ವಿಭಾಗಗಳು

ಸುದ್ದಿಪತ್ರ


 

ದೇಶವನ್ನು ಜರಿಯೋದು ಎಷ್ಟು ಸಲೀಸು!!

ಸ್ವತಃ ಶಶಿತರೂರ್ರಂತಹ ಪತ್ನಿಪೀಡಕನನ್ನು, ಕೊಲೆಯ ಆರೋಪವನ್ನು ಹೊತ್ತಿರುವಂಥವನನ್ನು ಜೊತೆಗಿಟ್ಟುಕೊಂಡು ಸ್ತ್ರೀಯರ ಕುರಿತಂತೆ ಅವರು ಮಾತನಾಡುವುದನ್ನು ಒಪ್ಪುವುದು ಸಾಧ್ಯವೇ? ಎಲ್ಲ ಬಿಡಿ. ಈಗ ನಡೆದಿರುವ ಈ ಪ್ರಕರಣಗಳನ್ನು ಹಿಡಿದುಕೊಂಡು ಭಾರತದ ಸುಮಾರು 65ಕೋಟಿ ಗಂಡಸರನ್ನು ಅತ್ಯಾಚಾರಿಗಳು ಎಂಬರ್ಥದ ಮಾತುಗಳನ್ನು ಆತ ಆಡಿರುವುದು ಸಮರ್ಥನೀಯವೇ?

ರಾಹುಲ್ ಭಾರತವನ್ನು ಅತ್ಯಾಚಾರದ ರಾಜಧಾನಿ ಎಂದು ಕರೆದು ಬೀಗುತ್ತಿದ್ದಾನೆ. ಇದು ಹೊಸತೇನೂ ಅಲ್ಲ. ಈ ಹಿಂದೆಯೂ ಜಾಗತಿಕ ಮಟ್ಟದಲ್ಲಿ ಭಾರತದ ಗೌರವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಕಾಂಗ್ರೆಸ್ಸು ಮಾಡಿಯೇ ಇದೆ. ಸ್ವತಃ ಕಾಂಗ್ರೆಸ್ ಆಳುವಾಗ ದೆಹಲಿಯಲ್ಲಿ ನಿರ್ಭಯಾಳ ಭೀಕರವಾದ ಅತ್ಯಾಚಾರ ನಡೆದದ್ದು ಇಂದಿಗೂ ಹಸಿಯಾಗಿದೆ. ತನ್ನ ಗೆಳೆಯನೊಂದಿಗೆ ರಾತ್ರಿ ಮನೆಗೆಂದು ಹೊರಟಿದ್ದ ನಿರ್ಭಯಾಳನ್ನು ಖಾಸಗಿ ಬಸ್ಸಿನಲ್ಲಿ ಕೂಡಿಹಾಕಿಕೊಂಡು ಅತ್ಯಾಚಾರ ಮಾಡಿದ ರೀತಿ ಭಯಾನಕವಾದ್ದು. ಆಕೆಯನ್ನು ಅಮಾನುಷವಾದ ರೀತಿಯಲ್ಲಿ ಮಾನಭಂಗಗೈದಿದ್ದಲ್ಲದೇ ರಾಕ್ಷಸರೂ ನಾಚುವಂತೆ ಆಕೆಯ ಗುಪ್ತಾಂಗದೊಳಗೆ ಕಬ್ಬಿಣದ ಸಲಾಕೆಯನ್ನು ತೂರಿಸಿ ವಿಕೃತ ಆನಂದವನ್ನು ಅನುಭವಿಸಿದ ಆ ಹೀನಕೃತ್ಯ ನಡೆದದ್ದು ಕಾಂಗ್ರೆಸ್ಸು ಅಧಿಕಾರದಲ್ಲಿರುವಾಗಲೇ! ನೆನಪಿಡಿ, ಆಗ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಕಾಂಗ್ರಸ್ಸಿನದ್ದೇ ಆಡಳಿತವಿತ್ತು. ಆಗ ಜಗತ್ತೆಲ್ಲವೂ ಭಾರತವನ್ನು ಅತ್ಯಾಚಾರದ ರಾಜಧಾನಿ ಎಂದು ಜರಿಯುವಾಗ ಕಾಂಗ್ರೆಸ್ ವಿರೋಧಿಗಳೆನಿಸಿಕೊಂಡ ಅನೇಕ ದೇಶಭಕ್ತರು ಅದನ್ನು ಪ್ರತಿಭಟಿಸಿದ್ದರು. ಈ ಕೆಲವು ಘಟನೆಗಳನ್ನು ಆಧಾರವಾಗಿರಿಸಿಕೊಂಡು ಭಾರತವನ್ನು ಅಷ್ಟು ತುಚ್ಛಮಟ್ಟದಲ್ಲಿ ಬಿಂಬಿಸುವುದನ್ನು ಯಾರೂ ಒಪ್ಪಲು ಸಿದ್ಧವಿರಲಿಲ್ಲ. ದುರದೃಷ್ಟಕರ ಸಂಗತಿ ಏನೆಂದರೆ ಅಂದು ಈ ಪ್ರಕರಣಕ್ಕೆ ಕಾರಣರಾದವರ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ನಿರಾಕರಿಸಿಬಿಟ್ಟಿತ್ತು. ನಿರ್ಭಯಾಳೊಂದಿಗೆ ರಾಕ್ಷಸೀಯ ವೃತ್ತಿ ನಡೆಸಿದವನನ್ನು 18 ದಾಟದವನೆಂಬ ಕಾರಣ ಕೊಟ್ಟು ಶಿಕ್ಷೆಯಿಂದ ದೂರವಿರಿಸಲಾಯ್ತು. ದೇಶದಾದ್ಯಂತ ಇದಕ್ಕೆ ನಡೆದ ಪ್ರತಿಭಟನೆ ಎಷ್ಟು ತೀವ್ರವಾಗಿತ್ತೆಂದರೆ ಸಕರ್ಾರ ಪತರಗುಟ್ಟಿಹೋಯ್ತು. ಅಷ್ಟಾದರೂ ನ್ಯಾಯ ನೀಡುವ ಪ್ರಕ್ರಿಯೆ ಮಾತ್ರ ಚುರುಕುಗೊಳ್ಳಲೇ ಇಲ್ಲ. ಆ ಘಟನೆ ನಡೆದು ಸಕರ್ಾರವೇ ಬದಲಾಗಿ ಹೋಗಿ ಮತ್ತೊಂದು ಚುನಾವಣೆಯೂ ನಡೆದ ನಂತರವೂ ಅಯೋಗ್ಯರಿಗೆ ಸಿಗಬೇಕಾದ ಶಿಕ್ಷೆ ಸಿಗಲೇ ಇಲ್ಲ!

2

ನ್ಯಾಯಾಂಗ ವ್ಯವಸ್ಥೆಯೇ ಭರವಸೆ ಕಳೆದುಕೊಂಡು ಕುಳಿತುಬಿಟ್ಟಿದೆ. ಪ್ರತಿಯೊಂದು ಕೇಸಿಗೂ ದಿನಗಟ್ಟಲೆ ಕೆಲವೊಮ್ಮೆ ವರ್ಷಗಟ್ಟಲೆ ವಿಚಾರಣೆ ನಡೆಸುವ ಈ ಪರಿಯೇ ಅತ್ಯಂತ ಕೆಟ್ಟದ್ದು. ಅತ್ಯಾಚಾರಕ್ಕೆ ಬೇಕಾದ ವಿಡಿಯೊ ಸಾಕ್ಷಿ ಲಭ್ಯವಿದ್ದಾಗಲೂ ಅತ್ಯಾಚಾರಿಗಳು ಬಿಡುಗಡೆಯಾಗಿ ಬರುವುದನ್ನು ಸಹಿಸುವುದು ಸಾಧ್ಯವೇ ಇಲ್ಲ. ಉನ್ನಾವ್ ಪ್ರಕರಣದ ಕಥೆಯೂ ಅಂಥದ್ದೇ. ಅತ್ಯಾಚಾರವಾಗಿದೆ ಎಂದು ಹೇಳುವ ಮಹಿಳೆ ಅತ್ಯಾಚಾರಿಗಳನ್ನು ನ್ಯಾಯಾಲಯಕ್ಕೆಳೆದ ನಂತರವೂ ಆಕೆಯನ್ನು ಜೀವಂತ ಸುಟ್ಟುಬಿಡುವಷ್ಟು ಧಾಷ್ಟ್ರ್ಯವನ್ನು ಆರೋಪಿಗಳು ತೋರುತ್ತಾರೆಂದರೆ ನ್ಯಾಯ ವ್ಯವಸ್ಥೆಯಲ್ಲಿ ಲೋಪವಿದೆ ಎಂದೇ ಅರ್ಥ. ಇಂಥವರಿಗೆ ಸೂಕ್ತ ಶಿಕ್ಷೆ ತೀವ್ರಗತಿಯಲ್ಲಿ ದೊರೆಯದೇ ಹೋದರೆ ಅತ್ಯಾಚಾರಿಗೆ ಕೊಡಬೇಕಾದ ಶಿಕ್ಷೆಯನ್ನು ಜನರೇ ನಿರ್ಣಯಿಸಬೇಕಾದ ಪರಿಸ್ಥಿತಿ ಬಂದೊದಗೀತು! ಈಗ ಹೈದರಾಬಾದ್ನಲ್ಲಿ ಆದದ್ದೂ ಅದೇ. ಮೊಹಮ್ಮದ್ ಪಾಷಾ ಸೇರಿದಂತೆ ನಾಲ್ಕೂ ಜನ ಆರೋಪಿಗಳನ್ನು ನಡುರಸ್ತೆಯಲ್ಲಿ ಹೈದರಾಬಾದಿನ ಪೊಲೀಸರು ಗುಂಡಿಟ್ಟು ಕೊಂದಿರುವುದು ಜನರಿಂದ ಮೆಚ್ಚುಗೆಯ ಸುರಿಮಳೆಯನ್ನು ಗಳಿಸಿದೆ. ಹೀಗೆ ನ್ಯಾಯವ್ಯವಸ್ಥೆಯನ್ನು ಬೈಪಾಸ್ ಮಾಡಿ ಪೊಲೀಸರೇ ಶಿಕ್ಷೆ ಕೊಡುವ ಪ್ರಕ್ರಿಯೆ ಖಂಡಿತ ಒಳ್ಳೆಯದಲ್ಲ. ಆದರೆ ಈಗ ಪೊಲೀಸರೂ ಇದನ್ನು ಮಾಡಲಿಲ್ಲವೆಂದರೆ ಬರಲಿರುವ ದಿನಗಳಲ್ಲಿ ಅವರನ್ನೂ ಬೈಪಾಸ್ ಮಾಡಿ ಜನರೇ ಈ ಕೆಲಸ ಮಾಡಿಯಾರು. ಹೀಗಾಗಿ ನ್ಯಾಯವ್ಯವಸ್ಥೆ ಚುರುಕುಗೊಳ್ಳದೇ ಹೋದರೆ ಪರಿಸ್ಥಿತಿ ಇನ್ನೂ ಭೀಕರವಾದೀತು!

3

ಹೀಗಾಗಿಯೇ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ವ್ಯವಸ್ಥೆಯನ್ನು ಚುರುಕುಗೊಳಿಸುವ ಪ್ರಯತ್ನಕ್ಕೆ ಕೊನೆಗೂ ಕೈ ಹಾಕಿದ್ದಾರೆ. ಸ್ತ್ರೀಯರ ವಿರುದ್ಧದ ಪ್ರಕರಣಗಳ ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು 1023 ಫಾಸ್ಟ್ಟ್ರಾಕ್ ಕೋಟರ್ುಗಳನ್ನು ದೇಶದಾದ್ಯಂತ ಸ್ಥಾಪಿಸಲು ನಿಶ್ಚಯಿಸಿದ್ದಾರೆ. ಇದರಲ್ಲಿ ಮಕ್ಕಳ ಮೇಲ್ನಡೆಯುವ ಲೈಂಗಿಕ ಅತ್ಯಾಚಾರ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದರ ಹೇಳಿಕೆಯೂ ಕೂಡ ಕೆಲಸ ಮಾಡಿದ್ದಿರಬಹುದು. ಒಟ್ಟಾರೆ ನ್ಯಾಯ ಪ್ರಕ್ರಿಯೆಯನ್ನು ಚುರುಕು ಮಾಡುವ ಅನಿವಾರ್ಯತೆ ಈಗ ಖಂಡಿತ ಬಂದಿದೆ. ಅದೂ ಸರಿಯೇ. ಕೆಲವು ಪ್ರಕರಣಗಳಲ್ಲಿ ಸುದೀರ್ಘವಾದ ಚಚರ್ೆ ಅಗತ್ಯ, ಆದರೆ ಯಾವುದಕ್ಕೆ ಸಾಕ್ಷಿಗಳು ಲಭ್ಯವಿದ್ದು ತಕ್ಷಣಕ್ಕೆ ನಿರ್ಣಯ ಕೊಡಬಹುದೋ ಅಂಥವುಗಳನ್ನಾದರೂ ತಡಮಾಡದೇ ನೀಡಿಬಿಡಬೇಕು. ಇತ್ತೀಚೆಗೆ ರಾಷ್ಟ್ರಪತಿಗಳು ಆತಂಕ ವ್ಯಕ್ತಪಡಿಸಿರುವ ಮತ್ತೊಂದು ಸಂಗತಿ ನ್ಯಾಯ ಪಡೆಯುವ ನಿಟ್ಟಿನಲ್ಲಿ ಏರುತ್ತಿರುವ ಖಚರ್ಿನ ಕುರಿತಂತೆ. ಪ್ರಕರಣವೊಂದು ಅನವಶ್ಯಕವಾಗಿ ಸುದೀರ್ಘವಾಗಿ ಎಳೆಯಲ್ಪಡುತ್ತಿದ್ದರೆ ಅದರ ವೆಚ್ಚವೂ ಕೂಡ ಸಾಮಾನ್ಯನಿಗೆ ಭರಿಸಲು ಸಾಧ್ಯವಾಗದಿರುವಂಥದ್ದು. ಸಣ್ಣದೊಂದು ಪ್ರಕರಣವೂ ವಕೀಲರಿಲ್ಲದೇ ಮುಗಿಯುವುದೇ ಇಲ್ಲ. ಹಾಗಿರುವಾಗ ಹಳ್ಳಿಯಿಂದ ಬಂದ ಸಾಮಾನ್ಯ ವ್ಯಕ್ತಿ ಎಲ್ಲವನ್ನೂ ಎದುರಿಸಿ ಗೆದ್ದುಕೊಳ್ಳುವುದು ಸುಲಭದ ಸಂಗತಿಯೇ ಅಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳ ಮಾತು ಚಿಂತನೆಗೆ ಯೋಗ್ಯವಾಗಿರುವಂಥದ್ದು.

4

ಈಗ ಮತ್ತೆ ವಿಷಯಕ್ಕೆ ಬರೋಣ. ರಾಹುಲ್ ಅತ್ಯಂತ ಸಲೀಸಾಗಿ ಭಾರತವನ್ನು ಅತ್ಯಾಚಾರಿಗಳ ರಾಜಧಾನಿ ಎಂದು ಸಂಬೋಧಿಸಿಬಿಟ್ಟರಲ್ಲಾ ಇದು ಸರಿಯೇ? ಸ್ವತಃ ಶಶಿತರೂರ್ರಂತಹ ಪತ್ನಿಪೀಡಕನನ್ನು, ಕೊಲೆಯ ಆರೋಪವನ್ನು ಹೊತ್ತಿರುವಂಥವನನ್ನು ಜೊತೆಗಿಟ್ಟುಕೊಂಡು ಸ್ತ್ರೀಯರ ಕುರಿತಂತೆ ಅವರು ಮಾತನಾಡುವುದನ್ನು ಒಪ್ಪುವುದು ಸಾಧ್ಯವೇ? ಎಲ್ಲ ಬಿಡಿ. ಈಗ ನಡೆದಿರುವ ಈ ಪ್ರಕರಣಗಳನ್ನು ಹಿಡಿದುಕೊಂಡು ಭಾರತದ ಸುಮಾರು 65ಕೋಟಿ ಗಂಡಸರನ್ನು ಅತ್ಯಾಚಾರಿಗಳು ಎಂಬರ್ಥದ ಮಾತುಗಳನ್ನು ಆತ ಆಡಿರುವುದು ಸಮರ್ಥನೀಯವೇ? ಈ ಗಂಡಸರೊಳಗೆ ರಾಹುಲ್ ಬರುತ್ತಾನೋ ಅಥವಾ ಅವನು ಈ ದೇಶದವನೇ ಅಲ್ಲವೆಂದು ಹೇಳಿಕೊಳ್ಳಲು ಇಚ್ಛೆಪಡುತ್ತಾನೋ? ಕಾಂಗ್ರೆಸ್ಸು ಉತ್ತರಿಸಬೇಕಿದೆ!

ದೇಶವನ್ನು ಜರಿಯುವುದು ಬಹಳ ಸುಲಭ. ಆದರೆ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುತ್ತಾ ದೇಶವನ್ನು ನಿಮರ್ಾಣ ಮಾಡುವಲ್ಲಿ ಶ್ರಮಿಸುವುದು ಸುಲಭದ ಸಂಗತಿಯಲ್ಲ. ಜೆಎನ್ಯುನಲ್ಲಿ ಭಾರತ ಚೂರಾಗಲಿ ಎಂದು ಕೂಗಿಬಿಡುವ ಅಯೋಗ್ಯರಿಗೇನು? ಅವರಿಗೆ ಅದೊಂದು ಬರಿ ಘೋಷಣೆಯಷ್ಟೇ. ಆದರೆ ನೂರಾರು ವರ್ಷಗಳಿಂದ ಭಾರತ ಏಕರಸತೆಗೆ ಪ್ರಯತ್ನಪಟ್ಟ ಅಸಂಖ್ಯ ಜನರ ಹೋರಾಟವನ್ನು ಲೆಕ್ಕ ಹಾಕುವುದು ಹೇಗೆ? ಇತ್ತೀಚಿನ ಪ್ರಕರಣಗಳು ಭಾರತದಲ್ಲಿ ಹೆಣ್ಣುಮಕ್ಕಳ ಅಸುರಕ್ಷತೆಯನ್ನು ಸಾಬೀತುಪಡಿಸಿರುವುದು ನಿಜ, ಆದರೆ ಭಾರತ ಅತ್ಯಾಚಾರಗಳ ರಾಜಧಾನಿಯಂತೂ ಅಲ್ಲವೇ ಅಲ್ಲ. ರಾಹುಲ್ ತನ್ನನ್ನು ತಾನು ಪ್ರಧಾನಮಂತ್ರಿ ಅಭ್ಯಥರ್ಿ ಎಂದು ಬಿಂಬಿಸಿಕೊಳ್ಳುವ ವ್ಯಕ್ತಿ. ಮಾತನಾಡುವ ಮುನ್ನ ಯೋಚಿಸುವುದು ಒಳಿತು!

Comments are closed.