ವಿಭಾಗಗಳು

ಸುದ್ದಿಪತ್ರ


 

ನೋಟಾ ಒತ್ತುವ ಮುನ್ನ ಒಮ್ಮೆ ಆಲೋಚಿಸಿ!

ಅರುಂಧತಿರಾಯ್ ಕಾಂಗ್ರೆಸ್ಸಿನ ರಕ್ಷಣೆಗೆ ಧಾವಿಸುವ ಪರಿ ಇಡಿಯ ಸಂದರ್ಶನದಲ್ಲಿ ಎದ್ದೆದ್ದು ತೋರುತ್ತದೆ. ನರೇಂದ್ರಮೋದಿ ಸಕರ್ಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದಿರುವುದನ್ನು ಆಕೆಯಿಂದ ಜೀಣರ್ಿಸಿಕೊಳ್ಳಲಾಗುತ್ತಿಲ್ಲ. ಭ್ರಷ್ಟಾಚಾರವೆನ್ನುವುದು ಹಣಕಾಸಿನ ವಹಿವಾಟಿಗೆ ಸಂಬಂಧಪಟ್ಟಿದ್ದೇ ಅಲ್ಲ, ಅದು ಮಾನಸಿಕತೆಗೆ ಸಂಬಂಧಿಸಿದ್ದು ಎಂಬುದು ಆಕೆಯ ಅಂಬೋಣ.

ಅರುಂಧತಿ ರಾಯ್ ಕರಣ್ ಥಾಪರ್ಗೆ ಸಂದರ್ಶನ ನೀಡಿದ್ದಾಳೆ. ನಮ್ಮಲ್ಲಿ ಬಹುತೇಕರಿಗೆ ಇವರಿಬ್ಬರನ್ನು ಕಂಡರೂ ಆಗುವುದಿಲ್ಲ. ಆದರೂ ಅಪ್ಫ್ರಂಟ್ ಎಂಬ ಈ ಸಂದರ್ಶನವನ್ನು ನೋಡಲೇಬೇಕು. ಏಕೆಂದರೆ ಸಂದರ್ಶನ ಮುಗಿಯುವ ವೇಳೆಗೆ ನರೇಂದ್ರಮೋದಿಗೆ ವೋಟು ಏಕೆ ಹಾಕಬೇಕೆಂಬುದು ನಿಚ್ಚಳವಾಗಿಬಿಡುತ್ತದೆ. ಬುದ್ಧಿಜೀವಿಗಳೆಲ್ಲರ ಆಲೋಚನಾ ಶೈಲಿಯೂ ಒಂದೇ ಬಗೆಯದ್ದು ಎಂಬುದಕ್ಕೆ ಈ ಸಂದರ್ಶನ ಸ್ಪಷ್ಟವಾದ ಉದಾಹರಣೆಯಾಗಿ ನಿಲ್ಲುತ್ತದೆ!

Indian writer and political activist Arundhati Roy

ಮೊದಲಿಗೆ ಅರುಂಧತಿ ರಾಯ್ ಸುಜೆನ್ನಾ ಅರುಂಧತಿ ರಾಯ್ ಎಂಬ ಮತಾಂತರಿತ ಕ್ರಿಶ್ಚಿಯನ್ ಮಹಿಳೆ ಎಂಬುದನ್ನು ಮರೆಯಬಾರದು. ವೈಚಾರಿಕವಾಗಿ ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತಳಾದವಳಲ್ಲದೇ ತಿಹಾರದ ಜೈಲಿನಲ್ಲಿ ಕೊಳೆಯುತ್ತಿರುವ ಜಮ್ಮು-ಕಾಶ್ಮೀರ್ ಲಿಬರೇಷನ್ ಫ್ರಂಟ್ನ ಯಾಸಿನ್ ಮಲಿಕ್ನ ಆಪ್ತೆಯೂ ಹೌದು. ಆಗಾಗ ಕಾಶ್ಮೀರ ಭಾರತಕ್ಕೆ ಸೇರಿದ್ದಲ್ಲ, ಅದನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವುದೊಳಿತು ಎಂದು ಹೇಳಿಕೆ ಕೊಡುತ್ತಾ ರಾಷ್ಟ್ರವಾದಿಗಳ ಕೆಂಗಣ್ಣಿಗೆ ಕಾರಣವಾಗುವವಳೂ ಈಕೆಯೇ! ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಎಡಪಂಥೀಯ ಮಾವೋವಾದ, ಇಸ್ಲಾಂ ಉಗ್ರವಾದ ಮತ್ತು ಕ್ರಿಶ್ಚಿಯನ್ನರ ನಾಶವಾದ ಇವೆಲ್ಲವುಗಳನ್ನು ಒಳಗೊಂಡಿರುವ ಏಕಮಾತ್ರ ಜೀವ. ಆಕೆಗೆ ಸಹಜವಾಗಿಯೇ ಈ ಐದು ವರ್ಷಗಳ ಸಕರ್ಾರ ಸಾಕಷ್ಟು ಕಿರಿಕಿರಿ ಉಂಟುಮಾಡಿದೆ. ನರೇಂದ್ರಮೋದಿಯ ಈ ಸಕರ್ಾರ ಅವಳಿಗೆ ಭಾಜಪದ ಸಕರ್ಾರ ಎನಿಸುವುದಕ್ಕಿಂತ ಆರ್ಎಸ್ಎಸ್ ನಡೆಸುವ ಸಕರ್ಾರ ಎಂಬ ಕಲ್ಪನೆಯಿದೆ. ನರೇಂದ್ರಮೋದಿಯನ್ನು ಆರ್ಎಸ್ಎಸ್ನ ಆದರ್ಶಗಳ ಮುಖವಾಡವೆಂದು ಬಿಂಬಿಸಿ ಫ್ಯಾಸಿಸ್ಟ್ ಎಂದು ಕರೆದು ಹಿಟ್ಲರಿಗೆ ಹೋಲಿಸುವಲ್ಲಿ ಆಕೆ ಸುಖಿಸುತ್ತಾಳೆ. ಮೋದಿ ಯಾಕೆ ಫ್ಯಾಸಿಸ್ಟ್ ಎಂಬ ಪ್ರಶ್ನೆಗೆ ಆಕೆಯ ಬಳಿ ಉತ್ತರವಿಲ್ಲ. ಮೋದಿ ಹಿಂದೂ ರಾಷ್ಟ್ರೀಯವಾದವನ್ನು ಜಾಗೃತಗೊಳಿಸಿದ್ದಾರೆ ಎಂಬುದು ಆಕೆಯ ಆರೋಪ. ಬಹುಸಂಖ್ಯಾತರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂಬುದು ಎರಡನೆಯ ಆರೋಪ. ಮುಸಲ್ಮಾನರು ಮೋದಿಯ ಆಡಳಿತದಲ್ಲಿ ಭಯಭೀತರಾಗಿದ್ದಾರೆ ಎಂಬುದು ಮೂರನೆಯ ಆರೋಪ. ಅದಕ್ಕೆ ಆಕೆ ಉದಾಹರಣೆ ಕೊಡುತ್ತಾ ಆಕೆಯ ಬಳಿಗೆ ಬಂದ ಮುಸಲ್ಮಾನ ಮಹಿಳೆಯೊಬ್ಬಳು ‘ತನ್ನ ಮಗನಿಗೆ ಗಾಯತ್ರಿ ಮಂತ್ರ ಕಲಿಸಿಕೊಟ್ಟುಬಿಡುತ್ತೇನೆ, ಆಗ ಬಹುಸಂಖ್ಯಾತರು ಆಕ್ರಮಣ ಮಾಡಲು ಬಂದಾಗ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತದೆ’ ಎಂದು ಹೇಳಿದ ಕಪೋಲ ಕಲ್ಪಿತ ಕಥೆಯನ್ನು ಉದಾಹರಿಸಲು ಹೇಸುವುದಿಲ್ಲ. ಮಾತಿಗೆ ಮುನ್ನ ಲಿಂಚಿಂಗ್ ಎಂಬ ಪದವನ್ನು ಬಳಸುವ ಅರುಂಧತಿ ರಾಯ್ ಮುಸಲ್ಮಾನರ ಹತ್ಯೆಯ ಪ್ರಕರಣಗಳು ನ್ಯಾಯಾಲಯದಲ್ಲಿ ಸುಳ್ಳೆಂದು ಸಾಬೀತಾದವೆಂಬುದನ್ನು ಮರೆತೇಬಿಡುತ್ತಾಳೆ. ಚುನಾವಣೆಗೂ ಮುನ್ನ ಮುಸಲ್ಮಾನರು ಹೆದರಿಕೆಯಲ್ಲಿದ್ದಾರೆ ಎಂದು ತೋರಿಸಲು ಹೆಣಗಾಡುವ ಇವರ ಪ್ರಯತ್ನವೆಲ್ಲಾ ವ್ಯರ್ಥವಾದನಂತರ ಅವುಗಳನ್ನೇ ಮುಂದಿಟ್ಟುಕೊಂಡು ಚಚರ್ೆ ಮಾಡುವುದನ್ನು ಈ ಬುದ್ಧಿಜೀವಿಗಳು ರೂಢಿಸಿಕೊಂಡುಬಿಟ್ಟಿದ್ದಾರೆ. ಇಷ್ಟಕ್ಕೂ ಮುಸಲ್ಮಾನರಿಗೆ ಹಿಂದೂಗಳು ರಾಕ್ಷಸರೆಂಬ ಭಯವನ್ನು ಹುಟ್ಟಿಸಿಯೇ ಅವರನ್ನು ವೋಟ್ಬ್ಯಾಂಕಾಗಿ ಪರಿವತರ್ಿಸಿಕೊಂಡಿರುವುದು ಕಾಂಗ್ರೆಸ್ಸಿನ ಚಾಳಿ. ಸಮಾಜ ಸುಶಿಕ್ಷಿತವಾದರೆ ಇದನ್ನು ಅಥರ್ೈಸಿಕೊಂಡು ಬಲುಬೇಗ ಇದಕ್ಕೊಂದು ಪರಿಹಾರ ಕಂಡುಕೊಳ್ಳುತ್ತದೆ. ಇಲ್ಲವಾದಲ್ಲಿ ಬಲುಕಷ್ಟ!

3

ಅರುಂಧತಿರಾಯ್ ಕಾಂಗ್ರೆಸ್ಸಿನ ರಕ್ಷಣೆಗೆ ಧಾವಿಸುವ ಪರಿ ಇಡಿಯ ಸಂದರ್ಶನದಲ್ಲಿ ಎದ್ದೆದ್ದು ತೋರುತ್ತದೆ. ನರೇಂದ್ರಮೋದಿ ಸಕರ್ಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲದಿರುವುದನ್ನು ಆಕೆಯಿಂದ ಜೀಣರ್ಿಸಿಕೊಳ್ಳಲಾಗುತ್ತಿಲ್ಲ. ಭ್ರಷ್ಟಾಚಾರವೆನ್ನುವುದು ಹಣಕಾಸಿನ ವಹಿವಾಟಿಗೆ ಸಂಬಂಧಪಟ್ಟಿದ್ದೇ ಅಲ್ಲ, ಅದು ಮಾನಸಿಕತೆಗೆ ಸಂಬಂಧಿಸಿದ್ದು ಎಂಬುದು ಆಕೆಯ ಅಂಬೋಣ. ನರೇಂದ್ರಮೋದಿಯವರು 2002ರಲ್ಲಿ ಗುಜರಾತ್ನಲ್ಲಿ ಸಾಮೂಹಿಕ ಹತ್ಯೆಗೆ ಕಾರಣವಾದುದನ್ನೇ ಆಕೆ ಈಗಲೂ ಉಲ್ಲೇಖ ಮಾಡುತ್ತಿದ್ದಾಳೆ. ಆದರೆ ಸುಪ್ರೀಂಕೋಟರ್ು ಇದರಲ್ಲಿ ನರೇಂದ್ರಮೋದಿಯವರ ಪಾತ್ರವೇ ಇರಲಿಲ್ಲವೆಂದು ಹೇಳಿದ್ದನ್ನು ಮಾತ್ರ ಮರೆಮಾಚಿಬಿಡುತ್ತಾಳೆ. ನರೇಂದ್ರಮೋದಿಯವರನ್ನು ದ್ವೇಷಿಸಲು ಅವರಿಗೆ ಯಾವ ಅಂಶಗಳೂ ಸಿಗದಿರುವುದರಿಂದಲೇ ಇಡಿಯ ಸಂದರ್ಶನದುದ್ದಕ್ಕೂ ಅವರು ತಡಕಾಡುವುದು ಸ್ಪಷ್ಟವಾಗಿ ಕಾಣುತ್ತದೆ. ಒಂದು ಹಂತದಲ್ಲಂತೂ ಆಕೆ ಭ್ರಷ್ಟಾಚಾರ ಒಂದು ಗಂಭೀರ ಸಮಸ್ಯೆಯೇ ಅಲ್ಲ, ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅದಕ್ಕಿಂತಲೂ ಕಠಿಣ ಸಮಸ್ಯೆ ಎಂದು ಫಮರ್ಾನು ಹೊರಡಿಸಿಬಿಡುತ್ತಾಳೆ!

ಈ ಎಲ್ಲಾ ಬುದ್ಧಿಜೀವಿಗಳಿಗೆ ತಾವು ಇಷ್ಟುದಿನ ಸಮಾಜಕ್ಕೆ ನಂಬಿಸಿಕೊಂಡುಬಂದಂತಹ ವಿಚಾರಧಾರೆ ಸುಳ್ಳೆಂದು ಸಾಬೀತಾಗಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಈ ದೇಶವನ್ನು ವರ್ಣವ್ಯವಸ್ಥೆಯ ಆಧಾರದ ಮೇಲೆ ವಿಭಜಿಸಿದ್ದನ್ನು ವಿರೋಧಿಸುತ್ತಾ ಕಾಲಕ್ರಮದಲ್ಲಿ ಜಾತಿ-ಜಾತಿಗಳ ನಡುವೆ ಬೆಂಕಿಯ ಕಡ್ಡಿ ಗೀರುತ್ತಾ ಸಂಘವನ್ನು ಬ್ರಾಹ್ಮಣರೆಂದು, ದಲಿತರನ್ನು ತುಳಿಯಲು ಅವರು ಮಾಡುವ ಪ್ರಯತ್ನ ಅಗಾಧವೆಂದು ಬಿಂಬಿಸಲು ಪ್ರಯತ್ನಪಟ್ಟಿದ್ದು ಈಗ ವ್ಯರ್ಥವಾಗಿಹೋಗಿದೆ. ಅರುಂಧತಿ ಒಪ್ಪಿಕೊಳ್ಳುವಂತೆ 2014ರಲ್ಲಿ ನರೇಂದ್ರಮೋದಿ ದಲಿತರನ್ನೂ ತನ್ನೆಡೆ ಸೆಳೆದುಕೊಳ್ಳಲು ಯಶಸ್ವಿಯಾಗಿಬಿಟ್ಟಿದ್ದಾರೆ. 19ನೇ ಶತಮಾನದಲ್ಲಿ ಆರಂಭವಾಗಿದ್ದ ಗೋಹತ್ಯಾ ನಿಷೇಧದ ಹೋರಾಟ, ಘರ್ವಾಪ್ಸಿಯ ಕಲ್ಪನೆಗಳನ್ನು ಮೋದಿ ತೀವ್ರಗತಿಯಲ್ಲಿ ಆಚರಣೆಗೆ ಬರುವಂತೆ ನೋಡಿಕೊಂಡು ಬಲುದೊಡ್ಡದಾಗಿರುವ ಬಹುಸಂಖ್ಯಾತರ ಧ್ರುವೀಕರಣವನ್ನು ಮಾಡುತ್ತಿದ್ದಾರೆಂದು ಆರೋಪಿಸುತ್ತಾಳೆ. ಇವೆಲ್ಲವೂ ಆರ್ಎಸ್ಎಸ್ನ ಮೂಸೆಯಿಂದ ಹದಗೊಂಡು ಬಂದಿರುವ ವಿಚಾರಧಾರೆ ಎಂದು ಹೇಳಲು ಆಕೆ ಹಿಂದು-ಮುಂದು ನೋಡುವುದಿಲ್ಲ. ತನ್ನ ವಿಚಾರಧಾರೆಯನ್ನು ಬಲವಾಗಿ ಪ್ರತಿಪಾದಿಸಲೆಂದೇ ಮೋದಿ ಮಾಧ್ಯಮವನ್ನು, ವಿಶ್ವವಿದ್ಯಾಲಯಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದಾರೆ ಎಂದು ಪ್ರಲಾಪಮಾಡುವ ಅರುಂಧತಿ ಮೋದಿ ಸೋತು ಪ್ರತಿಪಕ್ಷಗಳು ಅಧಿಕಾರಕ್ಕೆ ಬಂದರೂ ಬದಲಾವಣೆ ಬರುವ ಸಾಧ್ಯತೆಗಳು ಬಹಳ ಕಡಿಮೆ ಎಂದು ನೊಂದುಕೊಳ್ಳುತ್ತಾಳೆ!

4

ಇಡಿಯ ಸಂದರ್ಶನದಲ್ಲಿ ನನಗೆ ಮೆಚ್ಚುಗೆಯಾದ ಭಾಗ ಇದೇ. ನರೇಂದ್ರಮೋದಿ ತಮ್ಮ ಪ್ರಭಾವದಿಂದ ಪ್ರತಿಪಕ್ಷಗಳೆಲ್ಲವೂ ತಮ್ಮದ್ದೇ ರೀತಿಯಲ್ಲಿ ಬಹುಸಂಖ್ಯಾತರ ಕುರಿತು ಆಲೋಚಿಸುವಂತೆ ಮಾಡಿಬಿಟ್ಟಿದ್ದಾರೆ ಎನ್ನುತ್ತಾಳೆ ಆಕೆ. ಶಬರಿಮಲೈಯ ಉದಾಹರಣೆ ಕೊಡುತ್ತಾ ಇಡಿಯ ಕೇರಳವನ್ನು ಎತ್ತಿಕಟ್ಟಿದ ಭಾಜಪ ಕಾಂಗ್ರೆಸ್ಸೂ ಕೂಡ ಕೋಟರ್ಿನ ವಿರುದ್ಧ ಮಾತನಾಡುವಂತೆ ಪ್ರೇರೇಪಿಸಿಬಿಟ್ಟಿತು ಎನ್ನುತ್ತಾಳೆ. ಎಷ್ಟು ಸತ್ಯವಲ್ಲವೇ?! ಮೋದಿ ಪ್ರಧಾನಿಯಾಗುವುದಕ್ಕೂ ಮುನ್ನ ತನ್ನ ತಾನು ಹಿಂದೂ ಎಂದು ಕರೆದುಕೊಳ್ಳಲು ಅಂಜುತ್ತಿದ್ದ ಅನೇಕ ನಾಯಕರು ತಾವು ಜನಿವಾರಧಾರಿಗಳು ಎಂದೂ ಘೋಷಿಸಿಕೊಂಡರು. ಹಿಂದುತ್ವ ತಮ್ಮ ಉಸಿರು ಎಂದು ಕಾಂಗ್ರೆಸ್ಸಿಗರು ಹೇಳುವಂತಾಯ್ತು. ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದ್ದೇ ನಿಜವಾದ ಹಿಂದುತ್ವ ಎನ್ನುವ ಮಟ್ಟಿಗೆ ಅನೇಕರು ಘೋಷಿಸಿಯೂಬಿಟ್ಟರು. ನರೇಂದ್ರಮೋದಿ ಕುಂಭಮೇಳದಲ್ಲಿ ಪ್ರತಿಯೊಬ್ಬರೂ ಮುಳುಗೇಳುವಂತೆ ಮಾಡಿದ್ದೂ ಕೂಡ ಬುದ್ಧಿಜೀವಿಗಳ 70 ವರ್ಷದ ಪ್ರಯಾಸವನ್ನು ತ್ರಿವೇಣಿ ಸಂಗಮದಲ್ಲಿ ಕೊಚ್ಚಿ ಹೋಗುವಂತೆ ಮಾಡಿತು. ಇವೆಲ್ಲವನ್ನೂ ಅರಿತ ಅರುಂಧತಿ ನರೇಂದ್ರಮೋದಿಯ ಮುಂದೆ ಪ್ರತಿಪಕ್ಷಗಳು ಬಚ್ಚಾಗಳು ಎಂದುಬಿಡುತ್ತಾಳೆ. ಆರ್ಎಸ್ಎಸ್ನ ಐತಿಹಾಸಿಕ ಹೋರಾಟಕ್ಕೆ ಪ್ರತಿಪಕ್ಷಗಳು ಐತಿಹಾಸಿಕ ಚಿಂತನೆಯ ಮೂಲಕವೇ ಪ್ರತಿರೋಧ ಒದಗಿಸಬೇಕೆಂಬುದು ಆಕೆಯ ಚೀರಾಟ. ಅದು ಹೇಗೆ ಎಂದು ಕರಣ್ ಕೇಳುವಾಗ ಆಕೆ ಮತ್ತೆ ಮುಸಲ್ಮಾನರನ್ನು ಹೊಡೆಯುವ, ಬಡಿಯುವ ಹಿಂದೂಗಳಿಂದ ಅವರನ್ನು ರಕ್ಷಿಸಲೆಂದು ದಲಿತರು, ಹಿಂದುಳಿದವರು, ಮುಸಲ್ಮಾನರು ಒಟ್ಟಾಗಿ ಹೋರಾಟ ನಡೆಸಬೇಕು ಎನ್ನುತ್ತಾಳೆ. ಮುಸಲ್ಮಾನರ ಮತವಿಲ್ಲದೇ ತಾನು ಗೆಲ್ಲಬಲ್ಲೆನೆಂದು 2014ರಲ್ಲಿ ತೋರಿದ ಮೋದಿ ದಲಿತರನ್ನು, ಹಿಂದುಳಿದವರನ್ನು ತಮ್ಮತ್ತ ಸೆಳೆದುಕೊಂಡರು ಎನ್ನುವ ಆಕೆ ಈ ಬಾರಿಯ ಚುನಾವಣೆಯಲ್ಲಿ ದಲಿತರೂ ಭಾಜಪವನ್ನು ಬಿಡುವುದಿಲ್ಲ ಆದರೆ ಹಿಂದುಳಿದವರಲ್ಲಿ ಕೆಲವರು ಮೋದಿಯಿಂದ ದೂರಸರಿಯುತ್ತಾರೆ ಎಂಬ ಭವಿಷ್ಯವಾಣಿಯನ್ನು ನುಡಿಯುತ್ತಾಳೆ.
ಚುನಾವಣೆಯ ಹೊಸ್ತಿಲಲ್ಲಿ ರಾಹುಲ್ ಪ್ರಧಾನಿಯಾಗುವ ಯೋಗ್ಯ ಅಭ್ಯಥರ್ಿಯಲ್ಲ ಎಂದು ಸಂದರ್ಶನದ ಕೊನೆಯಲ್ಲಿ ಹೇಳುವ ಅರುಂಧತಿ ಜನ ಆಡಿಕೊಂಡ ನಂತರವೂ ಬೆಳೆದು ನಿಂತ ರಾಹುಲ್ನ ಸಾಧನೆ ಮೆಚ್ಚುತ್ತೇನೆ ಎಂದು ಹೇಳುವುದನ್ನು ಮರೆಯುವುದಿಲ್ಲ. ಆತನ ನ್ಯಾಯ್ ಯೋಜನೆಯನ್ನು ಸಮಥರ್ಿಸಿಕೊಳ್ಳುವ ಅರುಂಧತಿ 50 ಕೋಟಿ ಜನರ ಸಂಪತ್ತಿಗೆ ಸಮನಾದುದಷ್ಟನ್ನು ಒಂಭತ್ತೇ ಜನ ಅನುಭವಿಸುವಂತಹ ಈ ವ್ಯವಸ್ಥೆ ಸರಿಯಿಲ್ಲದ್ದು, ಅದಕ್ಕಾಗಿ ಆ ಸಿರಿವಂತರಿಂದ ಹಣವನ್ನು ಕಿತ್ತುಕೊಂಡು ಬಡವರಿಗೆ ಹಂಚಿದರೆ ತಪ್ಪಿಲ್ಲವೆಂಬ ಬೂಷ್ವರ್ಾ ಚಿಂತನೆಯನ್ನು ಭಾರತೀಯರ ಮೇಲೆ ಹೇರುವ ಯೋಚನೆ ಮಾಡುತ್ತಾಳೆ.

ಈ ಸಂದರ್ಶನ ಮುಗಿಯುವ ವೇಳೆಗೆ ಅರುಂಧತಿ ರಾಯ್ ತನ್ನ ದಡ್ಡತನವನ್ನು ಪ್ರದಶರ್ಿಸಿಕೊಳ್ಳುವುದಲ್ಲದೇ ನರೇಂದ್ರಮೋದಿಯವರು ಮತ್ತೊಮ್ಮೆ ಆಯ್ಕೆಯಾಗುವ ಕುರಿತಂತೆ ಎಡಪಂಥೀಯರ ಮನದಲ್ಲಿರುವ ಅಷ್ಟೂ ಆತಂಕವನ್ನು ಎಳೆಎಳೆಯಾಗಿ ಬಿಚ್ಚಿಟ್ಟುಬಿಡುತ್ತಾಳೆ. ಒಂದಂತೂ ಹೌದು. ಚುನಾವಣೆ ಹಂತ-ಹಂತವಾಗಿ ಹೆಜ್ಜೆಯಿಡುತ್ತಿದ್ದಂತೆ ಮೋದಿ ವಿರೋಧಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿದೆ ಎಂಬುದಂತೂ ನಿಚ್ಚಳವಾಗಿ ಗೋಚರಿಸುತ್ತಿದೆ. ದೇಶದ್ರೋಹಿಗಳ ಎದೆಯಲ್ಲಿ ಕಿಡಿ ಹೊತ್ತಿಕೊಂಡಿದೆ ಎಂದರೆ ಆಳುವ ರಾಜ ಸಮರ್ಥವಾದ ಆಡಳಿತ ನಡೆಸುತ್ತಿದ್ದಾನೆ ಎಂದೇ ಅರ್ಥ. ನಿಮ್ಮ ಸ್ಥಳೀಯ ನಾಯಕನ ಮೇಲಿನ ಆಕ್ರೋಶದಿಂದ ನೋಟಾ ಒತ್ತುವ ಆಲೋಚನೆ ಮಾಡಿದ್ದಲ್ಲಿ ಇಂದೇ ಬದಲಾಯಿಸಿಕೊಂಡುಬಿಡಿ. ಮೋದಿಗೆ ನೀವು ಹಾಕುವ ಮತ ಈ ದೇಶದ್ರೋಹಿಗಳ ಬದುಕನ್ನು ಅಸ್ತವ್ಯಸ್ತಗೊಳಿಸಲಿದೆ. ಬರಲಿರುವ ಭಾರತ ಹೊರಗಡೆಯಷ್ಟೇ ಅಲ್ಲ, ಒಳಗಡೆಯಿಂದಲೂ ಕೂಡ ಬಲಿಷ್ಠವಾಗಲಿದೆ!

Comments are closed.