ವಿಭಾಗಗಳು

ಸುದ್ದಿಪತ್ರ


 

ದೇಶಕ್ಕಿಂತ ಪರಿವಾರವೇ ಮುಖ್ಯವಾದಾಗ ಇವೆಲ್ಲವೂ ಸರ್ವೇಸಾಮಾನ್ಯ!!

ದೀನ್ದಯಾಳರು ಅಕ್ಷರಶಃ ಅಲೆಮಾರಿಯಾಗಿಯೇ ಬದುಕಿದವರು. 25 ಕಳೆಯುವುದರೊಳಗೆ ರಾಜಸ್ಥಾನ ಮತ್ತು ಉತ್ತರಪ್ರದೇಶದ ಕನಿಷ್ಠಪಕ್ಷ 11 ಪ್ರದೇಶಗಳಿಗೆ ತಮ್ಮ ವಸತಿಯನ್ನು ಬದಲಾಯಿಸಿದ್ದರು. ಪ್ರತಿ ಬಾರಿ ಹೊಸ ಪ್ರದೇಶಕ್ಕೆ ಹೋದಾಗಲೂ ಹೊಸ ಜನರೊಂದಿಗೆ ಬೆರೆಯುವುದು, ಅವರೊಂದಿಗೆ ಅಲ್ಲಿನ ಸಮಸ್ಯೆಗಳೊಂದಿಗೆ ಒಂದಾಗಿ ಪರಿಹಾರ ಹುಡುಕುವುದು ಅವರಿಗೆ ಕಷ್ಟವೇ ಆಗುತ್ತಿರಲಿಲ್ಲ. ಇತರರಿಗಾಗಿ ಮರುಗುವ ಅವರ ಗುಣ ಅವರನ್ನು ಬಲುಬೇಗ ಜನರ ಹತ್ತಿರಕ್ಕೆ ತಂದುಬಿಡುತ್ತಿತ್ತು.

ಕಣ್ಣಿಲ್ಲದೇ ಹೋದವರಿಗಿಂತ ದೃಷ್ಟಿಯಿಲ್ಲದವರು ಬಹಳ ಡೇಂಜರ್. 70 ವರ್ಷಗಳಲ್ಲಿ ಸುಮಾರು 50 ವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ಸಿಗೆ ದೃಷ್ಟಿಯೂ ಇಲ್ಲ, ಕಣ್ಣೂ ಇಲ್ಲ. ಅತ್ಯಂತ ಹಳೆಯ ಪಾಟರ್ಿಯೊಂದರ ದುರಂತ ಕಥೆಯನ್ನು ನಿಮ್ಮೆದುರಿಗೆ ಬಿಚ್ಚಿಡುತ್ತಿದ್ದೇನೆ. ಮೂರು ರಾಜ್ಯಗಳ ಚನಾವಣೆಯನ್ನು ಕಾಂಗ್ರೆಸ್ಸು ಗೆದ್ದಿತಲ್ಲ ಅದರ ಹಿಂದು-ಹಿಂದೆಯೇ ಜನತೆ ಕಣ್ಣೀರಿಡುವ ಸ್ಥಿತಿ ನಿಮರ್ಾಣವಾಗಿದೆ. ಮೋದಿಯ ಪಾಳಯ ಬಿಟ್ಟಿದ್ದು ಎಂತಹ ದುರಂತವಾಯಿತೆಂದು ಅವರಿಗೀಗ ಅರ್ಥವಾಗುತ್ತಿದೆ. ರೈತರ ಸಾಲಮನ್ನಾ, ಯೂರಿಯಾ ವಿತರಣೆಯಲ್ಲಿ ನಡೆದಂತಹ ಅನ್ಯಾಯ, ಬಿಎಸ್ಪಿ ಕಾರ್ಯಕರ್ತರ ಮೇಲಿದ್ದ ಕೇಸುಗಳನ್ನು ಮರಳಿ ಪಡೆದಿದ್ದು ಇವೆಲ್ಲವೂ ಕಣ್ಣು ಕಳೆದುಕೊಂಡುದುದರ ಸಂಕೇತವಾದರೆ ರಾಜಸ್ಥಾನದ ಮುಖ್ಯಮಂತ್ರಿ ಗೆಹ್ಲೋಟ್ ಸಕರ್ಾರಿ ದಸ್ತಾವೇಜುಗಳಿಂದ ಪಂಡಿತ್ ದೀನ್ದಯಾಳ್ ಉಪಾಧ್ಯಾಯರ ಚಿತ್ರ ಮತ್ತು ಹೆಸರನ್ನು ತೆಗೆಯಬೇಕೆಂದು ಆಗ್ರಹಿಸಿ ರಾಷ್ಟ್ರದೃಷ್ಟಿಯೇ ಇಲ್ಲದುದರ ಸ್ಪಷ್ಟ ನಿದರ್ಶನವನ್ನು ಕೊಟ್ಟುಬಿಟ್ಟಿದ್ದಾರೆ. ವಾಜಪೇಯಿ ಅಧಿಕಾರ ಕಳಕೊಂಡು ಛಾಯಾರೂಪದಲ್ಲಿ ಸೋನಿಯಾ ಆಳುವ ಅಧಿಕಾರ ಪಡೆದುಕೊಂಡಾಗ ಮಾಡಿದ ಮೊದಲ ಕೆಲಸವೇನು ಗೊತ್ತೇ?! ಅಟಲ್ಜೀ ಯೋಜಿಸಿ ರೂಪಿಸಿದ್ದ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಇದ್ದ ಅವರ ಫೋಟೊವನ್ನು ನೂರಾರು ಕೋಟಿ ಖಚರ್ು ಮಾಡಿ ಕಿತ್ತೆಸೆದದ್ದು. ಇತಿಹಾಸವನ್ನು ತಿರುಚೋದು ಅಂದರ ಹೀಗೆಯೇ.

2

ಇಷ್ಟಕ್ಕೂ ಪಂಡಿತ್ ದೀನ್ದಯಾಳ್ ಉಪಾಧ್ಯಾಯರು ಯಾರು ಗೊತ್ತಾ? ಇಂದಿನ ಕೇಂದ್ರಸಕರ್ಾರದ ಚುಕ್ಕಾಣಿಯನ್ನು ತನ್ನ ಕೈಲಿ ಹಿಡಿದಿರುವ ಭಾಜಪದ ಮೂಲ ಸ್ವರೂಪವನ್ನು ರೂಪಿಸಿಕೊಟ್ಟವರು. ರಾಜಸ್ಥಾನದ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ದೀನ್ದಯಾಳರು ಕೂಡುಕುಟುಂಬದೊಂದಿಗೆ ಬೆಳೆದು ಬಂದವರು. ಹೇಳಿಕೊಳ್ಳಬಹುದಾದಷ್ಟು ಸಿರಿವಂತಿಕೆ ಇಲ್ಲವಾದ್ದರಿಂದ ಯಾತನಾಮಯ ಬದುಕಿಗೆ ತಮ್ಮನ್ನು ತೆರೆದುಕೊಂಡಿದ್ದವರು ಅವರು. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಆಕೆಯ ತವರುಮನೆಯ ಸಂಪರ್ಕದಿಂದಲೇ ದೂರವಾದ ದೀನ್ದಯಾಳರು ತಂದೆಯ ಕಡೆಯವರೊಂದಿಗೆ ಬೆಳೆಯಲಾರಂಭಿಸಿದರು. ಚುರುಕುಮತಿಯಾಗಿದ್ದ ಈ ಹುಡುಗ ಬಲುಬೇಗ ಶಾಲಾಕಾಲೇಜುಗಳಲ್ಲಿ ಹೆಸರು ಗಳಿಸಿದ. ತನ್ನ ಮಾತಿನಿಂದ, ಅದಕ್ಕೆ ಪೂರಕವಾದ ಕೆಲಸಗಳಿಂದ ಎಂಥವರ ಮನಸ್ಸನ್ನೂ ಗೆಲ್ಲುವ ಸಾಮಥ್ರ್ಯವೂ ಆತನಿಗಿತ್ತು. ಅದೊಮ್ಮೆ ಡಕಾಯಿತರು ಮನೆಗೆ ನುಗ್ಗಿ ಚಿಕ್ಕಮ್ಮನ ಕುತ್ತಿಗೆಯ ಮೇಲೆ ಕತ್ತಿಯಿಟ್ಟು ಒಡವೆ ಹಣ ಕೇಳಿದಾಗ 7 ವರ್ಷದ ಪುಟ್ಟ ಬಾಲಕ ನಿಧಾನವಾಗಿ ಚಿಕ್ಕಮ್ಮನ ಸೆರಗಿನಿಂದಾಚೆಗೆ ಬಂದು ಡಕಾಯಿತರ ರಾಜನಿಗೆ ಹೇಳಿದನಂತೆ, ‘ಡಕಾಯಿತರೆಂದರೆ ಬಡವರ ರಕ್ಷಕರು ಎಂದು ಕೇಳಿದ್ದೆ. ಆದರೆ ನೀವು ನಮ್ಮಂತಹ ಬಡವರನ್ನೇ ಲೂಟಿ ಮಾಡುತ್ತಿದ್ದೀರಲ್ಲ!’ ಈ ಮಾತನ್ನು ಕೇಳಿ ಡಕಾಯಿತರ ರಾಜ ಒಂದುಕ್ಷಣ ಅವಾಕ್ಕಾದನಂತೆ. ಹುಡುಗನ ಸಾಮಥ್ರ್ಯವನ್ನು ಕಂಡು ಅವನನ್ನು ಅಭಿನಂದಿಸಿ ಆ ಮನೆಯಿಂದ ಒಂದೇ ಪೈಸೆಯನ್ನು ಲೂಟಿ ಮಾಡದೇ ಹೋದನಂತೆ. ನರೇಂದ್ರಮೋದಿ ಹೇಳುತ್ತಿರುತ್ತಾರಲ್ಲಾ, ನಾನು ತಿನ್ನುವುದಿಲ್ಲ, ಬೇರೆಯವರಿಗೆ ತಿನ್ನಲೂ ಬಿಡುವುದಿಲ್ಲ ಅಂತ. ಅದು ಹೀಗಯೇ ಇರಬೇಕೇನೋ!!

ಬಡತನದಲ್ಲೇ ಅಧ್ಯಯನ ಮುಂದುವರಿಸಿದ್ದ ದೀನ್ದಯಾಳರು ತಮ್ಮ ಪ್ರತಿಭಾವಂತಿಕೆಯಿಂದಲೇ ಕೋಟದ ರಾಜರಿಂದ ವಿದ್ಯಾಥರ್ಿವೇತನವನ್ನು ಪಡೆದರು. ಆಗ್ರಾದ ಕಾಲೇಜಿನಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಎಂಎ ಅಧ್ಯಯನ ಮಾಡಿದರು. ಆಡಳಿತಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಂಡು ಉತ್ತೀರ್ಣರಾದರು. ಸಂದರ್ಶನಕ್ಕೆ ಹಾಜರಾಗದೇ ತಮಗೆ ಅದರಲ್ಲಿ ಆಸಕ್ತಿಯಿಲ್ಲವೆಂಬುದನ್ನು ಸಾಬೀತುಪಡಿಸಿದರು.

3

ದೀನ್ದಯಾಳರು ಅಕ್ಷರಶಃ ಅಲೆಮಾರಿಯಾಗಿಯೇ ಬದುಕಿದವರು. 25 ಕಳೆಯುವುದರೊಳಗೆ ರಾಜಸ್ಥಾನ ಮತ್ತು ಉತ್ತರಪ್ರದೇಶದ ಕನಿಷ್ಠಪಕ್ಷ 11 ಪ್ರದೇಶಗಳಿಗೆ ತಮ್ಮ ವಸತಿಯನ್ನು ಬದಲಾಯಿಸಿದ್ದರು. ಪ್ರತಿ ಬಾರಿ ಹೊಸ ಪ್ರದೇಶಕ್ಕೆ ಹೋದಾಗಲೂ ಹೊಸ ಜನರೊಂದಿಗೆ ಬೆರೆಯುವುದು, ಅವರೊಂದಿಗೆ ಅಲ್ಲಿನ ಸಮಸ್ಯೆಗಳೊಂದಿಗೆ ಒಂದಾಗಿ ಪರಿಹಾರ ಹುಡುಕುವುದು ಅವರಿಗೆ ಕಷ್ಟವೇ ಆಗುತ್ತಿರಲಿಲ್ಲ. ಇತರರಿಗಾಗಿ ಮರುಗುವ ಅವರ ಗುಣ ಅವರನ್ನು ಬಲುಬೇಗ ಜನರ ಹತ್ತಿರಕ್ಕೆ ತಂದುಬಿಡುತ್ತಿತ್ತು. ಒಮ್ಮೆ ಮಿತ್ರನೊಂದಿಗೆ ಸೇರಿ ತರಕಾರಿ ಕೊಂಡು ತಂದಿದ್ದರಂತೆ. ಮರಳಿ ಕೋಣೆಗೆ ಬಂದಾಗ ಅವರಿಗೆ ಗೊತ್ತಾಯ್ತು ನಾಣ್ಯದಂತೆಯೇ ಇದ್ದ ಒಂದು ಲೋಹದ ಬಿಲ್ಲೆ ತರಕಾರಿ ಮಾರುವ ಹೆಂಗಸಿಗೆ ಕೊಟ್ಟುಬಿಟ್ಟಿದ್ದೇವೆ ಅಂತ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಆ ಬಡಹೆಂಗಸಿಗೆ ಖೋಟಾ ನಾಣ್ಯ ಕೊಟ್ಟ ನೋವು ದೀನ್ದಯಾಳರನ್ನು ಕಾಡುತ್ತಿತ್ತು. ಆ ಬಡ ತಾಯಿಯ ಬಳಿಗೆ ದೀನ್ದಯಾಳರು ಓಡಿದರು. ಆಕೆಗೆ ಎಲ್ಲವನ್ನೂ ವಿವರಿಸಿದರು. ಆ ವೇಳೆಗಾಗಲೇ ಆಕೆಯ ಚೀಲಗಳಲ್ಲಿ ಸಾಕಷ್ಟು ನಾಣ್ಯ ಜಮೆಯಾಗಿತ್ತು. ಹುಡುಕಲು ಪುರಸೊತ್ತಿಲ್ಲವೆಂದು ಆಕೆ ಕೇಳಿದರೂ ಬಿಡದೇ ಆ ಖೋಟಾ ನಾಣ್ಯವನ್ನು ಹುಡುಕಿ ತೆಗೆದು ಸರಿಯಾದ ನಾಣ್ಯವನ್ನು ಆಕೆಯ ಕೈಲಿಟ್ಟು ಬಂದಮೇಲೆಯೇ ಅವರಿಗೆ ಸಮಾಧಾನವಾಗಿದ್ದಂತೆ. ತನ್ನಿಂದ ತಪ್ಪಾಗುವುದನ್ನು ಅವರು ಎಂದೂ ಸಹಿಸುವುದೂ ಸಾಧ್ಯವಿರಲಿಲ್ಲ. ತನ್ನೊಡನೆ ಇರುವವರು ಹಾಗೆಯೇ ಇರಬೇಕೆಂದು ಬಯಸುತ್ತಿದ್ದರು. ಇವೆಲ್ಲವೂ ಅವರಿಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದ ಪ್ರಭಾವವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಂಘದ 40 ದಿನಗಳ ಅಭ್ಯಾಸವರ್ಗದಲ್ಲಿ ಭಾಗವಹಿಸಿದ ದೀನ್ದಯಾಳರು ದೈಹಿಕ ಸವಾಲಿನ ಚಟುವಟಿಕೆಗಳಲ್ಲಿ ಯಶಸ್ವಿ ಎನಿಸದೇ ಹೋದರೂ ಬೌದ್ಧಿಕ ಚಚರ್ೆಗಳಲ್ಲಿ ಮಾತ್ರ ಅವರು ಪ್ರಭಾವಿಯಾಗಿಯೇ ಇದ್ದರು. ಅವರ ವಕ್ತೃತ್ವ ಮತ್ತು ಬರವಣಿಗೆಗೆ ಹಿರಿಯರೆನಿಸಿಕೊಂಡವರು ತಲೆದೂಗುತ್ತಿದ್ದರು. ಸಹಜವಾಗಿಯೇ ಬದುಕಿನ ಎಲ್ಲ ಸಾಮಾನ್ಯ ವಾಂಛೆಗಳನ್ನು ಬದಿಗಿಟ್ಟು ಸಂಘದ ಪ್ರಚಾರಕರಾಗಿ ಹೊರಟ ದೀನ್ದಯಾಳರು ನಿಜಕ್ಕೂ ಬಲುದೊಡ್ಡ ಆದರ್ಶ. ಬರವಣಿಗೆಯ ಕಾರಣದಿಂದಲೇ ಸಂಘದ ವತಿಯಿಂದ ಪತ್ರಿಕೆಗಳ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ್ ಎಂಬೆಲ್ಲಾ ಪತ್ರಿಕೆಗಳನ್ನು ಮುನ್ನಡೆಸಿದರು. ಅಟಲ್ಬಿಹಾರಿ ವಾಜಪೇಯಿಯವರ ಬರವಣಿಗೆಯ ಕೌಶಲ್ಯ ಅರಳಿದ್ದು ದೀನ್ದಯಾಳರ ಆರೈಕೆಯಲ್ಲಿಯೇ. ದೀನ್ದಯಾಳರ ಶೈಲಿಯ ಪತ್ರಿಕೋದ್ಯಮ ಬಹುಶಃ ಇಂದು ಬರವಣಿಗೆಗಳಲ್ಲಿರಬಹುದಾದ ಆದರ್ಶ ಮಾತ್ರ. ಅವರು ರಾಜಕೀಯ ವಿಚಾರಗಳನ್ನು ಬರೆದರೆ ಅದೊಂದು ಸಲಿಲಧಾರೆ. ಅವರ ಆಕ್ರೋಶವೂ ಕೂಡ ಸುಂದರವಾದ ಪದಗಳ ಮೂಲಕ ವ್ಯಕ್ತವಾಗುತ್ತಿತ್ತು. ಅದೊಮ್ಮೆ ಪಾಂಚಜನ್ಯದ ಸಂಪಾದಕರು ಚೀನಾ ಮತ್ತು ಟಿಬೆಟ್ನ ವಿಚಾರವಾಗಿ ನೆಹರೂ ಸಕರ್ಾರದ ನಿರ್ಣಯವನ್ನು ಕಟುವಾಗಿ ಟೀಕಿಸಿ ಬರೆದಿದ್ದರು. ಅದನ್ನು ಓದಿದ ನಂತರ ಪಂಡಿತ್ಜಿ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ?! ‘ಲೇಖನ ಚೆನ್ನಾಗಿದೆ. ಆದರೆ ಶೀಷರ್ಿಕೆ ಕೊಡುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕಿತ್ತು. ನೆಹರೂ ಎಷ್ಟಾದರೂ ಭಾರತದ ಪ್ರಧಾನಿ. ಟೀಕಿಸುವಾಗಲೂ ಎಚ್ಚಿರಕೆಯಿಂದಲೇ ಪದ ಬಳಸಬೇಕು’ ಎಂದಿದ್ದರು. ನರೇಂದ್ರಮೋದಿಯವರನ್ನು ಏಕವಚನದಲ್ಲಿ ಟೀಕಿಸುವ ಪತ್ರಕರ್ತರಿಗೆ ದೀನ್ದಯಾಳರ ಈ ಕಿವಿಮಾತು ಅರ್ಥವಾಗುವುದೇನು?!

ಬಹುಶಃ 1960 ರ ದಶಕದ ಆರಂಭದ ದಿನಗಳು. ಚೀನಾ ಮತ್ತು ಭಾರತದ ತಿಕ್ಕಾಟ ನಡೆದಿತ್ತು. ಅದೇ ವೇಳಗೆ ರೈಲ್ವೇ ಕಾಮರ್ಿಕರು ಮುಷ್ಕರ ಹೂಡಿದ್ದರು. ಪಕ್ಷವಾಗಿ ಜನಸಂಘ ಚುನಾವಣೆಯ ದೃಷ್ಟಿಯಿಂದ ಮುಷ್ಕರಕ್ಕೆ ಬೆಂಬಲಕೊಡಲೇಬೇಕಿತ್ತು. ಆದರೆ ಪಾಂಚಜನ್ಯದ ಸಂಪಾದಕರು ದೇಶದ ಸಂಕಟದ ಸಮಯದಲ್ಲಿ ಜನಸಂಘ ಮಾಡಿದ್ದು ತಪ್ಪು ಎಂದೇ ಪತ್ರಿಕೆಗಳಲ್ಲಿ ಬರೆದಿದ್ದರು. ಜನಸಂಘದವರದ್ದೇ ಪತ್ರಿಕೆ ಜನಸಂಘವನ್ನೇ ವಿರೋಧಿಸಿದ ಈ ಸಂಗತಿಯನ್ನು ಕಾಂಗ್ರೆಸ್ಸು ಚೆನ್ನಾಗಿ ಬಳಸಿಕೊಂಡು ಪಕ್ಷವನ್ನು ಹೀಗಳೆಯಲಾರಂಭಿಸಿತು. ಅಹವಾಲು ಪಕ್ಷದ ಮಹಾಕಾರ್ಯದಶರ್ಿಯಾಗಿದ್ದ ದೀನ್ದಯಾಳರ ಬಳಿಗೆ ಹೋಯ್ತು. ಪತ್ರಿಕೆಯವರನ್ನೂ ಮತ್ತು ಪಕ್ಷವನ್ನು ಒಂದೆಡೆ ಸೇರಿಸಿದ್ದ ಪಂಡಿತ್ಜೀ ‘ಯಾವುದಾದರೂ ಸಂಗತಿ ಪಕ್ಷದ ಹಿತದಲ್ಲಿದ್ದು ದೇಶದ ಹಿತದಲ್ಲಿರದೇ ಹೋದರೆ ಪತ್ರಿಕೆ ಏನು ಮಾಡಬೇಕು’ ಎಂಬ ಪ್ರಶ್ನೆಯನ್ನು ಎಲ್ಲರ ಮುಂದಿಟ್ಟು ತಾವೇ ಉತ್ತರಿಸಿದರು. ‘ಪಕ್ಷವೊಂದಕ್ಕೆ ಅನಿವಾರ್ಯತೆಗಳಿರಬಹುದು, ಆದರೆ ಪತ್ರಿಕೆಗಿರಬಾರದು. ಪಾಂಚಜನ್ಯ ಸರಿಯಾದ ಕೆಲಸವನ್ನೇ ಮಾಡಿದೆ. ಪಕ್ಷಗಳು ಸಮಾಜಕ್ಕಿಂತ, ದೇಶಕ್ಕಿಂತ ದೊಡ್ಡದಲ್ಲ. ರಾಷ್ಟ್ರದ ಹಿತಾಸಕ್ತಿಯೇ ಎಲ್ಲಕ್ಕಿಂತಲೂ ಮಿಗಿಲಾಗಿರಬೇಕು ಮತ್ತು ಪತ್ರಕರ್ತ ರಾಷ್ಟ್ರನಿಷ್ಠನಾಗಿರಬೇಕು’ ಎಂದು ವಿವಾದಕ್ಕೆ ತೆರೆ ಎಳೆದರು. ಈ ಘಟನೆಯನ್ನು ಓದುವಾಗ ಈಗಲೂ ಮೈಮೇಲೆ ಮುಳ್ಳುಗಳೇಳುತ್ತವೆ. ದೆಹಲಿಯಲ್ಲಿ ಕುಳಿತು ಪಕ್ಷವೊಂದರ ಎಂಜಲು ಕಾಸು ತಿನ್ನುತ್ತಾ ರಾಷ್ಟ್ರವನ್ನು ತುಂಡು ಮಾಡುವ ಮಾತುಗಳನ್ನಾಡುವ ನಗರ ನಕ್ಸಲ ಜಾತಿಗೆ ಸೇರಿದ ಪತ್ರಕರ್ತರು ದೀನ್ದಯಾಳರ ಮಾತುಗಳನ್ನು ಅಥರ್ೈಸಿಕೊಳ್ಳಬಲ್ಲರೇ.

4

ದೀನ್ದಯಾಳರು ಸುಮಾರು 16 ವರ್ಷಗಳ ಕಾಲ ಜನಸಂಘದ ಕಾರ್ಯದಶರ್ಿಗಳಾಗಿದ್ದರು. ಪ್ರತಿ ಚುನಾವಣೆಯ ನಂತರವೂ ಕಾರ್ಯದಶರ್ಿಯ ಸ್ಥಾನದಲ್ಲಿ ನಿಂತು ಅವರು ಮುಂದಿಡುತ್ತಿದ್ದ ವಿಶ್ಲೇಷಣೆ ಬಲು ವಿಶಿಷ್ಟವಾಗಿರುತ್ತಿತ್ತು. ಪ್ರತಿ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿ ಅವರು ಮುಂದಿನ ಹಾದಿಯನ್ನು ನಿರ್ಧರಿಸುತ್ತಿದ್ದರು. ಪಕ್ಷದ ಕಾರ್ಯಕರ್ತರಿಗೆ ಅವರು ಕೊಟ್ಟ ಸಂದೇಶಗಳಂತೂ ಇಂದಿಗೂ ಆದರ್ಶಪ್ರಾಯವಾದ್ದೇ. ‘ಒಬ್ಬ ರಾಜಕೀಯ ಕಾರ್ಯಕರ್ತ ಸಕಾರಾತ್ಮಕ ಚಟುವಟಿಕೆಗಳಲ್ಲಿ ನಿರತನಾಗುವ ಸಾಮಥ್ರ್ಯ ಹೊಂದಿರಬೇಕು. ಬೆಳೆಯುತ್ತಿರುವ ಪ್ರತಿಯೊಂದು ಪಕ್ಷವೂ ರಾಷ್ಟ್ರದ ಆಡಳಿತವನ್ನು ಹೆಗಲಮೇಲೆ ಹೊರುವ ಸಿದ್ಧತೆ ನಡೆಸಿರಬೇಕು. ಹೀಗಾಗಿಯೇ ಕಾರ್ಯಕರ್ತನಾದವನು ಆಡಳಿತಾತ್ಮಕ ಸಂಗತಿಗಳಲ್ಲಿ ಮತ್ತು ಕಾನೂನಿನಲ್ಲಿ ಪರಿಣಿತಿಯನ್ನು ಹೊಂದಿರಬೇಕು. ಸಕರ್ಾರದ ಕುನೀತಿಗಳನ್ನು ವಿರೋಧಿಸುವುದು ಮತ್ತು ಜನಜಾಗೃತಿ ಮೂಡಿಸಿ ಆಡಳಿತವನ್ನು ಪ್ರಭಾವಿಸುವುದು ಮಾಡಲೇಬೇಕು ನಿಜ, ಅದರ ಜೊತೆಗೆ ಅಧಿಕಾರದಲ್ಲಿರುವವರ ಸಮಸ್ಯೆಗಳನ್ನೂ ಅಥರ್ೈಸಿಕೊಂಡು ಧನಾತ್ಮಕ ಮಾರ್ಗವನ್ನು ಬಳಸಿ ಕರುಣೆಯಿಂದಲೇ ಅದನ್ನು ನಿವಾರಿಸುವ ಪ್ರಯತ್ನದಲ್ಲಿ ತೊಡಗಬೇಕು. ನಿರಂತರವಾಗಿ ಆಡಳಿತ ಮಾಡುವವರ ದೃಷ್ಟಿಯನ್ನು ಅಥರ್ೈಸಿಕೊಳ್ಳಲು ಅಧ್ಯಯನ ನಡೆಸಿರಲೇಬೇಕು’. ಯಾವುದಾದರೂ ಪಕ್ಷದ ಕಾರ್ಯಕರ್ತ ಇಷ್ಟೆಲ್ಲಾ ಆಲೋಚಿಸುತ್ತಾನಾ ಎನ್ನುವುದು ಖಂಡಿತ ಅನುಮಾನ! ಜನಸಂಘ ಬಲುಬೇಗ ಬೆಳೆಯಿತಲ್ಲದೇ ಕಾಂಗ್ರಸ್ಸಿಗೆ ಪಯರ್ಾಯವಾಗಿ ನಿಲ್ಲಬಲ್ಲ ಎಲ್ಲ ಲಕ್ಷಣಗಳನ್ನೂ ತೋರಿತು. ಹಾಗಂತ ದೀನ್ದಯಾಳರು ಪಕ್ಷದ ಕಾರ್ಯಕರ್ತರಿಗಷ್ಟೇ ಕಿವಿಮಾತು ಹೇಳಿದ್ದರೆಂದು ಭಾವಿಸಬೇಡಿ. ಮತ ಹಾಕುವ ನಮಗೂ ಕೂಡ ಅವರು ಚೌಕಟ್ಟು ಹಾಕಿಯೇಕೊಟ್ಟಿದ್ದಾರೆ. ‘ಮತ ನೀಡುವಾಗ ಪಕ್ಷಕ್ಕೆಂದು ಕೊಡಬೇಡಿ, ಆದರ್ಶಗಳನ್ನು ನೋಡಿ. ವ್ಯಕ್ತಿಗೆ ಕೊಡಬೇಡಿ, ಆದರೆ ಅವನ ಪಕ್ಷವನ್ನು ನೋಡಿ. ಹಣಕ್ಕೆ ಕೊಡಬೇಡಿ, ಆದರೆ ವ್ಯಕ್ತಿಯನ್ನು ಗಮನಿಸಿ’ ಎಂದಿದ್ದಾರೆ. ಅದರರ್ಥ ಹಣಕ್ಕಿಂತ ವ್ಯಕ್ತಿ ಮುಖ್ಯ. ವ್ಯಕ್ತಿಗಿಂತಲೂ ಆತ ಪ್ರತಿನಿಧಿಸುವ ಪಕ್ಷ. ಕೊನೆಗೆ ಪಕ್ಷಗಳಿಗಿಂತಲೂ ಆದರ್ಶ ಬಲುಮುಖ್ಯ. ಮತಗಟ್ಟೆಗೆ ಹೋಗುವ ಮುನ್ನ ಒಮ್ಮೆ ಇವಿಷ್ಟನ್ನೂ ಆಲೋಚಿಸಿಬಿಟ್ಟರೆ ಯಾರಿಗೆ ಮತಹಾಕಬೇಕೆಂಬ ತೊಳಲಾಟ ಖಂಡಿತ ಇರಲಾರದು.

ಎಲ್ಲಕ್ಕೂ ಮುಕುಟಪ್ರಾಯವಾಗಿದ್ದು ದೀನ್ದಯಾಳರ ಏಕಾತ್ಮಮಾನವವಾದ. ಗಾಂಧೀಜಿಯವರ ಸವೋರ್ದದಯ, ಸ್ವದೇಶೀ, ಗ್ರಾಮಸ್ವರಾಜ್ಯ ಇವುಗಳಿಗೆ ಸಾಂಸ್ಕೃತಿಕ ರಾಷ್ಟ್ರವಾದದ ಕಲ್ಪನೆಯನ್ನು ಸೇರಿಸಿ ಅವರು ರೂಪಿಸಿಕೊಟ್ಟ ಅಡಿಪಾಯವೇ ಜನಸಂಘದ ಮೂಲವಾಗಿತ್ತು. ನರೇಂದ್ರಮೋದಿ ಪ್ರತೀ ಬಾರಿ ಮಾತನಾಡುವಾಗ ಬಡವರ ಬಗ್ಗೆ ತುಳಿತಕ್ಕೊಳಗಾದವರ ಬಗ್ಗೆ ತಮ್ಮ ನೋವನ್ನು ವ್ಯಕ್ತಪಡಿಸಿ ಅವರಿಗಾಗಿಯೇ ಯೋಜನೆಗಳನ್ನು ರೂಪಿಸುತ್ತಾರಲ್ಲಾ ಅವೆಲ್ಲವೂ ದೀನ್ದಯಾಳರ ಅಂತ್ಯೋದಯದಿಂದ ಪ್ರಭಾವಿತವಾದದ್ದೇ. ಅವರದ್ದು ಗರೀಬೀ ಹಠಾವೋ ರೀತಿಯ ಘೋಷಣೆಯಾಗಿರಲಿಲ್ಲ. ಬದಲಿಗೆ ಪಕ್ಷವೊಂದಕ್ಕೆ ಸಿದ್ಧಾಂತವಾಗಿ ಅದನ್ನು ರೂಪಿಸಿದ್ದರು. ಪ್ರಮುಖ ಪಕ್ಷವೊಂದರ ದೊಡ್ಡ ಜವಾಬ್ದಾರಿಯಲ್ಲಿದ್ದರೂ ಸದಾಕಾಲ ಜನಸಾಮಾನ್ಯರೊಂದಿಗಿನ ಬೋಗಿಗಳಲ್ಲಿಯೇ ಸಂಚರಿಸುತ್ತಿದ್ದರು. ಎಕ್ಸ್ಪ್ರೆಸ್ ರೈಲುಗಳಲ್ಲಿ ಹೋದರೆ ಸಣ್ಣ-ಸಣ್ಣ ಊರುಗಳಲ್ಲಿನ ಕಾರ್ಯಕರ್ತರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ಲೋಕಲ್ ಟ್ರೈನುಗಳಲ್ಲೇ ಪ್ರಯಾಣಿಸುತ್ತಿದ್ದರು. ಜನಸಂಘದ ಅಧ್ಯಕ್ಷರಾದ ನಂತರ ಅನಿವಾರ್ಯವಾಗಿ ಅವರನ್ನು ಪಟ್ನಾಕ್ಕೆ ಹೋಗುವ ರೈಲಿನಲ್ಲಿ ಎಸಿ ಕೋಚಿಗೆ ಹತ್ತಿಸಲಾಯ್ತು. ದಾರಿಯುದ್ದಕ್ಕೂ ಕಾರ್ಯಕರ್ತರನ್ನು ಮಾತನಾಡಿಸಿಕೊಂಡೇ ಬಂದ ದೀನ್ದಯಾಳರು ಪಟ್ನಾ ತಲುಪುವಾಗ ರೈಲಿನಲ್ಲಿ ಇರಲೇ ಇಲ್ಲ. ಬೆಳಗಿನ ಜಾವ ಮೂರುಮುಕ್ಕಾಲಿಗೆ ಮಾರ್ಗಮಧ್ಯದ ಮೊಘಲ್ಸರಾಯ್ ನಿಲ್ದಾಣದಲ್ಲಿ ಹಳಿಯ ಪಕ್ಕ ಅನಾಥ ಹೆಣವಾಗಿ ಪಂಡಿತ್ಜಿ ಬಿದ್ದಿದ್ದರು. ಸುತ್ತಲೂ ಸೇರಿದ ಜನರ ನಡುವೆ ಅವರನ್ನೊಬ್ಬ ಗುರುತಿಸಿದೊಡನೆ ದೇಶದಾದ್ಯಂತ ಉತ್ಪಾತಗಳೇ ಆಗಿಹೋದವು. ಅವರನ್ನು ಕೊಲೆ ಮಾಡಿಸಲಾಗಿತ್ತಾ? ಈ ಪ್ರಶ್ನೆಗೆ ಇಂದಿನವರೆಗೂ ಉತ್ತರವಿಲ್ಲ. ಅಂದು ಕೊಲೆಯಾಗಿದ್ದಕ್ಕೆ ಪುರಾವೆಗಳಿಲ್ಲವೇನೋ. ಆದರೆ ಇಂದು ರಾಜಸ್ಥಾನದಲ್ಲಿ ಕಾಂಗ್ರೆಸ್ಸು ಅವರನ್ನು ಕೊಂದುಬಿಟ್ಟಿದೆ. ದೇಶದೆಲ್ಲೆಡೆ ಸಿಕ್ಕ-ಸಿಕ್ಕ ಯೋಜನೆಗಳಿಗೆ ಗಾಂಧಿ ಪರಿವಾರದ ಹೆಸರನ್ನೇ ಇಟ್ಟು ಮಜಾ ಉಡಾಯಿಸುತ್ತಿರುವ ಕಾಂಗ್ರೆಸ್ಸು ಒಬ್ಬ ದೀನ್ದಯಾಳರನ್ನು ಸಹಿಸಿಕೊಳ್ಳಲಾಗಲಿಲ್ಲವೆಂದರೆ, ಅಸಹಿಷ್ಣುತೆಯ ಪರಮಾವಧಿ ಇದೇ!

5

ಅತ್ತ ದೀನ್ದಯಾಳರು ಕಟ್ಟಿದ ಪಕ್ಷದ ಅನುಯಾಯಿಯಾಗಿ ನರೇಂದ್ರಮೋದಿ ಗುಜರಾತಿನಲ್ಲಿ ಕಾಂಗ್ರೆಸ್ ನಾಯಕ ಸರದಾರ್ ಪಟೇಲರ ಹೆಸರನ್ನು ಬಿಡಿ ಜಗತ್ತಿನಲ್ಲೇ ದೊಡ್ಡದಾದ ಮೂತರ್ಿಯೊಂದನ್ನು ನಿಲ್ಲಿಸಿ ಗೌರವಿಸಿದ್ದಾರೆ. ಪಕ್ಷಕ್ಕಿಂತ ಆದರ್ಶ ಮುಖ್ಯ ಎಂದು ದೀನ್ದಯಾಳರು ಹೇಳಿದ್ದರಲ್ಲ. ಕಾಂಗ್ರೆಸ್ಸಿಗೆ ಅದು ಅರ್ಥವಾಗಲು ಮತ್ತೊಂದು ಜನ್ಮವೇ ಬೇಕೇನೋ! ಅವರಿಗೆ ಅರ್ಥವಾಗೋದು ಒಂದೇ ‘ದೇಶಕ್ಕಿಂತ ಪರಿವಾರ ಮುಖ್ಯ’!!

Comments are closed.