ವಿಭಾಗಗಳು

ಸುದ್ದಿಪತ್ರ


 

ದೇಶದ್ರೋಹದ ಚಟುವಟಿಕೆಗೆ ಬಳಕೆಯಾಗುತ್ತಿತ್ತು ವಿದೇಶೀ ಹಣ!

ಮೋದಿ ಸಕರ್ಾರ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಸುಮಾರು 15 ಸಾವಿರ ಸಕರ್ಾರೇತರ ಸಂಸ್ಥೆಗಳ ಎಫ್ಸಿಆರ್ಎ ಲೈಸೆನ್ಸು ರದ್ದು ಪಡಿಸಿತ್ತು. ಈ ಸುದ್ದಿ ಆ ದಿನಗಳಲ್ಲಿ ಸಂಚಲನವನ್ನೇ ಉಂಟುಮಾಡಿತ್ತು. ತೀರಾ ಇತ್ತೀಚೆಗೆ ಗೃಹ ಸಚಿವಾಲಯ 13 ಸಂಸ್ಥೆಗಳ ಲೈಸೆನ್ಸನ್ನು ರದ್ದು ಮಾಡಿ ಕ್ರಿಶ್ಚಿಯನ್ ಮಿಶನರಿಗಳಲ್ಲಿ ನಡುಕ ಹುಟ್ಟಿಸಿತ್ತು. ಅದರ ಹಿಂದು ಹಿಂದೆಯೇ ಮೊನ್ನೆ ಸಂಸತ್ತಿನಲ್ಲಿ ಈ ಕುರಿತ ಮಸೂದೆ ಮಂಡಿಸಿ ಕಾಯಿದೆಗೆ ತಿದ್ದುಪಡಿಯನ್ನೂ ತಂದುಬಿಟ್ಟಿದೆ. ಒಂದಾದ ಮೇಲೆ ಒಂದು ಆಘಾತವನ್ನು ತಡೆದುಕೊಳ್ಳಲಾರದೇ ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ರೊಚ್ಚಿಗೆದ್ದು ಕಳೆದ ಕೆಲವಾರು ವರ್ಷಗಳಲ್ಲಿ ಮೊದಲ ಬಾರಿಗೆ ಸ್ಪೀಕರ್ ಕುಚರ್ಿಯತ್ತ ಧಾವಿಸಿ ಅಸಂವೈಧಾನಿಕ ನಡೆ ಪ್ರದಶರ್ಿಸಿದ್ದಾರೆ. ಇಷ್ಟಕ್ಕೂ ಕಾಂಗ್ರೆಸ್ಸು ಮತ್ತಿತರ ಪಕ್ಷಗಳಿಗೆ ಈ ಮಸೂದೆಗಳೆಲ್ಲ ಮಮರ್ಾಘಾತಕಾರಿ, ಏಕೆ?

ವಿದೇಶೀ ಹಣ ಭಾರತದ ಸಕರ್ಾರೇತರ ಸಂಸ್ಥೆಗಳಿಗೆ ಹರಿದು ಬರುವುದನ್ನು ನಿಯಂತ್ರಿಸಲು 2010ರಲ್ಲಿ ರೂಪಿಸಿದ ಕಾಯಿದೆಯೇ ಎಫ್ಸಿಆರ್ಎ. ವಿದೇಶದಿಂದ ಹಣ ಬರುವುದನ್ನು ತಡೆಗಟ್ಟಬೇಕಿಲ್ಲ. ಆದರೆ ಅದು ಯಾರಿಗೆ, ಎಷ್ಟು ಪ್ರಮಾಣದಲ್ಲಿ, ಏತಕ್ಕಾಗಿ ಹರಿದು ಬರುತ್ತಿದೆ ಎಂಬ ಮಾಹಿತಿ ಇರಬೇಕಲ್ಲ. ಜೊತೆಗೆ ಅಲ್ಲಿಂದ ಬಂದ ಹಣ ಉದ್ದೇಶಿತ ಕಾರ್ಯಕ್ಕಾಗಿಯೇ ವಿನಿಯೋಗವಾಗುತ್ತಿದೆಯೇ ಎಂಬುದನ್ನೂ ನಿಗಾವಹಿಸಬೇಕಲ್ಲ. ಅದಕ್ಕೆಂದೇ ಈ ಕಾಯಿದೆ. ನಿವೃತ್ತ ಐಪಿಎಸ್ ಅಧಿಕಾರಿ ನಾಗೇಶ್ವರ್ ರಾವ್ ಅವರ ಲೇಖನದ ಪ್ರಕಾರ ಕಳೆದ ಎರಡು ದಶಕಗಳಲ್ಲಿ ವಿದೇಶದಿಂದ ಸುಮಾರು 2ಲಕ್ಷ ಕೋಟಿಯಷ್ಟು ಹಣ ಹರಿದು ಬಂದಿದೆ. 1998-99ರಲ್ಲಿ ಸುಮಾರು ನಾಲ್ಕು ಸಾವಿರ ಕೋಟಿಯಿಂದ ಶುರುವಾದ ಒಳಹರಿವು 2016-17ರ ವೇಳೆಗೆ 18ಸಾವಿರ ಕೋಟಿ ದಾಟಿತ್ತು. ಮರು ವರ್ಷವೇ 2 ಸಾವಿರ ಕೋಟಿಯಷ್ಟು ಹರಿವು ಕಡಿಮೆಯಾಗಿತ್ತು ಏಕೆಂದರೆ ಸಕರ್ಾರದ ಚೌಕಟ್ಟುಗಳ ನಡುವೆ ಕೆಲಸ ಮಾಡುವುದು ಈಗ ಸುಲಭವಿರಲಿಲ್ಲ.

2017ರಲ್ಲಿ ಹೊರಬಂದ ವರದಿಯೊಂದು ಈ ಸಂಸ್ಥೆಗಳ ಬಳಿ ಖಚರ್ಾಗದೇ ಉಳಿದ ಹಣ ಸುಮಾರು 16 ಸಾವಿರ ಕೋಟಿ ಎಂಬ ಆಘಾತಕಾರಿ ಅಂಶ ಬಯಲಿಗೆ ತಂದಿತ್ತು. ಇದರ ಬಹುಪಾಲು ಶೇಕಡಾ 2ರಷ್ಟು ಸಂಸ್ಥೆಗಳ ಬಳಿ ಕೊಳೆಯುತ್ತಾ ಬಿದ್ದಿತ್ತು. ಹೀಗಿರುವಾಗಲೂ ವಿದೇಶೀ ಸಂಸ್ಥೆಗಳು ಇವೇ ಸಂಸ್ಥೆಗಳಿಗೆ ಹಣ ಹೂಡಲು ಆತುರ ತೋರುವುದೇಕೆ ಎಂಬ ಪ್ರಶ್ನೆ ಕೇಳಲೇಬೇಕಾಗಿರುವುದಲ್ಲವೇ?

ಹೀಗೆ ಹಣ ಕಳಿಸುವವರಿಗೆ ಉದ್ದೇಶವೇನೋ ಇರಲೇಬೇಕಲ್ಲ. ಗೂಢಚಾರ ಸಂಸ್ಥೆಯ ನಿದರ್ೇಶನದ ಮೇರೆಗೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ, ಐಐಟಿ ಕಾನ್ಪುರ್ ಮತ್ತು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯಗಳಿಗೆ ವಿದೇಶದಿಂದ ಬರುವ ಹಣವನ್ನು ತಡೆಯಲಾಗಿತ್ತು. ಜೆಎನ್ಯು ಮತ್ತು ಜಾಮಿಯಾ ಮಿಲಿಯಾಗಳು ದೇಶವಿರೋಧಿ ಘೋಷಣೆ ಕೂಗುವ ಪರಿ ನೋಡಿದರೆ ಎಂಥವನಿಗೂ ಈ ಕ್ರಮ ಸರಿ ಎನಿಸಿರಲು ಸಾಕು. ಅದರ ಹಿಂದುಹಿಂದೆಯೇ ಗ್ರೀನ್ಪೀಸ್ ಇಂಡಿಯಾ ಸಂಸ್ಥೆಗೂ ಹಣವನ್ನು ತಡೆಯಲಾಯಿತು. ಜೊತೆಗೆ ತೀಸ್ತಾ ಸೆತಲ್ವಾಡ್ಳ ಎರಡೆರಡು ಸಂಸ್ಥೆಗಳ ಮೇಲೆ ವಿದೇಶೀ ಹಣ ಪಡೆಯುವುದರ ಕುರಿತಂತೆ ನಿಷೇಧ ಹೇರಲಾಗಿತ್ತು. ಎಡಪಂಥೀಯರೆಲ್ಲ ಮೋದಿಯವರ ಪ್ರತೀಕಾರ ಕ್ರಮವಿದು ಎಂದು ಟೀಕಿಸಿದರೂ ಸಕರ್ಾರ ಬಾಗಲಿಲ್ಲ. ವಿದೇಶದಿಂದ ಬಂದ ಹಣವನ್ನು ತನ್ನ ಸ್ವಂತ ಖಚರ್ಿಗೆ ಆಕೆ ಬಳಸಿಕೊಂಡಿದ್ದಲ್ಲದೇ ಜನಸಾಮಾನ್ಯರನ್ನೂ ಆಡಳಿತದ ವಿರುದ್ಧ ಭಡಕಾಯಿಸುವ ಪ್ರಯತ್ನದಲ್ಲೂ ತೊಡಗಿದ್ದಳು. ಅದಕ್ಕೆ ಪುರಾವೆ ಒದಗಿಸಿಯೇ ಆಕೆಯ ಸಂಸ್ಥೆಗಳಿಗೆ ನಿಷೇಧ ಹಾಕಿತ್ತು ಸಕರ್ಾರ. ಈ ನಡುವೆ ತೀರಾ ಇತ್ತೀಚೆಗೆ ಹೈದರಾಬಾದಿನ ಸಂಸ್ಥೆಯೊಂದು ಗೃಹಸಚಿವಾಲಯಕ್ಕೆ ಪತ್ರ ಬರೆದು ‘ಹಾವರ್ೆಸ್ಟ್ ಇಂಡಿಯಾ’ ಎಂಬ ಮಿಶನರಿ ಸಂಸ್ಥೆ ವಿದೇಶೀ ಹಣ ಪಡೆದು ಅದನ್ನು ಮತಾಂತರಕ್ಕೂ, ದೇಶವಿರೋಧಿ ಕೃತ್ಯಗಳಿಗೆ ಬಳಸುತ್ತಿದೆಯಲ್ಲದೇ ಸಾಕಷ್ಟು ದುರುಪಯೋಗವನ್ನು ಮಾಡುತ್ತಿದೆ ಎಂದು ಎಚ್ಚರಿಸಿತು. ಈ ಆರೋಪ ಅದೆಷ್ಟು ತೀವ್ರಪ್ರಮಾಣದ್ದಾಗಿತ್ತೆಂದರೆ ಸಕರ್ಾರ ಈ ಕುರಿತು ವಿಶೇಷ ಗಮನ ಕೊಡುವುದು ಅನಿವಾರ್ಯವೇ ಆಗಿತ್ತು.

ಆಗಲೇ ಅನೇಕ ಸಕರ್ಾರೇತರ ಸಂಸ್ಥೆಗಳ ಅಸಲಿ ಮುಖ ಬೆಳಕಿಗೆ ಬಂದಿದ್ದು. ವಿದೇಶದಿಂದ ಹಣ ತರಿಸಿಕೊಂಡು ಇಲ್ಲಿ ಭವ್ಯವಾದ ಚಚರ್ುಗಳನ್ನು ಕಟ್ಟಿ, ಕ್ರಿಸ್ತನ ಸಂದೇಶಗಳನ್ನು ಒತ್ತಾಯದಿಂದ ಬಿತ್ತಿ ಬೆಳೆ ತೆಗೆಯುವ ಸಂಸ್ಥೆಗಳು ಸಾಕಷ್ಟಿದ್ದವು. ಅವುಗಳಿಗೆ ನೋಟೀಸು ಕಳಿಸಿತು ಸಕರ್ಾರ. ಅನೇಕ ದಿನಗಳ ನಂತರವೂ ಉತ್ತರ ಬರದಿದ್ದಾಗ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ 13 ಸಂಸ್ಥೆಗಳ ಲೈಸೆನ್ಸ್ ರದ್ದು ಮಾಡಲಾಯ್ತು. ಕಂಪ್ಯಾಶನ್ ಇಂಟರ್ನ್ಯಾಶನಲ್ನಂತಹ ಸಂಸ್ಥೆಗಳಿಗೆ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಬರುತ್ತಿದ್ದು ಅಷ್ಟನ್ನೂ ಸೇವೆಯ ಹೆಸರಲ್ಲಿ ಮತಾಂತರಕ್ಕೆ ಬಳಸಲಾಗುತ್ತಿತ್ತು. ಮುಲಾಜಿಲ್ಲದೇ ಇಂತಹವುಗಳ ವಿದೇಶೀ ಹಣ ಪಡೆಯುವ ಅಧಿಕಾರ ಮೊಟಕುಗೊಳಿಸಿದ ಸಕರ್ಾರ ಭಾರತದಲ್ಲಿ ಸಾರ್ವಭೌಮತೆಯನ್ನು ಸ್ಥಾಪಿಸುವುದಕ್ಕೆ ಇತರೆ ರಾಷ್ಟ್ರಗಳಿಗೆ ಬಿಡುವುದಿಲ್ಲವೆಂಬ ಸಂದೇಶವನ್ನು ಸ್ಪಷ್ಟವಾಗಿ ರೂಪಿಸಿತ್ತು.

ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಬಗೆಯ ಸಂಸ್ಥೆಗಳ ಕುರಿತಂತೆ ಜನ ಸತರ್ಕರಾಗಿರುವುದು ಕಂಡು ಬರುತ್ತಿದೆ. ಸೋನಿಯಾ-ರಾಹುಲ್ ನಡೆಸುವ ರಾಜೀವ್ಗಾಂಧಿ ಫೌಂಡೇಶನ್ಗೆ ಸಕರ್ಾರದ ಹಣ ಹರಿದು ಹೋಗಿತ್ತಲ್ಲದೇ ಸ್ವತಃ ಚೀನೀ ಕಮ್ಯುನಿಸ್ಟ್ ಸಕರ್ಾರ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡಿತ್ತು. ಸುಪ್ರೀಂಕೋಟರ್ು ಕೂಡ ಇದನ್ನು ಪ್ರಶ್ನಿಸಿದ ಮೇಲೆ ಕಾಂಗ್ರೆಸ್ಸು ಇರಿಸು-ಮುರಿಸಿಗೆ ಒಳಗಾಗಿತ್ತು. ಅದಕ್ಕೆ ಪೂರಕವಾಗಿ ಭಾರತದಲ್ಲಿ ಚೀನಾ ನಡೆಸುತ್ತಿರುವ ದೇಶವಿರೋಧಿ ಪ್ರಚಾರಕ್ಕೆ ಕಾಂಗ್ರೆಸ್ಸು ಪರೋಕ್ಷ ಬೆಂಬಲ ನೀಡುತ್ತಿರುವುದನ್ನು ಜನರೂ ಗಮನಿಸುತ್ತಿರುವುದು ಕಾಂಗ್ರೆಸ್ಸಿನ ಇಂದಿನ ಸ್ಥಿತಿಗೆ ಪೂರಕವಾಗಿಯಂತೂ ಇರಲಿಲ್ಲ! ಒಂದೆಡೆ ಮತಾಂತರದ ಪ್ರಕ್ರಿಯೆ ನಿಂತು ಹೋಗಿದ್ದು ತನ್ಮೂಲಕ ಹಿಂದೂ ಜಾಗೃತಿಗೆ ನಡೆಯುತ್ತಿರುವ ಪ್ರಯತ್ನ; ಮತ್ತೊಂದೆಡೆ ತನ್ನ ಹಣದ ಮೂಲದ ಒಂದೊಂದೂ ಜಾಗವೂ ಬೆಳಕಿಗೆ ಬರುತ್ತಿರುವುದು ಕಾಂಗ್ರೆಸ್ಸನ್ನು ಕಂಗೆಡಿಸಿತ್ತು. ಇದೇ ಸಂದರ್ಭದಲ್ಲಿ ಕೇಂದ್ರಸಕರ್ಾರ ಈ ಕಾಯಿದೆಗೆ ತಿದ್ದುಪಡಿ ತರುವ ಮಸೂದೆಗೆ ಅಂಗೀಕಾರವನ್ನು ಪಡೆದುಕೊಂಡಿತು.

ಇದರ ಪ್ರಕಾರ ಇನ್ನು ಮುಂದೆ ಸಕರ್ಾರಿ ನೌಕರರು ವಿದೇಶೀ ಹಣ ಸ್ವೀಕರಿಸುವಂತಿಲ್ಲ. ಸಂಸ್ಥೆಯ ಪ್ರತಿಯೊಬ್ಬ ಆಡಳಿತದ ಸದಸ್ಯನೂ ಆಧಾರ್ ಕೊಡಲೇಬೇಕು. ಹೀಗೆ ಪಡೆದ ಹಣದ ಶೇಕಡಾ 20ರಷ್ಟು ಮಾತ್ರ ಆಡಳಿತಾತ್ಮಕ ಖಚರ್ು-ವೆಚ್ಚಕ್ಕೆ ಬಳಸಬೇಕು; ಈ ಮೊದಲು ಶೇಕಡಾ 50ರಷ್ಟು ಬಳಸಬಹುದೆಂಬ ನಿಯಮವಿತ್ತು! ಸಕರ್ಾರ ನಡೆಸುವ ವಿಚಾರಣೆಯಲ್ಲಿ ಹಣದ ದುರುಪಯೋಗ ಕಂಡು ಬಂದರೆ ಹಣವನ್ನು ಬಳಸದಿರುವ ನಿಯಮ ಹೇರುವ ಅಧಿಕಾರ ಈಗ ಸಕರ್ಾರಕ್ಕಿದೆ. ಈ ಮುನ್ನ ವಿಚಾರಣೆಯಲ್ಲಿ ಆರೋಪ ದೃಢ ಪಡುವವರೆಗೆ ಹಣವನ್ನು ಬಳಸುತ್ತಲೇ ಇರಬಹುದಿತ್ತು.

ಹಾಗೆ ನೋಡಿದರೆ ತಮ್ಮ ಲೆಕ್ಕವನ್ನೂ, ಖಚರ್ು ವೆಚ್ಚವನ್ನು ಶುದ್ಧವಾಗಿರಿಸಿಕೊಂಡವರಿಗೆ ಈ ಕಾಯಿದೆ ಸಮಾಧಾನ ತರುವಂಥದ್ದೇ. ಯಾರು ಹಣವನ್ನು ಒಂದು ಕೆಲಸಕ್ಕೆಂದು ತಂದು ಮತ್ತೊಂದಕ್ಕೆ ಬಳಸುತ್ತಾರೋ ಅಂಥವರಿಗಷ್ಟೇ ಉರಿ ಎನಿಸಬಹುದಾದ ಸಂಗತಿಗಳಿವು. ಹಾಗೆಂದೇ ಅನೇಕ ಸಂಸ್ಥೆಗಳು ಎದ್ದೆದ್ದು ಕುಣಿಯುತ್ತಿವೆ, ಅರಚಾಡುತ್ತಿವೆ. ಆದರೆ ಮೋದಿ ಸಕರ್ಾರ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ರಾಷ್ಟ್ರವೇ ಮೊದಲು ಎಂದು ಗರ್ವದಿಂದ ಹೇಳಿದವರಲ್ಲವೇ ಅವರು. ಅದರೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಹೇಗೆ ಸಾಧ್ಯ!

Comments are closed.