ವಿಭಾಗಗಳು

ಸುದ್ದಿಪತ್ರ


 

ತನ್ನವರು ನರಳುತ್ತಿರುವಾಗ ಅಮೇರಿಕಾಕ್ಕೆ ಓಡಿದ ಪಿಣರಾಯೀ!

ಯೋಗಿಯೊಬ್ಬ ಅಧಿಕಾರದಲ್ಲಿ ಕುಳಿತು ಸಂಕಲ್ಪ ಬದ್ಧನಾದರೆ ಏನು ಮಾಡಬಲ್ಲನೆಂಬುದಕ್ಕೆ ಆದಿತ್ಯನಾಥರು ಸಮರ್ಥವಾದ ಉದಾಹರಣೆಯಾದರು. ಇತ್ತ ಹತ್ತಾರು ಹತ್ಯೆಗಳಿಂದ ರಕ್ತ-ಸಿಕ್ತವಾಗಿದ್ದ ಕೈಗಳಿಂದ ಅಧಿಕಾರದ ಗದ್ದುಗೆ ಏರಿ ಕುಳಿತ ಪಿಣರಾಯಿ ಕೇರಳದ ಆಸ್ಪತ್ರೆಗಳು ಚೆನ್ನಾಗಿವೆ ಎಂದು ಬಡಾಯಿ ಕೊಚ್ಚಿದ್ದೇ ಬಂತು. ಈಗ ಚಿಕಿತ್ಸೆಗೆಂದು ಅಮೆರಿಕಾಕ್ಕೆ ಓಡಿದ್ದಾರೆ.

16

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಮೆರಿಕಾಕ್ಕೆ ಹೊರಟಿದ್ದಾರೆ. ಅಲ್ಲಿನ ಪ್ರತಿಷ್ಠಿತ ಮೇಯೋ ಕ್ಲಿನಿಕ್ನಲ್ಲಿ ಮೂರು ವಾರಗಳ ಕಾಲ ಇದ್ದು ಚಿಕಿತ್ಸೆ ಪಡೆದು ಮರಳಲಿದ್ದಾರೆ. ಆದರೆ ಯಾವ ಕಾಯಿಲೆಯ ಚಿಕಿತ್ಸೆಗೆಂದು ಮಾತ್ರ ಅವರು ಇದುವರೆಗೂ ಬಾಯಿ ಬಿಟ್ಟಿಲ್ಲ. ಕೆಲವರಿಗೆ ಇದೇ ಒಂದು ದೊಡ್ಡ ರೋಗ. ತಮಗಿರುವ ಕಾಯಿಲೆ ಏನೆಂದು ಹೇಳಿದರೆ ಮುಂದೇನಾಗಿಬಿಡುವುದೋ ಎಂಬ ಆತಂಕ. ಗೋವಾ ಮುಖ್ಯಮಂತ್ರಿ ಪರಿಕ್ಕರ್ಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅಮರಿಕೊಂಡಿತು. ಅವರು ಯಾರಿಗೂ ತಿಳಿಯದಂತೆ ಚಿಕಿತ್ಸೆ ಪಡೆದು ಬರಬಹುದಿತ್ತೇನೋ. ಆದರೆ ಅವರು ತನಗಿರುವ ಕಾಯಿಲೆ ಇಂಥದ್ದು ಎಂದು ಹೇಳಲು ಮುಲಾಜು ನೋಡಲಿಲ್ಲ. ಚಿಕಿತ್ಸೆ ಪಡೆದು ಮರಳಿ ಬಂದರು. ಸುಷ್ಮಾಸ್ವರಾಜ್ ತನ್ನ ಬದುಕಿನ ಅತ್ಯಂತ ಔನ್ನತ್ಯದಲ್ಲಿ ಇಂದು ನಿಂತಿದ್ದಾರೆ. ಆಕೆಯ ಕಿಡ್ನಿ ಕೆಲಸ ಮಾಡುವುದು ನಿಂತಿತು. ಹಾಗಂತ ಅದನ್ನು ದೇಶದ ಜನರಿಂದ ಮುಚ್ಚಿಡುವ ಪ್ರಯತ್ನ ಆಕೆ ಮಾಡಲಿಲ್ಲ. ಕಿಡ್ನಿ ಕಸಿ ಮಾಡಿಸಿಕೊಂಡು ಎಂದಿನಂತೆ ತಮ್ಮ ಚಟುವಟಿಕೆಗೆ ಹಾಜರಾಗಿಬಿಟ್ಟರು. ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಕಿಡ್ನಿ ಸಮಸ್ಯೆಯಿಂದಲೇ ಬಳಲುತ್ತಿದ್ದವರು. ಒಂದಷ್ಟು ದಿನ ಅವರ ಖಾತೆಯನ್ನು ಪಿಯೂಷ ಗೋಯಲ್ರಿಗೆ ವಗರ್ಾಯಿಸಬೇಕಾದ ಅನಿವಾರ್ಯತೆ ಉಂಟಾಯಿತಾದರೂ ಜೇಟ್ಲಿ ತಮ್ಮ ಕಾಯಿಲೆಯ ಕುರಿತಂತೆ ಯಾವುದನ್ನೂ ಗುಪ್ತವಾಗಿಡಲಿಲ್ಲ. ಪಿಣರಾಯಿ ವಿಜಯನ್ ಈಗ ಅಮೆರಿಕಾಕ್ಕೆ ಹೊರಟಿದ್ದಾರಲ್ಲಾ, ಯಾವ ಕಾಯಿಲೆಯ ಚಿಕಿತ್ಸೆಗಾಗಿ ಹೊರಟಿದ್ದಾರೆಂಬುದನ್ನು ಮಾತ್ರ ಬಾಯಿ ಬಿಡುತ್ತಿಲ್ಲ. ಅತ್ತ ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾ ಸಕರ್ಾರಿ ಖಚರ್ಿನಲ್ಲಿ ಚಿಕಿತ್ಸೆಗೆಂದು ಅಡ್ಡಾಡುತ್ತಿರುತ್ತಾರೆ. ಆಕೆಗಿರುವ ಸಮಸ್ಯೆ ಏನು? ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಯಾವುದು? ಎಂಬುದನ್ನು ಇದುವರೆಗೂ ಬಾಯಿಬಿಟ್ಟಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಇವುಗಳನ್ನೆಲ್ಲಾ ಹೇಳಲಾಗದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದೇ ಮಾಯವಾಗಿಬಿಡುತ್ತಾರೆ. ಕಾಂಗ್ರೆಸ್ಸಿನದು ಯಾವಾಗಲೂ ವಿತಂಡವಾದವೇ. ತನ್ನ ನಾಯಕಿಯ ಕಾಯಿಲೆಯ ವಿಚಾರವನ್ನು ಬಹಿರಂಗಪಡಿಸಬೇಕಾದಾಗ ಆಕೆಯ ಸುರಕ್ಷತೆ ಅಡ್ಡಿಯಾಗುತ್ತದೆ. ಆದರೆ ರಫೇಲ್ ಡೀಲ್ನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಒಂದಷ್ಟು ವಿಚಾರಗಳನ್ನು ಮುಚ್ಚಿಡಬೇಕೆಂದು ಕೇಳಿಕೊಂಡಾಗ ಮಾತ್ರ ಎಗರಾಡಲು ಶುರುಮಾಡುತ್ತಾರೆ. ಅವರದ್ದೂ ತಪ್ಪಿಲ್ಲ ಬಿಡಿ. ದೇಶದ ಸುರಕ್ಷತೆಗಿಂತ ತಮ್ಮ ಅಧಿನಾಯಕಿಯ ಸುರಕ್ಷತೆಯ ಕುರಿತಂತೆಯೇ ಅವರಿಗೆ ಕಾಳಜಿ ಹೆಚ್ಚು.

17

ಆದರೆ ಇಲ್ಲಿರುವ ಪ್ರಶ್ನೆ ಅದಲ್ಲ. ಉತ್ತರ ಪ್ರದೇಶದ ಗೋರಖ್ಪುರದ ಬಾಬಾ ರಾಘವ್ದಾಸ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ 104 ಮಕ್ಕಳು ಎನ್ಸೆಫೆಲೈಟೀಸ್ನಿಂದ ತೀರಿಕೊಂಡರಲ್ಲ; ಹಾಗೆ ಮಕ್ಕಳು ಸಾಯುವುದರಲ್ಲಿ ಅನೇಕ ಸಂಗತಿಗಳು ಅಡಗಿದ್ದವು. ಆಕ್ಸಿಜನ್ನ ಕೊರತೆಯಿತ್ತು. ಸಿಬ್ಬಂದಿಗಳಲ್ಲಿನ ಸಮನ್ವಯತೆಯ ಕೊರತೆಯಿತ್ತು. ಔಷಧಿಗಳ ಪೂರೈಕೆಯಲ್ಲಿ ಒಂದಷ್ಟು ಸಮಸ್ಯೆಗಳಾಗಿದ್ದವು. ಒಟ್ಟಾರೆ ಭಿನ್ನ-ಭಿನ್ನ ಕಾರಣಗಳಿಂದಾಗಿ ಮಕ್ಕಳ ಸಾವಿನ ದೃಶ್ಯವನ್ನು ದೇಶ ನೋಡಬೇಕಾಗಿ ಬಂದಿತ್ತು. ಈ ಹಿಂದೆ ಅದೇ ಆಸ್ಪತ್ರೆಗೆ ಯೋಗಿ ಆದಿತ್ಯನಾಥರು ಎರಡು ಬಾರಿ ಭೇಟಿ ನೀಡಿದ್ದಾಗಿಯೂ ಆಕ್ಸಿಜನ್ ಸಿಲಿಂಡರ್ಗೆ ಕೊಡಬೇಕಾದ ಬಾಕಿ ಹಣದ ಕುರಿತಂತೆ ಅಲ್ಲಿನ ಸಿಬ್ಬಂದಿ ಚಚರ್ೆಯೇ ಮಾಡಿರಲಿಲ್ಲ. ಅಲ್ಲಿರುವಂಥ ಸಮಸ್ಯೆಗಳ ಕುರಿತಂತೆ ಮುಖ್ಯಮಂತ್ರಿಗಳಿಗೆ ವಿಚಾರವನ್ನು ಮುಟ್ಟಿಸಬೇಕಾದ ಕೆಳಹಂತದ ಅಧಿಕಾರಿಗಳು ಸೋತು ಹೋಗಿದ್ದರು. ಅನೇಕ ದಶಕಗಳ ಕಾಲ ಎಸ್ಪಿ, ಬಿಎಸ್ಪಿಗಳ ಆಡಳಿತದಲ್ಲಿ ಗೂಂಡಾ ರಾಜ್ಯವನ್ನೇ ಕಂಡಂಥ ಉತ್ತರಪ್ರದೇಶಕ್ಕೆ ಈಗ ಏಕಾಕಿ ಬದಲಾವಣೆಗೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಹೊಸದಾಗಿ ಬಂದ ಮುಖ್ಯಮಂತ್ರಿಗಳಿಗೆ ಆದ್ಯತೆಯ ಆಧಾರದ ಮೇಲೆ ಮಾಡಲು ಅನೇಕ ಕೆಲಸಗಳಿದ್ದವು. ಅಷ್ಟರೊಳಗೆ ಇದೊಂದು ಅವಘಡ ನಡೆದು ಇಡಿಯ ಉತ್ತರಪ್ರದೇಶಕ್ಕೆ ಕಳಂಕ ಮೆಟ್ಟಿತ್ತು. ತಕ್ಷಣ ಜಾಗೃತರಾದ ಕಾಂಗ್ರೆಸ್ಸು ಮತ್ತು ಎಡಪಂಥೀಯ ಪಕ್ಷಗಳು ಮನಸೋ ಇಚ್ಛೆ ಯೋಗಿ ಆದಿತ್ಯನಾಥರ ವಿರುದ್ಧ ಮಾತನಾಡಲಾರಂಭಿಸಿದ್ದರು. ಇಂದು ಚಿಕಿತ್ಸೆಗೆಂದು ಅಮೆರಿಕಾಕ್ಕೆ ಓಡಿರುವ ಪಿಣರಾಯಿ ವಿಜಯನ್ ಟ್ವೀಟ್ ಮಾಡಿ ಯೋಗಿ ಆದಿತ್ಯನಾಥರನ್ನು ಕೇರಳಕ್ಕೆ ಆಹ್ವಾನಿಸಿದ್ದರು. ಏಕೆ ಗೊತ್ತೇ? ಕೇರಳದಲ್ಲಿ ಆಸ್ಪತ್ರೆಗಳು ಸಕರ್ಾರದಿಂದ ಅದೆಷ್ಟು ಚೆನ್ನಾಗಿ ನಡೆಸಲ್ಪಡುತ್ತಿವೆ ಎಂಬುದನ್ನು ಯೋಗಿ ನೋಡಲಿ ಅಂತ. ಬೈರಾಗಿಯಾದ ಉತ್ತರಪ್ರದೇಶದ ಮುಖ್ಯಮಂತ್ರಿಗೆ ಸ್ವೀಕರಿಸಿದ್ದನ್ನು ಮರಳಿ ಕೊಟ್ಟು ಅಭ್ಯಾಸ. ಹೀಗಾಗಿ ಅವರೂ ಸುಮ್ಮನಿರದೇ ಅಂಕಿ-ಅಂಶಗಳ ಸಮೇತ ಸರಿಯಾಗಿಯೇ ಪ್ರತಿಕ್ರಿಯಿಸಿದ್ದರು. ಡೆಂಗ್ಯೂ-ಚಿಕನ್ಗುನ್ಯಾಗಳಿಂದಲೇ ವರ್ಷವೊಂದಕ್ಕೆ 300 ಕ್ಕೂ ಹೆಚ್ಚು ಸಾವುಗಳು ಕೇರಳದಲ್ಲಿ ಆಗಿವೆ ಎಂದು ನೆನಪಿಸಿಕೊಟ್ಟು ಜನರ ಸೇವೆ ಮಾಡುವುದನ್ನು ಮೊದಲು ಕಲಿಯಿರಿ ಎಂಬ ಪ್ರತಿ ಹೇಳಿಕೆಯನ್ನು ಕೊಟ್ಟರು. ಹಾಗಂತ ಎಡಪಂಥೀಯರಂತೆ ಮಾತನಾಡುತ್ತಲೇ ಕಾಲ ಕಳೆದವರಲ್ಲ ಯೋಗಿಜಿ. ಗೋರಖ್ಪುರದಲ್ಲಿ ಮಕ್ಕಳ ಸಾವಿಗೆ ಕಾರಣವಾಗುವ ಅಂಶವನ್ನು ಪಟ್ಟಿಮಾಡಿಸಿದರು. 2010ರ ನಂತರದ ಏಳು ವರ್ಷಗಳ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ 26,000 ಕ್ಕೂ ಹೆಚ್ಚು ಮೆದುಳು ಜ್ವರದ ರೋಗಿಗಳು ದಾಖಲಾಗಿರುವುದು ಗಮನಕ್ಕೆ ಬಂತು. ಇದರಲ್ಲಿ 2000 ದಷ್ಟು ಮಕ್ಕಳು ಜಪಾನೀಸ್ ಎನ್ಸೆಫಲೈಟಿಸ್ನ ಲಕ್ಷಣವುಳ್ಳವರಾಗಿದ್ದರು. 4000 ಕ್ಕೂ ಹೆಚ್ಚು ಜನರ ಸಾವು ಈ ಕಾರಣಕ್ಕೆ ಆಗಿದ್ದನ್ನು ಗುರುತಿಸಿದ ಮುಖ್ಯಮಂತ್ರಿಗಳು ಅಧ್ಯಯನದ ಆಳಕ್ಕಿಳಿದಂತೆ 1978 ರ ನಂತರ ಗೋರಖಪುರವೊಂದರಲ್ಲೇ 6000ಕ್ಕೂ ಹೆಚ್ಚು ಮಕ್ಕಳು ಈ ರೋಗಕ್ಕೆ ಬಲಿಯಾಗಿರುವುದು ತಿಳಿದು ಬಂತು. ಭಾರತೀಯ ಆರೋಗ್ಯ ಸಂಸ್ಥೆ ಎಷ್ಟೇ ಪ್ರಯತ್ನ ಪಟ್ಟಾಗ್ಯೂ 2015 ರಲ್ಲಿ ಕಾಲು ಭಾಗದಷ್ಟು ಮಕ್ಕಳಿಗೂ ಇದರ ಪ್ರತಿರೋಧಕ ಶಕ್ತಿಗೆ ಬೇಕಾದ ವ್ಯಾಕ್ಸಿನ್ ನೀಡುವಲ್ಲಿ ಹಳೆಯ ಸಕರ್ಾರ ಸೋತುಹೋಗಿತ್ತು. ಸವಾಲು ಸ್ವೀಕರಿಸಿದ ಮುಖ್ಯಮಂತ್ರಿಗಳು ಈ ಘಟನೆಯಾದ ಕೆಲವೇ ತಿಂಗಳುಗಳಲ್ಲಿ ಉತ್ತರಪ್ರದೇಶದ ಅಷ್ಟೂ ಮಕ್ಕಳಿಗೆ ರೋಗನಿರೋಧಕ ಚುಚ್ಚು ಮದ್ದು ಕೊಡಿಸುವ ಸಂಕಲ್ಪ ಮಾಡಿದರು. ಸಂತನ ಸಂಕಲ್ಪವನ್ನು ತಡೆಯುವುದುಂಟೇನು? ದಸ್ತಕ್ ಎಂಬ ಹೆಸರಿನ ಈ ಅಭಿಯಾನ ಶುರುವಾದ ಕೆಲವೇ ತಿಂಗಳಲ್ಲಿ ರಾಜ್ಯದ ಪ್ರತಿಯೊಂದು ಮಗುವಿಗೂ ಔಷಧಿ ಕೊಡಿಸುವಲ್ಲಿ ಯಶಸ್ವಿಯೂ ಆದರು. ವಿಶ್ವಸಂಸ್ಥೆಯ ಆರೋಗ್ಯ ವಿಭಾಗ ಯೋಗಿ ಆದಿತ್ಯನಾಥರ ಈ ಸಾಧನೆಗೆ ಬೆನ್ನು ಚಪ್ಪರಿಸಿ ಅಭಿನಂದಿಸಿತು.

18

ಯೋಗಿಯೊಬ್ಬ ಅಧಿಕಾರದಲ್ಲಿ ಕುಳಿತು ಸಂಕಲ್ಪ ಬದ್ಧನಾದರೆ ಏನು ಮಾಡಬಲ್ಲನೆಂಬುದಕ್ಕೆ ಆದಿತ್ಯನಾಥರು ಸಮರ್ಥವಾದ ಉದಾಹರಣೆಯಾದರು. ಇತ್ತ ಹತ್ತಾರು ಹತ್ಯೆಗಳಿಂದ ರಕ್ತ-ಸಿಕ್ತವಾಗಿದ್ದ ಕೈಗಳಿಂದ ಅಧಿಕಾರದ ಗದ್ದುಗೆ ಏರಿ ಕುಳಿತ ಪಿಣರಾಯಿ ಕೇರಳದ ಆಸ್ಪತ್ರೆಗಳು ಚೆನ್ನಾಗಿವೆ ಎಂದು ಬಡಾಯಿ ಕೊಚ್ಚಿದ್ದೇ ಬಂತು. ಈಗ ಚಿಕಿತ್ಸೆಗೆಂದು ಅಮೆರಿಕಾಕ್ಕೆ ಓಡಿದ್ದಾರೆ. ರೋಗ ಅದೆಷ್ಟೇ ಕೆಟ್ಟದ್ದಾಗಿರಲಿ ಹಿಂದುವಾಗಿ ಅವರು ಗುಣವಾಗಿ ಬರಲೆಂದಷ್ಟೇ ಹಾರೈಸುತ್ತೇನೆ. ಆದರೆ ತಮ್ಮ ನಾಯಕ ವಿದೇಶದಲ್ಲಿ ಚಿಕಿತ್ಸೆ ಪಡೆಯುವುದನ್ನು ಪರಿಕ್ಕರ್ನನ್ನು ಮುಂದಿಟ್ಟು ಸಮಥರ್ಿಸಿಕೊಳ್ಳುತ್ತಿರುವ ಕೆಂಪಂಗಿ ಗುಲಾಮರನ್ನು ಕಂಡಾಗ ಮಾತ್ರ ಅಯ್ಯೋ ಪಾಪ ಎನಿಸುತ್ತದೆ. ಪರಿಕ್ಕರ್ ಗೊವಾದಲ್ಲಿ ಜಗತ್ಪ್ರಸಿದ್ಧ ಆಸ್ಪತ್ರೆಗಳಿವೆ ಎಂದು ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಅಮೆರಿಕಾದ ಬಂಡವಾಳಶಾಹಿ ನೀತಿಯನ್ನು ವಿರೋಧಿಸುತ್ತಾ ಕೂರಲಿಲ್ಲ. ತನ್ನ ಮಂತ್ರಿಗಳನ್ನು ಕಮ್ಯುನಿಸ್ಟರ ಅಡ್ಡ ಆಗಿರುವ ಕ್ಯೂಬಾದ ಅಧ್ಯಯನಕ್ಕೆಂದು ಕಳಿಸಲಿಲ್ಲ. ಕೊನೆಗೆ ಇತರ ರಾಜ್ಯಗಳಿಗಿಂತ ತನ್ನಲ್ಲಿ ವ್ಯವಸ್ಥೆಗಳು ಬಲು ಜೋರಾಗಿವೆ ಎಂದು ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಪ್ರವಾಹದಲ್ಲಿ ಮಿಂದೆದ್ದು ಜನ ನರಳುತ್ತಿರುವಾಗ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಾ ತನಗೆ ಪ್ರತಿಯಾಗಿ ಮತ್ತೊಬ್ಬನನ್ನು ನೇಮಿಸದೇ ವಿದೇಶದಿಂದಲೇ ಸಕರ್ಾರ ನಡೆಸುತ್ತೆನೆಂದು ಧಾಷ್ಟ್ರ್ಯ ತೋರುತ್ತಿರುವ ಪಿಣರಾಯಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರೆಯುವ ಎಲ್ಲ ಜೀವಪರವಾದ ಆ ಎಲ್ಲಾ ಮಿತ್ರರಿಗೆ ನಮೋ ಎನ್ನುತ್ತೇನೆ. ಇಲ್ಲಿ ನಮೋ ಎಂಬುದಕ್ಕೆ ಬೇರ್ಯಾವ ಅರ್ಥವನ್ನೂ ಕಲ್ಪಿಸಬೇಡಿ ಎಂದು ಕೋರಿಕೊಳ್ಳುವೆ ಕೂಡ!

Comments are closed.