ವಿಭಾಗಗಳು

ಸುದ್ದಿಪತ್ರ


 

ಪ್ರಿಯ ಸಿದ್ದರಾಮಯ್ಯನವರೇ, ಆಕ್ರೋಶದ ನಮಸ್ಕಾರಗಳು.

ನಿಮ್ಮ ಮನೆಯಲ್ಲಿ ನೀವು ಅನುಭವಿಸಿದ ನೋವು ಕನರ್ಾಟಕದ ತಾಯಂದಿರೆಲ್ಲ ಅನುಭವಿಸಲೆಂದು ನಿಶ್ಚಯಿಸಿ ಕುಳಿತುಬಿಟ್ಟಿರುವಿರೇನು? ಇಲ್ಲವಾದಲ್ಲಿ ತಿಂಗಳ ಹಿಂದೆ ಪರೇಶ್ ಮೇಸ್ತನ ತಾಯಿಯ ರೋದನೆಯ ಹಿಂದು ಹಿಂದೆಯೇ ದೀಪಕ್ನ ಅಮ್ಮನನ್ನು ಅಂಧಕಾರದತ್ತ ದೂಡಿಬಿಟ್ಟಿರಲ್ಲ!

ಪ್ರಿಯ ಸಿದ್ದರಾಮಯ್ಯನವರೇ,

ಆಕ್ರೋಶದ ನಮಸ್ಕಾರಗಳು.

ನಿಮ್ಮ ಆಳ್ವಿಕೆಯ ಐದು ವರ್ಷ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಕನ್ನಡಿಗರ ಬದುಕನ್ನು ಅಸಹ್ಯಗೊಳಿಸಿಬಿಟ್ಟಿರಿ. ಮಧ್ಯರಾತ್ರಿ ಹೆಣ್ಣುಮಗಳೊಬ್ಬಳು ಏಕಾಂಗಿಯಾಗಿ ನಡೆದಾಡುವಂತಾದರೆ ಅಂದು ಸ್ವಾತಂತ್ರ್ಯ ಬಂತೆಂದು ಭಾವಿಸುವೆ ಎಂದಿದ್ದರು ನಿಮ್ಮ ಆದರ್ಶವೆಂದು ನೀವೇ ಹೇಳುವ ಮಹಾತ್ಮಾ ಗಾಂಧೀಜಿ. ನಿಮ್ಮ ಸಾಮ್ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಲ್ಲಿ ಹೆಣ್ಣುಮಗು ನಡೆದಾಡುವುದು ಬಿಡಿ; ಹಾಡುಹಗಲು ತರುಣರು ತಿರುಗಾಡುವುದೂ ಕಷ್ಟವಾಗಿಬಿಟ್ಟಿದೆ. ನೀವು ಆಳುತ್ತಿರುವ ಈ ನಾಡಿನಲ್ಲಿ ಗೋವಿನಂತಹ ಪಶುಗಳಿಗೆ ಬಿಡಿ ಸಿಂಹದಂತಹ ತರುಣರಿಗೂ ಬದುಕಿನ ಭೀತಿ ಶುರುವಾಗಿದೆ. ರುದ್ರೇಶ್ ಬೆಂಗಳೂರಿನ ನಟ್ಟನಡುವೆ ಮಾರಕಾಸ್ತ್ರಗಳಿಗೆ ಬಲಿಯಾದ, ರಾಜು ಮೈಸೂರಿನಲ್ಲಿ ಹೆಣವಾದ. ಕುಟ್ಟಪ್ಪ ಕಲ್ಲೇಟು ತಿಂದು ಅನಾಥ ಶವವಾದ. ದೀಪಕ್ ಎಂದಿಗೂ ಗಲಾಟೆಗೆ ಹೋದವನೇ ಅಲ್ಲ; ಅಂಥವನನ್ನೂ ಎಂಥವರೂ ಬೆಚ್ಚಿ ಬೀಳುವಂತೆ ಬರ್ಬರವಾಗಿ ಕೊಲ್ಲಲಾಯ್ತು. ಅವನ ಮೃತ ದೇಹವನ್ನು ನೆನಪಿಸಿಕೊಂಡರೆ ಈಗಲೂ ಒಮ್ಮೆ ಮೈ ಬೆಚ್ಚಗಾಗುತ್ತದೆ. ಅತ್ತ ಇನ್ನೂ ಬದುಕನ್ನೇ ಕಾಣದಿದ್ದ ಪರೇಶ್ ಮೇಸ್ತ ಹೊನ್ನಾವರದ ಕೆರೆಯಲ್ಲಿ ಹೆಣವಾಗಿ ತೇಲಿದ. ನೀವು ಅವನ ಸಾವನ್ನು ಸಹಜವೆಂದು ಕರೆದು ಬಲಿದಾನವನ್ನೇ ಅವಮಾನಿಸಿಬಿಟ್ಟಿರಿ! ಕುಡಿದ ಅಮಲಿನಲ್ಲಿ ತೂರಾಡುತ್ತ ನೀರಿಗೆ ಬಿದ್ದಿದ್ದರೆ, ಹಣದ ಅಮಲಿನಲ್ಲಿ ವೇಗವಾಗಿ ಬೈಕು ಓಡಿಸಿ ರಸ್ತೆಗೆ ರಕ್ತ ಚೆಲ್ಲಿ ಶವವಾಗಿದ್ದರೆ ಒಪ್ಪಿಕೊಳ್ಳಬಹುದಿತ್ತು. ಇವರೆಲ್ಲ ತಾವು ಕೇಸರಿ ಶಾಲು ಧರಿಸಿದ್ದವರು ಎಂಬ ಕಾರಣಕ್ಕೇ ಹೆಣವಾದವರು. ಇವರಿಗೆ ತಮ್ಮ ಪರಂಪರೆಯ ಕುರಿತಂತೆ, ರಾಷ್ಟ್ರದ ಕುರಿತಂತೆ ಗೌರವವಿತ್ತು ಎಂಬ ಕಾರಣಕ್ಕೆ ಇವರನ್ನು ಕೊಲ್ಲಲಾಗಿತ್ತು. ಹೇಳಿ. ಇಂತಹ ವೀರ ಪುತ್ರರ ಸಾವನ್ನು ನೀವು ತುಚ್ಛವಾಗಿ ಕಂಡು ವ್ಯಂಗ್ಯವಾಗಿ ಹೀಯಾಳಿಸಿದ್ದು ಸರಿಯೇ? ನೀವು ಹಾಗೆ ಹೇಳುವಾಗ ಆ ಮಕ್ಕಳ ತಾಯಂದಿರ ಹೃದಯದ ವೇದನೆ ಹೇಗಿರಬಹುದೆಂಬ ಅಂದಾಜು ನಿಮಗಿದೆಯೇನು?

1

ಇಲ್ಲದೇನು? ಮಕ್ಕಳನ್ನು ಕಳಕೊಳ್ಳುವ ದುಃಖ ನಿಮಗೂ ಗೊತ್ತು. ಆದರೆ ಕುಚರ್ಿಗಾಗಿ ಓಡುತ್ತ-ಓಡುತ್ತ ರಾಜಕೀಯ ದಾಳಗಳನ್ನೆಸೆಯುವ ಭರದಲ್ಲಿ ನೀವು ಆ ದುಃಖವನ್ನು ಸಮಾಧಿ ಮಾಡಿ ಮುನ್ನುಗ್ಗಿಬಿಟ್ಟಿದ್ದೀರಿ. ನಿಮ್ಮ ಸಾಹಸ ಮೆಚ್ಚಬೇಕು. ಆದರೆ ಇಂದು ಸಂಜೆ ಮನೆಗೆ ಹೋದೊಡನೆ ಒಮ್ಮೆ ನಿಮ್ಮ ಪತ್ನಿಯ ಕಂಗಳಲ್ಲಿ ಕಣ್ಣಿಟ್ಟು ನೋಡಿ. ಹಿರಿ ಮಗನನ್ನು ಕಳಕೊಂಡ ದುಃಖದ ಜ್ವಾಲೆ ಆರಿದೆಯಾ ಅಂತ ಗಮನಿಸಿ. ಮಗನನ್ನು ಕಳಕೊಂಡು ಇಷ್ಟು ದಿನವಾದರೂ ಆಕೆಯೊಳಗಿನ ಮಗನ ನೆನಪು ಇಂಗಿದೆಯಾ ಅಂತ ಹೃದಯದೊಳಕ್ಕೆ ಇಣುಕಿ ನೋಡಿ. ಅದು ಹೇಗೆ ಇಂಗಿರಲು ಸಾಧ್ಯ? ತಾಯಿಯ ದುಃಖ ತಾಯಿಗೆ ಮಾತ್ರ ಗೊತ್ತು. ಬಹುಶಃ ಆಕೆಗೆ ಮಾತ್ರ ಮತ್ತೊಬ್ಬ ತಾಯಿಯ ದುಃಖವೂ ಗೊತ್ತಾಗಬಹುದೇನೋ? ಅದರಲ್ಲೂ ನಡುರಸ್ತೆಯಲ್ಲಿ ವಿನಾಕಾರಣ ಮಚ್ಚಿನೇಟು ತಿಂದು ಕತ್ತರಿಸಿದ ಕೈ ಮತ್ತು ತಲೆಯಿಂದ ಹೊರಬಿದ್ದ ಮೆದುಳಿನವನಾಗಿ ಮನೆಗೆ ಬಂದ ಮಗನ ಶವವನ್ನು ಕಂಡ ತಾಯಿಯ ನೋವು..! ಪ್ರಿಯ ಸಿದ್ದರಾಮಯ್ಯನವರೇ ಯಾವ ತಾಯಿಯೂ ಅದನ್ನು ಭರಿಸಲಾರಳು.

ನಿಮ್ಮ ಮನೆಯಲ್ಲಿ ನೀವು ಅನುಭವಿಸಿದ ನೋವು ಕನರ್ಾಟಕದ ತಾಯಂದಿರೆಲ್ಲ ಅನುಭವಿಸಲೆಂದು ನಿಶ್ಚಯಿಸಿ ಕುಳಿತುಬಿಟ್ಟಿರುವಿರೇನು? ಇಲ್ಲವಾದಲ್ಲಿ ತಿಂಗಳ ಹಿಂದೆ ಪರೇಶ್ ಮೇಸ್ತನ ತಾಯಿಯ ರೋದನೆಯ ಹಿಂದು ಹಿಂದೆಯೇ ದೀಪಕ್ನ ಅಮ್ಮನನ್ನು ಅಂಧಕಾರದತ್ತ ದೂಡಿಬಿಟ್ಟಿರಲ್ಲ!

ನೆನಪಿಡಿ. ಎಲ್ಲ ಪಾಪದ ಕೊಡ ನಿಮ್ಮ ಹೆಗಲ ಮೇಲೆಯೇ. ನೀವು ರಕ್ಷಿಸುವಿರಿ ಎಂಬ ಭರವಸೆಯ ಮೇಲೆಯೇ ಎಲ್ಲಾ ಜಿಹಾದಿಗಳೂ ಕತ್ತಿ ಹಿಡಿದು ಮುನ್ನುಗ್ಗಿರೋದು. ಪೊಲೀಸರು ಸಾಹಸಗೈದು ಕೊಲೆಗಡುಕರನ್ನು ಬಂಧಿಸಿದರೂ ನೀವು ಅವರನ್ನು ಬಿಡಿಸಿಬಿಡುವಿರೆಂಬ ಅದಮ್ಯ ವಿಶ್ವಾಸವಿದೆ ಅವರಿಗೆ. ಅವರ ಮೇಲಿನ ಪ್ರಕರಣಗಳನ್ನು ಹಿಂದೆಗೆದುಕೊಂಡು ಹೆತ್ತಪ್ಪನಂತೆ ನೀವು ಈ ಹಿಂದೆ ರಕ್ಷಿಸಿದ ಉದಾಹರಣೆ ಹಸಿ ಹಸಿಯಾಗಿದೆ. ಅದಕ್ಕೇ ಈ ಎಲ್ಲಾ ಸಾವುಗಳ ಪಾಪವೂ ನಿಮ್ಮ ಹೆಗಲಿಗೆ ಮಾತ್ರ. ಪ್ರತಿಯೊಬ್ಬನ ಚೆಲ್ಲಿದ ರಕ್ತದ ಲೆಕ್ಕ ನೀವೇ ಚುಕ್ತಾ ಮಾಡಬೇಕು.

2

ಇಂದು ನಾಡಿನ ಪ್ರತಿಯೊಬ್ಬ ತಾಯಿಯೂ ನಿಮಗೆ ಹಿಡಿ ಶಾಪ ಹಾಕುತ್ತಿದ್ದಾರೆ. ತಾನು ಹೆತ್ತ ಮಗ ದೇವಸ್ಥಾನದೆದುರು ಬಂಟಿಂಗ್ ಕಟ್ಟಲು ಹೋದರೆ ಅವಳಿಗೆ ಹೆದರಿಕೆ; ತನ್ನ ಮಗ ಊರ ಭಜನೆಗೆ ಹೋದರೆ ಅವಳಿಗೆ ಭಯ. ತನಗೆ ಅರಿವಾಗದ ಫೇಸ್ಬುಕ್ಕಿನಲ್ಲಿ ಆತ ಹಂಚಿಕೊಂಡ ಒಂದು ಚಿತ್ರಕ್ಕಾಗಿ ಆತ ಕೊಲೆಯೇ ಆಗಿ ಬಿಡಬಲ್ಲ ಎಂಬುದನ್ನು ಆಕೆ ಜೀಣರ್ಿಸಿಕೊಳ್ಳಬಹುದಾದರೂ ಹೇಗೆ? ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗೆ ತನ್ನ ಗಂಡ ತಪ್ಪದೇ ಹೋಗುತ್ತಾರೆನ್ನುವ ಕಾರಣಕ್ಕೆ ಬೆಂಗಳೂರಿನ ನಡುರಸ್ತೆಯಲ್ಲಿ ಕತ್ತಿಯೇಟಿಗೆ ಆಹುತಿಯಾಗುತ್ತಾರೆನ್ನುವುದನ್ನು ನಂಬುವುದಾದರೂ ಸಾಧ್ಯವಾ? ದೀಪಕ್ನ ಕೊಲೆಯಾದಾಗಿನಿಂದ ನನ್ನಮ್ಮ ಅವೇಳೆಯಲ್ಲೂ ಕರೆಮಾಡಿ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾಳೆ. ‘ಸುಮ್ಮನೆ’ ಅಂತ ಅವಳು ಮೇಲ್ನೋಟಕ್ಕೆ ಹೇಳಿದರೂ ಅವಳೊಳಗೆ ನರ್ತನ ಮಾಡುತ್ತಿರುವ ಭಯದ ಭೂತ ನನ್ನ ಅನುಭವಕ್ಕೆ ಖಂಡಿತ ಬರುತ್ತದೆ. ಎಲ್ಲ ತಾಯಂದಿರ ಹೃದಯದ ಬೇಗುದಿ ಆಕ್ರೋಶದ ಕಣ್ಣೀರಾಗಿ ಹೊಮ್ಮುತ್ತಿದೆ. ಅದನ್ನೂ ಕ್ರೋಢೀಕರಿಸಿ ಪ್ರಸ್ತುತ ಪಡಿಸಿದರೆ ನಿಮ್ಮ ಕಣ್ಣೆದುರು ಹಿಮಾಲಯವೇ ನಿಮರ್ಾಣವಾಗಬಹುದು. ಬೆಂದ ಹೃದಯದ ತಾಯಂದಿರು ನಿಮಗೇನಾದರೂ ಪತ್ರ ಬರೆಯಲಾರಂಭಿಸಿದರೆ ನಿಮಗೆ ಮಗನ ಕಳಕೊಂಡ ಸಾವಿನ ಮನೆಯ ದುಃಖವೇನೆಂಬುದು ಅರ್ಥವಾಗಬಹುದು. ಬಹುಶಃ ಆಗಲಾದರೂ ನಿಮ್ಮ ಹೃದಯ ಕರಗಿ ಒಂದಷ್ಟು ನೋವಿನ ಭಾವಾಶ್ರುಗಳು ಸುರಿಯಬಹುದೇನೋ?

ಸರಿ ಹೋಯ್ತು. ನೀವು ಮುಖ್ಯ ಮಂತ್ರಿಯಾದಾಗಿನಿಂದಲೂ ಕನರ್ಾಟಕದಲ್ಲಿ ಹೃದಯ ಎನ್ನುವ ಪದ ಬೆಲೆ ಕಳೆದುಕೊಂಡಿದೆ. ಜೀವಪರ ಎಂದು ತಮ್ಮ ತಾವು ಘೋಷಿಸಿಕೊಂಡ ನಿಮ್ಮ ಮಾರ್ಗದರ್ಶಕ ಮಂಡಳಿಯ ಕೆಲವರಿಗೆ ಉತ್ತರ ಪ್ರದೇಶದಲ್ಲಿ ಸತ್ತವರಿಗಾಗಿ ರಾಜಕೀಯ ಮಾಡುವುದು ಗೊತ್ತಿದೆ; ಕರಾವಳಿಯಲ್ಲಿ ಹೆಣವಾದ ಅಮಾಯಕರು ಕಾಣುವುದಿಲ್ಲ. ಸಜ್ಜನ ಮುಸಲ್ಮಾನರೂ ಇದ್ದಾರೆ ಎಂದು ಸದಾ ನಮ್ಮವರ ನಡುವೆಯೂ ಬಡಿದಾಡುವ ನಮಗೆ ಈ ಹೊತ್ತಲ್ಲಿ ಅವರನ್ನೂ ಹುಡುಕಾಡುವಂತಾಗಿಬಿಟ್ಟಿದೆ. ನಾಟ್ ಇನ್ ಮೈ ನೇಮ್ ಎಂದು ಯಾವುದೋ ಹತ್ಯೆಗಳಿಗೆ ಬೀದಿಗಿಳಿಯುವ ಈ ಗುಂಪುಗಳು ಮುಸಲ್ಮಾನರೇ ಹತ್ಯೆಯ ಪಾಲುದಾರರಾಗಿರುವಾಗ ಮುಂದೆ ಬಂದು ಖಂಡಿಸುವುದೇ ಇಲ್ಲ. ಅವರ ವಿರುದ್ಧ ಬಲವಾದ ಅಭಿಪ್ರಾಯ ರೂಪಿಸುವುದಿಲ್ಲ. ಎಲ್ಲಕ್ಕೂ ನಿಮ್ಮದ್ದೇ ನಾಯಕತ್ವ. ನೀವು ಅವರೆಲ್ಲರ ಬೆನ್ನಿಗೆ ಅದೆಷ್ಟು ಬಲವಾಗಿ ನಿಂತಿರುವಿರೆಂದರೆ ಅವರೆಲ್ಲರೂ ಮನೆಯೊಳಗೆ ಅಡಗಿಕೊಂಡೇ ತಮ್ಮ ಇಚ್ಛೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ಬಿಡಿ. ನಿಮ್ಮ ಬಳಿ ಹೆಚ್ಚು ಮಾತನಾಡುವುದು ವ್ಯರ್ಥ. ಸಮಾಜವಾದದಲ್ಲಿ ಹೆಚ್ಚು ಬೆಲೆ ಇರಬೇಕಾದ್ದು ಹಣಕ್ಕಲ್ಲ, ಅಧಿಕಾರಕ್ಕೂ ಅಲ್ಲ. ಸರ್ವರ ಮೇಲೂ ಸಮನಾದ ಪ್ರೀತಿಗೆ. ಹೀಗೆ ಎಲ್ಲರನ್ನೂ ಸಮನಾಗಿ ಪ್ರೀತಿಸುವ ಹೃದಯವನ್ನೇ ಭಗವಂತ ನಿಮಗೆ ಕೊಟ್ಟಿಲ್ಲವೆಂದ ಮೇಲೆ ಮಾತನಾಡುವುದಿನ್ನೇನಿದೆ. ಆದರೆ ಒಂದಂತೂ ಸತ್ಯ. ನೊಂದ ಹೆಣ್ಣುಮಕ್ಕಳ ಶಾಪ ನಿಮ್ಮನ್ನು ತಟ್ಟಲಿದೆ. ಮಕ್ಕಳನ್ನು ಕಳಕೊಂಡವರ ದುಃಖ ಸುಡಲಿದೆ. ಧಗಧಗಿಸಿ ಉರಿಸಲಿದೆ. ಇದು ನಿಮಗೆ ಮೂಢನಂಬಿಕೆ ಎನಿಸಬಹುದು. ಆದರೆ ನಾನಿದನ್ನು ನಂಬುತ್ತೇನೆ. ಇಷ್ಟಾದರೂ ನಮ್ಮೊಳಗಿನ ಹಿಂದುತ್ವದ ರಕ್ತ ನಿಮಗೆ ಒಳಿತೇ ಆಗಲೆಂದು ಹಾರೈಸುವಂತೆ ನನ್ನನ್ನು ಪ್ರೇರೇಪಿಸುತ್ತಿದೆ. ತೀರಾ ಅಸಾಧ್ಯವಾದ ಪರಿಸ್ಥಿತಿಯಲ್ಲೂ ಅಮಾಯಕನೊಬ್ಬನನ್ನು ನಾಲ್ಕಾರು ಜನ ಸೇರಿ ಕೊಲ್ಲುವಂತಹ ಜಿಹಾದಿ ಶಿಕ್ಷಣ ನನಗೆ ಯಾರೂ ಕೊಟ್ಟಿಲ್ಲ. ಹೀಗಾಗಿ ಹೆತ್ತವರ ಶಾಪದಿಂದ ಪಾರಾಗುವ ಶಕ್ತಿಯನ್ನು ಭಗವಂತ ನಿಮಗೆ ಕರುಣಿಸಲೆಂದು ಪ್ರಾಥರ್ಿಸುತ್ತ ವಿರಮಿಸುತ್ತೇನೆ.

ಮತ್ತೊಮ್ಮೆ ಆಕ್ರೋಶದ ನಮಸ್ಕಾರಗಳು

ವಂದೇ

ಚಕ್ರವತರ್ಿ, ಸೂಲಿಬೆಲೆ

Comments are closed.