನುಷ್ಠಾನಕ್ಕೆ ತೊಡಗಿಬಿಟ್ಟಿದ್ದಾರೆ. ಓಹ್! ಇಂತಹ ನಾಯಕ ಬಹುಶಃ ಹಿಂದೆಂದೂ ರಾಷ್ಟ್ರಕ್ಕೆ ದಕ್ಕಿರಲಿಲ್ಲವೆನಿಸುತ್ತದೆ. ಮತ್ತೊಮ್ಮೆ ಮೋದಿ ಜಯಭೇರಿ ಬಾರಿಸಲಿ. ಮೂರು ಚುನಾವಣೆಗಳ ಸೋಲಿನ ಚಚರ್ೆ ಸಮರ್ಥಕರಲ್ಲಿ ಆತಂಕವನ್ನು ಹೆಚ್ಚಿಸಿ ಅದನ್ನು ಧನಾತ್ಮಕ ಶಕ್ತಿಯಾಗಿ ಪರಿವತರ್ಿಸಲಿ.

Comments are closed.