ವಿಭಾಗಗಳು

ಸುದ್ದಿಪತ್ರ


 

ತರುಣರೇಕೆ ಇಸ್ಲಾಂ ಬಿಡುತ್ತಿದ್ದಾರೆ!?

ಹಸನ್ ಸುರೂರ್ ಬರೆದಿರುವ ‘ಹು ಕಿಲ್ಡ್ ಲಿಬರಲ್ ಇಸ್ಲಾಂ’ ಎಂಬ ಪುಸ್ತಕದ ಆಯ್ದ ಭಾಗವನ್ನು ಟೆಲಿಗ್ರಾಫ್ ಪತ್ರಿಕೆ ಕಳೆದ ವರ್ಷ ಪ್ರಕಟಿಸಿತ್ತು. ತರುಣ ಮುಸಲ್ಮಾನರು ಇಸ್ಲಾಮನ್ನು ತೊರೆಯುತ್ತಿರುವುದೇಕೆ ಎಂಬ ಪ್ರಶ್ನೆ ಅಲ್ಲಿತ್ತು. ಸಾಕಷ್ಟು ದಾಖಲೆಗಳ ಸಮೇತ ಇಸ್ಲಾಂ ತೊರೆಯುತ್ತಿರುವವರ ಕುರಿತಂತೆ ವಿವರವಾದ ಮಾಹಿತಿ ಆ ಲೇಖನದಲ್ಲಿತ್ತು. ಅಂಕಿ-ಅಂಶಿಗಳು ನಿಜವೇ ಆಗಿದ್ದರೆ, ತರುಣರು ಇಸ್ಲಾಂ ತೊರೆಯುತ್ತಿರುವ ಕಾರಣ ಲೇಖನದಲ್ಲಿ ಹೇಳಿರುವ ಅಂಶಗಳೇ ಆಗಿದ್ದರೆ ಈಗಂತೂ ಜಗತ್ತಿನ ಬಹುಪಾಲು ಜನ ಮುಸಲ್ಮಾನರೇ ಆಗಿಲ್ಲವೆನಿಸುತ್ತದೆ. ಅಮೇರಿಕಾದ ದ ನ್ಯೂ ರಿಪಬ್ಲಿಕ್ ಪತ್ರಿಕೆ ಕೆಲವು ವರ್ಷಗಳ ಹಿಂದೆ ಈ ಕುರಿತಂತೆ ವರದಿ ಪ್ರಕಟಿಸಿದಾಗ ಸೌದಿ ಅರೇಬಿಯಾವೂ ಸೇರಿದಂತೆ ಮುಸಲ್ಮಾನ ರಾಷ್ಟ್ರಗಳೆಲ್ಲಾ ಒಮ್ಮೆ ಅವಾಕ್ಕಾಗಿಬಿಟ್ಟಿದ್ದವು. ಫ್ರೀ ಅರಬ್ಸ್ ಎಂಬ ಪತ್ರಿಕೆಯ ಸಂಪಾದಕ ಈ ಕುರಿತಂತೆ ಬರೆಯುತ್ತಾ ನಾಸ್ತಿಕವಾದದ ಕುರಿತಂತೆ ಫೇಸ್ಬುಕ್ಕಿನಲ್ಲಿ ಹುಡುಕಾಡುವಾಗ ಭಿನ್ನ ಭಿನ್ನ ಅರಬ್ ರಾಷ್ಟ್ರಗಳ ಪೇಜುಗಳು ಕಂಡುಬಂದವೆಂದು ಹೇಳಿದ್ದರು. ಇವುಗಳನ್ನು ಅನುಸರಿಸುವವರ ಸಂಖ್ಯೆ ಕೆಲವು ನೂರುಗಳಿಂದ ಹಿಡಿದು ಹತ್ತು ಸಾವಿರವನ್ನು ಮೀರಿತ್ತು ಎಂಬುದನ್ನು ಅವರು ಗುರುತಿಸಲು ಮರೆಯಲಿಲ್ಲ. ಅಮೇರಿಕಾದಂತಹ ರಾಷ್ಟ್ರದಲ್ಲೋ ಅಥವಾ ಭಾರತದಲ್ಲೋ ಈ ರೀತಿಯ ಪೇಜುಗಳಿದ್ದರೆ ಲಕ್ಷಾಂತರ ಅನುಯಾಯಿಗಳಿದ್ದರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಇಲ್ಲಿ ವಾಕ್ ಸ್ವಾತಂತ್ರ್ಯ ಇದೆ, ಆಲೋಚನೆಗೆ ಚೌಕಟ್ಟುಗಳಿಲ್ಲ. ಆದರೆ ಅರಬ್ ರಾಷ್ಟ್ರಗಳಲ್ಲಿ ಹಾಗಲ್ಲವೇ ಅಲ್ಲ. ನಾಲ್ಕು ಎಂದರೆ ಹೆಚ್ಚು ಮೂರು ಎಂದರೆ ಕಡಿಮೆ. ಷರಿಯಾ ಕಾನೂನುಗಳು ಯಾರನ್ನು ಯಾವಾಗ ತರಿದು ಬಿಸಾಡುವುದೋ ದೇವರೇ ಬಲ್ಲ. ಅಂಥದ್ದರಲ್ಲೂ ಈ ರೀತಿಯ ಅಲೋಚನೆಗಳು ಟಿಸಿಲೊಡೆಯುತ್ತಿವೆ ಎಂದರೆ ಕ್ರೌರ್ಯದಿಂದ ಕಟ್ಟಿದ ಸೌಧವೊಂದು ಕುಸಿದು ಬೀಳುವ ಕಾಲ ಸನ್ನಿಹಿತವಾಗಿದೆ ಎಂದೇ ಅರ್ಥ!

ಟ್ವಿಟರ್ನಲ್ಲೋ ಫೇಸ್ಬುಕ್ಕಿನಲ್ಲೋ ಎಕ್ಸ್ ಮುಸ್ಲೀಂ ಎಂದು ಕೊಟ್ಟು ನೋಡಿ. ಅನೇಕರು ಅದರಡಿಯಲ್ಲಿ ತಾವು ಇಸ್ಲಾಮನ್ನು ಬಿಟ್ಟಿರುವುದೇಕೆಂತಲೋ ನಾಸ್ತಿಕವಾದಿಗಳಾಗಿರುವುದು ಎಷ್ಟು ಸುಖವೆಂತಲೋ ಬಣ್ಣಿಸಿರುತ್ತಾರೆ. 2012ರಲ್ಲಿ ಗ್ಯಾಲಪ್ ಇಂಟರ್ನ್ಯಾಷನಲ್ ನಡೆಸಿದ ಸವರ್ೇಯೊಂದರಲ್ಲಿ ಸೌದಿಯ, ಹ್ಞಾಂ! ಸೌದಿಯ ಶೇಕಡಾ 5ರಷ್ಟು ಜನ ತಮ್ಮನ್ನು ತಾವು ಶ್ರದ್ಧೆಯಿಂದಲೇ ನಾಸ್ತಿಕವಾದಿಗಳಾದವರು ಎಂದು ಹೇಳಿಕೊಂಡಿದ್ದರು. ಸುಮಾರು 19 ಪ್ರತಿಶತದಷ್ಟು ಜನ ತಮ್ಮನ್ನು ತಾವು ತೀರಾ ಧಾಮರ್ಿಕವಲ್ಲ ಎಂದು ಪರಿಚಯಿಸಿಕೊಂಡಿದ್ದರು. ಈ ಸಂಖ್ಯೆ ಅಮೇರಿಕಾ, ಇಟಲಿ ಮೊದಲಾದ ರಾಷ್ಟ್ರಗಳಲ್ಲಿ ಇನ್ನೂ ಹೆಚ್ಚಾಗಿದೆ ಎಂಬುದನ್ನು ಮರೆಯುವಂತಿಲ್ಲ. ಮಧ್ಯ ಏಷ್ಯಾದಲ್ಲಿ ಅತ್ಯಂತ ಹೆಚ್ಚು ಡೌನ್ಲೋಡ್ ಆಗಿರುವ ಕೃತಿ ರಿಚಡರ್್ ಡಾಕಿನ್ನ ಗಾಡ್ ಡೆಲ್ಯೂಷನ್ ಎಂಬ ಪುಸ್ತಕ ಎನ್ನುವುದು ಗಮನಿಸಲೇಬೇಕಾದ ಸಂಗತಿ ಏಕೆಂದರೆ ಈ ಕೃತಿಯ ಲೇಖಕ ತನ್ನನ್ನು ತಾನು ನಾಸ್ತಿಕವಾದಿ ವಿಜ್ಞಾನಿ ಎಂದೇ ಕರೆದುಕೊಳ್ಳುತ್ತಾನೆ. ಮನೆಯ ಮಕ್ಕಳು ನಾಸ್ತಿಕವಾದದ ಸೆಳೆತಕ್ಕೆ ಒಳಪಡುತ್ತಿರುವುದನ್ನು ಕಂಡು ಗಾಬರಿಗೊಂಡ ಶ್ರದ್ಧಾವಂತ ಮುಸಲ್ಮಾನರು ಒಂದೆಡೆ ತಮ್ಮ ಮಕ್ಕಳನ್ನು ಮರಳಿ ತರುವಲ್ಲಿ ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ಈ ಸುದ್ದಿ ಹೊರಗೆ ಗೊತ್ತಾಗದಂತೆ ಮುಚ್ಚಿಡುವಲ್ಲಿ ಹರಸಾಹಸ ಮಾಡುತ್ತಿದ್ದಾರೆ. ಅದರಲ್ಲೂ ಧಾಮರ್ಿಕ ನಂಬಿಕೆಗಳ ವಿರುದ್ಧ ಮಾತನಾಡಿದವರನ್ನು ಕೊಂದೇಬಿಡುವ ಅರಬ್ ರಾಷ್ಟ್ರಗಳಲ್ಲಿ ಸುದ್ದಿಯನ್ನು ಮುಚ್ಚಿಟ್ಟು ಕಾಯುವುದು ಅತ್ಯಗತ್ಯವೇ ಸರಿ. ಅಮೇರಿಕಾದಲ್ಲಿ ವಾಸಿಸುತ್ತಿದ್ದ ಸೊಮಾಲಿಯಾದ ಮಹಾಡ್ ಓಲಾಡ್ನ ಕಥೆಯನ್ನು ದಿ ಎಕನಾಮಿಸ್ಟ್ 2018ರಲ್ಲಿ ಪ್ರಕಟಿಸಿತ್ತು. ಮಗ ಇಸ್ಲಾಮಿನ ಮೇಲೆ ಭರವಸೆ ಕಳೆದುಕೊಳ್ಳುತ್ತಿದ್ದಾನೆಂದು ಗೊತ್ತಾದಾಗ ಕೀನ್ಯಾ ಪ್ರವಾಸಕ್ಕೆ ಕರೆದೊಯ್ಯುತ್ತೇವೆಂದು ತಂದೆ-ತಾಯಿಯರು ಅವನನ್ನು ಪುಸಲಾಯಿಸಿದ್ದರು. ಅಲ್ಲಿ ಅವನನ್ನು ಮುಸ್ಲೀಂ ಮದರಸಾಕ್ಕೆ ಸೇರಿಸಿ ಮತ್ತೆ ಧರ್ಮದ ಕುರಿತಂತೆ ಆಸಕ್ತಿ ಮೂಡಿಸುವ ಪ್ರಯತ್ನ ಅವರದ್ದು. ವಿಮಾನದಲ್ಲಿರುವಾಗಲೇ ಈ ಕುರಿತ ಅನುಮಾನದಿಂದ ಎಚ್ಚರಗೊಂಡ ಮಹಾಡ್ ಇಳಿದೊಡನೆ ತಾಯಿಯ ಕೈಚೀಲದಿಂದ ಪಾಸ್ಪೋರ್ಟನ್ನು ಕಸಿದುಕೊಂಡು ಎಂಬೆಸ್ಸಿಗೆ ಹೋಗಿ ಅವರ ಸಹಕಾರದಿಂದ ಅಮೇರಿಕಾ ಮುಟ್ಟಿಕೊಂಡಿದ್ದ. ಇದು ಆತನೊಬ್ಬನ ಕಥೆಯಲ್ಲ. ಅರಬ್ ರಾಷ್ಟ್ರಗಳಿಂದ ತನ್ನನ್ನು ಉಳಿಸಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಹೆಣ್ಣುಮಕ್ಕಳು ಇಂದಿಗೂ ಕೇಳಿಕೊಳ್ಳುತ್ತಾರೆ!

ಹೀಗೆ ಇಸ್ಲಾಂ ಬಿಡುವುದೇಕೆನ್ನುವುದರ ಕುರಿತಂತೆ ಅನೇಕ ಚಚರ್ೆಗಳಾಗಿವೆ. ಆ ಮತದ ಆಕ್ರಮಣಕಾರಿ ನೀತಿಗಳು, ಇತರರನ್ನು ಭಯೋತ್ಪಾದನೆಯ ಮೂಲಕ ಕೊಲ್ಲುವುದಕ್ಕೆ ಅಲ್ಲಿಂದ ಪಡೆಯುವ ಪ್ರೇರಣೆ ಇವತ್ತಿನ ತರುಣರನ್ನು ಆ ಮತದಿಂದ ವಿಮುಖಗೊಳಿಸುತ್ತಿದೆ ಎಂಬುದು ಕೆಲವರ ವಾದವಾದರೆ ಬ್ರಿಯಾನ್ ವಿಟೇಕರ್ ತನ್ನ ಕೃತಿಯ ಸಂಶೋಧನೆಗೆ ತೊಡಗಿದ್ದಾಗ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ಅವನ್ನೆಲ್ಲಾ ಸುಳ್ಳೆಂದು ಸಾಬೀತುಪಡಿಸಿದ್ದಾರೆ. ಆತ ಹೇಳುವಂತೆ ಇಸ್ಲಾಮನ್ನು ತೊರೆದು ಬಂದಿರುವ ಬಹುತೇಕರು ಅದಕ್ಕೆ ಕಾರಣವಾಗಿ ಭಯೋತ್ಪಾದನೆಯನ್ನೋ ಮತಾಂಧತೆಯನ್ನೋ ಮುಂದಿಡುವುದಿಲ್ಲ. ಮತಗ್ರಂಥದಲ್ಲೇ ಇರುವ ಕೆಲವು ಅಸಂಬದ್ಧತೆಗಳ ಕುರಿತಂತೆ ಪ್ರಶ್ನೆಗೆ ಉತ್ತರ ಸಿಗದಾದಾಗ ಹೊರಹೋಗುತ್ತಿದ್ದಾರೆ ಅಂತ. ಮುಸಲ್ಮಾನರಲ್ಲದೇ ಒಳ್ಳೆಯ ವ್ಯಕ್ತಿತ್ವ ಹೊಂದಿರುವವರು ನರಕಕ್ಕೆ ಹೋಗುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅಲ್ಲಾಹ್ನಿಗೆ ಹಿಂದಿನದ್ದು, ಮುಂದಿನದ್ದು ಎಲ್ಲಾ ಗೊತ್ತಿರುವಾಗ ಕೆಲವರನ್ನು ಮಾತ್ರ ಕೆಟ್ಟ ಪಥದಲ್ಲಿ ನಡೆಸಿ ಆ ಕಾರಣಕ್ಕೆ ಅವರನ್ನೇ ಶಿಕ್ಷಿಸುವುದು ಯಾವ ನ್ಯಾಯ? ಭೂಮಿಯ ಮೇಲೆ ಹೆಂಡ ಕುಡಿಯುವುದನ್ನು ನಿಷೇಧಿಸಿ ಸ್ವರ್ಗದಲ್ಲಿ ಹೆಂಡದ ಹೊಳೆ ಹರಿಸುವುದೇಕೆ? ಎಂಬ ಅನೇಕ ಪ್ರಶ್ನೆಗಳನ್ನು ಅವರು ಕೇಳುತ್ತಾರೆ ಎಂದು ವಿಟೇಕರ್ ವಾದಿಸುತ್ತಾರೆ. ಹಾಗಂತ ಇಸ್ಲಾಂ ತೊರೆಯುವ ಮುನ್ನ ಸಾಕಷ್ಟು ಪರಿತಪಿಸಿ ಮೂಲಗ್ರಂಥಗಳನ್ನೆಲ್ಲ ಅಧ್ಯಯನ ಮಾಡಿ ತಾವು ಓದಿರುವ ಗ್ರಂಥವೂ ಕೂಡ ಅದರಂತೆಯೇ ಇದೆ ಎಂದು ಖಾತ್ರಿ ಪಡಿಸಿಕೊಂಡೇ ಬಿಟ್ಟುಹೋಗುತ್ತಾರೆ!

ಇವೆಲ್ಲದರೊಟ್ಟಿಗೆ ಜಗತ್ತಿನಾದ್ಯಂತ ಮುಸಲ್ಮಾನರು ನಡೆಸುತ್ತಿರುವ ದೊಂಬಿ-ಗಲಾಟೆಗಳು ಸಭ್ಯ, ಬುದ್ಧಿವಂತ, ಸಹನೆಯ ವ್ಯಕ್ತಿತ್ವವುಳ್ಳ ಯಾವ ಮುಸಲ್ಮಾನನನ್ನೂ ಸಂಪ್ರೀತಿಗೊಳಿಸಲಾರದು. ಇಂದಿನ ದಿನದ ಭಾವನೆ ಹೇಗಿದೆ ಎಂದರೆ ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಿದ್ದಂತೆ ಇತರರು ಬದುಕುವುದೇ ಸಾಧ್ಯವಿಲ್ಲ ಎಂಬಷ್ಟರಮಟ್ಟಿಗೆ. ಇದು ಅವರಲ್ಲಿ ಜಾಗೃತಿ ಮೂಡಿಸಬೇಕಾಗಿರುವ ಸಂಗತಿಗಳು. ಅಚ್ಚರಿ ಎಂದರೆ ಈ ಲೇಖನದಲ್ಲಿ ಅರಬ್ ರಾಷ್ಟ್ರಗಳಷ್ಟೇ ಅಲ್ಲದೇ, ಪಾಕಿಸ್ತಾನ, ಭಾರತಗಳಲ್ಲೂ ಕೂಡ ತರುಣ ಮುಸಲ್ಮಾನರು ತಮ್ಮ ಮತ ಬಿಟ್ಟು ತೆರಳುತ್ತಿರುವುದರ ಕುರಿತಂತೆ ಉಲ್ಲೇಖಿಸಲಾಗಿದೆ. ಆದರೆ ಹೀಗೆ ಮತ ತೊರೆದವರು ಯಾರಿಗೂ ಹೇಳದೇ ಅದನ್ನು ಬಚ್ಚಿಟ್ಟುಕೊಳ್ಳುವುದರಿಂದ ಅದು ಹೊರಬರುವುದಿಲ್ಲ ಎಂದೂ ಅಭಿಪ್ರಾಯ ಪಡುತ್ತಾರೆ.

ಏನೇ ಆಗಲಿ, ಸೌಹಾರ್ದಯುತವಾಗಿ ಬದುಕಲು ಎಲ್ಲರೂ ಪ್ರಯತ್ನಿಸಬೇಕಾಗಿರುವ ಹೊತ್ತು ಇದು. ನಾವು ನಾಲ್ಕೋ ಆರನೆಯದ್ದೋ ಶತಮಾನದಲ್ಲಿಲ್ಲ. 21ನೇ ಶತಮಾನದಲ್ಲಿದ್ದೇವೆ. ಆಧುನಿಕ ವಿಜ್ಞಾನದೊಂದಿಗೆ ಎಲ್ಲವನ್ನೂ ಒರೆಗೆ ಹಚ್ಚಿ ಸತ್ಯವನ್ನು ಅನುಸರಿಸಬೇಕಾದ ಸಾಮಥ್ರ್ಯ ಪಡೆದಿದ್ದೇವೆ. ಜಾಗೃತರಾಗುವ ಹೊತ್ತು ಬಂದಿದೆ!

Comments are closed.