ವಿಭಾಗಗಳು

ಸುದ್ದಿಪತ್ರ


 

ನಿತ್ಯದ ಬದುಕಿನಲ್ಲೂ ನ್ಯಾಯಾಲಯವೇಕೆ ಮೂಗು ತೂರಿಸುತ್ತದೆ?!

ತೀರಾ ಇತ್ತೀಚೆಗೆ ಕೋರೆಂಗಾವ್ ಕೇಸಿನಲ್ಲಿ ರಾಷ್ಟ್ರವನ್ನು ಮೇಲ್ವರ್ಗ ಮತ್ತು ದಲಿತ ಎಂಬ ಹೆಸರಿನಲ್ಲಿ ತುಂಡರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆಂದು ಆರೋಪಿಸಿ ಕೆಲವು ಅರ್ಬನ್ ನಕ್ಸಲರನ್ನು ಬಂಧಿಸಿದಾಗ ಇದೇ ನ್ಯಾಯಾಲಯ ಪ್ರತಿಭಟನೆ ಪ್ರಜಾಪ್ರಭುತ್ವದ ಸ್ವಾಸ್ಥ್ಯಕ್ಕೆ ಅತ್ಯಂತ ಅಗತ್ಯ ಈ ಪ್ರತಿಭಟನೆಯ ದನಿಗಳನ್ನು ಅಡಗಿಸುವಂತಿಲ್ಲ ಎಂದು ಸಕರ್ಾರಕ್ಕೆ ಎಚ್ಚರಿಕೆ ಕೊಟ್ಟಿತು.

ಭಾರತೀಯ ನ್ಯಾಯ ಪರಂಪರೆ ಇಂಥದ್ದೊಂದು ಕೆಟ್ಟ ಪರಿಸ್ಥಿತಿಯ ಮೂಲಕ ಹಾದು ಹೋಗಬಹುದೆಂದು ಯಾರೊಬ್ಬರೂ ಎಣಿಸಿರಲಿಲ್ಲ. ನ್ಯಾಯದ ತಕ್ಕಡಿ ತೂಗಾಡುತ್ತಿದೆ ಎಂದೆನಿಸುತ್ತಿದೆ. ಒಂದು ವರ್ಗವನ್ನು ಓಲೈಸುವ ಜಿದ್ದಿಗೆ ನ್ಯಾಯಾಲಯ ಬಿದ್ದುಬಿಟ್ಟಿದೆಯೇನೋ ಎನಿಸುತ್ತಿದೆ. ಶಾಸಕಾಂಗ, ಕಾಯರ್ಾಂಗಗಳು ತಮ್ಮ ವ್ಯಾಪ್ತಿಯನ್ನು ಮರೆತು ಜನವಿರೋಧಿಯಾಗಿ ವತರ್ಿಸುವಾಗ ನ್ಯಾಯಾಂಗ ಇಬ್ಬರಿಗೂ ಚಾಟಿ ಬೀಸಿ ಜನರ ಬದುಕನ್ನು ನೆಮ್ಮದಿಯಾಗುವಂತೆ ರೂಪಿಸುವ ಹೊಣೆಗಾರಿಕೆ ಹೊಂದಿದೆ ಎಂದು ನಾವೆಲ್ಲರೂ ಬಾಲ್ಯದಲ್ಲಿ ಪಠ್ಯಪುಸ್ತಕಗಳಲ್ಲಿ ಓದಿದ್ದೆವು. ನಾವು ಓದಿದ್ದಕ್ಕೂ ನಡೆಯುವುದಕ್ಕೂ ತಾಳೆಯೇ ಆಗುತ್ತಿಲ್ಲ. ಕಳೆದ ಕೆಲವಾರು ತಿಂಗಳುಗಳಿಂದ ನ್ಯಾಯಾಲಯಗಳ ತೀಪರ್ು ಕೆಲವರಿಗೆ ಮಾತ್ರ ಸಿಗುತ್ತಿರುವ ವಿಶೇಷ ಸವಲತ್ತುಗಳು ಇವೆಲ್ಲವುಗಳನ್ನು ಕಂಡಾಗ ಎಲ್ಲೋ ಹಾದಿ ತಪ್ಪುತ್ತಿರುವ ಹೆದರಿಕೆ ನಿಸ್ಸಂಶಯವಾಗಿಯೂ ಉಂಟಾಗುತ್ತಿದೆ.

6

ಕೆಲವೇ ತಿಂಗಳುಗಳ ಹಿಂದೆ ಒಂದಷ್ಟು ನ್ಯಾಯಮೂತರ್ಿಗಳು ಸುಪ್ರೀಂಕೋಟರ್ಿನ ಮುಖ್ಯ ನ್ಯಾಯಾಧೀಶರ ವಿರುದ್ಧ ಪತ್ರಿಕಾಗೋಷ್ಠಿಯನ್ನೇ ನಡೆಸಿ ಜಗತ್ತೇ ಅಚ್ಚರಿಗೊಳಗಾಗುವಂತೆ ಮಾಡಿಬಿಟ್ಟಿದ್ದರು. ಇದಕ್ಕಾಗಿಯೇ ಕಾಯುತ್ತಿದ್ದ ಕೆಲವು ಮೋದಿ ವಿರೋಧಿ ಪತ್ರಕರ್ತರು ಮೋದಿಯ ಅವಧಿಯಲ್ಲಿ ನ್ಯಾಯಾಂಗ ಪೂರ್ಣ ಹಾಳುಗೊಂಡಿದೆ ಎಂದು ಕಥೆ ಹಬ್ಬಿಸಿದರು. ಈ ನ್ಯಾಯಾಧೀಶರುಗಳೆನಿಸಿಕೊಂಡವರೂ ಕೂಡ ಅದಕ್ಕೆ ಪೂರಕವಾಗಿಯೇ ಪ್ರತಿಸ್ಪಂದಿಸಿ ಮುಖ್ಯ ನ್ಯಾಯಮೂತರ್ಿಗಳ ವಿರುದ್ಧ ವಾಗ್ದಂಡನೆಗೆ ಪ್ರೇರೇಪಣೆಯನ್ನೂ ಕೊಟ್ಟಿದ್ದರು. ಆದರೆ ನರೇಂದ್ರಮೋದಿಯವರ ದೂರದೃಷ್ಟಿಯೆದುರು ಕಾಂಗ್ರೆಸ್ಸಿನ ಅಸಂವೈಧಾನಿಕ ಆಟ ನಡೆಯಲೇ ಇಲ್ಲ. ಇಂಪೀಚ್ಮೆಂಟ್ ಹೋದಷ್ಟೇ ವೇಗವಾಗಿ ಮರಳಿ ಬಂತು. ಆನಂತರ ನ್ಯಾಯಾಲಯ ತೆಗೆದುಕೊಂಡ ಕೆಲವೊಂದು ನಿರ್ಣಯಗಳು ಅಚ್ಚರಿ ಹುಟ್ಟಿಸುವಂತಿದ್ದವು. ತೀರಾ ಇತ್ತೀಚೆಗೆ ಕೋರೆಂಗಾವ್ ಕೇಸಿನಲ್ಲಿ ರಾಷ್ಟ್ರವನ್ನು ಮೇಲ್ವರ್ಗ ಮತ್ತು ದಲಿತ ಎಂಬ ಹೆಸರಿನಲ್ಲಿ ತುಂಡರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆಂದು ಆರೋಪಿಸಿ ಕೆಲವು ಅರ್ಬನ್ ನಕ್ಸಲರನ್ನು ಬಂಧಿಸಿದಾಗ ಇದೇ ನ್ಯಾಯಾಲಯ ಪ್ರತಿಭಟನೆ ಪ್ರಜಾಪ್ರಭುತ್ವದ ಸ್ವಾಸ್ಥ್ಯಕ್ಕೆ ಅತ್ಯಂತ ಅಗತ್ಯ ಈ ಪ್ರತಿಭಟನೆಯ ದನಿಗಳನ್ನು ಅಡಗಿಸುವಂತಿಲ್ಲ ಎಂದು ಸಕರ್ಾರಕ್ಕೆ ಎಚ್ಚರಿಕೆ ಕೊಟ್ಟಿತು. ಮುಂದೆ ಇದೇ ಸುಪ್ರೀಂಕೋಟರ್ು ದೀಪಾವಳಿಯಂದು ಪಟಾಕಿ ಹೊಡೆಯುವುದೇ ತಪ್ಪು ಎಂಬರ್ಥದ ನಿರ್ಣಯವನ್ನು ಕೊಟ್ಟಿತು. ಅಷ್ಟೇ ಅಲ್ಲ, ಪಟಾಕಿ ಹೊಡೆಯಲು ರಾತ್ರಿ 8 ರಿಂದ 10 ವರೆಗಿನ ಸಮಯ ನಿಗದಿ ಪಡಿಸಿತು. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸಕರ್ಾರಗಳಿಗೆ ಆದೇಶ ಬೇರೆ. ಈಗ ನ್ಯಾಯಾಲಯದ ಈ ನಿರ್ಣಯಕ್ಕೆ ಜನ ತಮ್ಮ ಅಸಮ್ಮತಿಯನ್ನು ಸೂಚಿಸುವುದಾದರೂ ಹೇಗೆ?! ಗಾಂಧೀಜಿಯ ಕರ ನಿರಾಕರಣೆಯ ಮಾರ್ಗ; ಅಥವಾ ಅವರೇ ಹೇಳಿದ ಸತ್ಯಾಗ್ರಹದ ಪಥ? ಈ ಅಸಮ್ಮತಿ ನ್ಯಾಯಾಲಯದ ನಿರ್ಣಯವನ್ನು ವಿರೋಧಿಸಿ ಬರುವುದು ತಾನೇ?! ಹೀಗಾಗಿಯೇ ಅನೇಕ ಕಡೆಗಳಲ್ಲಿ ನ್ಯಾಯಾಲಯದ ಆದೇಶದ ಅರಿವಿದ್ದೂ ಪಟಾಕಿ ಹೊಡೆಯುವವರು ನಿಂತಿರಲಿಲ್ಲ. ಹಿಂದೂ ವಿರೋಧಿ ಚಿಂತನೆಗಳನ್ನೇ ಮೈವೆತ್ತಿರುವ ಕೆಲವು ಪತ್ರಕರ್ತರ ಮುಖಗಳನ್ನು ನೋಡಬೇಕಿತ್ತು. ಸಿಎನ್ಎನ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ಕಾನೂನು ಮುರಿದು ಪಟಾಕಿ ಸಿಡಿಸುತ್ತಿರುವವರ ವಿಡಿಯೊ ಕಳಿಸಿಕೊಟ್ಟರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನಾವು ಯತ್ನಿಸುತ್ತೇವೆ ಎಂದುಬಿಟ್ಟಿತು. ಜನರ ಅಸಮ್ಮತಿಯ ಮುಖವಾಣಿ ಆಗಬೇಕಿದ್ದ ಮಾಧ್ಯಮ ಹಿಂದೂವಿರೋಧದ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿ ಹೀಗೆ ಪ್ರತಿಕ್ರಿಯಿಸಿದಾಗ ಜನ ಕೊಟ್ಟ ಉತ್ತರವೇನು ಗೊತ್ತೇ? ಅವರು ಬೇರೆಯಾರದ್ದೋ ವಿಡಿಯೊಗಳನ್ನು ಕದ್ದುಮುಚ್ಚಿ ಸೆರೆ ಹಿಡಿದು ಕಳಿಸಿಕೊಡಲಿಲ್ಲ. ಬದಲಿಗೆ ತಾವು ತಾವೇ ಪಟಾಕಿ ಸಿಡಿಸುವ ವಿಡಿಯೊಗಳನ್ನು ಟಿವಿ ಕೇಂದ್ರಕ್ಕೆ ಪಟಾಕಿ ಸರಗಳಂತೆಯೇ ಕಳಿಸಿಕೊಟ್ಟರು. ಸಿಎನ್ಎನ್ ಮುಖಭಂಗವಾದಂತೆನಿಸಿ ಪ್ರತಿಕ್ರಿಯೆ ಮಾಡುವುದನ್ನೇ ನಿಲ್ಲಿಸಿಬಿಟ್ಟಿತು. ಕಾನೂನಿನ ಆದೇಶವನ್ನು ಪಾಲಿಸಲು ಕಾತರಿಸುತ್ತಿದ್ದೇವೆ ಎನ್ನುವಂತೆ ಪಶ್ಚಿಮ ಬಂಗಾಳ ಮತ್ತು ದೆಹಲಿ ಪ್ರತಿಕ್ರಿಯಿಸಿತು. ಅಲ್ಲಿ ಪೊಲೀಸರು ಜನಸಾಮಾನ್ಯರ ಮೇಲೆ ಬರ್ಬರವಾಗಿ ಮುಗಿಬಿದ್ದರು. ಬಾಲಕನೊಬ್ಬ ಪಟಾಕಿ ಹೊಡೆದ ಎನ್ನುವ ಕಾರಣಕ್ಕಾಗಿ ಅವರ ತಂದೆಯನ್ನು ಅಪರಾಧಿ ಎಂದು ಭಾವಿಸಿ ಒಳಕ್ಕೆ ತಳ್ಳಲಾಯ್ತು. ಅದೇ ಪೊಲೀಸರು ನಿರ್ಭಯಾಳ ಮೇಲೆ ಅತ್ಯಾಚಾರ ಮಾಡಿದ ಹುಡುಗ ಬಾಲಾಪರಾಧಿಯಾಗಿದ್ದನೆಂಬ ಕಾರಣಕ್ಕೆ ಅವರಪ್ಪನಿಗೇನು ಶಿಕ್ಷೆ ಕೊಡಲಿಲ್ಲ. ನ್ಯಾಯಾಲಯದ ಆದೇಶವನ್ನು ಆಚರಣೆಗೆ ತರಲು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲೆನೆಂದು ಬಾಯಿ ಬಡಿದುಕೊಂಡ ಮಮತಾ ಬ್ಯಾನಜರ್ಿ ಮಸೀದಿಗಳ ಅಜಾನ್ ಕೂಗಿಗೂ ನಿಷೇಧವಿದೆ ಎಂಬುದನ್ನು ಮರೆತೇಬಿಟ್ಟಿದ್ದರು.

ಒಡಿಸ್ಸಾದ ಕೊಣಾರ್ಕ ದೇವಾಲಯದಲ್ಲಿ ವ್ಯಂಗ್ಯಮಿಶ್ರಿತ ದನಿಯ ವಿಡಿಯೊ ಮಾಡಿದ್ದಕ್ಕಾಗಿ ಅಯ್ಯರ್ ಅನ್ನು ವಾರಗಳ ಕಾಲ ಜಾಮೀನು ಕೊಡದೇ ಜೈಲಿಗೆ ತಳ್ಳಲಾಗಿತ್ತು. ಆಗೆಲ್ಲಾ ನ್ಯಾಯಾಲಯದ್ದು ದಿವ್ಯ ಮೌನ. ಆದರೆ ಶಬರಿಮಲೆಯ ವಿಚಾರದಲ್ಲಿ ಜನ ವಿರೋಧಿ ತೀರ್ಪನ್ನು ಕೊಟ್ಟ ನ್ಯಾಯಾಲಯ ಭಕ್ತರನ್ನು ಪೊಲೀಸರು ಬಂಧಿಸಿದಾಗ ಅವರಿಗೆ ಜಾಮೀನು ಕೊಡಲು ನಿರಾಕರಿಸಿ ಹೇಳಿದ ಮಾತೇನು ಗೊತ್ತೇ? ಇವರಿಗೆ ಜಾಮೀನು ಕೊಟ್ಟರೆ ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನಿಸಿದಂತಾಗುತ್ತದೆ ಅಂತ. ನನ್ ಮೇಲೆ ಅತ್ಯಾಚಾರಗೈದು ಜಗತ್ತಿನಾದ್ಯಂತ ಸದ್ದು ಮಾಡಿದ ಬಿಷಪ್ ಫ್ರಾಂಕೊಗೆ ಜಾಮೀನು ನೀಡಿದ ನ್ಯಾಯಾಲಯ ಸಮಾಜಕ್ಕೆ ಭಾರಿ ಒಳ್ಳೆಯ ಸಂದೇಶವನ್ನೇ ಕೊಟ್ಟಿದೆ. ಮೆಚ್ಚಬೇಕಾದ್ದೇ! ಹಾಗಂತ ಈ ಪ್ರಶ್ನೆಗಳನ್ನೆಲ್ಲಾ ಕೇಳಿದರೆ ನನ್ನದ್ದ್ದೂ ನ್ಯಾಯಾಂಗ ನಿಂದನೆಯೇ. ಅದಾಗಲೇ ಹೀಗೆ ಸದ್ದು ಮಾಡಿದವರಿಗೆ ನ್ಯಾಯಾಂಗ ನಿಂದನೆಯ ಕೇಸುಗಳು ಬಿದ್ದಾಗಿವೆ. ವಿವೇಕ್ ಅಗ್ನಿಹೋತ್ರಿ ಮತ್ತು ಗುರುಮೂತರ್ಿಯವರು ನ್ಯಾಯಾಲಯದೆದುರು ಗೋಗರಿಯಬೇಕಾದ ದೈನೇಸಿ ಸ್ಥಿತಿಗೆ ಬಂದುಬಿಟ್ಟಿದ್ದಾರೆ.

7

ಶಬರಿಮಲೆ ಸ್ತ್ರೀ ಪ್ರವೇಶದ ನಿಧರ್ಾರ ಹಿಂದೂ ಸಂತರು ತೆಗೆದುಕೊಳ್ಳಬೇಕಾಗಿರುವಂಥದ್ದು. ಅದು ಪರಂಪರೆ, ನಂಬಿಕೆಗಳಿಗೆ ಕಾಲಕ್ಕೆ ತಕ್ಕಂತೆ ತರಬೇಕಾದ ಸೂಕ್ಷ್ಮ ಬದಲಾವಣೆ. ಇವುಗಳ ಮೇಲೆ ನಂಬಿಕೆಯೇ ಇಲ್ಲದ ವ್ಯಕ್ತಿಗಳು ಅದರ ಕುರಿತಂತೆ ನಿರ್ಣಯ ಕೈಗೊಳ್ಳುವುದು ಅಚ್ಚರಿ ತರುವಂಥದ್ದು. ದೇಶದಾದ್ಯಂತ ಜಗತ್ತಿನಾದ್ಯಂತ ಇದಕ್ಕೆ ಪ್ರತಿಭಟನೆ ನಡೆದು ಜನಸ್ಪಂದನೆ ವ್ಯಕ್ತವಾದೊಡನೆ ಅವರು ನ್ಯಾಯಾಂಗ ನಿಂದನೆಗೆ ನಿಂತದ್ದು ಎಂದು ಭಾವಿಸಿದ್ದೇ ವಿಪಯರ್ಾಸ. ಬದಲಿಗೆ ಅವರೆಲ್ಲರೂ ಶತ-ಶತಮಾನಗಳಿಂದ ನಂಬಿಕೊಂಡು ಬಂದಿದ್ದ ಸಂಗತಿಗಳನ್ನು ಮುಂದಿನ ಪೀಳಿಗೆಗೆ ವಗರ್ಾಯಿಸಲೆಂದೇ ಹಠ ತೊಟ್ಟು ನಿಂತಿರೋದು. ಇಷ್ಟು ಪ್ರತಿಭಟನೆಯ ನಂತರವೂ ರಾಮಜನ್ಮಭೂಮಿ ವಿವಾದಕ್ಕೆ ಸುಪ್ರೀಂಕೋಟರ್ು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇನು? ವಿಚಾರಣೆಯನ್ನು ಸುಖಾ ಸುಮ್ಮನೆ ಮುಂದೂಡುವ ಮೂಲಕ. ಅರ್ಬನ್ ನಕ್ಸಲರ ವಿಚಾರಣೆಯನ್ನು ಮತ್ತು ಸೆಲೆಬ್ರಿಟಿಗಳಿಗೆ ಸಂಬಂಧ ಪಟ್ಟ ವಿಚಾರಣೆಯನ್ನು ಅರ್ಧ ರಾತ್ರಿಯಾದರೂ ಕೈಗೆತ್ತಿಕೊಳ್ಳುವ ನ್ಯಾಯಾಲಯಗಳು ರಾಮಜನ್ಮಭೂಮಿ ವಿಚಾರವಾಗಿ ನಿಚ್ಚಳವಾಗಿರುವ ಸಂಗತಿಯ ಕುರಿತಂತೆ ಮಾತನಾಡಲು ಹೆದರುತ್ತಿರುವುದು ಏಕೆ? ಮುಸಲ್ಮಾನರ ಆಕ್ರೋಶ ಬಯಲಿಗೆ ಬರುವುದು ಎಂತಲೋ ಅಥವಾ ಹಿಂದೂಗಳು ನಾಲ್ಕು ಶತಕಗಳಿಂದಲೇ ರಾಮಮಂದಿರಕ್ಕಾಗಿ ಕಾದಿದ್ದಾರೆ. ಇನ್ನೂ ಬೇಕಿದ್ದರೆ ಕಾಯುತ್ತಾರೆ ಎಂಬ ಧಾಷ್ಟ್ರ್ಯದಿಂದಲೋ. ಈ ಪ್ರಶ್ನೆಗೆ ಉತ್ತರ ಹುಡುಕಲಾಗಲಿಲ್ಲವೆಂದರೆ ಬರಲಿರುವ ದಿನಗಳು ಬಲು ಘೋರವಾಗಲಿವೆ.

8

ಕಳೆದ 200 ವರ್ಷಗಳಲ್ಲಿ ಬ್ರಿಟೀಷರು ಮಾಡಿದ ದೊಡ್ಡ ಸಾಧನೆಯೆಂದರೆ ಹಿಂದೂಧಮರ್ೀಯರನ್ನು ಜೊತೆಗೆ ನಿಲ್ಲದಂತೆ ಚೂರು-ಚೂರು ಮಾಡಿದ್ದು. ನಾವಿಂದು ಜಾತಿಗಳಲ್ಲಿ ಒಡೆದು ಹೋಗಿದ್ದೇವೆ. ನಾವಿಂದು ಆಚಾರ್ಯರುಗಳ ಹೆಸರುಗಳಲ್ಲಿ ನಮ್ಮ ಪಂಥವನ್ನು ಬೇರ್ಪಡಿಸಿಕೊಂಡಿದ್ದೇವೆ. ಭಾಷೆ-ಸಂಸ್ಕೃತಿಯ ಆಧಾರವಾಗಿಯೂ ಒಡೆದು ಹೋಗಿದ್ದೇವೆ. ಕನರ್ಾಟಕ-ತಮಿಳುನಾಡಿನ ಗಡಿ ತಗಾದೆ ನಡೆದಾಗ ಎರಡೂ ಕಡೆಯ ಹಿಂದೂಗಳು ಭರ್ಜರಿಯಾಗಿಯೇ ಕಿತ್ತಾಡುತ್ತಾರೆ. ಮುಸಲ್ಮಾನರು, ಕ್ರಿಶ್ಚಿಯನ್ನರು ಈ ಬಗೆಯ ಹೋರಾಟಕ್ಕೆಂದು ಬರುವುದೇ ಇಲ್ಲ. ಅವರಿಗೆ ತಮ್ಮ ಮತ ಉಳಿದದ್ದೆಲ್ಲಕ್ಕಿಂತಲೂ ದೊಡ್ಡದ್ದು. ಈ ಬಗೆಯ ಮತಾಂಧತೆ ಒಳ್ಳೆಯದ್ದೋ ಕೆಟ್ಟದ್ದೋ ಕಾಲವೇ ಹೇಳಬೇಕು. ಆದರೆ ಸದ್ಯಕ್ಕಂತೂ ಮುಸಲ್ಮಾನರಿಗೆ, ಕ್ರಿಶ್ಚಿಯನ್ನರಿಗೆ ಅದು ಲಾಭದಾಯಕವಾಗಿದ್ದರೆ ಈ ಮತಾಂಧತೆ ಇಲ್ಲದಿರುವುದರಿಂದಲೇ ಹಿಂದೂ ಅಕ್ಷರಶಃ ಎಲ್ಲರಿಗಿಂತಲೂ ಹಿಂದಾಗಿಬಿಟ್ಟಿದ್ದಾನೆ. ಈ ಎಲ್ಲಾ ಹಿನ್ನೆಲೆಯಲ್ಲಿಯೇ ರಾಮಮಂದಿರ ಅತ್ಯಗತ್ಯ ಎನಿಸೋದು. ಒಮ್ಮೆ ರಾಮಮಂದಿರ ನಿಮರ್ಾಣವಾಯಿತೆಂದರೆ ಅದು ಹಿಂದೂ ಸಮಾಜದ ಪುನರುತ್ಥಾನವಾದಂತೆಯೇ. ರಾಮಮಂದಿರದ ಹೆಸರೆತ್ತಿದಾಗಿನಿಂದಲೇ ಹಿಂದೂಗಳು ಒಗ್ಗಟ್ಟಾಗಿರುವ ಪರಿ ಎಷ್ಟು ವ್ಯಾಪಕವಾಗಿದೆ ನೋಡಿ. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ತಾನು ಟಿಪ್ಪು ಜಯಂತಿಗೆ ಹೋಗಲಾರೆ ಎಂದುಬಿಟ್ಟಿದ್ದಾರೆ. ಸಕರ್ಾರಿ ಕಾರ್ಯಕ್ರಮವೊಂದಕ್ಕೆ ಮುಖ್ಯಮಂತ್ರಿಯೇ ಬರುವುದಿಲ್ಲವೆನ್ನುತ್ತಿದ್ದಾರೆಂದರೆ ಹಿಂದೂ ವೋಟು ಕಳೆದುಕೊಳ್ಳುವ ಭೀತಿ ಹೇಗೆ ಬೆಳೆದು ನಿಂತಿರಬೇಕು ಯೋಚಿಸಿ. ಶಬರಿಮಲೆ ಇರಲಿ, ಪಟಾಕಿ ಸಿಡಿಸುವ ಕುರಿತ ನಿರ್ಣಯವೇ ಇರಲಿ ಇವೆಲ್ಲವೂ ಜಾತಿ-ಮತ-ಪಂಥಗಳನ್ನು ಮರೆತು ಹಿಂದೂವನ್ನು ಒಗ್ಗಟ್ಟಾಗಿಸುವಲ್ಲಿ ಸಹಾಯ ಮಾಡಿವೆ. ಇನ್ನೀಗ ರಾಮನ ಸರದಿ.

Comments are closed.