ವಿಭಾಗಗಳು

ಸುದ್ದಿಪತ್ರ


 

ಪತ್ರಕರ್ತನೇ ಭ್ರಷ್ಟವ್ಯವಸ್ಥೆಯ ಅಡಿಪಾಯವಾದರೆ ಪರಿಹಾರವೇನು?!

ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗಗಳ ನಂತರ ಪ್ರಜಾಪ್ರಭುತ್ವದ ರಕ್ಷಣೆಗೆ ಇರುವ ನಾಲ್ಕನೇ ಸ್ತಂಭವೇ ಮಾಧ್ಯಮ ಎಂದು ಹೇಳಲಾಗುತ್ತಿತ್ತು. ಆದರೆ ಮಾಧ್ಯಮವಿಂದು ಅದೆಷ್ಟು ಭ್ರಷ್ಟವಾಗಿ ಹೋಗಿದೆಯೆಂದರೆ ಉಳಿದ ಮೂರು ಸ್ತಂಭಗಳ ಕುರಿತಂತೆ ದನಿಯೆತ್ತುವ ಯೋಗ್ಯತೆಯಾದರೂ ಇದೆಯಾ ಎಂಬುವ ಪ್ರಶ್ನೆ ಖಂಡಿತ ಕಾಡುತ್ತದೆ.

ನಮ್ಮ ಕಾಲದಲ್ಲಿ ನಾವು ಕೇಳಬಹುದಾದ ಅತ್ಯಂತ ಕೆಟ್ಟ ಸುದ್ದಿಯೊಂದು ಬಂಗಾಳದಿಂದ ಹೊರಗೆ ಬಂದಿದೆ. ಬಂಗಾಳದ ಖ್ಯಾತ ಪತ್ರಕರ್ತ ಸುಮನ್ ಚಟ್ಟೋಪಾಧ್ಯಾಯ ಶಾರದಾ ಚಿಟ್ಫಂಡ್ನ ಹಗರಣದಲ್ಲಿ ಸಾಕ್ಷಿ ಸಮೇತ ಸಿಕ್ಕುಬಿದ್ದು ಜೈಲುಪಾಲಾಗಿದ್ದಾರೆ. ಸಿಬಿಐನ ನಿದರ್ೇಶನದಂತೆ ಆತನಿಗೆ ಜಾಮೀನು ಕೂಡಾ ನಿರಾಕರಿಸಲಾಗಿದೆ. ಜೈಲಿನಲ್ಲಿ ಕುಳಿತು ಪೊಲೀಸರು ಕೊಟ್ಟ ಮೀನಿನ ಸಾರು ಮತ್ತು ಬಂಗಾಲೀ ಸಿಹಿ ತಿಂಡಿಯೇ ಅವನ ಪಾಲಿಗೀಗ ತುಂಬಾ ಗೌರವಾನ್ವಿತ ಆತಿಥ್ಯ.

10

ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗಗಳ ನಂತರ ಪ್ರಜಾಪ್ರಭುತ್ವದ ರಕ್ಷಣೆಗೆ ಇರುವ ನಾಲ್ಕನೇ ಸ್ತಂಭವೇ ಮಾಧ್ಯಮ ಎಂದು ಹೇಳಲಾಗುತ್ತಿತ್ತು. ಆದರೆ ಮಾಧ್ಯಮವಿಂದು ಅದೆಷ್ಟು ಭ್ರಷ್ಟವಾಗಿ ಹೋಗಿದೆಯೆಂದರೆ ಉಳಿದ ಮೂರು ಸ್ತಂಭಗಳ ಕುರಿತಂತೆ ದನಿಯೆತ್ತುವ ಯೋಗ್ಯತೆಯಾದರೂ ಇದೆಯಾ ಎಂಬುವ ಪ್ರಶ್ನೆ ಖಂಡಿತ ಕಾಡುತ್ತದೆ. ಸಂತರೊಬ್ಬರು ಬಲುಹಿಂದೆ ಒಂದು ಘಟನೆ ಹಂಚಿಕೊಂಡಿದ್ದರು. ಸಂದರ್ಶನಕ್ಕೆಂದು ಒಂದಷ್ಟು ಪತ್ರಕರ್ತರು ಅವರ ಬಳಿ ಬಂದಿದ್ದರಂತೆ. ಪತ್ರಕರ್ತರ ಮುಖಗಳಲ್ಲಿದ್ದ ಧಾವಂತ, ಸಿಲುಕಿಸುವ ಪ್ರಶ್ನೆ ಕೇಳಬೇಕೆಂಬ ತುಡಿತ ಇವೆಲ್ಲವನ್ನೂ ಗಮನಿಸಿದ ಸ್ವಾಮೀಜಿ ಪತ್ರಕರ್ತರನ್ನು ಸ್ವಲ್ಪಹೊತ್ತು ಶಾಂತವಾಗಿಸಿ ಹಾಗೆ ಸುಮ್ಮನೆ ಹರಟೆಗೆ ತಾನೇ ಒಂದಷ್ಟು ಪ್ರಶ್ನೆ ಕೇಳುತ್ತೇನೆ ಎಂದರಂತೆ. ಪತ್ರಕರ್ತರು ಮುಖ ಅರಳಿಸಿದೊಡನೆ ಸ್ವಾಮೀಜಿ ನಿಧಾನವಾಗಿ ಪತ್ರಕರ್ತರ ಪ್ರಾಮಾಣಿಕತೆ, ವೈಚಾರಿಕ ಬದ್ಧತೆ, ಸಾಮಾಜಿಕ ಪ್ರಜ್ಞೆ ಇವೆಲ್ಲವುಗಳ ಕುರಿತಂತೆ ಅವರನ್ನು ಪ್ರಶ್ನಿಸಿದರಂತೆ. ಆರಂಭದಲ್ಲಿ ಕಕ್ಕಾಬಿಕ್ಕಿಯಾದ ಪತ್ರಕರ್ತರು ಕ್ರಮೇಣ ತಮ್ಮ ಚೌಕಟ್ಟನ್ನು ತಮಗಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರಂತೆ. ಇವೆಲ್ಲವನ್ನೂ ಕೇಳಿದ ನಂತರ ಸಂದರ್ಶನವನ್ನು ಆರಂಭಿಸಿರಿ ಎಂದು ಸ್ವಾಮೀಜಿ ಹೇಳಿದರೆ ಅಚ್ಚರಿಯೆಂಬಂತೆ ಪತ್ರಕರ್ತರೆಲ್ಲರೂ ಧನಾತ್ಮಕವಾದ ಪ್ರಶ್ನೆಗಳನ್ನೇ ಕೇಳಿದ್ದರಂತೆ. ಹೀಗೇಕೆಂದು ಸ್ವಾಮೀಜಿಯನ್ನು ಆನಂತರ ಕೇಳಿದಾಗ ಅವರು ಹೇಳಿದ ಸಂಗತಿ ಬಲು ಮಾಮರ್ಿಕವಾಗಿತ್ತು. ಇತರರನ್ನು ಪ್ರಶ್ನಿಸುವುದೇ ತಮ್ಮ ಕಾಯಕವೆಂದು ಬಗೆದ ಈ ಪತ್ರಕರ್ತರು ತಾವು ಸಮಾಜಕ್ಕೆ ನಯಾಪೈಸೆಯ ಕೊಡುಗೆಯನ್ನೂ ಕೊಟ್ಟವರಲ್ಲ ಎಂದರಲ್ಲದೇ ಒಂದೂ ಸೇವಾಕಾರ್ಯವನ್ನು ಮಾಡದ ಇವರು ಎದುರಿಗಿರುವವರನ್ನೆಲ್ಲಾ ಕೆಲಸಕ್ಕೆ ಬಾರದವರೆಂದು ಹಂಗಿಸುವುದನ್ನೇ ರೂಢಿಸಿಕೊಂಡುಬಿಟ್ಟಿದ್ದಾರೆ ಎಂದು ಮಾಮರ್ಿಕವಾಗಿ ನುಡಿದರು. ಸತ್ಯವಲ್ಲವೇ?! ದೇಶದ ಏಕತೆಯನ್ನು ನಾಶಮಾಡಲೆಂದು ಹಠ ಹಿಡಿದು ನಿಂತಿರುವ ರಾಷ್ಟ್ರಮಟ್ಟದ ಪತ್ರಕರ್ತರನ್ನು ಕಂಡಾಗ ಅವರಿಗೆ ಸಮಾಜವನ್ನು ಬೆಸೆಯುವ ಜಾತ್ಯತೀತತೆಯ ಭಾವವನ್ನು ಕುರಿತಂತೆ ಮಾತನಾಡುವ ಹಕ್ಕು ಎಷ್ಟಿದೆ ಎಂದು ಕೇಳಬೇಕೆನಿಸುವುದಿಲ್ಲವೇನು?!

11

ಹೋಗಲಿ ಬಿಡಿ. ನಾನೀಗ ಸುಮನ್ ಚಟ್ಟೋಪಾಧ್ಯಾಯರ ಬಗ್ಗೆ ಮಾತನಾಡಬೇಕಿದೆ. ಆತ ಕಲ್ಕತ್ತಾದ ಅತ್ಯಂತ ಬುದ್ಧಿವಂತ ಮತ್ತು ಅಷ್ಟೇ ದುರಹಂಕಾರಿ ಪತ್ರಕರ್ತನೆನಿಸಿದ್ದ. ಆತನ ಕೋಣೆಯೊಳಗೆ ಪುಸ್ತಕಗಳ ರಾಶಿ ಬಿದ್ದಿರುತ್ತಿತ್ತು. ಆತನನ್ನು ಪೊಲೀಸರು ಬಂಧಿಸಲೆಂದು ಬಂದಾಗ ಅವರ ಹತ್ತಿರಕ್ಕೆ ಬಂದು ‘ದೇಶದಲ್ಲಿ ನನ್ನಂಥ ಪತ್ರಕರ್ತ ನಾನೊಬ್ಬನೇ’ ಎಂದು ಧಿಮಾಕಿನಿಂದ ಹೇಳಿಕೊಂಡಿದ್ದ. ನಿವರ್ಿಕಾರವಾಗಿ ನಕ್ಕ ತನಿಖಾಧಿಕಾರಿ ಆತನ ಬ್ಯಾಂಕ್ ಖಾತೆಗಳಲ್ಲಿನ ಏರುಪೇರುಗಳನ್ನು, ಆತನ ಭಿನ್ನ-ಭಿನ್ನ ಕಂಪೆನಿಗಳ ಮೂಲಕ ನಡೆಯುತ್ತಿದ್ದ ವಹಿವಾಟುಗಳನ್ನು, ಅವನ ವಿರುದ್ಧ ಸಹೋದ್ಯೋಗಿಗಳು ಮಾಡಿದ ಲೈಂಗಿಕ ಶೋಷಣೆಯ ಆರೋಪಗಳನ್ನೆಲ್ಲಾ ಒಂದೊಂದಾಗಿ ಬಿಚ್ಚಿಡಲಾರಂಭಿಸುತ್ತಿದ್ದಂತೆ ಆತ ಶಾಂತನಾಗಿಬಿಟ್ಟನಂತೆ. ಕಲ್ಕತ್ತಾದ ಉದ್ದಕ್ಕೂ ಇರುವ 15ಕ್ಕೂ ಹೆಚ್ಚು ಅಪಾಟರ್್ಮೆಂಟ್ಗಳು ಆತನ ಹೆಸರಿನಲ್ಲಿವೆ. ಆತ ಅದನ್ನು ತನ್ನದೆಂಬುದನ್ನು ನಿರಾಕರಿಸುತ್ತಾನಾದರೂ ಎಲ್ಲಾ ದಾಖಲೆಗಳೂ ಅವನತ್ತಲೇ ಬೊಟ್ಟು ಮಾಡುತ್ತಿವೆ.

ವಾಸ್ತವವಾಗಿ ಚಟ್ಟೋಪಾಧ್ಯಾಯ ದಿಶಾ ಪ್ರಡಕ್ಷನ್ಸ್ ಆಂಡ್ ಮಿಡಿಯಾ ಲಿಮಿಟೆಡ್ ಎಂಬ ಮಾಧ್ಯಮ ಮನೆಯ ಮಾಲೀಕ. ಅದರ ಮೂಲಕವೇ ಆತ ದಿಶಾ ಎನ್ನುವ ವಾರಪತ್ರಿಕೆಯನ್ನು, ಏಕ್ ದಿನ್ ಎನ್ನುವ ದಿನಪತ್ರಿಕೆಯನ್ನು ನಡೆಸುತ್ತಾನೆ. ಆತನ ಈ ಸಾಹಸಕ್ಕೆ ಜೊತೆಯಾಗಿ ನಿಂತವರು ಶಾರದಾ ಮತ್ತು ಐಕೋರ್ ಎಂಬ ಚಿಟ್ಫಂಡ್ ಕಂಪೆನಿಗಳು. 40 ಕೋಟಿ ರೂಪಾಯಿಗೂ ಹೆಚ್ಚು ಹಣ ಮಾಧ್ಯಮ ಮನೆಗಲ್ಲದೇ ಸುಮನ್ನ ವೈಯಕ್ತಿಕ ಖಾತೆಗೂ ಬಂತು. ಗ್ಲೋಬಲ್ ಆಟೊಮೊಬೈಲ್ ಎನ್ನುವ ಕಂಪೆನಿಯ ಮೂಲಕ 52 ಕೋಟಿ ರೂಪಾಯಿಯ ಅವ್ಯವಹಾರ ಬೆಳಕಿಗೆ ಬಂತು ಮತ್ತು ಈ ಕಂಪೆನಿಯಲ್ಲೂ ಸುಮನ್ ನಿದರ್ೇಶಕನಾಗಿದ್ದ. ಈ ಕಂಪೆನಿಯ ಮಾಲೀಕ ಶಂತನುಘೋಷ್ನೊಂದಿಗೆ ಸೇರಿ ಸುಮನ್ 80 ಕೋಟಿ ರೂಪಾಯಿ ಬ್ಯಾಂಕಿಗೆ ವಂಚಿಸಿದುದರ ಹಗರಣವೂ ಈ ಸಂದರ್ಭದಲ್ಲೇ ಬೆಳಕಿಗೆ ಬಂತು. ಏಳೂವರೆ ಕೋಟಿ ನಷ್ಟದಲ್ಲಿದ್ದ ದಿಶಾ ವಾರಪತ್ರಿಕೆಯನ್ನು ಎರಡು ಕೋಟಿ ರೂಪಾಯಿಗೆ ಆತ ಮಾರಿದಾಗಲೇ ತನಿಖಾಧಿಕಾರಿಗಳಿಗೆ ಅನುಮಾನ ಶುರುವಾಗಿತ್ತು. ಅದೇ ಜಾಡನ್ನು ಹಿಡಿಯುತ್ತಾ ಹೋದಂತೆ ಅವರು ಚಿಟ್ಫಂಡ್ನ ಹಗರಣದತ್ತ ಬಂದು ನಿಂತರು.

12

ಅದೊಂದು ಕಾಲಘಟ್ಟವಿತ್ತು. ಬಂಗಾಳದಲ್ಲಿ ಚಿಟ್ಫಂಡ್ ಮನೆಮಾತಾಗಿಬಿಟ್ಟಿತ್ತು. ಉದ್ದಿಮೆದಾರರಿಂದ ಹಿಡಿದು ಮನೆಯ ಗೃಹಿಣಿಯವರೆಗೆ ಪ್ರತಿಯೊಬ್ಬರೂ ಈ ಚಿಟ್ಫಂಡ್ನಲ್ಲಿ ಪಾಲುದಾರರೇ ಆಗಿದ್ದರು. ಹೂಡಿಕೆಯನ್ನು ದ್ವಿಗುಣಗೊಳಿಸುವ ಹಗಲುಗನಸು ತೋರಿಸುತ್ತಾ ಅನೇಕ ಕಂಪೆನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. ಶಾರದಾ, ರೋಜ್ವ್ಯಾಲಿ, ಅಲ್ಕೆಮಿಸ್ಟ್, ಐಕೋರ್ ಇವೆಲ್ಲಾ ಹೆಸರುಗಳಷ್ಟೇ. ಈ ಕಂಪೆನಿಯ ಮ್ಯಾನೇಜರ್ಗಳು ತಮ್ಮನ್ನು ತಾವು ಅಪಾರ ಸಿರಿವಂತರೆಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದರು. ಅದಕ್ಕಾಗಿ ಬಂಗಲೆಗಳನ್ನು ಕೊಳ್ಳುವ, ಫಾಮರ್್ ಹೌಸ್ಗಳನ್ನು ತೋರಿಸುವ ಕೊನೆಗೆ ಸಿನಿಮಾ ನಟರುಗಳಂತೆ ಜನರೆದುರು ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದರು. ಇದು ಜನರನ್ನು ಹಣ ಹೂಡಿಕೆಗೆ ಸೆಳೆಯುವ ತಂತ್ರಗಾರಿಕೆ. ಪರಿಸ್ಥಿತಿ ಎಲ್ಲಿಗೆ ಮುಟ್ಟಿತೆಂದರೆ ಸ್ಥಳೀಯ ಫುಟ್ಬಾಲ್ ತಂಡಗಳಿಗೆ ಮೆಸ್ಸಿ, ಮರಡೋನಾರಂತಹ ದಿಗ್ಗಜರು ಭೇಟಿಕೊಟ್ಟು ಹೋದರು. ಚಿಟ್ಫಂಡ್ನ ಮಾಲೀಕರ ಸಹಕಾರದಿಂದ ಸ್ಥಳೀಯ ಫುಟ್ಬಾಲ್ ಕ್ಲಬ್ಗಳು ಅಂತರರಾಷ್ಟ್ರೀಯ ಆಟಗಾರರನ್ನು ತಮ್ಮ ತಂಡದ ಮೂಲಕ ಆಡಿಸುವ ಮಟ್ಟಿಗೆ ಬೆಳೆದುನಿಂತುಬಿಟ್ಟರು. ಇದ್ದಕ್ಕಿದ್ದಂತೆ ಬಂಗಾಳದಲ್ಲಿ ಕಂಡುಬಂದ ಈ ಬೆಳವಣಿಗೆ ದೀದಿಯ ಆಗಮನದಿಂದಾಗಿದ್ದು ಎಂದು ತೋರಿಸುವ ಪ್ರಯತ್ನವೂ ನಡೆದುಹೋಯ್ತು. ಇಡಿಯ ಬಂಗಾಳ ಚಿಟ್ಫಂಡ್ನ ಧಂಧೆಕೋರರನ್ನು ನಂಬಿಬಿಟ್ಟಿತು. ಲೆಕ್ಕ ಮೀರಿದಷ್ಟು ಹಣ ಸಂಗ್ರಹವಾದೊಡನೆ ಈ ಕಂಪೆನಿಗಳು ದಿವಾಳಿಯಾಗಿದ್ದೇವೆಂದು ಜನರೆದುರು ಕೈಚೆಲ್ಲಿ ಕುಳಿತುಬಿಟ್ಟವು.
ಆಗೆಲ್ಲಾ ಈ ಕಂಪೆನಿಗಳು ಮುಗಿಲು ಮುಟ್ಟಲು, ಅವರುಗಳಿಗೆ ಬೇಕಾದ ವಾತಾವರಣ ರೂಪಿಸಿಕೊಟ್ಟವರಲ್ಲಿ ಪತ್ರಕರ್ತ ಸುಮನ್ ಕೂಡ ಇದ್ದ. ಚಿಟ್ಫಂಡ್ ಮಾಲೀಕರ ಕುರಿತಂತೆ ಬಗೆಬಗೆಯ ಕಥೆಗಳನ್ನು ಬರೆದು ಅವರನ್ನು ಜನ ನಂಬುವಂತೆ ಮಾಡುವಲ್ಲಿ ಈತನ ಪಾತ್ರ ಬಲುದೊಡ್ಡದ್ದು. ಹಾಗಂತ ಇವನೊಬ್ಬನೇ ಅಲ್ಲ. ಬಂಗಾಳದ ಪ್ರತಿದಿನ್ ಎಂಬ ಪತ್ರಿಕೆಯ ಮತ್ತು ಮೋಹನ್ ಬಗಾನ್ ಫುಟ್ಬಾಲ್ ತಂಡದ ಮಾಲೀಕನೂ ಆದ ಶ್ರೀಂಜೈ ಬೋಸ್ ಮತ್ತು ಕುನಾಲ್ ಘೋಷ್ರಂಥವರು ಜೈಲಿನಲ್ಲಿ ಕಾಲಕಳೆದು ಈಗ ಜಾಮೀನಿನ ಮೇಲೆ ಹೊರಬಂದವರೇ. ಇವರೀರ್ವರೂ ದೀದಿಯ ಗ್ಯಾಂಗಿನಲ್ಲಿದ್ದು ಒಂದೊಮ್ಮೆ ಎಂಪಿಯಾಗಿದ್ದರು ಎಂಬುದನ್ನು ಮರೆಯಬೇಡಿ. ಮಮತಾಬ್ಯಾನಜರ್ಿಯ ಆಪ್ತನೆನಿಸಿಕೊಂಡ ಸಾರಿಗೆ ಮತ್ತು ಕ್ರೀಡಾ ಸಚಿವನೂ ಆಗಿರುವ ಮದನ್ ಮಿತ್ರಾ ಶಾರದಾ ಹಗರಣದ ಬಲುದೊಡ್ಡ ಕೊಂಡಿ ಎಂಬುದನ್ನು ಗುರುತಿಸಲ್ಪಟ್ಟಿದ್ದನ್ನು ನೆನಪಿಸಿಕೊಳ್ಳಬೇಕಿದೆ. ತನ್ನ ತಂಡದ ಬಹುತೇಕರು ಕಳ್ಳರೆಂದು ಸಾಬೀತಾದ ನಂತರವೂ ದೀದಿ ಅಧಿಕಾರದ ಗದ್ದುಗೆಯ ಮೇಲೆ ಮಾನ-ಮಾಯರ್ಾದೆಗಳನ್ನು ಪಕ್ಕಕ್ಕಿಟ್ಟೇ ಕುಳಿತಿದ್ದಾರಾ! ಇಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತೇನೋ. ಆಕೆ ತನ್ನ ಗೆಲುವಿಗೆ ಹಿಂದೂಗಳ ಸಹಕಾರವೇ ಬೇಡವೆಂದು ಮುಸಲ್ಮಾನರ ಓಲೈಕೆಗೆ ಬಲವಾಗಿ ನಿಂತುಬಿಟ್ಟಿದ್ದಾರೆ. ತನ್ನೊಂದು ರಾಜ್ಯವನ್ನು ಸರಿಯಾಗಿ ಸಂಭಾಳಿಸಲಾಗದ ಈ ಹೆಣ್ಣುಮಗಳು ಈಗ ದೇಶದ ಪ್ರಧಾನಿಯಾಗುವ ಹವಣಿಕೆಯನ್ನೂ ನಡೆಸುತ್ತಿದ್ದಾಳೆ. ಆಕೆಯ ಸಾಹಸವನ್ನು ಮೆಚ್ಚಬೇಕು ಬಿಡಿ.

ಈಗ ಪ್ರಶ್ನೆಯಿರುವುದು ಕೊರತೆಯಾಗುತ್ತಿರುವ ಪತ್ರಕರ್ತರ ನಿಯತ್ತಿನದ್ದು. ಸಮಾಜವನ್ನು ಸದಾ ಜಾಗೃತ ಸ್ಥಿತಿಯಲ್ಲಿಡಬೇಕಾದ ಮಾಧ್ಯಮದವರೇ ಹೀಗೆ ಸಮಾಜ ಕಂಟಕ ಕಾರ್ಯದಲ್ಲಿ ನಿಂತರೆ ಪರಿಹಾರಕ್ಕಾಗಿ ಎಲ್ಲಿ ತಡಕಾಡಬೇಕು ಹೇಳಿ? ಹಾಗಂತ ಇದು ಹೊಸತೇನಲ್ಲ. ಬಖರ್ಾದತ್ ನೀರಾರಾಡಿಯಾಳೊಂದಿಗಿನ ಹಗರಣದಲ್ಲಿ ಸಿಕ್ಕುಬಿದ್ದಿದ್ದನ್ನು ಮರೆಯಲುಂಟೇ? ಎನ್ಡಿಟಿವಿ ದೇಶದ ಬೊಕ್ಕಸಕ್ಕೆ ಮಾಡಿದ ಸಾವಿರಾರು ಕೋಟಿ ರೂಪಾಯಿ ಮೋಸವನ್ನು ಹಾಗೆ ತಳ್ಳಿಹಾಕಿಬಿಡುವುದು ಸಾಧ್ಯವೇ? ದೆಹಲಿಯಲ್ಲಿ ಕುಳಿತಿರುವ ಅನೇಕ ಪತ್ರಕರ್ತರು ದೊಡ್ಡ-ದೊಡ್ಡ ಫಾಮರ್್ಹೌಸ್ಗಳ ಮಾಲೀಕರೆಂಬುದನ್ನು ಸಮಥರ್ಿಸಿಕೊಳ್ಳಲು ಅವರ ಆದಾಯದ ಯಾವ ಸ್ಲಿಪ್ಪುಗಳೂ ತಾಳೆಯಾಗುವುದೇ ಇಲ್ಲವಲ್ಲ. ತರುಣ್ ತೇಜ್ಪಾಲ್ರಂತಹ ಅನೇಕರ ಮೇಲೆ ಲೈಂಗಿಕ ಕಿರುಕುಳದ ದೋಷಾರೋಪಣೆ ಇದ್ದರೂ ಅವರುಗಳು ಎಡಪಂಥೀಯ ಚಿಂತಕರುಗಳ ನಡುವೆ ಗೌರವಾನ್ವಿತರಾಗಿಯೇ ಉಳಿಯುತ್ತಾರಲ್ಲಾ. ಮೀಟೂ ಹಗರಣದಲ್ಲಿ ಸಿಲುಕಿ ಹಾಕಿಕೊಂಡ ರಾಜಕಾರಣಿ ರಾಜಿನಾಮೆ ಕೊಟ್ಟ. ಆದರೆ ಪತ್ರಕರ್ತ ವಿನೋದ್ ದುವಾ ಇನ್ನೂ ಅದೇ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರಲ್ಲಾ. ಏನೆನ್ನಬೇಕು ಹೇಳಿ?

Comments are closed.