ವಿಭಾಗಗಳು

ಸುದ್ದಿಪತ್ರ


 

ಪುಟ್ಟ ಭೂತಾನ್ ಏನೆಲ್ಲಾ ಕಲಿಸಿಬಿಡುತ್ತದೆ!

ಭೂತಾನಿಗರು ತಮ್ಮ ಎಲ್ಲಾ ಪಾಪಗಳನ್ನು ಭಾರತದ ಮೇಲೆ ಹೇರಿಬಿಡುತ್ತಾರೆ. ಉದಾಹರಣೆಗೆ ಭೂತಾನ್ ಬುದ್ಧನ ಅನುಯಾಯಿಗಳ ನಾಡಾಗಿರುವುದರಿಂದ ಅಲ್ಲಿ ಪ್ರಾಣಿಹತ್ಯೆ ನಡೆಯುವುದಿಲ್ಲ. ಆದರೆ ಇಲ್ಲಿರುವ ಬಹುತೇಕ ವಜ್ರಯಾನ ಪಂಥದ ಬೌದ್ಧಾನುಯಾಯಿಗಳು ಮಾಂಸಾಹಾರಿಗಳೇ. ಆದರೆ ಅವರು ಇಲ್ಲಿ ಕೋಳಿ, ಕುರಿಗಳನ್ನು ಬಿಡಿ, ಮೀನನ್ನೂ ಕೂಡ ಸಾಯಿಸುವುದಿಲ್ಲ. ಖಂಡಿತವಾಗಿಯೂ ಇದು ನಂಬಲಸಾಧ್ಯ.

ದೇಶ ಸುತ್ತೋದು ಕೋಶ ಓದೋದು ಅನುಭವವನ್ನು ಹೆಚ್ಚಿಸಿಕೊಳ್ಳಲಿಕ್ಕೆ ಬಹಳ ಅಗತ್ಯ ಎಂದು ಹಿರಿಯರೇನೋ ಹೇಳುತ್ತಾರೆ. ಆದರೆ ಧಾವಂತದ ಬದುಕಿನಲ್ಲಿ ದೇಶ ಪರ್ಯಟನೆಗೆ ಅವಕಾಶ ಯಾರು ಕೊಡುತ್ತಾರೆ ಹೇಳಿ. ಬೆಳಗಾಗೆದ್ದರೆ ನಿತ್ಯಕರ್ಮ ಮುಗಿಸಿ ಆಫೀಸಿಗೆ ಓಡುವುದು, ಸಂಜೆ ವೇಳೆಗೆ ಸುಸ್ತಾಗಿ ಮನೆಗೆ ಬಂದು ಅಂಗಾತ ಬಿದ್ದುಕೊಳ್ಳುವುದು. ಹೆಣ್ಣುಮಕ್ಕಳಾದರೆ ಮಕ್ಕಳ ಹೋಂವಕರ್್ ಮಾಡಿಸುವ, ಮನೆಯ ಸ್ಥಿತಿಗತಿಗಳನ್ನು ಸಂಭಾಳಿಸುವ ಹೊಣೆಗಾರಿಕೆ ಬೇರೆ. ಇವುಗಳ ನಡುವೆ ಆಗೊಮ್ಮೆ ಈಗೊಮ್ಮೆ ಪ್ರವಾಸಕ್ಕೆಂದು ಹೋಗುತ್ತಾರಲ್ಲಾ ಅದು ಈಗಿರುವ ಆನ್ಲೈನ್ ವ್ಯವಸ್ಥೆಗಳಲ್ಲಿ ಎಲ್ಲವನ್ನೂ ಪೂರ್ವ ನಿಯೋಜಿತವಾಗಿಸಿಕೊಂಡೇ ಹೋಗೋದು. ಹೀಗಾಗಿ ಯಾವ ಪ್ರದೇಶಕ್ಕೆ ಹೋದರೂ ನಮ್ಮೂರಿನದ್ದೇ ಅಡುಗೆ, ನಮ್ಮ ಮನೆಯಂಥದ್ದೇ ವ್ಯವಸ್ಥೆಯಿರುತ್ತದೆ. ಹೀಗಾಗಿ ಸುತ್ತಾಟವೆನ್ನುವುದು ಹೊಸ ಅನುಭವಗಳನ್ನು ಕಟ್ಟಿಕೊಡುವುದರಲ್ಲಿ ಇತ್ತೀಚೆಗೆ ಸೋಲುತ್ತಿದೆ. ಅದಕ್ಕೆ ಮೊದಲೆಲ್ಲಾ ಮಕ್ಕಳನ್ನು ಸಂಭಾಳಿಸಿ, ಅವರ ಕೈಗೆ ಜವಾಬ್ದಾರಿ ಕೊಟ್ಟೊಡನೆ ತೀರ್ಥಯಾತ್ರೆಗೆಂದು ಜನ ಹೊರಟುಬಿಡುತ್ತಿದ್ದರು. ಯಾವ ಆನ್ಲೈನ್ ವ್ಯವಸ್ಥೆಗಳೂ ಇಲ್ಲದೇ ಹೋದುದರಿಂದ ಅವರು ಅನೇಕ ಬಗೆಯ ಅನುಭವಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದರು. ಪ್ರತೀ ಊರಿನ ಸಂಸ್ಕೃತಿ, ಸಭ್ಯತೆಗಳು ಅವರಿಗೆ ಪಾಠ ಕಲಿಸುತ್ತಿದ್ದವು. ತಾವು ಬದುಕಿನಲ್ಲಿ ಮಾಡಿದ ಎಡವಟ್ಟುಗಳನ್ನು ನೆನಪಿಸಿಕೊಳ್ಳಲಿಕ್ಕೆ ಅವರಿಗೊಂದು ಅವಕಾಶ ಸಿಕ್ಕಿರುತ್ತಿತ್ತು. ಅಂಥವರೇನಾದರೂ ಮರಳಿ ಬಂದರೆಂದರೆ ಅವರು ವಿಶ್ವಕೋಶಕ್ಕೆ ಸಮಾನರಾಗಿರುತ್ತಿದ್ದರು!

ಹಾಗೆ ಸುಮ್ಮನೆ ಯಾವಾಗಲಾದರೂ ಒಮ್ಮೆ ವ್ಯವಸ್ಥೆ ಮಾಡಿಕೊಳ್ಳದೇ ಒಂದು ಪ್ರವಾಸ ಮಾಡಿ. ಹೋದಲ್ಲಿಗೆ ಅಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಬದುಕು ನಡೆಸುವ ಪ್ರಯತ್ನ ಮಾಡಿ. ಅದು ಎಂಟ್ಹತ್ತು ದಿನವಾದರೂ ಸರಿಯೇ. ಮರಳಿ ಬರುವ ವೇಳೆಗೆ ಎಂತಹ ಸವಾಲನ್ನು ಬೇಕಿದ್ದರೂ ಎದುರಿಸಬಲ್ಲ ಛಾತಿ ನಮಗೆ ಸಿದ್ಧಿಸಿಬಿಟ್ಟಿರುತ್ತದೆ. ಇದು ಮುಂದಿನ ಬದುಕನ್ನು ನಡೆಸಲು ನಮಗೆ ಹೊಸ ಸ್ಫೂತರ್ಿಯನ್ನೂ ಕರುಣಿಸಿಕೊಡುತ್ತದೆ.

2

ಇತ್ತೀಚೆಗೆ ಭೂತಾನಿಗೆ ಹೋಗುವಂತಹ ಅವಕಾಶ ಸಿಕ್ಕಿತ್ತು. ಏಕಾಕಿ ನಿಶ್ಚಯಗೊಂಡ ಕಾರ್ಯಕ್ರಮವಾದರೂ ವ್ಯವಸ್ಥಿತವಾಗಿಯೇ ಇತ್ತು. ಆದರೆ ಭೂತಾನ್ ಎಂಬ ಪುಟ್ಟ ರಾಷ್ಟ್ರ ಕಲಿಸಿದ ಪಾಠ ಮಾತ್ರ ಅಮೋಘವಾದ್ದು. ಭೂತಾನ್ ಅದೆಷ್ಟು ಪುಟ್ಟದ್ದೆಂದರೆ ಅಲ್ಲಿನ ಒಟ್ಟೂ ಜನಸಂಖ್ಯೆಯೇ ಏಳು ಲಕ್ಷ ಮಾತ್ರ. ಇದು ಕನರ್ಾಟಕದ ಯಾವ ನಗರಗಳಿಗಿಂತಲೂ ಬಲು ಕಡಿಮೆ! ಇಲ್ಲಿ ಮನುಷ್ಯರಿಗಿಂತ ಹೆಚ್ಚು ಕಾಡಿದೆ. ಎಷ್ಟರಮಟ್ಟಿಗೆ ಎಂದರೆ ಅವರ ನಾಲ್ಕನೆಯ ರಾಜ ಸಂವಿಧಾನ ರಚನೆಯ ಹೊತ್ತಲ್ಲಿ ಯಾವ ಸಂದರ್ಭದಲ್ಲೂ ಶೇಕಡಾ 60ಕ್ಕಿಂತ ಕಡಿಮೆ ಕಾಡು ಇರುವಂತಿಲ್ಲ ಎಂದು ನಿಯಮವನ್ನೇ ಮಾಡಿಬಿಟ್ಟಿದ್ದಾರೆ. ಇಂದು ಆಧುನಿಕವಾದ ಪ್ರಕೃತಿ ವಿರೋಧಿಯಾದ ನಮ್ಮ ಬದುಕಿನ ನಡುವೆಯೂ ಭೂತಾನ್ ಶೇಕಡಾ 80ರಷ್ಟು ಕಾಡನ್ನು ಹೊಂದಿದೆ. ಸ್ಥಳೀಯ ಸಂಸತ್ ಸದಸ್ಯ ರಿನ್ಜಿನ್ ನಮ್ಮೊಡನೆ ಮಾತನಾಡುತ್ತಾ ‘ವಾಸ್ತವವಾಗಿ ಶೇಕಡಾ 80ರಷ್ಟು ಕಾಡಿದ್ದರೂ ಅಧಿಕೃತ ಅಂಕಿಅಂಶ ಶೇಕಡಾ 72 ಎಂದೇ ಕೊಟ್ಟಿದೇವೆ. ಕಾಡು ಹೆಚ್ಚಿದೆ ಎಂಬ ಭಾವನೆಯಿಂದ ಜನರೂ ಅದನ್ನು ಕಡಿಯಲು ಮುಂದಾಗಬಾರದೆಂಬ ಎಚ್ಚರಿಕೆಯಷ್ಟೇ’ ಎಂದರು. ಇಡಿಯ ಭೂತಾನಿನಲ್ಲಿ ಪರಿಸರ ನಾಶಗೊಳಿಸುವ ಒಂದೇ ಒಂದು ಕಾಖರ್ಾನೆಯಿಲ್ಲ. ಹೀಗಾಗಿ ಅವರು ವಾತಾವರಣಕ್ಕೆ ಬಿಡುಗಡೆಯಾಗುವ ಕಾರ್ಬನ್ನಿಗಿಂತಲೂ ಹೆಚ್ಚನ್ನು ಕಾಡಿನ ಮೂಲಕ ನುಂಗಿಹಾಕುತ್ತಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಈ ಪುಟ್ಟ ರಾಷ್ಟ್ರ ಭೂತಾನ್ ಜಗತ್ತಿನ ಶ್ವಾಸಕೋಶವೆಂದು ಹೆಸರು ಪಡೆದರೂ ಯಾರೂ ಅಚ್ಚರಿ ಪಡಬೇಕಿಲ್ಲ. ಹಾಗಂತ ಆಧುನಿಕ ಕಾಖರ್ಾನೆಗಳು ಇಲ್ಲವೆಂದಿಲ್ಲ. ಗಡಿಯೊಳಗಿರುವ ಫುನ್ಶೋಲಿಂಗ್ ಎಂಬ ಭಾರತದ ಗಡಿಗೆ ತಾಕಿಕೊಂಡಿರುವ ನಗರ ಮತ್ತು ಸುತ್ತಲಿನ ಪ್ರದೇಶವನ್ನು ಅವರು ಇದಕ್ಕಾಗಿ ಬಳಸುತ್ತಿದ್ದಾರೆ. ಅವರ ನಿಧರ್ಾರ ಪಕ್ಕ. ಭಾರತ ಮಾಲಿನ್ಯದ ಬೀಡು. ಹೀಗಾಗಿ ಅದಕ್ಕೆ ಹೊಂದಿಕೊಂಡಿರುವ ಭೂತಾನಿನಲ್ಲೇ ಮಾಲಿನ್ಯಕಾರಿ ಕಾಖರ್ಾನೆಗಳನ್ನು ಆರಂಭಿಸಿಬಿಟ್ಟರೆ ನಷ್ಟವಿಲ್ಲ ಎಂಬುದು ಅವರ ಆಲೋಚನೆ. ಮೆಚ್ಚಲೇಬೇಕಾದ್ದು ಬಿಡಿ.

3

ಬರೀ ಇಷ್ಟೇ ಅಲ್ಲ. ಭೂತಾನಿಗರು ತಮ್ಮ ಎಲ್ಲಾ ಪಾಪಗಳನ್ನು ಭಾರತದ ಮೇಲೆ ಹೇರಿಬಿಡುತ್ತಾರೆ. ಉದಾಹರಣೆಗೆ ಭೂತಾನ್ ಬುದ್ಧನ ಅನುಯಾಯಿಗಳ ನಾಡಾಗಿರುವುದರಿಂದ ಅಲ್ಲಿ ಪ್ರಾಣಿಹತ್ಯೆ ನಡೆಯುವುದಿಲ್ಲ. ಆದರೆ ಇಲ್ಲಿರುವ ಬಹುತೇಕ ವಜ್ರಯಾನ ಪಂಥದ ಬೌದ್ಧಾನುಯಾಯಿಗಳು ಮಾಂಸಾಹಾರಿಗಳೇ. ಆದರೆ ಅವರು ಇಲ್ಲಿ ಕೋಳಿ, ಕುರಿಗಳನ್ನು ಬಿಡಿ, ಮೀನನ್ನೂ ಕೂಡ ಸಾಯಿಸುವುದಿಲ್ಲ. ಖಂಡಿತವಾಗಿಯೂ ಇದು ನಂಬಲಸಾಧ್ಯ. ಜಲವಿದ್ಯುತ್ ಉತ್ಪಾದನೆಯಲ್ಲಿ ಜಗತ್ತಿಗೇ ಅಗ್ರಣಿಯಾಗಿರುವ ಭೂತಾನ್ ಮೀನನ್ನೂ ಕೂಡ ನದಿಯಿಂದ ಹೊರತೆಗೆಯುವುದಿಲ್ಲ. ಬದಲಿಗೆ ಎಲ್ಲವನ್ನೂ ಪಕ್ಕದ ಭಾರತದಿಂದಲೇ ಆಮದು ಮಾಡಿಕೊಳ್ಳುತ್ತದೆ. ಅವರಿಗೆ ಬೇಕಾದ ಉತ್ಪನ್ನಗಳಲ್ಲಿ ಬಹುತೇಕ ಭಾರತದಿಂದಲೇ ಬರಬೇಕು. ಇಷ್ಟಕ್ಕೂ ಲ್ಯಾಂಡ್ ಲಾಕ್ಡ್ ದೇಶ ಅದು. ಅಂದರೆ ಅದರ ಎಲ್ಲ ಗಡಿಗಳಲ್ಲೂ ಒಂದಲ್ಲ ಒಂದು ದೇಶವಿದೆ. ಚೀನಾ ಕೂಡ. ಆದರೆ ಬಲು ಹಿಂದೆಯೇ ಅವರ ರಾಜ ಚೀನಾದೊಂದಿಗೆ ಯಾವ ಕಾರಣಕ್ಕೂ ಸಂಬಂಧವಿಟ್ಟುಕೊಳ್ಳಬಾರದು ಎಂದು ಹೇಳಿಬಿಟ್ಟಿರುವುದರಿಂದ ಅವರೆಲ್ಲಾ ಅಕ್ಷರಶಃ ಭಾರತವನ್ನೇ ನಂಬಿ ಕುಳಿತಿದ್ದಾರೆ.

ಕಾಡಿನ ಬಗ್ಗೆ ಹೇಳುವುದನ್ನು ಅರ್ಧಕ್ಕೇ ನಿಲ್ಲಿಸಿದ್ದೆ. ಪ್ರತೀ ಪಂಚವಾಷರ್ಿಕ ಯೋಜನೆಗೂ ಭಾರತ ಅವರಿಗೆ ದೊಡ್ಡ ಮೊತ್ತದ ಸಹಾಯ ಮಾಡುತ್ತದೆ. ಎಷ್ಟು ದೊಡ್ಡ ಮೊತ್ತವೆಂದರೂ ಅದು ನಾಲ್ಕುವರೆ ಸಾವಿರಕೋಟಿ ದಾಟುವುದಿಲ್ಲ ಬಿಡಿ. ಈ ಹಣವನ್ನು ಭಾರತ ಅಲ್ಲಿನ ರಸ್ತೆಗಳಲ್ಲಿ, ಜಲವಿದ್ಯುತ್ ಯೋಜನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತದೆ. ಅದನ್ನು ಅವರು ವಿದ್ಯುತ್ ಕೊಡುವ ಮೂಲಕ ಬಹುಪಾಲು ತೀರಿಸಿಕೊಂಡುಬಿಡುತ್ತಾರೆ. ಉಳಿದ ಹಣ ಎಲ್ಲಿಂದ ಬರುತ್ತದೆ ಗೊತ್ತೇ? ಅವರು ಉಳಿಸಿಕೊಂಡಿರುವ ಕಾಡಿನ ಲೆಕ್ಕಾಚಾರದ ಆಧಾರದ ಮೇಲೆ ಅವರೆಷ್ಟು ಇಂಗಾಲವನ್ನು ಸ್ಥಿರೀಕರಿಸುತ್ತಾರೋ ಅಷ್ಟು ವಿಶ್ವಸಂಸ್ಥೆಯಿಂದ ಸಹಾಯ ಧನ ಪಡೆಯುತ್ತಾರೆ. ಅಂದರೆ ಉಳಿಸಿರುವ ಕಾಡುಗಳೇ ಅವರ ಪಾಲಿಗೆ ರಕ್ಷಣೆಗೆ ಬರುತ್ತವೆ! ನಮ್ಮಲ್ಲಾದರೋ ಯಾವುದಾದರೂ ಯೋಜನೆಗಳಿಗೆ ಬಿಡಿ, ಟಿಂಬರ್ ಮಾಫಿಯಾಗಳೂ ಕೂಡ ಕಾಡು ಕಡಿದು ಮಾರಾಟ ಮಾಡಿ ಹಬ್ಬ ಮಾಡಿಬಿಡುತ್ತವೆ. ನಮ್ಮೆಲ್ಲ ಘನವಾದು ಕಾಡುಗಳೂ ತಮ್ಮ ಸೌಂದರ್ಯವನ್ನು ಕಳೆದುಕೊಂಡು ಬೊಕ್ಕ ತಲೆಯಂತವಾಗಿರೋದು ಈ ಕಾರಣಕ್ಕೇ!

4

ಓದುಗರೆಲ್ಲರಿಗೂ ಇಷ್ಟವಾಗಬಹುದಾದ ಮತ್ತೊಂದು ಸಂಗತಿಯಿದೆ. ಏನು ಗೊತ್ತೇ? ಇಲ್ಲಿ ಚುನಾವಣೆಗೆ 25ರ ನಂತರ ಸ್ಪಧರ್ಿಸಬೇಕು. ಆದರೆ 65ರ ನಂತರ ಸ್ಪಧರ್ಿಸುವಂತಿಲ್ಲ. ಅಂದರೆ ರಾಜಕಾರಣಿಗೂ ಕೂಡ ನಿವೃತ್ತಿಯ ವಯಸ್ಸಿದೆ. ನಡೆಯಲು ಸಾಧ್ಯವಾಗದೇ, ಬೇರೆಯವರ ಹೆಗಲ ಮೇಲೆ ಕೈಯಿಟ್ಟು, ಆಡಳಿತದಲ್ಲೂ ಇತರರ ಸಹಕಾರ ಪಡೆದು ಮುನ್ನಡೆಯುವ ಭಾರತದ ರಾಜಕಾರಣಿಗಳನ್ನು ನೀವು ಭೂತಾನಿನ ರಾಜಕಾರಣಿಗಳೊಂದಿಗೆ ಹೋಲಿಸಿ ನೋಡಲೂ ಸಾಧ್ಯವಿಲ್ಲ. ನಾವು ಭೇಟಿ ಮಾಡಿದ ಭೂತಾನಿನ ಹಣಕಾಸು ಸಚಿವ ನಾಮ್ಗ್ಯಾ ಶೆರಿಂಗ್ಗೆ ಬರಿ 32 ವರ್ಷ! ಅವರ ಒಟ್ಟಾರೆ ಕ್ಯಾಬಿನೆಟ್ಟಿನ ಸರಾಸರಿ ಆಯುವೇ 39. ಅಂದರೆ ತರುಣರಿಗೆ ರಾಜಕಾರಣದಲ್ಲಿ ಪ್ರಾಶಸ್ತ್ಯವಿದೆ. ಅದರೊಟ್ಟಿಗೆ ಸಮಸ್ಯೆಯೂ ಇದೆ. ಈ ರೀತಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಈ ತರುಣರಲ್ಲಿ ಅನೇಕರಿಗೆ ರಾಷ್ಟ್ರವನ್ನು ಮುನ್ನಡೆಸಬಲ್ಲಷ್ಟು ಬೌದ್ಧಿಕ ಸಾಮಥ್ರ್ಯದ ಕೊರತೆಯೂ ಇದೆ. ಈ ಬಾರಿ ಅಧಿಕಾರಕ್ಕೆ ಬಂದ ತಂಡಕ್ಕಿಂತಲೂ ಪ್ರತಿಪಕ್ಷದಲ್ಲಿರುವ ತಂಡದಲ್ಲಿ ಅಪಾರ ಬುದ್ಧಿಮತ್ತೆಯ ರಾಜಕಾರಣಿಗಳಿದ್ದಾರೆ. ಇದು ಬಲುವಿಶೇಷ. ಈ ಕುರಿತಂತೆ ಚುನಾವಣೆಯಲ್ಲಿ ಸೋತ ರಾಜಕಾರಣಿಯೊಬ್ಬರನ್ನು ಪ್ರಶ್ನಿಸಿದಾಗ ಅವರು ಮುಲಾಜಿಲ್ಲದೇ ‘ನಮಗೇನು ಹೆದರಿಕೆ ಇಲ್ಲ. ಏಕೆಂದರೆ ತಪ್ಪು ಮಾಡಿದರೆ ತಿದ್ದಲು ರಾಜನಿದ್ದಾನಲ್ಲಾ’ ಎಂದುಬಿಟ್ಟಿದ್ದರು. ರಾಜನ ಕುರಿತಂತಹ ಈ ಶ್ರದ್ಧೆಯೇ ಅವರನ್ನು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಬಲವಾಗಿ ಆತುಕೊಳ್ಳುವಂತೆ ಮಾಡಿದ್ದು. ಆದರೆ ಒಂದಂತೂ ಸತ್ಯ. ಈಗಿರುವ ರಾಜ ಬಿಟ್ಟ ನಂತರ ಭೂತಾನ್ ಹೀಗೆಯೇ ಉಳಿಯಬಲ್ಲದ ಎಂಬುದು ಯಾರೂ ಖಾತ್ರಿಯಾಗಿ ಹೇಳಲಾರರು. ಭೂತಾನಿನ ನಾಲ್ಕನೇ ರಾಜನೇ ಈ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಜಾರಿಗೊಳ್ಳುವಂತೆ ಮಾಡಿದ್ದು. ಅಧಿಕಾರಕ್ಕೆ ಬಂದಾಗ ಇನ್ನೂ ಚಿಕ್ಕವಯಸ್ಸಿನವನಾಗಿದ್ದ ಆತ ತನ್ನ ಆರಂಭಿಕ ಭಾಷಣಗಳಲ್ಲೇ ಭೂತಾನ್ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ಹೊರಳಬೇಕೆಂಬ ಆಶಯ ವ್ಯಕ್ತಪಡಿಸಿದ್ದ. ಭಾರತ ಕಲಿಯಲೇಬೇಕಾಗಿರುವ ಮತ್ತೊಂದು ಪಾಠವಿದು. ನಮ್ಮಲ್ಲಿ ಪ್ರಜಾಪ್ರಭುತ್ವವಿದೆ. ಆದರೆ ರಾಜಕಾರಣಿಗಳು ಅಧಿಕಾರವನ್ನು ತಮ್ಮಿಂದ ಮಕ್ಕಳಿಗೆ ಮೊಮ್ಮಕ್ಕಳಿಗೆ ವಗರ್ಾಯಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಅಲ್ಲಿ ರಾಜಪ್ರಭುತ್ವವನ್ನೇ ತ್ಯಾಗ ಮಾಡಿ ಚುನಾವಣೆಯ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ಮೆಚ್ಚಬೇಕಾದ್ದು. ಚುನಾವಣೆಯ ಪ್ರಕ್ರಿಯೆಗಳು ವಿಚಿತ್ರ. ಆರಂಭಿಕ ಹಂತದಲ್ಲಿ ಮೂರ್ನಾಲ್ಕು ಪಕ್ಷಗಳು ಸೆಣಸಾಡುತ್ತವೆ. ಮೊದಲ ಹಂತದ ಚುನಾವಣೆಯಲ್ಲಿ ರಾಷ್ಟ್ರವನ್ನಾಳಲು ಬೇಕಾಗುವ ಪಕ್ಷಗಳ್ಯಾವುದೆಂದು ವೋಟು ಮಾಡಲು ಕೇಳಿಕೊಳ್ಳಲಾಗುತ್ತದೆ. ಆಗ ಮೊದಲನೇ ಮತ್ತು ಎರಡನೇ ಸ್ಥಾನ ಪಡೆದ ಪಕ್ಷಗಳು ಮಾತ್ರ ಮುಂದಿನ ಸೆಣಸಾಟಕ್ಕೆ ಅರ್ಹವಾಗುತ್ತವೆ. ಆನಂತರ ಭಿನ್ನ-ಭಿನ್ನ ಹಂತಗಳಲ್ಲಿ ಉಪಚುನಾವಣೆ ನಡೆದು ಈ ಎರಡೂ ಪಕ್ಷಗಳಲ್ಲಿ ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಸಂಸದರ ಸಂಖ್ಯೆಯ ಆಧಾರದ ಮೇಲೆ ನಿಶ್ಚಯಿಸಲಾಗುತ್ತದೆ. ಈ ಬಾರಿ ಸೋತವರೆಲ್ಲರೂ ಎರಡನೇ ಸ್ಥಾನ ಪಡೆದ ಪಕ್ಷಕ್ಕೆ ಬೆಂಬಲಕೊಟ್ಟು ಅದನ್ನು ಗೆಲ್ಲಿಸಿಕೊಂಡುಬಿಟ್ಟರೆಂದು ಇಲ್ಲಿನ ಕೆಲವರು ಆರೋಪಿಸುತ್ತಾರೆ. ಇದ್ದರೂ ಇರಬಹುದು. ಆದರೆ ಭಾರತಕ್ಕೆ ಇಂತಹದ್ದೊಂದು ವ್ಯವಸ್ಥೆಯನ್ನು ತರಬಹುದೇ ಎಂಬ ಪ್ರಶ್ನೆಯೇ ಬಲುಕಠಿಣವಾದ್ದು. ಭೂತಾನಿನ ಜನಸಂಖ್ಯೆ ಏಳು ಲಕ್ಷದ್ದು ಎಂಬುದನ್ನು ಮರೆಯುವಂತಿಲ್ಲ.

ಇನ್ನೊಂದು ಅಚ್ಚರಿಯ ಸಂಗತಿಯೇನು ಗೊತ್ತೇ? ಇಲ್ಲಿ ಜನರ ದುಡ್ಡು ಕಬಳಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆ ನಿಯಮಗಳನ್ನು ಕಠಿಣವಾಗಿ ಪಾಲಿಸುತ್ತಾರೆ. ಭಾರತಕ್ಕೆ ಹೊಂದಿಕೊಂಡಿರುವ ಗಡಿಪ್ರದೇಶ ಜೈಗಾಂವ್ನಲ್ಲಿ ಮನಸೋಇಚ್ಛೆ ಕಾರು ಓಡಿಸುವ ಚಾಲಕ ಎರಡು ಕಿ.ಮೀ ದಾಟಿ ಒಳಬಂದಾಕ್ಷಣ ಸಭ್ಯನಾಗಿಬಿಡುತ್ತಾನೆ. ಏಕೆಂದು ಕೇಳಿದ್ದಕ್ಕೆ ಸಣ್ಣ ತಪ್ಪಿಗೂ ಕೂಡ ಅಲ್ಲಿ ಅಪಾರ ದಂಡಕಟ್ಟಬೇಕಾಗುತ್ತದಂತೆ. ಜೀಬ್ರಾ ಕ್ರಾಸಿಂಗ್ನಲ್ಲಿ ಅಕಸ್ಮಾತ್ ಯಾರಿಗಾದರೂ ಗುದ್ದಿಬಿಟ್ಟರೆ ಗುದ್ದಿಸಿಕೊಂಡವನಿಗೆ ಹಬ್ಬವಂತೆ. ಆತ ಕೇಳಿದಷ್ಟು ಪರಿಹಾರವನ್ನು ಕಟ್ಟಿಕೊಡಲೇಬೇಕು. ಹೀಗಾಗಿ ಅಂತಹ ಜಾಗಗಳು ಕಂಡೊಡನೆ ಚಾಲಕ ಗಾಡಿಯನ್ನು ನಿಧಾನಿಸಿಬಿಡುತ್ತಾನೆ. ಪುಟ್ಟ ಭೂತಾನ್ ಎಷ್ಟೆಲ್ಲಾ ತಿಳಿದುಕೊಂಡಿದೆ ನೋಡಿ! ನಾವು ಭೂತಾನಿಗೆ ಸಹಾಯ ಮಾಡುತ್ತಲೇ ಉಳಿದೆವು. ಅದರಿಂದ ಕಲಿಯಬೇಕಾದ್ದಿಲ್ಲ ಎಂಬ ಧಿಮಾಕಿನಿಂದಲೂ ಮೆರೆದೆವು. ಆದರೆ ಕಲಿಯಬೇಕಾದ್ದು ಎಷ್ಟೆಲ್ಲಾ ಇದೆ ನೋಡಿ.

5

ಭೂತಾನಿನ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಅಲ್ಲಿನ ಆಸ್ಥೆ, ನಂಬಿಕೆಗಳು ಎಲ್ಲವೂ ನಮಗೆ ಸುಲಭ ಮಾತುಗಳಲ್ಲಿ ಪಾಠ ಕಲಿಸಿಬಿಡುತ್ತವೆ. ನರೇಂದ್ರಮೋದಿ ಭೂತಾನಿಗೆ ಎರಡೆರಡು ಬಾರಿ ಹೋಗಿಬಂದಿದ್ದು ಅಲ್ಲಿನ ಜನರಿಗೆ ಭಾರತದ ಕುರಿತಂತಹ ಉತ್ಸಾಹವನ್ನು ಹೆಚ್ಚಿಸಿದೆಯಲ್ಲದೇ ಚೀನಾದೊಂದಿಗೆ ಹೋದರೆ ಒಳಿತೆಂಬ ಭಾವನೆಯನ್ನೂ ತೆಗೆದುಹಾಕಿದೆ. ನಮ್ಮದ್ದೇ ವಿಸ್ತೃತ ಭಾಗವೆಂಬಂತೆ ಇರುವ ಭೂತಾನಿನ ಪ್ರವಾಸಕ್ಕೆ ಅವಕಾಶ ಸಿಕ್ಕರೆ ಖಂಡಿತ ಹೋಗಿಬನ್ನಿ. ಖಚರ್ು ಬಹಳ ಕಡಿಮೆ ಏಕೆಂದರೆ ನಿಮ್ಮ ಜೇಬಿನಲ್ಲಿರುವ ರೂಪಾಯಿ ಅಲ್ಲಿಯೂ ನಡೆಯುತ್ತದೆ. ಹಾಗೆ ಬರುವಾಗ ಒಂದಷ್ಟು ಒಳಿತನ್ನು ಮೈಗೂಡಿಸಿಕೊಂಡೇ ಬನ್ನಿ!

Comments are closed.