ವಿಭಾಗಗಳು

ಸುದ್ದಿಪತ್ರ


 

ದೇಶದ ನೇತೃತ್ವ ಬಲವಾಗಿದೆ, ವಿಶ್ವಾಸವಿಡೊಣ!!

ಪಾಕಿಸ್ತಾನಕ್ಕೆ ಕೊಟ್ಟಿದ್ದ ಆಪ್ತರಾಷ್ಟ್ರದ ಸ್ಥಾನಮಾನವನ್ನು ಭಾರತ ಕಸಿದುಕೊಂಡಿದೆ. ಇದು 1996ರಲ್ಲಿ ವಿಶ್ವ ವ್ಯಾಪಾರ ಒಕ್ಕೂಟದ ನೀತಿಗಳ ಆಧಾರದ ಮೇಲೆ ಮಾಡಿಕೊಂಡ ನಿರ್ಣಯ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಸ್ತುಗಳ ಮೇಲೆ 200 ಪ್ರತಿಶತ ತೆರಿಗೆಯನ್ನು ಭಾರತ ಹೇರಿದ್ದು ಪಾಕಿಸ್ತಾನದ ಮೇಲೆ ಇದರಿಂದ ಆಗುವ ಪರಿಣಾಮ ಅತ್ಯಲ್ಪ ಏಕೆಂದರೆ ನಮ್ಮಿಬ್ಬರ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಪಾಕಿಸ್ತಾನದ ಪಾಲು ಕಾಲು ಭಾಗವಷ್ಟೇ. ಆದರೆ ನಾವು ಈ ಸ್ಥಾನಮಾನವನ್ನು ಕಿತ್ತುಕೊಂಡಿರುವುದರಿಂದ ಪಾಕಿಸ್ತಾನದ ಸುತ್ತಮುತ್ತಲಿನ ರಾಷ್ಟ್ರಗಳೂ ಕೂಡ ಇದರ ಕುರಿತಂತೆ ಯೋಚನೆ ಮಾಡಬಹುದು ಮತ್ತು ಅದು ಪಾಕಿಸ್ತಾನದ ಒಟ್ಟಾರೆ ವಿದೇಶೀ ವಿನಿಮಯದ ಮೇಲೆ ಆಘಾತಕಾರಿ ಪರಿಣಾಮವನ್ನು ಉಂಟುಮಾಡಬಹುದು.

ಪುಲ್ವಾಮಾದಲ್ಲಿ ದಾಳಿಯಾದುದರ ಶಾಕ್ನಿಂದ ಇನ್ನೂ ಭಾರತ ಹೊರಬಂದಿಲ್ಲ. ಗಲ್ಲಿ-ಗಲ್ಲಿಗಳಲ್ಲೂ ಇದೇ ಚಚರ್ೆ. ಒಂದಷ್ಟು ಆಕ್ರೋಶ, ಒಂದಷ್ಟು ಹತಾಶೆ, ಒಂದಷ್ಟು ದುಃಖ, ಒಂದಷ್ಟು ಆತಂಕ ಜೊತೆಗೆ ನಮ್ಮವರ ಮೇಲೆ ಒಂದಷ್ಟು ಅನುಮಾನ. ಮುಂಬೈ ದಾಳಿಯ ನಂತರ ಭಾರತ ಈ ಸ್ಥಿತಿಗೆ ಹೋಗಿದ್ದು ಈ ಬಾರಿಯೇ. ಪ್ರತಿಯೊಬ್ಬರದ್ದೂ ಒಂದೇ ಹಠ. ಪಾಕಿಸ್ತಾನದ ಮೇಲೆ ಯುದ್ಧ ಮಾಡಿಬಿಡಬೇಕು. ಮತ್ತೊಂದು ಸಜರ್ಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು. ಆದರೆ ಮೊದಲೇ ಹೇಳಿ ಮಾಡಿದ್ದನ್ನು ಸಜರ್ಿಕಲ್ ಸ್ಟ್ರೈಕ್ ಎನ್ನುವುದಿಲ್ಲ. ಸಜರ್ಿಕಲ್ ಸ್ಟ್ರೈಕ್ಗೆ ಎದುರಾಳಿ ಮೈಮರೆತಿರುವ ಸಂದರ್ಭವನ್ನೇ ಹುಡುಕಲಾಗುತ್ತದೆ. ಆದರೀಗ ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಗಿ ನಿಂತಿದೆ. ಅಲ್ಲಿನ ಪ್ರತಿಯೊಂದು ಪೋಸ್ಟ್ಗಳಲ್ಲೂ ಹೈ ಅಲಟರ್್ ಘೋಷಿಸಲಾಗಿದೆ. ಯುದ್ಧಕ್ಕೆ ಬೇಕಾದಷ್ಟು ಶಸ್ತ್ರಾಸ್ತ್ರಗಳನ್ನು ತಂದು ಸುರುವಲಾಗಿದೆ. ಇದು ಕೆಚ್ಚೆದೆಯಿಂದ ಆಗುತ್ತಿರುವ ತಯಾರಿಯಲ್ಲ. ಭಾರತದ ಆಕ್ರೋಶಕ್ಕೆ ಭೀತಿಯಿಂದ ನಡುಗಿ ಆಗುತ್ತಿರುವ ತಯಾರಿ. ಹಾಗೆ ನೋಡಿದರೆ ಯುದ್ಧಕ್ಕೆ ಅಷ್ಟು ತಯಾರಿ ನಾವೇ ಮಾಡಿಕೊಂಡಿಲ್ಲ. ಯಾವುದೇ ಯುದ್ಧವೂ ತಯಾರಿ ಇಲ್ಲದೇ ನಡೆಯುವಂಥದ್ದೂ ಅಲ್ಲ. ಬಾಂಗ್ಲಾದೇಶವನ್ನು ಬೇರ್ಪಡಿಸುವ ಮುನ್ನ ತಕ್ಷಣ ಯುದ್ಧ ಮಾಡಬೇಕೆಂದು ಇಂದಿರಾ ಕೇಳಿಕೊಂಡಿದ್ದಕ್ಕೆ ಜನರಲ್ ತಿಮ್ಮಯ್ಯ ತಿರಸ್ಕರಿಸಿ ಸಭೆಯಿಂದ ಎದ್ದು ನಡೆದಿದ್ದರಂತೆ. ಉಳಿದವರೆಲ್ಲಾ ಕುಪಿತರಾಗಿರುವಾಗ ಸಾವರಿಸಿಕೊಂಡ ಇಂದಿರಾ ತಿಮ್ಮಯ್ಯನವರನ್ನು ಕರೆದು ಹೀಗೇಕೆ ಎಂದು ಕೇಳಿದರಂತೆ. ಸಿದ್ಧತೆಯಿಲ್ಲದೇ ನನ್ನ ಸೈನಿಕರನ್ನು ಶತ್ರುಗಳ ಬಾಯಿಗೆ ಕೊಡಲಾರೆ ಎಂದ ತಿಮ್ಮಯ್ಯ ಆರು ತಿಂಗಳ ಸಮಯ ಕೇಳಿ, ಸಿದ್ಧತೆ ಆರಂಭಿಸಿ ಯುದ್ಧ ಶುರುಮಾಡಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ್ದರು. ಕಾಗರ್ಿಲ್ ಯುದ್ಧದಲ್ಲಿ ಮೊದಲ ದಾಳಿ ಪಾಕಿಸ್ತಾನ ಮಾಡಿದ್ದರಿಂದ ಅಂತಿಮವಾಗಿ ಯುದ್ಧವನ್ನೇನೋ ನಾವು ಗೆದ್ದೆವು ನಿಜ. ಆದರೆ ಯುದ್ಧ ಸಿದ್ಧತೆ ಇಲ್ಲವಾದ್ದರಿಂದ ಬಹುದೊಡ್ಡ ಬೆಲೆಯನ್ನೂ ತೆರಬೇಕಾಯ್ತು. ಅಂದರೆ ಸಜರ್ಿಕಲ್ ಸ್ಟ್ರೈಕ್ ಸಾಧ್ಯವಿಲ್ಲವೆಂದಾಯ್ತು. ಯುದ್ಧ ಪರಿಹಾರವಲ್ಲವೆಂದಾಯ್ತು. ಹಾಗಿದ್ದರೆ ಮುಂದೇನು?

2

ಈಗಾಗಲೇ ಭಾರತ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಹಳಿಯುವ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ. ಅದು ಈ ಘಟನೆಯ ನಂತರ ಆಗಿರುವಂಥದ್ದೇನೂ ಅಲ್ಲ. 2018ರ ಫೆಬ್ರವರಿಯಲ್ಲಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋಸರ್್ ಪ್ಯಾರಿಸ್ನಲ್ಲಿ ಸಭೆ ಸೇರಿದ್ದಾಗ ಪಾಕಿಸ್ತಾನವನ್ನು ಕಂದುಪಟ್ಟಿಗೆ ಸೇರಿಸಬೇಕೆಂದು ಭಾರತ ವಾದ ಮಂಡಿಸಿತ್ತು. ಆದರೆ ಪಾಕಿಸ್ತಾನ ತನ್ನನ್ನು ಇದರಿಂದ ಹೊರಗಿಡುವಂತೆ ಜಗತ್ತನ್ನೆಲ್ಲಾ ಬೇಡಿಕೊಂಡಿತ್ತು. ವಾಸ್ತವವಾಗಿ ಎಫ್ಎಟಿಎಫ್ನಲ್ಲಿ ಕಂದುಪಟ್ಟಿಯಲ್ಲಿರುವುದೆಂದರೆ ಅಂತಹ ರಾಷ್ಟ್ರ ಭಯೋತ್ಪಾದಕರಿಗೆ ಸಹಕಾರ ಮಾಡುತ್ತಿದೆ ಎಂದೂ ಹಣಕಾಸು ವಹಿವಾಟಿನಲ್ಲಿ ಜಾಗತಿಕ ಮಟ್ಟದ ದೋಷಗಳನ್ನೂ ಮಾಡುತ್ತಿದೆ ಎಂದೂ ಅರ್ಥ. ಇತರೆ ರಾಷ್ಟ್ರಗಳು ಅವರಿಗೆ ಸಾಲ ಕೊಡುವಾಗ ನೂರು ಬಾರಿ ಯೋಚಿಸುತ್ತಾರೆ. ಬೇಡುವ ಸ್ಥಿತಿಗೆ ಬಂದಿದ್ದ ಪಾಕಿಸ್ತಾನಕ್ಕೆ ಹೇಗಾದರೂ ಮಾಡಿ ಈ ಬೀಸುವ ದೊಣ್ಣೆಯಿಂದ ಪಾರಾಗಬೇಕಿತ್ತು. ಆದರೆ ಭಾರತ ಬಿಡಲಿಲ್ಲ. ಸದಸ್ಯರಲ್ಲಿ ಮೂರು ರಾಷ್ಟ್ರಗಳು ಈ ಪ್ರಸ್ತಾವನೆಯನ್ನು ವಿರೋಧಿಸಿದರೆ ಪಾಕಿಸ್ತಾನವನ್ನು ಈ ಪಟ್ಟಿಯಿಂದ ಹೊರಗಿಡಬಹುದಿತ್ತು. ಚೀನಾ, ಟಕರ್ಿ ಮತ್ತು ಸೌದಿ ಅರೇಬಿಯಾಗಳು ಪಾಕಿಸ್ತಾನದ ಪರವಾಗಿ ನಿಂತಿದ್ದವು. ಭಾರತ ತನ್ನ ಪ್ರಭಾವವನ್ನು ಬಳಸಿ ಸೌದಿಯನ್ನು ತನ್ನತ್ತ ಒಲಿಸಿಕೊಂಡಿತು. ಉಳಿದವು ಎರಡೇ ರಾಷ್ಟ್ರಗಳಾದ್ದರಿಂದ ಬೇರೆ ದಾರಿಯಿಲ್ಲದೇ ಚೀನಾ ಕೂಡ ಹೊರಗಿರಬೇಕಾಯ್ತು. ಕೊನೆಗೆ ಪಾಕಿಸ್ತಾನವನ್ನು ಕಂದುಪಟ್ಟಿಗೆ ಸೇರಿಸಿದ ಜಗತ್ತು ವಿಶ್ವಾಸ ಬರುವಂತೆ ನಡೆದುಕೊಂಡರೆ ಮಾತ್ರ ನಿಮ್ಮನ್ನು ಇಲ್ಲಿಂದ ಹೊರಗಿಡಲಾಗುವುದು ಎಂದಿತು. ಈಗ ಈ ಘಟನೆಯ ನಂತರ ಭಾರತದ ಪ್ರಯಾಸ ಹೇಗಿದೆಯೆಂದರೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ರಾಜತಾಂತ್ರಿಕ ಪ್ರಯತ್ನವನ್ನು ಆರಂಭಿಸಿದೆ. ಹಾಗೇನಾದರೂ ಆದರೆ ಪಾಕಿಸ್ತಾನ ಅಕ್ಷರಶಃ ತನ್ನನ್ನೇ ತಾನು ತಿನ್ನುವ ರಾಷ್ಟ್ರವಾಗಿಬಿಡಬೇಕಾಗುತ್ತದೆ.

ಪಾಕಿಸ್ತಾನಕ್ಕೆ ಕೊಟ್ಟಿದ್ದ ಆಪ್ತರಾಷ್ಟ್ರದ ಸ್ಥಾನಮಾನವನ್ನು ಭಾರತ ಕಸಿದುಕೊಂಡಿದೆ. ಇದು 1996ರಲ್ಲಿ ವಿಶ್ವ ವ್ಯಾಪಾರ ಒಕ್ಕೂಟದ ನೀತಿಗಳ ಆಧಾರದ ಮೇಲೆ ಮಾಡಿಕೊಂಡ ನಿರ್ಣಯ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಸ್ತುಗಳ ಮೇಲೆ 200 ಪ್ರತಿಶತ ತೆರಿಗೆಯನ್ನು ಭಾರತ ಹೇರಿದ್ದು ಪಾಕಿಸ್ತಾನದ ಮೇಲೆ ಇದರಿಂದ ಆಗುವ ಪರಿಣಾಮ ಅತ್ಯಲ್ಪ ಏಕೆಂದರೆ ನಮ್ಮಿಬ್ಬರ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಪಾಕಿಸ್ತಾನದ ಪಾಲು ಕಾಲು ಭಾಗವಷ್ಟೇ. ಆದರೆ ನಾವು ಈ ಸ್ಥಾನಮಾನವನ್ನು ಕಿತ್ತುಕೊಂಡಿರುವುದರಿಂದ ಪಾಕಿಸ್ತಾನದ ಸುತ್ತಮುತ್ತಲಿನ ರಾಷ್ಟ್ರಗಳೂ ಕೂಡ ಇದರ ಕುರಿತಂತೆ ಯೋಚನೆ ಮಾಡಬಹುದು ಮತ್ತು ಅದು ಪಾಕಿಸ್ತಾನದ ಒಟ್ಟಾರೆ ವಿದೇಶೀ ವಿನಿಮಯದ ಮೇಲೆ ಆಘಾತಕಾರಿ ಪರಿಣಾಮವನ್ನು ಉಂಟುಮಾಡಬಹುದು.

3

ಆಪ್ತಮಿತ್ರ ಚೀನಾ ಎಂದೆನಿಸಿದರೂ ಪಾಕಿಸ್ತಾನದಲ್ಲಿ ಚೀನಾದ ಹೂಡಿಕೆ 60 ಶತಕೋಟಿ ಡಾಲರ್ಗಳಾಗುತ್ತವೆ ಎಂಬ ನಿರೀಕ್ಷೆಯಿತ್ತು. ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಚೀನಾ ಬಲು ಎಚ್ಚರಿಕೆಯ ನಡೆಯನ್ನು ಇರಿಸಿ ಆ ಒಟ್ಟಾರೆ ಹೂಡಿಕೆಯನ್ನು 19 ಶತಕೋಟಿ ಡಾಲರ್ಗೆ ಇಳಿಸಿಬಿಟ್ಟಿದೆ. ಚೀನಾದ ಮಿತ್ರ ರಾಷ್ಟ್ರವೇ ಅಲ್ಲದೇ ಹೋದಾಗಲೂ ನಮ್ಮ ದೇಶದಲ್ಲಿ ಚೀನಾದ ಹೂಡಿಕೆ 10 ಶತಕೋಟಿ ಡಾಲರ್ಗಳಷ್ಟಿದೆ. ಅಂದರೆ ಚೀನಾದಿಂದಲೂ ಪಾಕಿಸ್ತಾನಕ್ಕೆ ಲಾಭವಾಗುತ್ತಿಲ್ಲ. ಭಾರತ ಜಾಗತಿಕ ಒತ್ತಡವನ್ನು ತಂದಿದುದರ ಪರಿಣಾಮವಾಗಿ ಐಎಮ್ಎಫ್ ಕೂಡ ಸಾಲ ನೀಡಲು ಹಿಂದೇಟು ಹಾಕುತ್ತಿದೆ. ಆಥರ್ಿಕವಾಗಿ ಪಾಕಿಸ್ತಾನ ಯಾವ ಸ್ಥಿತಿಗೆ ಬಂದು ಮುಟ್ಟಿದೆ ಎಂದರೆ ಅದಕ್ಕುಳಿದಿರುವ ಹಣ ಗಳಿಸುವ ಜಾಗತಿಕ ಮಾರ್ಗವೆಂದರೆ ಭಯೋತ್ಪಾದನೆ ಒಂದೇ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿಯೇ ಮುಂದೊಂದು ದಿನ ಜಗತ್ತಿನ ಎಲ್ಲ ಭಯೋತ್ಪಾದಕರಿಗೂ ತರಬೇತಿ ಕೊಡುವ ತಾಣವಾಗಿ ಪಾಕಿಸ್ತಾನ ತನ್ನ ತಾನು ರೂಪಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ. ಹೇಳುತ್ತಾರಲ್ಲ ಜಗತ್ತಿನಲ್ಲಿ ಎಲ್ಲಾ ರಾಷ್ಟ್ರಗಳೂ ಸೇನೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದರೆ, ಇಲ್ಲಿ ಭಯೋತ್ಪಾದಕರೇ ರಾಷ್ಟ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ ಅಂತ. ಭಾರತ ಇದೆಲ್ಲವನ್ನು ಗಮನಿಸುತ್ತಲೇ ಪಾಕಿಸ್ತಾನವನ್ನು ಆಂತರಿಕವಾಗಿ ಟೊಳ್ಳುಗೊಳಿಸುತ್ತಾ ಯುದ್ಧದ ಭೀತಿಯನ್ನು ಅದರಲ್ಲಿ ಹೆಚ್ಚಿಸುತ್ತಲೇ ಬಂದಿದೆ. ಪೋಖ್ರಾನ್ನಲ್ಲಿ ನಡೆದ ವಾಯುಸೇನೆಯ ಶಕ್ತಿಪ್ರದರ್ಶನ ಇದರದ್ದೇ ಮುಂದುವರಿದ ಭಾಗವಷ್ಟೇ. ಮಿಗ್, ಜಾಗ್ವಾರ್ಗಳೆಲ್ಲಾ ಗಗನಕ್ಕೆ ಚಿಮ್ಮಿ ತಮ್ಮ ಬಳಿಯಿರುವಂತಹ ಶಸ್ತ್ರಗಳ ಸಾಮಥ್ರ್ಯವನ್ನು ಪ್ರದಶರ್ಿಸುತ್ತಿದ್ದರೆ ಪಾಕಿಸ್ತಾನ ಅವಡುಗಚ್ಚಿಕೊಂಡು ನೋಡುತ್ತಿರಲು ಸಾಕು. ಹಾಗೊಂದು ಸಾಮಥ್ರ್ಯ ಪ್ರದರ್ಶನವನ್ನು ಪಾಕಿಸ್ತಾನ ಮಾಡಬೇಕೆಂದರೆ ಅದಕ್ಕೆ ಬೇಕಾದ ಸವಲತ್ತುಗಳಾಗಲೀ ಹಣವಾಗಲೀ ಪಾಕಿಸ್ತಾನದ ಬಳಿ ಖಂಡಿತ ಇಲ್ಲ. ಮತ್ತದು ಚೀನಾದೆದುರಿಗೆ ಕೈಚಾಚಿ ನಿಲ್ಲಬೇಕು.

4

ಇತ್ತ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೇರಿಕಾದ ಭದ್ರತಾ ಸಲಹೆಗಾರ ಬಾಲ್ಟನ್ನೊಂದಿಗೆ ಮಾತುಕತೆ ನಡೆಸಿ ಬಲುದೊಡ್ಡ ಕಾಯರ್ಾಚರಣೆಯ ರೂಪುರೇಷೆ ಹಾಕಿಕೊಂಡಿದ್ದಾರೆ. ಭಾರತ ತನ್ನ ತಾನು ರಕ್ಷಿಸಿಕೊಳ್ಳುವ ಯಾವ ಪ್ರಯತ್ನಕ್ಕೆ ಕೈ ಹಾಕಿದರೂ ಅದಕ್ಕೆ ಅಮೇರಿಕಾದ ಬೆಂಬಲವಿದೆ ಎಂಬ ಹೇಳಿಕೆಯೇ ಪಾಕಿಸ್ತಾನದ ಎದೆ ನಡುಗಿಸಿದೆ. ಹೀಗಾಗಿ ಇಸ್ರೇಲಿನ ಮೊಸಾದ್, ಅಮೇರಿಕಾದ ಸಿಐಎ, ಮತ್ತು ಭಾರತದ ಗುಪ್ತಚರ ಸಂಸ್ಥೆಗಳು ಸೇರಿ ಪಾಕಿಸ್ತಾನದ ಒಳಗೇ ನುಗ್ಗಿ ಬಲುದೊಡ್ಡ ದಾಳಿಯನ್ನು ಮಾಡಿ ಮುಗಿಸುವ ಸಂದರ್ಭ ನಿಮರ್ಾಣವಾದರೂ ಯಾರೂ ಅಚ್ಚರಿ ಪಡಬೇಕಿಲ್ಲ. ಭಾರತ ಸಕರ್ಾರ ಇದನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಿರುವ ಪರಿ ನೋಡಿದರೆ ಎಂಥವರಿಗೂ ಇದು ಅರ್ಥವಾದೀತು. ನರೇಂದ್ರಮೋದಿಯವರು ಆಕ್ರೋಶದಲ್ಲಿ ಭಾಷಣ ಮಾಡಿದಾಗಲೂ ಎಲ್ಲೂ ಪಕ್ಕದ ರಾಷ್ಟ್ರದ ಹೆಸರನ್ನೆತ್ತಿಲ್ಲ. ಭಯೋತ್ಪಾದಕರು ದೊಡ್ಡ ತಪ್ಪು ಎಸಗಿದ್ದಾರೆ, ಅದಕ್ಕೆ ಸೂಕ್ತ ಶಿಕ್ಷಯನ್ನು ಅನುಭವಿಸುತ್ತಾರೆ ಎಂದರಲ್ಲದೇ ಈ ಕೆಲಸ ಮಾಡಿದವನು ಎಲ್ಲಿಯೇ ಅಡಗಿದ್ದರೂ ಅವನಿಗೆ ಸರಿಯಾದ ಪಾಠ ಕಲಿಸುತ್ತೇವೆ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಅದರರ್ಥ ಬಲು ಸ್ಪಷ್ಟ. ನಾವು ಪಾಕಿಸ್ತಾನದೊಳಕ್ಕೆ ನುಗ್ಗಿ ದಾಳಿ ಮಾಡಿದರೂ ಅದು ಪಾಕಿಸ್ತಾನದ ಮೇಲಿನ ಯುದ್ಧವೆಂದು ಗಣಿಸಲ್ಪಡುವುದಿಲ್ಲ. ಬದಲಿಗೆ ಅಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಕೊಲ್ಲುವ ಜಾಗತಿಕ ಕಾಯರ್ಾಚರಣೆಯೆಂದು ಅನುಮೋದಿಸಲ್ಪಡುತ್ತದೆ. ಈಗಾಗಲೇ ಇದಕ್ಕೆ ಬೇಕಾಗಿರುವ ಎಲ್ಲಾ ಸಾಕ್ಷ್ಯಗಳನ್ನೂ ಸಂಗ್ರಹಿಸಲಾಗುತ್ತಿದೆ. ಅದಾಗಲೇ ಇರಾನ್ ತನ್ನ 27 ಕ್ಕೂ ಹೆಚ್ಚು ಸೈನಿಕರನ್ನು ಪಾಕಿಸ್ತಾನದಲ್ಲಿ ತರಬೇತಿ ಪಡೆದ ಭಯೋತ್ಪಾದಕರು ಕೊಂದಿದ್ದಾರೆಂದು ಆರೋಪಿಸಿದೆ. ಆಫ್ಘಾನಿಸ್ತಾನದಲ್ಲಿ ಅದಾಗಲೇ ಅಮೇರಿಕಾದ ಶಕ್ತಿಯಂತೂ ಇದ್ದೇ ಇದೆ. ಭಾರತದ ಒತ್ತಡಕ್ಕೆ ಮಣಿದ ಸೌದಿ ಅರೇಬಿಯಾದ ಯುವರಾಜ ಪಾಕಿಸ್ತಾನದ ತನ್ನ ಪ್ರವಾಸವನ್ನು ಮುಂದೂಡಿ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾನೆ. ಇಸ್ರೇಲಿನ ನೆತನ್ಯಾಹು ನರೇಂದ್ರಮೋದಿ ಅವರಿಗೆ ಪೂರ್ಣ ಸಹಕಾರದ ಭರವಸೆ ಇತ್ತಿದ್ದಾರೆ. ಅಲ್ಲಿಗೆ ನಾವೆಲ್ಲಾ ಯಾವುದನ್ನು ಸಜರ್ಿಕಲ್ ಸ್ಟ್ರೈಕ್ ಎಂದು ಸಂಭ್ರಮಿಸುತ್ತಿದ್ದೆವೊ ಅದಕ್ಕಿಂತಲೂ ಹತ್ತಾರು ಪಟ್ಟು ದೊಡ್ಡದಾದ ಕಾಯರ್ಾಚರಣೆಗೆ ಜಗತ್ತು ಸಿದ್ಧವಾಗಿದೆ. ಸ್ವಲ್ಪ ಕಾಯುವ ತಾಳ್ಮೆ ಬೇಕಷ್ಟೇ!

ಈ ಹೊತ್ತಿನಲ್ಲಿ ಸಂಯಮ ಕಾಪಾಡಿಕೊಳ್ಳಬೇಕಾಗಿರುವಂಥದ್ದು ನಾವು. ಈ ಇಡಿಯ ಆಕ್ರೋಶವನ್ನು ಹಿಂದೂ ಮುಸ್ಲೀಂ ಕದನವಾಗಿ ಮಾರ್ಪಡಿಸಲು ಅನೇಕ ದುಷ್ಟ ಶಕ್ತಿಗಳು ಕಾಯುತ್ತಿವೆ. ನಮಗೂ ಹಾಗಯೇ. ಮುಸಲ್ಮಾನರೆಂದರೆ ಎಲ್ಲರೂ ಒಂದೇ ಎಂದು ಭಾವಿಸಿಬಿಡುತ್ತೇವೆ. ಹಾಗೇನೂ ಇಲ್ಲ. ನಮ್ಮಲ್ಲಿ ಹೇಗೆ ಜಾತಿ ಪಂಗಡಗಳಿವೆಯೋ ಅವರಲ್ಲಿಯೂ ಹಾಗೆ ಭಿನ್ನತೆಗಳು ಸಾಕಷ್ಟಿವೆ. ಶಿಯಾ, ಸುನ್ನಿ, ಸೂಫಿಗಳು ಮೇಲ್ನೋಟಕ್ಕೆ ಕಾಣುವ ಭಿನ್ನ ವರ್ಗದವರೆನಿಸಿದರೆ, ಒಂದೊಂದರಲ್ಲೂ ಕೂಡ ಭಿನ್ನ-ಭಿನ್ನ ಚಿಂತನೆಯ, ವಿಚಾರಧಾರೆಯ ವರ್ಗಗಳಿವೆ. ಹೇಗೆ ನಮ್ಮಲ್ಲಿ ಆಚಾರ್ಯರ ವಿಚಾರಧಾರೆಗಳಿಗೆ ತಕ್ಕಂತೆ ಪಂಗಡಗಳು ನಿಮರ್ಾಣಗೊಂಡಿವೆಯೋ ಹಾಗೆ ಸುನ್ನಿಗಳಲ್ಲಿ ಹನಫಿ, ಮಾಲಿಕಿ, ಶಾಫಿ ಹನ್ಬಲೀ ಮುಂತಾದ ವಿಚಾರಧಾರೆಯ ಜನರಿದ್ದಾರೆ. ಶಿಯಾಗಳಲ್ಲೂ ಕಡಿಮೆಯಿಲ್ಲ. ಜಾಫರಿ, ಉಸೂಲಿ, ಅಖ್ಬರಿ, ಇಸ್ಮೈಲಿ, ಜಾಯ್ದಿ ಮೊದಲಾದವು ಇವೆ. ಇದಲ್ಲದೇ ವಿಂಗಡಣೆಗಳು ಎಷ್ಟರಮಟ್ಟಿಗಿವೆ ಎಂದರೆ ಕಾದಿಯಾನಿಗಳನ್ನು ಕಂಡರೆ ಉಳಿದೆಲ್ಲಾ ಮುಸಲ್ಮಾನರು ಉರಿದು ಬೀಳುತ್ತಾರಲ್ಲದೇ ಅವರನ್ನು ಕೊಂದೇ ಬಿಡುವ ಮಾತನ್ನಾಡುತ್ತಾರೆ. ನೆನಪಿಡಿ, ಒಬ್ಬ ಮುಸಲ್ಮಾನನೆದುರಿಗೆ ಹಿಂದೂ ಮತ್ತು ಕಾದಿಯಾನಿ ಸಿಕ್ಕರೆ ಆತ ಮೊದಲು ಕೊಲ್ಲಬೇಕೆಂದು ಬಯಸವುದು ಕಾದಿಯಾನಿಯನ್ನೇ. ಸೂಫಿಗಳದ್ದು ಮತ್ತೊಂದು ಪಂಥ. ಇವರೆಲ್ಲರಲ್ಲೂ ದಗರ್ಾಕ್ಕೆ ಹೋಗುವ ಮುಸಲ್ಮಾನರೂ ಇದ್ದಾರೆ. ದೇವ್ಬಂದಿ ಪಂಥದ ಪ್ರಭಾವವನ್ನು ಪಡೆದಿರುವ ಮುಸಲ್ಮಾನರು ಅಥವಾ ಸಲಫಿ, ವಹಾಬಿ ಎಂದು ಕರೆದುಕೊಳ್ಳಲ್ಪಡುವ ಮುಸಲ್ಮಾನರು ಅತ್ಯಂತ ಕಟ್ಟರ್ಗಳಾಗಿದ್ದು ಇವರು ತಾವು ಮಾಡಿದ ಕೆಲಸವನ್ನು ಇತರ ಮುಸಲ್ಮಾನರ ಮೇಲೆ ಹೊರಿಸಿ ಬಚಾವಾಗಿಬಿಡುತ್ತಾರೆ. ದೇಶದ ಜನತೆಗೆ ಈ ವಿಂಗಡಣೆಗಳು ಗೊತ್ತಾಗದಿರುವುದರಿಂದ ವಹಾಬಿಗಳ ತಪ್ಪನ್ನು ಸಾಮಾನ್ಯ ಮುಸಲ್ಮಾನರ ಮೇಲೆ ಹೊರಿಸಿ ರೊಚ್ಚಿಗೆದ್ದುಬಿಡುತ್ತಾರೆ. ಇದೇ ವಹಾಬಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವ ಮುಖ್ಯ ಅಸ್ತ್ರವಾಗಿಬಿಡತ್ತದೆ. ಕಶ್ಮೀರದ ಈ ಘಟನೆಯ ನಂತರ ಅನೇಕ ಮುಸಲ್ಮಾನರು ಬೀದಿಗೆ ಬಂದು ಭಯೋತ್ಪಾದಕರನ್ನು ಖಂಡಿಸಿದ್ದಾರೆ. ಇದು ಆಶಾದಾಯಕ ಬೆಳವಣಿಗೆ. ಇವರ ನಡುವೆ ಭಯೋತ್ಪಾದಕ ಕೃತ್ಯವನ್ನು ಸಮಥರ್ಿಸಿಕೊಂಡವರನ್ನು ಹುಡುಕಿ, ಗುರುತಿಸಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಪಾಕಿಸ್ತಾನಕ್ಕೆ ಇರುವ ಬಯಕೆ ಒಂದೇ. ಪುಲ್ವಾಮಾ ಘಟನೆಯ ನಂತರ ಭಾರತದಲ್ಲಿ ಹಿಂದೂ-ಮುಸ್ಲೀಂ ದಂಗೆಗಳಾಗಬೇಕು. ಭಾರತದ ನೂರಾರು ಕಡೆಗಳಲ್ಲಿ ರಕ್ತ ಹರಿಯಬೇಕು ಅಂತ. ನಮ್ಮಲ್ಲಿ ಕೆಲವರು ಅದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸುತ್ತಲೂ ಇದ್ದಾರೆ. ಕಾಶ್ಮೀರದ ಸಹವಾಸ ಬೇಡವೆಂದು ದೇಶದ ಇತರೆ ಭಾಗಗಳಲ್ಲಿ ಅಧ್ಯಯನಕ್ಕೆಂದು ಬಂದಿರುವ ಕಾಶ್ಮೀರದ ತರುಣರನ್ನು ಹೊಡೆಯುವ, ಬಡಿಯುವ ಆ ಮೂಲಕ ಶೌರ್ಯ ಪ್ರದಶರ್ಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೇ ವೀರತನ ಎಂದು ಭಾವಿಸುವವರು ಕಶ್ಮೀರಕ್ಕೆ ಹೋಗಿ ಈ ಕೆಲಸ ಮಾಡುವುದು ಒಳಿತು. ಆದರೆ ಭಾರತದ ಈ ಸಾಮರಸ್ಯದ ವಾತಾವರಣವನ್ನು ಕದಡಲು ಪ್ರಯತ್ನಿಸುತ್ತಿದ್ದಂತೆ ಸಿಆರ್ಪಿಎಫ್ ಹೆಲ್ಪ್ ಲೈನ್ ಘೋಷಿಸಿ ದೇಶದ ಯಾವ ಭಾಗದಲ್ಲಿರುವ ಕಶ್ಮೀರಿಗಳ ರಕ್ಷಣೆಯೂ ತನ್ನ ಹೊಣೆ ಎಂದು ಹೇಳಿ ಶಾಂತಿ ಕದಡಲು ಯತ್ನಿಸುತ್ತಿದ್ದ ಪ್ರತ್ಯೇಕತಾವಾದಿಗಳಿಗೆ ಸೂಕ್ತ ಎಚ್ಚರಿಕೆ ನೀಡಿದೆ.

5

ನಾವೀಗ ಎಚ್ಚರಿಕೆಯ ಹೆಜ್ಜೆ ಇಡಬೇಕು. ನರೇಂದ್ರಮೋದಿ ಅವರು ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸುವ ಭರವಸೆ ಕೊಟ್ಟಿದ್ದಾರಲ್ಲವೇ, ಅದಕ್ಕೆ ಸೂಕ್ತವಾಗಿ ಬೆಂಬಲ ನೀಡಬೇಕು ಮತ್ತು ಹುತಾತ್ಮ ಯೋಧರ ಕುಟುಂಬಗಳಿಗೆ ಆಸರೆಯಾಗಿ ನಿಲ್ಲಬೇಕು!!

Comments are closed.