ವಿಭಾಗಗಳು

ಸುದ್ದಿಪತ್ರ


 

ನಮ್ಮ ಸೈನಿಕರ ಸಾಧನೆಯ ಹಸಿ ಕಥೆಗಳು!

ಷಿಜಿನ್ಪಿಂಗ್ನ ಖ್ಯಾತಿ ದಿನೇ ದಿನೇ ಕಡಿಮೆಯಾಗುತ್ತಿರುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಇತ್ತ ಭಾರತ ಹಂತ-ಹಂತವಾಗಿ ಸೇನಾ ಜಮಾವಣೆಯನ್ನು ಹೆಚ್ಚಿಸುತ್ತಿದೆಯಲ್ಲದೇ ಯುದ್ಧಕ್ಕೆ ಸಿದ್ಧವಾಗಲು ಬೇಕಾಗಿರುವಂತಹ ಎಲ್ಲ ಪೂರ್ವತಯಾರಿಯನ್ನು ಮಾಡಿಟ್ಟುಕೊಂಡಿದೆ.

ಚೀನಾ ವಶದಲ್ಲಿದ್ದ ಹತ್ತು ಜನ ಸೈನಿಕರು ಮರಳಿ ಬಂದಿದ್ದಾರೆ. ಇದು ಹಳೆಯ ಸುದ್ದಿ. ಆದರೆ ಅವರು ಬಿಚ್ಚಿಡುತ್ತಿರುವ ಕಥೆಗಳು ಮಾತ್ರ ಅಪ್ಪಟ ಹೊಸದು. ಚೀನಾದ ಶಕ್ತಿಯನ್ನು ಮನದೊಳಗೆ ಆರಾಧಿಸುತ್ತಾ ಕುಳಿತಿದ್ದ ಎಡಪಂಥೀಯ ಕಾಂಗ್ರೆಸ್ಸಿ ಮಿತ್ರರಿಗೆಲ್ಲಾ ಅಕ್ಷರಶಃ ಬನರ್ಾಲ್ ಭಾಗ್ಯ ಕೊಡಬಲ್ಲ ಸಂಗತಿಗಳು. ವಾಸ್ತವವಾಗಿ ಪ್ಯಾಟ್ರೋಲಿಂಗ್ ಪಾಯಿಂಟ್ 14ರಿಂದ ಮಾತುಕತೆಯ ನಂತರ ಮರಳಬೇಕಿದ್ದ ಚೀನಿಯರು ಅಲ್ಲಿಯೇ ಮತ್ತಷ್ಟು ಟೆಂಟುಗಳನ್ನು ಹಾಕಿ ಠಿಕಾಣಿ ಹೂಡಿಬಿಟ್ಟಿದ್ದರು. ಅದನ್ನು ಪರಿಶೀಲಿಸಲೆಂದೇ ಹೋಗಿದ್ದು ಕರ್ನಲ್ ಬಾಬು ಅವರ ತಂಡ. ಸಹಜವಾಗಿಯೇ ವಿಚಾರಣೆಗೆಂದು ಹೋಗಿದ್ದರಿಂದ ಸಂಖ್ಯೆ ಚಿಕ್ಕದ್ದಿತ್ತು. ಆದರೆ ಈ ತಂಡಕ್ಕೆ ಅಚ್ಚರಿ ಕಾದಿತ್ತು ಏಕೆಂದರೆ ಅಲ್ಲಿ ಈಗ ಸ್ಥಾವರಗಳನ್ನು ನಿಮರ್ಿಸುತ್ತಾ ಕಾದು ಕುಳಿತಿದ್ದವರು ಈ ಹಿಂದೆ ಕಾಯುತ್ತಿದ್ದ ಚೀನಿಯರ ತಂಡವೇ ಅಲ್ಲ! ಪಿಎಲ್ಎ ಹಳಬರನ್ನೆಲ್ಲಾ ಪಕ್ಕಕ್ಕೆ ಸರಿಸಿ, ನಿದರ್ಾಕ್ಷಿಣ್ಯವಾಗಿ ಕಾದಾಡಬಲ್ಲ, ಕೊಲೆಗೈಯ್ಯಬಲ್ಲ ಪಡೆಯಂತಿತ್ತು. ಈ ಹಿಂದೆ ಅಲ್ಲಿ ಕಾವಲಿಗಿದ್ದ ತಂಡದೊಂದಿಗೆ ಭಾರತೀಯ ಸೈನಿಕರಿಗೂ ಸ್ನೇಹದ ಬಾಂಧವ್ಯ ಏರ್ಪಟ್ಟಿದ್ದರಿಂದ ಅವರನ್ನೇ ಅಪೇಕ್ಷಿಸಿಕೊಂಡು ಬಂದ ನಮ್ಮ ಸೈನಿಕರಿಗೆ ಇದು ಆಘಾತವೇ ಸರಿ. ಈ ಕುರಿತಂತೆ ಅಲ್ಲಿ ಮಾತನಾಡಬೇಕೆನ್ನುವಾಗಲೇ ಆಕ್ರಮಣಕಾರಿ ಮನೋವೃತ್ತಿಯಿಂದ ಧಾವಿಸಿದ ಚೀನೀ ಪಡೆ ಕರ್ನಲ್ರನ್ನು ತಳ್ಳಿಬಿಟ್ಟಿತು. ನೆನಪಿಡಿ. ತುಕಡಿಯೊಂದಕ್ಕೆ ಕಮ್ಯಾಂಡಿಂಗ್ ಆಫಿಸರ್ ಎಂದರೆ ಮನೆಗೆ ತಂದೆಯಿದ್ದಂತೆ. ಅವರನ್ನು ಯಾರಾದರೂ ಕೆಟ್ಟದ್ದಾಗಿ ನಡೆಸಿಕೊಂಡರೆ ಸೈನಿಕರು ಸಹಿಸುವುದೇ ಇಲ್ಲ. ಈಗ ಭಾರತದ ಚಿಕ್ಕ ಪಡೆಯೇ ತಿರುಗಿಬಿತ್ತು. ಆ ಗಲಾಟೆಯಲ್ಲಿ ಅತ್ತಲಿಂದ ಬಂದ ದೊಡ್ಡ ಕಲ್ಲೊಂದು ಕರ್ನಲ್ ಸಾಹೇಬರಿಗೆ ಬಡಿದು ಅವರ ಸ್ಥಿತಿ ಚಿಂತಾಜನಕವಾಯ್ತು! ಸ್ತಿಮಿತ ಕಳೆದುಕೊಂಡ ಭಾರತೀಯ ಸೈನಿಕರು ಕಾದಾಡುತ್ತಿರುವಾಗಲೇ ಹೆಚ್ಚಿನ ತುಕಡಿಗಾಗಿ ಕಛೇರಿಗೆ ಬೇಡಿಕೆ ಹೋಯ್ತು. ಇಲ್ಲಿ ನಡೆದಿರುವ ವಿಚಾರಗಳನ್ನೆಲ್ಲಾ ತಿಳಿದು ಘಾತಕ್ ಪ್ಲಟೂನ್ ಧಾವಿಸಿತು. ಎದುರಿಗಿರುವ ಚೀನೀ ಸೈನಿಕರ ಸಂಖ್ಯೆ ದೊಡ್ಡದ್ದಾಗಿದೆ ಎಂದು ಗೊತ್ತಿರುವಾಗಲೂ ಬಿಹಾರಿ ರೆಜಿಮೆಂಟಿನ ಮತ್ತು ಘಾತಕ್ ಪ್ಲಟೂನಿನ ತರುಣರು ಚೀನೀ ಸೈನಿಕರನ್ನು ಅಟ್ಟಾಡಿಸಿಕೊಂಡು ಬಡಿದದ್ದಲ್ಲದೇ ಗಡಿರೇಖೆಯನ್ನು ದಾಟಿ ಅತ್ತ ನುಗ್ಗಿಯೇಬಿಟ್ಟರು. ಆ ವೇಳೆಗೆ ಇತ್ತ ಮೊದಲ ತಂಡದಲ್ಲಿ ಬಂದಿದ್ದ ಬಹುತೇಕರು ಭಿನ್ನ-ಭಿನ್ನ ಸ್ವರೂಪದಲ್ಲಿ ಗಾಯಗೊಂಡು ನರಳುತ್ತಿದ್ದರು. ಕೈಯಲ್ಲಿ ಆಯುಧವಿರದಿದ್ದ ತಮ್ಮ ಸೈನಿಕರನ್ನು ಕೆಟ್ಟದ್ದಾಗಿ ಬಡಿದಿರುವ ಚೀನೀ ಸೈನಿಕರಿಗೆ ಪಾಠ ಕಲಿಸಲೇಬೇಕೆಂದು ನುಗ್ಗಿದ ಭಾರತೀಯ ಸೈನಿಕರ ಆಕ್ರೋಶ ಎಂಥದ್ದಿತ್ತೆಂದರೆ ಎದುರಿಗಿದ್ದ ಚೀನೀ ಪಡೆ ಪತರಗುಟ್ಟಿತು. ಇತ್ತೀಚೆಗೆ ಮರಳಿ ಬಂದಿರುವ ಸೈನಿಕನೊಬ್ಬ ಹೇಳಿರುವ ಸಂಗತಿಗಳನ್ನಾಧರಿಸಿ ಸಂಡೇ ಗಾಡರ್ಿಯನ್ ವಿಸ್ತೃತ ವರದಿ ಮಾಡುತ್ತಾ, ‘ಭಾರತೀಯ ಸೈನಿಕರ ಹೊಡೆತ ತಾಳಲಾಗದೇ ಚೀನೀ ಸೈನಿಕರು ಓಡಿಹೋದರು’ ಎಂದು ಬರೆದಿದೆ. ನಮ್ಮ ಸೈನಿಕರು ಕೈಗೆ ಸಿಕ್ಕ ಆಯುಧವನ್ನು ಬಳಸಿ ಅದನ್ನು ಮುಲಾಜಿಲ್ಲದೇ ಬೀಸುವುದನ್ನು ಕಂಡ ಚೀನೀ ಸೈನಿಕರ ಹೆದರಿಕೆ ಇನ್ನೂ ಕೆಲವು ದಿನ ಮಾಯವಾಗುವುದು ಕಷ್ಟ!

2
ಚೀನೀ ಸೈನಿಕರ ಕದನ ಸಾಮಥ್ರ್ಯದ ಕುರಿತಂತೆ ಈ ಹಿಂದೆಯೂ ಇದೇ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಇದುವರೆವಿಗೂ ಅವರು ಯಾವ ಯುದ್ಧದಲ್ಲೂ ಭಾಗವಹಿಸದೇ ಇರುವುದರಿಂದ ಮತ್ತು ಎಲ್ಲರಿಗಿಂತಲೂ ಶಕ್ತರೆಂಬ ಸಹಜವಾದ ಧಿಮಾಕು ಅವರನ್ನು ಆವರಿಸಿಕೊಂಡಿರುವುದರಿಂದ ಪ್ರತ್ಯಕ್ಷ ಕದನಭೂಮಿಯಲ್ಲಿ ಅವರ ಸಾಮಥ್ರ್ಯ ಬಲುಕಡಿಮೆಯೇ. ಜಗತ್ತಿನ ಮಾಧ್ಯಮಗಳನ್ನೆಲ್ಲಾ ತನಗೆ ಬೇಕಾದಂತೆ ಬಳಸಿಕೊಳ್ಳುವುದನ್ನು ಚೀನಾ ಕಲಿತಿರುವುದರಿಂದ ಅವರ ಸೇನೆಯ ಬಗ್ಗೆ ಅವ್ಯಕ್ತ ಭಯ ಸದಾ ಇರುವಂತೆ ಮಾಡಿಬಿಟ್ಟಿದೆ. 1967ರ ನಂತರ ಮೊದಲ ಬಾರಿಗೆ ಭಾರತೀಯ ಸೈನಿಕರ ಹೊಡೆತದ ರುಚಿಯನ್ನು ಕಂಡ ಚೀನೀ ಸೈನಿಕರು ಎದ್ದೇವೋ ಬಿದ್ದೇವೋ ಎಂದು ಓಡಿಹೋಗಿರುವುದನ್ನು ಕಂಡಾಗ ಭಾರತದಲ್ಲಿನ ಚೀನಾ ಸಮರ್ಥಕರು ಒಳಗೊಳಗೇ ಅದೆಷ್ಟು ನೊಂದಿರಬಹುದೆಂದು ಅರಿವಾಗುತ್ತದೆ.

3
ಚೀನಾದ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ತಾನು ಕಳಕೊಂಡ ಸೈನಿಕರ ಸಂಖ್ಯೆಯನ್ನು ಭಾರತ ತಕ್ಷಣವೇ ಹೇಳಿದ್ದಲ್ಲದೇ ರಾಜಮಯರ್ಾದೆಯಿಂದ ಆ ಶವಗಳನ್ನು ಮನೆಗೆ ಕಳಿಸಿಕೊಟ್ಟು ಇಡೀ ದೇಶವೇ ಅವರ ಕುರಿತು ಹೆಮ್ಮೆ ಪಡುವಂತೆ ಮಾಡಿಬಿಟ್ಟಿತು. ಆದರೆ ಚೀನಾ ತನ್ನ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲೆಂದೇ ಸತ್ತವರ ಹೆಸರು ಹೇಳುವುದಿರಲಿ, ಸಂಖ್ಯೆಯನ್ನೂ ಮರೆಮಾಚಿತು. ನಿಜವಾದ ಸಂಖ್ಯೆ ಹೊರಬಂದರೆ ಅದು ಏಷ್ಯಾದಲ್ಲಷ್ಟೇ ಅಲ್ಲ, ಜಾಗತಿಕವಾಗಿಯೂ ಅವಮಾನ ಎಂಬುದು ಚೀನಾಕ್ಕೆ ಗೊತ್ತಿಲ್ಲದ ಸಂಗತಿಯಲ್ಲ. ಇದನ್ನು ಚೀನಿಯರು ಹಿತವಾಗಿ ಸ್ವೀಕರಿಸಿಲ್ಲ. ಅಲ್ಲಿನ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತಂತೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ ಸೈನಿಕರನ್ನು ಗೌರವಿಸುವ ಪರಿಯನ್ನು ಭಾರತದಿಂದ ಕಲಿತುಕೊಳ್ಳಬೇಕೆಂದು ಚೀನಾಕ್ಕೆ ಬಲವಾಗಿಯೇ ಬಾರಿಸಿದ್ದಾರೆ! ಷಿಜಿನ್ಪಿಂಗ್ನ ಖ್ಯಾತಿ ದಿನೇ ದಿನೇ ಕಡಿಮೆಯಾಗುತ್ತಿರುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಇತ್ತ ಭಾರತ ಹಂತ-ಹಂತವಾಗಿ ಸೇನಾ ಜಮಾವಣೆಯನ್ನು ಹೆಚ್ಚಿಸುತ್ತಿದೆಯಲ್ಲದೇ ಯುದ್ಧಕ್ಕೆ ಸಿದ್ಧವಾಗಲು ಬೇಕಾಗಿರುವಂತಹ ಎಲ್ಲ ಪೂರ್ವತಯಾರಿಯನ್ನು ಮಾಡಿಟ್ಟುಕೊಂಡಿದೆ. ಅಷ್ಟೇ ಅಲ್ಲದೇ, ಯಾವ ಪ್ರಾಪಗ್ಯಾಂಡದ ಮೂಲಕ ಭಾರತದ ಒಳಗೆ ಚೀನಾ ಪರವಾದ ದನಿ ಹೊರಡಿಸಬೇಕೆಂದು ಚೀನಾ ಪ್ರಯತ್ನಿಸುತ್ತಿತ್ತೋ ಭಾರತ ಅದೇ ಕೆಲಸವನ್ನೀಗ ಚೀನಾದಲ್ಲೂ ನೇಪಾಳದಲ್ಲೂ ಮಾಡುತ್ತಿದೆ. ಅದಾಗಲೇ ನೇಪಾಳದ ಪತ್ರಿಕೆಯೊಂದು ಪ್ರಧಾನಿ ಕೆ.ಪಿ ಓಲಿ ತಲೆ ಎತ್ತಲಾಗದಂತಹ ವರದಿಯೊಂದನ್ನು ಪ್ರಕಟಿಸಿದೆ. ಯಾವ ಚೀನಾದ ಪರವಾಗಿ ನಿಂತು ಓಲಿ ಭಾರತದ ವಿರುದ್ಧ ಅನವಶ್ಯಕ ಆರೋಪಗಳನ್ನು ಮಾಡುತ್ತಿದ್ದಾರೋ ಅದೇ ಚೀನಾ ನೇಪಾಳದ ರೂಯಿ ಗ್ರಾಮವನ್ನು ಸದ್ದಿಲ್ಲದೇ ತನ್ನ ತೆಕ್ಕೆಗೆ ಹಾಕಿಕೊಂಡು ಟಿಬೆಟ್ನ ಭಾಗವೆಂದು ಗುರುತಿಸಿಬಿಟ್ಟಿದೆ ಎಂಬ ಸ್ಫೋಟಕ ಸುದ್ದಿಯನ್ನು ಬರೆದಿದೆ. ಭೂಪಟದಲ್ಲಿ ಈ ಗ್ರಾಮವನ್ನು ತಮ್ಮದೆಂದೇ ನೇಪಾಳ ತೋರುತ್ತಿದ್ದರೂ ಅದಾಗಲೇ ಅದು ಚೀನಾದ ವಶದಲ್ಲಿದೆ ಎಂಬುದು ಜಗತ್ತಿಗೂ ಅಚ್ಚರಿಯಾಗುವ ಸಂಗತಿಯೇ!

4
ಸದ್ದಿಲ್ಲದೇ ಗಡಿಭಾಗದ ಗ್ರಾಮ-ಗ್ರಾಮಗಳನ್ನೇ ನುಂಗುತ್ತಿರುವ ಚೀನಾ ವುಹಾನ್ ವೈರಸ್ನ ಹೊತ್ತಿನಲ್ಲಿ ತಾಳ್ಮೆಯನ್ನಿಟ್ಟುಕೊಳ್ಳಬೇಕಾದ್ದು ಅಗತ್ಯವಿತ್ತು. ಜಗತ್ತು ನೊಂದಿರುವಾಗಲೇ ತನ್ನ ಕನಸನ್ನು ಈಡೇರಿಸಿಕೊಳ್ಳುವ ಧಾವಂತಕ್ಕೆ ಬಿದ್ದು ಭಯಾನಕವಾದ ಹೊಡೆತ ತಿನ್ನಲು ಸಜ್ಜಾಗಿದೆ. ಭಾರತಕ್ಕೂ ಇಂತಹ ಮತ್ತೊಂದು ಅವಕಾಶ ದಕ್ಕಲಾರದು. ಆಥರ್ಿಕವಾಗಿ ಮತ್ತು ಮಿಲಿಟರಿಯ ದೃಷ್ಟಿಯಿಂದ ಚೀನಾದ ಯೋಗ್ಯತೆಯನ್ನು ಜಗತ್ತಿಗೆ ತೋರಲು ಇದು ಸಕಾಲ. ಅದಕ್ಕೆಂದೇ ಮೋದಿ ಸಜ್ಜಾಗಿದ್ದಾರೆ. ನಮಗೂ ನಿಮಗೂ ಚೀನಾ ವಸ್ತುಗಳನ್ನು ಕೊಳ್ಳದಿರುವುದೊಂದೇ ಮುಖ್ಯ ಕೆಲಸ. ನಾವು ಕೈಜೋಡಿಸೋಣ..

Comments are closed.