ವಿಭಾಗಗಳು

ಸುದ್ದಿಪತ್ರ


 

ನಿಜಕ್ಕೂ ಈಗ ಭಾರತ ಗೆಲ್ಲುತ್ತಿದೆ!

ನರೇಂದ್ರಮೋದಿ ಪ್ರಧಾನಿಯಾದಾಗಿನಿಂದಲೂ ಚೀನಾದ ದೆಸೆ ಕೆಟ್ಟಿದೆ ಎಂದೇ ಹೇಳಬೇಕು. ಇಷ್ಟೂ ದಿನಗಳ ಕಾಲ ಜಗತ್ತಿನಲ್ಲಿ ತಮ್ಮ ಪ್ರಭಾವವನ್ನು ಮಂಡಿಸಲಾಗದೇ ಹೆಣಗಾಡುತ್ತಿದ್ದ ಭಾರತೀಯ ನಾಯಕರು 5 ವರ್ಷಗಳ ಕಾಲ ತಳ್ಳಿದರೆ ಸಾಕೆಂದು ಏದುಸಿರು ಬಿಟ್ಟು ಕುಳಿತಿರುತ್ತಿದ್ದರು. ಮೋದಿ ಹಾಗಲ್ಲ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಏಷಿಯಾದಲ್ಲಿ ಚೀನಾಕ್ಕೆ ಪ್ರಬಲ ಶಕ್ತಿ ತಾವೆಂದು ಜಗತ್ತಿಗೆ ನಂಬಿಕೆ ಬರುವಂತೆ ಮಾಡಿಬಿಟ್ಟಿದ್ದಾರೆ.

ಒಂದು ಬಲು ಸಂತೋಷದ ಸುದ್ದಿ. ಆಸ್ಟ್ರೇಲಿಯಾಕ್ಕೆ ನೀವು ಹೋಗಿ ಸಿಡ್ನಿಯಲ್ಲಿ ಮೆಟ್ರೊ ಹತ್ತಿದರೆ ನೀವು ಹೆಮ್ಮೆ ಪಡುವ ಸಂಗತಿಯೊಂದು ಅನುಭವಕ್ಕೆ ಬರುತ್ತದೆ. ಅದೇನು ಗೊತ್ತೇ? ಆಂಧ್ರದಲ್ಲಿ ನಿಮರ್ಾಣಗೊಂಡಿರುವ 22 ಮೆಟ್ರೊ ಬೋಗಿಗಳು ಈಗ ಅಲ್ಲಿ ಓಡಾಡುತ್ತಿವೆ. 2014ರಲ್ಲಿ ಆ್ಯಲ್ಸ್ಟಾಮ್ ಎನ್ನುವ ಫ್ರಾನ್ಸಿನ ಬಹು ರಾಷ್ಟ್ರೀಯ ಕಂಪೆನಿ ಆಸ್ಟ್ರೇಲಿಯಾದ ವಾಯುವ್ಯ ರೈಲ್ವೇಗೆ 22 ಸಿಕ್ಸ್ ಕಾರ್ ಬೋಗಿಗಳನ್ನು ಪೂರೈಸುವ ಕಾಂಟ್ರಾಕ್ಟು ಪಡೆದುಕೊಂಡಿತು. ಈ ಬೋಗಿಗಳು ಪೂರ್ಣ ಸ್ವಯಂಚಾಲಿತವಾಗಿದ್ದು ಇದರಲ್ಲಿ ಲಗೇಜಿಡಲು ಜಾಗವಲ್ಲದೇ ಬೈಸಿಕಲ್ಲು ಮತ್ತು ವೀಲ್ಚೇರ್ಗಳಿಗೂ ಜಾಗ ಒದಗಿಸಲಾಗಿದೆ. ಆ್ಯಲ್ಸ್ಟಾಮ್ನ ಹಿರಿಯ ಉಪಾಧ್ಯಕ್ಷ ಲಿಂಗ್ ಫ್ಯಾಂಗ್ ಮೊದಲ ಕಂತನ್ನು ಸರಿಯಾದ ಸಮಯಕ್ಕೆ ಪೂರೈಸಿರುವುದರ ಕುರಿತಂತೆ ಹೆಮ್ಮೆ ವ್ಯಕ್ತಪಡಿಸಿರುವುದಲ್ಲದೇ ಭಾರತದ ಉತ್ಪಾದಕ ಮತ್ತು ಇಂಜಿನಿಯರಿಂಗ್ ಶೃಂಗವಾಗಿ ಅಭಿವೃದ್ಧಿಗೊಳ್ಳುವ ಮೊದಲ ಹೆಜ್ಜೆ ಇದಾಗಿದೆ ಎಂದು ಹೆಮ್ಮೆ ಪಟ್ಟಿದ್ದಾರೆ. ನರೇಂದ್ರಮೋದಿಯವರು ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಪರಿಚಯಿಸಿದಾಗ ಆಡಿಕೊಂಡವರೇ ಹೆಚ್ಚು. ಆದರೆ ಈಗ ಅವರ ಅಧಿಕಾರಾವಧಿ ನಾಲ್ಕುವರೆ ವರ್ಷ ಪೂರ್ಣಗೊಳ್ಳುವುದರೊಳಗೆ ಭಾರತ ರಫ್ತು ಉದ್ದಿಮೆಯಲ್ಲಿ ವಿಕ್ರಮ ಸಾಧಿಸುವ ಲಕ್ಷಣಗಳು ಗೋಚರಿಸುತ್ತಿವೆ. ಅದಾಗಲೇ ಭಾರತ ಅಕ್ಕಪಕ್ಕದ ದೇಶಗಳಿಗೆ ಯುದ್ಧವಿಮಾನಗಳನ್ನು ಮಾರಾಟ ಮಾಡುವ ಮೂಲಕ ಅನೇಕ ಭಾರತೀಯ ಉತ್ಪಾದಕರನ್ನು ಶಸ್ತ್ರಾಸ್ತ್ರ ನಿಮರ್ಾಣದ ಕ್ಷೇತ್ರದಲ್ಲಿ ಮುಂಚೂಣಿಗೆ ತರಲು ಯತ್ನಿಸುತ್ತಿರುವ ಪ್ರಯಾಸ ಯಾರಿಗೂ ತಿಳಿಯದುದೇನಲ್ಲ. ಅದರ ನಡುವೆಯೇ ಆಸ್ಟ್ರೇಲಿಯಾದ ಮೆಟ್ರೊ ರೈಲಿನ ಈ ಸುದ್ದಿ ಎಂಥವನಿಗೂ ನೆಮ್ಮದಿ ತರುವಂಥದ್ದು.

2

60 ವರ್ಷಗಳ ಆಡಳಿತವನ್ನು ನೀಡಿದ ಕಾಂಗ್ರೆಸ್ಸು ಒಂದಿನಿತೂ ಲೆಕ್ಕ ಕೊಡದೇ ಪಾರಾಗಿಬಿಟ್ಟಿತು. ಯಾರಾದರೂ ಪ್ರಶ್ನಿಸಿದರೆ ಮುರಿದು ಬೀಳುವಂತಿರುವ ಸಕರ್ಾರಿ ಶಾಲೆಗಳು, ಬ್ರಿಟೀಷರ ಕಾಲದಿಂದಲೂ ಖಾಕಿ ಬಟ್ಟೆಯನ್ನು ಹಾಕಿಕೊಂಡು ತಿರುಗಾಡುತ್ತಿರುವ ಪೊಲೀಸರು, ಚಿಕ್ಕಮಕ್ಕಳ ಗೆರೆ ಹಾಕುವ ಆಟದಂತೆ ಮನೆಯ ಮೇಲೆ ಅಂಗಾತ ಬಿದ್ದಿರುವ ಟಿವಿ ಆ್ಯಂಟೆನಾಗಳು, ಹಳೆಯ ಕಾಲದ ಕಂಪ್ಯೂಟರ್ಗಳು ಮತ್ತು ಸಮಯವನ್ನೇ ಪರಿಪಾಲಿಸದ ರೈಲು ಇಂಜಿನ್ನುಗಳು ಇವೇ ಮುಂತಾದವನ್ನು ತೋರಿಸಿ ಕೈಮುಗಿದುಬಿಡುತ್ತಾರೆ. ಆದರೆ ನಾಲ್ಕು ವರ್ಷಗಳಲ್ಲಿ ಹಿಂದಿನ ಎಲ್ಲಾ ರೆಕಾಡರ್ುಗಳನ್ನು ಮುರಿದು ಜನಸಾಮಾನ್ಯರ ಬದುಕನ್ನು ಸುಂದರಗೊಳಿಸುತ್ತಿರುವ ಮತ್ತು ಭಾರತದ ಗೌರವವನ್ನು ಅಚ್ಚರಿಯೆಂಬಂತೆ ಬೆಳಗಿಸುತ್ತಿರುವ ನರೇಂದ್ರಮೋದಿಯವರನ್ನು ಬಗೆ-ಬಗೆಯ ರೀತಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಎಲ್ಲಾ ಬಿಟ್ಟು ಇತ್ತೀಚೆಗೆ ರಾಹುಲ್ ಮೋದಿ ತಾಕತ್ತಿದ್ದರೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿ ಎಂದು ಸವಾಲೆಸೆದಿದ್ದಾರೆ. ಆದರೆ ನರೇಂದ್ರಮೋದಿ ಯಾವ ಪತ್ರಕರ್ತನಿಗೂ ಉತ್ತರಿಸಬೇಕಿಲ್ಲ. ಏಕೆಂದರೆ ಅವರ ಮಾತಿಗಿಂತ ಕೆಲಸಗಳೇ ಹೆಚ್ಚು ಸದ್ದು ಮಾಡುತ್ತಿವೆ. ಈಚೀಚೆಗಂತೂ ಭಾರತ ಚೀನಾವನ್ನು ಮೀರಿಸುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ ಎಂದು ಜಗತ್ತು ಮಾತನಾಡಿಕೊಳ್ಳುತ್ತಿದೆ. ಅದಕ್ಕೆ ಸರಿಯಾಗಿ ಏಷಿಯಾದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ವೃದ್ಧಿಯಾಗುತ್ತಿದ್ದರೆ ಚೀನಾ ದಿನೇ ದಿನೇ ತನ್ನ ಪ್ರಭೆಯನ್ನು ಕಳೆದುಕೊಳ್ಳುತ್ತಿದೆ!

3

ಕಳೆದ 40 ವರ್ಷಗಳಿಂದ ಚೀನಾದ ಬೆಳವಣಿಗೆ ಅತ್ಯಂತ ವೇಗವಾಗಿ ದಾಖಲಾಗಿದೆ. ಆದರೆ ಇತ್ತೀಚೆಗೆ ಹೊರಬರುತ್ತಿರುವ ವರದಿಗಳ ಪ್ರಕಾರ ಈ ವೇಗ ದೀರ್ಘಕಾಲದ್ದೇನಲ್ಲ. 2030ರ ವೇಳೆಗೆ ತನ್ನೆಲ್ಲಾ ಸಾಮಥ್ರ್ಯದ ತುದಿಯನ್ನು ಮುಟ್ಟಲಿರುವ ಚೀನಾ ಆನಂತರ ಹಂತಹಂತವಾಗಿ ಕುಸಿಯಲಿದೆ ಎಂದು ಆಥರ್ಿಕ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಚೀನಾದಲ್ಲಿ ವಯಸ್ಸಾದವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು ಯಾವ ಕಾಮರ್ಿಕ ಶಕ್ತಿಯ ಮೇಲೆ ಚೀನಾ ದೈತ್ಯಾಕಾರವಾಗಿ ಬೆಳೆದು ನಿಂತಿತ್ತೋ 2050ರ ವೇಳೆಗೆ ಅದೇ ಅವರಿಗೆ ಇಲ್ಲವಾಗಲಿದೆ. ಒಂದೆಡೆ ಉತ್ಪಾದನೆ ಕುಸಿದರೆ ಮತ್ತೊಂದೆಡೆ ತೆರಿಗೆ ಕಟ್ಟುವವರ ಸಂಖ್ಯೆಯೂ ಕಡಿಮೆಯಾಗಲಿದೆ. ಸಕರ್ಾರದ ಅನೇಕ ಯೋಜನೆಗಳಿಗೆ ಇದು ಗಂಭೀರವಾದ ಹೊಡೆತವನ್ನಂತೂ ಖಂಡಿತವಾಗಿಯೂ ಕೊಡಲಿದೆ. ಕಳೆದ 25 ವರ್ಷಗಳಿಂದ ಚೀನಾ ಹಾಕಿಕೊಂಡ ಯೋಜನೆಗಳಿಂದಾಗಿ ಅಲ್ಲಿ ಬಡತನ ನಿವಾರಣೆಯಾಗಿರುವುದಲ್ಲದೇ ಬಲುದೊಡ್ಡ ಉತ್ಪಾದಕ ರಾಷ್ಟ್ರವಾಗಿಯೂ ಅದು ಹೊರಹೊಮ್ಮಿದೆ. ಸಾಮಾನ್ಯ ಚೀನಿಯರ ಆದಾಯ ಹೆಚ್ಚಾಗಿರುವುದರಿಂದ ಆತ ಜಗತ್ತೆಲ್ಲಾ ತಿರುಗಾಡಲಿಕ್ಕೂ ಹೊರಟಿದ್ದಾನೆ. ಹೀಗಾಗಿ ಅನೇಕ ರಾಷ್ಟ್ರಗಳು ಚೀನಿಯರನ್ನೇ ನಂಬಿ ಕುಳಿತಿರುವುದರಲ್ಲೂ ಅಚ್ಚರಿ ಪಡಬೇಕಿಲ್ಲ. ಸುಮಾರು 60 ಕೋಟಿ ಚೀನಿಯರು ಜಾಗತಿಕ ಕಾಮರ್ಿಕ ಸಂಕುಲದ ಭಾಗವಾಗಿ ನಿಂತಿರುವುದಂತೂ ಎಂಥವನಿಗೂ ಗಾಬರಿ ಹುಟ್ಟಿಸುವ ಸಂಗತಿಯೇ. ಇಷ್ಟಕ್ಕೇ ಸುಮ್ಮನಾಗದ ಚೀನಾ ಕಳೆದ ಕೆಲವಾರು ದಶಕಗಳಲ್ಲಿ ತನ್ನ ಪ್ರವಾಸೋದ್ಯಮವನ್ನು ಹಿಗ್ಗಿಸಿಕೊಂಡು ಕುಳಿತಿದೆ. ಹೀಗಾಗಿ ಚೀನಾಕ್ಕೆ ಬರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಇಷ್ಟು ದಿನ ಅದರ ಆದಾಯ ವೃದ್ಧಿಗೆ ಮೂಲ ಕಾರಣವಾಗಿ ಮಾರ್ಪಟ್ಟಿತ್ತು.

4

ನರೇಂದ್ರಮೋದಿ ಪ್ರಧಾನಿಯಾದಾಗಿನಿಂದಲೂ ಚೀನಾದ ದೆಸೆ ಕೆಟ್ಟಿದೆ ಎಂದೇ ಹೇಳಬೇಕು. ಇಷ್ಟೂ ದಿನಗಳ ಕಾಲ ಜಗತ್ತಿನಲ್ಲಿ ತಮ್ಮ ಪ್ರಭಾವವನ್ನು ಮಂಡಿಸಲಾಗದೇ ಹೆಣಗಾಡುತ್ತಿದ್ದ ಭಾರತೀಯ ನಾಯಕರು 5 ವರ್ಷಗಳ ಕಾಲ ತಳ್ಳಿದರೆ ಸಾಕೆಂದು ಏದುಸಿರು ಬಿಟ್ಟು ಕುಳಿತಿರುತ್ತಿದ್ದರು. ಮೋದಿ ಹಾಗಲ್ಲ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಏಷಿಯಾದಲ್ಲಿ ಚೀನಾಕ್ಕೆ ಪ್ರಬಲ ಶಕ್ತಿ ತಾವೆಂದು ಜಗತ್ತಿಗೆ ನಂಬಿಕೆ ಬರುವಂತೆ ಮಾಡಿಬಿಟ್ಟಿದ್ದಾರೆ. ಚೀನಾವನ್ನು ಕಂಡರಾಗದೇ ನೇರವಾಗಿ ಎದುರಿಸಲೂ ಸಾಧ್ಯವಾಗದೇ ಹೆಣಗಾಡುತ್ತಿದ್ದವರೆಲ್ಲಾ ಭಾರತ ಬಲಾಢ್ಯವಾಗುತ್ತಿದ್ದಂತೆ ತಮ್ಮ ಅಂತರಂಗವನ್ನು ತೆರೆದಿಡುತ್ತಿದ್ದಾರೆ. ಚೀನಾ ರಾಷ್ಟ್ರಗಳನ್ನು ತನ್ನದಾಗಿಸಿಕೊಳ್ಳುವುದು ಸಾಲ ಕೊಡುವುದರ ಮೂಲಕ ಮತ್ತು ಆ ಸಾಲವನ್ನು ತೀರಿಸಲಾಗದೇ ಹೋದಾಗ ಆ ರಾಷ್ಟ್ರವನ್ನೇ ಲೂಟಿ ಮಾಡುವುದರ ಮೂಲಕ ಎಂಬ ಸತ್ಯ ಈಗ ಜಗತ್ತಿಗೆ ಹೊಸತೇನಲ್ಲ. ಅತ್ತ ಚೀನಾದ ವೇಗದ ಆಥರ್ಿಕ ಪ್ರಗತಿಯನ್ನು ಸಹಿಸದ ಪಶ್ಚಿಮದ ರಾಷ್ಟ್ರಗಳು ಸೂಕ್ತ ಸಮಯಕ್ಕಾಗಿ ಮತ್ತು ಏಷಿಯಾದ ಸಮರ್ಥ ನಾಯಕನಿಗಾಗಿ ಕಾಯುತ್ತಲೇ ಇದ್ದವು. ಇಸ್ರೇಲ್ಗೆ ತನ್ನ ಸಮಸ್ಯೆಯೇ ದೊಡ್ಡದಾಗಿದ್ದರೆ ಜಪಾನ್ ದ್ವೇಷವಿದ್ದರೂ ಅದನ್ನು ತೋರಲಾಗದೇ ಚಡಪಡಿಸುತ್ತಿತ್ತು. ಆಗ ಗದ್ದುಗೆಯೇರಿದ ಮೋದಿ ಮುಲಾಜಿಲ್ಲದೇ ಚೀನಾ ವಿರೋಧಿಗಳನ್ನೆಲ್ಲಾ ತನ್ನ ತೆಕ್ಕೆಗೆ ಸೆಳೆದುಕೊಂಡರು. ಚೀನಾದ ಪರವಾಗಿ ಕಾಣುತ್ತಿದ್ದ ನೆರೆಯವರನ್ನು ಸಾಮ, ದಾನ, ಭೇದಗಳ ಮೂಲಕ ಸೂಕ್ತವಾಗಿ ಎಚ್ಚರಿಸಿದರು. ಡೋಕ್ಲಾಂನಲ್ಲಿ ಚೀನಾವನ್ನು ಮಣಿಸಿದ ನಂತರ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದೆದುರು ಗುಟುರು ಹಾಕಿದ ನಂತರ ಏಷಿಯಾದ ಪ್ರಬಲ ರಾಷ್ಟ್ರ ತಾನೆಂದು ಭಾರತ ಜಗತ್ತಿನ ಮುಂದೆ ಎದೆ ತಟ್ಟಿಕೊಂಡು ಹೇಳಿಯಾಗಿತ್ತು. ಚೀನಾದ ಒನ್ ಬೆಲ್ಟ್ ಒನ್ ರೋಡ್ ವಿರೋಧಕ್ಕೆ ನಿಂತ ಭಾರತ ಚೀನಾದ ಕುರಿತಂತೆ ಏನೂ ಮಾತಾಡಲೇ ಇಲ್ಲ. ಬದಲಿಗೆ ಪಾಕಿಸ್ತಾನದ ವಿರುದ್ಧ ಜಾಗತಿಕ ಅಭಿಪ್ರಾಯ ಮೂಡುವಂತೆ ಮಾಡಿ ಚೀನಾ ಪಾಕಿಸ್ತಾನದ ಪರವಾಗಿ ನಿಲ್ಲದಂತೆ ವ್ಯವಸ್ಥಿತವಾಗಿ ಯೋಜನೆ ರೂಪಿಸಿತು.

ಅತ್ತ ಅಮೇರಿಕಾದ ಡೊನಾಲ್ಡ್ ಟ್ರಂಪ್ ಏರುತ್ತಿರುವ ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಚೀನಾದೊಂದಿಗೆ ವ್ಯಾಪಾರ ಯುದ್ಧಕ್ಕೆ ಇಳಿದದ್ದಲ್ಲದೇ ಭಾರತಕ್ಕೆ ಹೆಚ್ಚು-ಹೆಚ್ಚು ಬೆಂಬಲ ನೀಡಲಾರಂಭಿಸಿತು. ಮೋದಿಯವರ ವಿದೇಶ ಪ್ರವಾಸ ಮತ್ತು ಚಾಣಾಕ್ಷ ರಾಜನೀತಿ ಈಗ ಪ್ರಭಾವಿಯಾಗಿ ಕೆಲಸ ಮಾಡಲಾರಂಭಿಸಿತು. ಜಗತ್ತಿನ ಕ್ರುದ್ಧ ದೃಷ್ಟಿ ಚೀನಾದ ಮೇಲೆ ಬೀಳುತ್ತಿದ್ದಂತೆ ಚೀನಾದ ಮೌಲ್ಯ ಮಾರುಕಟ್ಟೆಯಲ್ಲಿ ಕಡಿಮೆಯಾಗುತ್ತಾ ಹೋಯ್ತು. ಅದಕ್ಕೆ ಸರಿಯಾಗಿ ಚೀನಾದ ಜಿಡಿಪಿ ಶೇಕಡಾ 5 ಕ್ಕಿಂತಲೂ ಕೆಳಗಿಳಿದರೆ ಭಾರತ ಶೇಕಡಾ 8ರ ಆಥರ್ಿಕ ದರ ವೃದ್ಧಿಯನ್ನು ತೋರಿಸಿತು. ಹಾಗಂತ ಭಾರತ ಚೀನಾದೊಂದಿಗೆ ಸಂಬಂಧವನ್ನೇನೂ ಕಡಿದುಕೊಂಡಿರಲಿಲ್ಲ. ಇಂದಿಗೂ ಭಾರತಕ್ಕೆ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಾನಿಕ್ ವಸ್ತುಗಳು ಬರುವುದು ಅಲ್ಲಿಂದಲೇ. ನಮ್ಮ ಅನೇಕ ಉತ್ಪಾದಕರಿಗೆ ಚೀನಾ ಅತ್ಯಂತ ಕಡಿಮೆ ಬೆಲೆಯಲ್ಲಿ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ. ಆದರೆ ಚೀನಾದ ಸ್ಪಧರ್ೆಯನ್ನು ಜಾಗತಿಕ ಮಟ್ಟದಲ್ಲಿ ಭಾರತದ ಸಾಫ್ಟ್ವೇರ್ ಉದ್ಯಮ ಮೆಟ್ಟಿ ನಿಲ್ಲುತ್ತಿದೆ. ಬರಲಿರುವ ದಿನಗಳಲ್ಲಿ ಚೀನಾಕ್ಕಿಂತಲೂ ವೇಗವಾದ ಅಭಿವೃದ್ಧಿಯನ್ನು ಸಾಧಿಸುವ ಕಲ್ಪನೆಯನ್ನು ಹೊತ್ತ ಮೋದಿ ಆರಂಭದಲ್ಲೇ ನೀತಿ ಆಯೋಗದ ಮುಂದೆ ಈ ಚಚರ್ೆಯನ್ನು ತಂದಾಗ ಆಟರ್ಿಫೀಶಿಯಲ್ ಇಂಟೆಲಿಜೆನ್ಸ್ನಲ್ಲಿ ಭಾರತ ಅಪರೂಪದ್ದನ್ನು ಸಾಧಿಸಬಹುದು ಎಂದು ನಿಶ್ಚಯಿಸಿತ್ತು. ಅದಕ್ಕೆ ಪೂರಕವಾಗಿಯೇ ಎಲ್ಲ ಪ್ರಯತ್ನಗಳನ್ನೂ ಆರಂಭಿಸಿದ ಸಕರ್ಾರ ಈಗ ಮಹತ್ವವಾದ ಸಾಧನೆಗೆ ದಾಪುಗಾಲನ್ನಿಡುತ್ತಿದೆ.

5

ಇಷ್ಟೇ ಅಲ್ಲ. ಜಾಗತಿಕ ಮಟ್ಟದಲ್ಲಿ ಭಾರತವೀಗ ಬೇರೆ ಯಾರೂ ಮುಟ್ಟಲಾರದ ಅನೇಕ ವಿಭಾಗಗಳಲ್ಲಿ ತನ್ನ ಸಾರ್ವಭೌಮತೆಯಿಂದಲೇ ಮೆರೆದಾಡುತ್ತಿದೆ. ಜಗತ್ತಿನ ಮೂಲೆ-ಮೂಲೆಗಳಲ್ಲಿ ಜನರಿಂದು ಯೋಗದ ಕುರಿತು ಮಾತನಾಡುತ್ತಿದ್ದಾರೆ. ಯೋಗೋದ್ಯಮವೊಂದೇ ಮುಂಬರುವ ದಿನಗಳಲ್ಲಿ ಬಿಲಿಯನ್ಗಟ್ಟಲೆ ಡಾಲರುಗಳ ವಹಿವಾಟು ನಡೆಸಿದರೆ ಅಚ್ಚರಿ ಪಡಬೇಕಿಲ್ಲ. ಅದಕ್ಕೆ ಸರಿಯಾಗಿ ಜಗತ್ತೆಲ್ಲಾ ಬಡತನದಿಂದ ಹೊರ ಬಂದ ನಂತರ ಮಾನಸಿಕ ತುಮುಲಗಳಿಗೆ ಆಹಾರವಾಗುತ್ತಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾಗಳಲ್ಲಿ ಇದು ವ್ಯಾಪಕವಾಗಿ ಕಂಡು ಬಂದ ಸಮಸ್ಯೆಯಾಗಿತ್ತು. ಜನ ಮಾನಸಿಕ ಖಿನ್ನತೆಗೆ ಒಳಗಾಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಇವೆಲ್ಲವೂ ಮಾಮೂಲೆನಿಸುತ್ತಿದೆ. ಇಂತಹ ಹೊತ್ತಲ್ಲೇ ಭಾರತ ತನ್ನ ಪ್ರಾಚೀನ ಪರಂಪರೆಯ ಪುನರುಜ್ಜೀವನದ ಮೂಲಕ ಜಗತ್ತಿಗೆ ಶಕ್ತಿ ತುಂಬುತ್ತಿದೆ. ಮೋದಿ ಅದನ್ನೂ ಕೂಡ ಬಲು ಎಚ್ಚರಿಕೆಯಿಂದಲೇ ನಿಭಾಯಿಸಿದರು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ತಾನು ಯಾವುದೇ ಧರ್ಮವನ್ನು ಪಾಲಿಸದವನು ಎಂದು ಹೇಳಿಕೊಳ್ಳುವ ತೆವಲಿಗೆ ಪ್ರತಿಯೊಬ್ಬರೂ ಸಿಲುಕಿಕೊಂಡಿದ್ದಾಗ ಮೋದಿ ತಾನು ಹಿಂದೂ ಎಂದು ಧೈರ್ಯವಾಗಿ ಹೇಳಿಕೊಂಡರು. ಜೊತೆಗೆ ವಿದೇಶದಿಂದ ಬಂದವರನ್ನು ಗಂಗಾರತಿಗೆ, ಮಂದಿರಗಳಿಗೆಲ್ಲಾ ಕರೆದುಕೊಂಡು ಹೋಗುವ ಮೂಲಕ ಈ ಪರಂಪರೆಯನ್ನು ಅವರೆಲ್ಲರ ಮುಂದೆ ಹರವಿಟ್ಟರು. ಇದು ಭಾರತದ ಮೂಲ ಸತ್ವ್ತದ ಕುರಿತಂತೆ ಜಗತ್ತು ಹೊರಳುವಂತೆ ಮಾಡಿತು. ಹೀಗಾಗಿಯೇ ಇಂದು ರಾಮಮಂದಿರದ ಕುರಿತಂತ ಚಚರ್ೆ ಹಿಂದೂ-ಮುಸ್ಲೀಂ ಕದನವಾಗಿ ಉಳಿದಿಲ್ಲ. ಹಿಂದೂ ಪರಂಪರೆಯ ಪುನರುಜ್ಜೀವನವೆಂದು ಜಾಗತಿಕ ಮಟ್ಟದಲ್ಲಿ ಚಚರ್ೆಯಾಗುತ್ತಿದೆ. ಇದು ವಿದೇಶಕ್ಕೆ ಹೋಗುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ, ರವಿಶಂಕರ್ ಗುರೂಜಿ, ಮಾತಾ ಅಮೃತಾನಂದಮಯಿಯಂಥವರಿಗೆ, ಜಗತ್ತಿನೆಲ್ಲೆಡೆ ಇರುವ ರಾಮಕೃಷ್ಣ ಮಿಷನ್ನಿಗೆ ಹೆಚ್ಚಿನ ಶಕ್ತಿ ತಂದುಕೊಟ್ಟಿದೆಯಲ್ಲದೇ ಭಾರತವನ್ನು ನೋಡುವ ಜಾಗತಿಕ ದೃಷ್ಟಿಕೋನವನ್ನು ಸರಿಯಾಗಿ ನಿರೂಪಿಸುವಂತೆ ಮಾಡಿದೆ. ಹಾಗಂತ ಭಾರತದಲ್ಲೇನೂ ಬದಲಾವಣೆ ಇಲ್ಲ ಎಂದುಕೊಳ್ಳಬೇಡಿ. ಜೀವನದುದ್ದಕ್ಕೂ ಸೆಕ್ಯುಲರ್ ಪಾಟರ್ಿ ಎಂದೇ ಹೇಳಿಕೊಂಡು ಬಂದಿದ್ದ ಕಾಂಗ್ರೆಸ್ಸು ತನ್ನ ತಾನು ಹಿಂದೂ ಎಂದುಕೊಳ್ಳುವುದಿರಲಿ ರಾಹುಲ್ ತಾನು ಬ್ರಾಹ್ಮಣನೆಂದು ಜನಿವಾರ ಹಾಕಿಕೊಂಡು ಗೋತ್ರವನ್ನೂ ಹೇಳಿದ್ದಾಯ್ತು. ಬ್ರಾಹ್ಮಣವಾದದ ಕುರಿತಂತೆ ಜೀವನದುದ್ದಕ್ಕೂ ವಿರೋಧಿಸಿಕೊಂಡು ಬಂದು ಕಲ್ಬುಗರ್ಿಯಲ್ಲಿರುವ ಮಂದಿರಗಳನ್ನೆಲ್ಲಾ ಬುದ್ಧ ಕೇಂದ್ರವನ್ನಾಗಿ ಮಾಡಬೇಕೆಂದು ಪ್ರಯತ್ನಿಸುತ್ತಿದ್ದ ಮಲ್ಲಿಕಾಜರ್ುನ್ ಖಗರ್ೆಯವರಿಗೆ ಪಾಪ ಅದೆಷ್ಟು ಆಘಾತವಾಗಿರಬೇಡ. ಅವರಿಗೇ ಅರಿವಿಲ್ಲದಂತೆ ಇಷ್ಟೂ ದಿನ ಅವರೊಂದು ಬ್ರಾಹ್ಮಣ ಪರಿವಾರದ ಜೀತ ಮಾಡಿಕೊಂಡು ಬಂದರಲ್ಲಾ. ದುಃಖವಾಗಬೇಕಾದ ಸಂಗತಿಯೇ. ಕಾಂಗ್ರೆಸ್ಸು ರಾಮಮಂದಿರದ ಚಚರ್ೆ ಬಂದಾಗ ವಿರೋಧಿಸಲಾಗದೇ ಚಡಪಡಿಸಿದ್ದು, ಮುಸಲ್ಮಾನರ ಮತಗಳನ್ನೇ ನೆಚ್ಚಿಕುಳಿತಿದ್ದ ಅಖಿಲೇಶ್ ಅಯೋಧ್ಯೆಯೆಂದು ಹೆಸರು ಬದಲಾಯಿಸಿದಾಗಲೂ ಅವಡುಗಚ್ಚಿ ಕುಳಿತಿದ್ದು ಇವೆಲ್ಲವೂ ಭಾರತದ ಪುನರುತ್ಥಾನದ ಸಂಕೇತವೇ. ಭಾರತ ಮೇಲೆದ್ದಿತೆಂದರೆ ಜಗತ್ತಿಗೆ ತೊಂದರೆ ಕೊಡುವ ದುಷ್ಟರ ಸದ್ದು ಅಡಗಲೇ ಬೇಕಲ್ಲವೇ. ಹೀಗಾಗಿಯೇ ಜಗತ್ತು ಹೊಸ ದಿಕ್ಕಿನೆಡೆಗೆ ಹೊರಳಿದಂತೆ ಭಾಸವಾಗುತ್ತಿರೋದು.

ಮೇಲ್ನೋಟಕ್ಕೆ ಎಲ್ಲಾ ಸಂಗತಿಗಳು ಭಾವನಾತ್ಮಕ ಎನಿಸಬಹುದು. ಆದರೆ ದೇಶವಿರೋಧೀ ಚಿಂತನೆಗಳು ಸಾಯುತ್ತಿರುವುದಂತೂ ಅಕ್ಷರಶಃ ಸತ್ಯ. ಮೊನ್ನೆ ಜೆಎನ್ಯುಗೆ ಕಮ್ಯುನಿಸ್ಟ್ ಪಾಟರ್ಿಯ ನಾಯಕ ಪ್ರಕಾಶ್ ಕಾರಟ್ ಹೋಗಿದ್ದಾಗ ಲೆಕ್ಕ ಹಾಕಿದರೆ 50 ಜನರಿರಲಿಲ್ಲ. ಸುಬ್ರಮಣಿಯನ್ ಸ್ವಾಮಿಯವರಿಗೆ ಕಿಕ್ಕಿರಿದು ಸೇರಿದ ಜನರಿಂದ ಸ್ವಾಗತ ದೊರೆತಿತ್ತು. ಅದರರ್ಥ ಇನ್ನು ಚೀನಾದ ಬೇಳೆ ಭಾರತದಲ್ಲಿ ಬೇಯಲಾರದು ಅಂತ. ಅತ್ತ ಪಾಕಿಸ್ತಾನದ ಸ್ಥಿತಿಯೂ ಚೆನ್ನಾಗೇನೂ ಇಲ್ಲ. ಸ್ವತಃ ಸೇನಾಧ್ಯಕ್ಷ ಭಾರತದೊಂದಿಗೆ ಮಾತನಾಡುವ ಬೇಡಿಕೆ ಮುಂದಿಟ್ಟು ಗೋಗರೆಯುವ ಹಂತಕ್ಕೆ ತಲುಪಿದ್ದಾನೆ. ಯುಎಇ ಮಿಶೆಲ್ ಅನ್ನು ಭಾರತಕ್ಕೆ ವಗರ್ಾಯಿಸಿದ ಮೇಲಂತೂ ಮುಸಲ್ಮಾನ ರಾಷ್ಟ್ರಗಳಲ್ಲಿ ಭಾರತದ ಕುರಿತಂತೆ ಯಾರೂ ಚಕಾರ ಎತ್ತಲಾರದ ಸ್ಥಿತಿ ತಲುಪಿದ್ದಾರೆ.

ಇದಕ್ಕೆ ಪೂರಕವೇನೋ ಎಂಬಂತೆ ಚೀನಾದಲ್ಲಿ ಭ್ರಷ್ಟಾಚಾರ ವಿರೋಧೀ ಪ್ರಯತ್ನಗಳನ್ನು ಅಧ್ಯಕ್ಷರು ಕೈಗೊಂಡ ನಂತರ ಅನೇಕ ಅಧಿಕಾರಿಗಳು ಸಿಕ್ಕಿ ಬೀಳುತ್ತಿದ್ದಾರಲ್ಲದೇ ಒತ್ತಡವನ್ನು ತಾಳಿಕೊಳ್ಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚೀನಾ ಜ್ವಾಲಾಮುಖಿಯ ಮೇಲಿದೆ. ಭಾರತ ಅಮೃತ ಕಲಶ ಹಿಡಿದು ನಿಂತಿದೆ. ತಡವಾಗಿಯಾದರೂ ಸರಿ ಭಾರತ ಗೆಲ್ಲುತ್ತಿದೆ!

Comments are closed.