ವಿಭಾಗಗಳು

ಸುದ್ದಿಪತ್ರ


 

ಪಾಕಿಸ್ತಾನದ ನಾಶ ಸುಲಭ; ನಮ್ಮೊಳಗಿನ ಉಗ್ರರ ನಾಶ ಹೇಗೆ?!

ಒಂದೆಡೆ ಜಾಗತಿಕ ಮಟ್ಟದಲ್ಲಿ ಮೋದಿ ಮತ್ತೊಮ್ಮೆ ಪ್ರಭಾವವನ್ನು ಬೀರುವ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ ಪಾಕಿಸ್ತಾನವನ್ನು ನಡುಗಿಸಲಾರಂಭಿಸಿದ್ದರು. ಅಭಿನಂದನ್ ಅನ್ನು ಮುಂದಿಟ್ಟುಕೊಂಡು ಶಾಂತಿಯ ಮಾತುಕತೆಗೆ ಆಹ್ವಾನ ಕೊಡುತ್ತಿರುವ ಪಾಕಿಸ್ತಾನವನ್ನು ಧಿಕ್ಕರಿಸಿ, ಅಭಿನಂದನ್ನ ಬಿಡುಗಡೆಯಾಗದ ಹೊರತು ಬೇರೆ ಯಾವ ಚಚರ್ೆಯೂ ಇಲ್ಲ ಎಂಬ ಸ್ಪಷ್ಟವಾದ ಸಂದೇಶವನ್ನು ಕೊಟ್ಟರು. ಮರುದಿನದ ವೇಳೆಗಾಗಲೇ ಜಗತ್ತಿನ ಅನೇಕ ರಾಷ್ಟ್ರಗಳು ಪಾಕಿಸ್ತಾನಕ್ಕೆ ಛೀಮಾರಿ ಹಾಕಿಯಾಗಿತ್ತು.

ಈ ಅಂಕಣ ಓದುವ ವೇಳೆಗೆ ವಿಂಗ್ ಕಮ್ಯಾಂಡರ್ ಅಭಿನಂದನ್ ಭಾರತದ ತೆಕ್ಕೆಯಲ್ಲಿ ಇರುತ್ತಾರೆ. ಸರಿಸುಮಾರು 27ನೇ ತಾರೀಕಿನ ಬೇಳಿಗ್ಗೆ 10.30ರ ವೇಳೆಗೆ ಅಭಿನಂದನ್ ಪಾಕಿಗಳ ತೆಕ್ಕೆಗೆ ಬಿದ್ದಿದ್ದಾರೆಂದು ಭಾವಿಸಿದರೂ ಮರುದಿನ ಸಂಜೆ 4 ಗಂಟೆಯವೇಳೆಗಾಗಲೇ ಅವರನ್ನು ಬಿಡುಗಡೆ ಮಾಡಲೇಬೇಕಾದ ಒತ್ತಡಕ್ಕೆ ಪಾಕಿಸ್ತಾನ ಸಿಕ್ಕುಹಾಕಿಕೊಂಡಿತು. ಅಂದರೆ ಒಟ್ಟು 30 ಗಂಟೆಗಳೊಳಗೆ ಭಾರತ ಪಾಕಿಸ್ತಾನದ ಮೇಲೆ ತನ್ನ ಒತ್ತಡವನ್ನು ಹೇಗೆ ತಂದಿತೆಂದರೆ ಅಭಿನಂದನ್ ಅನ್ನು ಬಿಟ್ಟುಕೊಡದೇ ಬೇರೆ ಮಾರ್ಗವೇ ಇರಲಿಲ್ಲ!

2

ಭಾರತದ ರಾಜತಾಂತ್ರಿಕ ವ್ಯವಸ್ಥೆಗಳು ಈಗ ಮೊದಲಿನಂತಿಲ್ಲ. ನಾವೀಗ ನಮ್ಮ ಜನಸಂಖ್ಯೆಯನ್ನು ದೂರುತ್ತಾ ಕೂತಿಲ್ಲ. ಬದಲಿಗೆ ಇದೇ ಸಂಖ್ಯೆಯನ್ನು ಮುಂದಿಟ್ಟುಕೊಂಡು ಜಗತ್ತಿಗೆ ಎಚ್ಚರಿಕೆಯ ಸಂದೇಶ ರವಾನಿಸುವ ಸಾಮಥ್ರ್ಯ ಪಡೆದುಕೊಂಡಿದ್ದೇವೆ. ನಮ್ಮ ಆಕ್ರೋಶ, ನೋವು, ದುಃಖ, ಹತಾಶೆ, ಕೋಪ ಇವೆಲ್ಲವುಗಳನ್ನು ನಮ್ಮದ್ದೇ ಆದ ರೀತಿಯಲ್ಲಿ ಜಗತ್ತಿಗೆ ಮುಟ್ಟಿಸುವ ಮಾರ್ಗ ನಮಗೀಗ ಕರಗತವಾಗಿದೆ. ಅಭಿನಂದನ್ ಪಾಕಿಸ್ತಾನದ ಸೆರೆ ಸಿಕ್ಕಾಗ ಆರಂಭದಲ್ಲಿ ಅವನೊಂದಿಗೆ ನಡೆದುಕೊಂಡ ರೀತಿಗೂ ಆನಂತರ ಅವನನ್ನು ಗೌರವದಿಂದ ನೋಡಿಕೊಂಡ ಬಗೆಯಲ್ಲೂ ಅಜಗಜಾಂತರವಿತ್ತು. ಹಾಗೆ ನೋಡಿದರೆ 27ನೇ ತಾರೀಕು ಪಾಕಿಸ್ತಾನದ 24 ವಿಮಾನಗಳು ಭಾರತದೆಡೆಗೆ ನುಗ್ಗಿದಾಗ 50 ವರ್ಷದಷ್ಟು ಹಳೆಯದಾದ ಮಿಗ್ ವಿಮಾನದಲ್ಲಿ ಕುಳಿತಿದ್ದ ಅಭಿನಂದನ್ ಪಾಕಿಸ್ತಾನದ ಅತ್ಯಾಧುನಿಕ ಎಫ್-16 ವಿಮಾನವನ್ನು ಅಟ್ಟಿಸಿಕೊಂಡು ಹೋದದ್ದೇ ಒಂದು ಸಾಹಸ. ಬಲ್ಲ ಸೈನಿಕರು ಇದನ್ನು ಮಾರುತಿ-800 ಕಾರು ಬೆನ್ಜ್ ಕಾರನ್ನು ಅಟ್ಟಿಸಿಕೊಂಡು ಹೋದ ರೀತಿ ಎಂದು ಬಣ್ಣಿಸುತ್ತಾರೆ. ತನಗೆ ಸಿಕ್ಕ ಅವಕಾಶವನ್ನು, ತಾನು ಇದ್ದ ಸ್ಥಳದ ಪರಿಪೂರ್ಣ ಶಕ್ತಿಯನ್ನು ಉಪಯೋಗಿಸಿಕೊಂಡ ಅಭಿನಂದನ್ ಎಫ್-16 ಅನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದರು. ಆತನ ವಿಮಾನ ಕೆಳಗುರುಳಿದ್ದು ತನ್ನದ್ದೇ ದೋಷದಿಂದಲೋ ಅಥವಾ ಪಾಕಿಸ್ತಾನದ ಮಿಸೈಲ್ ಬಿದ್ದಿದ್ದರಿಂದಲೋ ಎಂಬುದು ಇನ್ನೀಗಷ್ಟೇ ತಿಳಿಯಬೇಕಿದೆ. ಆದರೆ ವಿಮಾನದಿಂದ ಹಾರಿ ಪಾಕಿಸ್ತಾನದ ಗಡಿಯೊಳಗೆ ಬಿದ್ದ ಅಭಿನಂದನ್ ಅನ್ನು ಸ್ಥಳೀಯರು ಹಿಡಿದುಕೊಂಡಾಗ ಸುಮ್ಮನಿರದ ಅಭಿನಂದನ್ ತಾನಿರುವ ಜಾಗವನ್ನು ದೃಢಪಡಿಸಿಕೊಂಡು ಎದುರಿಗಿರುವವರು ಪಾಕಿಸ್ತಾನಿಯರು ಎಂದು ಗೊತ್ತಾದೊಡನೆ ತನ್ನ ಬಳಿಯಿರುವ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಜನ ಬೆದರಿ ಓಡುವ ಆ ಸಮಯದಲ್ಲೇ ತನ್ನ ಬಳಿಯಿದ್ದ ಪ್ರಮುಖ ದಾಖಲೆಗಳನ್ನು ನುಂಗಿಬಿಟ್ಟ. ಆನಂತರ ಜನ ಅಭಿನಂದನ್ಗೆ ಸಾಕಷ್ಟು ಥಳಿಸಿದ್ದಾರೆ. ಅದೇ ವೇಳಗೆ ಪಾಕಿಸ್ತಾನದ ಎಫ್-16ನಿಂದ ಕೆಳಗುರುಳಿದ ಇಬ್ಬರು ಪೈಲಟ್ಗಳನ್ನು ಪಾಕಿಸ್ತಾನದ ಜನರೇ ಶತ್ರುರಾಷ್ಟ್ರದವನೆಂದು ಭಾವಿಸಿ ಸಾಯುವಂತೆ ಬಡಿದಿದ್ದಾರೆ. ಅರೆಪ್ರಜ್ಞಾವಸ್ತೆಗೆ ಹೋದ ಒಬ್ಬ ಪೈಲಟ್ ಆನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಕೂಡ. ಇತ್ತ ಅಭಿನಂದನ್ ಅನ್ನು ಸೈನಿಕರು ಬಂಧಿಸಿ ವಿಜಯೋತ್ಸವವೆಂಬಂತೆ ಕರೆದೊಯ್ದಿದ್ದಾರೆ. ಸೈನ್ಯದ ಮೂಲಕ ಇಮ್ರಾನ್ಖಾನ್ಗೆ ಸುದ್ದಿ ಮುಟ್ಟುವಾಗ ಭಾರತದ ಮೂವರು ಪೈಲಟ್ಗಳು ಸೆರೆ ಸಿಕ್ಕಿದ್ದಾರೆಂಬ ಸಂತಸವನ್ನು ಹಂಚಿಕೊಳ್ಳಲಾಗಿತ್ತು. ಅದನ್ನು ಇಮ್ರಾನ್ಖಾನ್ ಹೇಳಿಯೂ ಆಗಿತ್ತು. ಆದರೆ ಹೀಗೆ ಸಿಕ್ಕ ಮೂವರಲ್ಲಿ ಇಬ್ಬರು ತನ್ನವರೇ ಎಂಬುದು ಅರಿವಾದಾಗ ಇಮ್ರಾನ್ಖಾನ್ಗೂ ಸೇರಿದಂತೆ ಇಡಿಯ ಪಾಕಿಸ್ತಾನಕ್ಕೆ ಅವಮಾನವಾಗಿತ್ತು! ಪಾಕಿಸ್ತಾನದ ಬೆಂಬಲಕ್ಕೆ ಸದಾ ನಿಲ್ಲುವ ರಾಷ್ಟ್ರಗಳಿಗೂ ಪಾಕಿಸ್ತಾನವನ್ನು ಬೆಂಬಲಿಸಿ ಉಪಯೋಗವಿಲ್ಲವೆಂಬ ಸತ್ಯ ಅರಿವಾಗಿತ್ತು. ಸೆರೆಸಿಕ್ಕಾಗಲೂ ತನ್ನ ತಾಕತ್ತನ್ನು ಸಮರ್ಥವಾಗಿಯೇ ಮೆರೆದ ಅಭಿನಂದನ್ ದೇಶದಲ್ಲಿ ಹೀರೊ ಆಗಿದ್ದ. ಆದರೆ ಈ ಒಟ್ಟಾರೆ ಘಟನೆ ಪ್ರಧಾನಮಂತ್ರಿಗಳ ನೆಮ್ಮದಿಯನ್ನು ಕಸಿದುಬಿಟ್ಟಿತ್ತು. ತರುಣರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನರೇಂದ್ರಮೋದಿ ಅರ್ಧದಲ್ಲೇ ಕಾರ್ಯಕ್ರಮದಿಂದೆದ್ದು ತುತರ್ು ಆಂತರಿಕ ಸಭೆ ಕರೆದುಬಿಟ್ಟರು. ಸೇನಾಪ್ರಮುಖರು ಭಾಗವಹಿಸಿದ್ದ ಈ ಸಭೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಕೂಲಂಕಷವಾಗಿ ಚಚರ್ಿಸಲಾಗಿತ್ತು. ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಸೈನ್ಯ ವಿಂಗ್ ಕಮ್ಯಾಂಡರ್ ಅಭಿನಂದನ್ ಪಾಕಿಸ್ತಾನದ ವಶದಲ್ಲಿರುವುದನ್ನು ದೃಢಪಡಿಸಿತು. ಆಗಲೇ ಭಾರತದ ನಿಗೂಢ ನಡೆಗಳು ಶುರುವಾಗಿದ್ದು!

3

ಒಂದೆಡೆ ಜಾಗತಿಕ ಮಟ್ಟದಲ್ಲಿ ಮೋದಿ ಮತ್ತೊಮ್ಮೆ ಪ್ರಭಾವವನ್ನು ಬೀರುವ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ ಪಾಕಿಸ್ತಾನವನ್ನು ನಡುಗಿಸಲಾರಂಭಿಸಿದ್ದರು. ಅಭಿನಂದನ್ ಅನ್ನು ಮುಂದಿಟ್ಟುಕೊಂಡು ಶಾಂತಿಯ ಮಾತುಕತೆಗೆ ಆಹ್ವಾನ ಕೊಡುತ್ತಿರುವ ಪಾಕಿಸ್ತಾನವನ್ನು ಧಿಕ್ಕರಿಸಿ, ಅಭಿನಂದನ್ನ ಬಿಡುಗಡೆಯಾಗದ ಹೊರತು ಬೇರೆ ಯಾವ ಚಚರ್ೆಯೂ ಇಲ್ಲ ಎಂಬ ಸ್ಪಷ್ಟವಾದ ಸಂದೇಶವನ್ನು ಕೊಟ್ಟರು. ಮರುದಿನದ ವೇಳೆಗಾಗಲೇ ಜಗತ್ತಿನ ಅನೇಕ ರಾಷ್ಟ್ರಗಳು ಪಾಕಿಸ್ತಾನಕ್ಕೆ ಛೀಮಾರಿ ಹಾಕಿಯಾಗಿತ್ತು. ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ ಪಾಕಿಸ್ತಾನದ ಆಕ್ಷೇಪಣೆಯ ನಡುವೆಯೂ ಭಾರತ ಸಕರ್ಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ರನ್ನು ತಮ್ಮ ಕಾರ್ಯಕ್ರಮಕ್ಕೆ ಕರೆಸುವ ಸ್ಪಷ್ಟ ನಿರ್ಣಯ ಕೈಗೊಂಡರು. ಇದು ಪಾಕಿಸ್ತಾನಕ್ಕೆ ಬಲುದೊಡ್ಡ ಹೊಡೆತವಾಗಿತ್ತು. ಮರುದಿನ ಬೆಳಿಗ್ಗೆಯಿಂದ ನರೇಂದ್ರಮೋದಿಯವರ ಮಾತಿನ ವರಸೆಯೇ ಬದಲಾಯಿತು. ಪಾಕಿಸ್ತಾನ ತನ್ನ ಪ್ರಾಪಗ್ಯಾಂಡಿಸ್ಟ್ಗಳ ಮೂಲಕ ಭಾರತ ಯುದ್ಧ ಮಾಡದಿರುವಂತೆ ಎಲ್ಲ ಪ್ರಯತ್ನಗಳನ್ನೂ ಮಾಡಲಾರಂಭಿಸಿತು. ಬುದ್ಧಿಜೀವಿಗಳು, ಕೆಲವು ಸಿನಿಮಾ ನಟರು, ಪ್ರತಿಪಕ್ಷಗಳೂ ಸೇರಿದಂತೆ ಎಲ್ಲರೂ ಯುದ್ಧ ಬೇಡವೆಂದು ಮಾತನಾಡಲಾರಂಭಿಸಿದರು. ಇನ್ಯಾವುದಕ್ಕೂ ಸೊಪ್ಪು ಹಾಕದ ನರೇಂದ್ರಮೋದಿ ಬೆಳಿಗ್ಗೆ ವಿಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿ ‘ವಿಜ್ಞಾನಿಗಳೆಲ್ಲ ಮೊದಲು ಪೈಲಟ್ ಪ್ರಾಜೆಕ್ಟ್ ಮಾಡಿ, ಆನಂತರ ಪರಿಪೂರ್ಣ ಪ್ರಾಜೆಕ್ಟ್ಗೆ ಕೈ ಹಾಕುವಂತೆ ನಾವು ಈಗ ಪೈಲಟ್ ಪ್ರಾಜೆಕ್ಟ್ ಅನ್ನು ಮುಗಿಸಿದ್ದೇವೆ ಇನ್ನು ಅದನ್ನು ದೊಡ್ಡದಾಗಿ ಕಾರ್ಯ ರೂಪಕ್ಕೆ ತರಬೇಕಿದೆ’ ಎಂದುಬಿಟ್ಟರು. ಸೇರಿದವರೆಲ್ಲಾ ನಕ್ಕುಬಿಟ್ಟರೇನೋ ನಿಜ. ಆದರೆ ಇದು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವಾಗಿತ್ತು. ಭಾರತ ಅಂತರರಾಷ್ಟ್ರೀಯ ಸಮೂಹಕ್ಕೆ ಒಂದು ಮಾತನ್ನು ಅರ್ಥವಾಗುವಂತೆ ಹೇಳಿತು ‘ಭಯೋತ್ಪಾದನೆಯ ವಿರುದ್ಧ ನೀವು ಕಠೋರ ನಿರ್ಣಯ ಕೈಗೊಳ್ಳಲಿಲ್ಲವೆಂದರೆ ಭಾರತ ತನ್ನ ರಕ್ಷಣೆಗೆ ತಾನೇ ಮುಂದಡಿಯಿಡುವುದು; ಆನಂತರ ಯಾರೂ ಎದುರಾಡುವಂತಿಲ್ಲ’ ಎಂದರು. ಎಲ್ಲವೂ ಒಂದೇ ದಿಕ್ಕಿನತ್ತ ಧಾವಿಸುತ್ತಿದ್ದವು. ಇಷ್ಟಕ್ಕೇ ಸುಮ್ಮನಾಗದೇ ಭಾರತ ಮಧ್ಯಾಹ್ನ 12 ಗಂಟೆಯ ವೇಳೆಗೆ ಎಲ್ಲ ಪತ್ರಿಕಾ ಕಛೇರಿಗಳಿಗೆ ಮಾಹಿತಿಯನ್ನು ರವಾನಿಸಿ ಸಂಜೆ 5 ಗಂಟೆಯ ವೇಳೆಗೆ ಮೂರೂ ಸೇನೆಗಳ ಪ್ರಮುಖರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂಬ ಸಂದೇಶ ಕೊಟ್ಟಿತು. ಸೇನಾ ಪ್ರಮುಖರು ಸುದ್ದಿಗೋಷ್ಠಿ ನಡೆಸುತ್ತಾರೆಂದರೆ ಅದು ಯುದ್ಧದ ಘೋಷಣೆಯೇ ಸರಿ. ಒಮ್ಮೆ ಘೋಷಣೆ ಮಾಡಿದ ನಂತರ ಪಾಕಿಸ್ತಾನವನ್ನು ಧೂಳೀಪಟಗೈಯ್ಯುವವರೆಗೂ ಭಾರತ ವಿರಮಿಸದು ಎಂಬ ಅರಿವಿದ್ದ ಪಾಕಿಸ್ತಾನ ಮುಂದಿನ ಚಟುವಟಿಕೆಗಳನ್ನು ತೀವ್ರಗೊಳಿಸಿತು. ಸಂಜೆ 4 ಗಂಟೆಯ ವೇಳೆಗೆ ಅಭಿನಂದನ್ನನ್ನು ಬಿಟ್ಟುಬಿಡುವ ಮಾತುಗಳನ್ನಾಡಿತು. ಅದಕ್ಕೆ ಶಾಂತಿಯ ಲೇಪನವನ್ನು ಮಾಡಿ ತಾನು ಹೀರೊ ಆಗುವ ಪ್ರಯತ್ನವನ್ನು ಇಮ್ರಾನ್ಖಾನ್ ಮಾಡಿದ! ನಿಸ್ಸಂಶಯವಾಗಿ ಇದು ಭಾರತದ ರಾಜತಾಂತ್ರಿಕ ಗೆಲುವೇ ಆಗಿತ್ತು. ಪಾಕಿಸ್ತಾನದ ಎಲ್ಲ ಪತ್ರಿಕೆಗಳು ಅಭಿನಂದನ್ ಅನ್ನು ಬಿಟ್ಟುಕೊಡುವ ಪಾಕಿಸ್ತಾನದ ಕ್ರಮವನ್ನು ವಿರೋಧಿಸುತ್ತಿದ್ದರೆ ಇತ್ತ ಭಾರತದ ಮಾರಾಟಕೊಂಡ ಪತ್ರಕರ್ತರು ಇಮ್ರಾನ್ಖಾನ್ನ ಶಾಂತಿಯೆಡೆಗಿನ ಪ್ರಯತ್ನವನ್ನು ಹೊಗಳುತ್ತಿದ್ದರು.

4

ಹೇಗೇ ಇರಲಿ, ವಿಂಗ್ ಕಮ್ಯಾಂಡರ್ ಅಭಿನಂದನ್ ಇನ್ನು ಮರಳಿ ಬರುತ್ತಾರೆ. ಆದರೆ ಈ ಹೊತ್ತಿನಲ್ಲಿ ಪ್ರತಿಪಕ್ಷಗಳು ಇದಕ್ಕೊಂದು ರಾಜಕೀಯ ಲೇಪನ ಮಾಡುವುದನ್ನು ನೋಡಿದರೆ ಅಸಹ್ಯವೆನಿಸುತ್ತಿದೆ. ಮೋದಿ ಪಾಕಿಸ್ತಾನದ ಮೇಲೆ ತಾವು ಮಾಡಿದ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ಸು ಆರೋಪಿಸಿದೆ. ಇದನ್ನು ಸತ್ಯವೆಂದು ನಂಬುವುದಾದರೆ ಇದರೊಟ್ಟಿಗೆ ಎರಡು ಪ್ರಶ್ನೆಗಳು ಮೇಲೇಳುತ್ತವೆ. ಮೊದಲನೆಯದ್ದು, ಪುಲ್ವಾಮಾ ದಾಳಿಗೆ ಪ್ರತಿದಾಳಿಯನ್ನು ಮೋದಿ ಸಂಘಟಿಸಿದ್ದನ್ನು ತಮ್ಮ ಲಾಭಕ್ಕೆ ಅವರು ಬಳಸಿಕೊಳ್ಳುತ್ತಾರೆಂಬುದು ಕಾಂಗ್ರೆಸ್ಸಿನ ಆರೋಪವಾದರೆ ಅವರು ಈ ಪ್ರತಿಕ್ರಿಯೆ ನೀಡದೇ ಹೋಗಿದ್ದರೆ ಕಾಂಗ್ರೆಸ್ಸು ಅದನ್ನು ತನ್ನ ಚುನಾವಣಾ ಲಾಭಕ್ಕೆ ಬಳಸಿಕೊಳ್ಳುತ್ತಿರಲಿಲ್ಲವೇ? ಎರಡನೆಯದು, ಪಾಕಿಸ್ತಾನಕ್ಕೆ ಪ್ರತಿಕ್ರಿಯೆ ಕೊಟ್ಟದ್ದನ್ನು ಮೋದಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆಂಬುದು ಆರೋಪವಾದರೆ ಚುನಾವಣೆ ಹೊತ್ತಿನಲ್ಲಿ ಪುಲ್ವಾಮಾ ದಾಳಿ ನಡೆಸಿ ಮೋದಿ ಪ್ರತಿಕ್ರಿಯೆ ನೀಡದಿರುವಂತೆ ಕೈಕಟ್ಟಿ ಹಾಕಲಿಚ್ಛಿಸಿದ್ದು ಕಾಂಗ್ರೆಸ್ಸೆನಾ? ಈ ಒಟ್ಟಾರೆ ದಾಳಿ ಹಿಂದೆ ಕಾಂಗ್ರೆಸ್ಸಿನ ಕೈವಾಡ ಇದೆ ಎನ್ನುವುದು ಹಾಗಿದ್ದರೆ ಸತ್ಯವೇ? ವಿದೇಶದಲ್ಲಿ ಅನುಮಾನಾಸ್ಪದವಾಗಿ ನಡೆದುಕೊಂಡ ಮಣಿಶಂಕರ್ ಅಯ್ಯರ್, ಸಿದ್ದು, ರಮ್ಯಾ ಮೊದಲಾದವರು ಈತರಹದ್ದೊಂದು ದೊಡ್ಡದ್ದೇನೋ ಘಟಿಸುವಂತೆ ಮಾಡುವ ಪ್ರಯತ್ನದಲ್ಲಿದ್ದರಾ? ಪ್ರಶ್ನೆಗಳು ಬೆಟ್ಟದಷ್ಟಿವೆ. ಉತ್ತರವನ್ನು ಆರೋಪ ಮಾಡಿದವರೇ ನೀಡಬೇಕಷ್ಟೇ!

5

ಮಿತ್ರರೇ ಒಂದಂತೂ ಸತ್ಯ. ಮುಂದಿನ ಬಾರಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಇರುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಒಳಗೇ ಇರುವ ಈ ಸಭ್ಯ ಮುಖವಾಡದ ಉಗ್ರರಂತೂ ನಿನರ್ಾಮವಾಗುತ್ತಾರೆ!

Comments are closed.