ವಿಭಾಗಗಳು

ಸುದ್ದಿಪತ್ರ


 

ಭಾರತದ ಗೆಲುವಿಗೆ ಪಾಕಿಸ್ತಾನದಲ್ಲಿ ನಮಾಜ್!

ಕೇಸರಿಯನ್ನು ವಿರೋಧಿಸುವುದು ಎಡಚರ ಜನ್ಮಕ್ಕಂಟಿಬಂದುದಾದರೂ ಈ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ್ದು ಅವರ ಪಾಲಿಗೆ ಅನಿವಾರ್ಯವಾಗಿತ್ತು. ಏಕೆಂದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ಮಾತ್ರ ಪಾಕಿಸ್ತಾನ ಸೆಮಿಫೈನಲ್ಗೆ ಬರುವುದೆಂಬುದು ಲೆಕ್ಕಾಚಾರದ ಪ್ರಕಾರ ಸಿದ್ಧವಾಗಿತ್ತು. ಹೀಗಾಗಿ ಬಹುಶಃ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಎಲ್ಲಾ ಮುಸಲ್ಮಾನರೂ, ಬುದ್ಧಿಜೀವಿಗಳು, ಪಾಕಿಸ್ತಾನಿಯರು ಕೊನೆಗೆ ಜಗತ್ತಿನಲ್ಲಿರುವ ಎಲ್ಲಾ ಮುಸಲ್ಮಾನರು ಭಾರತ ಗೆಲ್ಲಲಿ ಎಂದು ಪ್ರಾಥರ್ಿಸಿಕೊಂಡಿದ್ದಲ್ಲದೇ ಭಾರತೀಯ ತಂಡವನ್ನೇ ಹುರಿದುಂಬಿಸಲಾರಂಭಿಸಿದರು.

ಕ್ರಿಕೆಟ್ಟು ಎಂದಿಗೂ ಇಷ್ಟು ತಮಾಷೆಯದ್ದಾಗಿರಲಿಲ್ಲ. ಆಟವೆನ್ನುವುದು ಗೆಲ್ಲುವ ತುಡಿತದ್ದು ಎಂದು ನಾವೆಲ್ಲ ಭಾವಿಸುತ್ತೇವೆ. ಆದರೆ ಆ ತುಡಿತವನ್ನೂ ಮೀರಿ ಅನೇಕ ಲೆಕ್ಕಾಚಾರಗಳು ಕೆಲಸ ಮಾಡುತ್ತವೆ. ನಿಣರ್ಾಯಕ ಪಂದ್ಯದಲ್ಲಿ ತನಗೆ ಎದುರಾಳಿ ಯಾರಾಗಬೇಕೆಂಬುದರ ಲೆಕ್ಕಾಚಾರದಿಂದ ಹಿಡಿದು ಯಾವ ತಂಡವನ್ನು ನಿಣರ್ಾಯಕ ಘಟ್ಟಕ್ಕೆ ಬರದಂತೆ ತಡೆಯಬೇಕು ಎನ್ನುವವರೆಗೂ ಆಲೋಚಿಸಿಯೇ ಆಟವಾಡಬಹುದು. ಇದಕ್ಕೆ ಮೊನ್ನೆ ನಡೆದ ವಿಶ್ವಕಪ್ನ ಭಾರತ-ಇಂಗ್ಲೆಂಡ್ಗಳ ಪಂದ್ಯವೇ ಸಾಕ್ಷಿ.

7

ಈ ಪಂದ್ಯಕ್ಕೆ ಅನೇಕ ಆಯಾಮಗಳಿದ್ದವು. ಎಲ್ಲಕ್ಕೂ ಮೊದಲನೆಯದ್ದು ಭಾರತ ಧರಿಸಿದ್ದ ಜೆಸರ್ಿಯದ್ದು. ಎರಡೂ ತಂಡಗಳು ನೀಲಿಬಣ್ಣದ ಜೆಸರ್ಿಯನ್ನೇ ಧರಿಸಿ ಆಡಿದರೆ ಜನರಿಗೆ ಆಟವನ್ನು ಆನಂದಿಸಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಯಾವುದಾದರೊಂದು ತಂಡ ಬಟ್ಟೆಯ ಬಣ್ಣವನ್ನು ಬದಲಾಯಿಸಲೇಬೇಕಿತ್ತು. ಆತಿಥೇಯ ರಾಷ್ಟ್ರ ಇಂಗ್ಲೆಂಡಾದುದರಿಂದ ಎದುರಾಳಿ ಭಾರತ ತಾನೇ ಜೆಸರ್ಿಯ ಬಣ್ಣ ಬದಲಿಸಬೇಕಿತ್ತು. ಸಹಜವಾಗಿಯೇ ಬಣ್ಣದ ಆಯ್ಕೆ ಕೇಸರಿಯಾಗಿದ್ದುದರಿಂದ ಇಲ್ಲಿ ಉತ್ಪಾತವೇ ಆಗಿಬಿಟ್ಟಿತು! ಭಾರತದಲ್ಲಿರುವ ಬುದ್ಧಿಜೀವಿಗಳಿಗೆ ಮೋದಿ, ಅಮಿತ್ಶಾ, ಆರ್ಎಸ್ಎಸ್, ಬಿಜೆಪಿ ಇವುಗಳೆಲ್ಲದರ ಮೇಲಿನ ಕೋಪ ಕೇಸರಿ ಬಣ್ಣದ ಮೇಲೆ ತಿರುಗಿಕೊಂಡಿತು. ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದಲೇ ಈ ಬಣ್ಣದ ಜೆಸರ್ಿ ಆಯ್ಕೆ ಮಾಡಲಾಗಿದೆ ಎಂದು ಅನೇಕರು ಅಪಹಾಸ್ಯಕ್ಕೊಳಗಾದರು. ಒಂದೇ ಒಂದು ಸಂಗತಿ ನಡೆಯಲಿಲ್ಲವೆಂದರೆ ಅರವಿಂದ್ ಕೇಜ್ರಿವಾಲ್ ಈ ಜೆಸರ್ಿಯನ್ನು ವಿರೋಧಿಸಿ ಉಪವಾಸಕ್ಕೆ ಕೂರದಿದ್ದುದು ಮಾತ್ರ. ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದು ವಿರಾಟ್ ಕೋಹ್ಲಿ. ನೀಲಿಬಣ್ಣದ ಜೆಸರ್ಿ ಅತ್ಯಂತ ನೆಚ್ಚಿನದ್ದಾದರೂ ಕೇಸರಿ ಬಣ್ಣದ ಜೆಸರ್ಿ ನನಗೆ ಬಹಳ ಇಷ್ಟವಾಯ್ತು ಎಂದು ಟ್ವೀಟ್ ಮಾಡಿಬಿಟ್ಟರು!

8

ಕೇಸರಿಯನ್ನು ವಿರೋಧಿಸುವುದು ಎಡಚರ ಜನ್ಮಕ್ಕಂಟಿಬಂದುದಾದರೂ ಈ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ್ದು ಅವರ ಪಾಲಿಗೆ ಅನಿವಾರ್ಯವಾಗಿತ್ತು. ಏಕೆಂದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ಮಾತ್ರ ಪಾಕಿಸ್ತಾನ ಸೆಮಿಫೈನಲ್ಗೆ ಬರುವುದೆಂಬುದು ಲೆಕ್ಕಾಚಾರದ ಪ್ರಕಾರ ಸಿದ್ಧವಾಗಿತ್ತು. ಹೀಗಾಗಿ ಬಹುಶಃ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಎಲ್ಲಾ ಮುಸಲ್ಮಾನರೂ, ಬುದ್ಧಿಜೀವಿಗಳು, ಪಾಕಿಸ್ತಾನಿಯರು ಕೊನೆಗೆ ಜಗತ್ತಿನಲ್ಲಿರುವ ಎಲ್ಲಾ ಮುಸಲ್ಮಾನರು ಭಾರತ ಗೆಲ್ಲಲಿ ಎಂದು ಪ್ರಾಥರ್ಿಸಿಕೊಂಡಿದ್ದಲ್ಲದೇ ಭಾರತೀಯ ತಂಡವನ್ನೇ ಹುರಿದುಂಬಿಸಲಾರಂಭಿಸಿದರು. ಮೈದಾನದಲ್ಲಂತೂ ಪಾಕಿಸ್ತಾನದ ಜೆಸರ್ಿ ಧರಿಸಿದ್ದ ಪಾಕ್ ಬೆಂಬಲಿಗರು ಭಾರತೀಯರ ಪ್ರತಿಯೊಂದು ಹೊಡೆತಗಳಿಗೆ ಕೇಕೆ ಹಾಕಿ ಸಂಭ್ರಮಿಸುತ್ತಿದ್ದುದು ಕಂಡುಬಂತು. ಎಲ್ಲಾ ಬಿಡಿ, ಪಾಕಿಸ್ತಾನಿಯರು ಆರಂಭದಲ್ಲಿ ಜನಗಣ ಮನ ಹಾಡಿದ್ದು, ಭಾರತಕ್ಕೆ ಜಯವಾಗಲಿ ಎಂದು ಉದ್ಘೋಷಿಸಿದ್ದು ನೋಡುಗರಿಗೆ ಭಾರೀ ಮನೋರಂಜನೆ ಕೊಡುತ್ತಿತ್ತು!

ಭಾರತ ತಂಡ ಮಾತ್ರ ಯಾವ ಕ್ಷಣದಲ್ಲೂ ಭಾವುಕವಾಗಲಿಲ್ಲ. ಲೆಕ್ಕಾಚಾರ ಸ್ಪಷ್ಟವಾಗಿತ್ತು. ಪಾಕಿಸ್ತಾನ ಮತ್ತು ಭಾರತ ಒಂದೇ ತಕ್ಕಡಿಯಲ್ಲಿ ತುಲನೆ ಮಾಡುವಂತಹ ರಾಷ್ಟ್ರವೇ ಅಲ್ಲವಲ್ಲ. ಅಂತಹುದರಲ್ಲಿ ಸೆಮಿಫೈನಲ್ಗೆ ಪಾಕಿಸ್ತಾನವೂ ಬಂದರೆ ಹೇಗೆ?! ಭಾರತದೊಂದಿಗೆ ಸರಿಯಾದ ಸಂಬಂಧವನ್ನಿಟ್ಟುಕೊಳ್ಳದೇ ಹೋದರೆ ಪಾಕಿಸ್ತಾನ ಗೆಲುವಿನ ಓಟದಲ್ಲಿ ಎಲ್ಲರಿಗಿಂತಲೂ ಹಿಂದುಳಿಯುತ್ತದೆ. ನಮ್ಮೊಡನೆ ಸೋಲುವುದಂತೂ ಸರಿಯೇ, ಜಾಗತಿಕ ರೇಸ್ನಲ್ಲೂ ಮುಂದೆ ಬರಲು ಸಾಧ್ಯವಾಗದು ಎಂಬ ಸಂದೇಶ ಕೊಡಲೇಬೇಕಿತ್ತಲ್ಲ. ಈ ಪಂದ್ಯ ಅದಕ್ಕೆ ಸಾಕ್ಷಿಯಂತೆ ಬಿಂಬಿತವಾಯ್ತು. ಮೊದಲು ಬೌಲಿಂಗ್ ಮಾಡುವ ಅವಕಾಶ ಪಡೆದ ಭಾರತ ಇಂಗ್ಲೆಂಡಿಗೆ ಎಂದೂ ಪ್ರತಿರೋಧವನ್ನು ತೋರಲೇ ಇಲ್ಲ. ಆರಂಭಿಕ ಬ್ಯಾಟ್ಸ್ಮನ್ಗಳ ಆಟವನ್ನು ನೋಡಿದರಂತೂ ಒಟ್ಟು ಮೊತ್ತ 400ರ ಗಡಿ ದಾಟಿಬಿಡುವುದೇನೋ ಎಂದೆನಿಸಿತ್ತು. ಯಾವೊಬ್ಬ ಬೌಲರ್ ಕೂಡ ರನ್ ತಡೆಯುವ ಸಾಹಸವೇ ಮಾಡಲಿಲ್ಲ. ಮರಳಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಾಗಲೂ ದೊಡ್ಡ ಮೊತ್ತ ಬೆನ್ನಟ್ಟುವ ಲಕ್ಷಣವನ್ನೇನೂ ಭಾರತ ತೋರಲಿಲ್ಲ. 44 ಓವರ್ಗಳವರೆಗೂ ಒಂದೇ ಒಂದು ಸಿಕ್ಸ್ ಹೊಡೆಯದೇ ಘಟಾನುಘಟಿಗಳು ಆಟ ಆಡಿದ್ದು ಎಂಥವನಿಗೂ ಅಚ್ಚರಿ ಎನಿಸಿತ್ತು. ಕೋಹ್ಲಿ ಮೈದಾನಕ್ಕೆ ಬಂದಾಗ ಪಾಕಿಸ್ತಾನಿಯರು ಸಂಭ್ರಮಿಸಿ ಕುಣಿದಾಡಿಬಿಟ್ಟರು. ಆತ ಔಟ್ ಆಗಿ ಪೆವಿಲಿಯನ್ಗೆ ಮರಳುವಾಗ ಅವರುಗಳ ಎದೆ ಭಾರವಾಗಿ ಹೋಗಿತ್ತು. ಟ್ವೀಟ್ಗಳ ಮೂಲಕ ಪಾಕಿಸ್ತಾನಿಯರ ಬದಲಾಗುವ ಭಾವನೆಗಳು ಸ್ಪಷ್ಟವಾಗಿ ವ್ಯಕ್ತಗೊಳ್ಳುತ್ತಿದ್ದವು. ಪಾಕಿಸ್ತಾನದ ಟ್ವೀಟಿಗ ಮುತರ್ಾಜಾ ಶಾ ‘ಭಾರತ ಬೇಕೆಂತಲೇ ಮ್ಯಾಚ್ ಬಿಟ್ಟುಕೊಡುತ್ತಿದೆ. ಒಬ್ಬ ಆಟಗಾರನಲ್ಲೂ ಗೆಲ್ಲುವ ತವಕ ಕಾಣುತ್ತಿಲ್ಲ’ ಎಂದು ನೊಂದುಕೊಂಡಿದ್ದ. ಬಹುತೇಕರ ಅಭಿಪ್ರಾಯ ಇದೇ ಆಗಿತ್ತು. ಡಾ. ಯಾಸೀದ್ ಸಯೀದ್ಖಾನ್ ‘ಭಾರತದ ದೊಡ್ಡ ಮೊತ್ತದ ಬೆನ್ನಟ್ಟುವ ಹೆಚ್ಚಿನ ಪಾಲು ರನ್ಗಳು ಕೊನೆಯ ಹತ್ತು ಓವರ್ನಲ್ಲಿ ಬರುತ್ತವೆ. ಆದರೆ ಈ ಪಂದ್ಯದಲ್ಲಿ ಕೊನೆಯ ಓವರ್ಗಳಲ್ಲಿ ಅವರು ಗಳಿಸಿದ್ದು 5 ಬೌಂಡರಿ ಮಾತ್ರ!’ ಎಂದು ನೊಂದುಕೊಂಡಿದ್ದರು! ಕೆಲವರಂತೂ ಭಾರತ ಬೇಕಂತಲೇ ಸೋತಿದೆ ಎಂಬುದನ್ನು ತನಿಖೆ ಮಾಡಬೇಕೆಂದು ಒತ್ತಾಯಿಸಿಯೂಬಿಟ್ಟರು. ಇಡಿಯ ಮ್ಯಾಚು ಫಿಕ್ಸಾಗಿದೆ ಎಂಬ ಅವರ ದುಃಖ ಟ್ವೀಟಿಗರ ಮೂಲಕ ವ್ಯಕ್ತವಾಗುತ್ತಿತ್ತು.

9

ಬರೀ ಪಾಕಿಸ್ತಾನದ ಟ್ವೀಟಿಗರು ಹೀಗೆ ಹೇಳಿದ್ದರೆ ಸುಮ್ಮನಾಗಬಹುದಿತ್ತೇನೋ. ಒಮರ್ ಅಬ್ದುಲ್ಲಾ ರಾತ್ರಿಯಿಡೀ ನಿದ್ದೆ ಮಾಡಿರುವುದೇ ಅನುಮಾನ. ‘ಪಾಕಿಸ್ತಾನ ಅಥವಾ ಇಂಗ್ಲೆಂಡಿನ ಹಣೆಬರಹದ ಬದಲು ಭಾರತದ ಹಣಬರಹವೇ ಪಣದಲ್ಲಿದ್ದಿದ್ದರೆ ಭಾರತ ಹೀಗೆ ಆಡಿರುತ್ತಿತ್ತಾ?’ ಎಂದು ನೊಂದಿದ್ದಾರೆ. ಮೆಹಬೂಬಾ ಮುಫ್ತಿಯಂತು ತನ್ನೆಲ್ಲಾ ಆಕ್ರೋಶವನ್ನು ಜೆಸರ್ಿಯ ಬಣ್ಣದ ಮೇಲೆ ಹಾಕಿ ‘ನನ್ನದು ಮೂಢನಂಬಿಕೆ ಎಂದು ಜರಿದರೂ ಪರವಾಗಿಲ್ಲ. ಭಾರತದ ವಿಶ್ವಕಪ್ ಅಜೇಯಯಾತ್ರೆಗೆ ಭಂಗಬಂದಿದ್ದು ಜೆಸರ್ಿಯ ಬಣ್ಣದ ಕಾರಣದಿಂದಲೇ’ ಎಂದು ಚಡಪಡಿಸಿಬಿಟ್ಟಿದ್ದಾರೆ. ಇವರಿಗೆಲ್ಲಾ ಭಾರತ ಸೋತಿರುವ ದುಃಖ ಏಕೆಂದರೆ ಪಾಕಿಸ್ತಾನ 2019ರ ವಿಶ್ವಕಪ್ನಿಂದ ಶಾಶ್ವತವಾಗಿ ಹೊರಹೋಯಿತಲ್ಲ ಎಂಬುದಕ್ಕಾಗಿ ಅಷ್ಟೆ! ಬಹುಶಃ ಈ ಜೆಸರ್ಿಯ ಬಣ್ಣ ಕೇಸರಿಯಾಗಿದ್ದುದರಿಂದಲೇ ಪಾಕಿಸ್ತಾನ ಟೂನರ್ಿಯಿಂದ ಹೊರಬಿತ್ತು ಎಂದು ಹೇಳಿದರೆ ನೀವ್ಯಾರೂ ನನ್ನದ್ದು ಮೂಢನಂಬಿಕೆ ಎಂದು ಕರೆಯುವುದಿಲ್ಲ ಎಂದು ಭಾವಿಸುತ್ತೇನೆ.

ಭಾರತ ಇನ್ನೆರಡು ಪಂದ್ಯಗಳನ್ನು ಆಡಲಿಕ್ಕಿದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ವಿರುದ್ಧ. ತಂಡದ ನಿರ್ವಹಣೆಯ ಶೈಲಿ ನೋಡಿದರೆ ಗೆಲುವು ಕಷ್ಟವೇನಲ್ಲ. ಒಂದೇ ಒಂದು ಮ್ಯಾಚು ಗೆದ್ದರೂ ನಮ್ಮ ಸೆಮಿಫೈನಲ್ ಯಾತ್ರೆ ಖಾತ್ರಿ. ಹೀಗಿರುವಾಗ ಪಾಕಿಸ್ತಾನವನ್ನು ಹೊರದಬ್ಬಲೆಂದೇ ಹೀಗೆ ಆಟ ಆಡಿದ್ದಾರೆ ಎಂದು ಯಾರಾದರೂ ಹೇಳಿದರೂ ತಲೆತಗ್ಗಿಸಬೇಕಾದ ಅಗತ್ಯವೇನೂ ಇಲ್ಲ. ಏಕೆಂದರೆ ಕದನ ಮತ್ತು ಪ್ರೀತಿಯಲ್ಲಿ ಏನು ಮಾಡಿದರೂ ನ್ಯಾಯಯುತವೇ!

Comments are closed.