ವಿಭಾಗಗಳು

ಸುದ್ದಿಪತ್ರ


 

ಪರಿವಾರ ರಾಜಕೀಯಕ್ಕೆ ಅಂತ್ಯ ಬಂದಿದೆ!

ರಾಜ್ದೀಪ್ ಸರ್ದೇಸಾಯಿಯೊಂದಿಗೆ ಜೊತೆಗಾರನಾಗಿ ಕುಳಿತುಕೊಳ್ಳುತ್ತಿದ್ದ ಅರ್ನಬ್ ಕ್ರಮೇಣ ಬೆಳೆಯುತ್ತಾ ಟೈಮ್ಸ್ ನೌನಲ್ಲಿ ತನ್ನದ್ದೇ ಆದ ಶೋ ನಡೆಸಿಕೊಡುವ ವೇಳೆಗೆ ಬಲಾಢ್ಯವಾಗಿಬಿಟ್ಟಿದ್ದ. ಆಳುವ ಸಕರ್ಾರದ ವಿರುದ್ಧದ 2ಜಿ, 3ಜಿ ಹಗರಣಗಳನ್ನು, ಕಾಮನ್ವೆಲ್ತ್ ಗೇಮ್ಸ್ ಹಗರಣವನ್ನು ಆತ ಬಯಲಿಗೆಳೆದು ಸಕರ್ಾರವನ್ನು ಪ್ರಶ್ನಿಸಿದ ರೀತಿ ಅನನ್ಯವಾಗಿತ್ತು.

ದೇಶ ಹೊಸ ದಿಕ್ಕಿನತ್ತ ಸಾಗುತ್ತಿದೆ. ಅನೇಕ ದೊಡ್ಡವರ ಬಂಡವಾಳಗಳು ಸಹಜವಾಗಿಯೇ ಹೊರಬರುತ್ತಿದೆ. ಒಂದು ದಶಕದ ಹಿಂದೆ ಗಾಂಧಿ ಪರಿವಾರದ ಕುರಿತಂತೆ ಈ ದೇಶದಲ್ಲಿ ಯಾರೂ ತುಟಿಪಿಟಿಕ್ ಎನ್ನುತ್ತಿರಲಿಲ್ಲ. ಈಗ ಹಾಗೇನಿಲ್ಲ. ಮಾಧ್ಯಮಗಳು ಮುಲಾಜಿಲ್ಲದೇ ಅವರು ಮಾಡಿರುವ ತಪ್ಪನ್ನು ಎತ್ತಿ ತೋರಿಸುತ್ತದೆ. ತೀರಾ ಇತ್ತೀಚೆಗೆ ಸೋನಿಯಾ ಮತ್ತೊಮ್ಮೆ ಕಾಂಗ್ರೆಸ್ಸಿನ ಚುಕ್ಕಾಣಿಯನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿರುವುದೇ ಇದಕ್ಕೆ ಸಾಕ್ಷಿ. ಅವರ ಪರಿಸ್ಥಿತಿಯೂ ಹೇಗಾಗಿದೆ ಎಂದರೆ ಕಾಂಗ್ರೆಸ್ಸಿನೊಳಗಿರುವ ಹಿರಿಯರು ರಾಹುಲ್ ವಿರುದ್ಧ ತಿರುಗಿ ಬೀಳುವಷ್ಟು. ಇಷ್ಟು ವರ್ಷಗಳ ಕಾಲ ಪರಿವಾರದ ಜೀತ ಮಾಡಿಕೊಂಡು ಬಂದವರೂ ಏಕಾಕಿ ಹೀಗೆ ಪ್ರತಿಕ್ರಿಯಿಸುತ್ತಿರುವುದು ನೋಡಿದರೆ ಒಟ್ಟಾರೆ ಪರಿವಾರ ರಾಜಕೀಯ ಇನ್ನು ಮುಂದೆ ಅಂತ್ಯವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಇದು ಭಾರತದ ಪಾಲಿಗೆ ಒಳ್ಳೆಯ ಸಂಗತಿಯೇ. ಹಾಗಂತ ಇದು ರಾಜಕೀಯದಲ್ಲಿ ಮಾತ್ರವಲ್ಲ, ಸಿನಿಮಾ ರಂಗದಲ್ಲೂ ಕೂಡ ಪರಿವಾರ ರಾಜಕೀಯ ಅಂತ್ಯಗೊಂಡು ಅನೇಕ ಸತ್ಯಗಳು ಬಯಲಿಗೆ ಬರುವ ಲಕ್ಷಣಗಳು ಗೋಚರವಾಗುತ್ತಿವೆ. ಸುಷಾಂತ್ ಸಿಂಗ್ ರಜಪೂತ್ ಅದಕ್ಕೆ ನಾಂದಿ ಹಾಡಿದ್ದಾನೆ ಅಷ್ಟೇ. ಯಾರು ಏನೇ ಹೇಳಲಿ ಅರ್ನಬ್ ಗೋಸ್ವಾಮಿಯನ್ನು ಮೆಚ್ಚಲೇಬೇಕು. ಆತ ಪತ್ರಿಕೋದ್ಯಮದಲ್ಲಿ ಬೆಳೆದು ಬಂದ ಹಾದಿ, ಈಗ ಆತ ಏರಿರುವ ಎತ್ತರವನ್ನು ಯಾರೂ ಅವಗಣನೆ ಮಾಡಲು ಸಾಧ್ಯವೇ ಇಲ್ಲ. ರಾಜ್ದೀಪ್ ಸರ್ದೇಸಾಯಿಯೊಂದಿಗೆ ಜೊತೆಗಾರನಾಗಿ ಕುಳಿತುಕೊಳ್ಳುತ್ತಿದ್ದ ಅರ್ನಬ್ ಕ್ರಮೇಣ ಬೆಳೆಯುತ್ತಾ ಟೈಮ್ಸ್ ನೌನಲ್ಲಿ ತನ್ನದ್ದೇ ಆದ ಶೋ ನಡೆಸಿಕೊಡುವ ವೇಳೆಗೆ ಬಲಾಢ್ಯವಾಗಿಬಿಟ್ಟಿದ್ದ. ಆಳುವ ಸಕರ್ಾರದ ವಿರುದ್ಧದ 2ಜಿ, 3ಜಿ ಹಗರಣಗಳನ್ನು, ಕಾಮನ್ವೆಲ್ತ್ ಗೇಮ್ಸ್ ಹಗರಣವನ್ನು ಆತ ಬಯಲಿಗೆಳೆದು ಸಕರ್ಾರವನ್ನು ಪ್ರಶ್ನಿಸಿದ ರೀತಿ ಅನನ್ಯವಾಗಿತ್ತು. ಅಲ್ಲಿಯವರೆಗೂ ತಾವು ಮಾಡಿದ್ದೇ ಸತ್ಯವೆಂಬಂತೆ ಬೀಗುತ್ತಿದ್ದ ಕಾಂಗ್ರೆಸ್ಸು ಅರ್ನಬ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಪತರಗುಟ್ಟಿ ಹೋಗುತ್ತಿತ್ತು. ಅನೇಕ ಬಾರಿ ಕಾಂಗ್ರೆಸ್ಸಿನ ವಕ್ತಾರರು ಚಚರ್ೆಯ ನಡುವೆಯೇ ಎದ್ದು ಹೋಗಿದ್ದು ಮತ್ತು ಚಚರ್ೆಗೆ ಬರುವುದಿಲ್ಲವೆಂದು ತಮಗೆ ತಾವೇ ನಿರ್ಬಂಧ ಹೇರಿಕೊಂಡಿದ್ದು ಆಗಿಬಿಟ್ಟಿದೆ. ಯಾವುದಾದರೊಂದು ವಿಚಾರವನ್ನು ಹಿಡಿದುಕೊಂಡರೆ ಆತ ದಿನೇ ದಿನೇ ಅದರ ಕುರಿತಂತೆ ಹೊಸ-ಹೊಸ ಸಂಗತಿಗಳನ್ನು ಹುಡುಕಾಡುತ್ತಾ ತನ್ನ ತಂಡವನ್ನು ಬಳಸಿಕೊಂಡು ಆಳಕ್ಕೆ ಹೊಕ್ಕು ಸತ್ಯ ಅನಾವರಣ ಮಾಡುವ ಪರಿ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿಯೇ ಆತ ಟೈಮ್ಸ್ ನೌನಲ್ಲಿದ್ದಾಗಲೂ ಅಗ್ರಣಿಯೇ ಮತ್ತು ಈಗಲೂ ಅಗ್ರಣಿಯೇ.

5

ಟೈಮ್ಸ್ ನೌನ ಮಾಲೀಕರು ಸಕರ್ಾರದ ವಿರುದ್ಧ ಬೆಂಕಿ ಕಾರುತ್ತಿರುವ ಅರ್ನಬ್ಗೆ ಚೌಕಟ್ಟು ಹಾಕಲೆತ್ನಿಸಿದಾಗ ಪ್ರತಿಭಟಿಸಿ ಬಿಟ್ಟುಬಂದವ ರಿಪಬ್ಲಿಕ್ ಎಂಬ ಸ್ವಂತದ ಸಂಸ್ಥೆಯನ್ನು ಕಟ್ಟಿಕೊಂಡ. ಅದರ ಮೂಲಕ ಮತ್ತೆ ತನ್ನ ಬಿಡುಬೀಸಾದ ಮಾತಿನ ಮೂಲಕ ಜನರನ್ನು ಸೆಳೆದ. ನೋಡ-ನೋಡುತ್ತಲೇ ಹೊಸದಾಗಿ ಶುರುವಾದ ಹಿಂದಿ ಮತ್ತು ಇಂಗ್ಲೀಷ್ ಚಾನೆಲ್ಗಳೆರಡನ್ನೂ ನಂಬರ್ ಒನ್ ಪಟ್ಟಕ್ಕೇರಿಸಿ ಕೂರಿಸಿಬಿಟ್ಟ. ಅದೂ ಎಂತಹ ಸಂದರ್ಭದಲ್ಲಿ? ಬಹುತೇಕ ಪತ್ರಕರ್ತರ ಸಮೂಹ ಅವನ ವಿರುದ್ಧವೇ ನಿಂತಿದ್ದಾಗ! ಅರ್ನಬ್ನ ಬೆಳವಣಿಗೆಯನ್ನು ಸಹಿಸಲಾಗದೇ ಅವರು ಆಡಿಕೊಳ್ಳುವ, ಟ್ರಾಲ್ ಮಾಡುವ ಪ್ರಯತ್ನ ಮಾಡುತ್ತಿರುವಾಗಲೂ ಆತ ಮಾತ್ರ ಸದ್ದಿಲ್ಲದೇ ಬೆಳೆದುಬಿಟ್ಟ. ಅರ್ನಬ್ನ ವಿಚಾರದಲ್ಲಿ ಸದ್ದಿಲ್ಲದೇ ಎಂದರೆ ಯಾರೂ ನಂಬುವುದಿಲ್ಲ ಬಿಡಿ. ಏಕೆಂದರೆ ಅರ್ನಬ್ ಸದ್ದಿಗೇ ವಿಖ್ಯಾತನಾದವನು. ಅವನ ಕೂಗಾಟ ಒಂದು ನಶೆ ಇದ್ದಂತೆ. ‘ನನಗೆ ಅವನ ಕೂಗಾಟ ಹಿಡಿಸುವುದಿಲ್ಲ’ ಎಂದು ಹೇಳುವವರು ಬೇಡವೆಂದರೂ ಪ್ರತಿದಿನ ಅವನ ಡಿಬೆಟ್ ಅನ್ನು ನೋಡುತ್ತಲೇ ಕೂರುತ್ತಾರೆ. ಅದು ಅವನ ವೈಶಿಷ್ಟ್ಯ. ಈ ಕಾರಣದಿಂದಾಗಿಯೇ ಆತ ಈ ದೇಶದಲ್ಲಿ ಬಲುದೊಡ್ಡ ಒಪಿನಿಯನ್ ಮೇಕರ್ ಆಗಿ ಹೊರ ಹೊಮ್ಮಿದ್ದಾನೆ. ಆತ ಇಂದು ತೆಗೆದುಕೊಂಡ ವಿಚಾರ ಮರುದಿನ ದೇಶದಲ್ಲಿ ಬೆಂಕಿ ಹೊತ್ತಿಸಲು ಸಾಕು. ತನ್ನ ಮುಂಬೈನ ಸ್ಟುಡಿಯೊದಲ್ಲಿ ಕುಳಿತು ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾರನ್ನು ಆತ ಆಕೆಯ ಮೂಲ ಹೆಸರು ಆಂಟೋನಿಯೋ ಮೈನೋ ಎಂದು ಕರೆದದ್ದಕ್ಕೆ ಕುಪಿತವಾದ ಕಾಂಗ್ರೆಸ್ಸು ಆತನ ಮೇಲೆರಗಲು ಪ್ರಯತ್ನಿಸಿ ಸೋತಿತಲ್ಲ; ಆನಂತರ ಪೊಲೀಸ್ ಸ್ಟೇಶನ್ಗೆ ಆತನನ್ನು ಓಯ್ದು ಮಾನಸಿಕ ಹಿಂಸೆ ಕೊಡುವ ಪ್ರಯತ್ನ ನಡೆಸಿತಲ್ಲ, ಬೇರೆ ಯಾರಾದರೂ ಆಗಿದ್ದರೆ ಮುರಿದು ಬೀಳುತ್ತಿದ್ದರೇನೋ. ಅರ್ನಬ್ ಕಾಂಗ್ರೆಸ್ಸನ್ನು ಎದುರು ಹಾಕಿಕೊಳ್ಳಲು ತೊಡೆತಟ್ಟಿ ನಿಂತ. ಆತನನ್ನು ಬೇಕೆಂತಲೇ ಹಿಂಸಿಸಿದ ಶಿವಸೇನೆಗೆ ಆತ ಸರಿಯಾಗಿ ಪಾಠ ಕಲಿಸಿದ್ದು ಹೇಗೆ ಗೊತ್ತೇ? ಸುಷಾಂತ್ ಸಿಂಗ್ ರಜಪೂತ್ನ ಸಾವಿನ ನಿಗೂಢತೆಯ ಅಂತರಾಳವನ್ನು ಬೇಧಿಸುವ ಮೂಲಕ. ಅಲ್ಲಿಯವರೆಗೂ ಆತ್ಮಹತ್ಯೆ ಎಂದು ಬಿಂಬಿತವಾಗಿದ್ದ ಈ ಸಾವು ರಿಪಬ್ಲಿಕ್ ಮತ್ತು ಟೈಮ್ಸ್ ನೌ ಕೈ ಹಾಕಿದ ಮೇಲೆ ಒಂದೊಂದೇ ಎಳೆ ಅನಾವರಣಗೊಳ್ಳುತ್ತಾ ಸಾಗಿತು. ರಿಚಾ ಚಕ್ರವತರ್ಿ, ಆಕೆಯ ಹಿಂದಿರಬಹುದಾದ ಮಹೇಶ್ ಭಟ್, ಆತನನ್ನಾಡಿಸುವ ಸಲ್ಮಾನ್ ಖಾನ್, ಅವನ ಹಿಂದಿರುವ ದಾವೂದ್ ಇಬ್ರಾಹಿಂ ಒಬ್ಬೊಬ್ಬರಾಗಿ ಎಲ್ಲರೂ ಬೆಳಕಿಗೆ ಬರಲಾರಂಭಿಸಿದರು! ಅರ್ನಬ್ ಎಂತಹ ವೇದಿಕೆ ನಿಮರ್ಿಸಿಕೊಟ್ಟನೆಂದರೆ ಪರಿವಾರ ರಾಜಕೀಯದಿಂದಾಗಿ ಬೇಸತ್ತು ಬಸವಳಿದಿದ್ದ ಅನೇಕ ಕಲಾವಿದರು ಈಗ ವೇದಿಕೆಯಲ್ಲಿ ಮಾತನಾಡಲಾರಂಭಿಸಿದರು. ಶಾರುಖ್, ಸಲ್ಮಾನ್ ಇವರುಗಳ ಏಕಸ್ವಾಮ್ಯ ಹೊಂದುವ ಬಯಕೆಯನ್ನು ಒಬ್ಬೊಬ್ಬರಾಗಿ ಬಯಲಿಗೆ ತಂದರು. ಕಂಗನಾ ರನಾವತ್ ಆರಂಭಿಸಿದ ಈ ಪ್ರಹಾರ ಈಗ ಎಲ್ಲಿಯವರೆಗೂ ಬಂದಿದೆ ಎಂದರೆ ಇದು ನಿಲ್ಲುವ ಯಾವ ಲಕ್ಷಣವನ್ನೂ ತೋರುತ್ತಿಲ್ಲ. ಹೇಗೆ ರಾಜಕೀಯದಲ್ಲಿ ಪರಿವಾರದ ಏಕಸ್ವಾಮ್ಯವನ್ನು ಮುರಿಯುವ ಮಹತ್ತಾದ ಪ್ರಯತ್ನ ಆರಂಭವಾಗಿದೆಯೋ ಅದಕ್ಕೆ ನಿಮರ್ಾಣಗೊಂಡ ವೇದಿಕೆಯ ಮೇಲೆ ಅನೇಕ ಹಿರಿಯ ರಾಜಕಾರಣಿಗಳು ಮಾತನಾಡುತ್ತಿದ್ದಾರೋ, ಅದೇ ರೀತಿಯಲ್ಲೀಗ ಸಿನಿಮಾದಲ್ಲಿ ಶುರುವಾಗಿದೆ. ಮುಂದಿನ ದಿನಗಳಲ್ಲಿ ನಿಜವಾದ ಪ್ರತಿಭೆ ಇರುವ ವ್ಯಕ್ತಿಗಳು ಸಮಾಜದಲ್ಲಿ ಪ್ರಬಲವಾಗಿ ಮುನ್ನುಗ್ಗುವ ಎಲ್ಲ ಅವಕಾಶಗಳನ್ನೂ ಪಡೆದುಕೊಳ್ಳುವುದಕ್ಕೆ ಇದೊಂದು ಪ್ರಮುಖ ಸಂಗತಿಯಾಗಿ ರೂಪುಗೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ. ಅರ್ನಬ್ ಆ ನಿಟ್ಟಿನಲ್ಲಿ ಎಲ್ಲರಿಂದಲೂ ಗೌರವಕ್ಕೊಳಪಡಬೇಕಾದವನೇ. ಬದಲಾವಣೆ ಈಗ ಬರದಿದ್ದರೆ ಇನ್ನೆಂದಿಗೂ ಇಲ್ಲ. ಎಲ್ಲರಿಗೂ ಒಳಿತಾದರೆ ಸಾಕು ಅಷ್ಟೇ!

Comments are closed.