ವಿಭಾಗಗಳು

ಸುದ್ದಿಪತ್ರ


 

ದೇವರಿಲ್ಲ, ವಿಜ್ಞಾನವೇ ಎಲ್ಲ!

ಸ್ಟೀಫನ್ ವಿಶ್ವದ ಉಗಮ ಮತ್ತು ಅತ್ಯಂದ ಬಗ್ಗೆ ಮಂಡಿಸಿದ ಚಿಂತನೆಗಳಂತೂ ಕ್ರಿಶ್ಚಿಯನ್ ಧರ್ಮದ ಬುಡವನ್ನು ಅಲ್ಲಾಡಿಸಿಬಿಟ್ಟವು. ವಿಶ್ವದ ಉಗಮವೂ ಆಗಿರಲಿಲ್ಲ, ಅಂತ್ಯವೂ ಆಗಲಾರದು ಎಂಬ ಅವನ ಮಾತಿಗೆ ಪೋಪ್ ಆಕ್ಷೇಪವೆತ್ತಿದ್ದರು. ಭಗವಂತನ ರೀತಿಗಳ ಬಗ್ಗೆ ವಿಚಾರಣೆ ನಡೆಸಿದರೆ ನೋಡು ಎಂದು ಎಚ್ಚರಿಕೆ ಕೊಟ್ಟು ಬಾಯ್ಮುಚ್ಚಿಸುವ ಪ್ರಯತ್ನ ನಡೆಸಿದ್ದರು. ಹಾಗಂತ ಸ್ಟೀಫನ್ ಹೆದರಿಬಿಟ್ಟ ಎಂದೇನಲ್ಲ.

ದೊಡ್ಡ ಕಾಯಗಳನ್ನು ಗಮನಿಸಿ ಅಧ್ಯಯನ ಮಾಡಬೇಕು ಅನ್ನೋದು ಬರಿ ಹುಚ್ಚಾಗಿತ್ತು ಅಷ್ಟೇ. ಆ ನೆಪದಲ್ಲಿ ಪಿ.ಎಚ್.ಡಿ ಸಿಕ್ಕಿಬಿಟ್ಟರೆ ಬದುಕಿಗೆ ಆಧಾರವಾದೀತು ಎಂಬ ನಂಬಿಕೆ ಇತ್ತು. ಆದರೆ ಆದದ್ದೇ ಬೇರೆ. ಕಣ್ಣಿಗೆ ಕಾಣುವ ಗ್ರಹಗಳನ್ನು ಬಿಟ್ಟು ಕಾಣದೇ ಇರುವ ಕಪ್ಪು ರಂಧ್ರಗಳ ಅಧ್ಯಯನ ಶುರುವಾಯ್ತು. ಅದ್ಯಾವ ಮಾಯೆಯೋ ಏನೋ? ಆ ಕಪ್ಪು ರಂಧ್ರಗಳ ಬಗ್ಗೆ ಹೇಳಿದ್ದೆಲ್ಲ ವೇದವಾಕ್ಯವಾಯ್ತು. ಕೆಲವೇ ವರ್ಷಗಳ ಮೊದಲು ಕಪ್ಪು ರಂಧ್ರಗಳು ಕೆಲಸಕ್ಕೆ ಬಾರದ ಕಾಯಗಳಾಗಿದ್ದವು. ಸ್ಟೀಫನ್ ಕೂಡಾ ಅಷ್ಟೇ. ಕೆಲಸಕ್ಕೆ ಬಾರದ ರೋಗಿಷ್ಟನಾಗಿದ್ದ. ಈಗ ನೋಡಿ. ಕಪ್ಪು ರಂಧ್ರಗಳು ಕುತೂಹಲದ ಕಣಜಗಳಾಗಿದ್ದರೆ, ಸ್ಟೀಫನ್ ವಿಜ್ಞಾನ ಲೋಕದ ಮಾಂತ್ರಿಕನಾಗಿಬಿಟ್ಟ!

ಸ್ಟೀಫನ್ ವಿಶ್ವದ ಉಗಮ ಮತ್ತು ಅತ್ಯಂದ ಬಗ್ಗೆ ಮಂಡಿಸಿದ ಚಿಂತನೆಗಳಂತೂ ಕ್ರಿಶ್ಚಿಯನ್ ಧರ್ಮದ ಬುಡವನ್ನು ಅಲ್ಲಾಡಿಸಿಬಿಟ್ಟವು. ವಿಶ್ವದ ಉಗಮವೂ ಆಗಿರಲಿಲ್ಲ, ಅಂತ್ಯವೂ ಆಗಲಾರದು ಎಂಬ ಅವನ ಮಾತಿಗೆ ಪೋಪ್ ಆಕ್ಷೇಪವೆತ್ತಿದ್ದರು. ಭಗವಂತನ ರೀತಿಗಳ ಬಗ್ಗೆ ವಿಚಾರಣೆ ನಡೆಸಿದರೆ ನೋಡು ಎಂದು ಎಚ್ಚರಿಕೆ ಕೊಟ್ಟು ಬಾಯ್ಮುಚ್ಚಿಸುವ ಪ್ರಯತ್ನ ನಡೆಸಿದ್ದರು. ಹಾಗಂತ ಸ್ಟೀಫನ್ ಹೆದರಿಬಿಟ್ಟ ಎಂದೇನಲ್ಲ. ಆತ ತನ್ನ ನಿಲುವಿಗೆ ಯಾವಾಗಲೂ ಬದ್ಧನಾಗಿಯೇ ಇದ್ದ. ಆದರೂ ಈ ಸೃಷ್ಟಿಯ ವೈಚಿತ್ರ್ಯಗಳ ಬಗ್ಗೆ ಯಾವಾಗಲೂ ತಲೆಕೆಡಿಸಿಕೊಳ್ಳುತ್ತಿದ್ದ. ಸ್ಟೀಫನ್ ಗೆಳೆಯರೊಂದಿಗೆ ಹರಟುತ್ತಾ ಕುಳಿತಾಗ ಹೇಳುತ್ತಿದ್ದ ‘ಎಲೆಕ್ಟ್ರಾನ್ನ ಎಲೆಕ್ಟ್ರಿಕ್ ಚಾಜರ್್ ಸ್ವಲ್ಪವೇ ಬದಲಾದರೂ ಸಾಕಿತ್ತು ನಕ್ಷತ್ರಗಳು ಸುಡುತ್ತಿರಲಿಲ್ಲ. ಬೆಳಕು ಕೊಡುತ್ತಿರಲಿಲ್ಲ. ನೋವಾಗಳೂ ಆಗುತ್ತಿರಲಿಲ್ಲ. ಸೂಪರ್ನೋವಾಗಳೂ ಆಗುತ್ತಿರಲಿಲ್ಲ. ಧರೆಯ ಗುರುತ್ವಶಕ್ತಿ ಸ್ವಲ್ಪ ಕಡಿಮೆ ಇದ್ದಿದ್ದರೂ ಅಣುಗಳು ಜೊತೆಗೂಡಿ ನಕ್ಷತ್ರಗಳಾಗುತ್ತಲೇ ಇರಲಿಲ್ಲ’ ಎಲ್ಲವೂ ಸತ್ಯವೇ ಅಲ್ಲವೇ?

ವಿಜ್ಞಾನ ಮತ್ತು ಧರ್ಮದ ನಡುವೆ ತೆಳುವಾದ ಒಂದು ಗೆರೆ ಇದೆ. ಆ ಗೆರೆಯನ್ನು ಗುರುತಿಸುವುದು ಸಾಧ್ಯವಾಗಬೇಕು. ಎಲ್ಲಿ ವಿಜ್ಞಾನ ಇನ್ನು ನನ್ನಿಂದ ಏನೂ ಸಾಧ್ಯವಿಲ್ಲವೆಂದು ಕೈಚೆಲ್ಲಿ ಕುಳಿತುಬಿಡುತ್ತದೆಯೋ ಅಲ್ಲಿಂದ ಧರ್ಮದ ಪರಿಧಿ ಶುರುವಾಗಿಬಿಡುತ್ತದೆ. ಈ ಹಂತದಲ್ಲಿಯೇ ಭಾರತೀಯ ತತ್ತ್ವಗಳು, ಸಿದ್ಧಾಂತಗಳು, ಧಾಮರ್ಿಕ ಚಿಂತನೆಗಳು ಉತ್ಕೃಷ್ಟ ಎನಿಸೋದು. ವಿಜ್ಞಾನ ವಿವರಿಸಲಾಗದ ಸೃಷ್ಟಿಯ ಸತ್ಯಗಳನ್ನು ಇಲ್ಲಿನ ಋಷಿಮುನಿಗಳು ವಿವರಿಸಿದ್ದಾರೆ. ಅವರ ಇಡಿಯ ಬದುಕು ಈ ಬಗೆಯ ಸತ್ಯದ ಹುಡುಕಾಟದಲ್ಲಿಯೇ ನಿರತವಾಗಿತ್ತು. ಹೀಗಾಗಿಯೇ ನಮ್ಮ ತತ್ತ್ವಜ್ಞಾನಕ್ಕೆ ಎಲ್ಲೆಡೆ ಮನ್ನಣೆ.

1

ಆದರೆ ಸ್ಟೀಫನ್ ಅದನ್ನು ವಿಶೇಷವಾಗಿ ನಂಬುವುದೋ ಗೌರವಿಸುವುದೋ ಮಾಡುತ್ತಿರಲಿಲ್ಲ. ದೇವರು ಎಂಬ ವಿಚಾರದ ಬಗ್ಗೆ ಆತನ ಚಿಂತನೆಗಳು ಅಸ್ಪಷ್ಟವಾಗಿದ್ದವು. ಯೋಚನೆ ಮಾಡಬಲ್ಲ ಶಕ್ತಿ ಇರುವವರಿಗೆ ಮಾತ್ರ ಭೌತಶಾಸ್ತ್ರದ ಶಕ್ತಿಗಳು ಗೋಚರವಾಗುತ್ತವೆ, ಇಲ್ಲವಾದವರಿಗೆ  ಇಲ್ಲ ಎನ್ನುತ್ತಿದ್ದ. ತತ್ತ್ವ-ಸಿದ್ಧಾಂತಗಳು ಒಂದೆಡೆಯಾದರೆ ಬದುಕು ಮತ್ತೊಂದೆಡೆ. 1982 ರ ವೇಳೆಗೆ ಜಗತ್ತಿನ ಖ್ಯಾತ ವಿಜ್ಞಾನಿಯಾಗಿದ್ದ ಸ್ಟೀಫನ್ ಹನ್ನೊಂದು ವರ್ಷದ ತನ್ನ ಮಗನ ಶಾಲೆಯ ಫೀಸ್ ಕಟ್ಟಲಾಗದೆ ಒದ್ದಾಡುತ್ತಿದ್ದ. ಏನು ಮಾಡುವುದು? ಆಗಲೇ ಸ್ಟೀಫನ್ ಹೊಸ ಸಾಹಸಕ್ಕೆ ಕೈ ಹಾಕಿದ್ದು.

ವಿಜ್ಞಾನ ಲೋಕದಲ್ಲಿ ಕಪ್ಪು ರಂಧ್ರಗಳ ಬಗ್ಗೆ ಸಮಯದ ಪರಿಧಿಗಳ ಬಗ್ಗೆ ವಿವರಿಸುವವರು ಯಾರೂ ಇಲ್ಲ. ಆಸಕ್ತರಿಗೆ, ಅಧ್ಯಯನ ಶೀಲರಿಗೆ ಮಾರ್ಗದರ್ಶನ ಮಾಡಬಲ್ಲ ಪುಸ್ತಕಗಳೂ ಇಲ್ಲ. ತನ್ನ ಚಿಂತನೆಗಳನ್ನು ಬರಹ ರೂಪದಲ್ಲಿ ಇಳಿಸಿದರೆ ಹೇಗೆ? ಆತ ಪ್ರಕಾಶಕರನ್ನು ಭೇಟಿಯಾದ. ಈ ಹಿಂದೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಅವನ ಪುಸ್ತಕವನ್ನು ಪ್ರಕಾಶಪಡಿಸಿತ್ತು. ಈಗ ವ್ಯಾಪಕವಾಗಿ ಪುಸ್ತಕದ ಪ್ರಚಾರ ಮಾಡಬಲ್ಲ ಪ್ರಕಾಶಕರು ಸ್ಟೀಫನ್ಗೆ ಬೇಕಿದ್ದರು. ಆತ ಹಲವರನ್ನು ಭೇಟಿಯಾದ. ತನ್ನ ಪುಸ್ತಕಗಳನ್ನು ಏರ್ಪೋಟರ್್ನ ಸ್ಟಾಲುಗಳಲ್ಲಿಯೂ ಮಾರಾಟ ಮಾಡಬಲ್ಲವರು ಬೇಕು ಎಂಬುದು ಆತನ ಕನಸು.

1948 ರ ವೇಳೆಗೆ ಪುಸ್ತಕದ ಬರವಣಿಗೆ ಮುಗಿಯಿತು. ಅದನ್ನು ಪ್ರಕಾಶಕರ ಬಳಿಗೆ ಕಳುಹಿಸಿದರೆ, ಅವರು ಅದನ್ನು ಮರಳಿ ಕಳಿಸಿದರು. ಸ್ಟೀಫನ್ ಹುಡುಕಿದ ಪ್ರಕಾಶಕರಿಗೆ ವಿಜ್ಞಾನದ ಪುಸ್ತಕಗಳನ್ನು ಪ್ರಕಟಿಸಿ ಗೊತ್ತಿರಲಿಲ್ಲ. ಆತ ಪುಸ್ತಕದಲ್ಲಿ ಅರ್ಥವಾಗದ ವಿಚಾರಗಳ ಪಟ್ಟಿ ಮಾಡಿ ಸ್ಟೀಫನ್ ಕೈಗಿತ್ತ. ತಿದ್ದುವಂತೆ ಹೇಳಿದ. ತಿದ್ದುಪಡಿ ಮುಗಿಯಿತು. ಈ ಬಾರಿ ಪ್ರಕಾಶಕರು ಮತ್ತೊಂದಷ್ಟು ಅರ್ಥವಾಗದ ವಿಚಾರಗಳ ಬಗ್ಗೆ ಗಮನ ಸೆಳೆದರು. ನಿಜಕ್ಕೂ ಸ್ಟೀಫನ್ಗೆ ಕಿರಿಕಿರಿಯಾಗಿತ್ತು. ಆದರೆ ವಾಸ್ತವವಾಗಿ ಸ್ಟೀಫನ್ ಬರವಣಿಗೆಯೇ ಹಾಗಿತ್ತು. ವಿಷಯದಿಂದ ವಿಷಯಕ್ಕೆ ಹಾರಿಬಿಡುತ್ತಿದ್ದ. ಎಲ್ಲರಿಗೂ ವಿಜ್ಞಾನ ಗೊತ್ತಿದೆ ಎಂಬುದು ಅವನ ಸ್ವಯಂ ನಿಧರ್ಾರ. ಹೀಗಾಗಿಯೇ ಪ್ರಕಾಶಕರು ಆಕ್ಷೇಪ ವ್ಯಕ್ತಪಡಿಸಿದಾಗಲೆಲ್ಲ ಉತ್ತರ ಬರೆದ, ಪುಸ್ತಕ ತಿದ್ದಿದ. ಅದರ ಫಲವಾಗಿಯೇ ಆ ಪುಸ್ತಕಕ್ಕೊಂದು ಒಳ್ಳೆಯ ರೂಪ ದೊರಕಿದ್ದೆಂದು ಒಪ್ಪಿಕೊಂಡು.

ಈ ಸಂದರ್ಭದಲ್ಲಿಯೇ ಸ್ಟೀಫನ್ ಸ್ವಿಟ್ಜರ್ಲೆಂಡ್ನ ಪ್ರವಾಸಕ್ಕೆಂದು ಹೊರಟಿದ್ದು. ಒಂದೆಡೆ ನಿರಂತರ ವೈಜ್ಞಾನಿಕ ಚಿಂತನೆ, ಮತ್ತೊಂದೆಡೆ ಪುಸ್ತಕದ ರಚನೆ ಇವುಗಳ ನಡುವೆ ಸ್ವಿಟ್ಜರ್ಲೆಂಡಿನ ಪ್ರವಾಸ. ಆ ಪ್ರವಾಸದಲ್ಲಿದ್ದಾಗಲೇ ಆತನಿಗೆ ನ್ಯುಮೋನಿಯ ರೋಗ ಅಂಟಿತು. ತುತರ್ಾಗಿ ಬರುವಂತೆ ಜೇನ್ಳಿಗೆ ಕರೆ ಬಂತು. ಜಿನೀವಕ್ಕೆ ಬಂದ ಜೇನ್ಳಿಗೆ ಆಸ್ಪತ್ರೆಯ ವೈದ್ಯರು ಹೆದರಿಕೆ ಸುದ್ದಿ ಕೊಟ್ಟರು. ಈ ನ್ಯುಮೋನಿಯವನ್ನು ಆಪರೇಶನ್ನಿಂದ ಮಾತ್ರ ಗುಣಪಡಿಸಲು ಸಾಧ್ಯ. ಆಪರೇಶನ್ ಮಾಡಲಿಲ್ಲವೆಂದರೆ ಸ್ಟೀಫನ್ ಸಾಯುವುದು ಪಕ್ಕಾ! ಆದರೆ ಹಾಗೆ ಮಾಡಿದರೆ ಗಂಟಲನಾಳವನ್ನು ಕಿತ್ತೆಸೆಯಬೇಕಾಗುತ್ತದೆ. ಆಮೇಲೆ ಸ್ಟೀಫನ್ ಮಾತನಾಡಲಾರ. ಗಂಟಲಿಂದ ಸದ್ದೂ ಹೊರಡಿಸಲಾರ!

ಈವರೆಗೆ ಸ್ಟೀಫನ್ ಗಂಟಲಿಂದ ಸದ್ದು ಹೊರಡಿಸುತ್ತಿದ್ದ. ಪದಗಳ ಉಚ್ಚಾರಣೆ ಮಾಡುತ್ತಿದ್ದ. ಅದರ ಮೂಲಕ ಮಾತನಾಡುತ್ತಿದ್ದ, ಭಾಷಣಗಳನ್ನೂ ಮಾಡುತ್ತಿದ್ದ. ಈಗ? ಗಂಟಲನಾಳ ಕಿತ್ತೆಸೆದರೆ ಮಾತನಾಡುವುದಿರಲಿ ಆತ ಸದ್ದೂ ಹೊರಡಿಸಲಾರ!

ಜೇನ್ ಹಾಕಿಂಗ್ಳ ತಲೆಕೆಟ್ಟು ಹೋಯಿತು. ಯಾವ ಹೆಜ್ಜೆಯಿಡಬೇಕೆಂದು ತಿಳಿಯದೇ ಒದ್ದಾಡಿದಳು. ಸ್ಟೀಫನ್ ಈವರೆಗೂ ಸಂಶೋಧನೆಗಳನ್ನು ಜಗತ್ತಿಗೆ ಹೇಳುವಲ್ಲಿ ಮಾತು ಬಹುಮುಖ್ಯ ಎಂಬುದು ಆಕೆಗೆ ಗೊತ್ತಿತ್ತು. ಆದರೆ ಆ ಮಾತಿಗಿಂತ ಸ್ಟೀಫನ್ನ ಬದುಕು ಬಹುಮುಖ್ಯ ಎಂಬುದರ ಅರಿವೂ ಇತ್ತು. ಅದಕ್ಕಾಗಿ ಆಕೆ ಒಂದು ನಿಧರ್ಾರ ಕೈಗೊಳ್ಳಬೇಕಿತ್ತು.

Comments are closed.