ವಿಭಾಗಗಳು

ಸುದ್ದಿಪತ್ರ


 

ದೇವರ ಆದೇಶ, ‘ಮನೆಯಲ್ಲಿರಿ’!

ಲೇಖಕ ಮೋಹಕ್ ಗುಪ್ತಾ ಕರೋನಾದ ಆರ್ನಾಟ್ ಮತ್ತು ಸಾವಿನ ದರವನ್ನು ಮುಂದಿಟ್ಟುಕೊಂಡು ಒಂದು ಸಣ್ಣ ಲೆಕ್ಕಾಚಾರ ಮಾಡಿದ್ದಾರೆ. ಯಾವ ಪ್ರತಿರೋಧವನ್ನೂ ತೋರದೇ ಈ ವೈರಸ್ಸನ್ನು ಮನಸ್ಸಿಗೆ ಬಂದಂತೆ ತಿರುಗಾಡಲು ಬಿಟ್ಟರೆ ಭಾರತದಲ್ಲಿ ಕೆಟ್ಟ ಪರಿಸ್ಥಿತಿ ಎಂದರೆ ದಿನಕ್ಕೆ 11 ಕೋಟಿ ಜನ ಇದಕ್ಕೆ ಬಲಿಯಾಗಬಹುದಂತೆ! ಹೆಚ್ಚು-ಕಡಿಮೆ 115 ಕೋಟಿ ಜನರನ್ನು ಕರೋನಾ ಆವರಿಸಿಕೊಳ್ಳುತ್ತದೆ ಮತ್ತು ನಾಲ್ಕೂವರೆ ಕೋಟಿ ಜನರ ಬಲಿ ತೆಗೆದುಕೊಳ್ಳುತ್ತದೆ.

ವೈರಸ್ನಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗ ಸಮಾಂತರವಾದ್ದಲ್ಲ, ಗುಣಾತ್ಮಕವಾದ್ದು. ಅಂದರೆ ಒಬ್ಬ ಮನುಷ್ಯನೊಳಗೆ ಇದು ಹೊಕ್ಕಿತೆಂದರೆ ಮತ್ತೊಬ್ಬನಿಗೆ ಹರಡಿ ಸುಮ್ಮನಾಗುವುದಿಲ್ಲ. ಈ ಹರಡುವಿಕೆಯನ್ನೇ ಆರ್ನಾಟ್ ಎಂದು ವೈಜ್ಞಾನಿಕ ಭಾಷೆಯಲ್ಲಿ ಕರೆಯಲಾಗುತ್ತದೆ. ಒಬ್ಬನಿಂದ ಒಬ್ಬನಿಗೆ ಹರಡಿದರೆ ಆರ್ನಾಟ್ ಒಂದು ಎನ್ನಲಾಗುತ್ತದೆ. ಕರೋನಾದ ಈ ಸಂಖ್ಯೆ ಸುಮಾರು 3. ಹೀಗಾಗಿಯೇ ಆರಂಭದಲ್ಲಿ ಕೆಲವೇ ಜನರಿಗೆ ಬರುವ ಈ ಖಾಯಿಲೆ ಬರು-ಬರುತ್ತಾ ಇಡಿಯ ದೇಶವನ್ನೇ ವ್ಯಾಪಿಸಿಕೊಂಡುಬಿಡುತ್ತದೆ! ಹಾಗಂತ ಎಲ್ಲಾ ವೈರಸ್ಗಳು ತಲೆಕೆಡಿಸಿಕೊಳ್ಳಬೇಕಾದಂಥವೇನೂ ಅಲ್ಲ. ಕೆಲವು ಬರುತ್ತವೆ, ಸಣ್ಣ-ಪುಟ್ಟ ನೆಗಡಿ, ಜ್ವರದಂತಹ ರೋಗಗಳನ್ನುಂಟು ಮಾಡಿ ಮನುಷ್ಯನನ್ನು ಕೊಲ್ಲದೇ ಹೊರಟು ಬಿಡುತ್ತವೆ. ಇಂಥವುಗಳ ಹಬ್ಬುವಿಕೆ ಎಷ್ಟು ವ್ಯಾಪಕವಾಗಿದ್ದರೂ ಚಿಂತೆಯಿಲ್ಲ. ಕರೋನಾದ ಕಥೆ ಹಾಗಲ್ಲ. ಇದು ಬಂತೆಂದರೆ ಯಾರು ಸಾಯುವರೋ ಹೇಳಲಾಗುವುದಿಲ್ಲ. ಹಾಗೆ ನೋಡಿದರೆ, ಪ್ರತೀ ವೈರಸ್ನ ಸಾವಿನ ದರ ಅಥವಾ ಕೇಸ್ ಫೆಟಾಲಿಟಿ ರೇಟ್ ಹೆಚ್ಚೆಂದರೆ ಶೇಕಡಾ 4ರಷ್ಟಿರಬಹುದು. ಅಂದರೆ 100 ಜನರಿಗೆ ಈ ಖಾಯಿಲೆ ಅಮರಿಕೊಂಡರೆ 4 ಜನ ಸಾಯುತ್ತಾರೆ. ಕನಿಷ್ಠಪಕ್ಷ 10 ಜನರಿಗೆ ಉಸಿರಾಟದ ತೊಂದರೆಯನ್ನು ನಿಯಂತ್ರಿಸಿಕೊಳ್ಳಲು ವೆಂಟಿಲೇಟರ್ನ ಅವಶ್ಯಕತೆ ಬೇಕಾಗುತ್ತದೆ. ಸುಮಾರು 30-40 ಜನರಿಗೆ ಆಸ್ಪತ್ರೆಗೊಯ್ಯಬೇಕಾದ ಪರಿಸ್ಥಿತಿ ಬರುತ್ತದೆ. ಹಾಗಂತ ಉಳಿದ 60 ಜನ ಆರಾಮಾಗಿರುತ್ತಾರೆ ನಿಜ. ಅವರು ಮತ್ತೆ ನೂರಾರು ಜನರಿಗೆ ಕರೋನಾ ಹರಡಿಸಿ ಆಸ್ಪತ್ರೆಗಳನ್ನು ತುಂಬುತ್ತಲೇ ಸಾಗುತ್ತಾರೆ. ಆಸ್ಪತ್ರೆಗಳು ಅಂದಾಗ ಹೇಳಲೇಬೇಕಾದ ಸಂಗತಿಯೊಂದಿದೆ. ಅಮೇರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಸಾವಿರ ಜನರಿಗೆ ಸುಮಾರು 2.9ರಷ್ಟು ಹಾಸಿಗೆಗಳಿದ್ದರೆ ಇಟಲಿಯಲ್ಲಿ 3.4ರಷ್ಟಿದೆ. ನಮ್ಮಲ್ಲೆಷ್ಟಿದೆ ಗೊತ್ತೇನು? ಸಾವಿರ ಜನರಿಗೆ ಒಂದಕ್ಕಿಂತಲೂ ಕಡಿಮೆ ಹಾಸಿಗೆ ಇದೆ! ಅತ್ಯಾಧುನಿಕವಾದ ಆರೋಗ್ಯ ವಿಭಾಗವನ್ನು ಹೊಂದಿರುವ ಇಟಲಿ ಆಸ್ಪತ್ರೆಗೆ ನುಗ್ಗುವ ಜನರನ್ನು ತಡೆಯಲಾಗದೇ ನಡುಗಲಾರಂಭಿಸಿದೆ. ಅನೇಕ ಕಡೆಗಳಲ್ಲಂತೂ ವೆಂಟಿಲೇಟರ್ ಅನ್ನು ಒಬ್ಬನಿಂದ ತೆಗೆದು ಆಗ ತಾನೇ ಬಂದ ಮತ್ತೊಬ್ಬ ರೋಗಿಗೆ ಕೊಡುತ್ತಿದ್ದಾರೆ. ಏಕೆಂದು ಪ್ರಶ್ನಿಸಿದರೆ, ‘ಯಾರು ಬದುಕುವ ಸಾಧ್ಯತೆ ಇದೆಯೋ, ಅವರಿಗೆ ಮೊದಲ ಆದ್ಯತೆ’ ಎಂದು ಹೇಳಲಾಗುತ್ತಿದೆ. ಇಟಲಿಯಲ್ಲಂತೂ 80 ದಾಟಿದವರಿಗೆ ಆಸ್ಪತ್ರೆಯಲ್ಲಿ ವಿಶೇಷ ನಿಗಾ ಇಲ್ಲ ಎಂದು ಮುಲಾಜಿಲ್ಲದೇ ಹೇಳಲಾಗಿದೆ. ಜಗತ್ತಿಗೆಲ್ಲಾ ಮತಾಂತರ ಮಾಡಲೆಂದು ಕೋಟ್ಯಂತರ ರೂಪಾಯಿ ಸುರಿಯುವ ಕ್ರಿಶ್ಚಿಯನ್ನರ ಮೂಲಸ್ಥಾನ ವಾಟಿಕನ್ ಅಲ್ಲಿಯೇ ಇದ್ದು ಆ ಜನರಿಗೆ ಏನನ್ನೂ ಮಾಡದೇ ಆಂಧ್ರ, ತೆಲಂಗಾಣ, ಕನರ್ಾಟಕಗಳಲ್ಲಿ ಕರೋನಾದ ಹೊತ್ತಲ್ಲಿ ಮತಾಂತರ ಮಾಡುತ್ತಿರುವುದನ್ನು ಕಂಡಾಗ ರಣಹದ್ದುಗಳಿಗಿಂತ ನೀಚರು ಎಂದೆನಿಸಿದರೆ ಅಚ್ಚರಿ ಇಲ್ಲ. ಬಿಡಿ ಸುನಾಮಿಯಲ್ಲಿ ಮನೆ ಕೊಚ್ಚಿ ಹೋದವರನ್ನು ಮತಾಂತರಗೊಳಿಸಿದ ಈ ಜನರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ?!

2

ಲೇಖಕ ಮೋಹಕ್ ಗುಪ್ತಾ ಕರೋನಾದ ಆರ್ನಾಟ್ ಮತ್ತು ಸಾವಿನ ದರವನ್ನು ಮುಂದಿಟ್ಟುಕೊಂಡು ಒಂದು ಸಣ್ಣ ಲೆಕ್ಕಾಚಾರ ಮಾಡಿದ್ದಾರೆ. ಯಾವ ಪ್ರತಿರೋಧವನ್ನೂ ತೋರದೇ ಈ ವೈರಸ್ಸನ್ನು ಮನಸ್ಸಿಗೆ ಬಂದಂತೆ ತಿರುಗಾಡಲು ಬಿಟ್ಟರೆ ಭಾರತದಲ್ಲಿ ಕೆಟ್ಟ ಪರಿಸ್ಥಿತಿ ಎಂದರೆ ದಿನಕ್ಕೆ 11 ಕೋಟಿ ಜನ ಇದಕ್ಕೆ ಬಲಿಯಾಗಬಹುದಂತೆ! ಹೆಚ್ಚು-ಕಡಿಮೆ 115 ಕೋಟಿ ಜನರನ್ನು ಕರೋನಾ ಆವರಿಸಿಕೊಳ್ಳುತ್ತದೆ ಮತ್ತು ನಾಲ್ಕೂವರೆ ಕೋಟಿ ಜನರ ಬಲಿ ತೆಗೆದುಕೊಳ್ಳುತ್ತದೆ. ಆದರೆ, ಪ್ರಧಾನಮಂತ್ರಿ ನರೇಂದ್ರಮೋದಿ ಸಾಕಷ್ಟು ಮುಂಚಿತವಾಗಿಯೇ ವಿದೇಶಿ ಯಾತ್ರಿಕರ ಮೇಲೆ ಗಮನ ಇರಿಸುವ ಪ್ರಯತ್ನ ಮಾಡಿದ್ದರಿಂದ ಕರೋನಾ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬಂತು. ಜನತಾ ಕಫ್ಯರ್ೂ ಮತ್ತು ಲಾಕ್ಡೌನ್ಗಳ ಕ್ರಮದಿಂದಲಂತೂ ಇದರ ಹರಡುವಿಕೆ ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಯ್ತು. ಹೀಗಾಗಿ ಮೋಹಕ್ ಮುಂದುವರಿದು ಈ ದೇಶದಲ್ಲಾಗಬಹುದಾದ ಒಟ್ಟಾರೆ ಅಪಾಯದ ಕುರಿತಂತೆ ಲೆಕ್ಕಾಚಾರ ಮುಂದಿಟ್ಟು ಕರೋನಾ 13 ರಿಂದ 50 ಸಾವಿರ ಜನರನ್ನು ಬಾಧಿಸಲಿದೆ ಎಂದೂ 300 ರಿಂದ 1000 ಜನ ಸಾಯಬಹುದೆಂದು ವೈಜ್ಞಾನಿಕವಾಗಿ ಅಂದಾಜಿಸುತ್ತಾರೆ. ಅದಕ್ಕೆಂದೇ ಮೋದಿ 21 ದಿನಗಳ ಕಾಲ ದೇಶಕ್ಕೆ ಲಾಕ್ಡೌನ್ ಘೋಷಿಸಿರೋದು. ಈಗ ನಾವೆಲ್ಲರೂ ಬಲವಾಗಿ ಮನೆಯೊಳಗೆ ಕೂರದಿದ್ದರೆ ನಾವಿದಕ್ಕೆ ಆಹಾರವಾಗುವುದಷ್ಟೇ ಅಲ್ಲದೇ ಇತರರನ್ನೂ ಬಲಿತೆಗೆದುಕೊಂಡುಬಿಡುತ್ತೇವೆ!

3

ಈ ವಿಚಾರದಲ್ಲಿ ಅತ್ಯಂತ ಬೇಜವಾಬ್ದಾರಿಯುತವಾಗಿ ವತರ್ಿಸುತ್ತಿರೋದು ಮುಸ್ಲೀಮ್ ಸಮಾಜ. ಕನರ್ಾಟಕದಲ್ಲಿ ಇದುವರೆಗೂ ಈ ವೈರಸ್ಗೆ ಬಲಿಯಾದವರೆಲ್ಲಾ ಮೆಕ್ಕಾದಿಂದ ಮರಳಿ ಬಂದವರೇ ಎಂಬುದು ಗಮನಿಸಲೇಬೇಕಾದ ಸಂಗತಿ. ಹಾಗೆ ಬಂದವರು ತಾವು ಈ ವೈರಸ್ಸನ್ನು ಹೊತ್ತು ತಂದಿರಬಹುದೆಂಬ ಅರಿವಿದ್ದಾಗ್ಯೂ ತೀರಾ ಅವೈಜ್ಞಾನಿಕವಾಗಿ ಅದನ್ನು ಧಿಕ್ಕರಿಸಿ ವಿಡಿಯೊಗಳ ಮೂಲಕ ಜನರನ್ನು ತಪ್ಪು ದಾರಿಗೆ ಎಳೆದದ್ದಲ್ಲದೇ ಸಾಮೂಹಿಕ ಪ್ರಾರ್ಥನೆಯನ್ನು ಬೇಕಂತಲೇ ಮಾಡಿಸುತ್ತಿದ್ದುದು ದುರಂತಕಾರಿಯೇ ಸರಿ! ಇಡಿಯ ದೇಶದಲ್ಲಿ ಈ ವೈರಸ್ಗೆ ತುತ್ತಾಗಿ ಅದನ್ನು ಹಬ್ಬಿಸುತ್ತಿರುವ ಸಮಾಜವಾಗಿ ಮುಸಲ್ಮಾನರು ನಿಂತಿದ್ದಾರೆ. ದೇಶವಿಡೀ ಲಾಕ್ಡೌನ್ಗೆ ಸಹಕಾರ ಮಾಡುತ್ತಾ, ಹಿಂದೂಗಳಂತೂ ಜಾತ್ರೆಗಳನ್ನೇ ಮುಂದೂಡಿ, ಪ್ರಖ್ಯಾತ ದೇವಸ್ಥಾನಗಳಲ್ಲಿ ದರ್ಶನವನ್ನು ನಿಲ್ಲಿಸಿ ಈ ವೈರಸ್ನೊಂದಿಗೆ ಹೋರಾಟ ಮಾಡುತ್ತಿದ್ದರೆ, ಮುಸಲ್ಮಾನರು ಮಾತ್ರ ಶುಕ್ರವಾರದ ನಮಾಜನ್ನೂ ಕೂಡ ಮಾಡಲೇಬೇಕು ಎಂದು ಹಠ ಹಿಡಿದಿದ್ದಲ್ಲದೇ ಮುಧೋಳದಲ್ಲಿ ತಹಶಿಲ್ದಾರ್ ಕಛೇರಿಯ ಹೊರಗೆ ಸವರ್ಾಜನಿಕವಾಗಿ ಪ್ರತಿಭಟನೆ ನಡೆಸಿ ಅಸಹ್ಯವೆನಿಸಿಕೊಂಡುಬಿಟ್ಟರು!

4

ಪಾಕಿಸ್ತಾನದಲ್ಲಿ ಕೆಲವು ದಿನಗಳ ಹಿಂದೆ ಸುಮಾರು ಎರಡೂವರೆ ಲಕ್ಷ ಜನಗಳ ದೊಡ್ಡ ಸಮಾವೇಶವೊಂದನ್ನು ಏರ್ಪಡಿಸಲಾಗಿತ್ತು. ದೇವ್ಬಂದಿ ಪಂಥದ ತಬ್ಲೀಗೀ ಜಮಾತ್ 80 ರಾಷ್ಟ್ರಗಳಿಂದ ಪ್ರಮುಖರನ್ನು ಆಹ್ವಾನಿಸಿತ್ತು. ಸಕರ್ಾರ ಇದನ್ನು ಮುಂದೂಡಬೇಕೆಂದು ಆಯೋಜಕರನ್ನು ವಿನಂತಿಸಿಕೊಂಡಿತ್ತು. ಕೊಟ್ಟ ಕಾರಣ ಕರೋನಾದ್ದಲ್ಲ, ಬದಲಿಗೆ ಮಳೆಗಾಲದಲ್ಲಿ ಈ ರೀತಿಯ ಸಭೆ-ಸಮಾರಂಭ ಒಳ್ಳೆಯದಲ್ಲ ಎನ್ನುವುದಾಗಿತ್ತು. ಆಸಿಫ್ ಅಶ್ರಫ್ ಜಲಾಲಿ ಎಂಬ ಪ್ರಮುಖನೊಬ್ಬ ಲಾಹೋರಿನ ಈ ಸಮಾರಂಭದ ಕಾರಣಕ್ಕಾಗಿ ಒಬ್ಬನಿಗೆ ಕರೋನಾ ವೈರಸ್ ಸೋಂಕು ತಾಕಿದರೂ ಪಾಕಿಸ್ತಾನ ಸಕರ್ಾರ ತನ್ನನ್ನು ನೇಣಿಗೆ ಹಾಕಿಬಿಡಲಿ ಎಂದು ಘೋಷಿಸಿದ್ದ, ಅದನ್ನೇ ಟ್ವೀಟ್ ಕೂಡ ಮಾಡಿದ್ದ. ಅಲ್ಲಾಹ್ನ ಪ್ರಾರ್ಥನೆ ಮಾಡುವವರಿಗೆ ಈ ಸೋಂಕು ತಾಕಲಾರದು ಎಂಬುದು ಅವನ ವಾದವಾಗಿತ್ತು. ಆದರೆ, ತೀರಾ ಇತ್ತೀಚೆಗೆ ಪಾಲೆಸ್ತೇನಿನ ಗಾಜಾ ಪಟ್ಟಿಯಲ್ಲಿ ಈ ಸಭೆಗೆ ಬಂದಿದ್ದ ಇಬ್ಬರು ಸೋಂಕಿತರಾಗಿರುವುದು ಕಂಡು ಬಂದಿದೆ. ಪಾಕಿಸ್ತಾನ ಹೀಗೆ ಚೀನಾದಿಂದ ಆಮದುಗೊಂಡ ವೈರಸ್ಸನ್ನು ಜಗತ್ತಿಗೆಲ್ಲಾ ಹಂಚುವ ಉಪಕಾರ ಮಾಡಿತು. ನಮ್ಮವರೂ ಅಲ್ಲಿಗೆ ಹೋಗಿರಲು ಸಾಕು ಅಥವಾ ಅಲ್ಲಿಂದ ಬಂದವರು ಹಜ್ ಯಾತ್ರೆಗೆ ಬಂದಿರುವಾಗ ಅಲ್ಲಿಯೂ ಲಕ್ಷಾಂತರ ಜನರಿಗೆ ಈ ರೋಗ ಹಬ್ಬಿರಲು ಸಾಕು! ಇಷ್ಟನ್ನು ಹೇಳಿದ್ದಾಗ್ಯೂ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ಆ ಸಮಾಜ ಇಲ್ಲ. ಕರೋನಾದೊಂದಿಗೆ ಹೋರಾಟ ಮಾಡಿ ಗೆದ್ದುಬಿಡಬಹುದೇನೋ ನಿಜ, ಆದರೆ ಪ್ರಗತಿ ವಿರೋಧಿಗಳೊಂದಿಗೆ, ಅಜ್ಞಾನಿಗಳೊಂದಿಗೆ, ಮೂರ್ಖರೊಂದಿಗೆ ಹೋರಾಡುವುದು ಹೇಗೆ!?

Comments are closed.