ವಿಭಾಗಗಳು

ಸುದ್ದಿಪತ್ರ


 

ನಾಶದ ಕಾರ್ಮೋಡದ ಹಿಂದೆಯೇ ಭವಿಷ್ಯದ ಬೆಳ್ಳಿಗೆರೆಯಿದೆ!

ಪಶ್ಚಿಮ ಘಟ್ಟಗಳು ಅತ್ಯಂತ ಸೂಕ್ಷ್ಮವಾದ ಪ್ರದೇಶ. ಭಾರತದ ಪಾಲಿಗೆ ಶ್ವಾಸಕೋಶವೇ ಹೌದು. ತಮಿಳುನಾಡು, ಕೇರಳ, ಕನರ್ಾಟಕ, ಗೋವಾ, ಮಹಾರಾಷ್ಟ್ರ, ಗುಜರಾತು ಈ ಆರು ರಾಜ್ಯಗಳಿಗೆ ಹಬ್ಬಿರುವ ಪಶ್ಚಿಮ ಘಟ್ಟಗಳು, ಕಾಳಿದಾಸನದ್ದೇ ಮಾತುಗಳಲ್ಲಿ ಹೇಳುವುದಾದರೆ ಅಂಗಾತ ಮಲಗಿರುವ ಸುಂದರ ತರುಣಿ. ಸುಮಾರು ಮೂರ್ನಾಲ್ಕು ಸಾವಿರ ಕಿಲೋಮೀಟರ್ಗಳಷ್ಟು ಉದ್ದಕ್ಕೂ ಹಬ್ಬಿರುವ ಈ ಪಶ್ಚಿಮ ಘಟ್ಟಗಳು ಜೀವವೈವಿಧ್ಯತೆಯ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶ.

ಪ್ರಕೃತಿ ಯಾರ ಮಾತನ್ನೂ ಕೇಳುವುದಿಲ್ಲ. ಅದು ತನಗಿಚ್ಛೆ ಬಂದಂತೆ ವತರ್ಿಸುತ್ತದೆ. ಸಹಜ ಪ್ರಕೃತಿ ಎಂದರೆ ಹಾಗೇನೇ. ಮಾನವ ಸಮರಸತೆಯಿಂದ ಇದರೊಟ್ಟಿಗೆ ಬದುಕಿದರೆ ಅದು ಆತನನ್ನು ತನ್ನೊಳಗೇ ಒಬ್ಬನನ್ನಾಗಿ ಗುರುತಿಸಿಕೊಂಡುಬಿಡುತ್ತದೆ. ಅದನ್ನುಳಿದು ಆತನೇನಾದರು ಪ್ರಕೃತಿಯ ನಾಶಕ್ಕೆ ಮುಂದೆನಿಂತನೆಂದರೆ ಈತನ ನಾಶಗೈಯ್ಯಲು ಪ್ರಕೃತಿಗೆ ಗಂಟೆಗಳೇನು ಬೇಕಾಗಿಲ್ಲ. ಕೆಲವು ನಿಮಿಷವೇ ಸಾಕು. ಅಭಿವೃದ್ಧಿ ಎನ್ನುವುದು ಪ್ರಕೃತಿಯೊಂದಿಗೆ ಪೂರಕವಾಗಿದ್ದಾಗ ಮಾತ್ರ ವಿಕಾಸವಾಗುತ್ತದೆ. ಇಲ್ಲವಾದರೆ ಬೌದ್ಧಿಕವಾದ ಪ್ರಗತಿಯೆಲ್ಲವೂ ಒಂದು ದಿನ ಉಕ್ಕೇರಿದ ಸಮುದ್ರದ ಸುನಾಮಿಯೊಳಗೆ ಕೊಚ್ಚಿಹೋಗುತ್ತದೆ. ಚಾವರ್ಾಕನ ಸಿದ್ಧಾಂತ ಕೇಳಲು ಕೆಟ್ಟದ್ದೆನಿಸಬಹುದು. ಆದರೆ ಇಂದಿನ ದಿನಗಳಲ್ಲಿ ನಮ್ಮ ಆಚರಣೆಯಷ್ಟೂ ಚಾವರ್ಾಕ ಹೇಳಿದಂತೆಯೇ ನಡೆಯುತ್ತಿದೆ. ಸಾಲ ಮಾಡಿಯಾದ್ರೂ ತುಪ್ಪ ತಿನ್ನಬೇಕು, ಗುಡ್ಡ-ಬೆಟ್ಟ, ಕಾಡು-ಮೇಡುಗಳನ್ನು ನಾಶ ಮಾಡಿಯಾದರೂ ಬದುಕಬೇಕು. ಇದು ನಮ್ಮ ಬದುಕಿನ ಶೈಲಿಯಾಗಿಬಿಟ್ಟಿದೆ.

kodagu 3
ಭಾರತ ಖಂಡಿತ ಹಾಗಿರಲಿಲ್ಲ. ಪಂಚಭೂತಗಳಿಂದಲೇ ನಿಮರ್ಾಣವಾಗಿರುವ ದೇಹ ಎಂಬ ತಾತ್ವಿಕ ತಳಹದಿಯ ಮೇಲೆಯೇ ನಾವು ರಾಷ್ಟ್ರವನ್ನು ಕಟ್ಟಿದ್ದು. ನಾವು ಪ್ರಕೃತಿಯ ಒಂದು ಭಾಗವೇ ಆಗಿದ್ದೆವು. ಕರ್ಮ ಸಿದ್ಧಾಂತ, ಪುನರ್ಜನ್ಮ ಸಿದ್ಧಾಂತಗಳನ್ನೆಲ್ಲ ನಂಬದ ಆಕ್ರಮಣಕಾರಿಗಳು ಭಾರತಕ್ಕೆ ಬರುತ್ತಿದ್ದಂತೆ ಇಲ್ಲಿನ ರೀತಿ-ನೀತಿಗಳ ಮೇಲೆ, ಚಿಂತನೆಗಳ ಮೇಲೂ ಆಘಾತವಾಯ್ತು. ಇಸ್ಲಾಂನ ಆಕ್ರಮಣವಂತೂ ಬರ್ಬರತೆಯೇ. ಬ್ರಿಟೀಷರ ಆಕ್ರಮಣದ ಕಾಲದಲ್ಲಿ ನಾವು ನಮ್ಮ ಪ್ರಾಕೃತಿಕ ಸಂಪತ್ತನ್ನು ಸಾಕಷ್ಟು ಕಳೆದುಕೊಂಡೆವು. ಇಂದಿಗೂ ದೇಶದಲ್ಲಿ ಅನೇಕ ರಸ್ತೆಗಳನ್ನು, ರೈಲ್ವೇ ಹಳಿಗಳನ್ನು ಅವರು ನಿಮರ್ಾಣ ಮಾಡಿದುದರ ಹಿಂದೆ ಇಲ್ಲಿನ ಪ್ರಾಕೃತಿಕ ಸಂಪತ್ತಿನ ಲೂಟಿ ಅಡಗಿದೆಯೇ ಹೊರತು ಜನರ ಉದ್ಧಾರದ ಭಾವನೆಯಂತೂ ಖಂಡಿತವಾಗಿಯೂ ಇಲ್ಲ. ಸ್ವಾತಂತ್ರ್ಯ ಬಂದ ನಂತರವಾದರೂ ನಾವು ಸುಧಾರಿಸಬೇಕಿತ್ತು. ಆದರೆ ಗುಲಾಮಿ ಮಾನಸಿಕತೆ ಅದಕ್ಕೆ ಬಿಡಲೇ ಇಲ್ಲ. ಅತಿ ವೇಗವಾಗಿ ಸಿರಿವಂತರಾಗುವ ಹುಚ್ಚು ಇಂದು ಎಲ್ಲರನ್ನೂ ಆವರಿಸಿಕೊಂಡುಬಿಟ್ಟಿದೆ. ವೈವಿಧ್ಯಮಯವಾದ ಕಾಡನ್ನು ಕಡಿದು ಏಕಜಾತಿಯ ಮರಗಳ ಕಾಡು ನಿಮರ್ಿಸುವ ತವಕ ಶುರುವಾಗಿದೆ. ರಿಯಲ್ ಎಸ್ಟೇಟ್ನ ಧಂಧೆಗೆ ಕಾಡು-ನಾಡು ಎಂಬ ಭೇದವಿಲ್ಲ. ಅದಕ್ಕೆ ಗೊತ್ತಿರುವುದು ನಾಶವೊಂದು ಮಾತ್ರ. ಗಣಿಗಾರಿಕೆಯ ಹುಚ್ಚಿಗೆ ಬಿದ್ದರಂತೂ ಮುಗಿದೇ ಹೋಯ್ತು. ಜೈಲಿಗೇ ಓಯ್ದು ಕುಳ್ಳಿರಿಸಿದರೂ ಅಲ್ಲಿಂದಲೂ ಗಣಿಗಾರಿಕೆ ಮಾಡುವುದು ಹೇಗೆಂದು ಲೆಕ್ಕ ಹಾಕುತ್ತಿರುತ್ತಾರೆ. ಕೊಡಗಿಗೆ, ಕೇರಳಕ್ಕೆ ಮುಳುವಾಗಿದ್ದು ಪ್ರಕೃತಿಯನ್ನು ನಾಶಗೈಯ್ಯುವ ನಮ್ಮ ಈ ಮಾನಸಿಕತೆಯೇ!

Kodagu 4
ಪಶ್ಚಿಮ ಘಟ್ಟಗಳು ಅತ್ಯಂತ ಸೂಕ್ಷ್ಮವಾದ ಪ್ರದೇಶ. ಭಾರತದ ಪಾಲಿಗೆ ಶ್ವಾಸಕೋಶವೇ ಹೌದು. ತಮಿಳುನಾಡು, ಕೇರಳ, ಕನರ್ಾಟಕ, ಗೋವಾ, ಮಹಾರಾಷ್ಟ್ರ, ಗುಜರಾತು ಈ ಆರು ರಾಜ್ಯಗಳಿಗೆ ಹಬ್ಬಿರುವ ಪಶ್ಚಿಮ ಘಟ್ಟಗಳು, ಕಾಳಿದಾಸನದ್ದೇ ಮಾತುಗಳಲ್ಲಿ ಹೇಳುವುದಾದರೆ ಅಂಗಾತ ಮಲಗಿರುವ ಸುಂದರ ತರುಣಿ. ಸುಮಾರು ಮೂರ್ನಾಲ್ಕು ಸಾವಿರ ಕಿಲೋಮೀಟರ್ಗಳಷ್ಟು ಉದ್ದಕ್ಕೂ ಹಬ್ಬಿರುವ ಈ ಪಶ್ಚಿಮ ಘಟ್ಟಗಳು ಜೀವವೈವಿಧ್ಯತೆಯ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶ. ಇಲ್ಲಿನ ಗಿಡ-ಮರಗಳು, ಹಬ್ಬಿರುವ ಗುಡ್ಡದ ಶೈಲಿ, ವಾಸಿಸುವ ಪಶು-ಪಕ್ಷಿ, ಪ್ರಾಣಿ, ಕ್ರಿಮಿ-ಕೀಟಗಳೆಲ್ಲವೂ ಅತ್ಯಂತ ವಿಶಿಷ್ಟವಾದವೇ. ಸ್ವಾತಂತ್ರ್ಯ ಬಂದ 70 ವರ್ಷಗಳಿಂದಲೂ ಇದನ್ನು ಉಳಿಸುವ ಯಾವ ಪ್ರಯತ್ನವನ್ನೂ ನಾವು ಮಾಡಲೇ ಇಲ್ಲ. ಪ್ರಕೃತಿ ಪ್ರೇಮಿಗಳ ಗಲಾಟೆ ತೀವ್ರವಾದಾಗಲೇ ಪರಿಸರ ಸಚಿವ ಜಯರಾಮ್ ರಮೇಶ್ ಮಾಧವ್ ಗಾಡ್ಗೀರ್ ಅವರ ನೇತೃತ್ವದಲ್ಲಿ ಕಮಿಟಿಯನ್ನು ರಚಿಸಿದ್ದು. ಅವರು ಕೊಟ್ಟ ವರದಿಯನ್ನೇನಾದರೂ ನಾವು ಆಲಿಸಿದ್ದರೆ ಪಶ್ಚಿಮ ಘಟ್ಟಗಳ ಇಂದಿನ ಸ್ಥಿತಿ ಬೇರಯೇ ಆಗಿರುತ್ತಿತ್ತು. ಆದರೆ ಗಾಡ್ಗೀರ್ರನ್ನು ಹೆಚ್ಚು ಪರಿಸರ ಪ್ರೇಮಿ ಎಂದು ಆರೋಪಿಸಿದ ಅಷ್ಟೂ ರಾಜ್ಯಗಳು ಅವರು ಕೊಟ್ಟ ವರದಿಯನ್ನು ನಿರಾಕರಿಸಿದವು. ಕೇರಳದಲ್ಲಂತೂ ಗುಡ್ಡ- ಗುಡ್ಡಗಳನ್ನೇ ಆಕ್ರಮಿಸಿಕೊಂಡಿದ್ದ ಕ್ರಿಶ್ಚಿಯನ್ನರು ಈ ವರದಿಯ ವಿರುದ್ಧ ಕೇಂದ್ರದವರೆಗೂ ಅಹವಾಲು ತೆಗೆದುಕೊಂಡು ಹೋದರು. ಇದನ್ನು ಸರಿದೂಗಿಸಲೆಂದೇ ಮುಂದೆ ಕಸ್ತೂರಿ ರಂಗನ್ರನ್ನು ಕೇಳಿಕೊಳ್ಳಲಾಯ್ತು. ಅವರು ಸಮಾಧಾನವಾಗುವ ರೀತಿಯ ವರದಿಯನ್ನು ಕೊಟ್ಟರಾದರೂ ಅದನ್ನು ಅನುಷ್ಠಾನಕ್ಕೆ ತರುವ ಛಾತಿಯೂ ಸಕರ್ಾರಗಳಿಗಿರಲಿಲ್ಲ. ಪರಿಣಾಮ ಪಶ್ಚಿಮ ಘಟ್ಟಗಳ ನಾಶ ಮುಲಾಜಿಲ್ಲದೇ ಮುಂದುವರೆಯಿತು. ಗಣಿಗಾರಿಕೆ ನಿಲ್ಲಲಿಲ್ಲ, ಸ್ಥಳೀಯ ಬುಡಕಟ್ಟು ಜನಾಂಗದವರು ಕ್ವಾರಿಗಳ ವಿರುದ್ಧ ವರ್ಷಗಟ್ಟಲೇ ಹೋರಾಟ ನಡೆಸಿದರೂ ಕಮ್ಯುನಿಸ್ಟ್ ಸಕರ್ಾರ ಕ್ಯಾರೇ ಎನ್ನಲಿಲ್ಲ. ಐಎಎಸ್ ಅಧಿಕಾರಿಯೊಬ್ಬರು ಮುನ್ನಾರ್ನಲ್ಲಿ ಅತಿಕ್ರಮಣಗೈಯ್ದು ಶಿಲುಬೆ ನೆಟ್ಟಿದ್ದನ್ನು ಕಿತ್ತು ಬಿಸಾಡಿದಾಗ ಇದೇ ಕಮ್ಯುನಿಸ್ಟರ ನಾಯಕರು ಅವರನ್ನು ಆರ್ಎಸ್ಎಸ್ ಚೇಲಾ ಎಂದು ಜರಿದುಬಿಟ್ಟವು. ಆಗಬಾರದ್ದು ಆಗಿಯೇ ಬಿಟ್ಟಿತು. ಸತತ ಪ್ರಕೃತಿಯ ನಾಶವಾಗಿತ್ತು. ಪಶ್ಚಿಮಘಟ್ಟಗಳಲ್ಲಿ ಅಸಮತೋಲನ ಕಂಡುಬಂದಾಗ ಪ್ರಕೃತಿಗೆ ತನ್ನನ್ನು ತಾನೇ ಮರು ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಬಂದೊದಗಿತು.
ವಷರ್ಾಧಾರೆ ತೀವ್ರವಾಗುತ್ತಿದ್ದಂತೆ ನೀರನ್ನು ಹಿಡಿದಿಟ್ಟುಕೊಳ್ಳಬೇಕಾಗಿದ್ದ ಅಣೆಕಟ್ಟುಗಳು ಬೇಗ-ಬೇಗನೇ ತುಂಬಲಾರಂಭಿಸಿದವು. ಈ ಅಣೆಕಟ್ಟುಗಳದ್ದು ಒಂದು ವಿಚಿತ್ರವಾದ ಸ್ಥಿತಿ. ರಾಜ್ಯ-ರಾಜ್ಯಗಳ ನಡುವೆ ಕದನಕ್ಕೆ ಕಾರಣವಾಗುವ ಈ ಅಣೆಕಟ್ಟುಗಳು ಗೇಟ್ ಯಾವಾಗ ತೆಗೆಯಬೇಕು, ಹಾಕಬೇಕು ಎಂಬುದಕ್ಕೂ ಭಿನ್ನ ಭಿನ್ನ ನಿಯಮಗಳಿವೆ. ಎರಡು ರಾಜ್ಯಗಳ ನಡುವೆ ಕದನಕ್ಕೆ ಕಾರಣವಾಗುವ ನದಿಯಾಗಿದ್ದರೆ ಸ್ವತಃ ಸುಪ್ರೀಂಕೋಟರ್ೇ ಗೇಟು ತೆಗೆಯುವುದರ ಕುರಿತಂತೆ ಆದೇಶ ಹೊರಡಿಸಬೇಕು. ಕೆಲವೊಂದು ಅಣೆಕಟ್ಟುಗಳಿಗೆ ಅಧೀನ ಕಾರ್ಯದಶರ್ಿಯ ಅನುಮತಿ ಬೇಕಾದರೆ ಇನ್ನೂ ಕೆಲವಕ್ಕೆ ಜಿಲ್ಲಾಧಿಕಾರಿಯ ಆಜ್ಞೆ ಬೇಕೇ ಬೇಕು. ಕೇರಳದಲ್ಲಿ ಅಣೆಕಟ್ಟುಗಳು ತುಂಬಿ ತುಳುಕಾಡುತ್ತಿದ್ದಂತೆ ಗಾಬರಿಗೊಳಗಾದ ನಿವರ್ಾಹಕರು ಪೀಡಿತ ಪ್ರದೇಶಗಳಿಗೆ ಮುನ್ಸೂಚನೆಯೇ ಕೊಡದಂತೆ ಅಣೆಕಟ್ಟಿನ ಗೇಟುಗಳನ್ನು ತೆಗೆದುಬಿಟ್ಟರು. ಈ ಚಚರ್ೆ ವ್ಯಾಪಕವಾಗುತ್ತಿದ್ದಂತೆ ಈ ಗೇಟು ತೆರೆಯುವ ವಿಚಾರವನ್ನು ವಾಟ್ಸಪ್ಪಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದೆವು ಎಂದಿದ್ದಾರೆ ಅಧಿಕಾರಿಗಳು. ಇವೆಲ್ಲವೂ ನಮ್ಮ ಬೇಜವಾಬ್ದಾರಿ ತನದ ಜೀವಂತ ನಿದರ್ಶನಗಳು. ತಮಿಳುನಾಡಿನಲ್ಲಿ ಪ್ರವಾಹ ಪರಿಸ್ಥಿತಿ ನಿಮರ್ಾಣವಾದಾಗಲೂ ಇದೇ ರೀತಿ ಆಗಿತ್ತು ಎಂಬುದರ ಅರಿವಿದ್ದ ನಂತರವೂ ನಾವಿಷ್ಟು ಬೇಜವಾಬ್ದಾರಿ ತನದಿಂದ ವತರ್ಿಸುತ್ತಿದ್ದೇವೆ. ಒಟ್ಟಿನಲ್ಲಿ ನೂರಾರು ಪ್ರಾಣಗಳ ಹಾನಿಯಾಯ್ತು, ಲಕ್ಷಾಂತರ ಜನ ನಿರಾಶ್ರಿತರಾದರು. ಇತ್ತ ಕೊಡಗಿನಲ್ಲಿಯೂ ಸಿದ್ಧರಾಮಯ್ಯನವರ ಸಕರ್ಾರದ ವೇಳೆಗೆ ಬೆಳೆದು ನಿಂತ ಹತ್ತಾರು ಸಾವಿರ ಮರಗಳನ್ನು ಕಡಿದುರುಳಿಸಿ ಗುಡ್ಡ-ಬೆಟ್ಟಗಳ ನೀರನ್ನು ಹಿಡಿದಿಡುವ ಸಾಮಥ್ರ್ಯವನ್ನೇ ಕಡೆಗಾಣಿಸಿಬಿಟ್ಟೆವು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ವಿಜ್ಞಾನಿಗಳು ಹೇಳುವಂತೆ ಗುಡ್ಡ ಸೇರಿದ ನೀರು ಗುಡ್ಡ ಸ್ಫೋಟಗೊಂಡು ಸಿಡಿಯಿತೆಂದು ಭಯಾನಕವಾದ ಸಂಗತಿ ಹೇಳಿದ್ದಾರೆ. ಅವರ ಪ್ರಾಥಮಿಕ ವರದಿಯನ್ನು ನಂಬುವುದಾದರೆ ಇನ್ನು ಮುಂದೆ ಕೊಡಗಿನಲ್ಲಿ ಇಷ್ಟು ಮಳೆಯಾಗುವ ಸಾಧ್ಯೆತೆಯೇ ಇಲ್ಲ. ಕೊಡಗು ಈಗಿನಂತೆ ಬದುಕಲು ಯೋಗ್ಯವಾಗಿರುವುದು ಕಷ್ಟವಂತೆ.

kodagu 2
ಈ ಮಧ್ಯೆ ಇಡಿಯ ದೇಶ ಈ ಪ್ರಾಕೃತಿಕ ನೋವಿಗೆ ಸ್ಪಂದಿಸಿರುವ ರೀತಿ ಭಾರತದ ಸಂಸ್ಕೃತಿಗೆ ಪೂರಕವಾಗಿಯೇ ಇದೆ. ಹೆಚ್ಚು ಕಡಿಮೆ ಈ ನಾಡಿನ ಪ್ರತಿಯೊಂದು ರಾಜ್ಯ, ಪ್ರತಿಯೊಂದು ಜಿಲ್ಲೆ ಈ ಸಂಕಟಕ್ಕೆ ಸ್ಪಂದಿಸಿದೆ. ದೂರದ ನಾಗಾಲ್ಯಾಂಡ್, ತ್ರಿಪುರಾಗಳು ಒಂದೊಂದು ಕೋಟಿ ರೂಪಾಯಿಯನ್ನು ಕಳಿಸಿಕೊಟ್ಟರೆ ವಿಕಾಸದ ಓಟದಲ್ಲಿ ಹೆಣಗಾಡುತ್ತಿರುವ ಛತ್ತೀಸ್ಘಡ ಮೂರು ಕೋಟಿ ಹಣವನ್ನು ಕೊಟ್ಟಿದ್ದಲ್ಲದೇ ಏಳುವರೆ ಕೋಟಿ ರೂಪಾಯಿ ಬೆಲೆಬಾಳುವಷ್ಟು ಅಕ್ಕಿಯನ್ನು ಕೇರಳಿಗರಿಗೆ ಕಳಿಸಿಕೊಟ್ಟಿದೆ. ಕೊಡಗಿನಲ್ಲಿ ನಿರಾಶ್ರಿತರು ಇದ್ದಾರೆ ನಿಜ. ಆದರೆ ಅವರಿಗೆ ಅಗತ್ಯವಾದ ವಸ್ತುಗಳ ಕೊರೆತೆಯೊಂತೂ ಖಂಡಿತ ಇರಲಿಲ್ಲ. ಲಾರಿಗಟ್ಟಲೆ ವಸ್ತುಗಳು ಮಡಿಕೇರಿಯ ಪ್ರಾಂಗಣವನ್ನು ತುಂಬಿಬಿಟ್ಟಿದೆ. ತನ್ನನ್ನು ತಾನು ನಿಮರ್ಿಸಿಕೊಳ್ಳುವ ಸಾಮಥ್ರ್ಯ ಭಾರತಕ್ಕೆ ಯಾವಾಗಲೂ ಇದ್ದೇ ಇದೆ. ಕತಾರ್ನ ಕುವೈತ್ನ ಮಾಲ್ಡೀವ್ಸ್ನ ಹಣ ತೆಗೆದುಕೊಂಡು ಕೇರಳವನ್ನು ರೂಪಿಸಬೇಕಾದ ದದರ್ು ಕೊಡಗನ್ನು ನಿಮರ್ಿಸಬೇಕಾದ್ದ ಅನಿವಾರ್ಯತೆ ನಮಗೆ ಖಂಡಿತ ಇಲ್ಲ. ಕೇಂದ್ರ ಸಕರ್ಾರ ರಸ್ತೆ ನಿಮರ್ಾಣ, ಬೆಳೆ ಪರಿಹಾರ, ಮನೆ ನಿಮರ್ಾಣ, ಪರಿಹಾರ ಕಾರ್ಯವೇ ಮೊದಲಾದ ಚಟುವಟಿಕೆಗಳಿಗೆ ಸಾವಿರಾರು ಕೋಟಿ ರೂಪಾಯಿಯನ್ನು ಮೀಸಲಿಟ್ಟದೆ. ಹೇಗಿದ್ದರೂ ಕೊಡಗು ಮತ್ತು ಕೇರಳಗಳನ್ನು ಪುನರ್ರೂಪಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿರುವುದರಿಂದ ಪ್ರಕೃತಿಗೆ ಪೂರಕವಾಗಿಯೇ ಅದನ್ನು ಮಾಡುವ ಪ್ರಯತ್ನವನ್ನು ನಾವೀಗ ಆಲೋಚಿಸಬೇಕಾಗಿದೆ.

 
ಪಶ್ಚಿಮ ಘಟ್ಟ ಉಳಿದರೆ ಭಾರತ ಉಳಿಯುತ್ತದೆ. ಮತ್ತು ಅದನ್ನು ಉಳಿಸಿಕೊಳ್ಳುವ ಬಲುದೊಡ್ಡ ಹೊಣೆಗಾರಿಕೆ ಕೇರಳ ಕನರ್ಾಟಕಗಳ ಮೇಲೆಯೇ ಇದೆ. ಬೆಳವಣಿಗೆ ಮತ್ತು ವಿಕಾಸದ ನಡುವಿನ ಗೆರೆಯನ್ನು ಸ್ಪಷ್ಟವಾಗಿ ಗುರುತಿಸುತ್ತಾ ನಾವೀಗ ಹೊಸ ನಾಡನ್ನು ಕಟ್ಟಬೇಕಿದೆ. ಒಮ್ಮೊಮ್ಮೆ ನಾಶವೂ ಕೂಡ ಭವಿಷ್ಯದ ಒಳಿತಿಗಾಗಿಯೇ ಬರುತ್ತದೆ.

Comments are closed.