ವಿಭಾಗಗಳು

ಸುದ್ದಿಪತ್ರ


 

ದಾವೂದ್ ಬಂಧನ; ಮೋದಿಯ ಚುನಾವಣಾ ರಣತಂತ್ರ!

ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ಈ ಬಗೆಯ ದೇಶದ್ರೋಹಿಗಳನ್ನೆಲ್ಲ ಹಿಡಿದು ತರುವುದಾಗಿ ಮಾತು ಕೊಟ್ಟಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಅವರು ತಾವು ತಿರುಗಾಡಿದ ದೇಶಗಳಲ್ಲಿ, ನಿಂತ ವೇದಿಕೆಯ ಮೇಲೆಲ್ಲ ಭಯೋತ್ಪಾದನೆಯ ವಿರುದ್ಧ ಕಠೋರವಾಗಿ ಮಾತನಾಡಿ, ತಮ್ಮ ಉದ್ದೇಶ ಮತ್ತು ಗುರಿಯನ್ನು ಜಗತ್ತಿಗೆ ಸಮರ್ಥವಾಗಿ ಸಾರಿದರು.

ಚುನಾವಣೆಯ ಅಖಾಡಾ ತಯಾರಾಗಿದೆ. ಖಂಡಿತ ಕನರ್ಾಟಕದ್ದಲ್ಲ; ರಾಷ್ಟ್ರದ್ದೇ! ಹೌದು ಮೋದಿ 2019ರ ಚುನಾವಣೆಯ ತಯಾರಿ ಶುರು ಮಾಡಿಬಿಟ್ಟಿದ್ದಾರೆ. ಈ ಹಿಂದೆಯೇ ಹೇಳಿದ್ದಂತೆ ಸಂಸತ್ತಿನಲ್ಲಿ ಮೋದಿಯ ವಿರುದ್ಧ ಗಲಾಟೆ ಮಾಡಿ ಅದರ ನಡುವೆಯೂ ಅವರು ದೇಶ ಮೆಚ್ಚುವ ಮಾತುಗಳನ್ನಾಡಿ ಆಕಷರ್ಿಸಿದರಲ್ಲ ಅದು ಮೊದಲ ಹೆಜ್ಜೆಯಾಗಿತ್ತಷ್ಟೇ. ರಾಮ ಮಂದಿರದ ಕುರಿತಂತೆ ಬಿರುಸಾಗಿ ನಡೆಯುತ್ತಿರುವ ಸಂಧಾನ ಪ್ರಕ್ರಿಯೆಗಳು ಎರಡನೇ ಹೆಜ್ಜೆ. ಅದರಲ್ಲಿಯೂ ಈ ಸಂಧಾನಕ್ಕೆ ರವಿಶಂಕರ್ ಗುರೂಜಿಯವರನ್ನೇ ಮುಂದೆ ಬಿಟ್ಟಿದ್ದು ಜಾಗತಿಕ ಮಟ್ಟದಲ್ಲಿ ಭಾರತದ ಘನತೆಯನ್ನು ಹೆಚ್ಚಿಸುವ ಪ್ರಯತ್ನವೂ ಹೌದು. ಇನ್ನು ಚಿದಂಬರಂ ಮತ್ತು ಬಳಗ ಗಾಜಿನ ಮನೆಯಲ್ಲಿ ಕೂತು ಕಲ್ಲೆಸೆಯುತ್ತಿತ್ತಲ್ಲ; ತಾಕತ್ತಿದ್ದರೆ ಬಂಧಿಸಿರೆಂದು ಸವಾಲೆಸೆದಿತ್ತಲ್ಲ ಮೋದಿ ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟಿ ಮೂರನೇ ಹೆಜ್ಜೆಯನ್ನೂ ಇಟ್ಟಾಗಿದೆ. ಇದಕ್ಕೆ ಪೂರಕವಾದುದೇ ನಾಲ್ಕನೇ ಹೆಜ್ಜೆ ದಾವೂದ್ ಇಬ್ರಾಹೀಂನ ವಿರುದ್ಧ ಗುಟುರು ಹಾಕಿ ನಿಂತಿರೋದು. ಒಬ್ಬೊಬ್ಬರಾಗಿ ದಾವೂದ್ನ ಮಿತ್ರ ಬಳಗ ಸಿಕ್ಕಿಹಾಕಿಕೊಳ್ಳುತ್ತಿದ್ದಂತೆ ಎದುರು ಪಾಳಯದಲ್ಲಿರುವವರ ಮುಖ ಬಿಳಿಚಿಕೊಳ್ಳುತ್ತಿದೆ. ಯಾರು, ಯಾರ ಬಳಿ, ಯಾರ ಹೆಸರು ಹೇಳುತ್ತಾರೋ ಎಂಬ ಆತಂಕದಲ್ಲಿ ಎಲ್ಲರ ಬಾಯಿಗೂ ಬೀಗ ಬಡಿದುಕೊಂಡುಬಿಟ್ಟಿದೆ. ದೆಹಲಿಯ ನಾಯಕರಿಗೆಲ್ಲ ನೀರವ್ ಮೋದಿ, ಮೆಹುಲ್ ಚೋಸ್ಕಿ ಮರೆತೇ ಹೋಗಿದ್ದಾರೆ. ಅವರೀಗ ಬಡಿಗೆ ಕೊಟ್ಟು ಬಡಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಒಮ್ಮೆ ದಾವೂದ್ ಬಂದನೆಂದರೆ ಕಾಂಗ್ರೆಸ್ಸು ಮಾತ್ರವಲ್ಲ ಅನೇಕ ಪ್ರಾದೇಶಿಕ ಪಕ್ಷಗಳೂ ಬಲಿಯಾಗಿಬಿಡುತ್ತವೆ. ಈ ಬಾರಿಯ ಚಚರ್ೆಗೆ ದೇವೇಗೌಡರ ಪ್ರಧಾನಿಯಾದ ಕಾಲದ ಫೈಲುಗಳೂ ತೆರೆದುಕೊಳ್ಳಲಿವೆ. ಈಗ ಬಿಜೆಪಿಯಲ್ಲಿರುವ ಎಸ್.ಎಂ. ಕೃಷ್ಣ ಕೂಡ ಕಟೆಕಟೆಯಲ್ಲಿ ನಿಲ್ಲಲಿದ್ದಾರೆ. ಮಹಾರಾಷ್ಟ್ರದ ನ್ಯಾಷನಲ್ ಕಾಂಗ್ರೆಸ್ ಪಾಟರ್ಿಯಿಂದ ಹಿಡಿದು ತೃಣಮೂಲ ಕಾಂಗ್ರೆಸ್ಸಿನವರೆಗೆ ಎಲ್ಲರೂ ಒಮ್ಮೆ ಮುಟ್ಟಿಕೊಂಡು ನೋಡಬೇಕಾದ ಸ್ಥಿತಿಯಂತೂ ಇದೆ.

1

ದಾವೂದ್ ಇಬ್ರಾಹೀಂ ಪಾತಕ ಲೋಕದ ಭಯಾನಕ ಹೆಸರು. ಭಾರತದಲ್ಲಿ ಪ್ರಧಾನ ಮಂತ್ರಿ ಎಷ್ಟು ಸಕರ್ಾರ ನಡೆಸುತ್ತಿದ್ದರೋ ದೇವರೇ ಬಲ್ಲ, ದಾವೂದ್ನ ಗ್ಯಾಂಗ್ ಮಾತ್ರ ಜೋರಾಗಿಯೇ ಆಳ್ವಿಕೆ ನಡೆಸುತ್ತಿತ್ತು. ಅವನ ಆಣತಿಗೆ ತಕ್ಕಂತೆ ಬಾಲಿವುಡ್ ಸ್ಟಾರ್ಗಳು ಕುಣಿಯುತ್ತಾರೆ, ಅವನು ಹೇಳಿದಂತೆ ಅನೇಕ ರಾಜಕಾರಣಿಗಳು ಕೇಳುತ್ತಾರೆ. ಕ್ರಿಕೇಟ್ ಮ್ಯಾಚು ಅವನ ನಿದರ್ೇಶನಕ್ಕೆ ತಕ್ಕಂತೆ ನಡೆಯುತ್ತದೆ ಕೊನೆಗೆ ರಿಯಲ್ ಎಸ್ಟೇಟ್ ಉದ್ಯಮವೂ ಆತ ಹೇಳಿದಂತೆ ಮೇಲೆ-ಕೆಳಗೆ ಓಲಾಡುತ್ತದೆ. ಸುಮ್ಮನೆ ಹೇಳಬೇಕೆಂದರೆ ಕನಕಪುರದಲ್ಲಿ ಹೇಗೆ ಡಿಕೇಶಿವಕುಮಾರ್ ಹೇಳಿದಂತೆ ಕೇಳಬೇಕೆಂದು ಅಲ್ಲಿನ ಒಂದೊಂದು ಕ್ವಾರಿ ಕಲ್ಲುಗಳು ಮಾತಾಡುವವೋ ಹಾಗೆಯೇ ಬಹುತೇಕ ಭಾರತ ದಾವೂದ್ ಹೇಳಿದಂತೆ ಕೇಳಬೇಕು ಅಷ್ಟೇ!

ದಾವೂದ್ ಮುಂಬೈ ಕಾನ್ಸ್ಟೇಬಲ್ರೊಬ್ಬರ ಮಗ. ಶಾಲೆಯನ್ನು ಅರ್ಧದಲ್ಲಿಯೇ ಬಿಟ್ಟು ಹಾಜಿ ಮಸ್ತಾನನ ಗ್ಯಾಂಗು ಸೇರಿಕೊಂಡ. ಹಾಜಿ ಗ್ಯಾಂಗಿಗೂ ಪಠಾನ್ ಗ್ಯಾಂಗಿಗೂ ಇದ್ದ ಕದನದಲ್ಲಿ ದಾವೂದ್ನ ಸಾಮಥ್ರ್ಯ ಬೆಳಕಿಗೆ ಬಂತು. ಪಠಾನ್ನ ಕಡೆಯವರು ತನ್ನವರ ಮೇಲೇಯೇ ದಾಳಿ ಮಾಡಿ ಕೊಂದಾಗ ಸಹಿಸದ ದಾವೂದ್ ತನ್ನೆಲ್ಲ ಸಾಮಥ್ರ್ಯ ಬಳಸಿ ಪಠಾನ್ನ ಕಡೆಯವರನ್ನೆಲ್ಲ ಕೊಂದು ಹಾಕಿದ. ಮಸ್ತಾನನನ್ನೂ ಎದುರು ಹಾಕಿಕೊಂಡು ಮೆರೆದ. ಅದು ದಾವೂದ್ನ ಕುರಿತಂತಹ ಭಯವನ್ನು ಹೆಚ್ಚಿಸಿತು. ಮುಂದೆ ಹಾಜಿ ಮಸ್ತಾನ್ ರಾಜಕೀಯ ಪ್ರವೇಶಿಸಿದ ನಂತರ ದಾವೂದ್ ಪಾತಕಲೋಕದ ಅಭಿಷಿಕ್ತ ದೊರೆಯಾದ! ತನ್ನ ತಮ್ಮ ಶಬ್ಬೀರ್ ಕಸ್ಕರ್ನೊಂದಿಗೆ ಸೇರಿ ಡಿ-ಕಂಪನಿ ಕಟ್ಟಿಕೊಂಡ. ಈಗ ಗ್ಯಾಂಗ್ವಾರ್ಗಳು ಸಾಮಾನ್ಯವಾದವು. ದರೋಡೆಯ ಕೇಸಿನಲ್ಲಿ ಮೊದಲ ಬಾರಿಗೆ ಬಂಧಿತನಾಗಿದ್ದ ದಾವೂದ್ ಬರ ಬರುತ್ತ ಮಾಡದ ಪಾತಕಗಳೇ ಇಲ್ಲವೆನ್ನುವಷ್ಟು ಬಲವಾಗಿ ಬೆಳೆದ. ಆಗ ತಾನೆ ಕ್ರಿಕೇಟ್ ಬೆಟ್ಟಿಂಗ್ ಧಂಧೆ ಶುರುವಾಗಿತ್ತು. 80ರ ದಶಕದಲ್ಲಿ ಭಾರತ, ವೆಸ್ಟ್ಇಂಡೀಸ್ ಪಂದ್ಯದ ವೇಳೆಗೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ದಾವೂದ್ ಬೆಟ್ಟಿಂಗ್ ಧಂಧೆ ಆರಂಭಿಸಿದ. ಅನೇಕ ಕ್ರೀಡಾಪಟುಗಳನ್ನು ಕೊಂಡುಕೊಂಡ. ದಾವೂದ್ನಿಗೆ ಡ್ರೆಸಿಂಗ್ ಕೋಣೆಯವರೆಗೂ ಬಂದು ಆಟಗಾರರನ್ನು ಮಾತನಾಡಿಸಿ ಹೋಗುವಷ್ಟು ಮುಕ್ತ ಪರವಾನಗಿ ಇತ್ತೆಂದು ಕಪಿಲ್ದೇವ್ ಆದಿಯಾಗಿ ಅನೇಕರು ಆನಂತರದ ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದರು. ಅಲ್ಲಿಂದಾಚೆಗೆ ಈ ಉದ್ಯಮದಲ್ಲಿ ರುಚಿ ಕಂಡುಕೊಂಡ ದಾವುದ್ ಅದರಿಂದಾಚೆಗೆ ಬರಲೇ ಇಲ್ಲ. ಇಂದಿಗೂ ಅವನ ಉದ್ದಿಮೆಯ ಬಹುಪಾಲು ಇದರಿಂದಲೇ ಬರುವಂಥದ್ದು. ದಾವೂದ್ನ ಮಾತು ಕೇಳದಿದ್ದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದೂ ಕಷ್ಟವೇ ಎನ್ನುವಂತಹ ವಾತಾವರಣ ಒಂದು ಕಾಲದಲ್ಲಿ ಸೃಷ್ಟಿಸಿದ್ದ ಆತ! ಐಪಿಎಲ್ನಲ್ಲಿ ಯಾರ್ಯಾರಿಗೆ ಆತ ಹಣಕೊಟ್ಟು ತಂಡ ಖರೀದಿಸಿದ್ದಾನೆಂದು ಊಹಿಸುವುದು ಬಲು ಕಷ್ಟ!

2

ದಾವೂದ್ನ ಮತ್ತೊಂದು ಉದ್ಯಮ ಸಿನಿಮಾ. ವಿಶೇಷ ಪ್ರತಿಭೆ ಇಲ್ಲದೆಯೂ ಕೆಲವರು ಸಿನಿಮಾರಂಗವನ್ನು ಆಳಿದರಲ್ಲ ಅದರ ಹಿಂದಿದ್ದುದು ಇವನದ್ದೇ ಕೈವಾಡ. ಒಂದು ಕಾಲಘಟ್ಟದಲ್ಲಂತೂ ಖಾನ್ಗಳದ್ದೇ ದಬರ್ಾರು ನಡೆಯಿತಲ್ಲ ಹಿಂದಿ ಸಿನಿಮಾ ರಂಗದಲ್ಲಿ ಆಗ ದಾವೂದ್ ಉತ್ತುಂಗದಲ್ಲಿದ್ದ. ಹಿಂದಿ ಸಿನಿಮಾ ನಟಿಯರು ದಾವೂದ್ ಬಯಸಿದರೆ ದುಬೈಗೆ ಹೋಗಿಬರಬೇಕಿತ್ತು. ರಾಮ್ ತೇರಿ ಗಂಗಾ ಮೈಲಿ ಖ್ಯಾತಿಯ ಮಂದಾಕಿನಿಯಂತೂ ದೀರ್ಘಕಾಲ ಅವನೊಂದಿಗೇ ಇದ್ದುಬಿಟ್ಟಿದ್ದಳು. ನೂರಾರು ಕೋಟಿ ರೂಪಾಯಿ ಹೂಡಿ ಲಾಭವನ್ನೂ ಹಾಗೆಯೇ ಬಾಚುತ್ತಿದ್ದ ಆತ.

1986ರಲ್ಲಿ ಸಮದ್ ಖಾನ್ನ ಕೊಲೆಯ ಆರೋಪಿಯಾಗಿ ಗುರುತಿಸಲ್ಪಡುವವರೆಗೂ ಆತ ಭಾರತದಲ್ಲಿಯೇ ಇದ್ದ. ಆನಂತರ ದೇಶ ಬಿಟ್ಟು ದುಬೈಗೆ ಹೋಗಿ ಅಲ್ಲಿಂದ ತನ್ನ ಚಟುವಟಿಕೆ ಆರಂಭಿಸಿದ. ಸ್ಥಳೀಯ ಶೇಖ್ಗಳನ್ನು ಉಪಯೋಗಿಸಿಕೊಂಡು ವ್ಯಾಪಾರೋದ್ದಿಮೆ ಶುರು ಮಾಡಿದೆ. ಗುಜರಾತ್ನ ಶಿಪ್ಬ್ರೇಕಿಂಗ್ ಕಂಪನಿಯಲ್ಲಿದ್ದ ಪಾಲುದಾರಿಕೆ ಅವನಿಗೆ ಶಸ್ತ್ರಗಳನ್ನು, ಖೋಟಾ ನೋಟುಗಳನ್ನು ಮತ್ತು ಮಾದಕ ವಸ್ತುಗಳನ್ನು ಭಾರತದೊಳಕ್ಕೆ ಕಳ್ಳ ಸಾಗಾಣಿಕೆ ಮಾಡಲು ಬೇಕಾದ ದಾರಿಯನ್ನು ತೆರೆದು ಕೊಟ್ಟಿತ್ತು. ಬರಬರುತ್ತಾ ದಾವೂದ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರುವಾಸಿಯಾದ ಕಳ್ಳಸಾಗಾಣಿಕೆದಾರನಾಗಿಬಿಟ್ಟ. ಅಫ್ಘಾನಿಸ್ತಾನದಿಂದ ಯೂರೋಪಿನತ್ತ ಮಾದಕ ವಸ್ತು ಸಾಗಿಸುತ್ತಿದ್ದ. ಐಎಸ್ಐ ಮುದ್ರಿಸುತ್ತಿದ್ದ ಕಳ್ಳನೋಟುಗಳನ್ನು ಭಾರತಕ್ಕೆ, ಆಫ್ರಿಕಾಕ್ಕೆ ತಲುಪಿಸುತ್ತಿದ್ದ. 1993ರಲ್ಲಿ ಪಾಕೀಸ್ತಾನಕ್ಕೆ ತನ್ನ ನೆಲೆ ಬದಲಿಸಿದ ದಾವೂದ್ ಲಶ್ಕರ್ಏತಯ್ಬಾದಂತಹ ಭಯೋತ್ಪಾದಕ ಸಂಘಟನೆಗಳ ಸಖ್ಯ ಬೆಳೆಸಿದ. ತನ್ನ ಸಂಘಟನೆಯನ್ನು ಯುಕೆ, ಜರ್ಮನಿ, ಫ್ರಾನ್ಸ್, ಸ್ಪೇನ್, ಮೊರೊಕ್ಕೊ ಮೊದಲಾದ ರಾಷ್ಟ್ರಗಳಿಗೆ ವಿಸ್ತರಿಸಿ ಆಗ್ನೇಯ ಏಷಿಯಾದ ಬಲುದೊಡ್ಡ ಕ್ರಿಮಿನಲ್ ಚಟುವಟಿಕೆಯ ಕಂಪನಿಯಾಗಿ ಬೆಳೆದು ನಿಂತ.

3

1993ರ ಮುಂಬೈ ಸೀರಿಯಲ್ ಬ್ಲಾಸ್ಟ್ ಅವನನ್ನು ಇಡಿಯ ದೇಶದ ವಿರೋಧಿಯಾಗಿಸಿಬಿಟ್ಟಿತು. ಆದರೆ ಆತನನ್ನು ಬಂಧಿಸುವುದಿರಲಿ ಹುಡುಕಲೂ ಸಾಧ್ಯವಾಗಲಿಲ್ಲ ಸಕರ್ಾರಕ್ಕೆ. 2002ರ ಗುಜರಾತಿನ ದಂಗೆಗಳಲ್ಲಿ ಆತನ ಕೈವಾಡವಿರುವುದಾಗಿ ವರದಿ ಬಂತು. ಏನೂ ಆಗಲಿಲ್ಲ. 2006ರಲ್ಲಿ ಭಾರತ ಸಕರ್ಾರ ಮೋಸ್ಟ್ವಾಂಟೆಡ್ 38 ಜನರ ಪಟ್ಟಿಯಲ್ಲಿ ಆತನ ಹೆಸರನ್ನೂ ಸೇರಿಸಿತು. 2008ರ ಮುಂಬೈದಾಳಿಗೆ ದಾವೂದ್ ಬೆಂಬಲ ನೀಡಿದ್ದನೆಂಬ ಸುದ್ದಿ ಹೊರಬಂತು. ಆತನ ಪಾತಕ ಲೋಕದ ಧಂಧೆ ಹಿಂದಿ ಸಿನಿಮಾಕ್ಕೆ ವಸ್ತುವಾದವು. ಮುಂಬೈನಲ್ಲಿ ಆತನ ಹೆಸರು ಹೇಳಿದರೆ ನಡುಗುತ್ತಿದ್ದರು ವ್ಯಾಪಾರಿಗಳು. ಎದುರಿಸಿ ನಿಂತದ್ದಕ್ಕೆ ಟಿ ಸಿರೀಸ್ನ ಗುಲ್ಶನ್ ಕುಮಾರ್ ಹತ್ಯೆಯಾಗಿ ಹೋದರು. ಹೀಗೆಲ್ಲ ಏಕಾಗಿತ್ತು ಗೊತ್ತೇನು? ರಾಜಕಾರಣಿಗಳೊಂದಿಗೆ, ಅಧಿಕಾರಿಗಳೊಂದಿಗೆ ದಾವುದ್ನಿಗಿರುವ ಘನಿಷ್ಠ ಸಂಬಂಧದಿಂದಾಗಿ ಅಷ್ಟೇ. ಇದನ್ನು ಹೊಸದಾಗಿ ಹೇಳಬೇಕೆಂದಿಲ್ಲ. ಅಥವಾ ಸುಖಾ ಸುಳ್ಳು ಆರೋಪಗಳೂ ಅಲ್ಲ. 1993 ರಲ್ಲಿ ರಕ್ಷಣಾ ಕಾರ್ಯದಶರ್ಿ ಎಸ್.ಎನ್ ವೋಹ್ರಾ ರಾಜಕಾರಣ ಮತ್ತು ಕ್ರಿಮಿನಲ್ಗಳ ಸಂಬಂಧದ ಕುರಿತಂತೆ ವಿಶೇಷ ಅಧ್ಯಯನ ನಡೆಸಿದರು. ಕ್ರಿಮಿನಲ್ಗಳು ಸಮಾನಾಂತರ ಸಕರ್ಾರ ನಡೆಸುತ್ತಿರುವುದು ಅವರ ಗಮನಕ್ಕೆ ಬಂದಿತ್ತು. ಈ ವರದಿಯಲ್ಲಿ ಕೆಲವು ರಾಜಕಾರಣಿಗಳ ಹೆಸರನ್ನೂ ಅವರು ಉಲ್ಲೇಖ ಮಾಡಿದ್ದರು. 1997 ರಲ್ಲಿ ಸವರ್ೋಚ್ಚ ನ್ಯಾಯಾಲಯ ಈ ವರದಿಯನ್ನು ಅಧ್ಯಯನ ಮಾಡಲು ವಿಶೇಷ ಸಮಿತಿಯೊಂದನ್ನು ರಚಿಸುವಂತೆ ಆದೇಶಿಸಿತು. ಆದರೆ ಸಕರ್ಾರ ಈ ವರದಿಯನ್ನೇ ಮೂಲೆಗೆ ತಳ್ಳಿ ಕೈ ತೊಳೆದುಕೊಂಡಿತು. ಈ ವರದಿ ಬಹಿರಂಗವಾಗಿದ್ದರೆ ದೇಶವೇ ಬೆಚ್ಚಿಬಿದ್ದಿರುತ್ತಿತ್ತ್ತು. ಇಡಿಯ ವರದಿಯಲ್ಲಿ ಹೇಗೆ ಕ್ರಿಮಿನಲ್ಗಳು ರಾಜಕಾರಣಿಗಳೊಂದಿಗೆ ಸಂಪರ್ಕ ಸಾಧಿಸಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳುತ್ತಾರೆ ಎಂದು ವಿವರಿಸಲಾಗಿತ್ತು. ಮತ್ತದೇ ರಾಜಕಾರಣಿಗಳು ಈ ವರದಿಯನ್ನು ಮುಚ್ಚಿಟ್ಟುಬಿಟ್ಟರು!

ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ಈ ಬಗೆಯ ದೇಶದ್ರೋಹಿಗಳನ್ನೆಲ್ಲ ಹಿಡಿದು ತರುವುದಾಗಿ ಮಾತು ಕೊಟ್ಟಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಅವರು ತಾವು ತಿರುಗಾಡಿದ ದೇಶಗಳಲ್ಲಿ, ನಿಂತ ವೇದಿಕೆಯ ಮೇಲೆಲ್ಲ ಭಯೋತ್ಪಾದನೆಯ ವಿರುದ್ಧ ಕಠೋರವಾಗಿ ಮಾತನಾಡಿ, ತಮ್ಮ ಉದ್ದೇಶ ಮತ್ತು ಗುರಿಯನ್ನು ಜಗತ್ತಿಗೆ ಸಮರ್ಥವಾಗಿ ಸಾರಿದರು. ಇತ್ತೀಚೆಗೆ ಯುಎಇ ಪ್ರವಾಸಕ್ಕೆ ತುತರ್ಾಗಿ ಹೋದಾಗ ಅಲ್ಲಿ 5 ಒಪ್ಪಂದಗಳಿಗೆ ಸಹಿಮಾಡಿದ್ದರು. ಅದರಲ್ಲಿ ತೈಲಕ್ಕೆ ಸಂಬಂಧಿಸಿದ ಒಪ್ಪಂದಗಳಿದ್ದವು; ಸ್ಟಾಕ್ ಎಕ್ಸ್ಚೇಂಜ್ಗೆ ಸಂಬಂಧ ಪಟ್ಟ ಒಪ್ಪಂದವಿತ್ತು ಮತ್ತು ನಿಸ್ಸಂಶಯವಾಗಿ ಭಾರತಕ್ಕೆ ಬೇಕಾದ ಕ್ರಿಮಿನಲ್ಗಳನ್ನು ಒಪ್ಪಿಸುವ ಮಾತುಕತೆಯೂ ಇತ್ತು. ಮೋದಿಯ ಕಣ್ಣು ಖಂಡಿತವಾಗಿಯೂ 25 ವರ್ಷಗಳಿಂದ ಭಾರತ ಬಿಟ್ಟು ಓಡಿ ಹೋಗಿರುವ ಅಬುದಾಬಿಯಲ್ಲಿ ಕುಳಿತು ಭಾರತದ ಮಾಫಿಯಾ ಜಗತ್ತನ್ನು ನಿಯಂತ್ರಿಸುತ್ತಿರುವ ಫಾರೂಕ್ ಟಕ್ಲಾ ಮೇಲಿತ್ತು. ಆತ ದಾವೂದ್ ಇಬ್ರಾಹೀಂನ ಆಪ್ತರಲ್ಲೊಬ್ಬನಾಗಿದ್ದ. ನಾಯಕನನ್ನು ಬಂಧಿಸಬೇಕೆಂದರೆ ಆತನನ್ನು ಒಂಟಿಯಾಗಿಸಬೇಕು. ಅದಾಗಲೇ ದಾವೂದ್ನ ಬಲಗೈ ಬಂಟರನ್ನೆಲ್ಲ ಬಂಧಿಸಿದ್ದ ಸಕರ್ಾರಕ್ಕೆ ಈಗ ಸವಾಲಿದ್ದದ್ದು ಟಕ್ಲಾನ ಬಂಧನವೇ. ಅಬುದಾಭಿಯನ್ನು ಹೂಡಿಕೆಯ ನೆಪದಲ್ಲಿ ಮೋಹಿಸಿದ ಮೋದಿ ಅವರಿಂದ ಟಕ್ಲಾನನ್ನು ಬದಲಿಗೆ ಪಡೆದುಕೊಂಡರು. ಹಿಂದೊಮ್ಮೆ ಯುಎಇ ತಮಗೆ ಬೇಕಾದವನೊಬ್ಬನನ್ನು ಹಿಡಿದು ಕೊಟ್ಟರೆ ದಾವೂದ್ನನ್ನು ಗಡೀಪಾರು ಮಾಡುವುದಾಗಿ ಹೇಳಿತ್ತು. ಆಗಿನ ದೇವೇಗೌಡರ ಸಕರ್ಾರ ಕಾಂಗ್ರೆಸಿನ ಒತ್ತಡಕ್ಕೆ ಮಣಿದು ಈ ಕೊಡುಗೆಯನ್ನು ಧಿಕ್ಕರಿಸಿಬಿಟ್ಟಿದ್ದು ಈಗ ಸುದ್ದಿಯಾಗುತ್ತಿದೆ.

4

ಟಕ್ಲಾನ ಬಂಧನ ಇದುವರೆಗಿನ ಮಹತ್ತರ ಗೆಲುವುಗಳಲ್ಲೊಂದು. ಆತ 93 ರ ಮುಂಬೈ ಸ್ಫೋಟದ ರೂವಾರಿಗಳಲ್ಲೊಬ್ಬನಾಗಿದ್ದ. ಆ ಘಟನೆಯ ನಂತರ ದೇಶ ಬಿಟ್ಟು ಓಡಿಹೋಗಿದ್ದ. 95 ರಲ್ಲಿ ಇಂಟರ್ಪೋಲ್ ಅವನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಅವನ ವಿರುದ್ಧ ಕೊಲೆ, ಕೊಲೆಯ ಪ್ರಯತ್ನ, ಮಾರಕಾಸ್ತ್ರಗಳನ್ನು ಹೊಂದಿರುವ ಆರೋಪಗಳೆಲ್ಲವೂ ಇದ್ದವು. ದುಬೈನ ಡಿ-ಕಂಪೆನಿಯ ಒಟ್ಟಾರೆ ಅಕೌಂಟ್ ಅವನೇ ನೋಡಿಕೊಳ್ಳುತ್ತಿದ್ದ. ಒಂದು ರೀತಿಯಲ್ಲಿ ಆತ ದಾವೂದ್ನ ಒಟ್ಟಾರೆ ವ್ಯವಹಾರಗಳ ಮ್ಯಾನೇಜರ್ನೇ ಆಗಿದ್ದ. ಕಳೆದ ವರ್ಷವಷ್ಟೇ ದಾವೂದ್ನ ತಮ್ಮ ಇಕ್ಬಾಲ್ ಕಸ್ಕರ್ನ ಬಂಧನವಾಗಿತ್ತು. ಹಾಗೆ ಸುಮ್ಮನೆ ಟಕ್ಲಾನ ಬಂಧನದ ನಂತರ ದಾವೂದ್ನ ಪರಿಸ್ಥಿತಿ ಹೇಗಿರಬಹುದು ಊಹಿಸಿ ನೋಡಿ. ಅದಾದ ಮೇಲೆಯೇ ದಾವೂದ್ನ ಫ್ಯಾಮಿಲಿ ವಕೀಲರಾದ ಕೇಸ್ವಾನಿ ದಾವೂದ್ ಶರಣಾಗಲು ಸಿದ್ಧನಿದ್ದಾನೆ ಎಂಬ ಸುದ್ದಿ ಹೊತ್ತು ತಂದರು. ಆತನ ಒಂದಷ್ಟು ನಿಯಮಗಳನ್ನು ಸಕರ್ಾರದೆದುರು ಇಟ್ಟರು. ಇದು ದಾವೂದ್ನ ತಂತ್ರಗಾರಿಕೆ. ತನಿಖಾ ಸಂಸ್ಥೆಯನ್ನು ದಾರಿ ತಪ್ಪಿಸುವ ಬಗೆ. ಹೀಗಾಗಿ ಈ ಬಾರಿ ಸಕರ್ಾರ ಬಾಗಲಿಲ್ಲ. ಟಕ್ಲಾನನ್ನು ಸರಿಯಾಗಿಯೇ ವಿಚಾರಿಸಿಕೊಂಡಿತು. ಪರಿಣಾಮ ಏನು ಗೊತ್ತೇ? ಹಳೆಯ ಕಾಂಗ್ರೆಸ್ ಸಕರ್ಾರ ಆತನನ್ನು ವಿವಿಐಪಿಯಂತೆ ನೋಡಿಕೊಂಡಿತೆಂಬ ಸುದ್ದಿ ಹೊರಬಿತ್ತು. ಆತ ತನ್ನ ಪಾಸ್ಪೋರ್ಟನ್ನು ನವೀಕರಿಸಿ ಕೊಡಿರೆಂದು ಸಕರ್ಾರಕ್ಕೆ ಕೇಳಿಕೊಂಡ 24 ಗಂಟೆಯೊಳಗೆ ಅದನ್ನು ಪಡೆದಿದ್ದ. ದಾವೂದ್ನಿಂದ ನಿದರ್ೇಶಿತ ಕೇಂದ್ರ ಸಚಿವರೊಬ್ಬರು ಪಾಸ್ಪೋಟರ್್ ಕಛೇರಿಗೆ ಮೌಖಿಕವಾಗಿ ಕೇಳಿಕೊಂಡು ಇದನ್ನು ಮಾಡಿಕೊಡುವಂತೆ ಆದೇಶಿಸಿದ್ದರು. ಅವತ್ತು ಇವೆಲ್ಲದರ ಸೂತ್ರಧಾರನಾಗಿದ್ದುದು ಇಂದು ಬಂಧನಭೀತಿಯಲ್ಲಿರುವ ಚಿದಂಬರಂ!

ಈಗ ದಾವೂದ್ಗಿರುವುದು ಒಂದೇ ದಾರಿ. ಶರಣಾಗತನಾಗಿ ಎಲ್ಲವನ್ನೂ ಬಾಯ್ಬಿಡಬೇಕು ಅಥವಾ ತಾನೇ ಗುಂಡಿಟ್ಟುಕೊಂಡು ಸತ್ತು ಹೋಗಬೇಕು. ಆತ ಇರೋದು ಪಾಕೀಸ್ತಾನದಲ್ಲಿ. ಐಎಸ್ಐ ಜೊತೆಗೆ ಸಂಬಂಧಗಳು ಬೇರೆ ಘನಿಷ್ಠವಾಗಿದೆ. ಚಿದಂಬರಂ ಮತ್ತು ಗೆಳೆಯರು ಐಎಸ್ಐ ಮೂಲಕವೇ ಆತನ ಕಥೆ ಮುಗಿಸಿದರೂ ಅಚ್ಚರಿ ಪಡಬೇಕಿಲ್ಲ! ಅಲ್ಲಿಗೆ ನರೇಂದ್ರ ಮೋದಿ 2019 ರ ಚುನಾವಣೆಗೆ ಮಹತ್ವ ಹೆಜ್ಜೆ ಇಟ್ಟಂತೆಯೇ. ದಾವೂದ್ನ ಹಿಡಿದು ತಂದು, ಮಂದಿರ ನಿಮರ್ಾಣ ಮಾಡಿಬಿಟ್ಟರೆ ಅವರಿಂದ ಭಾರತೀಯರಿಗೆ ಮತ್ತೇನೂ ಅಪೇಕ್ಷೆ ಇರಲಾರದು. ಹಾಗಾಗದೇ ದಾವೂದ್ ಇಬ್ರಾಹೀಂ ಸತ್ತು ಹೋದರೆ ಮೋದಿಯವರ ಪ್ರಭೆ ಇನ್ನೂ ಹೆಚ್ಚಿಬಿಡುತ್ತದೆ. ಕಾಂಗ್ರೆಸ್ಸಿನ ಪಾಲಿಗೆ ಖಂಡಿತ ಅಚ್ಚೇದಿನ್ಗಳು ಕಾಣುತ್ತಿಲ್ಲ. ಈ ಆತಂಕದೊಂದಿಗೆ ಅವರು ಕನರ್ಾಟಕದಲ್ಲಿ ಹೋರಾಟ ಮಾಡಬೇಕಿದೆ.

Comments are closed.