ವಿಭಾಗಗಳು

ಸುದ್ದಿಪತ್ರ


 

ಪೌರತ್ವದ ಗೊಂದಲದಲ್ಲಿ ಸದ್ದಿಲ್ಲದೇ ಮೋದಿಕಾರ್ಯ!

ಈ ನಡುವೆಯೇ ಮೋದಿಯ ವಿರುದ್ಧ ಒಟ್ಟಾಗುವ ಧಾವಂತದಲ್ಲಿ ಅನೇಕ ಪತ್ರಕರ್ತರು, ಮಾಧ್ಯಮಗಳು ಬೆತ್ತಲಾಗಿ ನಿಂತುಬಿಟ್ಟಿವೆ. ಇತ್ತೀಚೆಗೆ ಇಂಡಿಯಾ ಟುಡೇ ಸ್ಟಿಂಗ್ ಆಪರೇಷನ್ ಮಾಡಿ ಜೆಎನ್ಯು ಪ್ರಕರಣದಲ್ಲಿ ಭಾಗಿಯಾಗಿದ್ದು ಎಬಿವಿಪಿಯ ಹುಡುಗ ಎಂಬುದನ್ನು ಸಾಬೀತು ಪಡಿಸಲು ಯತ್ನಿಸಿತು. ಆದರೆ ಕೆಟ್ಟದ್ದಾಗಿ ಇಂಡಿಯಾ ಟುಡೇ ಸಿಕ್ಕುಬಿದ್ದಿತಲ್ಲದೇ ತಾನು ಮಾಡಿದ ಸ್ಟಿಂಗ್ ಆಪರೇಷನ್ನೇ ಮೋಸದ್ದು ಎಂದು ಜಾಲತಾಣಿಗರ ಮುಂದೆ ತಲೆತಗ್ಗಿಸಬೇಕಾಯ್ತು.

ಮೋದಿಯನ್ನು ಕಂಡರೆ ಪ್ರತಿಪಕ್ಷಗಳು ಹೆದರುವುದೇಕೆ ಗೊತ್ತೇ? ಬೇರೆಲ್ಲಾ ಮುಖ್ಯಮಂತ್ರಿಗಳನ್ನೋ ಪ್ರಧಾನಮಂತ್ರಿಗಳನ್ನೋ ಹೆದರಿಸಿ ಕೆಲಸ ಮಾಡಿಸಿಕೊಂಡಂತೆ ಮೋದಿಯವರಿಂದ ಮಾಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವರನ್ನು ಹೆದರಿಸಿದಷ್ಟೂ ಅವರು ತಮ್ಮ ಕೆಲಸವನ್ನು ಮೊದಲಿಗಿಂತಲೂ ಜೋರಾಗಿಯೇ ಮಾಡುತ್ತಾರೆ. 2002ರ ಗೋದ್ರಾ ಘಟನೆಯ ಮೂಲಕ ಕಾಂಗ್ರೆಸ್ಸು ಮೋದಿಯನ್ನು ಕಟ್ಟಿಹಾಕಲು ಯತ್ನಿಸಿತ್ತು. ಮೋದಿ ಅಲುಗಾಡುವುದಿರಲಿ ಅದನ್ನೇ ಏಣಿಯಾಗಿ ಬಳಸಿಕೊಂಡು ಪ್ರಧಾನಮಂತ್ರಿ ಪಟ್ಟದವರೆಗೂ ಏರಿಬಿಟ್ಟರು. ಆನಂತರವೂ ಅವರ ವಿರುದ್ಧ ಎಸೆದ ಪ್ರತಿಯೊಂದೂ ಕಲ್ಲುಗಳನ್ನು ಅವರು ಅಡಿಪಾಯಕ್ಕೆ ಹಾಕುತ್ತಾ ತಮ್ಮ ಸೌಧವನ್ನು ಬಲಪಡಿಸಿಕೊಳ್ಳುತ್ತಲೇ ಹೋದರು. ಈಗ ಪೌರತ್ವ ಕಾಯ್ದೆಯ ಸರದಿ. ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಾಗಿನಿಂದ ದೇಶದಾದ್ಯಂತ ಪ್ರತಿಭಟನೆಗಳು ಜೋರಾಗಿ ನಡೆದಿವೆ. ಆರಂಭದಲ್ಲಿ ಮೋದಿ ಬೆಂಬಲಿಗರು ಆತಂಕಪಟ್ಟಿದ್ದುಂಟು. ಮೋದಿ ಧಾವಂತದಲ್ಲಿ ಎಡವಿಬಿಟ್ಟರಾ? ಕಾಯ್ದೆ ಜಾರಿ ಮಾಡುವ ಮುನ್ನ ಸೂಕ್ತ ನಿರ್ವಹಣೆ ಮಾಡುವಲ್ಲಿ ಸೋತುಬಿಟ್ಟರಾ? ಎಂದೆಲ್ಲಾ ಪ್ರಶ್ನಿಸಿದ್ದರು. ಆದರೆ ಹೀಗೆ ಕಾಯ್ದೆಯೊಂದನ್ನು ವಿರೋಧಿಸುವ ಪ್ರತಿಭಟನೆಯ ಮೂಲಕ ಮೋದಿಯನ್ನು ಕಟ್ಟಿಹಾಕುತ್ತೇವೆಂದು ಭ್ರಮಿಸಿದ ಕಾಂಗ್ರೆಸ್ಸು ಬಲುದೊಡ್ಡ ಎಡವಟ್ಟನ್ನೇ ಮಾಡಿಕೊಂಡುಬಿಟ್ಟಿತು. ಈಗಿನ ಸ್ಥಿತಿ ಹೇಗಿದೆ ಗೊತ್ತೇನು? ತನ್ನ ತಾನು ಕಾಂಗ್ರೆಸ್ಸು ಹಿಂದೂವಿರೋಧಿ ಎಂದು ಪದೇ ಪದೇ ಸಾಬೀತುಪಡಿಸಿಕೊಳ್ಳುತ್ತಿದೆಯಲ್ಲದೇ ಗುಂಡಾದದರ್ಿಗೆ ಇಳಿದಿರುವ ಮುಸಲ್ಮಾನರನ್ನೂ ಕೂಡ ಜಗತ್ತಿನ ಮುಂದೆ ನಗ್ನವಾಗಿ ತೆರೆದಿಟ್ಟುಬಿಟ್ಟಿದೆ. ಹಾಗಂತ ಮೋದಿ-ಶಾ ಬೆದರಿದ್ದಾರಾ? ಮೇಲ್ನೋಟಕ್ಕಂತೂ ಹಾಗೆ ಕಾಣುವುದಿಲ್ಲ. ಅದಾಗಲೇ ಪೌರತ್ವ ಕಾಯ್ದೆಯ ಕುರಿತಂತೆ ಗೆಜೆಟ್ ನೋಟಿಫಿಕೇಶನ್ ಕೂಡ ಬಂದಾಯ್ತು. ಈ ನಡುವೆಯೇ ದೇಶದಲ್ಲಿ ಅನೇಕ ಮಹತ್ವದ ಬೆಳವಣಿಗೆಗಳಾಗಿವೆ. ಮೊದಲನೆಯದಾಗಿ ಸಕರ್ಾರ ಮುಲಾಜಿಲ್ಲದೇ ವಿಐಪಿಗಳಿಗೆ ಕೊಟ್ಟಿದ್ದ ರಕ್ಷಣೆಯನ್ನು ಪುನರ್ ಪರಿಶೀಲಿಸಿದೆ ಮತ್ತು ರಾಷ್ಟ್ರೀಯ ರಕ್ಷಣಾ ದಳದ ಕಮ್ಯಾಂಡೊಗಳನ್ನು ವಿಐಪಿ ರಕ್ಷಣೆಯಿಂದ ಮುಲಾಜಿಲ್ಲದೇ ಮರಳಿ ಪಡೆದಿದೆ. ವಾಸ್ತವವಾಗಿ ಈ ಎನ್ಎಸ್ಜಿ ಕಮ್ಯಾಂಡೊಗಳ ಪಡೆಯನ್ನು 1984ರಲ್ಲಿ ನಿಮರ್ಿಸಿದಾಗ ಅವರುಗಳಿಗೆ ಕೊಟ್ಟಿದ್ದ ಹೊಣೆಗಾರಿಕೆ ಭಯೋತ್ಪಾದನೆಯನ್ನು ಮಟ್ಟಹಾಕುವುದಾಗಿತ್ತು. ಅತ್ಯಾಧುನಿಕವಾದ ಶಸ್ತ್ರ ಮತ್ತು ತರಬೇತಿಯಿಂದ ಸಿದ್ಧಗೊಂಡಿದ್ದ ಈ ಪಡೆ ದೀರ್ಘಕಾಲ ಈ ಕೆಲಸ ಮಾಡುತ್ತಲೇ ಬಂತು. ಆನಂತರದ ದಿನಗಳಲ್ಲಿ ಇವರ ಹೆಗಲಿಗೆ ವಿಐಪಿಗಳ ರಕ್ಷಣೆಯನ್ನೂ ಏರಿಸಲಾಯ್ತು. 13 ವಿಶೇಷ ಅಪಾಯವುಳ್ಳ ವಿಐಪಿಗಳೆಂದು ಯಾರನ್ನು ಗುರುತಿಸಲಾಗಿತ್ತೋ ಅಂಥವರಿಗೆ ರಕ್ಷಣೆಗೆಂದು ಇವರನ್ನೇ ನೇಮಿಸಲಾಯ್ತು. ಒಬ್ಬರಿಗೆ ಸುಮಾರು 2 ಡಜನ್ನಷ್ಟು ಕಮ್ಯಾಂಡೊಗಳು ಎಂದು ಭಾವಿಸುವುದಾದರೂ ಸುಮಾರು 350ರಷ್ಟು ವಿಶೇಷ ತರಬೇತು ಪಡೆದ ಕಮ್ಯಾಂಡೊಗಳು ಈ ಜನರ ರಕ್ಷಣೆಗೆಂದು ನಿಲ್ಲಬೇಕಾಯ್ತು. ಹೀಗೆ ಕಮ್ಯಾಂಡೊಗಳು ರಕ್ಷಣೆ ಮಾಡುತ್ತಿದ್ದ ಸಾಲಿನಲ್ಲಿ ಮಾಯಾವತಿ, ಮುಲಾಯಂಸಿಂಗರಲ್ಲದೇ ಚಂದ್ರಬಾಬುನಾಯ್ಡು, ಫಾರುಖ್ ಅಬ್ದುಲ್ಲಾರಂಥವರೂ ಇದ್ದರು! ಸೋನಿಯಾ, ರಾಹುಲ್, ಪ್ರಿಯಾಂಕರಲ್ಲದೇ ಆ ಮನೆತನದ ಅಳಿಯನಿಗೂ ಕೂಡ ಈ ಕಮ್ಯಾಂಡೊಗಳ ರಕ್ಷಣೆಯಿತ್ತು. ಈ 350 ಜನ ಕಮ್ಯಾಂಡೊಗಳೊಂದಿಗೆ ಇವರುಗಳ ರಕ್ಷಣೆಗೆ ಸದಾ ಸನ್ನದ್ಧವಾಗಬೇಕಿದ್ದ ಇನ್ನೂ 100 ಕಮ್ಯಾಂಡೊಗಳನ್ನು ಸೇರಿಸಿದರೆ ಒಟ್ಟಾರೆ ಮೋದಿಯವರ ನಿರ್ಣಯದಿಂದಾಗಿ ಭಯೋತ್ಪಾದಕರ ನಿಗ್ರಹಕ್ಕೆಂದು ಕನಿಷ್ಠ 450 ಹೊಸ ಕಮ್ಯಾಂಡೊಗಳು ಸಿಗುತ್ತಾರೆ. ಇದು ನಿಜಕ್ಕೂ ದೇಶಕ್ಕೆ ಬಲವಾದ ಶಕ್ತಿಯೇ ಸರಿ. ಸಹಜವಾಗಿಯೇ ಈಗ ಈ ವಿಐಪಿಗಳ ರಕ್ಷಣೆಯ ಹೊಣೆಗಾರಿಕೆ ಸಿಆರ್ಪಿಎಫ್ ಮತ್ತಿತರ ಪ್ಯಾರಾಮಿಲಿಟರಿ ಫೋಸರ್್ನ ಹೆಗಲೇರಿದೆ. ಕಮ್ಯಾಂಡೊಗಳು ಮಾತ್ರ ತಾವು ನಿಜಕ್ಕೂ ಪಡೆದುಕೊಂಡಿರುವ ತರಬೇತಿಯನ್ನು ಸಮರ್ಥವಾಗಿ ಬಳಸಲು ಈಗ ಸಜ್ಜಾಗುತ್ತಿದ್ದಾರೆ. ಸಿಎಎ ಗಲಾಟೆಯ ನಡುವೆ ಬಹುತೇಕರಿಗೆ ಇದು ಕಂಡೇ ಇರಲಿಲ್ಲ. ಇದರೊಟ್ಟಿಗೆ ಅಸ್ಸಾಂ ಅನ್ನು ಕಾಡುತ್ತಿದ್ದ ಮಯನ್ಮಾರ್ನಲ್ಲಿ ತಮ್ಮ ಸಮರ್ಥ ನೆಲೆಯನ್ನು ರೂಪಿಸಿಕೊಂಡಿದ್ದ ಬೊಡೊ ಉಗ್ರಗಾಮಿಗಳ ಕೊನೆಯ ತಂಡ ಭಾರತದ ಸೈನಿಕರೆದುರು ಶರಣಾಗಿದೆ. ಇತ್ತೀಚೆಗೆ ತಾನೇ ನಾಗಾಲ್ಯಾಂಡ್ನ ನೋಂಗ್ವಾ ಹಳ್ಳಿಯನ್ನು ದಾಟಿಬಂದು ಭಾರತೀಯ ಸೇನೆಯೆದುರು ಶರಣಾಗತವಾದ ಈ ಪಡೆ ಅಪಾರ ಶಸ್ತ್ರಾಸ್ತ್ರವನ್ನು ತಮ್ಮೊಂದಿಗೆ ತಂದಿದೆ. ಈ 50 ಜನ ಶಸ್ತ್ರತ್ಯಾಗ ಮಾಡಿದ್ದು ಈಶಾನ್ಯ ರಾಜ್ಯಗಳಲ್ಲಿ ನೆಮ್ಮದಿಯ ವಾತಾವರಣ ನಿಮರ್ಿಸಲು ಖಂಡಿತವಾಗಿಯೂ ಕಾರಣವಾಗಲಿದೆ. ಸರಿಸುಮಾರು ಇದೇ ವೇಳೆಗೆ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಭಾಗದಲ್ಲಿ ಪಾಕಿಸ್ತಾನದ ಶೋಷಣೆಯನ್ನು ಸಹಿಸಲಾಗದೇ ಪಶ್ತೂನ್ಗಳು ದಂಗೆ ಎದ್ದಿದ್ದಾರೆ. ಭಾರತದಲ್ಲಿರುವ ಮುಸಲ್ಮಾನರಿಗೆ ಹಣಕೊಟ್ಟು ದಂಗೆಯೆಬ್ಬಿಸಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನ ಈಗ ಪಶ್ತೂನ್ಗಳನ್ನು ಎದುರಿಸಲಾಗದೇ ವಿಲವಿಲ ಒದ್ದಾಡುತ್ತಿದೆ. ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ ಎಂದು ಆಪಾದಿಸುತ್ತಿದ್ದ ಪಾಕಿಸ್ತಾನವೇ ಈ ಭಾಗದಲ್ಲಿ ಸಂಪೂರ್ಣ ಇಂಟರ್ನೆಟ್ ನಿಷೇಧಿಸಿ ಜನರ ಮೇಲೆ ತನ್ನ ದಬ್ಬಾಳಿಕೆಯನ್ನು ಹೆಚ್ಚು ಮಾಡಿದೆ. ಭಾರತದ ಬುದ್ಧಿಜೀವಿಗಳು ಸೊಲ್ಲೆತ್ತದಿರುವುದು ಅಚ್ಚರಿಯ ಸಂಗತಿ. ಆದರೆ ಈ ರೀತಿ ಏಕಾಏಕಿ ಪಶ್ತೂನ್ಗಳು ಪಾಕಿಸ್ತಾನದ ವಿರುದ್ಧವೇ ತಿರುಗಿ ಬೀಳುವುದರ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಬೊಬ್ಬೆ ಇಡುತ್ತಿರುವುದರಲ್ಲಿ ಮಾತ್ರ ಎಳ್ಳಷ್ಟೂ ಸತ್ಯವಿಲ್ಲ ಎಂದು ನಾವು ಸುಳ್ಳಷ್ಟೇ ಹೇಳಬಹುದು! ಮೋದಿ-ಶಾ, ಅಜಿತ್ ದೋವೆಲ್ ಏನು ಬೇಕಾದರೂ ಮಾಡಿಯಾರು. ಭಾರತದಲ್ಲಿ ದಂಗೆಗೆ ಪ್ರಚೋದನೆಕೊಟ್ಟರೆ ಪಾಕಿಸ್ತಾನವನ್ನು ನಾಲ್ಕು ತುಂಡು ಮಾಡುವ ಮಾತನ್ನು ಈ ಹಿಂದೆ ದೋವೆಲ್ರು ಹೇಳಿದ್ದರಲ್ಲಾ ಅದನ್ನು ನೆನಪಿಟ್ಟುಕೊಂಡರೆ ಸಾಕು!

6

ಈ ನಡುವೆಯೇ ಮೋದಿಯ ವಿರುದ್ಧ ಒಟ್ಟಾಗುವ ಧಾವಂತದಲ್ಲಿ ಅನೇಕ ಪತ್ರಕರ್ತರು, ಮಾಧ್ಯಮಗಳು ಬೆತ್ತಲಾಗಿ ನಿಂತುಬಿಟ್ಟಿವೆ. ಇತ್ತೀಚೆಗೆ ಇಂಡಿಯಾ ಟುಡೇ ಸ್ಟಿಂಗ್ ಆಪರೇಷನ್ ಮಾಡಿ ಜೆಎನ್ಯು ಪ್ರಕರಣದಲ್ಲಿ ಭಾಗಿಯಾಗಿದ್ದು ಎಬಿವಿಪಿಯ ಹುಡುಗ ಎಂಬುದನ್ನು ಸಾಬೀತು ಪಡಿಸಲು ಯತ್ನಿಸಿತು. ಆದರೆ ಕೆಟ್ಟದ್ದಾಗಿ ಇಂಡಿಯಾ ಟುಡೇ ಸಿಕ್ಕುಬಿದ್ದಿತಲ್ಲದೇ ತಾನು ಮಾಡಿದ ಸ್ಟಿಂಗ್ ಆಪರೇಷನ್ನೇ ಮೋಸದ್ದು ಎಂದು ಜಾಲತಾಣಿಗರ ಮುಂದೆ ತಲೆತಗ್ಗಿಸಬೇಕಾಯ್ತು. ಅದೇ ಚಾನೆಲ್ನ ಪತ್ರಕತರ್ೆಯೊಬ್ಬಳು ತಾನು ಸಂದಶರ್ಿಸಬೇಕಾದ ಎಡಪಂಥದ ಯುವಕನೊಬ್ಬನ ಕಿವಿಯಲ್ಲಿ ಏನು ಹೇಳಬೇಕೆಂಬುದನ್ನು ಹೇಳಿಕೊಡುತ್ತಿದ್ದುದು ಜಾಲತಾಣಗಳಲ್ಲಿ ವೈರಲ್ ಆದಮೇಲೆಯಂತೂ ಚಾನೆಲ್ನ ಮರ್ಯಾದೆ ನಯಾಪೈಸೆಯಷ್ಟೂ ಉಳಿಯಲಿಲ್ಲ. ಅದಲ್ಲದೇ ಆ ಚಾನೆಲ್ನ ಪ್ರಮುಖರಲ್ಲೊಬ್ಬರಾದ ರಾಹುಲ್ ಕನ್ವಲ್ ವಂದೇಮಾತರಂ ಘೋಷಿಸುವ ಮೂಲಕ ದೇಶವಿರೋಧಿ ಕೆಲಸ ಮಾಡುತ್ತಿರುವಿರಿ ಎಂದು ಹೇಳಿಕೆಕೊಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ಈಗ ಹೊಸತಲ್ಲ. ಸಿಎಎ ವಿರೋಧಿಸುವ ಭರದಲ್ಲಿ ಮುಸಲ್ಮಾನರಾದಿಯಾಗಿ ಎಲ್ಲರೂ ತಮ್ಮನ್ನು ತಾವು ಬೆತ್ತಲುಗೊಳಿಸಿಕೊಳ್ಳುತ್ತಿದ್ದಾರೆ. ಕನರ್ಾಟಕದಲ್ಲಿ ಕಾಂಗ್ರೆಸ್ಸಿಗಿಂತ ಮುಂದೆ ತಾನಿದ್ದೇನೆ ಎಂದು ತೋರಿಸಿಕೊಳ್ಳಲೆತ್ನಿಸಿದ ಕುಮಾರಸ್ವಾಮಿ ಸಿಡಿ ಬಿಡುಗಡೆಗೊಳಿಸಿ ಒಂದಷ್ಟು ಮಂಗಳಾರತಿ ಮಾಡಿಸಿಕೊಂಡರು. ದಂಗೆಯ ಹೊತ್ತಲ್ಲಿ ಅದನ್ನು ನಿಯಂತ್ರಿಸಿದ ಪೊಲೀಸರಿಗೆ ಅಭಿನಂದನೆ ಹೇಳುವುದನ್ನು ಬಿಟ್ಟು ಸಕರ್ಾರಿ ಆಸ್ತಿಗೆ ಬೆಂಕಿ ಹಚ್ಚಿದ ದಂಗೆಕೋರರ ಪರವಾಗಿ ನಿಂತ ತಮ್ಮ ನಾಯಕರನ್ನು ಸ್ವಂತ ಪಕ್ಷದವರೇ ಒಪ್ಪಿಕೊಳ್ಳುವುದು ಕಷ್ಟವೆಂದು ಅವರಿಗೆ ಅರಿವಾಗಲು ಬಹಳ ಸಮಯ ಹಿಡಿಯಲಾರದು!

ಒಟ್ಟಿನಲ್ಲಿ ಪೌರತ್ವ ಕಾಯ್ದೆ ಹೊರಗೆ ಸಕರ್ಾರಿ ಆಸ್ತಿಗೆ ಬೆಂಕಿ ಹಚ್ಚುವಂತಾದರೆ, ಆಂತರ್ಯದಲ್ಲಿ ಅನೇಕರ ಬಂಡವಾಳ ಬಯಲುಗೊಳಿಸಿದೆ!

Comments are closed.