ವಿಭಾಗಗಳು

ಸುದ್ದಿಪತ್ರ


 

ಪಾಕಿಸ್ತಾನದ ನಾಶ ಬಹುತೇಕ ನಿಶ್ಚಿತ!!

ಭಯೋತ್ಪಾದಕ ಹಂದಿಗಳು ಸಿಕ್ಕುಬಿದ್ದ ಮರುಕ್ಷಣ ಅವರಿಂದ ಹೊರತರಿಸಬೇಕಾದ ಎಲ್ಲಾ ಮಾಹಿತಿಗಳನ್ನೂ ಪಡಕೊಂಡು ಅವರನ್ನು ಕೊಂದುಬಿಸಾಡಿಬಿಡಬೇಕು. ಅವರನ್ನು ಉಳಿಸಿಕೊಂಡು ವಿಚಾರಣೆ ನಡೆಸುತ್ತಾ ಅವರನ್ನು ಹೀರೋ ಮಾಡಿಬಿಟ್ಟರೆ ಅದು ಅತ್ಯಂತ ಘೋರ. ನಾವೀಗ ಅದನ್ನೇ ಅನುಭವಿಸುತ್ತಿದ್ದೇವೆ.

ಬಹುಶಃ ಭಾರತದ ಇತಿಹಾಸದ ಅತ್ಯಂತ ಭೀಕರ ದಾಳಿ ಪುಲ್ವಾಮಾದ್ದು. ಒಟ್ಟು 37 ಜನ ಸೈನಿಕರ ಹತ್ಯೆ ನಡುರಸ್ತೆಯಲ್ಲಿ ನಡೆದುಹೋಯ್ತು. ಸಿಆರ್ಪಿಎಫ್ನ ಈ ಯೋಧರ ಕಗ್ಗೊಲೆ ಖಂಡಿತವಾಗಿಯೂ ದೇಶವನ್ನು ನಡುಗಿಸಿದೆ. ಒಂದು ಕ್ಷಣ ಭಾರತದ ಯುದ್ಧತಯಾರಿಯ ಕುರಿತಂತೆ ಅನುಮಾನವೇ ಮೂಡುವಷ್ಟು ಆತಂಕ ಎದುರಾಗಿದೆ. ಈ ಘಟನೆಯ ಹಿಂದೆ ಜೈಶ್-ಎ-ಮೊಹಮ್ಮದ್ನ ಕೈವಾಡ ಇದೆ ಎಂದು ಅವರೇ ಒಪ್ಪಿಕೊಂಡಿರುವುದು ಸತ್ಯವಾದರೂ ಆಫ್ಘಾನಿಸ್ತಾನದಲ್ಲಿ ತರಬೇತಿ ಪಡೆದ ಉಗ್ರನೊಬ್ಬ ಪಾಕಿಸ್ತಾನೀ ಸೈನಿಕರ ಸಹಾಯದೊಂದಿಗೆ ಆದಿಲ್ ಅಹ್ಮದ್ ದಾರ್ಗೆ ಸ್ಫೋಟಕಗಳನ್ನು ನಡುರಸ್ತೆಯಲ್ಲಿ ಸ್ಫೋಟಿಸುವ ತರಬೇತಿ ನೀಡಿದ್ದನಂತೆ. ಅನುಮಾನವೇ ಇಲ್ಲ. ಈ ಕೃತ್ಯದ ಹಿಂದೆ ಪಾಕಿಸ್ತಾನವೇ ನಿಂತಿದೆ. ದುರದೃಷ್ಟಕರ ಸಂಗತಿಯೆಂದರೆ ನಮಗೆ ಅರಿವಿಲ್ಲದಂತೆ ನಮ್ಮೊಳಗಿನ ದೇಶದ್ರೋಹಿಗಳೇ ಇದನ್ನು ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದೇವೆ. ಪಾಕಿಸ್ತಾನ ಬಯಸುತ್ತಿರುವುದೂ ಇದನ್ನೇ. ಭಾರತದೊಳಗಿನ ಮುಸಲ್ಮಾನರು ಭಾರತದ ವಿರುದ್ಧವಿದ್ದಾರೆ ಎಂದು ತೋರಿಸುವ ಧಾವಂತ ಅದಕ್ಕಿದೆ. ಅದಕ್ಕೆ ಸರಿಯಾಗಿ ಟೈಮ್ಸ್ ಆಫ್ ಇಂಡಿಯಾ ಎನ್ನುವತಂಹ ತೃತೀಯ ದಜರ್ೆ ಪತ್ರಿಕೆ ಮುಖಪುಟದ ಶೀಷರ್ಿಕೆ ಇದನ್ನೇ ಕೊಟ್ಟಿದೆ. ‘ಕಶ್ಮೀರದ ತರುಣನ ಆಕ್ರಮಣಕ್ಕೆ ಪಾಕಿಸ್ತಾನವನ್ನು ದೂಷಿಸುತ್ತಿರುವ ಭಾರತ’ ಎಂದು ಭಾರತವನ್ನು ಜರಿದಿದೆ. ನೆನಪಿಡಿ. ಈ ಅಕ್ಷರ ಭಯೋತ್ಪಾದಕರು ನಿಜವಾದ ಭಯೋತ್ಪಾದಕರಿಗಿಂತಲೂ ಭಯಾನಕವಾದವರು! ರಾಷ್ಟ್ರದ ನಾಯಕ ಸಮರ್ಥವಾಗಿರುವುದರಿಂದ ಅವರು ಸ್ಪಷ್ಟವಾದ ಮತ್ತು ದಿಟ್ಟವಾದ ಹೆಜ್ಜೆ ಇಟ್ಟೇ ಇಡುತ್ತಾರೆ. ಆದರೆ, ಒಳಗಿರುವ ನಾವುಗಳು ಈಗ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.

2

ವಾಸ್ತವವಾಗಿ ಇಡೀ ಪ್ರಕರಣದ ಹಿನ್ನೆಲೆಯಲ್ಲಿ ಜೈಶ್-ಎ-ಮೊಹಮ್ಮದ್ ಇದೆ ಎನ್ನುವುದಾದರೆ ಅದರ ಸೂತ್ರಧಾರ ಮೌಲಾನಾ ಮಸೂದ್ ಅಜರ್ ಕುರಿತಂತೆ ನಾವು ಎಚ್ಚರಿಕೆ ತಾಳಲೇಬೇಕು. 1994 ರಲ್ಲಿ ಕಶ್ಮೀರದ ಕಣಿವೆಯಲ್ಲಿ ಆಜಾದ್ ಕಾಶ್ಮೀರದ ಹೋರಾಟಕ್ಕೆಂದು ಬಂದಿದ್ದ ಈತನನ್ನು ಭಾರತೀಯ ಸೇನೆ ಬಂಧಿಸಿತು. ಮರುವರ್ಷವೇ ಕಶ್ಮೀರಕ್ಕೆ ಬಂದಿದ್ದ ವಿದೇಶೀ ಯಾತ್ರಿಕರನ್ನು ಅಪಹರಿಸಿದ ಉಗ್ರರು ಮೌಲಾನಾ ಬಿಡುಗಡೆಗೆ ಬೇಡಿಕೆ ಮಂಡಿಸಿದ್ದರು. ಸಕರ್ಾರ ತಲೆಬಾಗಿರಲಿಲ್ಲ. ಅಂದೇ ಈತನನ್ನು ಹೊಡೆದುರುಳಿಸಿಬಿಟ್ಟಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿರುವಾಗ ವಿಮಾನವೊಂದನ್ನು ಅಪಹರಿಸಲಾಯ್ತು. ಈ ವಿಮಾನದಲ್ಲಿದ್ದ ಪ್ರಯಾಣಿಕರನ್ನು ವಿಮಾನ ಸಮೇತ ಕಂದಾಹಾರ್ಗೊಯ್ದು ಬಿಡುಗಡೆಗೊಳಿಸಬೇಕೆಂದರೆ ಮೌಲಾನಾ ಅಜರ್ನನ್ನು ತಮಗೆ ತಂದೊಪ್ಪಿಸಬೇಕೆಂದು ಭಯೋತ್ಪಾದಕರು ಬೇಡಿಕೆ ಮಂಡಿಸಿದ್ದರು. ಅಂದು ಪ್ರತಿಪಕ್ಷಗಳೆಲ್ಲಾ ಬಾಯಿಬಡಿದುಕೊಂಡು ನಿಂತಿದ್ದವು. ಎಲ್ಲೆಡೆ ಪ್ರತಿಭಟನೆಗಳು. ಭಯೋತ್ಪಾದಕರ ಬಳಿ ಸಿಕ್ಕಿಕೊಂಡಿದ್ದವರ ಪರಿವಾರದವರೂ ಕಣ್ಣೀರು ಸುರಿಸಿಬಿಟ್ಟರು. ಮಾಧ್ಯಮಗಳು ಸಕರ್ಾರದ ಮೇಲೆ ಎಂತಹ ಒತ್ತಡ ತಂದಿತೆಂದರೆ ಕೊನೆಗೆ ವಾಜಪೇಯಿ ಸಕರ್ಾರದ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಮೌಲಾನಾನನ್ನು ತಮ್ಮೊಂದಿಗೊಯ್ದು ಭಯೋತ್ಪಾದಕರಿಗೊಪ್ಪಿಸಿ ವಿಮಾನವನ್ನು ಮರಳಿ ತಂದರು. ಅದೇ ಮೌಲಾನಾ ಮುಂದಿನ ಎರಡು ವರ್ಷಗಳಲ್ಲಿ ಭಾರತದ ಸಂಸತ್ತಿನ ಮೇಲೆ ದಾಳಿ ಮಾಡಿದ್ದ. 2008 ರ ಮುಂಬೈ ದಾಳಿಯಲ್ಲಿ ಆತನದ್ದೇ ನೇತೃತ್ವ. 2016ರ ಪಠಾಣ್ಕೋಟ್ ದಾಳಿಯಲ್ಲಿ ಆತನದ್ದೇ ಮುಖ್ಯಭೂಮಿಕೆ. ಮತ್ತೀಗ 37 ಜನರನ್ನು ಬಲಿತೆಗೆದುಕೊಂಡ ಈ ಪ್ರಕರಣದಲ್ಲಿ ಆತನೇ ಹಿಂದಿದ್ದಾನೆ! ಭಯೋತ್ಪಾದಕ ಹಂದಿಗಳು ಸಿಕ್ಕುಬಿದ್ದ ಮರುಕ್ಷಣ ಅವರಿಂದ ಹೊರತರಿಸಬೇಕಾದ ಎಲ್ಲಾ ಮಾಹಿತಿಗಳನ್ನೂ ಪಡಕೊಂಡು ಅವರನ್ನು ಕೊಂದುಬಿಸಾಡಿಬಿಡಬೇಕು. ಅವರನ್ನು ಉಳಿಸಿಕೊಂಡು ವಿಚಾರಣೆ ನಡೆಸುತ್ತಾ ಅವರನ್ನು ಹೀರೋ ಮಾಡಿಬಿಟ್ಟರೆ ಅದು ಅತ್ಯಂತ ಘೋರ. ನಾವೀಗ ಅದನ್ನೇ ಅನುಭವಿಸುತ್ತಿದ್ದೇವೆ.

3

ಈ ಎಲ್ಲ ಘಟನೆಯ ನಡುವೆ ನಾವು ಸೂಕ್ಷ್ಮವಾಗಿ ಅವಲೋಕಿಸಬೇಕಾದ ಕೆಲವು ಸಂಗತಿಗಳಿವೆ. ಕಳೆದ ಕೆಲವಾರು ವರ್ಷಗಳಿಂದ ಭಯೋತ್ಪಾದಕರ ಜೊತೆಗೂಡಲು ಕಶ್ಮೀರದ ತರುಣರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಬುರ್ಹನ್ವನಿಯನ್ನು ಪೋಸ್ಟರ್ಬಾಯ್ ಮಾಡಿಕೊಂಡ ಭಯೋತ್ಪಾದಕ ಸಂಘಟನೆಗಳು ಅವನ ಮೂಲಕ ಅನೇಕ ತರುಣರನ್ನು ಸೆಳೆಯುವ ಪ್ರಯತ್ನ ಮಾಡಿದ್ದವು. ಆದರೆ ಭಾರತೀಯ ಸೇನೆ ಬುರ್ಹನ್ವನಿಯನ್ನು, ಅವನ ತಂಡವನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ, ಕೊಂದುಬಿಸಾಡಿದ ಮೇಲೆ ಭಯೋತ್ಪಾದಕ ಸಂಘಟನೆಗೆ ಸೇರುವ ಸ್ಥಳೀಯರ ಉತ್ಸಾಹ ಇಂಗಿಹೋಗಿತ್ತು. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಬಲುದೊಡ್ಡ ಕೃತ್ಯವೊಂದನ್ನು ನಡೆಸಲೇಬೇಕೆಂಬ ಹಠ, ಧಾವಂತ ಭಯೋತ್ಪಾದಕ ಸಂಘಟನೆಗಳಿಗೆ ಇದ್ದೇ ಇತ್ತು. ಅದರಲ್ಲೂ ಕಳೆದ ಕೆಲವಾರು ವರ್ಷಗಳಿಂದ ಉಗ್ರರೊಂದಿಗೆ ಸೇರಿಕೊಂಡು ಅಲ್ಲಿಂದ ತರಬೇತಿಯನ್ನು ಪಡೆದು ಕಶ್ಮೀರದಲ್ಲಿ ಕದನಕ್ಕೆಂದು ಮರಳಿ ಬಂದ ಅನೇಕರು ಸಕರ್ಾರದ ಸವಲತ್ತುಗಳನ್ನು ಪಡೆದು ಸಹಜವಾದ ಬದುಕು ನಡೆಸುವ ಚಿಂತನೆಯತ್ತ ವಾಲುತ್ತಿದ್ದರು. ಹೀಗಾಗಿಯೇ ಪಾಕಿಸ್ತಾನದಿಂದಲೇ ತರಬೇತುಗೊಂಡ ತರುಣರನ್ನು ಇಲ್ಲಿಗೆ ಕಳಿಸಿ ಬಲುದೊಡ್ಡ ಕಾರ್ಯಗಳನ್ನು ಮಾಡಿಸಲಾಗುತಿತ್ತು. ಸ್ಥಳೀಯ ತರುಣರಲ್ಲೂ ಯಾವುದಾದರೂ ದೊಡ್ಡ ಸ್ಫೋಟದಲ್ಲಿ ಭಾಗಿಯಾಗುವ ಬಯಕೆಯನ್ನು ವಿಷದಂತೆ ತುಂಬಿದ ಜೈಶ್-ಎ-ಮೊಹಮ್ಮದ್ನ ನಾಯಕರು ಹೈಸ್ಕೂಲಿನಲ್ಲೇ ನಪಾಸಾಗಿ ಗಾರೆ ಕೆಲಸ ಮಾಡುತ್ತಿದ್ದ ಆದಿಲ್ ಅಹ್ಮದ್ ದಾರ್ನನ್ನು ಆಯ್ಕೆ ಮಾಡಿಕೊಂಡರು. ಮತಗ್ರಂಥದ ಸಾಲುಗಳನ್ನು ಅವನ ತಲೆಗೆ ಮತ್ತೆ ಮತ್ತೆ ತುಂಬಿ ಅವನನ್ನು ಈ ಕಾರ್ಯಕ್ಕೆ ವಿಶೇಷವಾಗಿ ಅಣಿಗೊಳಿಸಿದರು. ಹೀಗೊಂದು ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಭಾರತದ ಇಂಟೆಲಿಜೆನ್ಸ್ ವಿಭಾಗಕ್ಕೆ ಇದ್ದೇ ಇತ್ತು. 8ನೇ ತಾರೀಕಿನಂದೇ ಈ ಕುರಿತಂತಹ ವರದಿ ಸಿಆರ್ಪಿಎಫ್ ಕಛೇರಿಗಳಲ್ಲಿತ್ತು. ಆದರೆ ಯಾವ ಮಾಹಿತಿಯೂ ಇಷ್ಟು ಹೊತ್ತಿಗೆ ಇಂಥದ್ದೇ ಜಾಗದಲ್ಲಿ ಹೀಗೇ ಕೃತ್ಯ ನಡೆಯಲಿದೆ ಎಂಬುದನ್ನು ಹೇಳುವುದಿಲ್ಲ. ಈ ಹೊತ್ತಿನಲ್ಲೇ 2000 ಜನ ಸಿಆರ್ಪಿಎಫ್ ಯೋಧರು ಸಾಗುತ್ತಿದ್ದ ಕಾನ್ವಾಯ್ ಮೇಲೆ ದಾಳಿಯಾಗಿದ್ದು. ಆದಿಲ್ ದಾರ್ ತಾನು ಕುಳಿತ ಗಾಡಿಯಲ್ಲಿ 350 ಕೆಜಿಯಷ್ಟು ಸ್ಫೋಟಕಗಳನ್ನು ಹೊಂದಿದ್ದ. ಮಧ್ಯೆಯೇ ಬಂದು ನುಗ್ಗಿ ಗಾಡಿಗೆ ಡಿಕ್ಕಿ ಹೊಡೆದಾಗ ಸ್ಫೋಟಕಗಳು ಸಿಡಿದ ರಭಸಕ್ಕೆ 80 ಟನ್ನಿನ ಬುಲೆಟ್ ಪ್ರೂಫ್ ಟ್ರಕ್ಕೂ ಕೂಡ ಛಿದ್ರ-ಛಿದ್ರವಾಗಿ ಹೋಯ್ತು. ಅದರಲ್ಲಿ ಕುಳಿತಿದ್ದ ಸೈನಿಕರು ಕೈಗೆ ಸಿಗದಂತೆ ಮಾಂಸದ ಮುದ್ದೆಯಾಗಿ ಹೋದರು. ಈಗಲೂ ಆ ದೃಶ್ಯಗಳನ್ನು ನೆನಪಿಸಿಕೊಂಡರೆ ಎದೆ ಭಾರವಾಗುತ್ತದೆ.

4

ಇಡಿಯ ದೇಶಕ್ಕೆ ಆಕ್ರೋಶವಿದೆ ನಿಜ. ಮತ್ತೊಂದು ಸಜರ್ಿಕಲ್ ಸ್ಟ್ರೈಕ್ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಸಜರ್ಿಕಲ್ ಸ್ಟ್ರೈಕ್ ಎಂಬುದು ಅಚಾನಕ್ಕು ದಾಳಿ. ಅದು ಎದುರಾಳಿಗೆ ಗೊತ್ತಾಗದೇ ನಡೆಸುವಂಥದ್ದು. ಈಗ ಪಾಕಿಸ್ತಾನ ಇಂಥದ್ದೊಂದು ದಾಳಿ ನಡೆಯಬಹುದೆಂದು ನಮಗಿಂತ ಹೆಚ್ಚು ತಯಾರಾಗಿ ಕುಳಿತಿದೆ. ಹೀಗಾಗಿ ಅದು ಸಾಧ್ಯವಾಗದ ಮಾತು. ಇನ್ನು ಯುದ್ಧಕ್ಕೆ ನಾಲ್ಕಾರು ತಿಂಗಳುಗಳ ತಯಾರಿ ಬೇಕು. ಒಂದೆಡೆ ಕದನ ಭೂಮಿಯಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಬೇಕು. ಅದಕ್ಕೆ ಬೇಕಾದ ಮದ್ದು-ಗುಂಡುಗಳನ್ನು ಜೋಡಿಸಿಕೊಳ್ಳಬೇಕು. ಆಹಾರ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಕೊನೆಗೆ ಎದುರಾಳಿಗಳಿಗೆ ಗೊತ್ತಾಗದ ರೀತಿಯಲ್ಲಿ ದಾಳಿಯನ್ನು ಸಂಘಟಿಸಬೇಕು. ಆದರೆ ಈ ಬಾರಿ ಪಾಕಿಸ್ತಾನ ನಮ್ಮಿಂದ ಯುದ್ಧಸ್ವರೂಪದ ದಾಳಿಯನ್ನೂ ನಿರೀಕ್ಷಿಸುತ್ತಿರುವುದರಿಂದ ಅದೂ ಕೂಡ ಬುದ್ಧಿವಂತಿಕೆಯ ನಡೆಯಾಗಲಾರದು. ಹಾಗಂತ ಸುಮ್ಮನಿರುವುದಂತೂ ಸಾಧ್ಯವೇ ಇಲ್ಲ. ರಾಜತಾಂತ್ರಿಕ ಸಂಬಂಧವೂ ಸೇರಿದಂತೆ ಪಾಕಿಸ್ತಾನದೊಂದಿಗಿನ ಎಲ್ಲ ಸಂಬಂಧಗಳನ್ನೂ ಕಡಿದುಕೊಳ್ಳಬೇಕು. ಪಾಕಿಸ್ತಾನಕ್ಕೆ ನಮ್ಮಿಂದ ಹರಿಯುವ ನೀರನ್ನು ತಡೆಯಬೇಕು. ನಮ್ಮ ಪ್ರಭಾವ ಇರುವ ರಾಷ್ಟ್ರಗಳೂ ಪಾಕಿಸ್ತಾನದ ಮೇಲೆ ದಿಗ್ಬಂಧನ ಹೇರುವಂತೆ ಒತ್ತಡ ತರಬೇಕು. ಕೊನೆಗೆ ಪಾಕಿಸ್ತಾನವನ್ನು ಜಾಗತಿಕವಾಗಿ ಪ್ರತ್ಯೇಕಿಸಿ ಅದನ್ನು ಹೀನ, ದೀನ, ಕೃಪಣ, ದರಿದ್ರ ಸ್ಥಿತಿಗೆ ತಂದು ನಿಲ್ಲಿಸಬೇಕು. ಚೀನಾದೊಂದಿಗೆ ವ್ಯಾಪಾರದ ಯುದ್ಧವನ್ನು ಶುರುಮಾಡಲೇಬೇಕು. ಈಗಾಗಲೇ ಆ್ಯಂಟಿ ಡಂಪಿಂಗ್ ತೆರಿಗೆಯನ್ನು ಚೀನಾ ವಸ್ತುಗಳ ಮೇಲೆ ಹೇರುವ ಸಾಹಸ ತೋರಿರುವ ಭಾರತ ಬರುವ ದಿನಗಳಲ್ಲಿ ಹಂತ-ಹಂತವಾಗಿ ಚೀನಾ ವಸ್ತುಗಳನ್ನು ನಿಷೇಧಿಸಬೇಕು. ಇಷ್ಟು ಸಾಲದೆಂಬಂತೆ ಪಾಕಿಸ್ತಾನದ ವಿರುದ್ಧ ದನಿಯೆತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತು ಬಲೂಚಿಸ್ತಾನಗಳಲ್ಲಿ ಪ್ರತ್ಯೇಕತಾವಾದಿಗಳನ್ನು ಗುರುತಿಸಿ ಅವರಿಗೆ ಹಣಕೊಟ್ಟು ಪಾಕಿಸ್ತಾನದ ವಿರುದ್ಧ ಸಿಡಿದೇಳುವಂತೆ ಮಾಡಬೇಕು. ಹಾಗಾದರೆ ಪಾಕಿಸ್ತಾನ ನಾಲ್ಕು ತುಂಡಾಗುತ್ತದೆ. ಬಲೂಚಿಸ್ತಾನವನ್ನು ನಿಭಾಯಿಸುವುದರೊಳಗೆ ಹೈರಾಣಾಗಿ ಬೀದಿಗೆ ಬಂದು ನಿಲ್ಲುತ್ತದೆ. ಆದರೆ ಇದಕ್ಕೆಲ್ಲಾ ಸಮಯ ಬೇಕಲ್ಲ. ನಮ್ಮೆಲ್ಲರಿಗೂ ಈಗಲೇ ಎಲ್ಲವೂ ನಡೆದುಬಿಡಬೇಕೆಂಬ ಧಾವಂತವಿದೆ. ನೆನಪಿಡಿ, ಸಜರ್ಿಕಲ್ ಸ್ಟ್ರೈಕಿಗೂ ಸೈನಿಕರು 10 ದಿನ ತೆಗೆದುಕೊಂಡಿದ್ದರು. ಈಗ ಪ್ರತಿಕ್ರಿಯೆ ಅದಕ್ಕಿಂತಲೂ ಭಾರಿಯಾಗಿರಬೇಕೆಂದರೆ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು!

5

ಪ್ರಧಾನಮಂತ್ರಿ ಮೋದಿ ಸ್ಪಷ್ಟವಾದ ದನಿಯಲ್ಲಿ ಹೇಳಿದ್ದಾರೆ ‘ಭಯೋತ್ಪಾದಕರು ಭಾರತದ ವಿರುದ್ಧ ಬಲುದೊಡ್ಡ ಪ್ರಮಾದ ಎಸಗಿದ್ದಾರೆ. ಅದಕ್ಕೆ ಸರಿಯಾದ ಬೆಲೆಯನ್ನು ಅವರು ತೆರಲೇಬೇಕು.’ ಪ್ರಧಾನಿ ಈ ಹಿಂದೆಯೂ ಹೇಳಿದ ಮಾತನ್ನು ಉಳಿಸಿಕೊಂಡಿರುವುದರಿಂದ ಪಾಕಿಸ್ತಾನದ ವಿರುದ್ಧ ಬಲುದೊಡ್ಡ ಕಾಯರ್ಾಚರಣೆಗೆ ನಾವೆಲ್ಲರೂ ಸಿದ್ಧರಾಗಬಹುದು!!

Comments are closed.