ವಿಭಾಗಗಳು

ಸುದ್ದಿಪತ್ರ


 

ಪಾತಾಲದಲ್ಲಿ ಅಡಗಿದ್ದರೂ ಮೋದಿ ಬಿಡಲೊಲ್ಲ!

ಝಾಕೀರ್ ನಾಯ್ಕ್ ಎಂದರೆ ಇಷ್ಟೇ ಅಲ್ಲ. ದೇಶದಾದ್ಯಂತ ದಂಗೆಗಳಿಗೆ ಪ್ರಚೋದನೆ ನೀಡುವ ಕೆಲಸವನ್ನು ಮಾಡುತ್ತಿದ್ದ. ಅನೇಕ ದೇಶ ವಿರೋಧಿ ಕೆಲಸಗಳಿಗೆ ಆತ ಪ್ರೇರಣೆಯಾಗಿದ್ದ. ಆತಂಕವಾದಿಗಳಿಗೆ ಆತನೇ ಇಲ್ಲಿ ಆಸರೆ. ಆತನ ಈ ಚಟುವಟಿಕೆಗಳಿಗೆ ಇಸ್ಲಾಂ ರಾಷ್ಟ್ರಗಳಿಂದ ಸಾಕಷ್ಟು ದುಡ್ಡು ಹರಿದು ಬರುತ್ತಿತ್ತು.

ಝಾಕಿರ್ ನಾಯ್ಕ್!
ಈ ಹೆಸರು ಮರೆತಿಲ್ಲ ತಾನೇ? ತನ್ನ ಪೀಸ್ ಟಿವಿಯ ಮೂಲಕ ಜನರ ಮನ ಕಲಕಿಸುತ್ತ, ಸೆಕ್ಯುಲರ್ ಮಾನಸಿಕತೆಯ ಜನರ ಮೇಲೆ ವಿಷದ ಅಣಬೆಯಾಗಿ ಬೆಳೆದು, ಮತ-ಮತಗಳ ನಡುವೆ ಕಿತ್ತಾಟಕ್ಕೆ ಹಚ್ಚಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ ಮತ ಪ್ರಚಾರಕ! ಕಾಂಗ್ರೆಸಿನ ಅಧಿಕಾರಾವಧಿಯಲ್ಲಿ ಆತನ ಧಿಮಾಕು ನೋಡಬೇಕಿತ್ತು; ದೊಡ್ಡ ದೊಡ್ಡ ಸಭೆಗಳನ್ನ ನಡೆಸುತ್ತ ಇತರೆ ಮತ-ಪಂಥಗಳನ್ನು ಟೀಕಿಸುತ್ತ ವೈಜ್ಞಾನಿಕವಲ್ಲದ ವಾದಗಳನ್ನು ಮಂಡಿಸಿ ಕೊನೆಗೆ ಪ್ರಶ್ನೋತ್ತರದ ಹೊತ್ತಲ್ಲಿ ತನಗೆ ಬೇಕಾದ ಪ್ರಶ್ನೆಗಳನ್ನೇ ಕೇಳಿಸಿ ವೇದಗಳಿಂದ ಉರು ಹೊಡೆದ ನಾಲ್ಕು ಮಂತ್ರಗಳನ್ನು ಹೇಳಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸುತ್ತಿದ್ದ. ಕೊನೆಗೊಮ್ಮೆ ಪ್ರಶ್ನೆ ಕೇಳಿದವರು ಮತಾಂತರಗೊಂಡು ಇಸ್ಲಾಂ ಒಪ್ಪಿಕೊಳ್ಳುವೆನೆಂದು ಹೇಳಿದ ಮೇಲಂತೂ ಝಾಕೀರ್ ನಾಯ್ಕ್ನ ಆನಂದಕ್ಕೆ ಪಾರವೇ ಇಲ್ಲ. ಇವಿಷ್ಟನ್ನೂ ಟಿವಿಯಲ್ಲಿ ನೋಡಿದ ಹಿಂದೂ-ಕ್ರೈಸ್ತ ತರುಣರಿಗೆ ಗೊಂದಲವೋ ಗೊಂದಲ. ಈ ಗೊಂದಲದ ನಡುವೆಯೇ ಅವರನ್ನು ಮತಾಂತರಿಸುವ ಕೆಲಸಕ್ಕೆ ಕೈಹಾಕಲಾಗುತ್ತಿತ್ತು.

8

ಹಾಗಂತ ಝಾಕೀರ್ ನಾಯ್ಕ್ ಎಂದರೆ ಇಷ್ಟೇ ಅಲ್ಲ. ದೇಶದಾದ್ಯಂತ ದಂಗೆಗಳಿಗೆ ಪ್ರಚೋದನೆ ನೀಡುವ ಕೆಲಸವನ್ನು ಮಾಡುತ್ತಿದ್ದ. ಅನೇಕ ದೇಶ ವಿರೋಧಿ ಕೆಲಸಗಳಿಗೆ ಆತ ಪ್ರೇರಣೆಯಾಗಿದ್ದ. ಆತಂಕವಾದಿಗಳಿಗೆ ಆತನೇ ಇಲ್ಲಿ ಆಸರೆ. ಆತನ ಈ ಚಟುವಟಿಕೆಗಳಿಗೆ ಇಸ್ಲಾಂ ರಾಷ್ಟ್ರಗಳಿಂದ ಸಾಕಷ್ಟು ದುಡ್ಡು ಹರಿದು ಬರುತ್ತಿತ್ತು. ಅನೇಕ ಬಾರಿ ಇಲ್ಲಿನ ರಾಜಕೀಯ ಸಮೀಕರಣಗಳನ್ನು ಬದಲಾಯಿಸುವಲ್ಲಿ ಆತನದ್ದು ಬಲು ದೊಡ್ಡ ಪಾತ್ರವೇ ಇತ್ತು. ಹೀಗಾಗಿಯೇ ಇದ್ದಷ್ಟು ಕಾಲ ಕಾಂಗ್ರೆಸ್ಸು ಆತನ ತಂಟೆಗೇ ಹೋಗಿರಲಿಲ್ಲ. ದೇಶದ ಸುರಕ್ಷತೆಯನ್ನು ಬಲಿಕೊಟ್ಟಾದರೂ ಮತ ಗಳಿಸಬೇಕೆಂಬ ಹಂಬಲ ಅದರದ್ದು. ಈ ಲಾಭವನ್ನು ಪಡೆದುಕೊಂಡೇ ಮೆರೆದವ ಝಾಕೀರ್ ನಾಯ್ಕ್.

9

ಮೋದಿ ಅಧಿಕಾರಕ್ಕೆ ಬರುವುದರೊಂದಿಗೆ ಆತನ ಪ್ರಭೆ ಇಳಿಯಲಾರಂಭಿಸಿತು. ವಿದೇಶದಿಂದ ಹರಿದು ಬರುತ್ತಿದ್ದ ಹಣದ ಮೇಲೆ ಕಡಿವಾಣ ಹಾಕಿದೊಡನೆ ಆತನ ರೆಕ್ಕೆಗಳನ್ನೇ ಕಡಿದಂತಾಯ್ತು. ಆಗಲೇ ಆತ ಎಡವಿದ್ದು. ಈ ಆಕ್ರೋಶವನ್ನು ಆತ ಪ್ರತಿಕ್ರಿಯಾತ್ಮಕವಾಗಿ ತೋರ್ಪಡಿಸುವ ಧಾವಂತದಲ್ಲಿ ತನ್ನವರನ್ನು ಎತ್ತಿಕಟ್ಟುವ ಕೆಲಸ ಆರಂಭಿಸಿದ. ಕಾದು ಕಣ್ಣರಳಿಸಿ ಕುಳಿತಿದ್ದ ಗೂಢಚಾರರಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದ. ಇನ್ನು ತನಗೆ ಉಳಿಗಾಲವಿಲ್ಲವೆಂದು ಅರಿತೊಡನೆ ಮಲೇಷಿಯಾಕ್ಕೆ ಓಟಕಿತ್ತ. ಆ ವೇಳೆಗಾಗಲೇ ಝಾಕಿರ್ ನಾಯ್ಕ್ನ ಆಫೀಸು, ಮನೆಗಳ ಮೇಲೆ ದಾಳಿಯಾಗಿತ್ತು. ದೇಶ ಬಿಟ್ಟು ಓಡುವ ಮೂಲಕ ಆತ ತಾನು ತಪ್ಪಿತಸ್ಥ ಎಂಬುದನ್ನು ಒಪ್ಪಿಕೊಂಡು ಬಿಟ್ಟಿದ್ದ. ತನ್ನ ಬಳಿ ಬಂದ ಮುಸಲ್ಮಾನ ತರುಣರಿಗೆ ಉಗ್ರವಾದವನ್ನು ಬೋಧಿಸಿ ಜಿಹಾದಿಗಾಗಿ ಬಂಧನಕ್ಕೊಳಗಾದರೂ, ಕದನ ಭೂಮಿಯಲ್ಲಿ ಸಾವನ್ನಪ್ಪಿದರೂ ಸ್ವರ್ಗ ಸಿಗುವುದೆಂದು ಬೋಧಿಸುತ್ತಿದ್ದ ಆತ ಈಗ ತಾನೇ ಇರುವ ಸ್ವರ್ಗವನ್ನು ಬಿಟ್ಟು ಮಲೇಷಿಯಾಕ್ಕೆ ಓಡಿ ಹೋಗಿದ್ದ. ಮಲೇಷಿಯಾ ಮುಸಲ್ಮಾನ ರಾಷ್ಟ್ರವಾಗಿದ್ದು ಅಲ್ಲಿ ಆತನ ಅಸಂಖ್ಯ ಅನುಯಾಯಿಗಳೂ ಇದ್ದಾರೆ. ಹೀಗಾಗಿ ಆತನಿಗೆ ಅಲ್ಲಿ ಆಶ್ರಯ ಸಿಗುವುದು ಮತ್ತು ಭಾರತದ ಒತ್ತಡ ಅಲ್ಲಿ ನಡೆಯದೆಂಬುದು ಖಾತ್ರಿಯಾಗಿತ್ತು. ಅದಕ್ಕೆ ಅಲ್ಲಿ ಶಾಶ್ವತ ಪೌರತ್ವ ಪಡೆಯುವುದೂ ಆತನಿಗೆ ಕಷ್ಟವಾಗಲಿಲ್ಲ. ಇತ್ತ ಚೀನಾದ ತೆಕ್ಕೆಯಲ್ಲಿದ್ದ ಮಲೇಷಿಯಾದ ಮೇಲೆ ಒತ್ತಡ ಹೇರುವುದು ಭಾರತಕ್ಕೆ ಸುಲಭವೂ ಇರಲಿಲ್ಲ. ಆದರೆ ಮೋದಿ ವಾತಾವರಣ ಹೇಗೆ ರೂಪಿಸಿಟ್ಟಿದ್ದರೆಂದರೆ ಝಾಕಿರ್ ನಾಯ್ಕ್ ಸದಾ ಆತಂಕದಲ್ಲಿರುವಂತೆ ನೋಡಿಕೊಂಡಿದ್ದರು.

ಚುನಾವಣೆಯಲ್ಲಿ ಮೋದಿ ಪಾಳಯ ಸೋಲಬೇಕು ಅಥವಾ ಬಹುಮತಕ್ಕೆ ಕೊರತೆಯಾಗಬೇಕೆಂದು ಝಾಕಿರ್ ನಾಯ್ಕ್ ಬಳಗ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಆದರೆ ಅಚ್ಚರಿ ಏನು ಗೊತ್ತೇ? ಭಾರತದಲ್ಲಿರುವ ಮುಸಲ್ಮಾನರ ದೊಡ್ಡದೊಂದು ಬಳಗಕ್ಕೆ ಝಾಕಿರ್ ನಾಯ್ಕ್ನನ್ನು ಕಂಡರಾಗದು. ಆತನ ಸಿದ್ಧಾಂತಕ್ಕೆ ಅವರ ಕಂಠಮಟ್ಟ ವಿರೋಧವಿದೆ. ಮೋದಿ ಅವನನ್ನು ಹೆಡೆಮುರಿ ಕಟ್ಟಿದ್ದು ಅವರ ಆನಂದಕ್ಕೆ ಪಾರವೇ ಇಲ್ಲದಂತಾಗಿತ್ತು. ಹೀಗಾಗಿ ಝಾಕಿರ್ ಮುಕ್ತವಾಗಿ ಮೋದಿಯ ವಿರುದ್ಧ ಮಾತನಾಡುವಂತೆಯೂ ಇರಲಿಲ್ಲ. ಅದು ಮತ್ತೆ ಮೋದಿಗೆ ಲಾಭವೇ ಆಗಿಬಿಟ್ಟಿರುತ್ತಿತ್ತು. ಅವಡುಗಚ್ಚಿ ಕುಳಿತಿದ್ದ ಆತನಿಗೆ ಫಲಿತಾಂಶದ ದಿನ ಹೃದಯವೇ ನಿಂತಂತೆ ಆಗಿರಲಿಕ್ಕೆ ಸಾಕು. ಇನ್ನು ಐದು ವರ್ಷಗಳಲ್ಲಿ ಏನೆಲ್ಲ ಆಗಿಬಿಡಬಹುದೆಂದು ಆತ ಅಂದಿನ ದಿನವೇ ಊಹಿಸಿರಬಹುದು.

10

ಈ ಹಿಂದೆ ಒಮ್ಮೆ ಮಲೇಷಿಯಾದ ಮಸೀದಿಯೊಂದರ ಹೊರಗೆ ಆತನನ್ನು ಏಎನ್ಐನ ಪತ್ರಕತರ್ೆ ಭಾರತದಲ್ಲಿ ನಡೆಯುತ್ತಿರುವ ತನಿಖೆಯ ಕುರಿತಂತೆ ಪ್ರಶ್ನಿಸಿದಾಗ, ಜಗತ್ತಿನ ಜಿಹಾದಿಗಳಿಗೆಲ್ಲ ಧೈರ್ಯ ತುಂಬುತ್ತಿದ್ದ ಆತ ಉತ್ತರಿಸಿದ್ದು ಹೇಗೆ ಗೊತ್ತಾ? ‘ಹೆಂಗಸರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಮಾತನಾಡುವುದು ತಪ್ಪು’ ಎನ್ನುವ ಮೂಲಕ! ಭಾರತ ಮೊದಲ ದಿನದಿಂದಲೂ ಆತನ ಸುತ್ತ ಉರುಳನ್ನು ಹೇಗೆ ಬಲಗೊಳಿಸುತ್ತ ಸಾಗಿತೆಂದರೆ ಪ್ರಬಲ ಸಾಕ್ಷಿಗಳನ್ನು ಮಲೇಷಿಯಾಕ್ಕೆ ಒದಗಿಸಿತು. ಬಾಂಗ್ಲಾ ಪೀಸ್ ಟಿವಿಯ ನಿಷೇಧ ಮಾಡುವಂತೆ ಮಾಡಿತು. ಜಾಗತಿಕ ಮುಸಲ್ಮಾನ ರಾಷ್ಟ್ರಗಳೂ ಆತನ ಬೆಂಬಲಕ್ಕೆ ಮುಕ್ತವಾಗಿ ನಿಲ್ಲದಿರುವಂತೆ ನೋಡಿಕೊಂಡಿತು. ಮರು ಆಯ್ಕೆಗೊಂಡು ಮೋದಿ ಅಧಿಕಾರದಲ್ಲಿ ಮುಂದುವರಿದರಲ್ಲ ಅದಾದ 10 ವಾರಗಳಿಗಿಂತಲೂ ಕಡಿಮೆ ದಿನದಲ್ಲಿ ಮಲೇಷಿಯಾ ಕೂಡ ಆತನ ಕೈ ಬಿಟ್ಟಿತು. ಒಂದಾದ ಮೇಲೆ ಒಂದು ಅಲ್ಲಿನ ರಾಜ್ಯಗಳು ಆತನ ಧಾಮರ್ಿಕ ಪ್ರವಚನವನ್ನು ನಿಷೇಧಿಸಿದವು. ಮೊನ್ನೆ ಅಲ್ಲಿನ ಏಳನೇ ರಾಜ್ಯ ಈ ನಿಷೇಧವನ್ನು ವಿಸ್ತರಿಸಿ, ‘ಸಾಮರಸ್ಯದ ಉದ್ದೇಶ ಹೊಂದಿರುವ ನಾವು ಈತನ ಮಾತುಕತೆಗೆ ಅವಕಾಶ ನೀಡುವುದು ಸಾಧ್ಯವೇ ಇಲ್ಲ’ ಎಂದಿದೆ. ಅಷ್ಟೇ ಅಲ್ಲ, ‘ಮಲೇಷಿಯಾದ ಹಿಂದೂಗಳು ನರೇಂದ್ರ ಮೋದಿಯ ಬೆಂಬಲಿಗರೇ ಹೊರತು ಮಲೇಷಿಯಾದ್ದಲ್ಲ’ ಎಂದು ಹೇಳುವ ಮೂಲಕ ಅಲ್ಲಿಯೂ ಝಾಕಿರ್ ನಾಯ್ಕ್ ಬೆಂಕಿಯ ಕಿಡಿ ಹಚ್ಚುವ ಪ್ರಯತ್ನ ನಡೆಸಿದ್ದನ್ನು ಆಂತರಿಕ ಸಂಘರ್ಷಕ್ಕೆ ಪ್ರಚೋದನೆಯಾಗಬಲ್ಲುದೆಂಬುದನ್ನು ಅರಿತ ಅಲ್ಲಿನ ಸಕರ್ಾರ ಆತನ ವಿರುದ್ಧ ತನಿಖೆಗೂ ಆದೇಶ ನೀಡಿದೆ. ಅಲ್ಲಿಗೆ ಆತನನ್ನು ಭಾರತಕ್ಕೆ ಒಪ್ಪಿಸುವ ಮೊದಲ ಪ್ರಕ್ರಿಯೆಗಳು ಆರಂಭವಾದಂತೆಯೇ.

11

ಮೋದಿಯ ಆಳ್ವಿಕೆಯಲ್ಲಿ ಭಾರತದೊಂದಿಗೆ ಶಾಂತಿಯಿಂದ ಬೆಸೆದುಕೊಂಡಿರುವ ಪ್ರತಿಯೊಬ್ಬ ಮುಸಲ್ಮಾನನೂ ನೆಮ್ಮದಿಯಿಂದ ಬದುಕಿದ್ದರೆ, ಭಾರತವನ್ನು ತುಂಡರಿಸಬೇಕೆನ್ನುವ ಮುಸಲ್ಮಾನರೆಲ್ಲ ಒಳಗೊಳಗೇ ಬೆಂದು ಹೋಗುತ್ತಿದ್ದಾರೆ. ಮೋದಿ ನಿಜಕ್ಕೂ ಬಲುದೊಡ್ಡ ಬದಲಾವಣೆ ತಂದಿದ್ದಾರೆ!

Comments are closed.