ವಿಭಾಗಗಳು

ಸುದ್ದಿಪತ್ರ


 

ತಬಸ್ಸುಮ್ ಮೊದಲು ಹೆಣ್ಣು, ಆಮೇಲೆ ಮುಸ್ಲಿಮ್…

ಇತ್ತೀಚೆಗೆ ಮಂಗಳೂರಿನ ಹೆಣ್ಣುಮಗಳು ಸಬೀಹಾ ಬಾನು ನೈಜೀರಿಯಾದ ಅಬು ಬಕ್ರ್ ಅಲ್ ಮೌಮ್ ಅನ್ನು ಮದುವೆಯಾದಂತಹ ಚಿತ್ರಗಳು ಎಲ್ಲೆಡೆ ವ್ಯಾಪಕವಾಗಿ ಹರಡಿದ್ದವು. ವಿದೇಶದಿಂದ ಇಲ್ಲಿಗೆ ಬರುವ ಈ ವ್ಯಾಪಾರಿಗಳು ಇಲ್ಲಿನ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳೊಂದಿಗೆ ತಾತ್ಕಾಲಿಕ ಮದುವೆ ಮಾಡಿಕೊಂಡು ತಮ್ಮ ವ್ಯಾಪಾರದ ಕಾಂಟ್ರಾಕ್ಟ್ ಮುಗಿದೊಡನೆ ತಲಾಕ್ ಕೊಟ್ಟು ತಮ್ಮ ದೇಶಕ್ಕೆ ಮರಳಿಬಿಡುತ್ತಾರೆ. ಆ ಹುಡುಗಿ ಮತ್ತೊಬ್ಬ ವ್ಯಾಪಾರಿಗೆ ಆಹಾರವಾಗಲು ಕಾಯುತ್ತಿರುತ್ತಾಳೆ. ಬಹಳ ಹಿಂದೆ ತಬಸ್ಸುಮ್ ಳ ವಿಚಾರವಾಗಿ ಬರೆದ ಲೇಖನ ಇದೇ ತರದ್ದು. ಮತ್ತೊಮ್ಮೆ ಶೇರ್ ಮಾಡುತ್ತಿದ್ದೇನೆ. ಅವಕಾಶವಾದಾಗ ಓದಿ.

ನೆಲದ ಮಾತು

ಈಗ ಸಜ್ಜನ ಮುಸಲ್ಮಾನರು ಜಾಗೃತಗೊಳ್ಳಬೇಕಿದೆ. ಬೀದಿಗೆ ಬರಬೇಕಿರೋದು ವಿಶ್ವರೂಪಮ್‌ನ ವಿಚಾರಕ್ಕೋ ದೂರದರ್ಶನದಲ್ಲಿ ಪ್ರಸಾರಗೊಂಡ ಹಂದಿಮಾಂಸದ ಅಡುಗೆಯ ವಿಚಾರಕ್ಕೋ ಅಲ್ಲ. ಹೊರಾಟ ನಡೀಬೇಕಿರೋದು ಇಂತಹ ವಿಚಾರಕ್ಕೆ.

ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಭಾರತ ಮತ್ತೆ ಸುದ್ದಿಯಾಗಿದೆ. ಖಂಡಿತವಾಗಿಯೂ ಒಳ್ಳೆಯ ವಿಚಾರಕ್ಕಾಗಿಯಲ್ಲ; ತೀರಾ ಕೆಟ್ಟ ವಿಚಾರಕ್ಕೆ. ಹದರಾಬಾದಿಗೆ ಆಫ್ರಿಕಾದ, ಈಜಿಪ್ಟಿನ ಮುಸ್ಲಿಮ್ ಪ್ರವಾಸಿಗರು ವಿಪರೀತ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ. ದೇಶ ಸುತ್ತಾಡುವ ನೆಪದಲ್ಲಿ ಬಂದು ಬಡ ಮುಸ್ಲಿಮ್ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಇದು ದೀರ್ಘಕಾಲದ ಗಟ್ಟಿ ಮದುವೆಯಲ್ಲ; ಒಂದು ತಿಂಗಳ ಅವಧಿಯ ಲೈಂಗಿಕ ತೆವಲು ತೀರಿಸುವ ಕಾಂಟ್ರಾಕ್ಟ್ ಮದುವೆ!

ಮೊನ್ನೆ ಹದಿನೇಳು ವರ್ಷದ ನೌಶಿನ್ ತಬಸ್ಸುಮ್ ಇಂತಹಾ ಒಂದು ಗ್ಯಾಂಗಿನಿಂದ ತಪ್ಪಿಸಿಕೊಂಡು ಬಂದು ಪೊಲೀಸರೆದುರು ಕುಂತಾಗಲೇ ಸುದ್ದಿ ಬಯಲಿಗೆ ಬಂದಿದ್ದು. ಸೂಡಾನಿನ ನಲವತ್ತೊಂದು ವರ್ಷದ ವ್ಯಾಪಾರಿ ಒಂದು ಲಕ್ಷ ರೂಪಾಯಿಗೆ ಆಕೆಯನ್ನು ಮದುವೆಯಾಗಿದ್ದಾನೆ. ಒಪ್ಪಂದವೇ ಹಾಗಿದೆ. ಮದುವೆಯ ದಿನವೇ ತಲಾಖ್ ಪತ್ರಕ್ಕೂ ಸಹಿ ಹಾಕಬೇಕು. ಒಂದು ತಿಂಗಳ ಕಾಲ ಆತನ ಹೆಂಡತಿಯಾಗಿ ಸಹಕರಿಸಬೇಕು. ತನ್ನೂರಿಗೆ ಮರಳುವ ಮುನ್ನ ಆತ ಮೂರು ಬಾರಿ ’ತಲಾಖ್’ ಎಂದು ಹಾಸಿಗೆಯಿಂದಲೇ ನೇರವಾಗಿ ಏರ್‌ಪೋರ್ಟಿಗೆ ದೌಡಾಯಿಸುತ್ತಾನೆ. ಈನ ಹುಡುಗಿ ಮತ್ತೊಬ್ಬನಿಗಾಗಿ ಅಣಿಯಾಗಬೇಕು.

ಸಾಂದರ್ಭಿಕ ಚಿತ್ರ ಸಾಂದರ್ಭಿಕ ಚಿತ್ರ

ತಬಸ್ಸುಮ್‌ನ ಕಥೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಗಾಬರಿ ಹುಟ್ಟಿಸುವಂತಹ ಸತ್ಯಗಳು ಕಂಡಿವೆ. ಹೈದರಾಬಾದ್‌ನಲ್ಲಿ ತಿಂಗಳಿಗೆ ಏನಿಲ್ಲವೆಂದರೂ ಕನಿಷ್ಠ ಇಂತಹ ಹದಿನೈದು ಮದುವೆಗಳು ನಡೆಯುತ್ತವಂತೆ. ಈ ಕುಟುಂಬಗಳು ಅತ್ಯಂತ ದಾರಿದ್ರ್ಯದಲ್ಲಿವೆ ಮತ್ತು ಇಲ್ಲಿನ ಹೆಣ್ಣುಮಕ್ಕಳು ಬಲು ಸುಂದರಿಯರೆಂಬ ಕಾರಣಕ್ಕೆ ಸಿರಿವಂತ ಮುಸಲ್ಮಾನರು ಇಲ್ಲಿಗೆ ಬರುತ್ತಾರಂತೆ. ಸೂಡಾನಿನಲ್ಲಿ ಒಂದು…

View original post 630 more words

Comments are closed.