ವಿಭಾಗಗಳು

ಸುದ್ದಿಪತ್ರ


 

ನಾಡಿಗಾಗಿ ಬದುಕುವ ಪ್ರೇರಣೆ ನೀಡುವ ಸಾಹಿತ್ಯ ಹಬ್ಬ!

ಬೆಳಗಾವಿಯಲ್ಲಿ ಸಮಾರೋಪ ನಡೆಸುವುದಕ್ಕೊಂದು ಮುಖ್ಯ ಕಾರಣವಿದೆ. ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದೇಶ ಸುತ್ತಾಡುತ್ತಿರುವಾಗ ಅವರು ಬೆಳಗಾವಿಗೆ ಬಂದು ಹನ್ನೆರಡು ದಿನ ಇದ್ದರು. ಇಲ್ಲಿರುವಾಗಲೇ ಅವರು ಅಷ್ಟಾಧ್ಯಾಯಿಯ ಮೇಲೆ ತಮ್ಮ ಪಾಂಡಿತ್ಯವನ್ನು ಸಾಬೀತುಪಡಿಸಿದ್ದು. ಇದೇ ಬೆಳಗಾವಿಯಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಸರಸ್ವತಿ ವಾಚನಾಲಯವಿದೆ. ಸಾವರ್ಕರರೂ ಭೇಟಿ ಕೊಟ್ಟಂತಹ ವಾಚನಾಲಯವಿದು. ಇವೆಲ್ಲ ಕನ್ನಡ ನಾಡಿನ ಆಸ್ತಿಗಳು. ಇವೆಲ್ಲವನ್ನೂ ನಾಡಿಗೆ ಪ್ರಚುರ ಪಡಿಸಬೇಕಾದ ಕರ್ತವ್ಯವೂ ನಮ್ಮ ಹೆಗಲಮೇಲಿತ್ತು. ಹಾಗೆಂದೇ ಈ ಸ್ಥಳವನ್ನು ಆಯ್ದುಕೊಂಡು ಸಾಹಿತ್ಯ ಸಮ್ಮೇಳನದ ಸಮಾರೋಪದ ಕಾರ್ಯಕ್ರಮಕ್ಕೆ ಯೋಜನೆ ಮಾಡಲಾಯ್ತು.

ಈ ವರ್ಷ ನಿವೇದಿತಾಳದ್ದು ನೂರೈವತ್ತನೇ ಜಯಂತಿ. ಹಾಗೆ ನೋಡಿದರೆ ಇಡಿಯ ದೇಶ ಈ ಸಂಭ್ರಮವನ್ನು ಆಚರಿಸಬೇಕಿತ್ತು. ಯಾಕೋ ತಮ್ಮದಲ್ಲವೆಂಬಂತೆ ಮುಗುಮ್ಮಾಗಿ ಕುಳಿತುಬಿಟ್ಟಿದ್ದಾರೆ ಎಲ್ಲರೂ. ಹುತಾತ್ಮರನ್ನು ನೆನೆಯದ ದೇಶಕ್ಕೆ ಭವಿಷ್ಯವಿಲ್ಲ ಎಂಬೊಂದು ಮಾತಿದೆ. ಅಪ್ಪಿತಪ್ಪಿಯೂ ನಿವೇದಿತಾ ಹುತಾತ್ಮಳು ಹೌದೋ ಅಲ್ಲವೋ ಎಂಬ ಅನುಮಾನ ವ್ಯಕ್ತಪಡಿಸಬೇಡಿ. ವಿವೇಕಾನಂದರು ಕೊಟ್ಟ ಕಾಳಿಯ ಕಲ್ಪನೆಯನ್ನು ಮೈಗೂಡಿಸಿಕೊಂಡು, ಅದನ್ನೇ ಧ್ಯಾನಿಸುತ್ತ ಕ್ರಮೇಣ ಕಾಳಿಯನ್ನೇ ಭಾರತಮಾತೆಯಲ್ಲಿ ಕಂಡ ಮಹಾ ಮಹಿಮಳು ಆಕೆ. ‘ದೇಶಭಕ್ತಿ ಎನ್ನೋದು ಪುಸ್ತಕವನ್ನು ಓದುವುದರಿಂದ ಬರಲಾರದು. ಅದು ನಮ್ಮ ಇರುವನ್ನೂ ಮರೆಸಿಬಿಡುವ ಭಾವನೆ. ಅದೇ ರಕ್ತ ಮತ್ತು ಅಸ್ತಿಮಜ್ಜೆ. ನಾವು ಉಸಿರಾಡುವ ಗಾಳಿಯಲ್ಲಿ, ಕೇಳುವ ದನಿಯಲ್ಲಿ ಅದು ಇದೆ’ ಎಂದು ಎದೆಯುಬ್ಬಿಸಿ ಹೇಳುತ್ತಿದ್ದಳು ಅಕ್ಕ.

sisternivedita-650_102814035616

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಲೇಜಿನ ವಿದ್ಯಾಥರ್ಿಯೊಬ್ಬರು ನನ್ನನ್ನು ಕೇಳಿದ್ದರು, ‘ಅಕ್ಕ ಭಾರತವನ್ನು ಭಕ್ತಿಯಿಂದ ಪೂಜಿಸಿದಳು ಸರಿ, ಆಕೆಯ ದೇಶದ ದೃಷ್ಟಿಯಿಂದ ನೋಡಿದರೆ ದ್ರೋಹಿಯಲ್ಲವೇನು ಅಂತ?’ ಅದಕ್ಕೆ ನಾವ್ಯಾರೂ ಉತ್ತರಿಸಬೇಕಿಲ್ಲ, ಬಂಗಾಳದ ವಿಭಜನೆಯ ನಂತರ ಸ್ವತಃ ಅಕ್ಕ ಹೇಳುತ್ತಾಳೆ ‘ನನ್ನ ಹುಟ್ಟು ರಾಷ್ಟ್ರದ ಕುರಿತಂತೆ ನನಗೆ ನಾಚಿಕೆಯಾಗುತ್ತದೆ! ಆದರೆ ಭಾರತ ಮಾತೆಯ ಕಂದಮ್ಮಗಳ ತ್ಯಾಗ ಮತ್ತು ಬಲಿದಾನ ಇಂಗ್ಲೀಷರನ್ನು ದೇಶ ಬಿಟ್ಟು ಹೋಗುವುದಕ್ಕೆ ಉದ್ದೀಪಿಸುವವರೆಗೂ ನಾವು ಹೋರಾಟ ಮಾಡುತ್ತೇವೆ’ ಅಂತ. ಆಕೆಯ ವಿರುದ್ಧ ಬ್ರಿಟೀಷರು ಹೈ ಅಲರ್ಟ್ ನೋಟೀಸ್ ಹೊರಡಿಸಿದ್ದರೆಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಆಕೆ ಒಂದು ತಪ್ಪು ಮಾತಾಡಿದರೂ ಹಿಡಿದು ಒಳದಬ್ಬಬೇಕೆಂದು ಬ್ರಿಟೀಷ್ ಪಡೆ ಕಾಯುತ್ತಲಿತ್ತು. ಅನೇಕ ಮಿತ್ರರು ಆಕೆಯನ್ನು ಆ ಹೊತ್ತಲ್ಲಿ ದೇಶ ಬಿಟ್ಟು ಹೋಗಬೇಕೆಂದು ವಿನಂತಿಸಿಕೊಂಡಿದ್ದರೆಂಬುದು ಬಲು ಅಪರೂಪದ ಸಂಗತಿಯೇ. ಅವರೆಲ್ಲರ ಮಾತಿಗೆ ಕಟ್ಟುಬಿದ್ದೇ ಆಕೆ ಇಂಗ್ಲೆಂಡಿಗೆ ಹೋಗಿ ಪತ್ರಕತರ್ೆಯಾಗಿ ಅಲ್ಲಿ ಭಾರತದ ಹೋರಾಟಕ್ಕೆ ಬಲ ತುಂಬಿದ್ದು. ಆಕೆ ಮರಳಿ ಬರುವ ವೇಳೆಗೆ ಇಲ್ಲಿ ಅಲೀಪುರ ಮೊಕದ್ದಮೆಯಲ್ಲಿ ಅರವಿಂದ ಘೋಷರಾದಿಯಾಗಿ ಎಲ್ಲ ಮಿತ್ರರೂ ಜೈಲು ಸೇರಿದ್ದರು. ಆಕೆ ವಿದೇಶಕ್ಕೆ ಹೋಗಿರದಿದ್ದಲ್ಲಿ ಈ ಮೊಕದ್ದಮೆಯಲ್ಲಿ ಜೈಲು ಪಾಲಾದವರ ಪಟ್ಟಿಯಲ್ಲಿ ಆಕೆಯ ಹೆಸರೂ ಇರುತ್ತಿತ್ತು. ಹಿಂದೂ ಧರ್ಮಕ್ಕೆ, ಈ ರಾಷ್ಟ್ರಕ್ಕೆ ಆಕೆ ಕೊಟ್ಟ ಕೊಡುಗೆ ಅಪಾರ. ನೂರೈವತ್ತನೇ ಜಯಂತಿಯ ನೆಪದಲ್ಲಾದರೂ ಆಕೆಯನ್ನು ಸ್ಮರಿಸಿಕೊಳ್ಳದಿದ್ದರೆ ಹೇಗೆ?

ಹಾಗೆಂದೇ ತರುಣರ ಗುಂಪೊಂದು ಆರು ತಿಂಗಳ ಹಿಂದೆ ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತೆಯರ ಹೆಸರಲ್ಲಿ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಕಲ್ಪನೆ ಕಟ್ಟಿಕೊಂಡಿತು. ಆ ವೇಳೆಗಾಗಲೇ ಸಕರ್ಾರಿ ಸಾಹಿತ್ಯ ಸಮ್ಮೇಳನದಲ್ಲಿ ಚಪ್ಪಲಿಗಳ ಪ್ರದರ್ಶನ ಆಗಿತ್ತು, ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಎಸ್. ಎಲ್. ಭೈರಪ್ಪನವರು ವಹಿಸುವುದಾದರೆ ನಾವು ಬರುವುದಿಲ್ಲವೆಂದು ಒಂದಷ್ಟು ತಥಾಕಥಿತ ಸಾಹಿತಿಗಳು ಧಮಕಿ ಹಾಕಿದ್ದೂ ಆ ಹೊತ್ತಲ್ಲಿಯೇ. ಸಾಹಿತ್ಯವೆನ್ನುವುದು ಹಿತವನ್ನು ತರಬೇಕು, ಬೆಸೆಯಬೇಕು; ಹೊಸ ಕಲ್ಪನೆಗಳನ್ನು ಹುಟ್ಟುಹಾಕಬೇಕು, ಹಳೆಯದನ್ನು ಉಳಿಸಬೇಕು. ಆದರೆ ಈಗ ಹಾಗಲ್ಲ. ಹಳೆಯದನ್ನೆಲ್ಲ ಧಿಕ್ಕರಿಸುವವ ಮಾತ್ರ ಸಾಹಿತಿ. ನಾಲ್ಕು ಸಾಲಿನ ಕವನ ಅದಕ್ಕೆ ನಲವತ್ತು ಲೈಕು ಬಂದರೆ ಸಾಕು ಆತ ಸಕರ್ಾರೀ ಪ್ರಾಯೋಜಿತ ಸಮ್ಮೇಳನದಲ್ಲಿ ಕವನ ವಾಚನಕ್ಕಾದರೂ ಬಂದು ಹೋಗುತ್ತಾನೆ. ಒಂದೇ ಒಂದು ನಿಯಮ ಅಷ್ಟೇ. ಆತ ಒಂದು ವಿಚಾರಧಾರೆಯನ್ನು ಬೆಂಬಲಿಸಿ ಹಿಂದೂ ದ್ವೇಷವನ್ನು ಸಮಾಜದಲ್ಲಿ ಹುಟ್ಟು ಹಾಕುತ್ತಿದ್ದರಾಯ್ತು!

lit fest

ಬೆಂಗಳೂರಿನಲ್ಲಿ ನಡೆದ ಲಿಟರೇಚರ್ ಫೆಸ್ಟ್ಗೆ ಕನ್ಹಯ್ಯಾ ಕುಮಾರನೇ ಸ್ಟಾರ್ ಅತಿಥಿ ಎಂದರೆ ಅದರ ಕಿಮ್ಮತ್ತು ಅದೆಷ್ಟಿರಬಹುದೆಂದು ಲೆಕ್ಕಹಾಕಿ. ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸುವ, ಧಿಕ್ಕರಿಸುವವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದಾಗಲೂ ಅವರಿಗೆ ಭರ್ಜರಿ ಮೆರವಣಿಗೆ ಬೇಕು, ಡೋಲು-ನಗಾರಿಗಳು, ಛತ್ರ-ಚಾಮರಗಳು ಬೇಕು. ಬಿಟ್ಟರೆ ಅಡ್ಡ ಪಲ್ಲಕ್ಕಿ ಉತ್ಸವ, ಪಾದಪೂಜೆಗಳಿಗೂ ತಯಾರು ಇವರು. ಇವರುಗಳೆಲ್ಲ ಹಾಗೆಯೇ. ಅಧಿಕಾರ ಗಿಟ್ಟಿಸಲು ಯಾವ ಹಂತಕ್ಕೆ ಬೇಕಿದ್ದರೂ ಇಳಿಯುತ್ತಾರೆ ಅದು ಸಿಕ್ಕ ಮೇಲೆ ಇವರು ಆಡಿದ್ದೇ ಆಟ. ತುಪ್ಪದ ಖ್ಯಾತಿಯ ಸ್ವಾಮೀಜಿಯೊಬ್ಬರು ಜಮಖಂಡಿಯ ಹತ್ತಿರ ನನಗೆ ಸಿಕ್ಕು ಹಿಂದೂ ಧರ್ಮದಲ್ಲಿ ಬಹಳ ಶೋಷಣೆ ಇದೆ, ಇದು ಶೋಷಕ ಧರ್ಮ ಎಂದು ರಂಗುರಂಗಿನ ವಾದ ಮಂಡಿಸುತ್ತಿದ್ದರು. ಅಷ್ಟರಲ್ಲಿಯೇ ಕಾವಿಯನ್ನು ಗೌರವಿಸುವ ಹಿಂದೂ ಧಮರ್ೀಯನೊಬ್ಬ ಅವರ ಕಾಲ ಹೆಬ್ಬೆರಳನ್ನು ಹಿಡಿದು ಅದಕ್ಕೆ ಹಣೆ ತಾಕಿಸಿದ. ಈ ವ್ಯಕ್ತಿ ಮರುಮಾತಿಲ್ಲದೇ ಅದನ್ನು ಸ್ವೀಕಾರ ಮಾಡಿದರು. ತಕ್ಷಣ ‘ಭಕ್ತರಿಗಿಂತ ನಾನು ದೊಡ್ಡವನೆಂಬ ನಿಮ್ಮ ಆಲೋಚನೆಯೇ ದೊಡ್ಡ ಶೋಷಣೆಯಲ್ಲವೇ? ನೀವೇಕೆ ಇವರುಗಳ ಪಾದಕ್ಕೆ ನಮಸ್ಕರಿಸುವ ಹೊಸ ಸಂಪ್ರದಾಯ ಹುಟ್ಟು ಹಾಕಬಾರದು’ ಎಂದೆ. ಮುಖ ಹುಳ್ಳಗಾಯ್ತು. ಮತ್ತೆ ತುಪ್ಪ, ಮಾಂಸ ಈ ಪ್ರಶ್ನೆಗಳು ಚಚರ್ೆಗೆ ಬರಲೇ ಇಲ್ಲ.

ಇಂಥ ವಿಚಾರಧಾರೆಗಳನ್ನು ಬೆಂಬಲಿಸುವವರೇ ಸಾಹಿತಿಗಳು ಎಂಬುದು ನಿಶ್ಚಯವಾಗಿಬಿಟ್ಟಿದೆ. ಇವರೆಲ್ಲರೂ ಸಾಧಾರಣವಾಗಿ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿರುತ್ತಾರೆ. ಇವರೇ ಸಕರ್ಾರದಿಂದ ಕೊಡಮಾಡುವ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವ ನಿಣರ್ಾಯಕರೂ ಆಗಿರುತ್ತಾರೆ. ಕಾರ್ಯಕ್ರಮಕ್ಕೆ ಕರೆಸಿ ಕೈತುಂಬಾ ಹಣಕೊಟ್ಟು ಕಳಿಸುವವರಿಗೆ ಪ್ರಶಸ್ತಿಗಳೂ ಕಟ್ಟಿಟ್ಟ ಬುತ್ತಿ. ಹೀಗೆ ಪ್ರಶಸ್ತಿ ಪಡೆದ ಮೇಲೆ ಅವರು ಸಮ್ಮೇಳನಗಳಲ್ಲಿ ಭಾಗವಹಿಸುವ ಯೋಗ್ಯತೆಯನ್ನೂ ಪಡೆದುಬಿಡುತ್ತಾರೆ. ಇದೊಂದು ವಿಷಚಕ್ರ. ಸಾಹಿತ್ಯದ ಹೆಸರಲ್ಲಿ ಅಧ್ಯಕ್ಷರಾದವರ ಭಾಷಣಗಳನ್ನು ತೆಗೆದು ನೋಡಿದರೆ ಈ ಮಾತು ಸುಲಭವಾಗಿ ಅರಿವಾದೀತು. ಈ ವಿಷಚಕ್ರದಿಂದ ಹೊರಬರುವುದಕ್ಕೆಂದೇ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತೆಯರ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದು. ಅಧ್ಯಕ್ಷತೆ ವಹಿಸಿದ್ದ ಮಾತಾ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ ನಿವೇದಿತೆಯ ಮೇಲೆ ಡಾಕ್ಟರೇಟ್ ಪದವಿ ಪಡೆದವರು. ಅದಕ್ಕಿಂತಲೂ ಮಿಗಿಲಾಗಿ ಆಕೆಯ ಸಂದೇಶಗಳನ್ನು ಬದುಕುತ್ತಿರುವವರು. ಇಷ್ಟಾದರೂ ಸಮ್ಮೇಳನದ ಉದ್ಘಾಟನೆಯ ಮೆರವಣಿಗೆ ಆಗುವಾಗ ಆಕೆಯನ್ನು ಪಲ್ಲಕ್ಕಿಯಲ್ಲೋ, ಅಂಬಾರಿಯಲ್ಲೋ ಕೂರಿಸಲಿಲ್ಲ ಬದಲಿಗೆ ಯಾವ ಸಾಹಿತ್ಯದ ಅಧ್ಯಯನದಿಂದ ಆಕೆ ಇಂದು ಸಮ್ಮೇಳನದ ಅಧ್ಯಕ್ಷತೆಗೇರುವ ಗೌರವ ಪಡೆದಿದ್ದಾರೋ ಆ ಸಾಹಿತ್ಯವನ್ನೇ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯ್ತು. ಪಲ್ಲಕ್ಕಿಯನ್ನು ಹೊರುವ ಮೂಲಕ ಭಾವನಾತ್ಮಕವಾಗಿ ಈ ಸಾಹಿತ್ಯದೊಂದಿಗೆ ಜೋಡಿಸಿಕೊಂಡ ತರುಣರ ಮುಖದಲ್ಲಿ ಧನ್ಯತಾಭಾವ. ಉದ್ಘಾಟನೆ, ಗೋಷ್ಠಿಗಳು ಯಾವುದೂ ಸಮಯ ಮೀರಿ ನಡೆಯಲಿಲ್ಲ. ಮಧ್ಯಾನ್ಹದ ಹೊತ್ತಲ್ಲಿ ಸಾಹಸದ ಪ್ರದರ್ಶನಗಳು ವಿವೇಕಾನಂದರ ಆಶಯವನ್ನು ಪ್ರತಿಬಿಂಬಿಸುವಂತಿದ್ದವು. ಸಾವಿರಾರು ಜನ ಕಾರ್ಯಕ್ರಮಕ್ಕೆ ಬಂದು ಆನಂದಿಸಿಹೋದರು. ಮಾರಾಟವಾದ ಸಾಹಿತ್ಯವೂ ಘನವಾದುದೇ. ಆನಂತರ ರಾಜ್ಯಾದ್ಯಂತ ವಿಸ್ತರಿಸಿದ ಸಾಹಿತ್ಯ ಸಮ್ಮೇಳನಗಳು ಈಗ ಸಮಾರೋಪಕ್ಕೆ ಬೆಳಗಾವಿಗೆ ಬಂದು ನಿಂತಿದೆ.

received_2057002154325665

ಅತಿ ಕಡಿಮೆ ಖಚರ್ಿನಲ್ಲಿ ಮಹತ್ವದ ಉದ್ದೇಶವನ್ನಿಟ್ಟುಕೊಂಡ ಕಾರ್ಯಕ್ರಮದ ಕಲ್ಪನೆ ಇದರದ್ದು. ಮಂಗಳೂರಿನಲ್ಲಿ ವಿವೇಕಾನಂದರು ಪಶ್ಚಿಮದಲ್ಲಿ ಮಾಡಿದ ಕೆಲಸವನ್ನೂ ನಿವೇದಿತಾ ಪೂರ್ವದಲ್ಲಿ ಮಾಡಿದ ಕೆಲಸವನ್ನು ಪ್ರತಿಬಿಂಬಿಸುವ ವಸ್ತು ಪ್ರದಶರ್ಿನಿ ನಿಮರ್ಾಣಗೊಂಡಿದ್ದರೆ ಬೆಳಗಾವಿಯಲ್ಲಿ ಬೇರೆಯದ್ದೇ ಕಲ್ಪನೆ. ಇಲ್ಲಿ ಉಪನಿಷತ್ತಿನ ಕಾಲದಲ್ಲಿ ಉತ್ತುಂಗದಲ್ಲಿದ್ದ ಆಂತರಂಗಿಕ ಪಯಣದ ಕಲ್ಪನೆಯಿಂದ ಶುರು ಮಾಡಿ ನಿವೇದಿತಾ ಭಾರತ ಮಾತೆಯಲ್ಲಿಯೇ ಸರ್ವಸ್ವವನ್ನೂ ಕಂಡ ಮಹಾಯಾತ್ರೆಯನ್ನು ಪ್ರಸ್ತುತಪಡಿಸುವ ಪ್ರಯತ್ನ. ವೇದಿಕೆಗಳಿಗೆ ಹೆಸರನ್ನಿಡುವಾಗಲೂ ಈರ್ವರ ಸಾಹಿತ್ಯವನ್ನು ಸಮಾಜಕ್ಕೆ ಮುಟ್ಟಿಸಿದ ಮಹಾತ್ಮರ ಹೆಸರನ್ನೇ ಆಲೋಚಿಸಿದ್ದು ಎಲ್ಲರ ಗಮನ ಸೆಳೆದಿತ್ತು.

ಬೆಳಗಾವಿಯಲ್ಲಿ ಸಮಾರೋಪ ನಡೆಸುವುದಕ್ಕೊಂದು ಮುಖ್ಯ ಕಾರಣವಿದೆ. ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದೇಶ ಸುತ್ತಾಡುತ್ತಿರುವಾಗ ಅವರು ಬೆಳಗಾವಿಗೆ ಬಂದು ಹನ್ನೆರಡು ದಿನ ಇದ್ದರು. ಇಲ್ಲಿರುವಾಗಲೇ ಅವರು ಅಷ್ಟಾಧ್ಯಾಯಿಯ ಮೇಲೆ ತಮ್ಮ ಪಾಂಡಿತ್ಯವನ್ನು ಸಾಬೀತುಪಡಿಸಿದ್ದು. ಇದೇ ಬೆಳಗಾವಿಯಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಸರಸ್ವತಿ ವಾಚನಾಲಯವಿದೆ. ಸಾವರ್ಕರರೂ ಭೇಟಿ ಕೊಟ್ಟಂತಹ ವಾಚನಾಲಯವಿದು. ಇವೆಲ್ಲ ಕನ್ನಡ ನಾಡಿನ ಆಸ್ತಿಗಳು. ಇವೆಲ್ಲವನ್ನೂ ನಾಡಿಗೆ ಪ್ರಚುರ ಪಡಿಸಬೇಕಾದ ಕರ್ತವ್ಯವೂ ನಮ್ಮ ಹೆಗಲಮೇಲಿತ್ತು. ಹಾಗೆಂದೇ ಈ ಸ್ಥಳವನ್ನು ಆಯ್ದುಕೊಂಡು ಸಾಹಿತ್ಯ ಸಮ್ಮೇಳನದ ಸಮಾರೋಪದ ಕಾರ್ಯಕ್ರಮಕ್ಕೆ ಯೋಜನೆ ಮಾಡಲಾಯ್ತು. ವಿಷಯ ಪ್ರಸ್ತುತ ಪಡಿಸುವವರನ್ನು ಬಲು ಎಚ್ಚರಿಕೆಯಿಂದ ಆಯ್ದುಕೊಳ್ಳಲಾಯ್ತು. ಉದ್ಘಾಟನೆಗೆಂದು ಆಗಮಿಸುವವರು ಕೋಲ್ಕತ್ತಾದಲ್ಲಿರುವ ರಾಮಕೃಷ್ಣಾಶ್ರಮದ ಸಹ ಕಾರ್ಯದಶರ್ಿ ಶ್ರೀ ಸ್ವಾಮಿ ಬಲಭದ್ರಾನಂದ ಜೀಯವರು. ಕಳೆದ ಕನಿಷ್ಠ ಮುವ್ವತ್ತೈದು ವರ್ಷಗಳ ಸನ್ಯಾಸಿ ಜೀವನದಲ್ಲಿ ರಾಮಕೃಷ್ಣರ ವಿಚಾರಧಾರೆಯನ್ನು, ವಿವೇಕಾನಂದರ ಬದುಕನ್ನು ಓದಿದ್ದಷ್ಟೇ ಅಲ್ಲ ಸಾಮಾಜಿಕ ಜೀವನದ ಮೂಲಕ ಆಚರಣೆಗೆ ತಂದವರು. ಶೋಷಣೆಯ ಕುರಿತಂತೆ ಭಾಷಣ ಮಾಡುತ್ತ ಭಕ್ತರನ್ನು ಕಾಲಿಗೆ ಕೆಡವಿಕೊಂಡವರಲ್ಲ, ನೊಂದವರ ಸೇವೆ ಮಾಡುತ್ತ ಕಣ್ಣೀರು ಒರೆಸಿದವರು. ಸಮ್ಮೇಳನದ ಅಧ್ಯಕ್ಷತೆ ವಹಿಸುವ ತರುಣ್ ವಿಜಯ್ ರಾಷ್ಟ್ರೀಯ ವಿಚಾರಧಾರೆಗಳಿಗೆ ಸ್ಫೂತರ್ಿಯಿಂದ ಪ್ರತಿಸ್ಪಂದಿಸಿದವರು. ಅವರನ್ನು ದಕ್ಷಿಣ ಭಾರತದ ವಿರೋಧಿ ಎಂದು ಬಿಂಬಿಸುವ ಪ್ರಯತ್ನದಲ್ಲಿದ್ದ ಎಡಚರು ಸೋತು ಹೋಗಿದ್ದರು. ರಾಷ್ಟ್ರವನ್ನು ಅಖಂಡವಾಗಿ ಪ್ರೀತಿಸುವ ತರುಣ್ ವಿಜಯ್ ತರುಣರ ಭಾವನಾಡಿಯಾಗಿ ನಿಲ್ಲಬಲ್ಲರೆಂಬ ವಿಶ್ವಾಸ ಸಮ್ಮೇಳನದ್ದು.

ಈ ಸಾಹಿತ್ಯ ಸಮ್ಮೇಳನಗಳ ವೈಶಿಷ್ಟ್ಯವೆಂದರೆ, ಇಲ್ಲಿ ಬರೆದವರಷ್ಟೇ ಸಾಹಿತಿಗಳಲ್ಲ, ಬರೆದದ್ದನ್ನು ಓದುತ್ತಾರಲ್ಲ ಅವರೂ ಸಾಹಿತಿಗಳೇ. ಓದದೆಯೂ ಅದರಂತೆ ಬದುಕುವ ಭಿನ್ನಭಿನ್ನ ವರ್ಗದ ಜನತೆ ಇದ್ದಾರಲ್ಲ ಅವರೂ ಸಾಹಿತಿಗಳೇ ಎಂದು ಭಾವಿಸಿರುವುದು. ಹೀಗಾಗಿ ಮಂಗಳೂರಿನಲ್ಲಿ ಆಟೋರಿಕ್ಷಾ ಚಾಲಕರ ಸಮ್ಮೇಳನ ಮಾಡಿದ್ದರೆ ಬೆಳಗಾವಿಯಲ್ಲಿ ಗರಡಿಯಾಳುಗಳನ್ನು ಸೇರಿಸಿ ವಿವೇಕಾನಂದ-ನಿವೇದಿತೆಯರ ಚಿಂತನೆ ಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಂಧಮಕ್ಕಳು, ನೇಕಾರರು, ಸಂಗೀತಗಾರರು ಹೀಗೆ ಭಿನ್ನ ಭಿನ್ನ ವರ್ಗವನ್ನು ಸೇರಿಸಿ ವಿಚಾರ ಹರಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಸಮ್ಮೇಳನದ ಪ್ರಚಾರಕ್ಕಾಗಿ ನಡೆಸುವ ಆನಂದದ ಓಟಕ್ಕೆ ಇಟ್ಟಿರುವ ಹೆಸರೇ ‘ಗುರಿ ಮುಟ್ಟುವವರೆಗೆ ಓಟ’ ಅಂತ.

received_2056999667659247

ಬೆಳಗಾವಿಯಲ್ಲಿ ಪಾಕರ್ುಗಳಿಗೆ ಬೆಳಿಗ್ಗೆ ಹೋದರೆ ಕರಪತ್ರ ಹಿಡಿದು ನಿಂತಿರುವ ಹುಡುಗರು, ಗಣೇಶ ಪೆಂಡಾಲುಗಳಲ್ಲಿ ಬ್ಯಾನರು ಕಟ್ಟುತ್ತಿರುವ ಹುಡುಗರು, ಕೊನೆಗೆ ಗುಂಪುಗಳಲ್ಲಿ ಜೊತೆಯಾಗಿ ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ ವಿವೇಕಾನಂದ-ನಿವೇದಿತೆಯರ ಕುರಿತಂತೆ ಹೇಳಿಬರುವ ಫ್ಲ್ಯಾಶ್ ಮಾಬಿನ ಕಾಲೇಜು ವಿದ್ಯಾಥರ್ಿಗಳು.. ಎಲ್ಲವೂ ಹೊಸ ಕನಸನ್ನು ಕಟ್ಟಿಕೊಡಬಲ್ಲಂಥವೇ. ಹೌದಲ್ಲವೇ ಮತ್ತೆ. ರಾಷ್ಟ್ರದ ಒಳಿತಿನ ಕುರಿತಂತೆ ಏಕಮನಸ್ಕರಾಗಿ ಆಲೋಚಿಸುತ್ತ ಅದಕ್ಕಾಗಿ ಯೌವ್ವನವನ್ನು ಧಾರೆಯೆರೆಯುವ ತರುಣರು ಬೇಕೆಂದು ತಾನೇ ಸ್ವಾಮಿ ವಿವೇಕಾನಂದರು ಕನಸು ಕಂಡಿದ್ದು. ಅಂತಹ ದೃಢ ಮನಸ್ಕರನ್ನು ತಯಾರು ಮಾಡಲೆಂದು ತಾನೇ ತನ್ನ ದೇಶವನ್ನು ಬಿಟ್ಟು ನಿವೇದಿತಾ ಭಾರತಕ್ಕೆ ಬಂದಿದ್ದು. ಕೋಲ್ಕತ್ತಾಕ್ಕೆ ಪ್ಲೇಗ್ ಬಂದಾಗ, ಅಲ್ಲಿನ ರಸ್ತೆ ಸ್ವಚ್ಛತೆಗೆ ತಾನೇ ಮುಂದೆ ನಿಂತ ನಿವೇದಿತಾ ಸ್ವಚ್ಛಭಾರತ ಯೋಜನೆಗೆ ಅಂದೇ ಚಾಲನೆ ಕೊಟ್ಟಾಗಿತ್ತು. ಬಂಗಾಳದ ವಿಭಜನೆಯಾದಾಗ ಆಂಗ್ಲರನ್ನೆದುರಿಸಿ ನಿಲ್ಲಲು ತಂತ್ರಜ್ಞಾನದ ಸಹಕಾರ ಬೇಕೆಂದರಿತ ನಿವೇದಿತಾ ತನ್ನ ಪಶ್ಚಿಮದ ಗೆಳೆಯರ ಸಹಕಾರ ಪಡೆದಳು. ಇಲ್ಲಿನ ಆಯ್ದ ತರುಣರನ್ನು ಅಲ್ಲಿಗೆ ಕಳುಹಿಸಿ ಅವರಿಗೆ ಲೋಹ ತಂತ್ರಜ್ಞಾನ, ಬಟ್ಟೆ ತಯಾರಿಕೆಯೇ ಮೊದಲಾದ ವಿಷಯಗಳಲ್ಲಿ ಪರಿಣತಿ ಪಡೆಯುವಂತೆ ಅಣಿಗೊಳಿಸಿದಳು. ಅವರು ಮರಳಿ ಬಂದಮೇಲೆ ಇಲ್ಲಿ ಆಯಾ ಉದ್ಯೋಗ ಕೈಗೊಳ್ಳುವಂತೆ ಪ್ರೇರಣೆ ನೀಡಿದಳು. ಇಂದು ಭಾರತ ಮಾತಾಡುತ್ತಿರುವ ಕೌಶಲ್ಯಾಭಿವೃದ್ಧಿಯ ಕುರಿತಂತೆ ಆಕೆ 1905ರಲ್ಲಿ ಯೋಚಿಸಿ ಯೋಜನೆ ರೂಪಿಸಿದ್ದಳು. ಅವಳು ಸೌಮ್ಯವಾದಿ ಮತ್ತು ಉಗ್ರ ಚಿಂತನೆಯ ಕಾರ್ಯಕರ್ತರ ನಡುವೆ ಕೊಂಡಿಯಾಗಿದ್ದಳು. ಅವಳಿಗೆ ಹುಷಾರಿಲ್ಲದೇ ಹೋದಾಗ, ಅವಳನ್ನು ನೋಡಿಕೊಳ್ಳಲು ಗೋಪಾಲ ಕೃಷ್ಣ ಗೋಖಲೆಯಂಥವರೇ ದಿನಗಟ್ಟಲೇ ಕುಳಿತಿರುತ್ತಿದ್ದರು. ಬಾರೀಂದ್ರ ಘೋಷ್ರಂತಹ ಕ್ರಾಂತಿಕಾರಿಗಳು ಆಕೆಯನ್ನು ಮಾರ್ಗದರ್ಶಕಿಯಾಗಬೇಕೆಂದು ಕೇಳಿಕೊಂಡಿದ್ದರು. ಅವಳಿಗೊಂದು ಕನಸಿತ್ತಂತೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಷ್ಟ್ರ ಧ್ವಜವನ್ನು ಹಿಡಿದು ‘ಗುರುವಿಗೆ ಜೈ, ಭಾರತ ಮಾತೆಗೆ ಜೈ’ ಎನ್ನುತ್ತ ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದುಕೊಂಡಿದ್ದಳಂತೆ ಅವಳು. ಆ ಆಸೆ ಈಡೇರಲಿಲ್ಲ ನಿಜ. ಆದರೆ ಅವಳ ಕನಸು ನನಸಾಗುವಂತೆ ನಾವು ಇನ್ನಾದರೂ ಪ್ರಯತ್ನ ಪಡುವುದು ಬೇಡವೇ?

ಈ ಸಾಹಿತ್ಯ ಸಮ್ಮೇಳನದ ಉದ್ದೇಶ ಅದೇ. ಮರೆತು ಹೋಗಿದ್ದ ಅಕ್ಕನ ಮತ್ತೆ ನೆನಪಿಸುವ ಪುಟ್ಟ ಪ್ರಯತ್ನ. ಆ ನೆಪದಲ್ಲಿ ಹೊಸ ಪೀಳಿಗೆಯನ್ನು ಹಳೆಯ ಸಾಹಸಗಳೊಂದಿಗೆ ಬೆಸೆಯುವ ಸಣ್ಣ ಕಾಯಕ. ಮುಂದಿನ ಭಾನುವಾರ, ಸೋಮವಾರ ಬಿಡುವಾಗಿದ್ದರೆ ಬೆಳಗಾವಿಗೆ ಬನ್ನಿ. ಎರಡು ದಿನದ ಈ ಕಾರ್ಯಕ್ರಮ ಭಾರತವನ್ನು ಕಟ್ಟುವ ಹೊಸ ವಿಧಾನಗಳನ್ನು ಹೇಳಿ ಕೊಡುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಭಾರತಕ್ಕಾಗಿ ಬದುಕುವ ಪ್ರೇರಣೆಯನ್ನಂತೂ ಕೊಡುವುದು ಖಾತ್ರಿ.

Comments are closed.