ವಿಭಾಗಗಳು

ಸುದ್ದಿಪತ್ರ


 

ಬಲು ದಿನದ ಕನಸು ನನಸಾಗುತ್ತಿದೆ

ರಷ್ಯಾ ಚೀನಾದೊಂದಿಗಿನ ತನ್ನ ಬಾಂಧವ್ಯವನ್ನೂ ಕಡಿಮೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಚೀನಾದೊಂದಿಗೆ ಸೇರಿ ಯುದ್ಧ ವಿಮಾನ ಅಭಿವೃದ್ಧಿ ಪಡಿಸುವ ಯೋಜನೆಯ ಹೊತ್ತಲ್ಲಿ ಚೀನಾ ತಂತ್ರಜ್ಞಾನವನ್ನು ಕದ್ದ ನೆನಪು ರಷ್ಯನ್ನರಿಗೆ ಹಸಿಯಾಗಿದೆ. ಹೀಗಾಗಿ ಈ ಬಾರಿ ಅವರು ಖಿ-50 ಎಂಬ ಫೈಟರ್ ವಿಮಾನದ ತಯಾರಿಗೆ ಭಾರತದೊಂದಿಗೆ ಕೈ ಜೋಡಿಸಿದ್ದಾರೆ. ಚೀನಾ ಜಗತ್ತಿನ ಭರವಸೆಯನ್ನು ಕಳಕೊಂಡಿದೆ. ಆ ಹೊತ್ತಿಗೆ ಸರಿಯಾಗಿ ಭಾರತ ಬಲಾಢ್ಯವಾಗಿ ನಿಂತಿದೆ.

Pak-China-Economic-Corridor

ಚೀನಾ ಪಾಕಿಸ್ತಾನ್ ಎಕಾನಾಮಿಕ್ ಕಾರಿಡಾರ್ ಕೇಳಿದ್ದೀರಲ್ಲಾ? ಸುಮಾರು 3 ಸಾವಿರ ಕಿಮೀಗಳಷ್ಟು ಉದ್ದದ ಚೀನಾ-ಪಾಕಿಸ್ತಾನ ರಸ್ತೆಯ ಯೋಜನೆ ಇದು. 46 ಬಿಲಿಯನ್ ಡಾಲರುಗಳಷ್ಟು ಬೃಹತ್ ಮೊತ್ತದ ಅನುದಾನದೊಂದಿಗೆ ಚೈನಾ ಹಿಂದೂ ಮಹಾಸಾಗರದ ಮೇಲೆ ಪ್ರಭುತ್ವ ಸಾಧಿಸಲು ಹೆಣಗಾಡುತ್ತಿದೆ. ಚೀನಾದ ಪಶ್ಚಿಮದಿಂದ ಪಾಕಿಸ್ತಾನದ ಗ್ವಾದರ್ ಬಂದರಿಗೆ ವಿದ್ಯುತ್ ಒಯ್ಯಲು ಈ ಯೋಜನೆ ಸಹಕಾರಿಯಾಗಲಿದೆ.

ಇದರಲ್ಲಿ ಭಾರತಕ್ಕೇನು ಸಮಸ್ಯೆ ಇರಲು ಸಾಧ್ಯ? ತಲೆ ಕೆಡಿಸಿಕೊಳ್ಳಬೇಡಿ. ಈ ರಸ್ತೆ ಗಿಲ್ಗಿಟ್ ಪ್ರಾಂತ್ಯದ ಮೂಲಕ ಹಾದು ಹೋಗುತ್ತದೆ. ಮತ್ತು ಈ ಪ್ರಾಂತ್ಯದ ಒಡೆತನದ ಕುರಿತಂತೆ ಭಾರತ-ಪಾಕಿಸ್ತಾನಗಳ ನಡುವೆ ಈಗಲೂ ಕಿತ್ತಾಟ ನಡೆಯುತ್ತಲೇ ಇದೆ. ಇಲ್ಲಿ ಹಾದು ಹೋಗುವ ರಸ್ತೆ ಸದಾ ಕಾಲ ಭಾರತದ ರಕ್ಷಣೆಗೆ ಕಂಟಕವೇ. ಪಾಕೀಸ್ತಾನದ ಗ್ವಾದರ್ ಬಂದರಿನ ಮೇಲೆ ಚೀನಾ ಹಿಡಿತ ಸಾಧಿಸುವುದೆಂದರೆ ಹಿಂದೂ ಮಹಾಸಾಗರದ ಮೇಲೆ ಚೀನಾ ಪ್ರಭುತ್ವ ಸಾಧಿಸುವುದೆಂದೇ ಅರ್ಥ.

ಚೀನಾ ಅದೆಷ್ಟು ವ್ಯವಸ್ಥಿತವಾಗಿ ಪಾಕಿಸ್ತಾನದೊಂದಿಗೆ ಕೈ ಜೋಡಿಸಿದೆಯೆಂದರೆ ಅದಾಗಲೇ ಅವರೊಂದಿಗೆ 8 ಸಬ್ ಮೆರೀನ್ಗಳ ಒಪ್ಪಂದ ಮಾಡಿಕೊಂಡಿದೆ. ನಾಲ್ಕು ಚೀನಾದಲ್ಲಿ ತಯಾರಾಗುವಂಥದ್ದು. ಉಳಿದ ನಾಲ್ಕು ಪಾಕೀಸ್ತಾನದಲ್ಲಿಯೇ ಚೀನಾ ತಯಾರು ಮಾಡಬೇಕಿರುವಂಥದ್ದು. ಇದರರ್ಥ ಬಲು ಸ್ಪಷ್ಟ. ಭಾರತದ ಬದಿಯಲ್ಲಿಯೇ ತನ್ನ ಸಬ್ ಮೇರಿನ್ಗಳನ್ನು ನಿಲ್ಲಿಸಿ ಪಾಕೀಸ್ತಾನದ ಮೂಲಕ ನಮ್ಮನ್ನು ಹೆದರಿಸುತ್ತಿರಬೇಕು. ಜಗತ್ತಿನೆದುರಿಗೆ ತಾನು ಸಂಭಾವಿತನಾಗಿರಬೇಕು.

ಭಾರತಕ್ಕೆ ನಿಜವಾಗಿಯೂ ಇದೊಂದು ಸವಾಲೇ ಆಗಿತ್ತು. ಅದೀಗ 68 ವರ್ಷಗಳ ಹಿಂದಿನ ತುಕ್ಕು ಹಿಡಿದ ಆಲೋಚನೆಯಿಂದ ತಾನು ಹೊರಬಂದಿರುವುದನ್ನು ಜಗತ್ತಿಗೆ ತಿಳಿಸಲೇ ಬೇಕಿತ್ತು. ಕೊನೇ ಪಕ್ಷ ಏಷ್ಯಾದ ಜನರಲ್ಲಿ ಚೀನಾವನ್ನು ಎದುರುಗೊಳ್ಳುವ ಸಾಮಥ್ರ್ಯ ತನಗಿರುವುದರ ಬಗ್ಗೆ ಭರವಸೆ ಮೂಡಿಸಬೇಕಿತ್ತು.

ಆಗಲೇ ತನ್ನ ಸೈನಿಕರ ಸಾವಿಗೆ ಪ್ರತೀಕಾರ ತೆಗೆದುಕೊಳ್ಳುವ ಯೋಜನೆ ರೂಪಿಸಿದ್ದು ಭಾರತ. ಮಯನ್ಮಾರ್ಗೆ ನುಗ್ಗಿ ಭಯೋತ್ಪಾದಕರ ಸದೆ ಬಡಿದು ಅದನ್ನು ಜಾಗತಿಕ ಸುದ್ದಿಯಾಗುವಂತೆ ನೋಡಿಕೊಳ್ಳಲಾಯಿತು. ಅಷ್ಟೇ ಅಲ್ಲ. ಇನ್ನು ಭಾರತ ಕಾದು ನೋಡುವ ತಂತ್ರ ಅನುಸರಿಸಲಾರದು, ಇನ್ನೇನಿದ್ದರೂ ತಲೆಗೆ ತಲೆಯೇ ಎಂಬುದನ್ನು ಸ್ಪಷ್ಟಪಡಿಸಿತು.

ಸಂದೇಶ ರವಾನೆಯಾಗಿದ್ದು ನೇರ ಪಾಕೀಸ್ತಾನ, ಚೀನಾಗಳಿಗೇ! ರಾಷ್ಟ್ರವೊಂದು ಯುದ್ಧಕ್ಕೆಳಸಿದರೆ ಅದರ ಬೆಳವಣ ಗೆ ಕುಂಠಿತವಾಗಲಿರುವುದರ ಬಗ್ಗೆ ಯಾರಿಗೂ ಅನುಮಾನವಿಲ್ಲ. ಹೀಗಾಗಿ ಯುದ್ಧವನ್ನೇ ಮಾಡದೇ ನೆರೆ-ಹೊರೆಯನ್ನು ಬೆರಳ ತುದಿಯಲ್ಲಿಯೇ ಗದರಿಸಿಟ್ಟುಕೊಳ್ಳುವ ಯೋಜನೆ ಬೇಕಿತ್ತು.

ಭಾರತ ತನ್ನ ಅಂತರರಾಷ್ಟ್ರೀಯ ಸಂಬಂಧಗಳ ಬಾಹುಗಳನ್ನು ವಿಸ್ತರಿಸಿತು. ಶಕ್ತ ರಾಷ್ಟ್ರಗಳನ್ನು ಭೇಟಿ ಮಾಡಿತು. ಅವರೊಂದಿಗೆ ವ್ಯಾಪಾರ ಸಂಬಂಧದ ಮಾತುಗಳನ್ನಾಡುತ್ತ ಬುಟ್ಟಿಗೆ ಹಾಕಿಕೊಂಡಿತು. ಹಾಗೆಯೇ ಉಳಿದ ರಾಷ್ಟ್ರಗಳಲ್ಲಿ ಭಯೋತ್ಪಾದನೆಯ ಕುರಿತಂತೆ ಮಾತನಾಡುತ್ತ ಸಂಘಟನೆಗೆ ನಿಂತಿತು. ಶಕ್ತ ರಾಷ್ಟ್ರಗಳ ಬೆಂಬಲದಿಂದ ಚೀನಾಗೆ ಸೆಡ್ಡು ಹೊಡೆಯಿತು. ಹಾಗೆಯೇ ಭಯೋತ್ಪಾದನೆಯ ಕುರಿತಂತೆ ಮಾತನಾಡುತ್ತ ಪಾಕೀಸ್ತಾನವನ್ನು ಜಗತ್ತು ಕಳ್ಳನಂತೆ ಕಾಣುವ ಹಾಗೆ ಮಾಡಿತು.

ಇಂದಂತೂ ಪರಿಸ್ಥಿತಿ ಹೇಗಾಗಿದೆ ಗೋತ್ತೇನು? ಪಾಕೀಸ್ತಾನ ತನ್ನೊಳಗಿನ ಸಮಸ್ಯೆಯ ಸುಳಿಯೊಳಗೆ ತಾನೇ ಸಿಲುಕಿ ನಲುಗಿ ಹೋಗಿದೆ. ಅತ್ತ ಪಾಕ್ ಆಕ್ರಮಿತ ಕಾಶ್ಮೀರ ಪ್ರತ್ಯೇಕತೆಯ ಘೋಷಣೆ ಕೂಗುತ್ತಿದೆ. ಬಲೂಚೀಸ್ತಾನ್ ಪ್ರತ್ಯೇಕ ರಾಷ್ಟ್ರದ ಮಾತನಾಡುತ್ತಿದೆ. ನವಾಜ್ ಷರೀಫ್ರು ಅಮೇರಿಕಾದಲ್ಲಿ ಭಾಷಣ ಮಾಡುವಾಗಲೇ ಅವರ ವಿರುದ್ಧ ಘೋಷಣೆಗಳನ್ನು ಕೂಗಲಾಯ್ತು. ಆತ ಕಾಶ್ಮೀರ ವಿವಾದದಲ್ಲಿ ಮಧ್ಯಸ್ತಿಕೆ ವಹಿಸಬೇಕೆಂದು ಅಮೇರಿಕಾವನ್ನು ಕೇಳಿಕೊಂಡಾಗ ಒಬಾಮಾ ಸ್ಪಷ್ಟವಾಗಿ ನಿರಾಕರಿಸಿ ಭಾರತದ ಪರ ತಮ್ಮ ಒಲವನ್ನು ಪುನರುಚ್ಚರಿಸಿದರು! ಎಲ್ಲಕ್ಕೂ ಮಹತ್ವತ್ತೆಂದರೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯಲ್ಲಿ ಸದಸ್ಯತ್ವಕ್ಕೆ ಮರು ಆಯ್ಕೆ ಬಯಸಿದ ಪಾಕಿಸ್ತಾನ ಚುನಾವಣೆಯಲ್ಲಿ ಸೋತುಹೋಯ್ತು. ಅಂದರೆ ಅದನ್ನು ಬೆಂಬಲಿಸುವಲ್ಲಿ ಜಗತ್ತಿನ ಯಾವ ರಾಷ್ಟ್ರಗಳೂ ಆಸಕ್ತಿ ತೋರಿಸುತ್ತಿಲ್ಲ ಅಂತ! ಅಲ್ಲಿಗೆ ಚೀನಾ ಮತ್ತು ರಷ್ಯಾಗಳು ಮಾತ್ರ ಈಗ ಪಾಕೀಸ್ತಾನದ ಜೊತೆಗೆ ನಿಲ್ಲಬಹುದೆಂದು ಪಾಕೀಸ್ತಾನ ನಿರ್ಧರಿಸಿತು.

ಭಾರತ ಅಷ್ಟಕ್ಕೂ ಸುಮ್ಮನಾಗಲಿಲ್ಲ. ಮೊನ್ನೆ ಶುಕ್ರವಾರ ರಕ್ಷಣಾ ಸಚಿವರು ರಷ್ಯಾಕ್ಕೆ ಪ್ರವಾಸ ಬೆಳೆಸಿದ್ದಾರೆ. ಹೋಗುವ ಮುನ್ನ ರಷ್ಯಾ ಭಾರತದ ಸಾರ್ವಕಾಲಿಕ ಮಿತ್ರ ಎಂಬುದನ್ನು ಪುನರುಚ್ಚರಿಸಿದ್ದಾರೆ. ಅಷ್ಟೇ ಅಲ್ಲ. ಭಾರತೀಯ ಸೇನೆಗೆ ರಷ್ಯಾದ ಶಸ್ತ್ರಾಸ್ತ್ರಗಳನ್ನು ಕೊಳ್ಳುವ ಯೋಜನೆ ರೂಪಿಸಲಾಗಿದೆ. 140 ಮಿಲಿಯನ್ ಡಾಲರುಗಳಷ್ಟು ವೆಚ್ಚದಲ್ಲಿ ಟ್ಯಾಂಕ್ಗಳನ್ನು ಕೊಳ್ಳುವ ಚಿಂತನೆ, 650 ಮಿಲಿಯನ್ ಡಾಲರ್ ವೆಚ್ಚದಲ್ಲಿ ಇಲ್ಯುಶಿನ್ ವಿಮಾನಗಳನ್ನು ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ 400 ಕಿಮೀಗಳಾಚೆಯೇ ಶತ್ರು ವಿಮಾನವನ್ನು ಗುರುತಿಸಿ ಹೊಡೆದುರುಳಿಸಬಲ್ಲ -400 ಆ್ಯಂಟಿ ಬ್ಯಾಲಿಸ್ಟಿಕ್ ಮಿಸೈಲ್ಗಳನ್ನು ಖರೀದಿಸಲಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಪಾಕೀಸ್ತಾನದೊಂದಿಗೆ ನಿಲ್ಲುವುದು ಅಸಾಧ್ಯವೇ ಸರಿ.

parrikarl

ಅಷ್ಟೇ ಅಲ್ಲ, ರಷ್ಯಾ ಚೀನಾದೊಂದಿಗಿನ ತನ್ನ ಬಾಂಧವ್ಯವನ್ನೂ ಕಡಿಮೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಚೀನಾದೊಂದಿಗೆ ಸೇರಿ ಯುದ್ಧ ವಿಮಾನ ಅಭಿವೃದ್ಧಿ ಪಡಿಸುವ ಯೋಜನೆಯ ಹೊತ್ತಲ್ಲಿ ಚೀನಾ ತಂತ್ರಜ್ಞಾನವನ್ನು ಕದ್ದ ನೆನಪು ರಷ್ಯನ್ನರಿಗೆ ಹಸಿಯಾಗಿದೆ. ಹೀಗಾಗಿ ಈ ಬಾರಿ ಅವರು ಖಿ-50 ಎಂಬ ಫೈಟರ್ ವಿಮಾನದ ತಯಾರಿಗೆ ಭಾರತದೊಂದಿಗೆ ಕೈ ಜೋಡಿಸಿದ್ದಾರೆ. ಚೀನಾ ಜಗತ್ತಿನ ಭರವಸೆಯನ್ನು ಕಳಕೊಂಡಿದೆ. ಆ ಹೊತ್ತಿಗೆ ಸರಿಯಾಗಿ ಭಾರತ ಬಲಾಢ್ಯವಾಗಿ ನಿಂತಿದೆ.

ಇದರ ಸಂದೇಶ ಜಗತ್ತಿಗೆ ರವಾನೆಯಾಗಿರುವುದು ಹೇಗಿದೆ ಎಂದರೆ, ಇತ್ತೀಚೆಗೆ ಚೀನಾದ ದಕ್ಷಿಣ ಸಮುದ್ರದಲ್ಲಿ ಅಮೇರಿಕಾದ ಹಡಗುಗಳು ಅಡ್ಡಾಡಿ ಚೀನಾದ ಕಣ್ಣು ಕೆಂಪಾಗುವಂತೆ ಮಾಡಿವೆ. ಇದು ವ್ಯಾಪಾರ-ವಹಿವಾಟು ನಡೆಯುವ ಜಾಗವಾದ್ದರಿಂದ ಇಲ್ಲಿ ಅಡ್ಡಾಡಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಎಂದು ಅಮೇರಿಕವೂ ಸೂಕ್ಷ್ಮವಾಗಿಯೇ ತಿರುಗೇಟು ನೀಡಿದೆ. ಅಮೇರಿಕಾದ ಈ ಶಕ್ತಿಯುತ ಪ್ರತಿಕ್ರಿಯೆಗೆ ಭಾರತದ ಸಹಕಾರವೇ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಒಟ್ಟಾರೆ ಭಾರತ ತನ್ನ ನೆರೆಯಲ್ಲಿದ್ದ ಶತ್ರುಗಳನ್ನು ಯುದ್ಧ ಮಾಡದೇ ಮೆತ್ತಗಾಗಿಸುವ ಕಲ್ಪನೆಯಲ್ಲಿ ಆರಂಭಿಕ ಯಶಸ್ಸು ಕಂಡಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಪಾಕೀಸ್ತಾನ ಮತ್ತು ಚೀನಾಗಳಿಗೆ ಜಂಟಿಯಾಗಿಯೇ ಹೊಡೆತ ನೀಡಿದೆ. ಆ ಎರಡೂ ರಾಷ್ಟ್ರಗಳೂ ಸೇರಿ ನಿಮರ್ಿಸಿದ ಥಂಡರ್ ಎಂಬ ಲಘು ವಿಮಾನವನ್ನು ಶ್ರೀಲಂಕಾಕ್ಕೆ ಮಾರಾಟ ಮಾಡುವಲ್ಲಿ ಪಾಕೀಸ್ತಾನ ಹೆಚ್ಚು ಕಡಿಮೆ ಮುಂದಡಿ ಇಟ್ಟಾಗಿತ್ತು. ಮಧ್ಯೆ ನುಗ್ಗಿದ ಭಾರತ ಶ್ರೀಲಂಕಾದ ಮೇಲೆ ಪ್ರಭಾವ ಬೀರಿ ಭಾರತವೇ ನಿಮರ್ಿಸಿದ ಲಘು ಯುದ್ಧ ವಿಮಾನ ತೇಜಸ್ಸನ್ನು ತಲುಪಿಸುವ ಒಪ್ಪಂದ ಮಾಡಿಕೊಂಡುಬಿಟ್ಟಿತು. ಅಲ್ಲಿಗೆ ಪಾಕೀಸ್ತಾನ ಸೊರಗುವುದೊಂದೇ ಬಾಕಿ!

ಕಳೆದ ವಾರ ಆಫ್ರಿಕಾದಿಂದ ಬಂದ ನಾಯಕರೊಂದಿಗೆ ನಡೆದ ಚಚರ್ೆ ಪ್ರಮುಖವಾಗಿ ಭಯೋತ್ಪಾದನೆಯದ್ದೇ. ಬೋಕೋಹರಾಂನಿಂದ ಜರ್ಝರಿತವಾಗಿದ್ದ ನೈಜೀರಿಯಾದ ಅಧ್ಯಕ್ಷರು ಇವರನ್ನು ಮೆಟ್ಟಿ ಹಾಕಲು ಭಾರತ ಮಾರ್ಗದರ್ಶನ ಮಾಡಬೇಕೆಂದು ಕೇಳಿರುವುದೇ ರೋಮಾಂಚನಕಾರಿಯಾಗಿದೆ. ಅಲ್ಲಿಗೆ ಭಾರತ ಭಯೋತ್ಪಾದಕರ ಉಪಟಳದಿಂದ ನರಳುತ್ತಿರುವ ಎಲ್ಲ ದೇಶಗಳ ನಾಯಕನಾಗಿ ಹೊರಹೊಮ್ಮಿದಂತಾಯ್ತು. ನೋಡ ನೋಡುತ್ತಲೇ ಪಾಕೀಸ್ತಾನದ್ದೇನು ಚೀನಾದ್ದೇ ಪ್ರಭಾವ ಏಷ್ಯಾದಲ್ಲಿ ಕಡಿಮೆಯಾಗುತ್ತಿದೆ. ಜಗತ್ತಿನಲ್ಲಿ ಭಾರತದ ಪ್ರಭಾವ ವೃದ್ಧಿಸುತ್ತಿದೆ.

ಉಫ್! ಬಲು ದಿನಗಳ ಕನಸು ನನಸಾಗುತ್ತಿದೆ!

Comments are closed.