ವಿಭಾಗಗಳು

ಸುದ್ದಿಪತ್ರ


 

ತಿರುಗುಬಾಣವಾಯ್ತು ಸಿದ್ದರಾಮಯ್ಯನ ದಾಳಗಳು!

ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ ಅಷ್ಟೇ. ಭಾಜಪಾ ಬಲು ಎಚ್ಚರಿಕೆಯ ನಡೆ ಇಡುತ್ತಿದೆ. ಮುಗ್ಧ ಅಲ್ಪಸಂಖ್ಯಾತರ ವಿಚಾರ ಬಂದಾಗ ಪಕ್ಷ ಮಾತನಾಡಲಿಲ್ಲ ಆದರೆ ಜನರೇ ಮಾತನಾಡಿಕೊಳ್ಳುವಂತಹ ವಾತಾವರಣ ಸೃಷ್ಟಿ ಮಾಡಿತು ಅದು. ಎಲ್ಲಿ ಹಿಂದೂಗಳ ಸಾವು ನಡೆದಾಗಲೂ ತಾನು ನೇರವಾಗಿ ಮಾತನಾಡದೇ ಜನರ ನಡುವೆ ಈ ಚಚರ್ೆ ಬಲವಾಗುವಂತೆ ಮಾಡುತ್ತಿದೆ. ಈ ಕಾರಣದಿಂದಾಗಿಯೇ ಸಿದ್ದರಾಮಯ್ಯನವರ ವಿರುದ್ಧದ ಅಂತಪ್ರ್ರವಾಹವೊಂದು ಅರಿವಿಲ್ಲದೇ ಹರಿಯುತ್ತಿದೆ.

ರಾಜ್ಯದ ಜನರ ಜಾತಿಗೆ ಹೊಸದೊಂದು ಸೇರ್ಪಡೆಯಾಗಿದೆ! ಮುಗ್ಧ ಅಲ್ಪಸಂಖ್ಯಾತರದ್ದು. ಸಿದ್ದರಾಮಯ್ಯನವರು ಕನರ್ಾಟಕವನ್ನು ಹಿಂದೂ-ಮುಸ್ಲೀಂ ಕದನ ಭೂಮಿಯನ್ನಾಗಿಸಿ ಮುಸಲ್ಮಾನರ ವೋಟುಗಳನ್ನು ಬಾಚಿ ಅಧಿಕಾರ ಗಟ್ಟಿ ಮಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಭಾಜಪಾವನ್ನು ಉಗ್ರ ಹಿಂದುತ್ವವಾದಿ ಪಕ್ಷವೆಂದು ಬಿಂಬಿಸಿ ಮುಸಲ್ಮಾನರ ಹೃದಯದೊಳಗೆ ಆತಂಕ ಜಾಗೃತಗೊಳಿಸುವ ಅವರ ಪ್ರಯತ್ನ ಎಡೆಬಿಡದೇ ನಡೆದೇ ಇದೆ. ತಾನು ಮುಸಲ್ಮಾನರ ಪರವೆಂದೂ ಭಾಜಪಾ ಬಂದರೆ ಅವರಿಗಿರುವ ಈ ಅವಕಾಶಗಳು ಕೈ ತಪ್ಪಿಹೋಗುವವೆಂದೂ ನಂಬಿಸುವ ಸುದೀರ್ಘ ಪ್ರಯತ್ನ ಅದು.

1

ರಾಜ್ಯದ ರಾಜಕೀಯ ಲೆಕ್ಕಾಚಾರಗಳೂ ಹಾಗೆಯೇ ಇವೆ. ಲಿಂಗಾಯತ, ಕುರುಬ, ದಲಿತ ಅಥವಾ ಗೌಡ ಇವ್ಯಾವುದಾದರೂ ಒಂದು ಸಮಾಜದೊಂದಿಗೆ ಮುಸಲ್ಮಾನರು ಪೂರ್ಣ ಪ್ರಮಾಣದಲ್ಲಿ ನಿಂತರೆಂದರೆ ಆ ಪಕ್ಷ ಅಧಿಕಾರದ ಹತ್ತಿರಕ್ಕೆ ಬರುವುದು ಖಾತ್ರಿ. ತಿಪ್ಪರಲಾಗ ಹೊಡೆದರೂ ಗೌಡ ಸಮಾಜ ಸಿದ್ದರಾಮಯ್ಯನವರನ್ನು ನಂಬಲಾರದು. ಅವರದ್ದೇನಿದ್ದರೂ ದೇವೇಗೌಡರಿಗೆ ಆತುಕೊಳ್ಳುವ ಸ್ವಭಾವ. ಅವರೊಂದಿಗೆ ಮುಸಲ್ಮಾನರನ್ನು ಹೋಗದಂತೆ ತಡೆದರಾಯ್ತು. ಹೀಗಾಗಿ ಕುಮಾರಸ್ವಾಮಿ ಸಿದ್ದರಾಮಯ್ಯನವರಿಗೊಂದು ಸವಾಲೇ ಅಲ್ಲ. ಅವರಿಗೆ ಪ್ರಬಲವಾದ ಪೈಪೋಟಿ ಯಡ್ಯೂರಪ್ಪನವರೇ!

ಅದಾಗಲೇ ಲಿಂಗಾಯತ ಸಮಾಜವನ್ನು ವಿಭಜಿಸಿ ಯಡ್ಯೂರಪ್ಪನವರನ್ನು ಅಧಿಕಾರದ ಕುಚರ್ಿಯಿಂದ ದೂರವಾಗಿಸುವ ಷಡ್ಯಂತ್ರದಲ್ಲಿ ಯಶಸ್ವಿಯಾಗಿದ್ದೇನೆಂದು ಬೀಗುತ್ತಿದ್ದ ಸಿದ್ದರಾಮಯ್ಯನವರಿಗೆ ಈಗೊಂದು ಬಲವಾದ ಆತಂಕ ಕಾಡುತ್ತಿದೆ. ತನ್ನ ದಾಳವನ್ನು ಅರಿತ ಲಿಂಗಾಯತ ಸಮಾಜ ಈಗ ತಿರುಗಿಬಿದ್ದಿದೆ; ಪ್ರತ್ಯೇಕ ಧರ್ಮವೂ ಇಲ್ಲ, ಲಿಂಗಾಯತ ಮುಖ್ಯಮಂತ್ರಿಯೂ ಇಲ್ಲ ಎಂಬ ದುರಂತ ನಾಟಕದ ಪಾತ್ರವಾಗಿರುವುದನ್ನು ಅಥರ್ೈಸಿಕೊಂಡಿರುವ ಈ ಸಮಾಜದ ಮುಖಂಡರು ಈಗ ಮೊದಲಿಗಿಂತ ಬಲವಾಗಿ ಯಡ್ಯೂರಪ್ಪನವರ ಸಮೀಪಕ್ಕೆ ಬರಲಾರಂಭಿಸಿದ್ದಾರೆ. ಸಿದ್ದರಾಮಯ್ಯನವರು ಲಿಂಗಾಯತ ಧರ್ಮದ ಕುರಿತಂಥ ದಾಳವನ್ನು ಸ್ವಲ್ಪ ಬೇಗ ಎಸೆದದ್ದೇ ಅವರಿಗೆ ಮುಳುವಾಗಿರುವುದರಲ್ಲಿ ಯಾವ ಸಂಶಯವೂ ಇಲ್ಲ. ಅನೇಕ ಮಠಾಧೀಶರು ಮುಖ್ಯಮಂತ್ರಿಗಳ ಮಾತನ್ನು ನಂಬಿ ನಾಲ್ಕು ತಿಂಗಳಲ್ಲಿ ಪ್ರತ್ಯೇಕ ಧರ್ಮ ನಿಮರ್ಾಣವಾಗಿಬಿಡುವುದೆಂಬ ಭರವಸೆಯಿಂದ ತಮ್ಮ ಆಪ್ತ ಭಕ್ತರ ಸಲಹೆಯನ್ನೂ ಕಡೆಗಣಿಸಿ ಅಖಾಡಾಕ್ಕೆ ಇಳಿದಿದ್ದರು. ಈಗವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಆತುರಪಟ್ಟು ಎಡವಟ್ಟಾಗಿರುವುದನ್ನು ಅವರು ತಿಳಿದಾದಮೇಲೆ ಒಳಗೊಳಗೇ ಬೇಯುತ್ತಿದ್ದಾರೆ. ಈ ಆಕ್ರೋಶದ ಧಗೆಯನ್ನು ನಿಸ್ಸಂಶಯವಾಗಿ ಕಾಂಗ್ರೆಸ್ಸು ಅನುಭವಿಸಲಿದೆ. ಇದನ್ನು ಸರಿದೂಗಿಸಲೆಂದೇ ಸಿದ್ದರಾಮಯ್ಯ ಚಾಣಾಕ್ಷ ನಡೆಯೊಂದನ್ನು ಇಟ್ಟಿದ್ದಾರೆ. ಹೇಗಾದರೂ ಮಾಡಿ ಅನಂತಕುಮಾರ್ ಹೆಗಡೆಯವರನ್ನು ಪ್ರತಿಪಕ್ಷಗಳ ಮುಖ್ಯಮಂತ್ರಿ ಅಭ್ಯಥರ್ಿ ಎಂದು ಬಿಂಬಿಸಿ ಲಿಂಗಾಯತರನ್ನು ದಾರಿ ತಪ್ಪಿಸಬೇಕೆಂದು ಹೆಣಗಾಡುತ್ತಿದ್ದಾರೆ. ಕಳೆದ ಕೆಲವಾರು ದಿನಗಳಿಂದ ಈ ಹಿನ್ನೆಲೆಯಲ್ಲಿ ನಡೆದಿರುವ ಬೆಳವಣಿಗೆಯನ್ನು ಗಮನಿಸಿ. ಪ್ರಕಾಶ್ ರೈ ತನ್ನ ಹೇಳಿಕೆಗಳಲ್ಲಿ ಮೋದಿ ಮತ್ತು ಆದಿತ್ಯನಾಥರ ಸಮಕ್ಕೆ ಅನಂತ ಹೆಗಡೆಯವರನ್ನು ತಳುಕು ಹಾಕಿ ಮಾತನಾಡುತ್ತಾನೆ. ಅದರರ್ಥ ಜನ ಮಾನಸದಿಂದ ಯಡ್ಯೂರಪ್ಪನವರನ್ನು ದೂರ ತಳ್ಳಿ ಹೆಗಡೆಯವರನ್ನು ತರುವ ಯತ್ನ. ಸ್ವತಃ ಸಿದ್ದರಾಮಯ್ಯ ಖಾಸಗಿ ಸುದ್ದಿವಾಹಿನಿಗಳಿಗೆ ಅನಂತ ಕುಮಾರ್ ಹೆಗಡೆ ಮತ್ತು ಪ್ರತಾಪ್ ಸಿಂಹರವರ ಆಕ್ರಮಣಕಾರಿ ಶೈಲಿಯ ಭಾಷಣವನ್ನು ಹೊಗಳಿದ್ದೇನೆಂದು ಹೇಳುವ ಸುಳ್ಳು ಸುದ್ದಿ ಬಿಡುಗಡೆ ಮಾಡಿಸುತ್ತಾರೆ. ಅವರ ಭಾಷಣಗಳಿಂದ ಭಾಜಪಾಕ್ಕೆ ಲಾಭವಾಗುತ್ತಿದೆ ಎಂದು ತಾವು ಕಾರ್ಯಕರ್ತರೊಂದಿಗೆ ಮಾತನಾಡಿರುವುದಾಗಿ ಹೇಳಲೂ ಹಿಂಜರಿಯದು ಆ ಸುದ್ದಿ!

2

ಅಲ್ಲಿಗೆ ಸಿದ್ದರಾಮಯ್ಯನವರು ಬರಲಿರುವ ಚುನಾವಣೆಗಾಗಿ ತಿಪ್ಪರಲಾಗ ಹಾಕುತ್ತಿರುವುದು ಬಲು ಸ್ಪಷ್ಟ. ಯಾವ ಕಾರಣಕ್ಕೂ ಅನಂತ್ ಹೆಗಡೆ ಮುಖ್ಯ ರಂಗದಿಂದ ವಿಮುಖರಾಗದಿರಲೆಂದೇ ಅವರ ದಲಿತರ ವಿರುದ್ಧದ ಹೇಳಿಕೆಗಳಿಗೂ ಪ್ರತಿಭಟನೆಯಾಗದಂತೆ ನೋಡಿಕೊಂಡಿತು ರಾಜ್ಯ ಸಕರ್ಾರ. ಅಗತ್ಯಬಿದ್ದಾಗ ರಾಜ್ಯವನ್ನೇ ಬಂದ್ ಮಾಡಿಸುವ ಸಾಮಥ್ರ್ಯವುಳ್ಳ ಸಿದ್ದು, ಭಾಜಪಾವನ್ನೇ ಮಟ್ಟಹಾಕಬಲ್ಲ ಈ ಅವಕಾಶವನ್ನು ಬಿಟ್ಟುಕೊಟ್ಟಿದ್ದೇಕೆಂಬ ಪ್ರಶ್ನೆ ಈಗಂತೂ ಯಕ್ಷಪ್ರಶ್ನೆಯಾಗಿ ಉಳಿದುಕೊಂಡಿಲ್ಲ. ಯಡ್ಯೂರಪ್ಪ ಏಕಮೇವ ನಾಯಕರಾಗಿ ಪ್ರತಿಷ್ಠಾಪಿತರಾಗುವ ಯಾವ ಅವಕಾಶವನ್ನೂ ಅವರು ಬಿಟ್ಟುಕೊಡಲಾರರು.

ಬಿಜೇಪಿಗೆ ಈ ವಾಸನೆ ಬಲುಬೇಗ ಬಡಿದಿದ್ದರಿಂದಲೇ ಅವರು ಎಚ್ಚೆತ್ತುಕೊಂಡಿದ್ದು. ಯಾವುದೇ ನಾಯಕರ ವಿಚಾರದಲ್ಲಿ ಯಾವ ಪಕ್ಷದಲ್ಲಾದರೂ ಎರೆಡೆರಡು ಬಣಗಳಿರುತ್ತವೆ, ಪರ ಮತ್ತು ವಿರೋಧದ್ದು. ಹೆಗಡೆಯವರಿಗೆ ಆ ವೇಳೆಯಲ್ಲಿ ಪರವಾಗಿ ಯಾರೂ ನಿಲ್ಲಲಿಲ್ಲ. ಪರಿಣಾಮ ನೀರಿಲ್ಲದ ಬಾವಿ ಎಂದಿದ್ದ ತಮ್ಮ ಖಾತೆಯೊಳಗೆ ಅವರು ಮುಳುಗಿಹೋಗುವ ಅನಿವಾರ್ಯತೆ ಸೃಷ್ಟಿಯಾಯಿತು. ಕಳೆದ ಎರಡು ತಿಂಗಳಲ್ಲಿ ಇದೇ ನೀರಿಲ್ಲದ ಬಾವಿಯಲ್ಲಿ ಭರ್ಜರಿಯಾಗಿ ಹೂಳು ತೆಗೆಯುತ್ತಿರುವ ಅವರ ಕಾರ್ಯಶೈಲಿಗೆ ಖಂಡಿತ ಮೆಚ್ಚುಗೆ ಸೂಚಿಸಲೇಬೇಕು. ಕೌಶಲ್ಯಾಭಿವೃದ್ಧಿ ಎಂದರೆ ಸಾಮಾನ್ಯವಾದ ಖಾತೆಯಲ್ಲ; ತರುಣರೊಂದಿಗೆ ನೇರ ಸಂಪರ್ಕ ಕೊಡಿಸಬಲ್ಲ, ಇತರ ಎಲ್ಲ ಖಾತೆಗಳೊಂದಿಗೂ, ಮಂತ್ರಿಗಳೊಂದಿಗೂ ವ್ಯವಹರಿಸುವ ಅವಕಾಶ ಕೊಡಿಸಬಲ್ಲ ಖಾತೆ ಅದು. ರಸಗೊಬ್ಬರದ ಖಾತೆ ಪಡೆದು ಅವಮಾನಕ್ಕೊಳಗಾಗಿದ್ದ ಬೆಂಗಳೂರಿನ ಅನಂತ್ಕುಮಾರರು ಅಲ್ಲಿ ಮಾಡಿದ ಸಾಧನೆಯಿಂದಲೇ ಮೋದಿಯ ಆಪ್ತ ವಲಯಕ್ಕೇರಿರುವಾಗ ಯಾವ ಖಾತೆಯೂ ಕಡಿಮೆಯಲ್ಲ. ನೀರಿಲ್ಲದ ಬಾವಿಯಂತೂ ಅಲ್ಲವೇ ಅಲ್ಲ!

3

ಬಿಡಿ. ಸಿದ್ದರಾಮಯ್ಯನವರಿಗಿರುವ ಕಿರಿಕಿರಿ ಅದೇ. ಇಲ್ಲಿ ಯಡ್ಯೂರಪ್ಪನವರು ಅಬಾಧಿತವಾಗಿ ಮುಂದುವರಿದರೆ ಅಲ್ಲಿ ಅನಂತ್ ಹೆಗಡೆ ತಮ್ಮ ಖಾತೆಯಲ್ಲಿ ಮುಳುಗಿ ಮೇಲಿನವರ ಆದೇಶದಂತೆ ಅಸಂಬದ್ಧ ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟುಬಿಟ್ಟಿದ್ದಾರೆ. ಮೈಯ್ಯೆಲ್ಲ ಪರಚಿಕೊಳ್ಳುವಂತಾಗಿಯೇ ಅವರು ಮುಗ್ಧ ಅಲ್ಪಸಂಖ್ಯಾತರೆಂಬ ಹೊಸ ಜಾತಿ ಸೃಷ್ಟಿಸಿದ್ದು. ಈ ಸುತ್ತೋಲೆಯ ಹಿಂದಿನ ರಾಜಕೀಯ ಎಂಥವನಿಗೂ ಅರ್ಥವಾದೀತು. ಚುನಾವಣೆ ಘೋಷಣೆಯಾಗುವುದಕ್ಕಿಂತ ಒಂದೂವರೆ ತಿಂಗಳ ಮುನ್ನ ಇಂತಹ ಎಡವಿ ಬೀಳುವ ಕೆಲಸ ಯಾವ ಆಡಳಿತ ಪಕ್ಷವೂ ಮಾಡಲಾರದು. ಮುಸಲ್ಮಾನರನ್ನು ಮುಗ್ಧರೆಂದು ಕರೆದು ಹಿಂದೂಗಳನ್ನು ಒಟ್ಟುಗೂಡಿಸುವ ಇಂತಹ ಪ್ರಮಾದಕಾರೀ ಕೆಲಸಕ್ಕೆ ಈ ಹೊತ್ತಲ್ಲಿ ಯಾವ ಮುಖ್ಯಮಂತ್ರಿಯೂ ಕೈಹಾಕಲಾರ. ಆದರೆ ಸಿದ್ದರಾಮಯ್ಯನವರ ನಡೆಯೇ ಬೇರೆ. ಅವರು ಮತ್ತೆ ಪ್ರತಾಪ ಸಿಂಹ, ಅನಂತ್ ಹೆಗಡೆಯವರನ್ನು ಮುಂಚೂಣಿಯ ಭಾಷಣಕಾರರಾಗಿ ನೋಡಲು ಬಯಸುತ್ತಿದ್ದಾರೆ. ಭಾವನೆಗಳನ್ನು ಕೆರಳಿಸಿ ಹಿಂದುತ್ವದ ದಿಕ್ಕಿಗೆ ಭಾಜಪ ಹೊರಳುವಂತೆ ಮಾಡಿದರೆ ಅವರು ಚುನಾವಣೆ ಗೆದ್ದಂತೆ ಎಂಬ ನಂಬಿಕೆ ಮುಖ್ಯಮಂತ್ರಿಗಳಿಗೆ. ಕುರುಬ ಜನಾಂಗದ ವೋಟುಗಳು ಭದ್ರವಾಗಿವೆ, ದಲಿತರು ಸಂವಿಧಾನದ ಕುರಿತ ಹೇಳಿಕೆಯಿಂದ ಆಕ್ರೋಶಗೊಂಡಿರುವುದರಿಂದ ಅದನ್ನು ಜಿಗ್ನೇಶ್ ಮತ್ತವನ ತಂಡ ಚುನಾವಣೆಯ ಹೊತ್ತಲ್ಲಿ ಸರಿದೂಗಿಸುತ್ತದೆ. ಹಿಂದೂ ಧರ್ಮದ ಚಚರ್ೆ ಶುರುವಾದರೆ ಪ್ರತ್ಯೇಕ ಧರ್ಮದವರೂ ಅಷ್ಟೇ ಚಟುವಟಿಕೆಯುಳ್ಳವರಾಗಿಬಿಡುತ್ತಾರೆ. ಸಹಜವಾಗಿಯೇ ಆತಂಕಕ್ಕೊಳಗಾಗುವ ಮುಸಲ್ಮಾನರು ಕಾಂಗ್ರೆಸ್ಸಿನ ಜೊತೆಗೆ ಬಲವಾಗಿ ನಿಂತುಬಿಡುತ್ತಾರೆ. ಅಲ್ಲಿಗೆ ಲೆಕ್ಕಾಚಾರ ಮುಗಿಯಿತಲ್ಲ, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬುದು ಖಾತ್ರಿ!

ಆದರೆ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ ಅಷ್ಟೇ. ಭಾಜಪಾ ಬಲು ಎಚ್ಚರಿಕೆಯ ನಡೆ ಇಡುತ್ತಿದೆ. ಮುಗ್ಧ ಅಲ್ಪಸಂಖ್ಯಾತರ ವಿಚಾರ ಬಂದಾಗ ಪಕ್ಷ ಮಾತನಾಡಲಿಲ್ಲ ಆದರೆ ಜನರೇ ಮಾತನಾಡಿಕೊಳ್ಳುವಂತಹ ವಾತಾವರಣ ಸೃಷ್ಟಿ ಮಾಡಿತು ಅದು. ಎಲ್ಲಿ ಹಿಂದೂಗಳ ಸಾವು ನಡೆದಾಗಲೂ ತಾನು ನೇರವಾಗಿ ಮಾತನಾಡದೇ ಜನರ ನಡುವೆ ಈ ಚಚರ್ೆ ಬಲವಾಗುವಂತೆ ಮಾಡುತ್ತಿದೆ. ಈ ಕಾರಣದಿಂದಾಗಿಯೇ ಸಿದ್ದರಾಮಯ್ಯನವರ ವಿರುದ್ಧದ ಅಂತಪ್ರ್ರವಾಹವೊಂದು ಅರಿವಿಲ್ಲದೇ ಹರಿಯುತ್ತಿದೆ. ಸ್ವತಃ ಮುಸಲ್ಮಾನರೂ ಇದಕ್ಕೆ ಹೊರತಲ್ಲ. ತಲೆಯ ಮೇಲೆ ರೌಡಿಸಂನ ಕಳಂಕ ಹೊತ್ತವರನ್ನು ಮುಗ್ಧರ ಪಟ್ಟಿಗೆ ಸೇರಿಸಿ ಬಿಡುಗಡೆ ಮಾಡಿಸುವ ಬೇಡಿಕೆಯನ್ನು ಸ್ವತಃ ಮುಸಲ್ಮಾನರೆಂದಿಗೂ ಮಂಡಿಸಿರಲಿಲ್ಲ. ಹೀಗೆ ಮುಗ್ಧರೆಂದು ಮತ್ತೊಂದು ಜಾತಿಯನ್ನು ಸೃಷ್ಟಿಸಿ ಆ ಮೂಲಕ ಹಿಂದೂ-ಮುಸ್ಲೀಂ ಭೇದವನ್ನು ಬೇಕೆಂದೇ ಸೃಷ್ಟಿಸುತ್ತಿರುವ ಸಿದ್ದರಾಮಯ್ಯನವರ ನಡೆ ಅವರಿಗೂ ಅರಿವಾಗದೇ ಉಳಿದಿರುವುದೇನಲ್ಲ. ಹಾಗಂತ ಅವರ್ಯಾರೂ ಚುನಾವಣೆಯಲ್ಲಿ ಭಾಜಪಾವನ್ನು ಸಮಥರ್ಿಸಲಾರರು. ಅವರು ಪಯರ್ಾಯವೊಂದನ್ನು ಅರಸಿ ಓವೈಸಿಯೋ, ಎಸ್ಡಿಪಿಐ ಕಡೆಗಳಿಗೋ ಹೊರಳಿಬಿಟ್ಟರೆ ಸಿದ್ದರಾಮಯ್ಯನವರ ಎಲ್ಲ ಪ್ರಯತ್ನಗಳೂ ತಲೆಕೆಳಗು! ಅದಕ್ಕೇ ಅವರು ಅದಾಗಲೇ ಕೇಂದ್ರ ಸಕರ್ಾರ ಓವೈಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪವನ್ನೂ ಮಾಡಿ ಇನ್ನೊಂದಷ್ಟು ಗೊಂದಲ ಹುಟ್ಟುಹಾಕಿರೋದು.

ಮುಖ್ಯಮಂತ್ರಿಗಳಿಗೀಗ ತಲೆ ಕೆಟ್ಟುಹೋಗಿದೆ. ಪ್ರಾಮಾಣೀಕತೆಯಿಲ್ಲದೇ ಚುನಾವಣೆಗೆಂದೇ ಎಸೆದ ಎಲ್ಲ ದಾಳಗಳೂ ತಮಗೇ ತಿರುಗುಬಾಣವಾಗುವ ಲಕ್ಷಣವನ್ನು ತೋರಿಸುತ್ತಿವೆ. ಅತ್ತ ಮೋದಿ ದಿನೇ ದಿನೇ ಜನ ಮಾನಸದಲ್ಲಿ ಬೇರೂರುತ್ತಿದ್ದಾರೆ; ಯಡ್ಯೂರಪ್ಪನವರನ್ನು ತಮ್ಮ ನಾಯಕರೆಂದು ಎಲ್ಲರೂ ಒಪ್ಪಿಕೊಂಡಾಗಿದೆ. ಹಾಗೆಂದೇ ಭಾಜಪಾ ಈಗ ಸಿದ್ದರಾಮಯ್ಯನವರ ಆಡಳಿತ ವೈಫಲ್ಯವನ್ನೇ ಮುಂದಿರಿಸಿಕೊಂಡು ನಡೆಸುತ್ತಿರುವ ಪ್ರಚಾರ ಖಂಡಿತ ರಂಗೇರಲಿದೆ.

ಈಗ, ಭಾಜಪಾ ಸಿದ್ದರಾಮಯ್ಯನವರಿಗಿಂಥ ಒಂದು ಹೆಜ್ಜೆ ಮುಂದಿದೆ ಎನಿಸುತ್ತಿದೆ.

Comments are closed.