ವಿಭಾಗಗಳು

ಸುದ್ದಿಪತ್ರ


 

ಭಯೋತ್ಪಾದಕರ ಸಾವಿಗೆ ಕಣ್ಣೀರಿಟ್ಟಿದ್ದೇಕೆ ಸೋನಿಯಾ?

ಸೋನಿಯಾಗಾಂಧಿ ಸತ್ತ ಭಯೋತ್ಪಾದಕರಿಗಾಗಿ ಕಣ್ಣೀರು ಸುರಿಸಿದ್ದು ಅದೆಷ್ಟು ನ್ಯಾಯ? ಅದು ಭಯೋತ್ಪಾದಕರನ್ನು ಮುಗ್ಧರೆಂದು ಬಿಂಬಿಸಿ ಉಳಿಸುವ ಸನ್ನಾಹವಾಗಿತ್ತೇ? ಇಷ್ಟೆಲ್ಲಾ ಇದ್ದಾಗ್ಯೂ ಈಗ ಕನರ್ಾಟಕದಲ್ಲಿ ಮತ್ತೊಮ್ಮೆ ಇದೇ ಬಗೆಯ ಹತ್ಯೆಗಳನ್ನು ಬೆಂಬಲಿಸುತ್ತಿದ್ದೀರಲ್ಲಾ! ಕೊಲೆಗಡುಕರನ್ನು ಮುಗ್ಧರೆಂದು ಕರೆದು ಅವರನ್ನು ಬಿಡುಗಡೆ ಮಾಡುವ ನಿಗೂಢ ಉಪಾಯಕ್ಕೆ ಸಜ್ಜಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯ. ಹಾಗೆ ಮಾಡಿದರೆ ಪೊಲೀಸರ ನೈತಿಕ ಸ್ಥೈರ್ಯ ಕುಸಿಯಲಾರದೇನು? ಒಮ್ಮೆ ನೆಹರು-ಗಾಂಧಿ ಮಾಡಿದ ತಪ್ಪಿನಿಂದಾಗಿ ತುಂಡಾದ ದೇಶವನ್ನು ನೀವುಗಳೆಲ್ಲ ಸೇರಿ ಮತ್ತೆ ಮತ್ತೆ ತುಂಡರಿಸಬೇಕೆಂದಿದ್ದೀರೇನು?

ಇನ್ಸ್ಪೆಕ್ಟರ್ ಮೋಹನ್ ಚಂದ್ ಶಮರ್ಾ. ಆ ಹೆಸರು ಅನೇಕರಿಗೆ ಮರೆತೇ ಹೋಗಿರಬೇಕು. ಬಹುಶಃ ಬಾಟ್ಲಾ ಹೌಸ್ ಎನ್ಕೌಂಟರ್ ಎಂದರೆ ನೆನಪಾದೀತೇನೋ. 2008 ರ ಸಪ್ಟೆಂಬರ್ 19 ರಂದು ದೆಹಲಿಯ ಜಾಮಿಯಾ ನಗರದ ಬಾಟ್ಲಾ ಹೌಸ್ ಪರಿಸರದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನು ಹುಡುಕಿಕೊಂಡು ಮೋಹನ್ ಚಂದ್ ಶಮರ್ಾ ಅವರ ತಂಡ ಹೊರಟಿತು. ಅದಕ್ಕೂ ಒಂದು ವಾರ ಮುನ್ನ ದೆಹಲಿಯ ರಸ್ತೆಗಳಲ್ಲಿ ಬಾಂಬ್ ಸ್ಫೋಟ ಮಾಡಿ 30 ಜನರನ್ನು ಕೊಂದು ಹಾಕಿದ ತಂಡವದು. ಗೂಢಚಾರರ ಬಲು ಸ್ಪಷ್ಟವಾದ ಮಾಹಿತಿಯ ಆಧಾರದ ಮೇಲೆಯೇ ಶಮರ್ಾ ದಾಳಿಗೆಂದು ಹೊರಟಿದ್ದರು. ನಾಲ್ಕು ಅಂತಸ್ತಿನ ಈ ಕಟ್ಟಡದ ಎರಡನೇ ಅಂತಸ್ತಿಗೆ ಪೊಲೀಸರು ಹೋಗುವ ವೇಳೆಗಾಗಲೇ ಅಡಗಿದ್ದ ಉಗ್ರರು ಗುಂಡಿನ ಸುರಿಮಳೆಗೈಯ್ಯಲಾರಂಭಿಸಿದ್ದರು. ಇಬ್ಬರು ಉಗ್ರರನ್ನು ಈ ದಾಳಿಯಲ್ಲಿ ಕೊಂದು ಹಾಕಿದ ಶಮರ್ಾ ಅವರ ಧೀರ ಪಡೆ ಎದುರಿನಿಂದ ಬರುತ್ತಿದ್ದ ಗುಂಡಿನ ಸುರಿಮಳೆ ನಿಂತು ಹೋದ ಮೇಲೆ ಅಡಗುದಾಣದ ಬಾಗಿಲನ್ನು ತೆರೆದು ಒಳ ನುಗ್ಗಲು ಪ್ರಯತ್ನಿಸಿತು. ಆಗ ತೂರಿ ಬಂದ ಗುಂಡುಗಳು ಮೋಹನ್ ಚಂದ್ ಶರ್ಮ ಅವರನ್ನು ಬಲಿ ತೆಗೆದುಕೊಂಡಿತ್ತು. ಏಟು ತಿಂದ ಇನ್ನಿಬ್ಬರು ಪೊಲೀಸರು ಆನಂತರ ಕೊನೆಯುಸಿರೆಳೆದರು. ಈ ಎನ್ಕೌಂಟರ್ನಲ್ಲಿ ಇಬ್ಬರು ಕಣ್ತಪ್ಪಿಸಿ ಮಾಯವಾಗಿದ್ದರು. ಬಾಂಬ್ ತಜ್ಞ ಆತಿಫ್ ಅಮೀನ್ ಈ ಎನ್ಕೌಂಟರ್ನಲ್ಲಿ ತೀರಿಕೊಂಡಿದ್ದು ಇಂಡಿಯನ್ ಮುಜಾಹಿದ್ದೀನ್ಗೆ ನುಂಗಲಾರದ ತುತ್ತಾಗಿತ್ತು. ಮೊಹಮ್ಮದ್ ಸಾಜಿದ್ ಎಂಬ ಮತ್ತೊಬ್ಬ ಉಗ್ರನೂ ಕೂಡ ಇದೇ ಎನ್ಕೌಂಟರ್ನಲ್ಲಿ ಹೆಣವಾಗಿಬಿಟ್ಟ. ಹೆದರಿಕೆಯಿಂದ ತನ್ನನ್ನು ತಾನು ಶೌಚಾಲಯದೊಳಗೆ ಕೂಡಿ ಹಾಕಿಕೊಂಡಿದ್ದ ಮೊಹಮ್ಮದ್ ಸೈಫ್ ಶರಣಾಗತನಾದ. ಶೆಹಜéಾದ್ ಅಹ್ಮದ್ ಮತ್ತು ಜುನೈದ್ ಕಟ್ಟಡದಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದರು.

2

ಅಲ್ಲಿಗೇ ಭಾರತದ ಸೆಕ್ಯುಲರ್ವಾದಿಗಳಿಗೆ ಎದ್ದೆದ್ದು ಕುಣಿಯಲು ಬೇಕಿದ್ದ ವಿಚಾರಗಳೆಲ್ಲ ಸಿಕ್ಕಿದವು. ದೆಹಲಿ ಪೊಲೀಸ್ ಇಷ್ಟು ಸಾಹಸದಿಂದ ಪ್ರಾಣವನ್ನೇ ಪಣವಿಟ್ಟು ಉಗ್ರರೊಂದಿಗೆ ಕಾದಾಡಿದ್ದನ್ನು ಮರೆತು ಇಡಿಯ ಎನ್ಕೌಂಟರ್ನನ್ನೇ ನಕಲಿ ಎಂದು ಹೇಳಲು ಇವರು ಹಿಂಜರಿಯಲಿಲ್ಲ. ಸೋನಿಯಾಗಾಂಧಿ ನಕಲಿ ಎನ್ಕೌಂಟರ್ನಲ್ಲಿ ಮೃತರಾಗಿರುವ ಮುಸಲ್ಮಾನ ಬಂಧುಗಳನ್ನು ಕಂಡು ಗಳಗಳನೆ ಅತ್ತುಬಿಟ್ಟರೆಂದು ಅಂದಿನ ಕಾನೂನು ಸಚಿವ ಸಲ್ಮಾನ್ ಖುಷರ್ಿದ್ ಚುನಾವಣಾ ರ್ಯಾಲಿಯಲ್ಲಿ ಜನರ ಮುಂದೆ ಉದ್ಘೋಷಿಸಿದರು. ಆ್ಯಕ್ಟ್ ನೌ ಫಾರ್ ಹಾರ್ಮನಿ ಅಂಡ್ ಡೆಮಾಕ್ರಸಿ ಎಂಬ ಸಕರ್ಾರೇತರ ಸಂಸ್ಥೆ ಬೀದಿಗಿಳಿಯಿತು. ಮಾನವ ಹಕ್ಕುಗಳ ಆಯೋಗ ತಮ್ಮೆಲ್ಲ ಶಕ್ತಿಯನ್ನು ಬಳಸಿ ದೆಹಲಿ ಪೊಲೀಸರ ವಿರುದ್ಧ ಕೂಗಾಡಿತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವಿಚಾರಣೆ ನಡೆಸಿ ದೆಹಲಿಯ ಪೊಲೀಸರ ತಪ್ಪಿಲ್ಲ ಎಂದ ನಂತರವೂ ಕಾಂಗ್ರಸ್ಸಿಗರ ಕಣ್ಣೀರು ನಿಲ್ಲಲಿಲ್ಲ. ಅತ್ತ ಚುನಾವಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ ಕೂಡ ಬಾಟ್ಲಾಹೌಸ್ ಎನ್ಕೌಂಟರ್ನಲ್ಲಿ ತೀರಿಕೊಂಡವರ ಪರವಾಗಿ ದನಿಯೆತ್ತಿ ಅಸಹ್ಯ ಹುಟ್ಟುವಂತೆ ಮಾಡಿದರು. ಪುಣ್ಯಕ್ಕೆ ಈ ಎನ್ಕೌಂಟರ್ನಲ್ಲಿ ಒಬ್ಬ ಸೆರೆಸಿಕ್ಕಿದ್ದ. ಅವನೂ ತಪ್ಪಿಸಿಕೊಂಡುಬಿಟ್ಟಿದ್ದರೆ ದೆಹಲಿಯ ಪೊಲೀಸರನ್ನು ನೇಣಿಗೇರಿಸಿಬಿಡುತ್ತಿದ್ದರೇನೋ! ಎನ್.ಡಿ.ಟಿ.ವಿಯಂತಹ ಮಾಧ್ಯಮ ಪ್ರವರ್ತಕರು ಈ ಇಡಿಯ ಪ್ರಕರಣವನ್ನು ಹಿಂದೂ-ಮುಸಲ್ಮಾನ ಅಂತರವನ್ನು ಹೆಚ್ಚಿಸಲು ಬಳಸಿಕೊಂಡರು. ಸಮಾಜವಾದಿ, ಬಹುಜನ ಸಮಾಜವಾದಿಯಂತಹ ಪಕ್ಷಗಳಂತೂ ಮುಗ್ಧ ಮುಸಲ್ಮಾನ ತರುಣರನ್ನು ಕೊಲ್ಲಲಿಕ್ಕೆಂದು ಮಾಡಿದ ಉಪಾಯವಿದು ಎಂದೂ ಹೇಳಿಯಾಯಿತು. ಈ ಎನ್ಕೌಂಟರ್ನ ನೆನಪು ಆರದಂತೆ ನೋಡಿಕೊಳ್ಳುವ ಮತ್ತು ಅದರಿಂದ ಪ್ರೇರಣೆ ಪಡೆಯುವ ಕೆಲಸವನ್ನು ಜಿಹಾದಿಗಳು ಮಾಡುತ್ತಲೇ ಬಂದಿದ್ದರು. ಈ ಎನ್ಕೌಂಟರ್ನ ಎರಡನೇ ವಷರ್ಾಚರಣೆಗಾಗಿ ದೆಹಲಿಯ ಜಾಮಾ ಮಸ್ಜಿದ್ನ ಹೊರಗಿದ್ದ ವಿದೇಶಿ ಯಾತ್ರಿಕರನ್ನು ಹೊತ್ತಿದ್ದ ಬಸ್ಸಿನ ಮೇಲೆ ಬಾಂಬ್ ದಾಳಿ ನಡೆಸಿ ಸಕರ್ಾರಕ್ಕೆ ಎಚ್ಚರಿಕೆ ಕೊಡಲಾಗಿತ್ತು! ಆದರೆ ದೆಹಲಿಯ ಪೊಲೀಸರು ಕೈ ಕಟ್ಟಿ ಕುಳಿತಿರಲಿಲ್ಲ. ಅವರು ತಪ್ಪಿಸಿಕೊಂಡ ಇಬ್ಬರಿಗಾಗಿ ನಿರಂತರ ಹುಡುಕಾಟ ನಡೆಸಿಯೇ ಇದ್ದರು. ಬಾಟ್ಲಾ ಹೌಸ್ನಿಂದ ತಪ್ಪಿಸಿಕೊಂಡಿದ್ದ ಶಹಜéಾದ್ ಮತ್ತು ಜುನೈದ್ ಸುಮಾರು ಒಂದು ತಿಂಗಳುಗಳ ಕಾಲ ದೇಶದಾದ್ಯಂತ ಸುತ್ತಾಟ ನಡೆಸಿದ್ದರು. ಬಸ್ ಮತ್ತು ಟ್ರೈನ್ಗಳಲ್ಲೇ ರಾತ್ರಿಗಳನ್ನು ಕಳೆದಿದ್ದರು. ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರಗಳ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ಹಣವನ್ನು ಕೇಳಿದ್ದರು. ದೀರ್ಘಕಾಲ ಉಳಿದುಕೊಳ್ಳುವ ವ್ಯವಸ್ಥೆಗಾಗಿ ಪ್ರಲಾಪ ಮಾಡಿದ್ದರು. ಆದರೆ ಯಾರೊಬ್ಬರೂ ಅದನ್ನು ಪುರಸ್ಕರಿಸಲಿಲ್ಲ. ಇಬ್ಬರೂ ಜೊತೆಗಿರುವುದು ಅನುಮಾನಕ್ಕೆ ಕಾರಣವಾದೀತೆಂದು ಒಂದು ತಿಂಗಳ ನಂತರ ಬೇರ್ಪಟ್ಟರು. ಶಹಜéಾದ 2010 ರಲ್ಲಿ ಉತ್ತರಪ್ರದೇಶದ ಅಜéಂಗಡ್ನಲ್ಲಿ ಸಿಕ್ಕುಬಿದ್ದ. ಅವನಿಗೆ ಜೀವಾವಧಿ ಶಿಕ್ಷೆಯಾಯಿತು. ಜುನೈದ್ ಬಿಹಾರದ ಮೂಲಕ ನೇಪಾಳಕ್ಕೆ ಹೋಗಿ ಅಲ್ಲಿನ ನಾಗರಿಕತ್ವವನ್ನು ಪಡೆದುಕೊಂಡು ಮೊಹಮ್ಮದ್ ಸಲೀಮ್ ಎಂಬ ಹೆಸರಿನ ಪಾಸ್ಪೋರ್ಟನ್ನು ಮಾಡಿಸಿಕೊಂಡುಬಿಟ್ಟ. ನೇಪಾಳದಲ್ಲಿ ಒಂದು ಹೋಟೆಲನ್ನು ಆರಂಭಿಸಿದ. ಕೆಲವು ದಿನಗಳ ಕಾಲ ಒಂದಷ್ಟು ಶಾಲೆಗಳಲ್ಲಿ ಶಿಕ್ಷಕನಾಗಿ ನಟಿಸಿದ. ಅಲ್ಲಿಯೇ ಒಂದು ಮದುವೆಯಾಗಿ ಯಾರಿಗೂ ಅನುಮಾನ ಬರದಂತೆ ನಡೆದುಕೊಂಡ. ಆದರೆ ಅವನೊಂದಿಗೆ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಸಿಮಿಯ ಮಾಸ್ಟರ್ ಮೈಂಡ್ ತೌಕೀರ್ ಕಳೆದ ಕೆಲವು ತಿಂಗಳ ಹಿಂದೆ ನಮ್ಮ ಪೊಲೀಸರಿಗೆ ಸಿಕ್ಕುಬಿದ್ದ ನಂತರ ಜುನೈದ್ನ ಕೇಸಿಗೆ ಜೀವ ಬಂದಿತ್ತು. ಬಾಟ್ಲಾ ಎನ್ಕೌಂಟರ್ನ ಎಲ್ಲ ಅವಮಾನವನ್ನು ತೊಳೆದುಕೊಳ್ಳಲಿಕ್ಕೆ ಪೊಲೀಸರು ತುದಿಗಾಲಲ್ಲಿ ನಿಂತಿದ್ದರು. ಜುನೈದ್ನ ಎಲ್ಲ ಹಳೆಯ ಪಟ್ಟಿಯನ್ನು ತಿರುವು ಹಾಕಿದ ಪೊಲೀಸರಿಗೆ ಗಾಬರಿ ಕಾದಿತ್ತು. ಆತ ದೆಹಲಿಯ ಕರೋಲ್ಬಾಗ್, ಕನಾಟ್ ಪ್ಲೇಸ್, ಗ್ರೇಟರ್ ಕೈಲಾಶ್ಗಳ ಬಾಂಬು ದಾಳಿಯಲ್ಲಿ ಸಕ್ರಿಯನಾಗಿದ್ದ. 2007 ರ ಯುಪಿ ದಾಳಿಯಲ್ಲಿ, 2008 ರ ಜೈಪುರ ಮತ್ತು ಅಹ್ಮದಾಬಾದ್ ಬಾಂಬ್ ದಾಳಿಗಳಲ್ಲಿ ಆತ ಮೋಸ್ಟ್ ವಾಂಟೆಡ್ ಆಗಿದ್ದ! ಅವನಿಂದಾದ ದಾಳಿಗಳಲ್ಲಿ 165 ಜನ ತೀರಿಕೊಂಡಿದ್ದರು, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಆತನಿಗೆ ಇಂಡಿಯನ್ ಮುಜಾಹಿದ್ದೀನ್ ನ ಸಂಸ್ಥಾಪಕ ರಿಯಾಜ್é್ ಭಟ್ಕಳ್ನ ಸಂಪರ್ಕ ಬಲು ಜೋರಾಗಿತ್ತು. ಅವನನ್ನು ಹಿಡಿದು ಒಳದಬ್ಬುವುದು ಭಾರತದ ಪೊಲೀಸರ ಪಾಲಿಗೆ ಬಲುದೊಡ್ಡ ಗೆಲುವಾಗಲಿತ್ತು. ತೌಕೀರ್ನನ್ನು ದಾಳವಾಗಿ ಬಳಸಿಕೊಳ್ಳಲಾಯ್ತು. ಅತ್ತ ಜುನೈದ್ ತನ್ನನ್ನು ಹಿಡಿಯಲು ಸಾಧ್ಯವೇ ಇಲ್ಲವೆಂದು ಮೈಮರೆತು ಕುಳಿತಿದ್ದ. ಹೆಚ್ಚು ಕಡಿಮೆ 10 ವರ್ಷಗಳ ಹಿಂದೆ ನಡೆದಂತಹ ಘಟನೆಯನ್ನು ಈಗ ಯಾರೂ ನೆನಪಿಟ್ಟುಕೊಂಡಿರಲಾರರು ಎಂಬುದು ಅವನ ಕಲ್ಪನೆಯಾಗಿದ್ದಿರಬೇಕು.

1

ಭಾರತ-ನೇಪಾಳ ಗಡಿಗೆ ತನ್ನ ಹಳೆಯ ಗೆಳೆಯರೊಬ್ಬರನ್ನು ಭೇಟಿ ಮಾಡಲು ಬರುವಂತೆ ಜುನೈದ್ನನ್ನು ಪ್ರೇರೇಪಿಸಲಾಯ್ತು. ತೌಕೀರ್ ಪೊಲೀಸರಿಗೆ ಸಿಕ್ಕಿಬಿದ್ದಿರಬಹುದೆಂಬ ಸ್ವಲ್ಪವೂ ಅನುಮಾನವಿರದಿದ್ದ ಜುನೈದ್ ಮೈಮರೆತಿದ್ದ. ಇತ್ತ ಗಡಿ ಪ್ರದೇಶದಲ್ಲಿ ಹೊಂಚು ಹಾಕಿ ಕುಳಿತಿದ್ದ ಭಾರತೀಯ ಪೊಲೀಸರು ಜುನೈದ್ನನ್ನು ಗುರುತಿಸಿದರು, ತಾಳ್ಮೆಯಿಂದ ಕಾದರು ಮತ್ತು ಥೇಟು ಹಿಂದಿ ಸಿನಿಮಾ ಶೈಲಿಯ ರೀತಿಯಲ್ಲೇ ಹೊತ್ತು ತಂದರು. ಇನ್ಸ್ಪೆಕ್ಟರ್ ಮೋಹನ್ ಚಂದ್ ಶರ್ಮರವರಿಗೆ ನಿಜವಾದ ಗೌರವ ದಕ್ಕಿದ್ದು ಅವರಿಗೆ ಅಶೋಕ ಚಕ್ರ ಸಿಕ್ಕ ದಿನವಲ್ಲ, ಬದಲಿಗೆ ಜುನೈದ್ನ ಬಂಧನವಾದ ದಿನವೇ. ಈ ಉಗ್ರರ ಬಂಧನಕ್ಕೆಂದು ತಮ್ಮೆಲ್ಲ ಪೊಲೀಸರಿಗೂ ಬುಲೆಟ್ ಪ್ರೂಫ್ ಜಾಕೆಟ್ಟನ್ನು ಹಾಕಿಸಿ, ಸಾಕಷ್ಟು ಶಸ್ತ್ರಗಳನ್ನು ಕೈಗಿಟ್ಟು ಕರೆದುಕೊಂಡು ಹೋಗಿದ್ದ ಶಮರ್ಾ ತಾವು ಮಾತ್ರ ಬುಲೆಟ್ ಪ್ರೂಫ್ ಜಾಕೆಟ್ಟನ್ನು ಹಾಕದೇ ಅಡಗುತಾಣಕ್ಕೆ ಸಿಂಹದಂತೆ ನುಗ್ಗಿದ್ದರು. ದುರದೃಷ್ಟ ಅವರ ಹೆಗಲೇರಿತ್ತು ಅಷ್ಟೇ. ಇಂತಹ ಒಬ್ಬ ಸಾಹಸಿಯನ್ನು ಗೌರವಿಸಬೇಕಿದ್ದ ಕಾಂಗ್ರೆಸ್ಸು ಸಿಗಬಹುದಾಗಿರುವಂತಹ ಕೆಲವು ಸಾವಿರ ವೋಟುಗಳಿಗಾಗಿ ಶಮರ್ಾ ಅವರ ಸಾವನ್ನು ಆಂತರಿಕ ಕಿತ್ತಾಟಗಳ ಫಲವೆಂದು ಅವಮಾನಿಸಿಬಿಟ್ಟತ್ತು. ವಾಸ್ತವವಾಗಿ ಅಳಬೇಕಿದ್ದುದು ಸೋನಿಯಾಗಾಂಧಿ ಅಲ್ಲ, ಇಂಥವರನ್ನು ಅಧಿಕಾರದಲ್ಲಿ ಕೂರಿಸಿದ್ದ ನಾವುಗಳು! ವೋಟಿಗಾಗಿ ಅಗತ್ಯ ಬಿದ್ದರೆ ದೇಶವನ್ನೂ ಮಾರಿಬಿಡುವ ಈ ಕೆಟ್ಟ ಜನರಿಗೆ ಪಾಠ ಕಲಿಸಬೇಕಾದ ಜರೂರತ್ತು ಖಂಡಿತ ಇದೆ. ಜುನೈದ್ನ ಬಂಧನದಿಂದ ಇವರೆಲ್ಲರ ಬಂಡವಾಳಗಳು ಹೊರಬಿದ್ದಿವೆ. ನಾವಿಂದು ನಡುರಸ್ತೆಯಲ್ಲಿ ನಿಲ್ಲಿಸಿ ರಾಹುಲ್ನನ್ನು ಪ್ರಶ್ನಿಸಬೇಕಿದೆ. ಕೇಂದ್ರ ಮತ್ತು ದೆಹಲಿ ಎರಡರಲ್ಲೂ ಅಧಿಕಾರದಲ್ಲಿದ್ದ ಕಾಂಗ್ರಸ್ಸಿಗೆ ಇದು ನೈಜ ಎನ್ಕೌಂಟರ್ ಎಂದು ಗೊತ್ತಿರಲಿಲ್ಲವೇ? ಗೊತ್ತಿದ್ದರೂ ಸೋನಿಯಾಗಾಂಧಿ ಸತ್ತ ಭಯೋತ್ಪಾದಕರಿಗಾಗಿ ಕಣ್ಣೀರು ಸುರಿಸಿದ್ದು ಅದೆಷ್ಟು ನ್ಯಾಯ? ಅದು ಭಯೋತ್ಪಾದಕರನ್ನು ಮುಗ್ಧರೆಂದು ಬಿಂಬಿಸಿ ಉಳಿಸುವ ಸನ್ನಾಹವಾಗಿತ್ತೇ? ಇಷ್ಟೆಲ್ಲಾ ಇದ್ದಾಗ್ಯೂ ಈಗ ಕನರ್ಾಟಕದಲ್ಲಿ ಮತ್ತೊಮ್ಮೆ ಇದೇ ಬಗೆಯ ಹತ್ಯೆಗಳನ್ನು ಬೆಂಬಲಿಸುತ್ತಿದ್ದೀರಲ್ಲಾ! ಕೊಲೆಗಡುಕರನ್ನು ಮುಗ್ಧರೆಂದು ಕರೆದು ಅವರನ್ನು ಬಿಡುಗಡೆ ಮಾಡುವ ನಿಗೂಢ ಉಪಾಯಕ್ಕೆ ಸಜ್ಜಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯ. ಹಾಗೆ ಮಾಡಿದರೆ ಪೊಲೀಸರ ನೈತಿಕ ಸ್ಥೈರ್ಯ ಕುಸಿಯಲಾರದೇನು? ಒಮ್ಮೆ ನೆಹರು-ಗಾಂಧಿ ಮಾಡಿದ ತಪ್ಪಿನಿಂದಾಗಿ ತುಂಡಾದ ದೇಶವನ್ನು ನೀವುಗಳೆಲ್ಲ ಸೇರಿ ಮತ್ತೆ ಮತ್ತೆ ತುಂಡರಿಸಬೇಕೆಂದಿದ್ದೀರೇನು?
ರಾಹುಲ್ ಕನರ್ಾಟಕಕ್ಕೆ ಮತ್ತೊಮ್ಮೆ ಬರುತ್ತಿದ್ದಾರೆ. ನಿಮಗೆಲ್ಲಾದರು ಅವರು ಮಾತನಾಡಲು ಸಿಕ್ಕರೆ ಈ ಪ್ರಶ್ನೆಗಳನ್ನು ದಯಮಾಡಿ ಕೇಳಿ. ಮೋಹನ್ ಚಂದ್ ಶಮರ್ಾ ಗೋರಿಯೊಳಗೂ ತುಸು ನೆಮ್ಮದಿಯಿಂದ ಉಸಿರಾಡಬಹುದು!

Comments are closed.