ವಿಭಾಗಗಳು

ಸುದ್ದಿಪತ್ರ


 

ಪಾಕಿಸ್ತಾನವನ್ನು ಅಂಕೆಯಲ್ಲಿಟ್ಟುಕೊಂಡಿದ್ದಾರೆ ಮೋದಿ!

ನಿಶ್ಚಯಾತ್ಮಕ ಬುದ್ಧಿಯಿಂದ ನರೇಂದ್ರಮೋದಿ ಪಾಕಿಸ್ತಾನಕ್ಕೆ ಕೊಟ್ಟ ಆಪ್ತರಾಷ್ಟ್ರವೆಂಬ ಹಣೆಪಟ್ಟಿಯನ್ನು ಕಿತ್ತೊಗೆದರು. ಅದರ ನಂತರದ ಬೆಳವಣಿಗೆಯಲ್ಲಿ ಪಾಕಿಸ್ತಾನಕ್ಕೆ ಯಾರೂ ಸಾಲಕೊಡದಂತೆ ಭಾರತ ಪ್ರಭಾವ ಬೀರಲಾರಂಭಿಸಿತು. ವಿದೇಶೀ ವಿನಿಮಯದ ಕೊರತೆಯನ್ನು ಅನುಭವಿಸುತ್ತಿರುವ ಪಾಕಿಸ್ತಾನ ಭಿಕ್ಷಾಪಾತ್ರೆಯನ್ನು ಹಿಡಿದು ಹೋದಲ್ಲೆಲ್ಲಾ ಭಾರತ ಅದಕ್ಕೆ ಭೂತವಾಗಿ ಕಾಡಲಾರಂಭಿಸಿತು.

ಮೋದಿ ಸಕರ್ಾರ ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಣಯವೊಂದನ್ನು ಕೈಗೊಂಡು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಪಾಕಿಸ್ತಾನದೊಂದಿಗಿನ ವ್ಯಾಪಾರ-ವಹಿವಾಟನ್ನು ಪೂತರ್ಿ ರದ್ದುಗೊಳಿಸುವ ಈ ನಿರ್ಣಯ ಹೊರಬಿದ್ದಾಗಿನಿಂದ ಜಗತ್ತಿಗೆ ಒಂದು ಸಂದೇಶ ರವಾನಿಸಿದಂತಾಗಿದೆ. ಪುಲ್ವಾಮಾ ದಾಳಿಯಾದಾಗಲೇ ಪಾಕಿಸ್ತಾನಕ್ಕೆ ನರೇಂದ್ರಮೋದಿ ಎಚ್ಚರಿಕೆ ಕೊಟ್ಟಿದ್ದರು, ‘ತಪ್ಪು ಮಾಡಿಬಿಟ್ಟಿದ್ದೀರಿ. ಇದಕ್ಕೆ ಸೂಕ್ತ ಶಿಕ್ಷೆಯನ್ನೂ ಅನುಭವಿಸುತ್ತೀರಿ’ ಅಂತ! ಹಾಗೆಯೇ ಆಯ್ತು ಕೂಡ. ಪಾಕಿಸ್ತಾನ ಈಗ ಪರಿತಪಿಸುತ್ತಿದೆ. ರಿಪೇರಿ ಮಾಡಲಾಗದ ಪರಿಸ್ಥಿತಿಯಲ್ಲಿ ನರಳುತ್ತಿದೆ.

6

ಪುಲ್ವಾಮಾ ದಾಳಿಯ ಹಿಂದು-ಹಿಂದೆಯೇ ಭಾರತ ಮೇಲ್ನೋಟಕ್ಕೆ ಕಾಣಬಲ್ಲ ಒಂದಷ್ಟು ಆಥರ್ಿಕ ದಿಗ್ಬಂಧನಗಳನ್ನು ಪಾಕಿಸ್ತಾನದ ಮೇಲೆ ವಿಧಿಸಿತ್ತು. ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟನ್ನು ತಕ್ಷಣಕ್ಕೆ ನಿಲ್ಲಿಸಿತ್ತಾದರೂ ಆನಂತರ ಮತ್ತೆ ಅದನ್ನು ಆರಂಭಿಸಿತ್ತು. ಆದರೆ ಬಾಲಾಕೋಟ್ ದಾಳಿಯ ನಂತರ ಭಾರತ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧದ ತನ್ನ ನಿಲುವನ್ನು ಬಲಗೊಳಿಸುತ್ತಲೇ ಹೋಗಿತ್ತು. ಮೌಲಾನಾ ಮಸೂದ್ ಅಜರ್ನನ್ನು ಮತ್ತು ಜೈಶ್-ಎ-ಮೊಹಮ್ಮದ್ ಅನ್ನು ನಿಷೇಧಿಸುವಲ್ಲಿ ಚೀನಾ ತೋರಿದ ಔದಾಸೀನ್ಯದಿಂದ ಜಗತ್ತು ಆಕ್ರೋಶಕ್ಕೊಳಗಾಗಿತ್ತು. ಚೀನಾಕ್ಕೆ ಸರಿಯಾದ ಪಾಠ ಕಲಿಸಬೇಕೆಂಬ ಮಾನಸಿಕ ಸ್ಥಿತಿ ಈಗಾಗಲೇ ಅನೇಕ ರಾಷ್ಟ್ರಗಳಿಗೆ ಬಂದಾಗಿದೆ. ಅವರೆಲ್ಲರ ನಾಯಕತ್ವ ವಹಿಸಿರೋದು ಮಾತ್ರ ಭಾರತವೇ. ಆಫ್ರಿಕಾದಲ್ಲಿ ಚೀನಾದ ಪ್ರಭಾವವನ್ನು ಕಡಿಮೆಗೊಳಿಸಲೆಂದೇ ಭಾರತ ಜಪಾನ್ ಮತ್ತು ಸೌದಿಯೊಂದಿಗೆ ಸೇರಿ ದೊಡ್ಡ ಮೊತ್ತದ ಹೂಡಿಕೆಗಳ ಯೋಜನೆಯನ್ನು ರೂಪಿಸಿದೆ. ಇದು ಆಫ್ರಿಕಾ ರಾಷ್ಟ್ರಗಳ ನಿರ್ಭರತೆಯನ್ನು ಚೀನಾದಿಂದ ಇತರೆ ರಾಷ್ಟ್ರಗಳತ್ತ ತಿರುಗಿಸಲಿದೆ. ಬ್ರಿಟೀಷರು ಆಫ್ರಿಕಾಕ್ಕೆ ಭಾರತೀಯರನ್ನು ಕರೆದೊಯ್ದು ನೆಲೆಸುವಂತೆ ಮಾಡಿದಾಗಿನಿಂದಲೂ ನಮ್ಮ ಮತ್ತು ಅವರ ಬಾಂಧವ್ಯ ಬಲವಾಗಿದೆ. ಮಹಾತ್ಮಾ ಗಾಂಧೀಜಿಯವರ ಕುರಿತಂತೆ ಆಫ್ರಿಕನ್ನರಿಗೆ ಈಗಲೂ ಅಪಾರವಾದ ಗೌರವ. ಇದನ್ನು ಬಳಸಿಕೊಂಡು ಭಾರತ ಸೌದಿಯ ಹಣವನ್ನು, ಜಪಾನಿನ ತಂತ್ರಜ್ಞಾನವನ್ನು ಉಪಯೋಗಿಸುತ್ತಾ ಆಫ್ರಿಕಾ ಖಂಡದಲ್ಲಿ ಬಲವಾದ ಹೆಜ್ಜೆ ಊರಲಿದೆ. ಇದರ ಜೊತೆ-ಜೊತೆಗೆ ಏಷ್ಯಾಖಂಡದಲ್ಲಿ ಚೀನಾದ ಪ್ರಾಬಲ್ಯಕ್ಕೆ ರಾಜಮಾರ್ಗವಾಗಿ ಆತುಕೊಂಡಿರುವ ಪಾಕಿಸ್ತಾನವನ್ನು ನಷ್ಟಗೊಳಿಸುವ ಕಲ್ಪನೆ ಈಗ ಜಾಗತಿಕ ಮಟ್ಟದಲ್ಲಿ ಹೆಡೆಯೆತ್ತಿದೆ. ಅದಕ್ಕೆ ಮೊದಲ ನಿರ್ಣಯ ಕೈಗೊಳ್ಳಬೇಕಾಗಿರುವುದು ಭಾರತವೇ!

ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಬಿಂಬಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಅಮೇರಿಕಾದಂತಹ ರಾಷ್ಟ್ರಗಳು ಪಾಕಿಸ್ತಾನಕ್ಕೆ ಧನಸಹಾಯ ನೀಡದಂತೆ ಭಾರತ ಪ್ರಭಾವಿಸಿಯೂ ಆಗಿದೆ. ತೀರಾ ಪಾಕಿಸ್ತಾನದ ನೆರೆ ರಾಷ್ಟ್ರಗಳಾದ ಇರಾನ್ ಮತ್ತು ಅಫ್ಘಾನಿಸ್ತಾನಗಳನ್ನು ಪಾಕಿಸ್ತಾನದ ವಿರುದ್ಧವೇ ನಿಲ್ಲಿಸಿ ಪಾಕಿಸ್ತಾನದ ಎಲ್ಲ ಗಡಿಗಳನ್ನು ಸಾಮಥ್ರ್ಯಹೀನಗೊಳ್ಳುವಂತೆ ಮಾಡಿದೆ. ಇಮ್ರಾನ್ಖಾನ್ ಬದಲಾವಣೆಯ ಚಿಂತನೆಯನ್ನು ಹೊತ್ತುಕೊಂಡು ಬಂದಿದ್ದು ನಿಜವಾದರೂ ಸೇನೆಯ ಆಣತಿಯಿಲ್ಲದೇ ಆತ ಒಂದು ಇಟ್ಟಿಗೆಯನ್ನೂ ಕದಲಿಸಲಾಗುವುದಿಲ್ಲವಾದ್ದರಿಂದ ಆತನು ಕೈಗೊಂಬೆ ಪ್ರಧಾನಿಯೇ. ಹೀಗಾಗಿ ಅವನ ಮೇಲೆ ವಿಶ್ವಾಸವಿರಿಸಿ ಬದಲಾವಣೆಯ ಗುರುತುಗಳು ಕಾಣಬಹುದೆಂದು ಕಾಯುವುದು ವ್ಯರ್ಥ. ಆದರೂ ಆರಂಭದ ದಿನಗಳಲ್ಲಿ ತನ್ನ ನೀತಿಯನ್ನು ಸ್ವಲ್ಪ ಸಡಿಲಗೊಳಿಸಿದ ಭಾರತ ಒಟ್ಟಾರೆ ವ್ಯವಸ್ಥೆಗಳು ಸುಧಾರಣೆಗೊಳ್ಳಬಹುದೆಂದು ಕಾಯುತ್ತ ಕುಳಿತಿತ್ತು. ಪುಲ್ವಾಮಾ ದಾಳಿ ಭಾರತದ ಈ ತಾಳ್ಮೆಯನ್ನು ಮಿತಿಮೀರುವಂತೆ ಮಾಡಿತು!

PAKISTAN-INDIA-KASHMIR-TRADE

ನಿಶ್ಚಯಾತ್ಮಕ ಬುದ್ಧಿಯಿಂದ ನರೇಂದ್ರಮೋದಿ ಪಾಕಿಸ್ತಾನಕ್ಕೆ ಕೊಟ್ಟ ಆಪ್ತರಾಷ್ಟ್ರವೆಂಬ ಹಣೆಪಟ್ಟಿಯನ್ನು ಕಿತ್ತೊಗೆದರು. ಅದರ ನಂತರದ ಬೆಳವಣಿಗೆಯಲ್ಲಿ ಪಾಕಿಸ್ತಾನಕ್ಕೆ ಯಾರೂ ಸಾಲಕೊಡದಂತೆ ಭಾರತ ಪ್ರಭಾವ ಬೀರಲಾರಂಭಿಸಿತು. ವಿದೇಶೀ ವಿನಿಮಯದ ಕೊರತೆಯನ್ನು ಅನುಭವಿಸುತ್ತಿರುವ ಪಾಕಿಸ್ತಾನ ಭಿಕ್ಷಾಪಾತ್ರೆಯನ್ನು ಹಿಡಿದು ಹೋದಲ್ಲೆಲ್ಲಾ ಭಾರತ ಅದಕ್ಕೆ ಭೂತವಾಗಿ ಕಾಡಲಾರಂಭಿಸಿತು. ಐಎಮ್ಎಫ್ ಪಾಕಿಸ್ತಾನಕ್ಕೆ ಸಾಲ ಕೊಡುವುದನ್ನು ಅಮೇರಿಕವೂ ವಿರೋಧಿಸಲಿದೆ ಎಂಬ ಸುದ್ದಿಯೇ ಪಾಕಿಸ್ತಾನದ ಸ್ಥೈರ್ಯ ಕಸಿಯಿತು. ಈಗ ಭಾರತ ಪಾಕಿಸ್ತಾನದೊಂದಿಗಿನ ಒಟ್ಟಾರೆ ವ್ಯಾಪಾರ ಸಂಬಂಧವನ್ನು ಪೂರ್ಣಪ್ರಮಾಣದಲ್ಲಿ ಕಡಿದುಕೊಂಡಿದೆ. ಅದಕ್ಕೆ ಕೊಟ್ಟ ಕಾರಣವ್ಯಾವುವೂ ಹೊಸತಲ್ಲ. ಪಾಕಿಸ್ತಾನ ಈ ವ್ಯಾಪಾರಕ್ಕಾಗಿ ಇರುವ ರಸ್ತೆಗಳಾದ ಉರಿಯ ಸಲಾಮಾಬಾದ್ ಮತ್ತು ಪೂಂಛ್ನ ಚಕ್ಕನ್-ದ-ಬಾಗ್ಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದೆ ಮತ್ತು ವ್ಯಾಪಾರದ ವಸ್ತುಗಳ ನೆಪದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬೇಕಾದ ಅವಶ್ಯಕ ವಸ್ತುಗಳನ್ನು ಕಳಿಸುತ್ತಿದೆ ಎಂದು ಭಾರತ ಹೇಳಿಕೊಂಡಿದೆ. ಇದು ಹೊಸ ಸಂಗತಿಯೇನಲ್ಲ. ಮತ್ತು ಭಾರತಕ್ಕೆ, ಪಾಕಿಸ್ತಾನಕ್ಕೆ, ಜಗತ್ತಿಗೂ ಗೊತ್ತಿರದ ಸಂಗತಿಯಲ್ಲ. ಆದರೆ ಈಗ ಅದನ್ನು ಮುನ್ನೆಲೆಗೆ ತಂದಿರುವ ಕಾರಣವೇನೆಂದರೆ ಪಾಕಿಸ್ತಾನವನ್ನು ಇಂತಹ ರಾಷ್ಟ್ರವೆಂದು ಜಗತ್ತಿನ ಮುಂದೆ ಮತ್ತೆ ಮತ್ತೆ ಸಾಬೀತುಗೊಳಿಸುತ್ತಾ ಆ ರಾಷ್ಟ್ರವನ್ನು ಇತರೆಲ್ಲ ರಾಷ್ಟ್ರಗಳೊಂದಿಗಿನ ಸಂಬಂಧ ಸಡಿಲಗೊಳ್ಳುವಂತೆ ಮಾಡುವ ಪ್ರಯತ್ನ. ಒಮ್ಮೆ ಭಾರತ ಈ ವಿಚಾರವನ್ನು ಜಗತ್ತಿಗೆ ಒಪ್ಪಿಸುವಲ್ಲಿ ಸಮರ್ಥವಾದರೆ ಪಾಕಿಸ್ತಾನ ಎಫ್ಎಟಿಎಫ್ನಲ್ಲಿ ಕಪ್ಪುಪಟ್ಟಿಗೆ ಹೋದರೂ ಅಚ್ಚರಿ ಪಡಬೇಕಿಲ್ಲ. ಅಲ್ಲದೇ ಮತ್ತೇನು? ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಊರತುಂಬಾ ಹೇಳಿಕೊಂಡು ಬರುತ್ತಿರುವ ನಾವೇ ಅದಕ್ಕೆ ಪರಮಾಪ್ತ ರಾಷ್ಟ್ರ ಸ್ಥಾನವನ್ನು ಕೊಟ್ಟರೆ ಹೇಗೆ? ಈಗ ಅದನ್ನು ಹಿಂತೆಗೆದುಕೊಂಡು ನಾವು ಇಡುತ್ತಿರುವ ಒಂದೊಂದು ಹೆಜ್ಜೆಯೂ ಪಾಕಿಸ್ತಾನಕ್ಕೆ ಮಮರ್ಾಘಾತಕರವಾಗಲಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಮಾತನಾಡುತ್ತಾ, ‘ಬಾಲಾಕೋಟ್ನ ದಾಳಿಯಲ್ಲಿ ಒಬ್ಬ ಪಾಕಿಸ್ತಾನಿ ಸೈನಿಕನನ್ನಾಗಲಿ, ನಾಗರಿಕನನ್ನಾಗಲಿ ನಾವು ಕೊಂದಿಲ್ಲ. ಬದಲಿಗೆ ಅಡಗಿ ಕುಳಿತಿದ್ದ ಉಗ್ರರನ್ನಷ್ಟೇ ನಾವು ನಾಶಮಾಡಿದ್ದು’ ಎನ್ನುವ ಮೂಲಕ ಭಾರತದ ಉದ್ದೇಶವನ್ನು, ಸಾಮಥ್ರ್ಯವನ್ನು ಜಗತ್ತಿಗೆ ತಿಳಿಯುವಂತೆ ಮಾಡಿದ್ದಾರೆ.

8

ಈಗಾಗಲೇ ಆಥರ್ಿಕ ದಿವಾಳಿತನದ ಭಯವೆದುರಿಸುತ್ತಿರುವ ಪಾಕಿಸ್ತಾನ ಮುಂದೇನು ಮಾಡಬೇಕೆಂದು ತಿಳಿಯದೇ ಒದ್ದಾಡುತ್ತಿದೆ. ಅದಕ್ಕೆ ಸರಿಯಾಗಿ ಪಾಕಿಸ್ತಾನದ ಹಣಕಾಸು ಮಂತ್ರಿ ಅಸದ್ ಉಮರ್ ಮೊನ್ನೆಯಷ್ಟೇ ತನ್ನ ಸ್ಥಾನಕ್ಕೆ ರಾಜಿನಾಮೆ ಇತ್ತಿದ್ದಾನೆ. ಮೂಲತಃ ಕ್ರಿಕೆಟರ್ ಆಗಿದ್ದು ಇಮ್ರಾನ್ಖಾನ್ನಂತೆ ಆನಂತರ ರಾಜಕಾರಣಿಯಾಗಿ ಚುನಾವಣೆ ಸ್ಪಧರ್ಿಸಿ ಇಮ್ರಾನ್ನ ಆಪ್ತನೆನಿಸಿಕೊಂಡಿದ್ದ ಉಮರ್ ರಾಜಿನಾಮೆ ನೀಡಿರುವುದು ಬಲುದೊಡ್ಡ ಬಿರುಗಾಳಿಯಾಗಿ ಪಾಕಿಸ್ತಾನಕ್ಕೆ ಬಡಿದಿದೆ. ಇದೇ ಉಮರ್ ಕಳೆದ ಅನೇಕ ತಿಂಗಳುಗಳಿಂದ ಐಎಮ್ಎಫ್ನಿಂದ ಪಾಕಿಸ್ತಾನಕ್ಕೆ ಸಹಾಯಹಸ್ತ ಕೊಡಿಸುವಲ್ಲಿ, ಎಲ್ಲ ಸಾಲಗಳ ಮನ್ನಾ ಮಾಡಿಸುವಲ್ಲಿ ಸಾಕಷ್ಟು ಪ್ರಯತ್ನ ಹಾಕಿದ್ದ. ಆತನ ಟ್ವೀಟ್ ಒಪ್ಪುವುದಾದರೆ ಇಮ್ರಾನ್ ಹಣಕಾಸು ಸಚಿವ ಸ್ಥಾನ ಬಿಟ್ಟು ಬೇರೆ ಸಚಿವ ಸ್ಥಾನವನ್ನು ಆತನಿಗೆ ಕೊಡುವ ಆಲೋಚನೆ ಮಾಡಿದ್ದರಂತೆ. ಆತ ಅದನ್ನು ನಿರಾಕರಿಸಿ ಇಮ್ರಾನ್ನಿಗೆ ಶುಭ ಹಾರೈಸಿರುವುದು ನೋಡಿದರೆ ಪಾಕಿಸ್ತಾನ ಒಳಗಿಂದೊಳಗೇ ಬೇಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈಗ ಅದು ಹಾದು ಹೋಗುತ್ತಿರುವ ಆಥರ್ಿಕ ದುಃಸ್ಥಿತಿಯಿಂದ ಅದನ್ನು ಪಾರುಮಾಡಬಲ್ಲ ಶಕ್ತಿಯಿರುವುದು ಭಾರತಕ್ಕೆ ಮಾತ್ರ. ಭಾರತ ದೊಡ್ಡ ಮೊತ್ತದ ಸಾಲಕೊಡಲಾಗುವುದಿಲ್ಲವೇನೋ ನಿಜ. ಆದರೆ ಜಗತ್ತು ಸಾಲಕೊಡುವಂತೆ ಅದನ್ನು ಪ್ರೇರೇಪಿಸುವ ಸಾಮಥ್ರ್ಯವಂತೂ ಭಾರತಕ್ಕಿದ್ದೇ ಇದೆ. ಹೀಗಾಗಿಯೇ ಇಮ್ರಾನ್ಖಾನ್ ಮತ್ತೊಮ್ಮೆ ಭಾರತದ ಪ್ರಧಾನಿಯಾಗಲಿರುವ ನರೇಂದ್ರಮೋದಿಯವರನ್ನು ಮನಸೋ ಇಚ್ಛೆ ಹೊಗಳಿದ್ದಾರೆ. ಅಲ್ಲದೇ ಪಾಕಿಸ್ತಾನದಲ್ಲಿ ಧ್ವಂಸಗೊಂಡಿರುವ ದೇವಾಲಯಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವನ್ನೂ ಮಾಡುವುದಾಗಿ ಆತ ಭರವಸೆ ನೀಡಿದ್ದಾರೆ.

9

ಇತ್ತ ಚೀನಾ ಭಾರತದ ಆಕ್ರಮಕ ನೀತಿಯಿಂದಾಗಿ ಜಗತ್ತಿನ ಭರವಸೆಯನ್ನು ಕಳೆದುಕೊಂಡು ಆಂತರಿಕವಾದ ಬೇಗುದಿಯಲ್ಲಿ ನರಳುತ್ತಿದೆ. ಚೀನಾದ ಜಿಡಿಪಿ ಕುಸಿಯಲಾರಂಭಿಸಿದೆ. ಅದಕ್ಕೆ ಬರುತ್ತಿದ್ದ ವಿದೇಶೀ ಹೂಡಿಕೆ ಕಡಿಮೆಯಾಗುತ್ತಿದೆ. ಜೊತೆಗೆ ಶೀಜಿನ್ಪಿಂಗ್ನ ನಾಯಕತ್ವದ ಆರಂಭದಲ್ಲಿದ್ದ ಖದರ್ರು ಈಗ ಉಳಿದಿಲ್ಲ. ಒನ್ ಬೆಲ್ಟ್ ಒನ್ ರೋಡ್ನ ನೆಪದಲ್ಲಿ ಸಾಕಷ್ಟು ಹಣ ಹೂಡಿಬಿಟ್ಟಿರುವ ಚೀನಾ ಯೋಜನೆ ಕಾರ್ಯಗತಗೊಳ್ಳದೇ ಹೋದರೆ ಅಪಾರ ಪ್ರಮಾಣದ ನಷ್ಟ ಎದುರಿಸಲಿದೆ. ಇವೆಲ್ಲವನ್ನೂ ಸರಿದೂಗಿಸಿಕೊಳ್ಳಬೇಕೆಂದರೆ ಒಂದೋ ನರೇಂದ್ರಮೋದಿಯೊಂದಿಗೆ ಸಂಬಂಧವನ್ನು ಗಟ್ಟಿಮಾಡಿಕೊಳ್ಳಬೇಕು ಅಥವಾ ತಮಗೆ ಪೂರಕವಾಗುವ ಸಕರ್ಾರವನ್ನು ಇಲ್ಲಿ ಬರುವಂತೆ ನೋಡಿಕೊಳ್ಳಬೇಕು. ಹೀಗಾಗಿಯೇ ಭಾರತದ ಚುನಾವಣೆಯಲ್ಲಿ ವಿದೇಶೀ ಕೈವಾಡ ಜೋರಾಗಿ ಕಾಣುತ್ತಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿರುವುದು. 23ನೇ ತಾರೀಕು ಮತ ಹಾಕುವ ಮುನ್ನ ಇದನ್ನು ಖಂಡಿತ ಆಲೋಚಿಸಿ. ನೀವು ಮೋದಿಗೆ ಹಾಕುವ ಒಂದು ಮತ ಚೀನಾದ ಧಿಮಾಕನ್ನು ಕಡಿಮೆ ಮಾಡಬಲ್ಲದು. ನೀವು ಭಾಜಪಕ್ಕೆ ಹಾಕುವ ಈ ಒಂದು ಮತ ಪಾಕಿಸ್ತಾನದ ಆಕ್ರಮಕ ನೀತಿಯನ್ನು ತಡೆದು ನಿಲ್ಲಿಸುವ ಹೆಬ್ಬಂಡೆಯಾಗಬಲ್ಲದು. ನೀವು ಹಾಕುವ ಒಂದು ಮತ ಭಾರತದ ವಿರುದ್ಧ ಮಾತನಾಡುವ ಆಂತರಿಕ ಭಯೋತ್ಪಾದಕರೆಲ್ಲರ ಸದ್ದನ್ನು ಅಡಗಿಸಿಬಿಡಬಲ್ಲದು. ಎಲ್ಲವೂ ನಿಮ್ಮ ಕೈಲಿದೆ.

ಯೋಚಿಸಿ, ಮತ ಚಲಾಯಿಸಿ!

Comments are closed.