ವಿಭಾಗಗಳು

ಸುದ್ದಿಪತ್ರ


 

ಬದುಕಲು ಕಲಿಸಿದ ಮೇಷ್ಟರ ಮಹಾಪ್ರಸ್ಥಾನ!

ಸ್ವಾಮಿ ಜಗದಾತ್ಮಾನಂದರು ವೈರಾಗ್ಯದ ಜ್ವಾಲೆಯನ್ನು ಎದೆಯಲ್ಲಿ ಹೊತ್ತು ರಾಮಕೃಷ್ಣಾಶ್ರಮಕ್ಕೆ ಬಂದಾಗ ಇಲ್ಲಿಗೆ ಸೇರಿಕೊಳ್ಳಬಹುದಾಗಿದ್ದ ವಯಸ್ಸು ದಾಟಿ ಹೋಗಿತ್ತಂತೆ. ಆಗ ದೃಷ್ಟಾರರಂತಿದ್ದ ಸ್ವಾಮಿ ಯತೀಶ್ವರಾನಂದಜೀ ಮೂಲ ಮಠಕ್ಕೆ ವಿಶೇಷ ಒಕ್ಕಣಿಕೆಯನ್ನು ಹಾಕಿ ಈತನಿಂದ ಮಾನವ ಜಗತ್ತಿಗೆ ಒಳಿತಾಗಲಿದೆ ಎಂಬ ಸಂದೇಶ ಕೊಟ್ಟಿದ್ದರಂತೆ. ಅದರಿಂದಾಗಿಯೇ ಸನ್ಯಾಸತ್ವದ ಚೌಕಟ್ಟಿಗೆ ಬಂದವರು ಅವರು.

ರಾಮಕೃಷ್ಣಾಶ್ರಮ ಅಹಂಕಾರವನ್ನು ನಾಶಮಾಡಿಬಿಡಬಲ್ಲ ಒಂದು ಅದ್ಭುತ ಗರಡಿಮನೆ. ಸನ್ಯಾಸತ್ವ ಸ್ವೀಕಾರ ಮಾಡಬೇಕೆನ್ನುವ ಬಯಕೆಯಿಂದ ಬಂದವನಿಗೆ ತಕ್ಷಣಕ್ಕೆ ಸನ್ಯಾಸ ಸಿಕ್ಕಿಬಿಡುವುದೆನ್ನುವ ಭರವಸೆಯೇ ಇಲ್ಲ. ವಿವೇಕಾನಂದರ ಕಲ್ಪನೆಯ ಸನ್ಯಾಸಿಯಾಗುವ ಯೋಗ್ಯತೆಯ ಪರೀಕ್ಷೆ ನಡೆದ ಮೇಲೆಯೇ ಎಲ್ಲ. ಸನ್ಯಾಸತ್ವ ಸ್ವೀಕಾರ ಮಾಡುವವನಿಗೂ ಲೌಕಿಕವಾದ ಪದವಿ ಆಗಿರಲೇಬೇಕು. ಅದು ವಿವೇಕಾನಂದರ ಕೆಲಸಗಳನ್ನು ಮಾಡಲಿಕ್ಕೆ ಅವನಿಗಿರಬೇಕಾಗಿರುವ ಪ್ರಾಥಮಿಕ ಅರ್ಹತೆ. ಇನ್ನು ಆಧ್ಯಾತ್ಮಿಕವಾದ ಮುಮುಕ್ಷುತ್ವ ಎಷ್ಟಿದೆ ಎಂಬುದನ್ನು ಕಣ್ಣೋಟದಲ್ಲೇ ಹಿರಿಯ ಸಾಧುಗಳು ಅಳೆದು ಒಳ ಸೇರಿಸಿಕೊಳ್ಳುತ್ತಾರೆ. ಇಷ್ಟಾದ ಮಾತ್ರಕ್ಕೆ ಸನ್ಯಾಸ ದೊರೆತುಬಿಟ್ಟಿತೆಂದೇನೂ ಅಲ್ಲ. ಮುಂದೆ ಏಳು ವರ್ಷಗಳ ಕಾಲ ಜಪ, ತಪ, ಧ್ಯಾನಗಳಲ್ಲಿ ನಿರತನಾಗಿದ್ದು ಆಶ್ರಮದ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಾಜದ ಕರೆ ಬಂದಾಗ ಧಾವಿಸಿ ಸೇವೆಗೈದು ಸೈ ಎನಿಸಿಕೊಂಡ ನಂತರವೇ ಎರಡು ವರ್ಷಗಳ ವಿಶೇಷ ತರಬೇತಿಯನ್ನು ಕೊಟ್ಟು ಕಾವಿ ಬಟ್ಟೆಯನ್ನು ಕೊಡಲಾಗುತ್ತದೆ. ಈ ಎಂಟೊಂಭತ್ತು ವರ್ಷಗಳಲ್ಲಿ ಸನ್ಯಾಸಿಯಾಗಬೇಕೆಂಬ ಬಯಕೆಯಿಂದ ಬರುವವನ ಅಂತರಂಗವನ್ನೇ ಕಲಕಿಬಿಡುವ ಅನೇಕ ಘಟನೆಗಳಾಗುತ್ತವೆ. ಶ್ರದ್ಧೆಯನ್ನು ಬಲವಾಗಿ ತುಂಬಿ ಗಟ್ಟಿಗೊಳಿಸುವ ಪ್ರಕ್ರಿಯೆಯೂ ಇದೇ ಅವಧಿಯಲ್ಲಿ ನಡೆಯೋದು. ಹೀಗಾಗಿಯೇ ರಾಮಕೃಷ್ಣ ಮಠಕ್ಕೆ ಸೇರಿದ ಸನ್ಯಾಸಿಗಳ ಕುರಿತಂತೆ ಸಮಾಜದಲ್ಲಿ ಅಪಾರವಾದ ವಿಶ್ವಾಸ ಮತ್ತು ಗೌರವ ತುಂಬಿರುವುದು. ಇಷ್ಟೆಲ್ಲಾ ಈಗೇಕೆ ಹೇಳಬೇಕಾಯಿತೆಂದರೆ ಮೊನ್ನೆ ತಾನೇ ಜಗತ್ತಿನ ಜನರನ್ನು ತನ್ನ ಮಾತು ಮತ್ತು ಬರಹಗಳ ಮೂಲಕ ಶ್ರೇಷ್ಠ ಬದುಕಿಗೆ ಪ್ರೇರೇಪಿಸುತ್ತಿದ್ದ ರಾಮಕೃಷ್ಣ ಮಠದ ಶ್ರೇಷ್ಠ ಸಾಧು ಸ್ವಾಮಿ ಜಗದಾತ್ಮಾನಂದಜೀ ದೇಹತ್ಯಾಗ ಮಾಡಿದರು. ಹೀಗೆ ಅವರು ತೀರಿಕೊಳ್ಳುವಾಗ ಅವರಿಗೆ ಭತರ್ಿ ತೊಂಭತ್ತಾಗಿತ್ತು.

5

ಸ್ವಾಮಿ ಜಗದಾತ್ಮಾನಂದರು ವೈರಾಗ್ಯದ ಜ್ವಾಲೆಯನ್ನು ಎದೆಯಲ್ಲಿ ಹೊತ್ತು ರಾಮಕೃಷ್ಣಾಶ್ರಮಕ್ಕೆ ಬಂದಾಗ ಇಲ್ಲಿಗೆ ಸೇರಿಕೊಳ್ಳಬಹುದಾಗಿದ್ದ ವಯಸ್ಸು ದಾಟಿ ಹೋಗಿತ್ತಂತೆ. ಆಗ ದೃಷ್ಟಾರರಂತಿದ್ದ ಸ್ವಾಮಿ ಯತೀಶ್ವರಾನಂದಜೀ ಮೂಲ ಮಠಕ್ಕೆ ವಿಶೇಷ ಒಕ್ಕಣಿಕೆಯನ್ನು ಹಾಕಿ ಈತನಿಂದ ಮಾನವ ಜಗತ್ತಿಗೆ ಒಳಿತಾಗಲಿದೆ ಎಂಬ ಸಂದೇಶ ಕೊಟ್ಟಿದ್ದರಂತೆ. ಅದರಿಂದಾಗಿಯೇ ಸನ್ಯಾಸತ್ವದ ಚೌಕಟ್ಟಿಗೆ ಬಂದವರು ಅವರು. ಸ್ವಾಮೀಜಿಯವರದ್ದು ಏಕಸಂಧಿಗ್ರಾಹಿತನವಂತೆ. ಅಂದರೆ ಒಮ್ಮೆ ನೋಡಿದ್ದು, ಒಮ್ಮೆ ಕೇಳಿದ್ದು ನೆನಪಿನಲ್ಲಿ ಶಾಶ್ವತ. ಜೊತೆಗೆ ಚುರುಕು ಗ್ರಹಣಮತಿ. ಉಪನಿಷತ್ತು, ಗೀತೆ, ದಿವ್ಯತ್ರಯರ ಬದುಕು ಎಲ್ಲವೂ ಅವರಿಗೆ ಕರತಲಾಮಲಕವೇ. ಮುಂದೆ ತಮ್ಮ ಮಾತುಗಾರಿಕೆಯಿಂದ ಜನರನ್ನು ಆಕಷರ್ಿಸಲು ಶುರುಮಾಡಿದಾಗಲೂ ಅವರ ಬೌದ್ಧಿಕ ಸಾಮಥ್ರ್ಯ ಚಿಮ್ಮಿ ಜನರ ಪ್ರಶಂಸೆಗೆ ಪಾತ್ರವಾಗುತ್ತಿತ್ತು. ಹಾಗಂತ ಸ್ವಾಮೀಜಿ ಎಂದೂ ಕೀತರ್ಿಯನ್ನು ತಲೆಗೇರಿಸಿಕೊಂಡವರೇ ಅಲ್ಲ.
ಅವರ ಗ್ರಹಣ ಸಾಮಥ್ರ್ಯವೇ ರಾಮಕೃಷ್ಣಾಶ್ರಮದ ಹಿರಿಯ ಸಾಧುಗಳಲ್ಲಿ ಅನೇಕ ಬಗೆಯ ಕಲ್ಪನೆಗಳನ್ನು ಹುಟ್ಟು ಹಾಕಿದ್ದು. ತನ್ನ ಮಾತಿನ ಮೂಲಕ ವಿವೇಕಾನಂದರೆಡೆಗೆ ಸಮಾಜವನ್ನು ಸೆಳೆಯುತ್ತಿದ್ದ ಜಗದಾತ್ಮಾನಂದಜೀ ರಾಮಕೃಷ್ಣಾಶ್ರಮದ ಹಿರಿಯ ಸಂತರ ಆದೇಶದ ಮೇರೆಗೆ ಮರು ಮಾತಿಲ್ಲದೇ ವಿದೇಶಕ್ಕೆ ಹೊರಟರು. ಅದು ಇಲ್ಲಿನ ಮತ್ತೊಂದು ವೈಶಿಷ್ಟ್ಯ. ಸ್ವಾಮಿಗಳೆನಿಸಿಕೊಂಡವರು ಜೀವನ ಪರ್ಯಂತ ಒಂದೆಡೆ ಇರುವಂತೆಯೇ ಇಲ್ಲ. ಅವರಿಗೂ ವಗರ್ಾವಣೆಗಳಿವೆ. ಹಿರಿಯ ಸಾಧುಗಳು ಎಲ್ಲಿ ಯಾರ ಅಗತ್ಯವಿದೆಯೋ ಅವರನ್ನು ಅಲ್ಲಿಗೆ ವಗರ್ಾಯಿಸುತ್ತಾರೆ. ಇವರೂ ಕೂಡ ಮರುಮಾತಿಲ್ಲದೇ ಒಪ್ಪಿಕೊಂಡು ಅತ್ತ ಧಾವಿಸುತ್ತಾರೆ. ಅದಕ್ಕೆ ಆರಂಭದಲ್ಲೇ ಇದನ್ನು ಅಹಂಕಾರ ನಾಶಮಾಡುವ ಯಂತ್ರವೆಂದು ಕರೆದಿದ್ದು. ಜನಮಾನಸದಲ್ಲಿ ಮಾತು ಬರಹಗಳ ಮೂಲಕ ಮನೆಯನ್ನೇ ಸ್ಥಾಪಿಸಿಕೊಂಡಿದ್ದ ಜಗದಾತ್ಮಾನಂದಜೀ ಈಗ ತಮ್ಮ ಎರಡು ಜೊತೆ ಬಟ್ಟೆಯನ್ನು ತೆಗೆದುಕೊಂಡು ಸಿಂಗಾಪುರಕ್ಕೆ ಹೊರಟೇಬಿಟ್ಟರು. ಹಾಗೆ ಹೋಗುವ ಮುನ್ನ ಅವರು ಮಂಗಳೂರು, ಮೈಸೂರು, ಶಿಲಾಂಗ್ಗಳಲ್ಲೂ ಮಠ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಿದ್ದರು ಎಂಬುದನ್ನು ಮರೆಯುವಂತಿಲ್ಲ. ಅದಾದ ಕೆಲವು ದಶಕಗಳ ಕಾಲ ಕನರ್ಾಟಕ ಅವರನ್ನು ಮರೆತೇಬಿಟ್ಟಿತು. ಜೀವನದ ಸಂಧ್ಯಾ ಕಾಲದಲ್ಲಿ ಮರಳಿದ ಸ್ವಾಮೀಜಿ ಪುರುಷೋತ್ತಮಾನಂದರು ಕಟ್ಟಿ ಬೆಳೆಸಿದ್ದ ಪೊನ್ನಂಪೇಟೆಗೆ ಅಧ್ಯಕ್ಷರಾಗಿ ಬಂದರು. ಅಲ್ಲೊಂದು ಭವ್ಯ ವಿಶ್ವಭಾವೈಕ್ಯ ಮಂದಿರವನ್ನು ಕಟ್ಟಬೇಕೆಂಬ ಕಲ್ಪನೆ ಅವರಿಗಿತ್ತು. ಕೊಡಗಿನ ಜನರನ್ನು ಇಂಥದ್ದಕ್ಕೆಲ್ಲಾ ಪ್ರೇರೇಪಿಸುವುದು ಬಲುಕಷ್ಟ. ಒಂದು ಹಂತಕ್ಕೆ ಸ್ವಾಮಿ ಪುರುಷೋತ್ತಮಾನಂದರು ಯಾವುದರಲ್ಲಿ ಸೋತಿದ್ದರೋ ಅಲ್ಲಿಯೇ ಜಗದಾತ್ಮಾನಂದಜೀ ಸವಾಲು ಸ್ವೀಕರಿಸಿದ್ದರು. ಇಳಿ ವಯಸ್ಸಿನಲ್ಲೂ ಭಕ್ತರ ಮನೆಗಳಿಗೆ ತಾವೇ ಹೋಗುತ್ತಿದ್ದರು. ಮುಲಾಜಿಲ್ಲದೇ ಮಂದಿರಕ್ಕಾಗಿ ಹಣ ಕೇಳುತ್ತಿದ್ದರು. ತಾನು ಮಾಡುತ್ತಿರುವುದು ರಾಮಕೃಷ್ಣರ ಕೆಲಸವೆಂಬ ದೃಢವಿಶ್ವಾಸ ಅವರಿಗೆ. ಭವ್ಯವಾದ ಮಂದಿರವನ್ನು ಕಟ್ಟಿ ಅದನ್ನು ಅಷ್ಟೇ ಅದ್ದೂರಿಯಾಗಿ ಲೋಕಾರ್ಪಣೆ ಮಾಡಿ ಇಡೀ ರಾಜ್ಯದ ಕಣ್ಣು ಕುಕ್ಕುವಂತೆ ಮಾಡಿದರು. ಎಲ್ಲವನ್ನೂ ಮಾಡಿದ ನಂತರ ಅಧಿಕಾರವನ್ನು ತ್ಯಜಿಸಿ ಸಾಮಾನ್ಯ ಸೈನಿಕರಂತೆ ವಿವೇಕಾನಂದರ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡುಬಿಟ್ಟರು.

ಸರಿಸುಮಾರು ಈ ಹೊತ್ತಿನಲ್ಲಿಯೇ ಕ್ಯಾನ್ಸರ್ನ ಭೂತ ಅವರನ್ನು ಹಿಡಿದುಕೊಂಡುಬಿಟ್ಟಿತ್ತು. ದವಡೆಗಳಿಗೆ ಅಂಟಿಕೊಂಡ ಈ ರೋಗದ ಕಾರಣಕ್ಕಾಗಿ ಬಹುಶಃ ಎರಡು-ಮೂರು ಬಾರಿಯಾದರೂ ಅವರಿಗೆ ಶಸ್ತ್ರ ಚಿಕಿತ್ಸೆಯಾಗಿರುವ ಸಾಧ್ಯತೆಯಿದೆ. ಆಗಲೂ ಮಾತನಾಡುವುದನ್ನು ನಿಲ್ಲಿಸಲಿಲ್ಲ ಸ್ವಾಮೀಜಿ. ಅವರ ಮಾತಿನ ಬಹುಪಾಲು ಯಾರಿಗೂ ಅರ್ಥವಾಗದೇ ಹೋದಾಗಲೂ ಸ್ವಾಮೀಜಿ ಅರ್ಥ ಮಾಡಿಸುವ ಪ್ರಯತ್ನ ಬಿಡುತ್ತಿರಲಿಲ್ಲ. ಅನೇಕ ಕಡೆ ತರುಣ ಸಮಾವೇಶಗಳಿಗೆ ಹೋಗಿ ತಮ್ಮ ಎಂದಿನ ಶೈಲಿಯಲ್ಲಿಯೇ ಎಲ್ಲರನ್ನೂ ಬಡಿದೆಬ್ಬಿಸಿ ಬರುತ್ತಿದ್ದರು. ಅವರಿಗೆ ಹಸ್ತ ಸಾಮುದ್ರಿಕೆಯ ಅರಿವು ಇದ್ದುದರಿಂದ ಯಾರಾದರೂ ತರುಣರು ಬಳಿ ಸಾರಿದರೆ ಅವರ ಬಲಗೈಯ್ಯನ್ನೊಮ್ಮೆ ನೋಡುತ್ತಿದ್ದರು. ತಮಗೆ ಬೇಕಾದ ರೇಖೆಗಳು ಕಂಡರೆ ಆ ಹುಡುಗನ ಪೂವರ್ಾಪರ ವಿಚಾರಿಸಿ ವಿವೇಕಾನಂದರ ಕುರಿತಂತೆ ನಾಲ್ಕಾರು ಮಾತುಗಳನ್ನಾಡಿ ಅವನೊಳಗೊಂದಷ್ಟು ರಾಷ್ಟ್ರ ಸೇವೆಯ ಕಿಡಿಯನ್ನು ತುಂಬಿಯೇ ಬಿಡುತ್ತಿದ್ದರು.

6

ಅವರು ಬರೆದಿದ್ದ ಬದುಕಲು ಕಲಿಯಿರಿ ಬಹುಶಃ ಭಾರತದ ಎಲ್ಲ ಭಾಷೆಗಳಿಗೂ ಅನುವಾದಗೊಂಡಿತಲ್ಲದೇ ದಾಖಲೆಯ ಮಾರಾಟವನ್ನೂ ಕಂಡಿತು. ಅದರ ಒಟ್ಟಾರೆ ಕೃತಿಗಳ ಮಾರಾಟ ಎಷ್ಟಾಯಿತೆಂಬ ಲೆಕ್ಕ ಇರುವುದೂ ಅನುಮಾನ. ಕನ್ನಡದ ಕೃತಿಯೊಂದು ಹೀಗೆ ಜಾಗತಿಕ ಮಟ್ಟದ ಮನ್ನಣೆ ಪಡೆದಿದ್ದು ಇದೇ ಇರಬೇಕು. ಇಂದಿಗೂ ಅನೇಕ ಮಹನೀಯರು ಬದುಕಲು ಕಲಿಯಿರಿಯಿಂದ ತಮ್ಮ ಬದುಕೇ ಬದಲಾದದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆ ಕಥೆಗಳನ್ನು ಕೇಳುವಾಗ ಸ್ವಾಮೀಜಿಯ ಕಂಗಳಲ್ಲೂ ಸಾವಿರ ಮಿಂಚು ಸಿಡಿದ ಬೆಳಕು. ಅದು ಪುಸ್ತಕದ ಮೇಲಿನ ಮಮಕಾರದಿಂದಲ್ಲ. ಬದಲಿಗೆ ಅದನ್ನು ಬರೆಯಲು ಹಾಕಿದ ಶ್ರಮ ಸಾರ್ಥಕವಾಯ್ತಲ್ಲ ಎಂಬ ಆನಂದದ ಕಾರಣದಿಂದ.

ನಮ್ಮ ಹಾಸ್ಟೆಲ್ಲಿನ ಗ್ರಂಥಾಲಯದಲ್ಲಿ ವಷರ್ಾಂತ್ಯಕ್ಕೆ ಇರುವ ಕೃತಿಗಳ ಲೆಕ್ಕಾಚಾರಕ್ಕೆ ಕುಳಿತಾಗ ಬದುಕಲು ಕಲಿಯಿರಿಯನ್ನು ಯಾರೋ ಕದ್ದುಬಿಟ್ಟಿದ್ದಾರೆಂಬುದು ಬೆಳಕಿಗೆ ಬಂತು. ಈ ವಿಚಾರ ಹಿರಿಯ ಸಾಧುಗಳ ಗಮನಕ್ಕೆ ತಂದಾಗ ಅವರು ಏನೆಂದರು ಗೊತ್ತೇ? ‘ಶಭಾಷ್! ಇನ್ನಾದರೂ ಬದಕಲು ಕಲಿಯಲಿ’.

ಕಳೆದ ಎರಡು ತಿಂಗಳಿನಿಂದೀಚೆಗೆ ಸ್ವಾಮೀಜಿಯ ಆರೋಗ್ಯ ಹದಗೆಡುತ್ತಲೇ ಇತ್ತು. ಉಸಿರಾಟದ ತೊಂದರೆಯಂತೂ ತೀವ್ರವಾಗಿ ಬಾಧಿಸುತ್ತಿದ್ದುದರಿಂದ ಮೈಸೂರಿನ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಒಂದು ಹಂತದಲ್ಲಂತೂ ಸ್ವಾಮೀಜಿಯ ಅವಸಾನ ಖಾತ್ರಿ ಎಂದೇ ಎಲ್ಲರೂ ಭಾವಿಸಿಬಿಟ್ಟಿದ್ದರು. ಸಾಧುಗಳೆಲ್ಲಾ ಐಸಿಯು ಹೊಕ್ಕು ‘ಓಂ ನಮೋ ಭಗವತೇ ರಾಮಕೃಷ್ಣಾಯ’ ಮಂತ್ರ ಜಪಿಸಲಾರಂಭಿಸಿದರು. ಜೀವರಕ್ಷಕ ಯಂತ್ರಗಳ ಮೇಲೆ ಬದುಕಿದ್ದ ಸ್ವಾಮೀಜಿಯವರ ಉಸಿರಾಟದಲ್ಲಿ ತೊಂದರೆ ಇದ್ದೀತೇನೋ, ಆದರೆ ಪ್ರಜ್ಞೆಯ ಮಟ್ಟದಲ್ಲಿ ಅವರು ಒಂದಿನಿತೂ ಬದಲಾಗಿರಲಿಲ್ಲ. ಸಾಧುಗಳಲ್ಲೊಂದಿಬ್ಬರು ಬಾಯ್ತಪ್ಪಿ ಮಂತ್ರವನ್ನು ತಪ್ಪಾಗಿ ಉಚ್ಚರಿಸಿದಾಗ ತಕ್ಷಣವೇ ಕರೆದು ಅವರತ್ತ ನೋಡಿ ಸರಿಮಾಡಿಕೊಳ್ಳಲು ಹೇಳಿದ್ದನ್ನು ಅಂದು ಜೊತೆಯಲ್ಲಿದ್ದ ಸ್ವಾಮೀಜಿ ಈಗಲೂ ನೆನಪಿಸಿಕೊಳ್ಳುತ್ತಾರೆ. ಪ್ರಸ್ಥಾನದ ನಿಶ್ಚಯ ಅವರು ಮಾಡಿಯಾಗಿತ್ತು. ಗಂಟಲಿಗೆ ಹಾಕಿದ ಪೈಪಿನ ಕಾರಣದಿಂದಾಗಿ ಮಾತನಾಡುವುದು ನಿಂತೇ ಹೋದಾಗ ಸ್ವಾಮೀಜಿ ಬರೆಯಲಾರಂಭಿಸಿದ್ದರು. ತ್ರಾಣವಿಲ್ಲದ ಕೈಗಳಿಂದ ಕಷ್ಟಪಟ್ಟು ನಾಲ್ಕಾರು ಪದಗಳನ್ನು ಗೀಚುತ್ತಿದ್ದರು. ಅಂತಹ ಹೊತ್ತಿನಲ್ಲೂ ಅವರು ಬರೆದ ಓಂಕಾರಗಳು ಬಲುಸುಂದರವಾಗಿವೆ. ಭಗವಾನ್ ರಾಮಕೃಷ್ಣರು ಎಲ್ಲರಿಗೂ ಕೃಪೆ ಹರಸಲಿ ಎಂದು ತಮ್ಮ ಅನಾರೋಗ್ಯದ ಹೊತ್ತಿನಲ್ಲೂ ಅವರು ಬರೆದಿರುವ ವಾಕ್ಯಗಳು ಶಕ್ತಿ ತುಂಬುವಂಥವು. ತೀರಿಕೊಳ್ಳುವ ಒಂದು ವಾರದ ಮುನ್ನ ‘ಬೆಳಕು ನಂದಿತು’ ಎಂಬ ವಾಕ್ಯವನ್ನು ಬರೆದವರೂ ಅವರೇ.

7

ನೋಡಿಕೊಳ್ಳುತ್ತಿದ್ದ ಸ್ವಾಮೀಜಿಯವರನ್ನು ಕರೆದು ‘ನನಗೆ ಸಾವಿನ ಭಯವಿಲ್ಲ. ಈ ಪೈಪುಗಳನ್ನೆಲ್ಲಾ ತೆಗೆದುಬಿಡಿ. ನನ್ನ ಹೊರಡುವ ಸಮಯ ಬಂತು’ ಎಂದ ಸ್ವಾಮೀಜಿ ಸಾವನ್ನು ಪ್ರೀತಿಸುವವನೇ ಸನ್ಯಾಸಿ ಎಂದು ಹೇಳಿದ್ದ ವಿವೇಕಾನಂದರ ಮಾತುಗಳನ್ನು ಆಚರಣೆಗೆ ತಂದಿದ್ದರು. ತೀರಿಕೊಳ್ಳುವ ಮೂರು ದಿನಗಳ ಮುನ್ನ ಅವರನ್ನು ಕಾಣಲು ಹೋಗಿದ್ದಾಗ ವಿವೇಕಾನಂದರ ಚಿಂತನೆಗಳು ಸಮಾಜವನ್ನು ಆವರಿಸಿಕೊಳ್ಳುತ್ತಿರುವ ಪರಿ ವಿವರಿಸಿದಾಗ ಅವರ ಕಣ್ಣಿನಿಂದ ನೀರು ಬಿಟ್ಟೂ ಬಿಡದೇ ಇಳಿದು ಹೋಗುತ್ತಿತ್ತು. ಮುಂದಿನ ಕಾರ್ಯಕ್ಕೆ ಯಶಸ್ಸನ್ನು ಹರಸಿ, ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸುವಾಗ ಜೀವನದ ಮಹಾಭಾಗ್ಯವೆನಿಸಿತ್ತು. ಅವರು ಪೆನ್ನು ಕೈಗೆತ್ತಿಕೊಂಡು ಬರೆದ ‘ಜಯವಾಗಲಿ’ ಎಂಬ ಪದ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಲೆಯ ಮೇಲೆ ಹೊತ್ತು ಹಂಚುತ್ತಿರುವ ಎಲ್ಲರಿಗೂ ನೀಡಿದ ಶ್ರೇಷ್ಠ ಸಂದೇಶ ಎಂದು ನಾನಂತೂ ಭಾವಿಸುತ್ತೇನೆ.

ವೈದ್ಯರ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿದ ಸ್ವಾಮೀಜಿಯನ್ನು ವಿಶೇಷ ಕೋಣೆಗೆ ವಗರ್ಾಯಿಸಲಾಯ್ತು. ಬೆಳಗ್ಗಿನಿಂದಲೂ ಉಲ್ಲಸಿತರಾಗಿ ಎಲ್ಲರೊಡನೆ ಮೌನವಾಗಿಯೇ ಸಂಭಾಷಿಸುತ್ತಾ ಆನಂದದಿಂದಿದ್ದ ಸ್ವಾಮೀಜಿಯವರ ದೇಹದ ಆಮ್ಲಜನಕದ ಪ್ರಮಾಣ ಸಂಜೆಯ ವೇಳೆಗೆ ಕಡಿಮೆಯಾಗಲಾರಂಭಿಸಿತು. ರಾತ್ರಿ 7 ಗಂಟೆ 29 ನಿಮಿಷಕ್ಕೆ ಸರಿಯಾಗಿ ಚಿಕಿತ್ಸೆಗೆ ಸೂಕ್ತ ಪ್ರತಿಸ್ಪಂದನೆ ಸಿಗದೇ ಸ್ವಾಮಿ ಜಗದಾತ್ಮಾನಂದಜೀ ಮುಂದಿನ ಲೋಕದ ಪಯಣಕ್ಕೆ ಹೊರಟೇಬಿಟ್ಟರು. ಸಾವನ್ನು ತಬ್ಬಿಕೊಳ್ಳಲು ಸಿದ್ಧರಾಗಿದ್ದ ಅವರಿಗೆ ಈ ಸಾವಿನಿಂದ ಯಾವ ನಷ್ಟವೂ ಆಗಲಿಲ್ಲ. ಆದರೆ ಬದುಕನ್ನೇ ಸರಿಯಾಗಿ ತಬ್ಬಿಕೊಂಡಿರದ ನಮಗೆ ಮಾತ್ರ ಬದುಕಲು ಕಲಿಸಿದ ಮೇಷ್ಟರೊಬ್ಬರನ್ನು ಕಳೆದುಕೊಂಡ ಅನಾಥಭಾವ.

Comments are closed.