ವಿಭಾಗಗಳು

ಸುದ್ದಿಪತ್ರ


 

ಪೈಂಟಿಂಗ್ ಮಾರಿ ಬದುಕು ನಡೆಸುತ್ತಿರುವಾಕೆಯ ರೋಚಕ ಕಥೆ!!

ಮಮತಾ ಬರೆದಿರುವ ಚಿತ್ರಗಳು ಅದೆಷ್ಟು ಬಾಲಿಶವಾಗಿವೆ ಎಂದರೆ ಪ್ರೈಮರಿ ಶಾಲೆಯ ಮಕ್ಕಳು ಅದನ್ನು ಕಂಡು ಒಮ್ಮೆ ಕಿಸಕ್ಕೆಂದುಬಿಡುತ್ತಾರೆ. ಆಧುನಿಕ ಚಿತ್ರಕಾರರು ಅದರಲ್ಲಿ ಹೊಸತನವನ್ನು ಗುರುತಿಸಿಯಾರೇನೋ! ಆದರೆ 2013ರ ನಂತರ ಕೊಳ್ಳುವವರಿಗೂ ಆ ಚಿತ್ರಗಳಲ್ಲಿ ಆಸಕ್ತಿ ಉಳಿದಿರಲಿಲ್ಲ.

ಭವಿಷ್ಯದ ಪ್ರಧಾನಮಂತ್ರಿ ತಾನೇ ಎಂದು ಅರಚಾಡುತ್ತಿರುವ ಮಮತಾ ಬ್ಯಾನಜರ್ಿ ಜನರ ಮುಂದೆ ಈಗ ನಗೆಪಾಟಲಿಗೀಡಾಗಿದ್ದಾರೆ. ಸಿಬಿಐ ಶಾರದಾ ಚಿಟ್ಫಂಡ್ ಪ್ರಕರಣವನ್ನು ವಿಚಾರಣೆ ನಡೆಸುತ್ತಾ ಮಮತಾ ಬ್ಯಾನಜರ್ಿಯ ಅಂಗಳಕ್ಕೆ ಬಂದು ನಿಂತಿದೆ. ಆದರೆ ಈ ಬಾರಿಯದ್ದು ಎಂದಿನಂತೆ ಆರೋಪವಲ್ಲ. ಮಮತಾ ಈ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಹೊಟ್ಟೆ ಹುಣ್ಣಾಗುವಷ್ಟು ನಗಬಹುದಾದಂತಹ ಸಾಕ್ಷಿ ಸಿಕ್ಕಿವೆ. ಆಂಗ್ಲ ಪತ್ರಿಕೆಯೊಂದು ಮಮತಾಳ ತೃಣಮೂಲ ಕಾಂಗ್ರೆಸ್ ಸಮಾಜದ ಮುಂದಿಟ್ಟಿರುವ ಅಫಿಡವಿಟ್ ಅನ್ನು ಪ್ರಕಟಿಸಿದ ನಂತರ ಇಡಿ ಬಂಗಾಳ ಗಾಬರಿಗೊಂಡಿದೆ. 2011 ಮತ್ತು 12ರ ನಡುವೆ 2 ವರ್ಷಗಳಲ್ಲಿ ಮಮತಾ ಬ್ಯಾನಜರ್ಿಯಿಂದ ರಚಿಸಲ್ಪಟ್ಟ ವರ್ಣಚಿತ್ರಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿ ಆ ದುಡ್ಡನ್ನು ಆಕೆ ಪಾಟರ್ಿ ನಿಧಿಯಾಗಿ ಬಳಸಿಕೊಂಡಿದ್ದಾಳೆ.

8

2011ರಲ್ಲಿ ಪಾಟರ್ಿ ಅಧಿಕಾರಕ್ಕೆ ಏರಿದೊಡನೆ ಸುಮಾರು 4 ಕೋಟಿ ರೂಪಾಯಿಯಷ್ಟು ಹಣವನ್ನು ವರ್ಣಚಿತ್ರಗಳ ಮಾರಾಟದಿಂದ ಅದು ಪಡೆದುಕೊಂಡಿತು. ಮರುವರ್ಷ ಎರಡೂವರೆ ಕೋಟಿ ರೂಪಾಯಿಯಷ್ಟು ಬೆಲೆಕೊಟ್ಟು ಆಕೆ ರಚಿಸಿದ ಮತ್ತಷ್ಟು ವರ್ಣಚಿತ್ರಗಳನ್ನು ಸಿರಿವಂತರು ಕೊಂಡುಕೊಂಡರು. ಎರಡೇ ವರ್ಷಗಳಲ್ಲಿ ಒಟ್ಟು ಆರೂವರೆ ಕೋಟಿ ರೂಪಾಯಿಯಷ್ಟು ಹಣ ಮಮತಾ ಚಿತ್ರಿಸಿದ ಚಿತ್ರಗಳ ಮಾರಾಟದಿಂದಲೇ ಪಕ್ಷದ ನಿಧಿಗೆ ಬಂತು. ಅತ್ಯಾಶ್ಚರ್ಯಕರ ಸಂಗತಿಯೆಂದರೆ ಪಕ್ಷ ಅಧಿಕಾರಕ್ಕೇರುವ ಮುನ್ನ ಹೀಗೆ ಒಂದು ರೂಪಾಯಿ ಕೂಡ ವರ್ಣಚಿತ್ರಗಳ ಮಾರಾಟದಿಂದ ಅದಕ್ಕೆ ಬಂದಿರಲಿಲ್ಲ. 2013ರಿಂದಾಚೆಗೂ ಆ ಬಗೆಯ ಹಣ ಬಂದಿಲ್ಲ! ಅಧಿಕಾರಕ್ಕೇರುವ ಮುನ್ನ ಎಂದಿಗೂ ಮಮತಾ ಕಲೆಗಾತಿಯಾಗಿ ಗುರುತಿಸಿಕೊಂಡಿಲ್ಲ. 2013ರ ನಂತರವೂ ಆಕೆ ಕಲೆಗಾತಿಯಾಗಿ ಉಳಿದಿಲ್ಲ. ಇದೇ ಬಲು ಚಕಿತಗೊಳಿಸುವ ಅಂಶ. ವಾಸ್ತವವಾಗಿ ಒಬ್ಬ ಕಲೆಗಾರನ ವರ್ಣಚಿತ್ರ ಹೆಚ್ಚು ಬೆಲೆಗೆ ಮಾರಾಟವಾದ ನಂತರ ಆತನ ಮುಂದಿನ ವರ್ಣಚಿತ್ರವನ್ನು ಕೊಂಡುಕೊಳ್ಳಲು ಜನ ಕಾತರಿಸುತ್ತಿರುತ್ತಾರೆ. ಅಂಥದ್ದರಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಆಕೆಯ ಚಿತ್ರಗಳನ್ನು ಆನಂತರ ಲಕ್ಷಕ್ಕಾದರೂ ಯಾರೂ ಕೊಂಡುಕೊಳ್ಳಲಿಲ್ಲವೇಕೆ? ಅಲ್ಲೇ ಇರುವುದು ಅತ್ಯಂತ ಪ್ರಮುಖ ಸಂಗತಿ.

9

ಮಮತಾ ಬರೆದಿರುವ ಚಿತ್ರಗಳು ಅದೆಷ್ಟು ಬಾಲಿಶವಾಗಿವೆ ಎಂದರೆ ಪ್ರೈಮರಿ ಶಾಲೆಯ ಮಕ್ಕಳು ಅದನ್ನು ಕಂಡು ಒಮ್ಮೆ ಕಿಸಕ್ಕೆಂದುಬಿಡುತ್ತಾರೆ. ಆಧುನಿಕ ಚಿತ್ರಕಾರರು ಅದರಲ್ಲಿ ಹೊಸತನವನ್ನು ಗುರುತಿಸಿಯಾರೇನೋ! ಆದರೆ 2013ರ ನಂತರ ಕೊಳ್ಳುವವರಿಗೂ ಆ ಚಿತ್ರಗಳಲ್ಲಿ ಆಸಕ್ತಿ ಉಳಿದಿರಲಿಲ್ಲ. ಏಕೆಂದರೆ ಆಕೆಯ ಎಲ್ಲಾ ವರ್ಣಚಿತ್ರಗಳನ್ನು ಕೊಂಡವರು ಚಿತ್ರಕಲೆಯಲ್ಲಿ ಆಸಕ್ತಿಯುಳ್ಳ ಸಿರಿವಂತರಲ್ಲ. ಬದಲಿಗೆ ಪಶ್ಚಿಮ ಬಂಗಾಳದಲ್ಲಿ ಬಗೆ-ಬಗೆಯ ಚಿಟ್ಫಂಡ್ಗಳ ಮೂಲಕ ಜನರ ಹಣ ಮಣ್ಣು ಮುಕ್ಕಿಸಲು ಕಾಯುತ್ತಿದ್ದ ಮಹಾಲೂಟಿಕೋರರೇ. 2012ರಲ್ಲಿ ಈ ಪ್ರಕರಣ ಹೊರಬಂದು ಇವರಲ್ಲನೇಕರನ್ನು ಬಂಧಿಸಲಾಯ್ತು. ಕೆಲವರು ಈವರೆಗೂ ಯಾರ ಕೈಗೂ ಸಿಗದೇ ತಪ್ಪಿಸಿಕೊಂಡುಬಿಟ್ಟಿದ್ದಾರೆ. ಹೀಗಾದಮೇಲೆಯೇ ಮಮತಾ ರಚಿಸಿದ ವರ್ಣಚಿತ್ರಗಳ ಮಾರಾಟ ನಿಂತುಹೋಗಿದ್ದು. ಆಕೆಯ ಆಪ್ತ ಮಾಣಿಕ್ ಮಜುಂದಾರ್ರನ್ನು ಸಿಬಿಐ ವಿಚಾರಣೆ ನಡೆಸಿದಾಗ ಆತ ಹೀಗೆ ಬಂದ ಹಣವನ್ನು ಬಳಸಿರುವ ರೀತಿಯ ಕುರಿತಂತೆ ವಿವರಣೆ ಕೊಡಲು ಹೋಗಿದ್ದಾನೆ. ಪಕ್ಷದ ಮುಖವಾಣಿಯಾದ ಜಾಗೋಬಾಂಗ್ಲಾವನ್ನು ಬಲಿಷ್ಠಗೊಳಿಸಲು ಇದನ್ನು ಬಳಸಲಾಗಿದೆ ಎಂದೂ ಹೇಳಿದ್ದಾನೆ.

ಮಮತಾ ಬ್ಯಾನಜರ್ಿ ಬಹುಶಃ ಈ ದೇಶದಲ್ಲಿ ಅತ್ಯಂತ ಹೆಚ್ಚು ದುಬಾರಿ ಬೆಲೆಗೆ ಮಾರಾಟವಾಗಿರುವ ವರ್ಣಚಿತ್ರ ರಚಿಸಿದ ಕಲೆಗಾತಿ ಎಂಬ ಬಿರುದಿಗೆ ಪಾತ್ರವಾದರೂ ಅಚ್ಚರಿಪಡಬೇಕಿಲ್ಲ. ತನ್ನ ಪೈಂಟಿಂಗ್ ಕೊಳ್ಳುವವರ ಭರವಸೆಯ ಮೇಲೆ ಪಕ್ಷದ ಸೌಧ ಕಟ್ಟಿರುವ ಮಮತಾ ಈಗ ನಿಜಕ್ಕೂ ಗೊಂದಲಕ್ಕೀಡಾಗಿದ್ದಾಳೆ. ಅದಕ್ಕೆ ಸರಿಯಾಗಿ ಬಂಗಾಳದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾಜಪ ಆಕೆಯ ನಿದ್ದೆಗೆಡಿಸಿದೆ. ಬಂಗಾಳದ ಅನೇಕ ಕಡೆಗಳಲ್ಲಿ ಅದಾಗಲೇ ಹಿಂದೂಗಳ ಪರವಾಗಿ ಮಾತನಾಡುವ, ಮಂದಿರ ನಿಮರ್ಿಸಿಕೊಡುವ ಕೆಲಸಗಳನ್ನು ಆಕೆ ಶುರುಮಾಡಿದ್ದಾಳೆ. ಈ ಬಾರಿಯ ಚುನಾವಣೆ ಆಕೆಯ ಪಾಲಿಗೆ ಭವಿಷ್ಯದ ಮುನ್ಸೂಚನೆಯಾಗಲಿದೆ. ಎಲ್ಲರೂ ಹೇಳುವ ಪ್ರಕಾರ ಭಾಜಪ ಬಲವಾದ ಹೆಜ್ಜೆಯನ್ನು ಊರಿಬಿಟ್ಟರೆ ವಿಧಾನಸಭಾ ಚುನಾವಣೆಗೆ ಆಕೆ ಕಣ್ಣೀರಿಡಬೇಕಾದ ಪರಿಸ್ಥಿತಿ ನಿಮರ್ಾಣವಾಗುವುದಂತೂ ಸತ್ಯ. ಅದಕ್ಕೆ ಆಕೆಯ ಗೂಂಡಾಗಳು ಭಾಜಪ ಕಾರ್ಯಕರ್ತರನ್ನು ಥಳಿಸುವುದು ಬಿಡಿ ಕೊಂದುಬಿಡುತ್ತಿದ್ದಾರೆ. ಆಕೆಯ ವಿರುದ್ಧದ ಆಕ್ರೋಶ ಅಂತರ್ಪ್ರವಾಹವಾಗಿ ಹರಿಯುತ್ತಿದೆ. ಅದರ ಸೆಲೆಯನ್ನು ಅರಿತುಕೊಳ್ಳುವ ಮೊದಲನೇ ಹೆಜ್ಜೆಯೇ ಲೋಕಸಭಾ ಚುನಾವಣೆ. ಮೊದಲೇ ಚಿಟ್ಫಂಡ್ನ ಹಗರಣ ಆಕೆಯ ನಿದ್ದೆಕೆಡಿಸಿರುವಾಗ ಈಗ ಅದಕ್ಕೆ ಸೇರಿಕೊಂಡ ಪೈಂಟಿಂಗ್ ಹಗರಣವಂತೂ ಆಕೆಯ ಸೋಲಿಗೆ ಭಾಷ್ಯ ಬರೆಯಲಿದೆ!

10

ಮಮತಾ ಬ್ಯಾನಜರ್ಿಯನ್ನು ಅತ್ಯಂತ ಸೀದಾ-ಸಾದಾ ಎಂದು ಬಣ್ಣಿಸುತ್ತಾ ಆಕೆಯ ಗುಣಗಾನ ಮಾಡುವ ಮೋದಿ ವಿರೋಧಿಗಳೆಲ್ಲಾ ಒಮ್ಮೆ ಆಕೆಯ ಪೈಂಟಿಂಗ್ ಅನ್ನು ಹತ್ತಿರದಿಂದ ನೋಡಬೇಕು. ಜನರಿಗೆ ಮೋಸ ಮಾಡಿದ ಹಣವನ್ನು ಆಕೆ ತನ್ನ ಪಕ್ಷಕಟ್ಟಲು ಬಳಸಿಕೊಂಡಿದ್ದನ್ನು ಸೂಕ್ತವಾಗಿ ಅವಲೋಕಿಸಬೇಕು. ಸಾಧ್ಯವಾದರೆ ತನಗೆ ಬಂದಿರುವ ಉಡುಗೊರೆಗಳನ್ನು ಕಳೆದ ಒಂದು ದಶಕದಿಂದಲೂ ಹರಾಜು ಹಾಕುತ್ತಾ ಆ ಮೂಲಕ ಸಂಗ್ರಹಗೊಂಡ ಒಟ್ಟೂ ಹಣವನ್ನು ಹೆಣ್ಣುಮಕ್ಕಳ ಓದಿಗೆಂದು ಕೊಡುವ ನರೇಂದ್ರಮೋದಿಯವರೊಂದಿಗೆ ಈಕೆಯನ್ನು ತುಲನೆ ಮಾಡಿ ನೋಡಬೇಕು. ಆಗ ನಿಜವಾದ ಸರಳತೆ, ನಾಯಕತ್ವ, ಜನಪ್ರೇಮ ಇವೆಲ್ಲವೂ ಎಂಥವನಿಗೂ ಅರಿವಾಗುತ್ತವೆ. ಎಲ್ಲರೂ ಮರೆಯುವ ಮುನ್ನವೇ ಮತ್ತೊಂದು ಮಾತು ಹೇಳಿಬಿಡುತ್ತೇನೆ. ಇತ್ತೀಚೆಗೆ ಜಾಗತಿಕ ಮಟ್ಟದ ಶಾಂತಿ ಪ್ರಶಸ್ತಿ ಸ್ವೀಕರಿಸಿದ ನರೇಂದ್ರಮೋದಿ ಅದರಿಂದ ಬಂದ 2 ಲಕ್ಷ ಡಾಲರ್ಗಳನ್ನು ನಮಾಮಿ ಗಂಗೆ ಯೋಜನೆಗೆ ಸಮಪರ್ಿಸಿ ಎತ್ತರಕ್ಕೇರಿಬಿಟ್ಟಿದ್ದಾರೆ. ಜೊತೆಗೆ ಮಹಾಕುಂಭದ ಸ್ವಚ್ಛತೆ ಕಾಪಾಡಿದ ಪೌರಕಾಮರ್ಿಕರ ಕಲ್ಯಾಣಕ್ಕೆಂದು ತಾವು ಉಳಿಸಿದ ಹಣದಿಂದಲೇ ದಾನಗೈದ ಮೋದಿಯವರ ಸಾಧನೆ ಖಂಡಿತ ಮೆಚ್ಚುವಂಥದ್ದೇ.

11

ಚುನಾವಣೆಗೆ ಇನ್ನು ಮೂವತ್ತೇ ದಿನಗಳು ಬಾಕಿ ಇರುವಾಗ ಮೋದಿ ಹಿಮಾಲಯದಷ್ಟು ಎತ್ತರ ಬೆಳೆದು ನಿಂತುಬಿಟ್ಟಿದ್ದಾರೆ. ಅವರೆದುರಿಗಿನ ಮಹಾಘಟಬಂಧನದ ನಾಯಕರೆಲ್ಲರೂ ಮಣ್ಣಿನ ಹೆಂಟೆಗಿಂತಲೂ ಚಿಕ್ಕದಾಗಿ ಕಾಣುತ್ತಿದ್ದಾರೆ.

Comments are closed.