ವಿಭಾಗಗಳು

ಸುದ್ದಿಪತ್ರ


 

ಪಿಒಕೆ ಶಾಶ್ವತವಾಗಿ ಕೈತಪ್ಪಿ ಹೋಯ್ತಾ?!

ವುಹಾನ್ ವೈರಸ್ ಹರಡಲಾರಂಭಿಸಿದಾಗಿನಿಂದಲೂ ಚೀನಾದ ವಿರುದ್ಧ ಆಕ್ರೋಶ ಇದ್ದದ್ದು ನಿಜವಾದರೂ ಅದು ಘನೀಭವಿಸಿದ್ದು ಮಾತ್ರ ಗಾಲ್ವಾನ್ ಆಕ್ರಮಣದ ನಂತರವೇ. ಭಾರತ ಜಾಗತಿಕ ಮಟ್ಟದಲ್ಲಿ ಇದರ ನೇತೃತ್ವವನ್ನು ವಹಿಸಿತು ಎನ್ನುವುದರಲ್ಲಿ ಈಗ ಯಾವುದೇ ಅನುಮಾನ ಉಳಿದಿಲ್ಲ. ಚೀನೀ ಸೈನಿಕರೊಂದಿಗೆ ಈ ರೀತಿಯ ಸ್ಟ್ಯಾಂಡ್ ಆಫ್ಗಳು ಹೊಸತೇನೂ ಅಲ್ಲವಾದರೂ ಭಾರತ ಅದನ್ನು ವಿಶೇಷವಾಗಿ ಈ ಬಾರಿ ಬಳಸಿಕೊಂಡುಬಿಟ್ಟಿತ್ತು.

ಭಾರತ-ಚೀನಾ ಯುದ್ಧದ ಕಾಮರ್ೋಡಗಳು ಹೆಚ್ಚು-ಕಡಿಮೆ ಕಳೆದೇ ಹೋಗಿವೆ. ಎಂದಿನಂತೆ ಚೀನಾ ಹಿಂದಡಿಯಂತೂ ಇಟ್ಟಾಗಿದೆ. ಮೋದಿ ಬಂದ ನಂತರ ಇದು ಚೀನಾಕ್ಕೆ ಎರಡನೇ ಬಾರಿಗೆ ಜಾಗತಿಕ ಮುಖಭಂಗ. ಡೋಕ್ಲಾಮಿನ ಮೂರು ರಾಷ್ಟ್ರಗಳು ಸೇರುವ ಟ್ರೈ ಜಂಕ್ಷನ್ ಅನ್ನು ವಶಪಡಿಸಿಕೊಳ್ಳುವ ಪ್ರಯತ್ನವನ್ನು ಈ ಹಿಂದೆ ಚೀನಾ ಮಾಡಿತ್ತು. ಆ ಮೂಲಕ ಡೋಕ್ಲಾಂ ಅನ್ನು ತೆಕ್ಕೆಗೆ ಹಾಕಿಕೊಂಡರೆ ಭಾರತದ ಸೂಕ್ಷ್ಮ ಪ್ರದೇಶವಾದ ಸಿಲಿಗುರಿಯ ಮೇಲೆ ಕಣ್ಣಿಡುವುದು ಸುಲಭವಾದೀತು ಎನ್ನುವುದು ಅದರ ಲೆಕ್ಕಾಚಾರವಾಗಿತ್ತು. ಭಾರತೀಯ ಸೇನೆ ಅಂದುಕೊಂಡಿದ್ದಕ್ಕಿಂತ ವೇಗವಾಗಿ ಮುಖಾಮುಖಿಯಾಗಿ ನಿಂತಿತಲ್ಲದೇ ಚೀನಾ ಜಾಗ ಬಿಟ್ಟು ಮರಳುವುದೇ ಏಕೈಕ ಪರಿಹಾರ ಎಂಬಂತೆ ಮಾತುಕತೆಗೆ ಕುಳಿತಿತು. ವಾರಗಟ್ಟಲೆ ಮುಖಾಮುಖಿಯಾಗಿ ನಿಂತು ಬಂದ ದಾರಿಗೆ ಸುಂಕವಿಲ್ಲದಂತೆ ಚೀನಾ ಮರಳಲೇಬೇಕಾಯ್ತು. ಷಿ ಜಿನ್ಪಿಂಗ್ನಿಗೆ ಇದು ಬಲುದೊಡ್ಡ ಅವಮಾನ. ಆತನ ಲೆಕ್ಕಾಚಾರ ಅವತ್ತಿಗೇ ಎಡವಟ್ಟಾಗಿತ್ತು. ಭಾರತ ಇಷ್ಟು ತುತರ್ಾಗಿ ನಿರ್ಣಯ ತೆಗೆದುಕೊಳ್ಳಬಹುದು ಮತ್ತು ಸೇನೆ ಅಷ್ಟೇ ವೇಗವಾಗಿ ಅಲ್ಲಿ ಹಾಜರಾಗಿಬಿಡಬಹುದೆಂದು ಅದು ಊಹಿಸಿರಲಿಲ್ಲ. ಅದೇ ತಪ್ಪು ಗಾಲ್ವಾನ್ನಲ್ಲೂ ಆಯ್ತು. ಭಾರತೀಯ ಪಡೆಗಳ ಪ್ರತ್ಯುತ್ತರ ಮತ್ತು ಒಟ್ಟಾರೆ ಸೈನಿಕ ಶಕ್ತಿಯ ಪ್ರದರ್ಶನ ಅವರಿಗೆ ಗಾಬರಿ ಹುಟ್ಟಿಸಿದ್ದಂತೂ ನಿಜ. ಚೀನಾ ಲೈನ್ ಆಫ್ ಆಕ್ಚ್ಯುಯಲ್ ಕಂಟ್ರೋಲ್ನ ನಮ್ಮ ಗ್ರಹಿಕೆಯ ರೇಖೆಗಿಂತಲೂ ಆಚೆ ಹೋಗಿರುವುದು ಭಾರತದ ಪಾಲಿಗೆ ನಿಜಕ್ಕೂ ಅಪರೂಪದ ಗೆಲುವು. ಮೇಲ್ನೋಟಕ್ಕೆ ಹೇಳುವುದಾದರೆ ಚೀನಾವನ್ನು ಸಮರ್ಥವಾಗಿ ಜಗತ್ತಿನ ಯಾವ ರಾಷ್ಟ್ರಗಳ ಸಹಕಾರವೂ ಇಲ್ಲದೇ ಎದುರಿಸಬಹುದಾದ ಸಾಮಥ್ರ್ಯ ಭಾರತಕ್ಕಿದೆ ಎಂಬುದು ಈಗ ಜಗಜ್ಜಾಹೀರಾಯ್ತು. ಕೊನೆಯ ಪಕ್ಷ ಏಷ್ಯಾದಲ್ಲಂತೂ ಚೀನಾ ಭಾರತದೆದುರು ತಡಬಡಾಯಿಸುತ್ತಿದೆ ಎಂಬ ಸಂದೇಶ ಈ ಪ್ರಕರಣದ ನಂತರ ಸ್ಪಷ್ಟವಾಗಿದೆ. ಬೇರೆಲ್ಲಾ ಬಿಡಿ, ಚೀನಾದ ಸಹಕಾರ ಪಡೆದು ಅಮೇರಿಕನ್ನರನ್ನೇ ಧಿಕ್ಕರಿಸಿದ್ದ ಫಿಲಿಪೈನ್ಸ್ ಇಂದು ಚೀನಾದ ವಿರುದ್ಧ ಗುಟುರು ಹಾಕುತ್ತಿದೆ. ಗಡಿ ತಂಟೆಗೆ ಬರಬೇಡಿರೆಂದು ಭೂತಾನ್ ಸ್ಪಷ್ಟ ದನಿಯಲ್ಲಿ ಹೇಳಿದೆ. ನೇಪಾಳದ ಪ್ರಧಾನಿ ಕೆ.ಪಿ ಓಲಿ ಚೀನಾದ ಪರವಾಗಿ ನಿಂತಿರುವುದನ್ನು ವಿರೋಧಿಸಿ ಇಡಿಯ ನೇಪಾಳ ಬೀದಿಗೆ ಬಂದಿದೆ. ಈ ಪ್ರಕರಣದ ಲಾಭವನ್ನು ಪಡೆಯಲು ಶ್ರೀಲಂಕಾ ಮುಂದಡಿಯಿಟ್ಟಿದೆ. ಕೊನೆಗೆ ಚೀನಾದ ಸಾಲದ ಸುಳಿಯಲ್ಲಿ ಸಿಕ್ಕು ಪರಿತಪಿಸುತ್ತಿದ್ದ ಆಫ್ರಿಕಾದ ಅನೇಕ ರಾಷ್ಟ್ರಗಳು ಸಾಲ ತೀರಿಸುವ ಅವಧಿಯನ್ನು ವಿಸ್ತರಿಸುವ ಅಥವಾ ಸಾಲವನ್ನೇ ಮನ್ನಾ ಮಾಡುವ ಬೇಡಿಕೆಯನ್ನು ಜೋರಾಗಿಯೇ ಮುಂದಿಟ್ಟಿವೆ. ಯಾವ ಸಾಲದ ಸುಳಿಯಲ್ಲಿ ರಾಷ್ಟ್ರಗಳನ್ನು ಆಪೋಷನ ತೆಗೆದುಕೊಳ್ಳುವ ಪ್ರಯತ್ನ ಚೀನಾ ಮಾಡಿತ್ತೋ ಅದೇ ಅದಕ್ಕೀಗ ಹೊರೆಯಾಗುತ್ತಿದೆ! ಹಾಗಂತ ಚೀನಾ ಎಲ್ಲವನ್ನೂ ಕಳೆದುಕೊಳ್ಳಲಿಲ್ಲ. ಗಾಲ್ವಾನ್ ಕಣಿವೆಯ ಒಟ್ಟಾರೆ ಪ್ರಕರಣದಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರವನ್ನು ಚೀನಾ ಪಾಕಿಸ್ತಾನ ಜಂಟಿಯಾಗಿ ಉಳಿಸಿಕೊಂಡುಬಿಟ್ಟಿವೆ. ಈ ಒಟ್ಟಾರೆ ಕದನ ಸ್ವರೂಪದ ಘಟನೆಯಲ್ಲಿ ನಾವು ಗಮನಿಸದೇ ಇರುವ ಅಂಶ ಇದೊಂದೇ. ಈ ಲೇಖನ ಮಾಲೆಯಲ್ಲೇ ಹಿಂದೊಮ್ಮೆ ಈ ಕುರಿತಂತೆ ನಾವು ಚಚರ್ಿಸಿದ್ದೆವು.

2

ಒಟ್ಟಾರೆ ಘಟನಾಕ್ರಮವನ್ನು ಒಮ್ಮೆ ಮರುಸಂದಶರ್ಿಸಿ. ಕರೋನಾದೊಂದಿಗೆ ಚೀನಾ ಜೂಜಾಡುತ್ತಿರುವ ಹೊತ್ತಿನಲ್ಲೇ ಭಾರತ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿ ಭಯೋತ್ಪಾದಕರನ್ನು ಒಳತಳ್ಳುವ ಕೆಲಸ ನಿಲ್ಲಿಸದಿದ್ದರೆ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರವನ್ನೇ ವಶಪಡಿಸಿಕೊಳ್ಳುವುದಾಗಿ ಬೆದರಿಸಿತ್ತು. ಆನಂತರ ಹವಾಮಾನ ವರದಿಯಲ್ಲಿ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನಗಳು ಸೇರಿಕೊಳ್ಳುವಂತೆ ದೇಶ ಒಂದು ಹೆಜ್ಜೆ ಮುಂದಿಟ್ಟಿತು. ಇದು ಪಾಕಿಸ್ತಾನಕ್ಕಷ್ಟೇ ಅಲ್ಲ, ಚೀನಾಕ್ಕೂ ಆತಂಕಕಾರಿ ಸಂಗತಿಯೇ. ಪಶ್ಚಿಮದ ರಾಷ್ಟ್ರಗಳಿಗೆ ಸಂಬಂಧ ಕಲ್ಪಿಸಿಕೊಳ್ಳಲು ಚೀನಾ ನಿಮರ್ಿಸುತ್ತಿರುವ ಒನ್ ಬೆಲ್ಟ್ ಒನ್ ರೋಡ್ಗೆ ಗಿಲ್ಗಿಟ್ ಬಾಲ್ಟಿಸ್ತಾನಗಳು ಮಹತ್ವ ಭೂಮಿಕೆ ನಿಮರ್ಿಸಿಕೊಡುತ್ತವೆ. ಪಾಕಿಸ್ತಾನಕ್ಕೆ ಚೀನಾ ಪಾಕ್ ಎಕನಾಮಿಕ್ ಕಾರಿಡಾರ್ನ ತುಪ್ಪವನ್ನು ಮೂಗಿಗೆ ಸವರಿ ಸಾವಿರಾರು ಕೋಟಿ ರೂಪಾಯಿ ಈ ಭಾಗದಲ್ಲಿ ಚೀನಾ ಹೂಡಿಬಿಟ್ಟಿದೆ. ಸಾಲದ ರೂಪದಲ್ಲಿ ಅದನ್ನು ಪಡೆದಿರುವ ಪಾಕಿಸ್ತಾನಕ್ಕೆ ಅದನ್ನು ತೀರಿಸಲು ಉಳಿದಿರುವ ಮಾರ್ಗ ಗಿಲ್ಗಿಟ್-ಬಾಲ್ಟಿಸ್ತಾನಗಳನ್ನು ಗುತ್ತಿಗೆಗೆ ಕೊಡುವುದೊಂದೇ. ಭಾರತವೇನಾದರೂ ಅದನ್ನು ಕಸಿದುಕೊಂಡುಬಿಟ್ಟರೆ ಪಾಕಿಸ್ತಾನವಂತೂ ಬಬರ್ಾದಾಗುವುದು ಸರಿಯೇ. ಚೀನಾ ಕೂಡ ತನ್ನ ವಿಸ್ತರಣೆಯ ಅಂಗಡಿಯನ್ನು ಮುಚ್ಚಿ ಜಗತ್ತಿನಲ್ಲಿ ಪ್ರಬಲವಾಗುವುದಿರಲಿ ಏಷ್ಯಾದಲ್ಲೂ ಕೂಡ ಮೆರೆಯುವುದು ನಿಂತುಹೋಗುತ್ತದೆ. ಅದಕ್ಕಿದ್ದ ಮಾರ್ಗ ಭಯೋತ್ಪಾದನೆಯ ಮೂಲಕ ಭಾರತವನ್ನು ಹಿಡಿತದಲ್ಲಿಟ್ಟುಕೊಳ್ಳುವುದೊಂದೇ ಆಗಿತ್ತು. ಆದರೆ ಈ ಬಾರಿ ಕರೋನಾದ ನಡುವೆಯೂ ಭಾರತೀಯ ಸೇನೆ ಕಾಶ್ಮೀರದಲ್ಲಿ ನಡೆಸಿದ ನಿರಂತರ ಕಾಯರ್ಾಚರಣೆಯ ಫಲವಾಗಿ ಹೊರಗಿನಿಂದ ನುಸುಳಿದವರಿರಲಿ ಒಳಗಿದ್ದವರನ್ನು ಕೂಡ ಹುಡು-ಹುಡುಕಿ ಕೊಲ್ಲಲಾಯ್ತು. ಇದು ಮುಂದಾಗಬಹುದಾಗಿರುವಂತಹ ಘಟನೆಗಳಿಗೆ ಮುನ್ಸೂಚನೆಯಾಗಿತ್ತು. ಆ ಸಂದರ್ಭದಲ್ಲೇ ಭಾರತವನ್ನು ಮತ್ತೊಂದು ದಿಕ್ಕಿನಲ್ಲಿ ಯುದ್ಧಸನ್ನದ್ಧವಾಗಿಸುವ ಪ್ರಯತ್ನ ಮಾಡಿದ್ದು ಚೀನಾ. ಗಾಲ್ವಾನ್ನಲ್ಲಿ ಪ್ರಬಲವಾದ ಹೊಡೆತ ಕೊಟ್ಟು ಒಂದಷ್ಟು ಸೈನಿಕರ ಸಾವಿಗೆ ಕಾರಣವಾಗಿ ರಾಷ್ಟ್ರದಲ್ಲಿ ಆತಂಕದ ಸ್ಥಿತಿ ನಿಮರ್ಾಣ ಮಾಡಿಬಿಟ್ಟರೆ ಭಾರತ ಗಿಲ್ಗಿಟ್-ಬಾಲ್ಟಿಸ್ತಾನಗಳ ಬಗ್ಗೆ ಮಾತನಾಡುವುದಿಲ್ಲವೆಂಬುದು ಷಿಯ ಸಹಜ ಲೆಕ್ಕಾಚಾರವಾಗಿತ್ತು. ಅದಕ್ಕೆ ತಕ್ಕಂತೆ ಗಾಲ್ವಾನ್ನಲ್ಲಿ ಆಕ್ರಮಣವನ್ನೂ ಮಾಡಲಾಯ್ತು. ವಿಶೇಷವಾಗಿ ಮುಷ್ಟಿ ಯುದ್ಧದಲ್ಲಿ, ಛದ್ಮಯುದ್ಧದಲ್ಲಿ ತರಬೇತಿ ಪಡೆದವರನ್ನೇ ಅಲ್ಲಿ ನಿಯೋಜಿಸಿ ಭಾರತೀಯ ಸೈನಿಕರಿಗೆ ಆಘಾತ ಕೊಡುವ ಪ್ರಯತ್ನ ಈಗ ಜಗಜ್ಜಾಹೀರಾಗಿದೆ. ಎಲ್ಲ ಯೋಜನೆಗಳು ತಲೆಕೆಳಗಾಗಿದ್ದು ಭಾರತೀಯ ಸೈನಿಕರ ಸಾಹಸದ ಕಾರಣದಿಂದ. ಗಾಲ್ವಾನ್ನಲ್ಲಿ ಹೊಡೆತ ತಿಂದ ಚೀನೀ ಸೈನಿಕರು ಕುಂಯ್ಯೋ ಮರ್ರೋ ಎನ್ನುತ್ತಾ ಓಡಿ ಹೋಗಿ ಇಡಿಯ ಚೀನೀ ಪಡೆಯ ಆತಂಕವನ್ನು ಹೆಚ್ಚಿಸಿಬಿಟ್ಟರು. ಗುಡ್ಡ-ಬೆಟ್ಟಗಳಲ್ಲಿ ಒಬ್ಬ ಭಾರತೀಯನೊಂದಿಗೆ ಕಾದಾಡಲು ಐದಾದರೂ ಚೀನೀ ಸೈನಿಕರು ಬೇಕಾಗುತ್ತಾರೆ ಎಂಬ ಮಾತು ಈಗ ದೃಢವಾಯ್ತು. ಆದರೆ ಈ ಘಟನೆಯ ನಂತರ ಅನಿವಾರ್ಯವಾಗಿ ಭಾರತ ತನ್ನೆಲ್ಲ ಗಮನವನ್ನು ಗಾಲ್ವಾನ್ ಮತ್ತು ಪ್ಯಾಗಾಂಗ್ ಸರೋವರದ ಬಳಿಯೇ ಕೇಂದ್ರೀಕರಿಸಬೇಕಾಗಿ ಬಂದದ್ದರಿಂದ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರ ಉಳಿದೇಹೋಯ್ತು. ಈ ಅವಕಾಶವನ್ನು ಬಳಸಿಕೊಂಡೇ ವಿವಾದಾತ್ಮಕ ಪ್ರದೇಶವಾದ ಗಿಲ್ಗಿಟ್-ಬಾಲ್ಟಿಸ್ತಾನ್ಗಳಲ್ಲಿ ಚುನಾವಣೆ ನಡೆಸಬೇಕೆಂದು ಪಾಕಿಸ್ತಾನದ ಸುಪ್ರೀಂಕೋಟರ್್ ಆದೇಶ ಹೊರಡಿಸಿತು. ತನ್ಮೂಲಕ ಈ ಪ್ರದೇಶಗಳನ್ನು ಪಾಕಿಸ್ತಾನದ ಅಂಗವೆಂದು ಸಾಬೀತುಪಡಿಸುವ ಪ್ರಯತ್ನ ನಡೆದಿದೆ. ಒಮ್ಮೆ ಅದು ಸಿದ್ಧಗೊಂಡುಬಿಟ್ಟರೆ ಅದನ್ನು ಚೀನಾಕ್ಕೆ ಹಸ್ತಾಂತರಿಸುವಲ್ಲಿ ಪಾಕಿಸ್ತಾನ ಬಹಳ ಕಷ್ಟಪಡಬೇಕಿಲ್ಲ. ಈಗಾಗಲೇ ಶ್ರೀಲಂಕಾದ ಹಂಬನ್ತೋಟವನ್ನು ಹೀಗೆಯೇ ಬುಟ್ಟಿಗೆ ಹಾಕಿಕೊಂಡಿರುವ ಚೀನಾ ಭಾರತದ ಸುತ್ತ ಉರುಳೊಂದನ್ನು ನಿಮರ್ಿಸಲು ಹಾತೊರೆಯುತ್ತಿದೆ. ಹೀಗಾಗಿಯೇ ಈ ಒಟ್ಟಾರೆ ಕದನ ಪರಿಸ್ಥಿತಿಯಲ್ಲಿ ನಾವು ಗಳಿಸಿದ್ದೆಷ್ಟು, ಕಳಕೊಂಡಿದ್ದೇನು ಎಂಬ ಲೆಕ್ಕಾಚಾರ ಬರಲಿರುವ ದಿನಗಳಲ್ಲಷ್ಟೇ ನಿಧರ್ಾರವಾಗಬೇಕು! ನರೇಂದ್ರಮೋದಿಯವರ ಅಧಿಕಾರಾವಧಿಯ ಒಳಿತು-ಕೆಡುಕುಗಳೆಲ್ಲಾ ನಿಸ್ಸಂಶಯವಾಗಿ ಈ ಘಟನೆಯ ಆಧಾರದ ಮೇಲೆಯೇ ಬರಲಿರುವ ದಿನಗಳಲ್ಲಿ ತೂಕ ಹಾಕಲ್ಪಡುತ್ತದೆ. ಹೇಗೆ 1962ರ ಕದನದ ಸೋಲು ಜವಹರ್ಲಾಲ್ ನೆಹರೂರವರ ಅಧಿಕಾರಾವಧಿಯ ಕರಾಳತೆಯನ್ನು ತೆರೆದಿಡುತ್ತದೆಯೋ ನರೇಂದ್ರಮೋದಿಯವರಿಗೂ ಗಾಲ್ವಾನ್ ಘಟನೆ ನಿಣರ್ಾಯಕವಾಗಲಿದೆ.

3

ಹಾಗಂತ ಎಲ್ಲವನ್ನು ನಾವಿನ್ನೂ ಕಳೆದುಕೊಂಡಿಲ್ಲ. ಚೀನಾ ಗಡಿಯ ಬಳಿ ಬಂದೊಡನೆ ಭಾರತ ಈ ಅವಕಾಶವನ್ನು ಬಳಸಿಕೊಂಡು ಆಥರ್ಿಕವಾಗಿ ಸ್ವಾವಲಂಬಿಯಾಗುವ ಎಲ್ಲ ಪ್ರಯತ್ನಗಳನ್ನೂ ವೇಗವಾಗಿ ಮಾಡಲಾರಂಭಿಸಿದೆ. ಆತ್ಮನಿರ್ಭರ ಭಾರತದ ನೆಪದಲ್ಲಿ ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮತ್ತು ಅಲ್ಲಿನ ಕಂಪೆನಿಗಳನ್ನು ಭಾರತಕ್ಕೆ ಮುಕ್ತವಾಗಿ ಆಹ್ವಾನಿಸುವ ಅವಕಾಶವನ್ನು ಭಾರತ ಪೂರ್ಣಪ್ರಮಾಣದಲ್ಲಿ ಉಪಯೋಗಿಸಿಕೊಂಡಿದೆ. ಜೊತೆಗೆ ಚೀನಾ ವಿರುದ್ಧವಾದ ಭಾವನೆಯೊಂದನ್ನು ಜಾಗತಿಕ ಮಟ್ಟದಲ್ಲಿ ಹುಟ್ಟುವಂತೆ ನೋಡಿಕೊಳ್ಳಲಾಗಿದೆ. ವುಹಾನ್ ವೈರಸ್ ಹರಡಲಾರಂಭಿಸಿದಾಗಿನಿಂದಲೂ ಚೀನಾದ ವಿರುದ್ಧ ಆಕ್ರೋಶ ಇದ್ದದ್ದು ನಿಜವಾದರೂ ಅದು ಘನೀಭವಿಸಿದ್ದು ಮಾತ್ರ ಗಾಲ್ವಾನ್ ಆಕ್ರಮಣದ ನಂತರವೇ. ಭಾರತ ಜಾಗತಿಕ ಮಟ್ಟದಲ್ಲಿ ಇದರ ನೇತೃತ್ವವನ್ನು ವಹಿಸಿತು ಎನ್ನುವುದರಲ್ಲಿ ಈಗ ಯಾವುದೇ ಅನುಮಾನ ಉಳಿದಿಲ್ಲ. ಚೀನೀ ಸೈನಿಕರೊಂದಿಗೆ ಈ ರೀತಿಯ ಸ್ಟ್ಯಾಂಡ್ ಆಫ್ಗಳು ಹೊಸತೇನೂ ಅಲ್ಲವಾದರೂ ಭಾರತ ಅದನ್ನು ವಿಶೇಷವಾಗಿ ಈ ಬಾರಿ ಬಳಸಿಕೊಂಡುಬಿಟ್ಟಿತ್ತು. ಪ್ರತಿದಿನವೂ ಸೈನಿಕರ ಜಮಾವಣೆಯನ್ನು ಮಾಡುತ್ತ, ಚೀನಾದ ವಿಸ್ತರಣಾವಾದದ ಸುದ್ದಿಯನ್ನು ಜಗತ್ತಿನ ಎಲ್ಲ ಪತ್ರಿಕೆಗಳೂ ಅನಿವಾರ್ಯವಾಗಿ ಬರೆಯುವಂತೆ ಮಾಡಿಬಿಟ್ಟರು. ತನ್ನ ರಾಜತಾಂತ್ರಿಕ ಪ್ರಭಾವವನ್ನು ಬಳಸಿ ಜಪಾನ್ನಂತಹ ರಾಷ್ಟ್ರಗಳೂ ಕೂಡ ಚೀನಾ ವಿರುದ್ಧ ಇದೇ ಸಂದರ್ಭದಲ್ಲಿ ಸಿಡಿದೇಳುವಂತೆ ಮಾಡಲಾಯ್ತು. ಯಾವ ಪ್ರಾಪಗ್ಯಾಂಡ ವಾರ್ನ ಮೂಲಕ ಜಗತ್ತೆಲ್ಲವನ್ನೂ ಚೀನಾ ಭ್ರಮಾಲೋಕದಲ್ಲಿರುವಂತೆ ಮಾಡಿತ್ತೋ ಭಾರತ ಆ ಯುದ್ಧವನ್ನು ಪೂರ್ಣ ವಿರುದ್ಧ ದಿಕ್ಕಿಗೆ ತಂದು ನಿಲ್ಲಿಸಿತು. ಅಲ್ಲಿಯವರೆಗೂ ಚೀನಾ ವಿರುದ್ಧ ಜೋರು ದನಿಯಲ್ಲಿ ಮಾತನಾಡುತ್ತಿದ್ದವರು ಟ್ರಂಪ್ ಮಾತ್ರ. ಗಾಲ್ವಾನ್ ಘಟನೆಯ ನಂತರ ಇತರೆಲ್ಲ ರಾಷ್ಟ್ರಗಳು ಮಾತನಾಡಲಾರಂಭಿಸಿದವು. ಇದು ನಿಜಕ್ಕೂ ಚೀನಾ ವಿರುದ್ಧದ ಮಹತ್ವದ ರಾಜತಾಂತ್ರಿಕ ಗೆಲುವು!

4

ಮೋದಿ ಈ ಬಿಸಿ ಆರಲು ಬಿಡಲೇ ಇಲ್ಲ. ಸ್ವತಃ ತಾವೇ ಲೇಹ್ಗೆ ಹೋಗಿಬಂದ ಮೇಲಂತೂ ಜಾಗತಿಕ ಮಟ್ಟದಲ್ಲಿ ಸಂಚಲನವೇ ಆಯ್ತು. ಈ ನಡುವೆ ಸದ್ದಿಲ್ಲದೇ ತಮಗೆ ಬರಬೇಕಿದ್ದ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುವ ಪ್ರಕ್ರಿಯೆ ತೀವ್ರಗೊಳಿಸಿದ್ದು ಯಾರ ಅರಿವಿಗೂ ಬರಲೇ ಇಲ್ಲ. ಇಸ್ರೇಲಿನಿಂದ ಬಾಂಬುಗಳಿರಬಹುದು, ರಷ್ಯಾದಿಂದ ಯುದ್ಧವಿಮಾನ, ಮಿಸೈಲ್ ವ್ಯವಸ್ಥೆಗಳೇ ಇರಬಹುದು ಭಾರತ ವೇಗವಾಗಿ ತಲುಪುವಂತೆ ಕದನದ ಕಾವಿನ ನಡುವೆಯೇ ಪ್ರಕ್ರಿಯೆ ಚುರುಕುಗೊಳಿಸಿಬಿಟ್ಟಿತು. ಬರಿಯ ರಸ್ತೆಗೆ ಉರಿದುಬಿದ್ದ ಚೀನಾ ಇವೆಲ್ಲ ಶಸ್ತ್ರಗಳನ್ನು ಭಾರತ ಕ್ರೋಢೀಕರಿಸುತ್ತಿರುವುದನ್ನು ವಿರೋಧಿಸಲು ಸಾಧ್ಯವೇ ಆಗಲಿಲ್ಲ. ಶಸ್ತ್ರಾಸ್ತ್ರ ಸಂಗ್ರಹದ ಈ ಸಮರ ಎಲ್ಲಿಯೂ ಚಚರ್ೆಗೇ ಬರದಂತೆ ಚೀನಾವನ್ನು ಮುಂದಿಟ್ಟುಕೊಂಡು ಮೋದಿ ಮಾಡಿ ಮುಗಿಸಿದರು. ಇಷ್ಟೆಲ್ಲಾ ಆದ ನಂತರವೂ ಮಾತುಕತೆಯ ಮೂಲಕವೇ ಚೀನಾವನ್ನು ಹಿಂದಕ್ಕೆ ತಳ್ಳಲಾಯ್ತು.

ಹಾಗಂತ ಕದನವೇನೂ ಮುಗಿಯಲಿಲ್ಲ. ಲಂಡನ್ನಿನ ಚೀನಾ ದೂತಾವಾಸದ ಕಛೇರಿಯ ಮೇಲೆ ನಾಲ್ಕೈದು ದಿನಗಳ ಹಿಂದೆಯಷ್ಟೇ ಫ್ರೀ ಟಿಬೆಟ್, ಫ್ರೀ ಹಾಂಗ್ಕಾಂಗ್, ಫ್ರೀ ಉಯ್ಘುರ್ಸ್ ಎಂಬ ದೊಡ್ಡ ಲೇಸರ್ ಫಲಕ ರಾರಾಜಿಸುತ್ತಿತ್ತು. ಇಷ್ಟೂ ದಿನಗಳ ಕಾಲ ಯಾವುದನ್ನು ಮುಚ್ಚಿಡಬೇಕೆಂದು ಚೀನಾ ಪ್ರಯತ್ನಿಸುತ್ತಿತ್ತೋ ಈಗ ಅದು ವ್ಯಕ್ತರೂಪದಲ್ಲಿ ರಾಚುತ್ತಿದೆ. ಇದೇ ಸಮಯಕ್ಕೆ ಚೀನಾದೊಳಗೂ ಕೂಡ ಎಲ್ಲವೂ ಸಮಾಧಾನಕರವಾಗಿಲ್ಲ. ಹಾಂಗ್ಕಾಂಗಿನ ಗಲಾಟೆ ಬಲು ತೀವ್ರಗೊಂಡಿದೆ. ಆಸ್ಟ್ರೇಲಿಯಾ, ಇಂಗ್ಲೆಂಡು ಅಮೇರಿಕಾಗಳು, ಅಲ್ಲಿನ ಜನರಿಗೆ ವಿಶೇಷ ವೀಸಾ ಕೊಡಲು ಒಪ್ಪಿಕೊಂಡಿವೆ. ತೈವಾನ್ ದಲೈ ಲಾಮಾರನ್ನು ಮುಕ್ತಕಂಠದಿಂದ ಆಹ್ವಾನಿಸಿದೆ. ಟಿಬೆಟ್ನಲ್ಲಿ ದಂಗೆಗಳೇಳುವ ಲಕ್ಷಣಗಳು ಜೋರಾಗಿವೆ. ಕೋವಿಡ್ 19 ಅನ್ನು ಷಿ ನಿರ್ವಹಿಸಿದ ರೀತಿಯ ಕುರಿತಂತೆ ಜನಮಾನಸದಲ್ಲಿ ಅಡಗಿದ್ದ ಆಕ್ರೋಶ ಜ್ವಾಲಾಮುಖಿಯಾಗಿ ಸಿಡಿಯಲು ಕಾದು ಕುಳಿತಿದೆ. ಇವೆಲ್ಲಕ್ಕೂ ಕಿರೀಟಪ್ರಾಯವಾಗಿ ಪಾತಾಳ ಮುಟ್ಟಿರುವ ಚೀನಾದ ಆಥರ್ಿಕತೆ, ಅದರದ್ದೇ ಮುಂದುವರೆದ ಭಾಗವಾಗಿ ಕಾಡುತ್ತಿರುವ ನಿರುದ್ಯೋಗ ಚೀನಿಯರನ್ನು ಕಂಗೆಡಿಸುತ್ತಿದೆ. ಷಿ ಅಧಿಕಾರ ಕಳೆದುಕೊಳ್ಳುವ ಹೊಸ್ತಿಲಲ್ಲಿದ್ದಾರಾ? ಅಥವಾ ಆಂತರಿಕ ದಂಗೆಗಳು ಶುರುವಾಗಿ ಚೀನಾ ಸಿಡಿದು ಹೋಗಲಿದೆಯಾ? ಪ್ರಶ್ನೆಯಂತೂ ಇದೆ. ಕಾಲ ಉತ್ತರಿಸಲಿದೆ.

5

ಹೇಳಿದೆನಲ್ಲಾ, ಗಾಲ್ವಾನ್ ಘಟನೆ ಇಬ್ಬರು ನಾಯಕರಿಗೆ ಸತ್ವ ಪರೀಕ್ಷೆಯ ಸಮಯ ತಂದೊಡ್ಡಿದೆ. ಅನುಮಾನವೇ ಇಲ್ಲ. ಇದು ಭವಿಷ್ಯದ ಜಾಗತಿಕ ನಾಯಕರ್ಯಾರು ಎಂಬುದನ್ನು ನಿರ್ಧರಿಸಲಿದೆ!!

Comments are closed.