ವಿಭಾಗಗಳು

ಸುದ್ದಿಪತ್ರ


 

ಪ್ರಜ್ಞಾ ಆಯೆಷಾ ಆಗಿ ಭಯೋತ್ಪಾದನೆಗಿಳಿದ ಕಥೆ!

ಆಯೆಷಾಳ ಅಧಿಕೃತ ಜವಾಬ್ದಾರಿಯೇ ಜನರನ್ನು ಆನ್ಲೈನ್ ಪ್ಲಾಟ್ಫಾರಂಗಳಲ್ಲಿ ತಲೆಕೆಡಿಸುವುದು, ಭಯೋತ್ಪಾದನಾ ಕೃತ್ಯಕ್ಕೆ ಸಿದ್ಧಗೊಳಿಸುವುದಾಗಿತ್ತು. ಭಯೋತ್ಪಾದಕರ ತಂಡಕ್ಕೂ ಆಯೆಷಾ ಒಂದು ಹೆಮ್ಮೆಯೇ ಆಗಿದ್ದಳು ಏಕೆಂದರೆ ಮತಾಂತರಗೊಂಡ ಹೆಣ್ಣುಮಗಳೊಬ್ಬಳು ಈ ಹಂತಕ್ಕೆ ಏರಿದ ಉದಾಹರಣೆಯೇ ಇರಲಿಲ್ಲ.

ಪ್ರಜ್ಞಾ ದೇಬನಾಥ್ ಬಂಗಾಳದ ಧನಿಯಾಖಾಲಿ ಕಾಲೇಜಿನ ವಿದ್ಯಾಥರ್ಿನಿ. ತಾಯಿ ಗೀತಾ ಮನೆಯನ್ನು ಮುನ್ನಡೆಸುತ್ತಿದ್ದಾಕೆ. ತಂದೆ ಸೆಕ್ಯುರಿಟಿ ಗಾಡರ್್ ಆಗಿದ್ದು ಕರೋನಾ ಲಾಕ್ಡೌನಿನ ಸಂದರ್ಭದಲ್ಲಿ ಕೆಲಸ ಕಳೆದುಕೊಂಡರು. ಹತ್ತನೇ ಮತ್ತು ಹನ್ನೆರಡನೇ ತರಗತಿಗಳಲ್ಲಿ ಸಾಕಷ್ಟು ಅಂಕ ಗಳಿಸಿದ್ದ ಪ್ರಜ್ಞಾ ಸಂಸ್ಕೃತವನ್ನು ಮುಂದಿನ ಅಧ್ಯಯನಕ್ಕೆಂದು ಆರಿಸಿಕೊಂಡಿದ್ದಳು. ಈ ಹೊತ್ತಿನಲ್ಲೇ ಅವಳು ಅನ್ಯಮತೀಯನೊಬ್ಬನೊಂದಿಗೆ ಸಂಪರ್ಕಕ್ಕೆ ಬಂದಿದ್ದು. ಆತ ಭಯೋತ್ಪಾದಕನಾಗಿದ್ದ ಸಂಗತಿ ಆಕೆಗೆ ಗೊತ್ತಾಗುವ ವೇಳೆಗೆ ತಡವಾಗಿ ಹೋಗಿತ್ತು. ಅವನೊಂದಿಗೆ ಆಕೆ ಸಾಕಷ್ಟು ಸುತ್ತಾಡಿದ್ದಳು. ಹೊಟೆಲು, ಸಿನಿಮಾ ಮಾಮೂಲಿಯೂ ಆಗಿತ್ತು. ಕ್ರಮೇಣ ತನ್ನ ವಿಚಾರಧಾರೆಗಳಿಂದ ಆಕೆಯನ್ನು ಸೆಳೆದುಕೊಳ್ಳಲು ಸಫಲನಾದ ಆತ ಬಾಂಗ್ಲಾದೇಶದ ಭಯೋತ್ಪಾದಕರ ಗುಂಪಿನೊಂದಿಗೆ ಆಕೆಯ ಪರಿಚಯ ಮಾಡಿಸಿದ. ಆಕೆಯೊಳಗೆ ಮತಾಂಧತೆಯನ್ನು ತುರುಕುವ ಪ್ರಯತ್ನ ಆರಂಭವಾಯ್ತು. ಬ್ರೈನ್ ವಾಶ್ ಮಾಡಿದ ಪಾಪಿಗಳು ಆಕೆಯನ್ನು ಭಯೋತ್ಪಾದಕಿಯಾಗಲು ಪ್ರೇರೇಪಿಸಿಬಿಟ್ಟರು. ಈಗ ಆಕೆ ಆ ಹುಡುಗನನ್ನು ಮದುವೆಯಾಗಲು ಮತ್ತು ಆ ಕಾರಣಕ್ಕಾಗಿ ಮತ ಪರಿವರ್ತನೆಯಾಗಲು ನಿರ್ಧರಿಸಿದಳು. 2016ರ ಸಪ್ಟೆಂಬರ್ 24ರಂದು ಆಕೆ ಕಲ್ಕತ್ತಾವನ್ನು ಬಿಟ್ಟು ಬಾಂಗ್ಲಾಕ್ಕೆ ಓಡಿಹೋದಳು. ಮತ್ತೆ ಮರಳಲೇ ಇಲ್ಲ. ಮಧ್ಯೆ ಆಕೆಯದ್ದೊಂದು ಕರೆ ಮನೆಗೆ ಬಂದಿತು ಅಷ್ಟೇ. ತಾನು ಮತ ಪರಿವರ್ತನೆಯಾಗಿ ಗೆಳೆಯನನ್ನೇ ಮದುವೆಯಾಗಿದ್ದೇನೆ ಎಂಬ ಸುದ್ದಿ ಮುಟ್ಟಿಸಿದಳು. ಪ್ರಜ್ಞಾ ಈಗ ಆಯೆಷಾ ಜನ್ನತ್ ಮೊಹೊನಾ ಆಗಿದ್ದಳು. ಅದು ಅಸಲಿ ಹೆಸರೇನೂ ಅಲ್ಲ. ಬಾಂಗ್ಲಾದಲ್ಲಿ ಆಕೆ ತನ್ನ ಭಯೋತ್ಪಾದಕ ಕೃತ್ಯಕ್ಕೆ ಬಳಸುತ್ತಿದ್ದ ಹೆಸರು. ಮತ ಪರಿವರ್ತನೆಯ ನಂತರ ಆಕೆಗೆ ಕೊಟ್ಟ ಹೆಸರು ಜನ್ನಾತ್-ಉಲ್ ತಸ್ಮಿನ್!

2

ಆಕೆಯ ಭಯೋತ್ಪಾದಕ ಮಿತ್ರರು ಆಕೆಯನ್ನು ಆಯೆಷಾ ಎಂದೇ ಕರೆಯುತ್ತಿದ್ದರು. ಆನ್ಲೈನ್ನಲ್ಲಿ ಆಕೆ ತನ್ನ ಸಂಪರ್ಕಕ್ಕೆ ಬಂದ ತರುಣ-ತರುಣಿಯರನ್ನು ಹಿಂದೂಧರ್ಮದ ವಿರುದ್ಧ ಎತ್ತಿಕಟ್ಟುವ, ಭಯೋತ್ಪಾದನೆಗೆ ಸಜ್ಜುಗೊಳಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಳು. ಅಷ್ಟೇ ಅಲ್ಲ, ಬಾಂಗ್ಲಾದೇಶದ ಮದರಸಾಗಳಲ್ಲಿ ಪುಟ್ಟ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯಾದಳು. ಅಲ್ಲಿನ ಭಯೋತ್ಪಾದಕರ ಉತ್ಪಾದನಾ ಕ್ಷೇತ್ರವಾಗಿರುವ ಮದರಸಾಗಳು ಆಕೆಯನ್ನು ಚೆನ್ನಾಗಿಯೇ ಬೆಂಬಲಿಸಿದವು. ಈ ಹೊತ್ತಿನಲ್ಲಿಯೇ ಅಲ್ಲಿನ ಜಮಾತ್-ಉಲ್ ಮುಜಾಹಿದ್ದೀನ್ ಸಂಘಟನೆಯ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದ ಆಸ್ಮಾನಿ ಖತೂನ್ಳನ್ನು ಪೊಲೀಸರು ಬಂಧಿಸಿದರು. ರಿಕ್ತವಾದ ಆ ಸ್ಥಳವನ್ನು ತುಂಬುವ ಅಪರೂಪದ ಅವಕಾಶ ಆಯೆಷಾಳಿಗೆ ಸಿಕ್ಕಿತು. ಕಳೆದ ಮಾಚರ್್ನಲ್ಲಿ ಆಕೆ ಆ ಸಂಘಟನೆಯ ಮುಖ್ಯಸ್ಥೆಯಾಗಿ ಅಧಿಕಾರವನ್ನೂ ಸ್ವೀಕರಿಸಿದಳು. ಹೊರಬರುತ್ತಿರುವ ಮಾಹಿತಿಗಳು ಅದೆಷ್ಟು ಭಯಾನಕವಾಗಿವೆ ಎಂದರೆ ಭಯೋತ್ಪಾದಕರಿಗೆ ಹಣ ಒದಗಿಸಿಕೊಡುತ್ತಿದ್ದ ಒಮನ್ನ ಸಿರಿವಂತನೊಬ್ಬನನ್ನು ಆಕೆ ಫೋನಿನಲ್ಲಿಯೇ ಮದುವೆಯಾಗಿದ್ದಳಂತೆ!

3

ಆಯೆಷಾಳ ಅಧಿಕೃತ ಜವಾಬ್ದಾರಿಯೇ ಜನರನ್ನು ಆನ್ಲೈನ್ ಪ್ಲಾಟ್ಫಾರಂಗಳಲ್ಲಿ ತಲೆಕೆಡಿಸುವುದು, ಭಯೋತ್ಪಾದನಾ ಕೃತ್ಯಕ್ಕೆ ಸಿದ್ಧಗೊಳಿಸುವುದಾಗಿತ್ತು. ಭಯೋತ್ಪಾದಕರ ತಂಡಕ್ಕೂ ಆಯೆಷಾ ಒಂದು ಹೆಮ್ಮೆಯೇ ಆಗಿದ್ದಳು ಏಕೆಂದರೆ ಮತಾಂತರಗೊಂಡ ಹೆಣ್ಣುಮಗಳೊಬ್ಬಳು ಈ ಹಂತಕ್ಕೆ ಏರಿದ ಉದಾಹರಣೆಯೇ ಇರಲಿಲ್ಲ. ಅದರಲ್ಲೂ ಐಸಿಸ್ ಬೆಂಬಲಿತ ಈ ಸಂಘಟನೆಯ ಮುಖ್ಯಸ್ಥೆಯಾಗಿ ಆಕೆ ಗುರುತಿಸಿಕೊಂಡಿದ್ದು ಅಚ್ಚರಿ ತರುವಂಥದ್ದೇ ಆಗಿತ್ತು. ಆಕೆಯ ಕಾರ್ಯಚಟುವಟಿಕೆಯ ವೇಗವನ್ನು ಗಮನಿಸಿದ ಬಾಂಗ್ಲಾದೇಶದ ಭಯೋತ್ಪಾದಕ ನಿಗ್ರಹದಳ ಆಕೆಯನ್ನು ಬಂಧಿಸಬೇಕೆಂದು ಹೊಂಚು ಹಾಕಿ ಆಕೆಯ ಚಲನ-ವಲನಗಳ ಮೇಲೆ ಕಣ್ಣಿಟ್ಟಿತು. ಇದರ ಪರಿವೆ ಇಲ್ಲದ ಆಕೆ ಢಾಕಾದಲ್ಲಿ ಬಂಧನಕ್ಕೊಳಗಾಗಿಬಿಟ್ಟಳು. ವಿಚಾರಣೆಗೆ ಆಕೆಯನ್ನು ಕೂರಿಸಿಕೊಳ್ಳುತ್ತಿದ್ದಂತೆ ಪಶ್ಚಿಮ ಬಂಗಾಳದ ಹಳ್ಳಿ-ಹಳ್ಳಿಗಳೂ ಈ ರೀತಿಯ ಬ್ರೈನ್ವಾಶ್ಗೆ ಒಳಗಾಗುತ್ತಿರುವುದನ್ನು ವಿಸ್ತಾರವಾಗಿ ಬಿಡಿಸಿಟ್ಟಳು. ಭಾರತದ ಗಡಿಯೊಳಕ್ಕೆ ಮತ್ತು ಬಾಂಗ್ಲಾದೊಳಕ್ಕೂ ಆನ್ಲೈನಿನ ಮೂಲಕ ಆಕೆ ಬಹುತೇಕರ ತಲೆಕೆಡಿಸಿದ್ದನ್ನು ಒಪ್ಪಿಕೊಂಡಳು. 2016ರಲ್ಲಿ ಆಕೆ ಮನೆಬಿಟ್ಟು ಓಡಿ ಹೋದ ನಂತರ ಗಡಿಯನ್ನು ದಾಟಿ ಲೀಲಾಜಾಲವಾಗಿ ಒಳಬಂದದ್ದಲ್ಲದೇ ಅಷ್ಟೇ ಸಲೀಸಾಗಿ ಬಾಂಗ್ಲಾಕ್ಕೂ ಮರಳುತ್ತಿದ್ದಳು ಆಕೆ. ಯಾವ ಭಯೋತ್ಪಾದಕ ಕೃತ್ಯದಲ್ಲೂ ಆಕೆ ನೇರವಾಗಿ ಭಾಗಿಯಾಗಿರುವುದು ಕಂಡು ಬರುವುದಿಲ್ಲ ಏಕೆಂದರೆ ಐಸಿಸ್ನ ನಿಯಮದಂತೆ ಹೆಣ್ಣುಮಕ್ಕಳನ್ನು ಮುಖ್ಯ ಕೃತ್ಯಗಳಿಗೆ ಬಳಸಿಕೊಳ್ಳಲಾಗದು. ಬದಲಿಗೆ ಅವರು ಜನರ ಬ್ರೈನ್ವಾಶ್ಗಷ್ಟೇ ಬಳಕೆಯಾಗುತ್ತಾರೆ. ಬಂಗಾಳದ ಬಸಿರ್ಹಾಟ್ನಲ್ಲಿ ಐಸಿಸ್ನ ಏಜೆಂಟ್ ಮತ್ತು ಲಷ್ಕರ್-ಎ-ತೈಬಾದ ಸದಸ್ಯೆಯಾಗಿದ್ದ ತಾನಿಯಾ ಪವರ್ೀನ್ ಸಿಕ್ಕುಬಿದ್ದ ಮೇಲೆ ಈ ಎಲ್ಲಾ ಪ್ರಕರಣ ಹೊರಗೆ ಬಂತು. ಸ್ಥಳೀಯ ಪೊಲೀಸರು ಒಟ್ಟಾರೆ ಸಂಗತಿಯನ್ನು ಮುಚ್ಚಿ ಹಾಕಲೆತ್ನಿಸಿದರೂ ಎನ್ಐಎ ಬಿಡಲಿಲ್ಲ. ಕೊನೆಗೂ ಆಕೆ ಮಾಡಿದ ಕೃತ್ಯವೆಲ್ಲವೂ ಸಮಾಜದ ಮುಂದೆ ಬಟಾ ಬಯಲಾಯ್ತು!

4

ಈ ಎಲ್ಲ ಸಮಸ್ಯೆಗೂ ಕಾರಣವೇನು ಗೊತ್ತೇ? ಆಯೆಷಾಳ ಪ್ರೇಮ ಪ್ರಕರಣ ಮಾತ್ರ. ಮುಸಲ್ಮಾನನೊಬ್ಬನ ಪ್ರೇಮಪಾಶಕ್ಕೆ ಬಲಿಯಾಗಿ ಆಕೆ ತನ್ನ ಬದುಕನ್ನೇ ಕಳೆದುಕೊಂಡುಬಿಟ್ಟಳು. ಅಷ್ಟೇ ಅಲ್ಲ, ತನ್ನದ್ದೇ ಧರ್ಮದ ವಿರುದ್ಧ, ರಾಷ್ಟ್ರದ ವಿರುದ್ಧ ಕದನಕ್ಕೆ ನಿಂತಳು. ಲವ್ ಜಿಹಾದಿನಿಂದ ಏನಾಗಿಬಿಡುತ್ತದೆ ಎಂದು ಅನೇಕ ಬುದ್ಧಿಜೀವಿಗಳು ಪ್ರಶ್ನೆ ಕೇಳುತ್ತಾರೆ. ಈ ರೀತಿಯ ಪ್ರಕರಣಗಳಾದಾಗ ಕಣ್ಮುಚ್ಚಿಕೊಂಡು ಕುಳಿತುಬಿಡುತ್ತಾರೆ. ಭಾರತೀಯರ ವಿರುದ್ಧ ಭಾರತೀಯರನ್ನೇ ಎತ್ತಿಕಟ್ಟುವ ಈ ಪ್ರಕ್ರಿಯೆಯನ್ನು ರಾಕ್ಷಸೀವೃತ್ತಿ ಎಂದೇ ಕರೆಯಬಹುದು. ದುರದೃಷ್ಟಕರವೆಂದರೆ ಇಂತಹುದಕ್ಕೆಲ್ಲ ಕಡಿವಾಣ ಹಾಕಬಲ್ಲ ಸಾಮಥ್ರ್ಯವಿರುವ ಮುಖ್ಯಮಂತ್ರಿಯೇ ಬಂಗಾಳದಲ್ಲಿಲ್ಲ. ಆಕೆ ಸದಾ ಕಾಲ ತನ್ನದ್ದೇ ಗುಂಗಿನಲ್ಲಿ ಮಗ್ನಳಾಗಿರುತ್ತಾಳೆ. ಈ ಕಾರಣಕ್ಕಾಗಿಯೇ ಪಶ್ಚಿಮ ಬಂಗಾಳ ಪುಟ್ಟದೊಂದು ಬಾಂಗ್ಲಾದೇಶವಾಗಿಯೇ ನಿಮರ್ಾಣವಾಗುತ್ತಿದೆ. ಗಡಿಯಲ್ಲಿ ಎರಡೂ ರಾಷ್ಟ್ರಗಳನ್ನು ವಿಭಜಿಸುವ ರೇಖೆ ಪಾಕಿಸ್ತಾನದೊಂದಿಗಿನ ಎಲ್ಒಸಿಯಷ್ಟು ಬಲವಾಗಿಲ್ಲದಿರುವುದರಿಂದ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಬರು-ಹೋಗುವ ಪ್ರಕ್ರಿಯೆ ಸಹಜವಾಗಿದೆ. ಇವೆಲ್ಲವನ್ನೂ ಸರಿ ಮಾಡಿಕೊಳ್ಳದಿದ್ದರೆ ಪಶ್ಚಿಮ ಬಂಗಾಳವನ್ನು ಕಳೆದಕೊಳ್ಳಬೇಕಾದೀತು. ಎಲ್ಲಕ್ಕಿಂತ ಹೆಚ್ಚು ಮುತ್ತಿನಂತೆ ಕಾಪಾಡಿದ್ದ ಹೆಣ್ಣುಮಕ್ಕಳು ಭಯೋತ್ಪಾದಕರಾಗಿ ರಾಕ್ಷಸರಂತಾಡುವುದನ್ನು ಕಣ್ಣಾರೆ ನೋಡಬೇಕಾದೀತು!!

Comments are closed.