ವಿಭಾಗಗಳು

ಸುದ್ದಿಪತ್ರ


 

ದೂರದ ಬಹರೈನಿನಲ್ಲಿ ಕನ್ನಡದ ಮನಸ್ಸುಗಳು!

ಭಾಷೆಯ-ಸಂಸ್ಕೃತಿಯ ಮೌಲ್ಯ ಅರಿವಾಗಬೇಕು ಎಂದರೆ ವಿದೇಶಕ್ಕೆ ಹೋಗಬೇಕು. ದೂರದ ದೇಶದಲ್ಲಿ ನಮ್ಮ ತಿಂಡಿ ಸಿಗುವಾಗ ಅಲ್ಲಿ ನಮ್ಮ ಭಾಷೆ ಕಿವಿಗೆ ಬೀಳುವಾಗ ಸ್ವರ್ಗವೇ ಕೈಗೆ ಸಿಕ್ಕಂತಹ ಅನುಭವವಾಗುತ್ತದೆ. ಕನರ್ಾಟಕದಲ್ಲಾದರೆ ದೇವಸ್ಥಾನಗಳಿಗೆ ಹೋಗದ ಕನ್ನಡದ ಕಾರ್ಯಕ್ರಮಗಳತ್ತ ತಲೆ ಹಾಕಿಯೂ ಮಲಗದ ತರುಣರು ವಿದೇಶಕ್ಕೆ ಹೋದೊಡನೆ ಇವೆಲ್ಲವುಗಳೊಂದಿಗೆ ಒಂದಾಗಿ ಬಿಡುತ್ತಾರೆ.

ಬಹರೈನ್ ಮಧ್ಯ ಪ್ರಾಚ್ಯದ ಪುಟ್ಟದಾದ ಸುಂದರವಾದ ದೇಶ. ಉದ್ದಕ್ಕೆ ಡ್ರೈವ್ ಮಾಡಿಕೊಂಡು ಹೋದರೆ ಹೆಚ್ಚೆಂದರೆ 60 ಕಿ.ಮೀ ಸಿಗಬಹುದೇನೋ. ಈ ದೇಶದ ಬಹುಪಾಲು ಭಾಗ ಸಮುದ್ರವನ್ನು ಆಕ್ರಮಿಸಿ ಪಡೆದುಕೊಂಡಿರುವಂಥದ್ದು. ಕಟ್ಟರ್ ಮುಸಲ್ಮಾನ ರಾಷ್ಟ್ರವಾದ ಸೌದಿ ಅರೇಬಿಯಾಕ್ಕೆ ಒಂದು ಸೇತುವೆಯ ಮೂಲಕ ಜೋಡಿಸಿಕೊಳ್ಳುವ ರಾಷ್ಟ್ರ ಇದು. ಹಾಗಂತ ನೀವೇನಾದರು ಇದೂ ಕೂಡ ಅತ್ಯಂತ ಕಡು ಕಠೋರ ಇಸ್ಲಾಮಿ ಪಂಥವನ್ನು ಪಾಲಿಸುವಂಥ ಭೂಮಿ ಎಂದುಕೊಂಡರೆ ನಿಮ್ಮ ಭಾವನೆ ಅಕ್ಷರಶಃ ತಪ್ಪು. ಇಲ್ಲಿ ಬುಖರ್ಾ ಕಡ್ಡಾಯವಲ್ಲ. ಹೆಣ್ಣುಮಕ್ಕಳು ಮನೆಯೊಳಗೆ ಕುಳಿತಿರಬೇಕೆಂಬ ನಿಯಮವಿಲ್ಲ. ಅವರು ಮುಕ್ತರು ಮತ್ತು ಇತರೆ ಪಂಥದವರು ತಮ್ಮ ಆಚರಣೆಯನ್ನು ಮಾಡಿಕೊಳ್ಳಲು ಮುಕ್ತವಾದ ಅವಕಾಶ ಉಳ್ಳವರು. ಒಮನ್ ಅನ್ನು ಬಿಟ್ಟರೆ ಬಹುಶಃ ಇಸ್ಲಾಮಿ ರಾಷ್ಟ್ರಗಳಲ್ಲಿ ಶಾಂತಯುತವಾದ ಮತ್ತು ಬಹು ಜನರ ಮನಸ್ಸನ್ನು ಸೆಳೆಯಬಹುದಾದ ರಾಷ್ಟ್ರ ಬಹರೈನ್.

ಭಾರತಕ್ಕೂ ಬಹರೈನ್ಗೂ ಬಲು ಹಿಂದಿನ ಸಂಬಂಧ. ಶಿಯಾಗಳೇ ಬಹುಪಾಲು ತುಂಬಿದ್ದು ಸುನ್ನಿಗಳಿಂದ ಆಳಲ್ಪಡುತ್ತಿರುವ ಈ ಬಹರೈನ್ ಭಾರತದೊಂದಿಗೆ ಸುಮಧುರ ಬಾಂಧವ್ಯ ಹೊಂದಿದೆ. ಇಬ್ರಾಹಿಂ ಅಲ್ ಅರಾಯೇದ್ ಎಂಬ ಬಹರೈನೀ ಕವಿ ಹುಟ್ಟಿದ್ದೇ ಮುಂಬೈಯಲ್ಲಿ. ಆತ ತನ್ನ 14 ನೇ ವಯಸ್ಸಿಗೆ ಬಹರೈನ್ಗೆ ಹೋಗಿ ಅಲ್ಲಿಯೇ ಅಧ್ಯಯನ ಮಾಡಿ ಮುಂದೆ ಅಕ್ಕ-ಪಕ್ಕದ ರಾಷ್ಟ್ರಗಳಲ್ಲೆಲ್ಲಾ ಖ್ಯಾತ ಕವಿಯಾಗಿ ಹೆಸರು ಗಳಿಸಿದನಷ್ಟೇ ಅಲ್ಲದೇ ಬಹರೈನಿನ ಸಂವಿಧಾನ ರಚನೆಯಲ್ಲೂ ಅವನ ಪಾತ್ರ ಬಲು ದೊಡ್ಡದ್ದಾಗಿತ್ತು. ಸಲಿ ಅಲ್ ಕರ್ಜಕಾನಿ 17 ನೇ ಶತಮಾನದ ವೇಳೆಗೆ ಭಾರತಕ್ಕೆ ಬಂದು ಗೋಲ್ಕೊಂಡಾದ ರಾಜರ ಆಶ್ರಯ ಪಡೆದು ಶಿಯಾ ಚಿಂತನೆಯನ್ನು ಹರಡಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದ ಎಂದು ತಿಳಿದು ಬರುತ್ತದೆ. 70 ರ ದಶಕದವರೆಗೂ ಇಲ್ಲಿನ ಹಣಕಾಸು ವಹಿವಾಟು ರೂಪಾಯಿಗಳಲ್ಲೇ ನಡೆಯುತ್ತಿತ್ತು ಎಂಬುದು ಅವರ ಮೇಲಿದ್ದ ಭಾರತದ ಪ್ರಭಾವ ಎಂಥದ್ದೆಂಬುದನ್ನು ತೋರಿಸುತ್ತದೆ. ಕಾಲಕ್ರಮದಲ್ಲಿ ನಮ್ಮ ಸ್ಥಾನವನ್ನು ಅಮೇರಿಕಾ ತುಂಬುತ್ತಾ ಹೋದಂತೆ ಇವರೆಲ್ಲರೂ ಹಂತ-ಹಂತವಾಗಿ ಭಾರತದಿಂದ ದೂರಾಗುತ್ತಾ ಬಂದರು. ಅಷ್ಟಾಗಿಯೂ ಭಾರತದೊಂದಿಗಿನ ಅವರ ಬಾಂಧವ್ಯ ಕಡಿಮೆಯಾಗಲೇ ಇಲ್ಲ. ಅವರ ಒಟ್ಟಾರೆ 15 ಲಕ್ಷ ಜನಸಂಖ್ಯೆಯಲ್ಲಿ 5 ಲಕ್ಷಜನ ಭಾರತೀಯರೇ ಇರುವುದು ಇದರ ದ್ಯೋತಕವಾಗಿದೆ. 2007 ರಲ್ಲಿ ಭಾರತಕ್ಕೆ ಬಂದಿದ್ದ ಬಹರೈನಿನ ನಿಯೋಗವೊಂದು ಇಲ್ಲಿ ಪ್ರಮುಖ ನಾಯಕರೊಂದಿಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ ತಾವು ಭಾರತಕ್ಕೆ ಹತ್ತಿರವಾಗಿದ್ದು ತಮಗೆ ಎಲ್ಲ ರೀತಿಯ ಶಿಕ್ಷಣವನ್ನೂ ಭಾರತವೇ ಕೊಡಬಲ್ಲುದು ಎಂದು ಹೇಳಿದ್ದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಅದೇ ವರ್ಷ ಇಲ್ಲಿನ ಮನಾಮದಲ್ಲಿ ಭಾರತ ಮತ್ತು ಬಹರೈನ್ಗಳ ಸಂಬಂಧ ವೃದ್ಧಿಗಾಗಿ ಒಂದು ಸೊಸೈಟಿಯನ್ನೂ ತೆಗೆಯಲಾಗಿತ್ತು. 2014 ರಲ್ಲಿ ಬಹರೈನ್ ನ ರಾಜ ಶೇಕ್ ಹಮಾದ್ ಭಾರತಕ್ಕೆ ಭೇಟಿ ಕೊಟ್ಟು 450 ಮಿಲಿಯನ್ ಡಾಲರುಗಳಿಗಿಂತಲೂ ಅಧಿಕವಾದ ಒಪ್ಪಂದಗಳಿಗೆ ಸಹಿ ಹಾಕಿ ಎರಡೂ ರಾಷ್ಟ್ರಗಳ ಸಂಬಂಧವನ್ನು ಈ ಹೊತ್ತಲ್ಲಿ ವೃದ್ಧಿಸುವಂತಹ ಪ್ರಯತ್ನವನ್ನು ಮಾಡಿದ್ದರು.

4

ಇಷ್ಟನ್ನೂ ಈಗೇಕೆ ಹೇಳಬೇಕಾಯಿತೆಂದರೆ ಬಹರೈನ್ನಲ್ಲಿರುವ ಬಸವ ಸಮಿತಿಯ ಆಹ್ವಾನದ ಮೇರೆಗೆ ಬಸವ ಜಯಂತಿಯ ಆಚರಣೆಗೆ ಹೋಗುವ ಅವಕಾಶ ಸಿಕ್ಕಿತು. ಪಕ್ಕದ ಸೌದಿಯಲ್ಲಿ ಭಾರತದಿಂದ ದೇವರ ಚಿತ್ರ ಹೊಂದಿರುವ ನಿಯತ ಕಾಲಿಕೆಗಳು ಬಂದರೆ ಅದಕ್ಕೂ ಮಸಿ ಬಳಿದು ಕಳಿಸುವ ಸಂಪ್ರದಾಯವಿರುವಾಗ ಬಹರೈನಿನಲ್ಲಿ ಬಸವಣ್ಣನವರ ಚಿತ್ರವಿಟ್ಟು ಆರತಿಗೈಯ್ಯುವಷ್ಟು ಸ್ವಾತಂತ್ರ್ಯವಿದೆ. ಎಲ್ಲರೂ ಸೇರಿ ಭಜನೆಗೈಯ್ಯುವ ಸತ್ಸಂಗ ನಡೆಸುವ ಅವಕಾಶವೂ ಅಲ್ಲಿದೆ. ಬಸವ ಸಮಿತಿ ಅದೆಷ್ಟು ಸುಂದರವಾದ ವಾತಾವರಣವನ್ನು ನಿಮರ್ಿಸಿದೆ ಎಂದರೆ ವರ್ಷಕ್ಕೆ ನಾಲ್ಕಾರು ದೊಡ್ಡ ಕಾರ್ಯಕ್ರಮಗಳನ್ನು ಮಾಡುವುದಲ್ಲದೇ ಮಹಾಮನೆಯೆಂಬ ಕಾರ್ಯಕ್ರಮವನ್ನು ಸಾಧ್ಯವಾದಾಗಲೆಲ್ಲ ನಡೆಸಿಕೊಡುತ್ತದೆ. ಯಾರಾದರೊಬ್ಬರ ಮನೆಯಲ್ಲಿ ನೂರಾರು ಜನ ಸೇರಿ ಶರಣರ ಚಿಂತನೆಗಳನ್ನು ತತ್ತ್ವಗಳನ್ನು ಅರಿಯುವ ಪ್ರಯತ್ನ ಮಾಡುತ್ತಾರಲ್ಲದೇ ಮುಂದಿನ ಪೀಳಿಗೆಗೆ ವಚನಗಳನ್ನು ಉಳಿಸಿ ಹೋಗಲೆಂದೇ ಆ ಮಕ್ಕಳಿಗೆ ಅದನ್ನು ಕಲಿಸಿ ಕೊಡುತ್ತಾರೆ. ಕನರ್ಾಟಕದಲ್ಲಿರುವ ಅದೆಷ್ಟು ಮಕ್ಕಳಿಗೆ ಬಸವಣ್ಣನವರ ವಚನಗಳು ಬಾಯಿಗೆ ಬರುವುದೋ ಗೊತ್ತಿಲ್ಲ. ಆದರೆ ಬಹರೈನಿನಲ್ಲಿರುವ ಬಹುತೇಕ ಮಕ್ಕಳು ಲೀಲಾಜಾಲವಾಗಿ ವಚನಗಳನ್ನು ಹೇಳುತ್ತಾರೆ. ಧರ್ಮವನ್ನು ಉಳಿಸುವುದೆಂದರೆ ಅದನ್ನು ಒಡೆದು ಪ್ರತ್ಯೇಕ ಮಾಡುವುದಲ್ಲ ಬದಲಿಗೆ ಮೂಲ ತತ್ತ್ವ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ವಗರ್ಾಯಿಸುವುದು ಎಂಬುವುದನ್ನು ಇಲ್ಲಿನ ಜನ ಚೆನ್ನಾಗಿಯೇ ಅಥರ್ೈಸಿಕೊಂಡಿದ್ದಾರೆ. ಹೀಗಾಗಿಯೇ ಇಲ್ಲಿಗೆ ಬಂದಾಗ ನಿಮಗೆ ಹೊರದೇಶಕ್ಕೆ ಬಂದಿದ್ದೇನೆಂದು ಖಂಡಿತ ಅನಿಸುವುದಿಲ್ಲ. ಒಂದು ಪುಟ್ಟ ಕನರ್ಾಟಕದಲ್ಲೇ ಇರುವಂಥ ಭಾವನೆ ಖಂಡಿತ ಹೊಮ್ಮುತ್ತದೆ.

ಅದು ಸುಳ್ಳೇನೂ ಅಲ್ಲ. ಈ ಪುಟ್ಟ ಬಹರೈನಿನಲ್ಲಿ 20 ಸಾವಿರಕ್ಕೂ ಮಿಕ್ಕಿದ ಕನ್ನಡಿಗರಿದ್ದಾರೆ. ಇಷ್ಟೂ ಜನರನ್ನು ಒಂದು ಸೂತ್ರದಡಿ ಬಂಧಿಸುವ ಪ್ರಯತ್ನವನ್ನು ಕಳೆದ 40 ವರ್ಷಗಳಿಂದಲೂ ಇಲ್ಲಿನ ಕನ್ನಡ ಸಂಘ ಮಾಡುತ್ತಿದೆ. ಇಷ್ಟು ದೀರ್ಘಕಾಲ ಹೊರದೇಶವೊಂದರಲ್ಲಿ ಕನ್ನಡ ಸಂಘವನ್ನು ಕಟ್ಟಿ, ಬೆಳೆಸಿ ಅದನ್ನು ಆದರ್ಶವಾಗುವಂತೆ ಎಲ್ಲರ ಮುಂದೆ ಪ್ರಸ್ಥಾಪಿಸುವುದು ಸುಲಭದ ಮಾತಲ್ಲ. ಕನ್ನಡಿಗರ ಎಲ್ಲ ಸಣ್ಣ-ಪುಟ್ಟ ಸಂಘಟನೆಗಳನ್ನು ತನ್ನೊಡಲೊಳಗೆ ಇಟ್ಟುಕೊಂಡು ಕನ್ನಡ ಸಂಘ ಬೃಹದಾಕಾರವಾಗಿ ಬೆಳೆದಿದೆ. ಇದು ಬೇರೆ ದೇಶಗಳಲ್ಲಿರುವ ಕನ್ನಡಿಗರಿಗೆ ಮಾರ್ಗದರ್ಶನವಷ್ಟೇ ಅಲ್ಲ, ಸ್ವತಃ ಕನರ್ಾಟಕದ ಕನ್ನಡ ಸಂಘಗಳಿಗೂ ಆದರ್ಶವಾಗಿ ನಿಲ್ಲಬಲ್ಲುದು.

ಭಾಷೆಯ-ಸಂಸ್ಕೃತಿಯ ಮೌಲ್ಯ ಅರಿವಾಗಬೇಕು ಎಂದರೆ ವಿದೇಶಕ್ಕೆ ಹೋಗಬೇಕು. ದೂರದ ದೇಶದಲ್ಲಿ ನಮ್ಮ ತಿಂಡಿ ಸಿಗುವಾಗ ಅಲ್ಲಿ ನಮ್ಮ ಭಾಷೆ ಕಿವಿಗೆ ಬೀಳುವಾಗ ಸ್ವರ್ಗವೇ ಕೈಗೆ ಸಿಕ್ಕಂತಹ ಅನುಭವವಾಗುತ್ತದೆ. ಕನರ್ಾಟಕದಲ್ಲಾದರೆ ದೇವಸ್ಥಾನಗಳಿಗೆ ಹೋಗದ ಕನ್ನಡದ ಕಾರ್ಯಕ್ರಮಗಳತ್ತ ತಲೆ ಹಾಕಿಯೂ ಮಲಗದ ತರುಣರು ವಿದೇಶಕ್ಕೆ ಹೋದೊಡನೆ ಇವೆಲ್ಲವುಗಳೊಂದಿಗೆ ಒಂದಾಗಿ ಬಿಡುತ್ತಾರೆ. ಅಲ್ಲಿಯವರಿಗೆ ತಮ್ಮ ಮುಂದಿನ ಪೀಳಿಗೆಯ ಕುರಿತು ಭಾರತೀಯ ಸಂಸ್ಕೃತಿಯಿಂದ ದೂರವಾಗುವ ಹೆದರಿಕೆ ಕಾಡಲಾರಂಭಿಸುತ್ತದೆ. ಆಗಲೇ ಅದನ್ನು ಉಳಿಸಿಕೊಳ್ಳುವ ತೀವ್ರತರ ಪ್ರಯತ್ನ ಶುರುವಾಗೋದು. ಅದರಲ್ಲೂ ಕಠೋರ ಧಾಮರ್ಿಕ ಆಚರಣೆಗಳುಳ್ಳ ಮುಸಲ್ಮಾನ ರಾಷ್ಟ್ರಗಳಲ್ಲಿ ನೆಲೆ ನಿಂತರಂತೂ ಶತಾಯ-ಗತಾಯ ಭಾರತೀಯ ಸಂಸ್ಕೃತಿ ಸಭ್ಯತೆಗಳನ್ನು ಅಪ್ಪಿಕೊಂಡು ಬದುಕಿ ಬಿಡುತ್ತಾರೆ. ಅನೇಕರಂತೂ ತಾವಿರುವ ದೇಶದ ಯಾವ ಮೂಲಭೂತ ಸೌಕರ್ಯಗಳಿಗೂ ಭಾರತ ಸರಿಸಾಟಿಯಾಗಿರದಿರುವಾಗಲೂ ತಮ್ಮ ಮಕ್ಕಳನ್ನು ಅಧ್ಯಯನಕ್ಕೆಂದು ಭಾರತಕ್ಕೆ ಕಳುಹಿಸುತ್ತಾರೆ. ಈ ತೀವ್ರತೆ ಬೇರೆಲ್ಲೆಡೆಗಳಿಗಿಂತಲೂ ಹೆಚ್ಚಾಗಿ ಬಹರೈನಿನಲ್ಲಿ ಕಂಡು ಬಂತು. ಒಮನ್ನಲ್ಲಿರುವ ಕನ್ನಡಿಗರು ಬಹು ಮಟ್ಟಿಗೆ ಇದೇ ಭಾವನೆಯಲ್ಲಿರುವವರು. ಹಾಗಂತ ಆಸ್ಟ್ರೇಲಿಯಾದ ಸೌತ್ ಆಫ್ರಿಕಾದ ಕನ್ನಡಿಗರು ಈ ರೀತಿಯಲ್ಲಿ ಆಲೋಚಿಸುವುದನ್ನು ಕಂಡಿಲ್ಲ. ತಮ್ಮ ಸಾಂಸ್ಕೃತಿಗೆ ಆಚರಣೆಗಳಿಗೆ ಸಿಗುವ ಸ್ವಾತಂತ್ರ್ಯದ ಆಧಾರದ ಮೇಲೆ ಈ ಭಾವನೆಗಳು ರೂಪುಗೊಳ್ಳುತ್ತದೆ ಎಂದೆನಿಸುತ್ತದೆ. ಈ ಕುರಿತಂತೆ ವಿಶೇಷವಾದ ಅಧ್ಯಯನ ಆಗಬೇಕಿದೆ.

1

ಹಾಗೆ ನೋಡಿದರೆ ಬಹರೈನ್ ನಿಮರ್ಾಣಗೊಂಡಿರುವುದೇ ಸೌದಿ ಅರೆಬಿಯಾದ ಕಟ್ಟರತೆಯಿಂದ ಭೋಗದ ಸ್ವಾತಂತ್ರ್ಯದೆಡೆಗೆ ಧಾವಿಸ ಬಯಸುವ ಜನರಿಗಾಗಿ. ಶುಕ್ರವಾರ ಸಂಜೆಯಾದರೆ ಸೌದಿಯಿಂದ ಬಹರೈನನ್ನು ಸಂಪಕರ್ಿಸುವ ಸೇತುವೆಯ ಮೇಲೆ ಸಾವಿರಾರು ಗಾಡಿಗಳು ಹರಿದಾಡಿಬಿಡುತ್ತವೆ. ಪ್ರತಿ ವಾರ 30 ಸಾವಿರಕ್ಕೂ ಹೆಚ್ಚು ಕಾರುಗಳು ಅತ್ತಲಿಂದ ಇಲ್ಲಿಗೆ ಬರುತ್ತವೆ. ವಿಶೇಷ ದಿನಗಳಲ್ಲಿ 90 ಸಾವಿರಕ್ಕೂ ಮಿಕ್ಕಿ ಗಾಡಿಗಳು ಈ ದಿಕ್ಕಿಗೆ ಧಾವಿಸುತ್ತದೆ. ವಾರಾಂತ್ಯವೆಂದರೆ ಸೌದಿಯಲ್ಲಿ ಕಠೋರ ನಿಯಮಗಳನ್ನು ಹೇರುವ ಮುಸಲ್ಮಾನರಿಗೆ ಬಹರೈನಿನಲ್ಲಿ ಭೋಗದ ಬದುಕು. ಬದುಕೇ ಹಾಗಲ್ಲವೇ. ತನ್ನನ್ನು ದೊರೆಯಾಗಿಸಬಲ್ಲ ಎಲ್ಲ ನಿಯಮಗಳನ್ನು ಇತರರು ಪಾಲಿಸಬೇಕು. ಆದರೆ ತಾನು ಮಾತ್ರ ಅವೆಲ್ಲವನ್ನೂ ಮೀರಿದ ಪ್ರಾಪಂಚಿಕ ವಾಸನೆಯಲ್ಲಿ ಮೀಯಬೇಕು. ಬಹರೈನ್ ಈ ಪಾಠವನ್ನು ಬಲು ಸುಂದರವಾಗಿ ಕಲಿಸುತ್ತದೆ.

ಹೃದಯದಲ್ಲಿ ಎಲ್ಲಕ್ಕೂ ಸ್ಥಾನವಿರಬೇಕು. ಎಲ್ಲದರಿಂದಲೂ ಹೊರಗಿದ್ದು ಎಲ್ಲವನ್ನೂ ಅನುಭವಿಸಬಲ್ಲ ಸಾಮಥ್ರ್ಯವಿರಬೇಕು. ಕೆಸರಿನಲ್ಲೇ ಇದ್ದು ಕಮಲವಾಗಿ ಅರುಳುವುದನ್ನೂ ಕಲಿಯಬೇಕು. ಬಹರೈನ್ ಇವೆಲ್ಲವನ್ನೂ ಕಲಿಸುತ್ತದೆ. ಕಲಿಯುವ ಮನಸ್ಸು ಗಮನಿಸುವ ದೃಷ್ಟಿ ಎರಡಿದ್ದರೆ ಸಾಕು ಅಷ್ಟೇ. ಎರಡು ದಿನಗಳಲ್ಲಿ ದೇಶವಾಗಿ ಬಹರೈನು, ನಮ್ಮವರಾಗಿ ಅಲ್ಲಿನ ಕನ್ನಡಿಗರು ಸಾಕಷ್ಟು ಪಾಠ ಕಲಿಸಿದರು.

Comments are closed.