ವಿಭಾಗಗಳು

ಸುದ್ದಿಪತ್ರ


 

ನಮ್ಮನ್ನಾಳಲು ನೀವು ಯೋಗ್ಯರಲ್ಲ!!

ಚುನಾವಣೆಗಳು ಮುಗಿದಿಲ್ಲ. ಅಸ್ಸಾಂನಲ್ಲಿ ಚುನಾವಣೆಯಿದೆ. ಒಂದೆರಡು ವರ್ಷಕ್ಕೆ ಕನರ್ಾಟಕದಲ್ಲೂ. ನೀವು ನಾವು ಕಲಿಸಿದ ಪಾಠದಿಂದ ತಿದ್ದುಕೊಂಡು ದೇಶದ ಅಭಿವೃದ್ಧಿ ಬಿಟ್ಟು ಸ್ವಂತದ ಚಿಂತನೆ ಮಾಡಲಿಲ್ಲವೆಂದರೆ ಬಲು ಕಷ್ಟವಿದೆ. ಹುಷಾರು! ಸಾಧ್ಯವಾದರೆ ವಾಧ್ರಾ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ಸು ತೆಗೆದುಕೊಳ್ಳಿ. ಸೋನಿಯಾರನ್ನು ಓಲೈಸಿ. ಅವರಿಗೆ ಇವರೆಲ್ಲರನ್ನೂ ಸಂಭಾಳಿಸೋದು ಗೊತ್ತು. ಯಾಕೆ ದಿನದ 18 ಗಂಟೆ ಕೆಲಸ ಮಾಡಿ ಆರೋಗ್ಯ ಹಾಳು ಮಾಡ್ಕೋತೀರಿ. ಮನಮೋಹನರಂತೆ ಹಾಯಾಗಿರಿ. ಈ ದೇಶದ ಕತೆ ಇಷ್ಟೇ. ನೀವು ನಿಮ್ಮ ಭವಿಷ್ಯ ನೋಡಿಕೊಳ್ಳಿ. ನಮಗೂ ಕೂತಲ್ಲೇ ಉಣ್ಣೋದಕ್ಕೆ ವ್ಯವಸ್ಥೆ ಮಾಡಿ.

narendra-modi_505_061014090904

ಪ್ರಿಯ ನರೇಂದ್ರ ಮೋದೀ ಜೀ
ಬಿಹಾರದ ಫಲಿತಾಂಶ ನೋಡಿ ನನಗಂತೂ ಹಸುವಿನ ಹಾಲು ಕುಡಿದಷ್ಟು ಸಂತೋಷವಾಯ್ತು. ಸಂಸತ್ತಿನ ಚುನಾವಣೆಯಲ್ಲಿ ನಿಮಗೆ ವೋಟು ಕೊಟ್ಟು ಬಹಳ ಕನಸು ಕಟ್ಟಿದ್ದೆ. ಒಂದನ್ನೂ ನೀವು ಈಡೇರಿಸಲಿಲ್ಲ. ನಿಮ್ಮನ್ನು ಕಟ್ಟಿಕೊಂಡು ದೇಶ ಉದ್ಧಾರವಾಗೊಲ್ಲ ಅಂತ ಗೊತ್ತಾಯ್ತು. ಅದಕ್ಕೇ ಬಿಹಾರ ನಿಮಗೆ ಕೊಡಲಿಲ್ಲ. ಒಂದೇ ಮಾತಲ್ಲಿ ಹೇಳಲಾ? ನನ್ನನ್ನೂ ಆಳಲಿಕ್ಕೆ ನೀವು ಯೋಗ್ಯರೇ ಅಲ್ಲ!
ಅಲ್ಲದೇ ಮತ್ತೇನ್ರೀ? ಒಂದೂವರೆ ವರ್ಷವಾಯ್ತು. ನಮಗೆ ಯಾವುದನ್ನಾದ್ರೂ ಫ್ರೀ ಕೊಟ್ಟಿದ್ದೀರಾ. ಕನರ್ಾಟಕದ ಮುಖ್ಯಮಂತ್ರಿಯನ್ನು ನೋಡಿ ಕಲೀರಿ. ಒಂದು ರೂಪಾಯಿಗೆ ಒಂದು ಕೇಜಿ ಅಕ್ಕಿ ಕೊಟ್ಟರು. ಪ್ರತಿವರ್ಷ ನಾಲ್ಕೂವರೆ ಸಾವಿರ ಕೋಟಿಯಷ್ಟು ಹೊರೆಯಾದರೂ ಪರವಾಗಿಲ್ಲ ಅಂತ ನಮ್ಮ ಹೊಣೆ ಹೊತ್ತ ಮಹನೀಯ ಅವರು. ನನಗೆ ಗೊತ್ತಿದೆ. ಕನರ್ಾಟಕದಲ್ಲಿ ರಸ್ತೆಗಳ ಅಭಿವೃದ್ಧಿ ನಿಂತು ಹೋಗಿದೆ, ದಿನಕ್ಕೆ ಕನಿಷ್ಠ ಆರು ಗಂಟೆ ಕರೆಂಟು ಇರೋಲ್ಲ. ಶಿಕ್ಷಣಕ್ಕೆ ಸಿಗಬಹುದಾಗಿದ್ದ ಗೌರವ ಮತ್ತು ಧನ ಎರಡೂ ಇಲ್ಲ. ಆದರೂ ಬಿಟ್ಟಿ ಅಕ್ಕಿ ಸಿಗುತ್ತಲ್ಲ ಅಷ್ಟೇ ಸಾಕು ನಮಗೆ. ನೀವು ಯಾವತ್ತಾದರೂ ಕೊಟ್ಟಿದ್ದೀರಾ? ಕೊನೇ ಪಕ್ಷ ಕೊಡುವೆ ಅಂತ ಹೇಳಿದ್ದೀರಾ. ಕನರ್ಾಟಕಕ್ಕೆ ದೇಶದ- ಜಗತ್ತಿನ ಯಾವ ಕಂಪನಿಗಳೂ ಜಪ್ಪಯ್ಯ ಅಂದರೂ ಬರುತ್ತಿಲ್ಲ. ಕಾರಣ ಕೇಳಿದರೆ ಈ ಸಕರ್ಾರದ ಭ್ರಷ್ಟಾಚಾರದ ಬಗ್ಗೆ, ನಂಬಿಕೆ ಕಳೆದುಕೊಂಡಿರುವ ಬಗ್ಗೆ ಆರೋಪ ಮಾಡುತ್ತಾರೆ. ಬರದಿದ್ರೆ ಗಂಟೀನು ಹೋಗುತ್ತೆ ಬಿಡ್ರೀ. ಹೆಚ್ಚೆಂದರೆ ನಮ್ಮ ಮಕ್ಕಳಿಗೆ ಕೆಲಸ ಸಿಗೋಲ್ಲ ತಾನೇ? ಬೇಡ ಬಿಡಿ. ನಾವು ಬದುಕಿರುವಷ್ಟು ದಿನ ಚೆನ್ನಾಗಿದ್ದರೆ ಆಯಿತು. ನಿಮಗೆ ನಿಜಕ್ಕೂ ತಲೆ ಕೆಟ್ಟಿದೆ ರೀ. ಜಗತ್ತಿನ ಮೂಲೆ ಮೂಲೆಗೆ ತಿರುಗುತ್ತ ಅಲ್ಲಿನ ಜನರನ್ನು ಬಂಡವಾಳ ಹೂಡಲು ಆಹ್ವಾನಿಸುತ್ತಿದ್ದೀರಿ. ಮುಂದಿನ ಹತ್ತಾರು ಪೀಳಿಗೆ ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿಮರ್ಿಸಬೇಕೆಂದಿದ್ದೀರಿ. ನಾಳೆಯನ್ನು ಕಂಡವರು ಯಾರಿದ್ದಾರೆ! ನಾನಂತೂ ಇವತ್ತು ಚೆನ್ನಾಗಿ ಬದುಕಿದರೆ ಸಾಕು ಅನ್ನೋನು. ನಾವೆಲ್ಲರೂ ಹಂಗೆ. ನಮ್ಮಂಥವರನ್ನು ಆಳುವ ಯೋಗ್ಯತೆ ನಿಮಗಿಲ್ಲ ಅಂತ ಹೇಳಿದ್ದು ಅದಕ್ಕೇ.
ಬಿಹಾರದ ವಿಚಾರಕ್ಕೆ ಬನ್ನಿ ನಮ್ಮ ಇತಿಹಾಸ ನಮಗೆ ಹೇಳಿ ನೀವು ತಲೆ ತಿಂದಿದ್ದು ಸಾಕು. ವೇದ ಕಾಲೀನ ಪರಂಪರೆ; ಬುದ್ಧ ಜ್ಞಾನ ಪಡೆದ ನಾಡು, ಚಂದ್ರಗುಪ್ತ ಮೌರ್ಯ ಆಳಿದ ಭೂಮಿ. ನಲಂದಾದಂತಹ ವಿಶ್ವವಿದ್ಯಾಲಯವನ್ನು ಹೊಂದಿದ್ದ ನಾಡು. ಎಷ್ಟೆಲ್ಲಾ ಹೇಳಿದ್ದೀರಿ! ನಮಗೆ ಇತಿಹಾಸವನ್ನು ಕೇಳುವ ವ್ಯವಧಾನ ಉಳಿದಿಲ್ಲ ಮೋದೀಜಿ. ಇಷ್ಟಕ್ಕೂ ಇತಿಹಾಸ ತೊಗೊಂಡು ಏನು ಮಾಡುತ್ತೀರಿ! ಲಾಲೂ ಪ್ರಸಾದರು ಗೋವಿನ ಮೇವನ್ನು ಕದ್ದು ಹಗರಣ ಮಾಡಿದವರು. ನಾನು ಚಿಕ್ಕವನಿದ್ದಾಗ ಅದನ್ನು ನೋಡಿ ಹೌಹಾರಿದ್ದೆ. 900 ಕೋಟಿ ರೂಪಾಯಿ ಹಗರಣ ಅದು. ಆದರೇನು ನಮಗೆ ಬುದ್ಧನ ಇತಿಹಾಸವೂ ಬೇಡ. ಲಾಲೂ ಇತಿಹಾಸವೂ ಬೇಡ. ನಮಗೆ ಇವತ್ತಿನ ದಿನ ದೂಡಿದರೆ ಸಾಕು. ಸರೀ ತಾನೇ? ನನಗೆ ನಿಮಗಿಂತ ಚೆನ್ನಾಗಿ ಗೊತ್ತು. ಲಾಲೂ ಯಾದವ್ರ ಪಾಟರ್ಿ ಗೆಲ್ಲಿಸೋದು ಅಂದರೆ ಗೂಂಡಾ ರಾಜ್ಯ ನಿಮರ್ಾಣಕ್ಕೆ ಬೆಂಬಲ ಕೊಡೋದು ಅಂತ. ಆದರೆ ಗೂಂಡಾ ನಮ್ಮ ಜಾತಿಯವನೇ ತಾನೇ? ನಿಮ್ಮ ಜಾತಿಯವರು ಬಂದು ನಮ್ಮನ್ನು ಪ್ರೀತಿಸೋದಕ್ಕಿಂತ ನಮ್ಮ ಜಾತಿಯವನೇ ನಮ್ಮನ್ನು ಕೊಲ್ಲೋದು ಒಳ್ಳೆಯದು ಅಂತ ಶ್ರದ್ಧೆಯಿಂದ ನಂಬಿರುವ ಜನ ನಾವು. ನೀವು ಒಂದೂವರೆ ವರ್ಷದಲ್ಲಿ ಇದನ್ನು ಬದಲಿಸುವೆನೆಂದು ಹೊರಟಿದ್ದೀರಿ. ಸರಿಯಾದ ಪಾಠ ಕಲಿಸಿದೆವು ನಿಮಗೆ. ನೆನಪಿಡಿ. ಮೋದಿ ಜಿ ನಾವು ಬೇಕಿದ್ದರೆ ದೇಶ ಬಿಟ್ಟೇವು, ಜಾತಿಯನ್ನಲ್ಲ. ನಿತೀಶ್ ಕುಮಾರ್ರಿಂದ ಸ್ವಲ್ಪ ಕಲಿಯಿರಿ. ಅವರೇ ನಮಗೆ ಸೂಕ್ತ ನಾಯಕ ಯಾಕೆಂದರೆ ಅವರೂ ನಮ್ಮಂತೆ ಸಿದ್ಧಾಂತ ಬಿಟ್ಟರು, ಕುಚರ್ಿಯನ್ನಲ್ಲ.
ಅಲ್ಲವೇ ಮತ್ತೆ! ನಿಮ್ಮನ್ನು ಸೋಲಿಸಲೆಂದೇ ಅವರು ಲಾಲೂ, ಕಾಂಗ್ರೆಸ್ಸಿನೊಂದಿಗೂ ಒಂದಾದರು. ಇದರ ವಾಸನೆ ಹಿಡಿದ ಕೇಜ್ರಿವಾಲ್ ಅದೆಷ್ಟು ಸಲೀಸಾಗಿ ಇವರೊಂದಿಗೆ ಸೇರಿಕೊಂಡರು ನೋಡಿ. ಪಾಠ ಎಲ್ಲರೂ ಕಲಿಯುತ್ತಾರೆ, ನೀವು ಬಿಟ್ಟು.
ಇಷ್ಟಕ್ಕೂ ಕಳೆದ ಒಂದು ವರ್ಷದಲ್ಲಿ ನೀವು ಮಾಡಿದ ಸಾಧನೆಯೇನು ಹೇಳಿ. ವಿದೇಶ ಪ್ರವಾಸ ಮಾಡಿದಿರಿ. ಅಮೇರಿಕಾದಿಂದ ಹಿಡಿದು ನೈಜೀರಿಯಾದವರೆಗೆ ಎಲ್ಲರೂ ಭಾರತವನ್ನು ಬಹುವಾಗಿ ಗೌರವಿಸುವಂತೆ ಮಾಡಿದಿರಿ. ಇಂದು ನಾವು ಬಿಹಾರಿಗಳು ಮುಂಬೈಗೆ ಹೋದರೆ ನಮ್ಮನ್ನು ಹೊಡೆದೋಡಿಸುತ್ತಾರೆ; ಜಗತ್ತಿನ ಅನೇಕ ರಾಷ್ಟ್ರಗಳು ಭಾರತೀಯರೆಂದು ಗೌರವಿಸುತ್ತಾರೆ. ಆದರೇನು ಹೇಳಿ. ಕರೆಂಟು ಫ್ರೀ ಕೊಟ್ಟಿಲ್ಲ; ಬಸ್ಸು, ರೈಲು ಫ್ರೀ ಓಡಾಡುವಂತಿಲ್ಲ. ಏನು ಮಾಡೋದು ಹೇಳಿ. ಎಲ್ಲವನ್ನು ಕೊಂಡುಕೊಳ್ಳುವಷ್ಟು ಆತ್ಮವಿಶ್ವಾಸ – ಶಕ್ತಿ ತುಂಬುತ್ತೇವೆ ಅಂತ ನೀವು ಬಡಾಯಿ ಕೊಚ್ಚುತ್ತೀರಿ. ನಮಗೆ 60 ವರ್ಷಗಳಿಂದ ಬಿಟ್ಟಿ ತಿಂದು, ಬೇಡಿ ತಿಂದೇ ಅಭ್ಯಾಸ. ಏಕಾಏಕಿ ಬದಲಾಯಿಸುವ ಮಾತಾಡಿದರೆ ಸಹಿಸುತ್ತೇವೇನು? ಸರಿಯಾಗಿ ಪಾಠ ಕಲಿಸಿದ್ದೇವೆ. ಲಾಲೂ ನಿತೀಶ್ರ ಜೋಡಿ ತಂದಿದ್ದೇವೆ. ಹಳೆಯ ಚಾಳಿಯನ್ನೇ ಮುಂದುವರೆಸುತ್ತೇವೆ.

trains_in_bihar
ನಮಗೆ ಅತ್ಯಂತ ಬೇಸರದ ಸಂಗತಿ ಎಂದರೆ ರೈಲ್ವೇ ಇಲಾಖೆಯನ್ನು ನಿಮ್ಮ ಮಂತ್ರಿಗಳು ಹಾಳು ಮಾಡಿರೋದು. ಮನೆಗೊಂದು, ಮಂದಿರಕ್ಕೊಂದು ಅಂತ ವಾತಾವರಣ ಇರೋಲ್ವಾ? ಹಾಗೇ ರೈಲಿಗೂ ಒಂದು ವಾತಾವರಣ ಇತ್ತು. ನಾವು ಮನಸ್ಸು ಬಂದಲ್ಲಿ ಉಗಿತಿದ್ವಿ, ಬೇಕಾದಲ್ಲಿ ಚೈನ್ ಎಳೆದು, ಇಳಿದು ಮನೆ ಸೇರಿಕೊಳ್ತಿದ್ವಿ. ಇಷ್ಟಕ್ಕೂ ಸಾಮಾನ್ಯ ಜನರ ಉಪಯೋಗಕ್ಕೆ ಬಾರದ ಬಸ್ಸು, ರೈಲು, ಸಕರ್ಾರಗಳು ಯಾಕಾದರೂ ಬೇಕು ಹೇಳಿ. ಹೊಸ ಮಂತ್ರಿಗಳು ಬಂದ ಮೇಲೆ ರೈಲಿನೊಳಗೆ ಗಲೀಜು ಮಾಡುವಂತಿಲ್ಲ. ನಿಲ್ದಾಣಗಳಲ್ಲಿ ಉಗಿಯಲು ನಮಗೇ ಮನಸ್ಸು ಬರುವುದಿಲ್ಲ. ಹೀಗೆಲ್ಲಾ ಮಾಡಿದರೆ ವಾತಾವರಣ ಹಾಳಾಗುವುದೆಂಬ ಸಾಮಾನ್ಯ ಜ್ಞಾನವೂ ನಿಮಗಿಲ್ಲದೇ ಹೋಯಿತಲ್ಲ! ನಿಮಗೆ ಬುದ್ಧಿ ಬರಲೆಂದೇ ಈ ಪರಿಯ ಫಲಿತಾಂಶ ಕೊಟ್ಟಿದ್ದು.
ಚುನಾವಣೆಗಳು ಮುಗಿದಿಲ್ಲ. ಅಸ್ಸಾಂನಲ್ಲಿ ಚುನಾವಣೆಯಿದೆ. ಒಂದೆರಡು ವರ್ಷಕ್ಕೆ ಕನರ್ಾಟಕದಲ್ಲೂ. ನೀವು ನಾವು ಕಲಿಸಿದ ಪಾಠದಿಂದ ತಿದ್ದುಕೊಂಡು ದೇಶದ ಅಭಿವೃದ್ಧಿ ಬಿಟ್ಟು ಸ್ವಂತದ ಚಿಂತನೆ ಮಾಡಲಿಲ್ಲವೆಂದರೆ ಬಲು ಕಷ್ಟವಿದೆ. ಹುಷಾರು! ಸಾಧ್ಯವಾದರೆ ವಾಧ್ರಾ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ಸು ತೆಗೆದುಕೊಳ್ಳಿ. ಸೋನಿಯಾರನ್ನು ಓಲೈಸಿ. ಅವರಿಗೆ ಇವರೆಲ್ಲರನ್ನೂ ಸಂಭಾಳಿಸೋದು ಗೊತ್ತು. ಯಾಕೆ ದಿನದ 18 ಗಂಟೆ ಕೆಲಸ ಮಾಡಿ ಆರೋಗ್ಯ ಹಾಳು ಮಾಡ್ಕೋತೀರಿ. ಮನಮೋಹನರಂತೆ ಹಾಯಾಗಿರಿ. ಈ ದೇಶದ ಕತೆ ಇಷ್ಟೇ. ನೀವು ನಿಮ್ಮ ಭವಿಷ್ಯ ನೋಡಿಕೊಳ್ಳಿ. ನಮಗೂ ಕೂತಲ್ಲೇ ಉಣ್ಣೋದಕ್ಕೆ ವ್ಯವಸ್ಥೆ ಮಾಡಿ.
ನಿಮ್ಮ ಮೇಲೆ ತುಂಬಾ ಪ್ರೀತಿ ಇರೋದರಿಂದ ಇಷ್ಟು ಹೇಳಬೇಕಾಯಿತಷ್ಟೇ. ನಮ್ಮನ್ನು ಆಳಬೇಕೆಂದರೆ ನೀವು ಬದಲಾಗಬೇಕು. ಇಲ್ಲವಾದರೆ ನಿಮಗೆ ಯೋಗ್ಯತೆಯಿಲ್ಲವೆಂದು ಮುಂದಿನ ಚುನಾವಣೆಯಲ್ಲಿ ಮತ್ತೆ ತಿರಸ್ಕರಿಸಬೇಕಾದೀತು ಎಚ್ಚರ!

ನಿಮ್ಮ ಪ್ರೀತಿಯ
ಬಿಹಾರಿ ಬಾಬು

2 Responses to ನಮ್ಮನ್ನಾಳಲು ನೀವು ಯೋಗ್ಯರಲ್ಲ!!

  1. Sampath

    ಸರಿಯಾಗಿ ಹೇಳಿದ್ದೀರಿ ಸರ್ ಖಂಡಿತ ಮೋದಿಯವರು ನಿಜಕ್ಕೂ ಯೋಗ್ಯರಲ್ಲ

    ಮಾತು ಆಡಿದರೆ ಹೋಯ್ತು
    ಮುತ್ತು ಒಡೆದರೆ ಹೋಯ್ತು
    ವೋಟು ಹಾಕಿದರೆ ಹೋಯ್ತು

  2. Sowmya

    excellent article..