ವಿಭಾಗಗಳು

ಸುದ್ದಿಪತ್ರ


 

ಟ್ರಂಪ್-ಮೋದಿ ಹೊಸದೊಂದು ಮೋಡಿ!

ಯಾರಿಗೂ ಅನುಮಾನವೇ ಇಲ್ಲ. ಟ್ರಂಪ್ನ ಗೆಲುವಿಗೆ ಅಮೇರಿಕಾದಲ್ಲಿರುವ ಭಾರತೀಯರ ಸಹಕಾರ ಅತ್ಯಗತ್ಯ. ಈ ಹಿಂದೆ ಮೋದಿ ಅಮೇರಿಕಾಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಅದ್ದೂರಿಯಾಗಿ ಜರುಗಿದ ಹೌಡಿ ಮೋದಿ ಕಾರ್ಯಕ್ರಮ ಟ್ರಂಪ್ರ ಗೆಲುವಿಗೆ ಹೊಸ ರೂಪುಕೊಟ್ಟಿದೆ.

ಏನೇ ಹೇಳಿ ಅಮೇರಿಕಾ ಯಾವಾಗಲೂ ದೊಡ್ಡಣ್ಣನೇ. ಭಾರತಕ್ಕೆ ಟ್ರಂಪ್ ಬರುವುದು ಖುಷಿಯಾದ ಸಂಗತಿ ಎಂದು ಸಂಭ್ರಮಿಸುವವರ ನಡುವೆಯೇ ಅದನ್ನು ವಿರೋಧಿಸುವ ಜನರಿಗೂ ಕೊರತೆ ಇಲ್ಲ. ವಿರೋಧಿಸುವವರ ಕಾರಣಗಳು ಬಲು ಬಾಲಿಶವಾದ್ದು. ಅವರಿಗೆ ಟ್ರಂಪ್ ಮತ್ತು ಮೋದಿ ಜೊತೆಯಲ್ಲಿರುವುದರ ಅರ್ಥ ಮೋದಿ ಜಾಗತಿಕ ಶಕ್ತಿಯಾಗುವುದು ಎಂದು. ಮೋದಿಯನ್ನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲೇ ಇವರಿಗೆಲ್ಲಾ ಸಹಿಸಿಕೊಳ್ಳುವುದು ಕಷ್ಟವಾಗಿತ್ತು, ಇನ್ನು ಜಗತ್ತಿನೆತ್ತರಕ್ಕೆ ಬೆಳೆದು ನಿಂತರೆ ಆ ಸುನಾಮಿಯನ್ನು ಎದುರಿಸಿ ನಿಲ್ಲುವ ತಾಕತ್ತು ಯಾರಿಗಾದರೂ ಇದೆಯೇನು? ಹೀಗಾಗಿಯೇ ವಿರೋಧ ತೀವ್ರಗತಿಯದ್ದು. ಅದಕ್ಕೆ ಅವರು ಕೊಟ್ಟಿರುವ ರೂಪ ಬೇರೆಯಷ್ಟೇ. ಒಂದೆಡೆ ದಾರಿಯಲ್ಲಿರುವಂತಹ ಕೊಳಗೇರಿಗಳ ಮನೆಗಳನ್ನು ತೆಗೆಸಿದರೆಂದರು, ಅವು ಕಾಣದಂತೆ ಗೋಡೆ ಕಟ್ಟಿದ್ದಾರೆ ಎಂದು ಆರೋಪಿಸಿದರು, ಕೊನೆಗೆ ಟ್ರಂಪ್ ಬಂದು ಹೋದ ನಂತರವೂ ಭಾರತದ ಆಥರ್ಿಕ ಪರಿಸ್ಥಿತಿಯಲ್ಲಿ ವ್ಯತ್ಯಾಸ ಬರಲಾರದು ಎಂದೂ ಷರಾ ಬರೆದುಬಿಟ್ಟರು. ಎಲ್ಲವನ್ನೂ ಮೀರಿಸಿದ ಹೊಟ್ಟೆ ಹುಣ್ಣಾಗುವಷ್ಟು ನಗು ತರುವ ಆರೋಪವೆಂದರೆ ಈ ಭೇಟಿಗಾಗಿ ಭಾರತ ನೂರಾರು ಕೋಟಿ ರೂಪಾಯಿ ಖಚರ್ು ಮಾಡಿದೆ ಎಂಬುದು! ಅಚ್ಚರಿ ಏನು ಗೊತ್ತೇ? ಒಂದು ತರಂಗಗಳ ಹಗರಣದಲ್ಲೇ ಕಾಂಗ್ರೆಸ್ಸು ದೇಶಕ್ಕೆ ಲಕ್ಷಾಂತರ ಕೋಟಿರೂಪಾಯಿ ಪಂಗನಾಮ ಹಾಕಿತ್ತು. ಬಹುಶಃ ಮೋದಿಯಂತಹ ಕಠಿಣ ವ್ಯಕ್ತಿ ಅಲ್ಲಿ ಬಂದು ಕೂತಿರದಿದ್ದರೆ ಈ ಹರಾಜು ಪ್ರಕ್ರಿಯೆಯಲ್ಲಿ ಭಾರತ ಬಲುದೊಡ್ಡ ಪ್ರಮಾಣದ ಹಣವನ್ನು ನಷ್ಟಮಾಡಿಕೊಂಡಿರುತ್ತಿತ್ತು!

3

ನಮ್ಮ ಮುಂದಿರುವ ಪ್ರಶ್ನೆ ಟ್ರಂಪ್ ಭೇಟಿ ಅಗತ್ಯವಿತ್ತೇ ಎಂಬುದು ಮೊದಲನೆಯದಾದರೆ ಈ ಭೇಟಿಯನ್ನು ಇಷ್ಟು ಸಂಭ್ರಮಿಸಬೇಕಾ ಎಂಬುದು ಎರಡನೆಯದ್ದು. ಯಾರಿಗೂ ಅನುಮಾನವೇ ಇಲ್ಲ. ಟ್ರಂಪ್ನ ಗೆಲುವಿಗೆ ಅಮೇರಿಕಾದಲ್ಲಿರುವ ಭಾರತೀಯರ ಸಹಕಾರ ಅತ್ಯಗತ್ಯ. ಈ ಹಿಂದೆ ಮೋದಿ ಅಮೇರಿಕಾಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಅದ್ದೂರಿಯಾಗಿ ಜರುಗಿದ ಹೌಡಿ ಮೋದಿ ಕಾರ್ಯಕ್ರಮ ಟ್ರಂಪ್ರ ಗೆಲುವಿಗೆ ಹೊಸ ರೂಪುಕೊಟ್ಟಿದೆ. ಬೊರೀಸ್ ಜಾನ್ಸನ್ ಇಂಗ್ಲೆಂಡಿನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅದರ ಹಿಂದಿರುವ ಭಾರತೀಯರ ಶ್ರಮವನ್ನು ಕೊಂಡಾಡಿದ ನಂತರ ಅಮೇರಿಕಾದಲ್ಲೂ ಆ ಅಲೆ ಖಂಡಿತವಾಗಿಯೂ ವ್ಯಾಪಿಸಿಕೊಂಡಿದೆ. ಹೀಗಾಗಿಯೇ ಟ್ರಂಪ್ ಭಾರತಕ್ಕೆ ಬಂದು ಒಂದು ಮಹತ್ವದ ಸಂದೇಶವನ್ನು ಕೊಡುವುದು ಟ್ರಂಪ್ನ ದೃಷ್ಟಿಯಿಂದ ಅತ್ಯಗತ್ಯ, ಭಾರತಕ್ಕೂ ಅಷ್ಟೇ! ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತದೊಂದಿಗಿನ ಅಮೇರಿಕಾದ ಸಂಬಂಧ ಹಿಂದೆಂದಿಗಿಂತಲೂ ಬಲವಾಗಿದೆ. ಒಬಾಮಾ ಭಾರತವನ್ನು ಪ್ರೀತಿಸಿ ಗೌರವಿಸುತ್ತಿದ್ದುದು ನಿಜವಾದರೂ ಸುರಕ್ಷತೆಯೂ ಸೇರಿದಂತೆ ಅನೇಕ ವಿಚಾರಗಳಲ್ಲಿ ಆತ ಜಾಗತಿಕ ವೇದಿಕೆಗಳಲ್ಲಿ ಭಾರತವನ್ನು ಬಲವಾಗಿ ಸಮಥರ್ಿಸಿಕೊಂಡ ಉದಾಹರಣೆ ಇಲ್ಲ. ಟ್ರಂಪ್ ಹಾಗಲ್ಲ. ಅದು ವಿಶ್ವಸಂಸ್ಥೆಯ ಯಾವುದೇ ಕಾರ್ಯಕಲಾಪಗಳಲ್ಲಿ ಭಾರತದ ವಿಚಾರ ಬಂದಾಗ ಜೊತೆಗೆ ನಿಲ್ಲುವುದರಿಂದ ಹಿಡಿದು ಪ್ರತ್ಯಕ್ಷ ಚೀನಾ-ಪಾಕಿಸ್ತಾನಗಳೊಂದಿಗೆ ತಾಕಲಾಟ ನಡೆಯುವಾಗಲೂ ಆತ ಭಾರತವನ್ನು ಸಮಥರ್ಿಸಿಕೊಂಡಿದ್ದಾನೆ. ಸುಮ್ಮನೆ ವರ್ಷದ ಹಿಂದಿನ ಘಟನೆಯನ್ನು ನೆನಪಿಸಿಕೊಡುವುದಾದರೆ ಪುಲ್ವಾಮಾದಲ್ಲಿ ದಾಳಿಯಾಗಿ 80 ಕೇಜಿಯಷ್ಟು ಆರ್ಡಿಎಕ್ಸ್ ಸಿಡಿದು 45ಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದರಲ್ಲಾ, ಅವತ್ತು ಅಮೇರಿಕಾ ನಮ್ಮೊಡನೆ ಬಲವಾಗಿ ನಿಂತಿತ್ತು. ಬಾಲಾಕೋಟ್ನ ಮೇಲೆ ಭಾರತ ವಾಯುದಾಳಿ ನಡೆಸಿತ್ತಲ್ಲಾ ಅದು ಸಾಮಾನ್ಯವಾದ ಸಂಗತಿಯಾಗಿರಲಿಲ್ಲ. ಪಾಕಿಸ್ತಾನದ ಗಡಿಯೊಳಕ್ಕೆ ಸಾಕಷ್ಟು ದೂರ ಕ್ರಮಿಸಿ ಅವರ ಗುಪ್ತಕೇಂದ್ರಗಳನ್ನು ಧ್ವಂಸ ಮಾಡುವ ಪ್ರಕ್ರಿಯೆ ಅಂತರ್ರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸುವುದೇ ಆಗಿತ್ತು. ಸ್ವಲ್ಪ ಎಡವಟ್ಟಾಗಿದ್ದರೂ ಪಾಕಿಸ್ತಾನದಲ್ಲೇ ಹೊಡೆತ ತಿನ್ನುವುದು ಬಿಡಿ ಜಾಗತಿಕ ಮಟ್ಟದಲ್ಲಿ ನಾವು ಒಂಟಿಯಾಗಿಬಿಡುತ್ತಿದ್ದೆವು. ಆಗ ಟ್ರಂಪ್ ನಮ್ಮೊಂದಿಗೆ ನಿಂತ ರೀತಿ ಇದೆಯಲ್ಲಾ ಅದನ್ನು ಮರೆಯುವುದು ಸಾಧ್ಯವೇ ಇಲ್ಲ! ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಪ್ರತೀಕಾರದ ಕ್ರಮವನ್ನು ಬೆಂಬಲಿಸುವ ನಿರ್ಣಯವನ್ನು ಕೈಗೊಳ್ಳುವಲ್ಲಿ ಅಮೇರಿಕಾದ ಪಾತ್ರ ಬಲು ಮಹತ್ವದ್ದು. ಅಮೇರಿಕಾದ ಮನೋಗತ ಇಂಥದೆಂದು ಗೊತ್ತಾದ ನಂತರ ಪಶ್ಚಿಮದ ಯಾವ ರಾಷ್ಟ್ರವೂ ಮಿಸುಕಾಡಲಿಲ್ಲ. ಇನ್ನು ದುಬೈ ಸೇರಿದಂತೆ ಅನೇಕ ರಾಷ್ಟ್ರಗಳು ಅಮೇರಿಕಾವನ್ನು ಎದುರು ಹಾಕಿಕೊಳ್ಳಲಾಗದೇ ಪಾಕಿಸ್ತಾನದ ಮೇಲೆ ದಾಳಿಯಾದಾಗಲೂ ತೆಪ್ಪಗಿದ್ದುದು ಸಾಮಾನ್ಯವಾದ ಸಂಗತಿಯೇ ಅಲ್ಲ. ಉರಿ ದಾಳಿಗೆ ಪ್ರತೀಕಾರವಾಗಿ ನಾವು ನಡೆಸಿದ ಸಜರ್ಿಕಲ್ ಸ್ಟ್ರೈಕ್ನ ಕಥೆಯೂ ಇದೆ. ಆ ದಿನಗಳಲ್ಲಿ ನಮ್ಮ ಗೌರವವನ್ನು ಒಂದಿನಿತೂ ಕುಂದದಂತೆ ಕಾಪಾಡಿದ ಟ್ರಂಪ್ನ ಆಗಮನವನ್ನು ನಾವು ಸಂಭ್ರಮಿಸದೇ ಇದ್ದರೆ ಕೃತಘ್ಞರಾದೇವು!

4

ಇನ್ನು ಸೂಕ್ಷ್ಮವಾಗಿ ಅಮೇರಿಕಾದ ಇಂದಿನ ಸ್ಥಿತಿಗತಿಯನ್ನು ಅವಲೋಕಿಸಿದರೆ ಟ್ರಂಪ್ ಮತ್ತೊಮ್ಮೆ ಆಯ್ಕೆಯಾಗುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಎದುರಾಳಿಗಳು ಅದಾಗಲೇ ಹೆಚ್ಚು-ಕಡಿಮೆ ಕೈ ಚೆಲ್ಲಿಬಿಟ್ಟಿದ್ದಾರೆ. ಇನ್ನು ಯಾವುದಾದರೂ ಮ್ಯಾಜಿಕ್ ನಡೆದೇ ಟ್ರಂಪ್ ಸೋಲಬೇಕು ಅಷ್ಟೇ. ಹೀಗಿರುವಾಗ ಮುಂದೆ ಗೆಲ್ಲಲಿರುವ ಟ್ರಂಪ್ನಿಂದ ನಾವು ಭಾರತಪರವಾದ ಅನೇಕ ನಿರ್ಣಯಗಳನ್ನು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಇದು ರಾಜತಾಂತ್ರಿಕತೆಯ ಒಂದು ಭಾಗ ಅಷ್ಟೇ. ಈಗ ಜಾಗತಿಕ ಮಟ್ಟದಲ್ಲಿ ಕುಸಿದಿರುವ ಆಥರ್ಿಕತೆ ಟ್ರಂಪ್ನ ಮರುಆಯ್ಕೆಯ ನಂತರ ಚೇತರಿಸಿಕೊಳ್ಳಲಿದೆ ಎಂಬುದು ಹಗಲಿನಷ್ಟೇ ನಿಚ್ಚಳವಾದ ಸಂಗತಿ. ಹಾಗಾದಾಗ ನಮ್ಮ 5 ಟ್ರಿಲಿಯನ್ ಡಾಲರ್ನ ಗುರಿ ಮುಟ್ಟಲು ಸಹಜವಾಗಿಯೇ ಅಮೇರಿಕಾದಿಂದ ಸಾಕಷ್ಟು ಸಹಕಾರ ದೊರಯಲಿರುವುದೂ ನಂಬಬಹುದಾದಂತಹ ಸಂಗತಿಯೇ. ಈ ಹಂತದಲ್ಲಿ ಭಾರತದೊಂದಿಗಿನ ವ್ಯಾಪಾರದ ಕುರಿತಂತೆ ಟ್ರಂಪ್ ನೀಡುತ್ತಿರುವ ಹೇಳಿಕೆಗಳು ತುಂಬಾ ತಲೆಕೆಡಿಸಿಕೊಳ್ಳಬೇಕಾಗಿರುವಂಥದ್ದಲ್ಲ ಏಕೆಂದರೆ ರಾಷ್ಟ್ರೀಯತೆಯ ಮಾತನ್ನೇ ಆಡಿಕೊಂಡು ಬಂದ ಟ್ರಂಪ್ ಚುನಾವಣೆಯ ಹೊತ್ತಲ್ಲಿ ಹೀಗೆ ಹೇಳದೇ ಹೋದರೆ ಅಲ್ಲಿನ ಮಾಧ್ಯಮಗಳಲ್ಲಿ ಬರಬಹುದಾದ ಪ್ರತಿಕ್ರಿಯೆಗಳನ್ನು ನಾವು ಇಲ್ಲಿ ಕುಳಿತು ಊಹಿಸಬೇಕಷ್ಟೇ. ಇನ್ನು ಭಾರತ ನೇರವಾಗಿ ಅಮೇರಿಕಾದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಬಹುದಾ? ಎಂಬ ಪ್ರಶ್ನೆಗೆ ಮಾಡಬಾರದು ಎಂದಷ್ಟೇ ಅಲ್ಲ, ಮಾಡುತ್ತಿಲ್ಲ ಎಂಬುದೂ ಉತ್ತರವೇ. ಮೋದಿ ಎಲ್ಲೂ ಟ್ರಂಪನ್ನು ಗೆಲ್ಲಿಸಿ ಎಂದು ಹೇಳುತ್ತಿಲ್ಲ, ಬದಲಿಗೆ ಟ್ರಂಪ್ ಗೆಲುವಿನಲ್ಲಿ ಭಾರತೀಯರ ಪಾತ್ರ ಎದ್ದು ಕಾಣುವಂತೆ ಮಾಡುತ್ತಿದ್ದಾರೆ. ಇದು ಜಗತ್ತಿಗೆ ಮಹತ್ವದ ಸಂದೇಶ.

ಬರಲಿರುವ ದಿನಗಳಲ್ಲಿ ಏಷ್ಯಾದಲ್ಲಿ ಭಾರತ ಅತ್ಯಂತ ಮಹತ್ವದ ರಾಷ್ಟ್ರವಾಗಿ ರೂಪುಗೊಳ್ಳುವಲ್ಲಿ ಈ ಭೇಟಿ ನಿಸ್ಸಂಶಯವಾಗಿ ಪ್ರಮುಖ ಪಾತ್ರ ವಹಿಸುತ್ತದೆ!

Comments are closed.