ವಿಭಾಗಗಳು

ಸುದ್ದಿಪತ್ರ


 

ನಾಲ್ಕು ಜೈಲು, ಹದಿನಾಲ್ಕು ತಿಂಗಳು ನೂರಾರು ನೆನಪುಗಳು

ಕಾಂಗ್ರೆಸ್ಸಿಗೆ ಆರಂಭದಿಂದಲೂ ಅದು ರೂಢಿಯೇ. ಪಾಳೆಗಾರಿಕೆಯ ಹಠ ಅದಕ್ಕೆ. ಸ್ವಾತಂತ್ರ್ಯ ತಂದುಕೊಡಲು ಕಾರಣವಾದವರೇ ತಾವೆಂಬ ದುರಹಂಕಾರ. ಪ್ರಾಣ ಪಣಕ್ಕಿಟ್ಟು ಹೋರಾಡಿದವರೆಲ್ಲ ಮೂಲೆಗುಂಪಾಗಿ ಜೈಲಿನಲ್ಲಿ ನಾಲ್ಕು-ಎಂಟು ದಿನ ಕಳೆದವರೆಲ್ಲ ‘ತಮ್ಮಿಂದಲೇ ಭಾರತ’ವೆಂಬ ಭ್ರಮಾ ಲೋಕದಲ್ಲಿದ್ದರು. ಹೀಗಾಗಿ ದೇಶದ ಮೇಲಿನ ಮೊದಲ ಹಕ್ಕು ತಮ್ಮದೇ ಎಂದು ತೀಮರ್ಾನಿಸಿಬಿಟ್ಟಿದ್ದರು. ಸಕರ್ಾರದ ಎಲ್ಲಾ ವ್ಯವಸ್ಥೆಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ದುಡಿಸಿಕೊಳ್ಳುವ ಚಾಳಿ ಅವರಿಗೆ ಸಹಜವಾಗಿಬಿಟ್ಟಿತ್ತು.

14

ಜೂನ್ 25, 1975 ರ ಮಧ್ಯರಾತ್ರಿ! ಭಾರತದ ಪಾಲಿಗೆ 1947 ರ ಆಗಸ್ಟ್ 14 ರ ನಂತರ ಮರೆಯಲಾಗದ ಮಧ್ಯರಾತ್ರಿ ಅದು. ಪ್ರಜಾಪ್ರಭುತ್ವದ ಮಹೋನ್ನತ ಆದರ್ಶಗಳನ್ನು ಸಾವಿರಾರು ವರ್ಷಗಳಿಂದ ತಬ್ಬಿಕೊಂಡು ಬೆಳೆದಿದ್ದ ಭಾರತದ ಇತಿಹಾಸದ ಕರಾಳ ಪುಟಕ್ಕೆ ನಾಂದಿಯಾದ ದಿನ ಅದು. ದೇಶಭಕ್ತಿಯನ್ನು ಅಪರಾಧವೆಂದು ಗಣಿಸಿ, ಸಕರ್ಾರದ ವಿರುದ್ಧ ದನಿಯೆತ್ತಿದವರನ್ನೆಲ್ಲ ಜೈಲಿಗೆ ಕಳಿಸಿದ ‘ಎಮಜರ್ೆನ್ಸಿ’ ಘೋಷಣೆಯಾಗಿದ್ದು ಅವತ್ತೇ. ಇಂದಿರಾಗಾಂಧಿ ಸವರ್ಾಧಿಕಾರಿಯಾಗಿ ಇಡಿಯ ಜಗತ್ತೇ ಬೆಚ್ಚಿಬೀಳುವಂತಹ ನಿರ್ಣಯ ಕೈಗೊಂಡ ದಿನವೂ ಅದೇ.

ನನ್ನ ಕಾಲದ ತರುಣರೆಲ್ಲ ತುತರ್ು ಪರಿಸ್ಥಿತಿಯ ನಂತರವೇ ಹುಟ್ಟಿದವರು. ಹೀಗಾಗಿ ನಮಗೆ ಅವು ಕೇಳಲು ಕಥನಗಳು, ಓದಲು ಸಾಹಿತ್ಯಗಳಷ್ಟೇ. ಆದರೆ ಪ್ರತ್ಯಕ್ಷ ಅಂದಿನ ದಿನಗಳನ್ನು ಅನುಭವಿಸಿದವರಿಗೆ ಅದು ಯಮಯಾತನೆ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟವನ್ನೇ ಮರು ಸೃಷ್ಟಿಸಿದ ಸ್ವತಂತ್ರ ಭಾರತದ ಭಯಾನಕ ದಿನಗಳು. ಇವಿಷ್ಟೂ ಈಗ ಏಕಾಏಕಿ ನೆನಪಾಗಲು ಕಾರಣ ಇತ್ತೀಚೆಗೆ ಬಿಡುಗಡೆಯಾದ ಶ್ರೀಕಾಂತ ದೇಸಾಯಿಯವರ ‘ನಾಲ್ಕು ಜೈಲು ಹದಿನಾಲ್ಕು ತಿಂಗಳು’ ಕೃತಿ. ಪತ್ರಿಕೆಯೊಂದರಲ್ಲಿ ಧಾರೆಯಾಗಿ ಹರಿದು ಬಂದ ಲೇಖನಗಳ ಗುಚ್ಛವಿದು. ನಾಲ್ಕು ದಶಕಗಳ ಹಿಂದಿನ ಹಸಿ ನೆನಪು, ಬಿಸಿ ಉಸಿರುಗಳ ಒಟ್ಟಾರೆ ಸಂಕಲನವೇ ಕೃತಿಯಾಗಿ ಬಂದಿರುವಂತಿದೆ.

ಕಾಂಗ್ರೆಸ್ಸಿಗೆ ಆರಂಭದಿಂದಲೂ ಅದು ರೂಢಿಯೇ. ಪಾಳೆಗಾರಿಕೆಯ ಹಠ ಅದಕ್ಕೆ. ಸ್ವಾತಂತ್ರ್ಯ ತಂದುಕೊಡಲು ಕಾರಣವಾದವರೇ ತಾವೆಂಬ ದುರಹಂಕಾರ. ಪ್ರಾಣ ಪಣಕ್ಕಿಟ್ಟು ಹೋರಾಡಿದವರೆಲ್ಲ ಮೂಲೆಗುಂಪಾಗಿ ಜೈಲಿನಲ್ಲಿ ನಾಲ್ಕು-ಎಂಟು ದಿನ ಕಳೆದವರೆಲ್ಲ ‘ತಮ್ಮಿಂದಲೇ ಭಾರತ’ವೆಂಬ ಭ್ರಮಾ ಲೋಕದಲ್ಲಿದ್ದರು. ಹೀಗಾಗಿ ದೇಶದ ಮೇಲಿನ ಮೊದಲ ಹಕ್ಕು ತಮ್ಮದೇ ಎಂದು ತೀಮರ್ಾನಿಸಿಬಿಟ್ಟಿದ್ದರು. ಸಕರ್ಾರದ ಎಲ್ಲಾ ವ್ಯವಸ್ಥೆಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ದುಡಿಸಿಕೊಳ್ಳುವ ಚಾಳಿ ಅವರಿಗೆ ಸಹಜವಾಗಿಬಿಟ್ಟಿತ್ತು. 1971 ರಲ್ಲಿ ರಾಯ್ಬರೇಲಿಯಿಂದ ಚುನಾವಣೆಗೆ ಸ್ಪಧರ್ಿಸಿದ ಇಂದಿರಾಗಾಂಧಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಪಡೆದರು. ಈ ಗೆಲುವನ್ನು ಪ್ರಶ್ನಿಸಿ ಆಕೆ ಗೆಲುವಿಗೆ ಸಕರ್ಾರಿ ಯಂತ್ರಗಳನ್ನು ಬಳಸಿರುವ ಅಧಿಕೃತ ದಾಖಲೆಯೊಂದಿಗೆ ರಾಜನಾರಾಯಣರು ನ್ಯಾಯಾಲಯದ ಬಾಗಿಲು ಬಡಿದರು. ಇಂದಿರಾಗಾಂಧಿ ನ್ಯಾಯಾಧೀಶರಿಗೆ ಆಮಿಷ ಒಡ್ಡುವ ಎಲ್ಲಾ ಪ್ರಯತ್ನಗಳನ್ನು ಮಾಡಿದಾಗ್ಯೂ ನ್ಯಾಯಮೂತರ್ಿ ಜೆ ಎಮ್ ಎಲ್ ಸಿನ್ಹಾ ಬಗ್ಗಲಿಲ್ಲ. ಇಂದಿರಾಗಾಂಧಿ ತಪ್ಪಿತಸ್ಥರೆಂದು ನಿರ್ಣಯ ಹೊರಬಿತ್ತು. ಶ್ರೀಕಾಂತ ದೇಸಾಯಿಯವರು ತಮ್ಮ ಕೃತಿಯ ಮೊದಲೆರಡು ಅಧ್ಯಾಯವಷ್ಟೇ ಅಲ್ಲದೇ ಕೊನೆಯಲ್ಲೂ ಕೂಡ ಅಂದಿನ ದಿನದ ಆ ಘಟನೆಗಳನ್ನು ರಸವತ್ತಾಗಿ ವಣರ್ಿಸುವ ಮೂಲಕ ತುತರ್ುಪರಿಸ್ಥಿತಿಗೆ ಕಾರಣವಾದ ಅಂಶಗಳನ್ನು ಸೂಕ್ತವಾಗಿ ಕಟ್ಟಿಕೊಟ್ಟಿದ್ದಾರೆ.

11

ದಿಲ್ಲಿಯ ಆಂಗ್ಲ ಪತ್ರಿಕೆ ‘ಮದರ್ಲ್ಯಾಂಡ್’. ಕೆ.ಆರ್. ಮಲಕಾನಿಯವರ ಸಂಪಾದಕತ್ವದಲ್ಲಿ ದೇಶಭಕ್ತಿಯ ಪ್ರತೀಕವಾಗಿ ಹೊರಬರುತ್ತಿದ್ದ ಪತ್ರಿಕೆ ಅದು. ತುತರ್ು ಪರಿಸ್ಥಿತಿ ಘೋಷಣೆಯಾದ ಕೆಲವು ನಿಮಿಷಗಳಲ್ಲಿಯೇ ಬಂಧನಕ್ಕೊಳಗಾಗಿ ಅಧಿಕಾರದ ಹಮ್ಮಿಗೆ ಸೆರೆಯಾದ ಮೊದಲ ಪತ್ರಕರ್ತರು ಅವರು. ಅಲ್ಲಿಂದಾಚೆಗೆ ಮುಲಾಜಿಲ್ಲದೇ ರಾಜಕೀಯ ಬಂಧನಗಳಾದವು, ಪತ್ರಕರ್ತರು ನಿದರ್ಾಕ್ಷಿಣ್ಯವಾಗಿ ಸೆರೆಗೆ ತಳ್ಳಲ್ಪಟ್ಟರು. ನ್ಯಾಯಾಧೀಶರು ಸಕರ್ಾರದ ತಾಳಕ್ಕೆ ಕುಣಿಯಬೇಕಾಯ್ತು, ಪೊಲೀಸರಂತೂ ತಮ್ಮ ದೊರೆಗಳನ್ನು ಮೆಚ್ಚಿಸಲು ಬಂಧಿತರನ್ನು ಚಿತ್ರಹಿಂಸೆಗೆ ಗುರಿಪಡಿಸಿದರು. ಮುಂದಿನ ಎರಡು ವರ್ಷಗಳ ಕಾಲ ಅವ್ಯಕ್ತ ಭಯ, ಮನೆಯವರ ದುಃಖ ದುಮ್ಮಾನಗಳು, ಜೊತೆಗಿದ್ದವರ ಪಲಾಯನ ಓಹ್… ಎಲ್ಲವೂ ಮೈನವಿರೇಳಿಸುವಂಥದ್ದು. ಇದರಲ್ಲೂ ದೇಶಭಕ್ತಿಯ ಕಾವನ್ನು ಆರಿಹೋಗಲು ಬಿಡದೇ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಜೈಲಿನೊಳಗಿದ್ದವರನ್ನು ಕ್ರಿಯಾಶೀಲರಾಗಿಸುವ ಸಾಹಸವಿದೆಯಲ್ಲ ನಿಜವಾದ ನಾಯಕತ್ವ ಅದೇ! ಹೊರಗಿದ್ದಾಗ ನಾಯಕರೆಂದು ಗುರುತಿಸಿಕೊಂಡ ಅನೇಕರು ಪ್ರತ್ಯಕ್ಷ ಪರೀಕ್ಷೆ ಬಂದಾಗ ಮುಖ್ಯ ಹೋರಾಟದಿಂದ ಕಳಚಿಕೊಂಡು ಪಲಾಯನಗೈದಿದ್ದು ವಿಪಯರ್ಾಸ ಎನ್ನುತ್ತಾರೆ ಲೇಖಕರು. ‘ದೇಶ ಕಾರ್ಯಕ್ಕಾಗಿ ಜೈಲಿಗೆ ಬಂದಿದ್ದೇವೆ-ಸರಕಾರದೆದುರು ಸವಲತ್ತುಗಳಿಗಾಗಿ ಬೇಡಿಕೆ ಸಲ್ಲಿಸಬಾರದು- ಏನೇನೋ ಉಪದೇಶ ಮಾಡಿದ, ಉಪದೇಶ ಮಾಡುತ್ತಿದ್ದ ದೊಡ್ಡ ಜನಗಳು ತಾತ್ಕಾಲಿಕ ಬಿಡುಗಡೆಗೆ ವಿನಂತಿಸಿ ಅಜರ್ಿ ಸಲ್ಲಿಸತೊಡಗಿದ್ದು ಮನೋಬಲ ಕ್ಷೀಣಿಸುತ್ತಿದ್ದುದರ ಸಂಕೇತವಾಗಿತ್ತು. 1976ರ ಡಿಸೆಂಬರ ವೇಳೆಗೆ, ಅನೇಕ ಹಿರಿಯರು ಪೆರೋಲ್ ಪಡೆದುಕೊಂಡು ಮನೆಗಳಿಗೆ ಹೋಗಿ ಬಂದರು. ಇನ್ನೂ ಕೆಲವರು ಪರೋಲ್ ಅವಧಿ ಹೆಚ್ಚಿಸಿಕೊಂಡರೂ ಕೂಡಾ! ಉಪದೇಶ ಮಾಡುವುದು ಸುಲಭ, ಆಚರಣೆ ಕಷ್ಟಕರ ಅಲ್ಲವೇ?’

ಹೌದು. ಹೇಳುವಷ್ಟು ಆಚರಣೆ ಸುಲಭವಲ್ಲ. ಅದಕ್ಕೆ ಎಂಟೆದೆಯೇ ಬೇಕು. ಅದರಲ್ಲೂ ಅನೇಕರನ್ನು ಮಲಗಿದ್ದಲ್ಲಿಂದ ಎಬ್ಬಿಸಿಕೊಂಡು ಬಂದು ಕಾರಾಗೃಹಕ್ಕೆ ತಳ್ಳಲಾಗಿತ್ತು. ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲೂ ಪೊಲೀಸರು ಬಿಟ್ಟಿರಲಿಲ್ಲ. ಹೀಗಾಗಿ ಸೂಯರ್ೋದಯದೊಂದಿಗೇ ಹಲ್ಲುಜ್ಜುವ ಬ್ರಷ್ಷು, ಪೇಸ್ಟ್ಗಳಿಗಾಗಿ ಬೇಡಿಕೆ ಶುರುವಾಗುತ್ತಿತ್ತು. ಇಂದಿರಾಗಾಂಧಿಯ ರಾಜಕೀಯ ವಿರೋಧಿಗಳೆಂಬ ಒಂದೇ ಕಾರಣ ಬಿಟ್ಟರೆ ಅವರನ್ನು ಹಿಂಸೆಗೆ ಒಳಪಡಿಸಲು ಜೈಲಿನ ಸಿಬ್ಬಂದಿಗಳಿಗೂ ಬೇರೆ ಕಾರಣ ಗೊತ್ತಿರಲಿಲ್ಲ. ಜೈಲಿನ ಸಿಬ್ಬಂದಿಗಳು ಒದಗಿಸುವ ಊಟದ ಅನ್ನದಲ್ಲಿ ಹುಳುಗಳು, ಸಾಂಬಾರಿನಲ್ಲಿ ಜಿರಲೆ, ಹಾಸಿಗೆಯ ಮೇಲೆ ತಿಗಣೆಗಳನ್ನೂ ಕಂಡ ಎಂಥವನಿಗೂ ತಲೆಸುತ್ತು ಬರುವುದು ಅಚ್ಚರಿಯೇನಲ್ಲ. ಆರಂಭದಲ್ಲಿ ಬಂಧಿತರಾದವರು ಹತಪ್ರಭರಾಗಿದ್ದು ಸಹಜವೇ. ಬರಬರುತ್ತಾ ಪ್ರಭಾವೀ ರಾಜಕೀಯ ನಾಯಕರು ಇವರ ಜೊತೆಯಾಗುತ್ತಿದ್ದಂತೆ ಶಕ್ತಿ ಹೆಚ್ಚುತ್ತಲೇ ಹೋಯಿತು. ‘ಸಂಖ್ಯಾಬಲದ ಹೆಚ್ಚಳದಿಂದ ಬಂಧಿಗಳಲ್ಲಿ ಧೈರ್ಯದೊಟ್ಟಿಗೆ ಹೋರಾಟದ ಮನೋವೃತ್ತಿಗೆ ಬಲ ದೊರೆಯತೊಡಗಿದರೆ ಅತ್ತ ಬಂದಿಖಾನೆ ಸಿಬ್ಬಂದಿ ರಕ್ಷಣಾತ್ಮಕ ನೀತಿ ತನ್ನದಾಗಿಸಿಕೊಳ್ಳತೊಡಗಿತ್ತು’.

ಲೇಖಕ ದೇಸಾಯಿಯವರು ಜೈಲಿನ ಒಳಹೊಕ್ಕಿದ್ದೇ ರೋಚಕ ಕಥೆ. ವಿದ್ಯಾಥರ್ಿ ಸಂಘಟನೆಯೊಂದರ ಸಹ ಕಾರ್ಯದಶರ್ಿಯಾಗಿದ್ದ ಆತ ಬಂಧನಗೊಳ್ಳಬೇಕಾದವರ ಪಟ್ಟಿಯಲ್ಲಿ ಅಗ್ರಣಿಯಾಗಿದ್ದರು. ನಾಲ್ಕೇ ತಿಂಗಳಲ್ಲಿ ಪರೀಕ್ಷೆ ಬರೆಯಬೇಕಿದ್ದರಿಂದ ಅವರಿಗೆ ಭೂಗತರಾಗಿದದುಕೊಂಡೇ ಚಟುವಟಿಕೆ ನಿರ್ವಹಿಸುವ ಜವಾಬ್ದಾರಿ ಇತ್ತು. ಕಣ್ಣಾಮುಚ್ಚಾಲೆಯಾಡುತ್ತ, ಮುರಕೊಂಡು ಬಿದ್ದಿದ್ದ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತ ದೇಶವ್ಯಾಪಿ ಚಟುವಟಿಕೆಗಳನ್ನು ಪತ್ರಿಕೆಗಳ ಮೂಲಕ ಜನರಿಗೆ ಗುಪ್ತವಾಗಿ ತಲುಪಿಸುತ್ತಿದ್ದುದೂ ಅಲ್ಲದೇ ತಮ್ಮ ಪರೀಕ್ಷೆಯನ್ನೂ ಬರೆದು ವಿಕ್ರಮ ಮೆರೆದರು. ಪರೀಕ್ಷೆ ಮುಗಿದ ಮಾರನೆಯ ದಿನವೇ ಮನೆಯವರಿಗೆಲ್ಲ ಹೇಳಿ ತುತರ್ುಪರಿಸ್ಥಿತಿಯನ್ನು ವಿರೋಧಿಸಿ ಸತ್ಯಾಗ್ರಹಕ್ಕೆ ನಡೆದರು. ಹೋಗುವಾಗಲೇ ಕಾರಾಗೃಹವಾಸಕ್ಕೆ ಬೇಕಾದ ಕೈಚೀಲ ತಯಾರು ಮಾಡಿಕೊಂಡೇ ನಡೆದರು. ಸಹಜವಾಗಿಯೇ ಬಂಧನವಾಯ್ತು, ಮನೆಯ ಝಢತಿಯಾಯ್ತು. ನ್ಯಾಯಾಲಯ 50 ದಿನಗಳ ಶಿಕ್ಷೆ ವಿಧಿಸಿ ಬಿಡುಗಡೆ ಮಾಡಿಸುವಂತೆ ನಿರ್ಣಯ ಕೊಟ್ಟಿತು. ನ್ಯಾಯಾಧೀಶರು ಇವರುಗಳಿಗೆ ಕೈದಿಗಳಿಗೆ ದೊರೆಯುವ ಶಿಕ್ಷೆ ದೊರೆಯದಿರಲೆಂದೇ ಹಾಗೆ ಮಾಡಿದ್ದರು. ಆದರೇನು? ಬಿಡುಗಡೆಯಾದೊಡನೆ ಮತ್ತೆ ಬಂಧಿಸಲು ಕಾತರಿಸುತ್ತಿತ್ತು ಪೊಲೀಸ್ ಪಡೆ. ಆನಂತರ ಶುರುವಾದದ್ದು ಚಿತ್ರಹಿಂಸೆಯ ಮಹಾಪರ್ವ. ಪಾಟೀ ಸವಾಲಿನಲ್ಲಿ ಯಾವುದಕ್ಕೂ ಉತ್ತರ ಸಿಗದಾದಾಗ ತಮ್ಮ ಥಡರ್್ ರೇಟ್ ಹಿಂಸೆಗೆ ಇಳಿದೇ ಬಿಟ್ಟರು ಹುಬ್ಬಳ್ಳಿ ಪೊಲೀಸರು. ‘ನಮ್ಮಿಬ್ಬರಿಗೆ ತೊಟ್ಟಿದ್ದ ಪ್ಯಾಂಟ್, ಶಟರ್್ ತೆಗೆಸಿದ್ದ ಆ ಕಿರಾತಕರು ಚಿತ್ರಹಿಂಸೆಗೆ ಶ್ರೀ ಗಣೇಶ ಮಾಡಿದ್ದು ಬೆತ್ತಗಳಿಂದ. ಸರಿ ಸುಮಾರು ಮಧ್ಯರಾತ್ರಿಯಿಂದ ಮರುದಿನ ಚುಮು ಚುಮು ಬೆಳಗಿನವರೆಗೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ನಡೆದದ್ದು ಪ್ರಜಾಪ್ರಭುತ್ವ ಮತ್ತು ಭಾರತೀಯ ಸಭ್ಯತೆಯ ಮೌಲ್ಯಗಳ ಮೇಲೆ ಪೊಲೀಸ್ ಅಧಿಕಾರಿಗಳ ಪೈಶಾಚಿಕ, ನಾಚಿಕೆಗೆಟ್ಟ ನಗ್ನ ನರ್ತನ. ಪೊಲೀಸರ ಲಾಠಿಯ ಪೆಟ್ಟಿನಿಂದ ನಮ್ಮಿಬ್ಬರ ಬೆನ್ನು, ಹಿಂಭಾಗ ಮತ್ತು ಅಂಗೈಗಳು ರಕ್ತದಿಂದ ಮಂಜುಗಟ್ಟಿ ಕೆಂಪಾದವು. ಅಂಗಾಲುಗಳಿಗೆ ನೀರು ಚುಮುಕಿಸಿ ಟಾಯರಿನ ಬೆಲ್ಟಿನ ಹೊಡೆತದಿಂದ ಚರ್ಮ ಕಿತ್ತುಬರತೊಡಗಿ ಅಸಹನೀಯ ನೋವಾಗತೊಡಗಿತು. ಸೇದುತ್ತಿದ್ದ ಸಿಗರೇಟಿನ ಬಟ್ಗಳನ್ನು ನಮ್ಮಿಬ್ಬರ ದೇಹಗಳಿಗೆ ತಗುಲಿಸತೊಡಗಿದ್ದರಿಂದ ಕೂದಲು ಸುಟ್ಟು ಚರ್ಮದ ಮೇಲೆ ಗಾಯಗಳಾಗ ತೊಡಗಿದವು. ಮಲಗಿಸಿ ತೊಡೆಗಳ ಮೇಲೆ ಕಟ್ಟಿಗೆ ರೋಲರ್ ಇಟ್ಟು ಉರುಳಿಸುವ ತಂತ್ರ ತೊಡೆಗಳಲ್ಲಿನ ಎಲಬುಗಳಿಗೆ ನೋವು ಮಾಡತೊಡಗಿತು. ಸೂಜಿಯಿಂದ ಉಗುರುಗಳ ಮುಂಭಾಗದಲ್ಲಿ ಚುಚ್ಚತೊಡಗಿದ್ದರಿಂದ ನೋವಿನೊಟ್ಟಿಗೆ ರಕ್ತಸ್ರಾವವಾಗತೊಡಗಿದಾಗ ನಮ್ಮಿಬ್ಬರ ಬಾಯಿಯಿಂದ ಹೊರಟ ಚಿತ್ಕಾರ ಕತ್ತಲೆಯ ಆ ರಾತ್ರಿಯಲ್ಲಿ ಯಾರಿಗೂ ಕೇಳುವುದು ಸಾಧ್ಯವಿರಲಿಲ್ಲ. ಬಾಯಲ್ಲಿನ ದ್ರವ ಆರತೊಡಗಿದ್ದರಿಂದ ಕುಡಿಯಲು ನೀರು ಕೇಳಿದರೆ ನಮಗೆ ಕೊಟ್ಟದ್ದು ಎರಡು ಮೂರು ತೊಟ್ಟು ನೀರು. ಈ ಮಧ್ಯದಲ್ಲಿ ಪೊಲೀಸರು ಸ್ವಲ್ಪ ಬಿಡುವು ಪಡೆಯುತ್ತಿದ್ದರು’.

12

ದೇಸಾಯಿಯವರು ಮತ್ತು ಜೊತೆಗಿದ್ದ ವಾದೀಂದ್ರ ಯಾವುದಕ್ಕೂ ಜಗ್ಗಲಿಲ್ಲ. ಸುದ್ದಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೇರಿ ಹುಬ್ಬಳ್ಳಿ ಪೊಲೀಸರ ದೌರ್ಜನ್ಯದ ಕಥನಗಳು ಮನೆಮಾತಾದವು. ಮುಂದೆ ಬಳ್ಳಾರಿ ಜೈಲಿಗೆ ವಗರ್ಾವಣೆ ಭಾಗ್ಯ ದೊರೆಯಿತು.

ಜೈಲಿನಲ್ಲಿ ನಡೆದ ಘಟನೆಗಳು ಒಂದೆರಡಲ್ಲ. ಖೈದಿಗಳೊಂದಿಗಿನ ಕಿತ್ತಾಟ ಒಂದೆಡೆಯಾದರೆ ಪ್ರತಿ ನಿತ್ಯದ ವಾಕಿಂಗ್ವೇಳೆಗೆ ಅನುಭವ ಹಂಚಿಕೊಳ್ಳುವ ಪ್ರಕ್ರಿಯೆ ಮತ್ತೊಂದೆಡೆ. ಒಳಗೆ ತಮಾಷೆಗೇನೂ ಕೊರತೆ ಇರಲಿಲ್ಲ. ಇವರೆಲ್ಲ ಸೇರಿ ಧ್ವಜ ನೆಟ್ಟು ಪ್ರಾರ್ಥನೆಗೆ ನಿಂತರೆ ಜೈಲರ್ ಬಂದು ಕೂಗಾಡುತ್ತಿದ್ದರಂತೆ. ಆಗೆಲ್ಲ ಈ ರಾಜಕೀಯ ಖೈದಿಗಳು ‘ಶಿಸ್ತು ಮುರಿದರೆ ಜೈಲಿನಿಂದ ಹೊರ ಹಾಕುವುದಾದರೆ ಹಾಕಿ’ ಎಂತಲೂ ದಬಾಯಿಸುತ್ತಿದ್ದರಂತೆ. ಇವರೆಲ್ಲ ಸೇರಿಕೊಂಡು ಇಂದಿರಾಗಾಂಧಿಯ ಅಣಕು ಶವಯಾತ್ರೆ ಮಾಡಿದ್ದಲ್ಲದೇ ಅದಕ್ಕೆ ಜೊತೆಗಾರ ರತ್ನಾಕರ ಪ್ರಭುಗಳ ವೀಕ್ಷಕ ವಿವರಣೆಯ ಒಗ್ಗರಣೆ. ‘ಭೂದೇವಿ ಸವರ್ಾಧಿಕಾರಿಯ ಶವಕ್ಕೆ ತನ್ನ ಮಡಿಲಲ್ಲಿ ಸ್ಥಾನಕೊಡಲು ಸಿದ್ಧಳಿಲ್ಲ! ಅಗ್ನಿದೇವ ಆ ಶವವನ್ನು ದಹಿಸಲು ಒಪ್ಪುತ್ತಿಲ್ಲ! ಮೆಡಿಕಲ್ ಕಾಲೇಜುಗಳು ವಿದ್ಯಾಥರ್ಿಗಳ ಅಧ್ಯಯನಕ್ಕಾಗಿ ಸವರ್ಾಧಿಕಾರಿಯ ಶವ ಪಡೆಯಲು ನಿರಾಕರಿಸುತ್ತಿವೆ. ಹೀಗಾಗಿ ಅನಾಥವಾಗಿರುವ ಈ ಶವದ ಅಂತ್ಯ ಸಂಸ್ಕಾರ ಮಾಡಲು ಮುನಿಸಿಪಾಲಿಟಿ ಸಹ ನಿರಾಕರಿಸುತ್ತಿದೆ. ಸಂಸ್ಕಾರಕ್ಕೆ ನಿರಾಕರಣೆ ಕಾರಣ ಸವರ್ಾಧಿಕಾರಿಯು ದೇಶದ ಸಂವಿಧಾನವನ್ನೇ ಬುಡಮೇಲು ಮಾಡಿ, ನಾಗರಿಕರ ಮೂಲಭೂತ ಹಕ್ಕುಗಳನ್ನು ಹೊಸಕಿಹಾಕಿ ಅಮಾಯಕ ದೇಶವಾಸಿಗಳನ್ನು ಜೈಲಿಗೆ ನೂಕಿ ಅತ್ಯಂತ ಘೋರ ಅಪರಾಧ ಮಾಡಿದ್ದರಿಂದ ನಾವು ನಮ್ಮ ಸಹಜ ಕರ್ತವ್ಯ ಮಾಡುವುದಿಲ್ಲ’ ಈ ವಿವರಣೆ ಕೇಳಿ ಎಲ್ಲರೂ ಮನಸೋ ಇಚ್ಛೆ ನಗುವುದು. ಪ್ರತಿದಿನ ಅಧ್ಯಯನ ಮತ್ತು ಓದಿದುದರ ಪ್ರವಚನ. ಈ ಪ್ರವಚನಕ್ಕೆ ಸೇರುವವರ ಸಂಖ್ಯೆಯೂ ಕಡಿಮೆಯಿರುತ್ತಿರಲಿಲ್ಲ.

13

ಶ್ರೀಕಾಂತ ದೇಸಾಯಿಯವರು ಕೃತಿಯುದ್ದಕ್ಕೂ ಈ ಬಗೆಯ ಅನೇಕ ಅನುಭವಗಳನ್ನು ಹಂಚಿಕೊಂಡು ಕೃತಿಯನ್ನು ಜೀವಂತವಾಗಿಸಿಬಿಟ್ಟಿದ್ದಾರೆ. ಅಷ್ಟೇ ಅಲ್ಲ. ಕಾಲಕ್ರಮದಲ್ಲಿ ಒಬ್ಬೊಬ್ಬರೇ ಬಿಡುಗಡೆಯಾಗಿ ಹೊರ ಹೋಗುವಾಗ ಉಳಿದವರ ಮುಖದಲ್ಲಿನ ಆತಂಕಗಳನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಅಡ್ವಾಣಿ, ವಾಜಪೇಯಿಯಂತಹ ಹಿರಿಯರ ನಡೆಗಳನ್ನು ಪ್ರೀತಿಯಿಂದ ವಿವರಿಸಿದಂತೆ ಹಿರಿಯರೆನಿಸಿಕೊಂಡವರ ಚಿಕ್ಕತನವನ್ನೂ ಕಟುವಾಗಿ ಬಯಲಿಗೆಳೆದಿದ್ದಾರೆ. ಆನಂತರದ ರಾಜಕೀಯದ ಬದುಕಿನಲ್ಲಿ ನಗಣ್ಯವಾಗಿ ಹೋದ ಈ ಜೈಲುವಾಸಿಗಳ ಕುರಿತಂತೆ ಅನುಕಂಪವಿದೆ ಅವರಿಗೆ.

ಒಟ್ಟಾರೆ ನಾಲ್ಕು ದಶಕಗಳ ಹಿಂದಿನ ದಿನಗಳನ್ನು ಮತ್ತೆ ನೆನಪಿಸಿಕೊಡುತ್ತ ಹೃದಯದ ಕಾವು ಹೆಚ್ಚಿಸುವ ಕೃತಿ ‘ನಾಲ್ಕು ಜೈಲು ಹದಿನಾಲ್ಕು ತಿಂಗಳು’. ನಿರೂಪಣಾಶೈಲಿಯೂ ನವಿರಾಗಿರುವುದರಿಂದ ಒಮ್ಮೆ ಹಿಡಿದ ಕೃತಿ ಬಿಡದೇ ಓದಿಸಿಕೊಂಡು ಹೋಗುವ ಸ್ನಿಗ್ಧತೆ ಇದೆ. ಎಲ್ಲಕ್ಕೂ ಮಿಗಿಲಾಗಿ ನಮ್ಮ ಪೀಳಿಗೆಯ ತರುಣರು ಮರೆತೇ ಹೋಗುವ ಸಾಧ್ಯತೆ ಇದ್ದ ಇತಿಹಾಸದ ಪುಟಗಳನ್ನು ತೆರೆದು ಮತ್ತೆ ಹರಡಿದ್ದಿದೆಯಲ್ಲ ಅದೇ ಸ್ತುತಿಗೆ ಯೋಗ್ಯ.

Comments are closed.