ವಿಭಾಗಗಳು

ಸುದ್ದಿಪತ್ರ


 

ಭಾರತದ ಭಾಗ್ಯದ ರೇಖೆ!

ಮೊದಲೆಲ್ಲಾ ಚೀನಾದ ಆಹ್ವಾನವನ್ನು ವಿರೋಧಿಸುವ ಸಾಹಸ ತೋರದಿದ್ದ ಭಾರತ ಮೋದಿ ಬಂದ ನಂತರ ಬದಲಾಗಿದೆ. ಈ ಚೀನಾದ ಆಹ್ವಾನವನ್ನು ಭಾರತ ಧಿಕ್ಕರಿಸಿದ್ದಲ್ಲದೇ ಭೂತಾನ್ ಕೂಡ ಚೀನಾದ ಮಾತನ್ನು ಕೇಳದಿರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಮೋದಿ ಅಧಿಕಾರಿಕ್ಕೆ ಬಂದಾಗಿನಿಂದ ಚೀನಾದ ಪ್ರಭೆ ದಿನೇ ದಿನೇ ಕುಸಿಯುತ್ತಿದೆ. ಮೋದಿಗೆ ಚೀನಾ ಒಂದು ಸವಾಲಾಗಿತ್ತು ಮತ್ತು ಬೆಳೆಯಲು ಮೆಟ್ಟಿಲು ಕೂಡ. ಚೀನಾವನ್ನು ಅಂಕೆಗೆ ತಂದುಕೊಳ್ಳದಿದ್ದರೆ ಭಾರತ ಬಲಾಢ್ಯವೆಂದು ಸಾಬೀತುಪಡಿಸುವುದು ಕಷ್ಟವಿತ್ತು ಮತ್ತು ಚೀನಾವನ್ನು ಹಿಡಿತಕ್ಕೆ ತಂದುಕೊಳ್ಳುವ ಸಾಮಥ್ರ್ಯವಿದೆ ಎಂದು ಜಗತ್ತಿಗೆ ತೋರ್ಪಡಿಸಿದಾಗಲೇ ಅವರೆಲ್ಲರೂ ನಮ್ಮೊಂದಿಗೆ ನಿಲ್ಲಲು ಸಾಧ್ಯವಾಗಿದ್ದು. 2019ರ ವೇಳೆಗೆ ನರೇಂದ್ರಮೋದಿ ತಮ್ಮೆಲ್ಲಾ ಪ್ರಯತ್ನಗಳಿಂದಾಗಿ ಭಾರತದ ವಿದೇಶೀ ಹೂಡಿಕೆಯನ್ನು ಚೀನಾಕ್ಕಿಂತ ಹೆಚ್ಚಿಸುವಲ್ಲಿ ಸಕ್ಷಮರಾಗಿದ್ದಾರೆ. ನಮ್ಮ ಜಿಡಿಪಿಯ ವೃದ್ಧಿಯ ದರ ಈಗ ಚೀನಾಕ್ಕಿಂತಲೂ ವೇಗವಾಗಿದೆ. ನಾವೀಗ ಶಸ್ತ್ರಾಸ್ತ್ರ ರಫ್ತು ರಾಷ್ಟ್ರವಾಗಿ ಬೆಳೆಯುವ ಸಿದ್ಧತೆ ನಡೆಸಿದ್ದೇವೆ. ಎಲ್ಲಕ್ಕಿಂತ ಹೆಚ್ಚು ನಮ್ಮ ನೆರೆ ರಾಷ್ಟ್ರಗಳು ನಮ್ಮನ್ನೀಗ ಒಪ್ಪಿಕೊಂಡಿವೆ. ಇದಕ್ಕೆ ಪ್ರತಿಯಾಗಿ ರಾಷ್ಟ್ರಗಳನ್ನು ಸಾಲದ ಸುಳಿಯಲ್ಲಿ ಸಿಕ್ಕಿಸಿ ಆಪೋಶನ ತೆಗೆದುಕೊಳ್ಳುವ ಚೀನಾದ ಪ್ರಯತ್ನ ಈಗ ಹೊಸತಾಗಿ ಉಳಿದಿಲ್ಲ. ಸ್ವತಃ ಪಾಕಿಸ್ತಾನವೇ ಇದರ ಬಲಿಪಶುವಾಗಿದ್ದು ತನ್ನ ಅರಿವಿಗೇ ಬಾರದಂತೆ ಭಾರತವನ್ನು ಓಲೈಸುವಲ್ಲಿ ತೊಡಗಿಕೊಂಡಿದೆ. ಪಾಕಿಸ್ತಾನದಲ್ಲಿ ಈಗ ಹಿಂದೂ ಮಂದಿರಗಳ ಪುನರುಜ್ಜೀವನ ಕಾರ್ಯ ಆರಂಭವಾಗುತ್ತಿದೆ. ಸ್ವತಃ ಇಮ್ರಾನ್ಖಾನ್ ಮೋದಿಯನ್ನೇ ಓಲೈಸುವ ಮಾತುಗಳನ್ನಾಡತೊಡಗಿದ್ದಾರೆ. ಇದರರ್ಥ ನಿಧಾನವಾಗಿ ಚೀನಾದ ಪ್ರಭಾವ ಏಷ್ಯಾದಲ್ಲಿ ಕುಸಿಯತೊಡಗಿದೆ ಅಂತ!

2

ಇವೆಲ್ಲಕ್ಕಿಂತಲೂ ಹೊಸ ಸುದ್ದಿ ಏನು ಗೊತ್ತೇ? ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ ಫೋರಮ್ ಎಂಬ ಸಂಘಟನೆಯನ್ನು ಚೀನಾ ಹುಟ್ಟುಹಾಕಿ ಆ ಸಭೆಗೆ ಭಾರತವೂ ಸೇರಿದಂತೆ ನಮ್ಮ ಅಕ್ಕ-ಪಕ್ಕದ ಅನೇಕ ರಾಷ್ಟ್ರಗಳನ್ನು ಆಹ್ವಾನಿಸಿತ್ತು. ಮೊದಲೆಲ್ಲಾ ಚೀನಾದ ಆಹ್ವಾನವನ್ನು ವಿರೋಧಿಸುವ ಸಾಹಸ ತೋರದಿದ್ದ ಭಾರತ ಮೋದಿ ಬಂದ ನಂತರ ಬದಲಾಗಿದೆ. ಈ ಚೀನಾದ ಆಹ್ವಾನವನ್ನು ಭಾರತ ಧಿಕ್ಕರಿಸಿದ್ದಲ್ಲದೇ ಭೂತಾನ್ ಕೂಡ ಚೀನಾದ ಮಾತನ್ನು ಕೇಳದಿರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಭೂತಾನ್ಗೆ ಥಿಂಪುವಿನ ಆಡಳಿತ ಬಂದಾಗಿನಿಂದಲೂ ಹೊಸ ಸಕರ್ಾರವನ್ನು ಓಲೈಸುವ ಪ್ರಯತ್ನ ಚೀನಾ ಮಾಡುತ್ತಲೇ ಬಂದಿತ್ತು. ಆದರೆ ಭಾರತದ ತೆಕ್ಕೆಯಲ್ಲಿರುವಂತಹ ಭೂತಾನ್ ಈ ಬಾರಿ ಚೀನಾದ ಮಾತನ್ನು ಧಿಕ್ಕರಿಸಿದೆಯಲ್ಲದೇ ಈ ಸಭೆಗೆ ಬರುವುದಿಲ್ಲವೆಂದು ಸ್ಪಷ್ಟವಾಗಿ ನಿರಾಕರಣೆ ಮಾಡುವ ಸೂಚನೆಗಳು ಗೋಚರಿಸುತ್ತಿವೆ. ಮಾಲ್ಡೀವ್ಸ್, ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶಗಳು ಸದ್ಯಕ್ಕಂತೂ ಒಪ್ಪಿಕೊಂಡಿರುವಂತೆ ಕಂಡರೂ ಅವರಲ್ಲೂ ಕೂಡ ಬದಲಾವಣೆ ಬಂದರೆ ಅಚ್ಚರಿ ಪಡಬೇಕಿಲ್ಲ!

3

ಭೂತಾನಿಗೆ ಚೀನಾದೊಂದಿಗೆ ಯಾವ ರಾಜತಾಂತ್ರಿಕ ಸಂಬಂಧವೂ ಇಲ್ಲ. ಉಲ್ಟಾ ಡೋಕ್ಲಾಂನಲ್ಲಿ ಭೂತಾನ್ನೊಂದಿಗೆ ತಗಾದೆ ತೆಗೆದು ಚೀನಾ ಅದನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿತ್ತು. ಆಗೆಲ್ಲಾ ಅದರ ಸಹಕಾರಕ್ಕೆ ಬಂದಿದ್ದು ಭಾರತವೇ. ಡೋಕ್ಲಾಂನಲ್ಲಿ ಬೀಡುಬಿಟ್ಟಿದ್ದ ಚೀನೀ ಸೈನಿಕರನ್ನು ಭಾರತ ತನ್ನ ಸೈನಿಕ ಶಕ್ತಿಯನ್ನಷ್ಟೇ ಅಲ್ಲದೇ ಎಲ್ಲ ರಾಜತಾಂತ್ರಿಕ ನಡೆಗಳನ್ನು ಬಳಸಿ ಓಡಿಸುವಲ್ಲಿ ಸಫಲವಾಯಿತು. ಈ ವೇಳೆಯಲ್ಲಿ ಭೂತಾನ್ ಅನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿದ ಚೀನಾ ಭಾರತದಲ್ಲಿರುವ ತನ್ನ ರಾಯಭಾರಿಯನ್ನು ಭೂತಾನ್ಗೆ ಕಳಿಸಿ ಮಾತುಕತೆಯಾಡಿಸುವ ಪ್ರಯತ್ನ ಮಾಡಿತು. ಚೀನಾದ ವಿದೇಶಾಂಗ ಸಚಿವರೂ ಭೂತಾನಿಗೆ ಈ ಹೊತ್ತಲ್ಲಿ ಭೇಟಿ ಕೊಟ್ಟಿದ್ದರು. ಒಂದು ಹಂತದಲ್ಲಿ ಚೀನಾದೊಂದಿಗಿನ ಬಲವಾದ ಸಂಬಂಧದಿಂದ ಆಥರ್ಿಕತೆ ಗಟ್ಟಿಯಾಗುತ್ತದೆ ಎಂದು ಭೂತಾನ್ ಭಾವಿಸಿತ್ತು. ಆದರೆ ಈ ಸಭೆಗೆ ತಾನು ಹೋದರೆ ಅದು ಭಾರತದ ಮುನಿಸಿಗೆ ಕಾರಣವಾಗಬಹುದು ಎಂದರಿತ ಭೂತಾನ್ ಸಭೆಯನ್ನು ಬಹಿಷ್ಕರಿಸುವ ಸಾಧ್ಯತೆಗಳು ಕಂಡುಬರುತ್ತಿವೆ. ಇದು ಏಷ್ಯಾದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವದ ಮುನ್ಸೂಚನೆ!

ನರೇಂದ್ರಮೋದಿ ಅಧಿಕಾರಕ್ಕೆ ಬರುವ ಮುನ್ನ ಭಾರತದ ರಾಜತಾಂತ್ರಿಕ ವ್ಯವಸ್ಥೆ ನೆರೆ ರಾಷ್ಟ್ರಗಳನ್ನು ಗಣಿಸಿದ್ದೇ ಇಲ್ಲ. ಅವೆಲ್ಲವೂ ಸುಲಭವಾಗಿ ಚೀನಾದ ತೆಕ್ಕೆಗೆ ಜಾರಿಬಿಟ್ಟಿದ್ದವು. ಮೋದಿ ಅಧಿಕಾರಕ್ಕೆ ಬಂದ ಹೊಸತರಲ್ಲೇ ಭೂತಾನ್ಗೆ ಭೇಟಿಕೊಟ್ಟು ಅಲ್ಲಿನ ಪ್ರೀತ್ಯಾದರಗಳನ್ನು ಪಡೆದದ್ದಲ್ಲದೇ ಎರಡೂ ರಾಷ್ಟ್ರಗಳ ಸಂಬಂಧವನ್ನು ಗಟ್ಟಿ ಮಾಡಿದರು. ಮುಂದೆ ಚೀನಾದ ಸುತ್ತಲೂ ಇರುವ ರಾಷ್ಟ್ರಗಳನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ಚೀನಾಕ್ಕೂ ತಲೆ ನೋವಾಗಿ ಪರಿಣಮಿಸಿದ್ದರು. ಜಗತ್ತಿನ ಪರಿಕಲ್ಪನೆಯೇ ಹಾಗೆ. ಯಾರು ಬಲಶಾಲಿ ಎನಿಸುತ್ತಾರೋ ಅವರೊಂದಿಗೆ ಉಳಿದವರೆಲ್ಲಾ ನಿಂತುಬಿಡುತ್ತಾರೆ. ಅಮೇರಿಕಾದೊಂದಿಗೆ ಇಡಿಯ ಜಗತ್ತು ನಿಂತಿರಲು ಕಾರಣ ಇದೇ. ಅಮೇರಿಕಾದ ಸಾರ್ವಭೌಮತೆಯನ್ನು ಮುರಿಯಲು ಚೀನಾ ಪ್ರಯತ್ನಪಟ್ಟಿದ್ದು ಇದೇ ಕಾರಣಕ್ಕಾಗಿ. ಇದನ್ನರಿತ ಅಮೇರಿಕಾ ಚೀನಾವನ್ನು ಮಟ್ಟಹಾಕಲು ಹೊಂಚುಹಾಕುತ್ತಿತ್ತು. ಆಗ ಭಾರತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೋದಿ ಇದಕ್ಕೆ ಸಮರ್ಥ ವ್ಯಕ್ತಿ ಎನಿಸಿಯೇ ಇಡೀ ಜಗತ್ತು ಭಾರತದ ಪರವಾಗಿ ನಿಲ್ಲಲು ಆರಂಭಿಸಿದೆ. ಶಕ್ತ ರಾಷ್ಟ್ರಕ್ಕೆ ಯಾವಾಗಲೂ ಬೆಲೆ ಇದೆ. ಭಾರತ ಆ ದಿಕ್ಕಿನತ್ತ ಈಗ ದಾಪುಗಾಲಿಡುತ್ತಿದೆ.

4

ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಜನರ ಆಕಾಂಕ್ಷೆಗೆ ಈಗ ಇದೇ ಕಾರಣ. ಹತ್ತು ವರ್ಷಗಳ ಕಾಲ ನಿಷ್ಕ್ರಿಯವಾಗಿದ್ದ, ಬಲಹೀನವಾಗಿದ್ದ ರಾಷ್ಟ್ರವನ್ನು ಕಂಡು ಈಗ ಏಕಾಕಿ ಬಲಶಾಲಿಯಾಗಿರುವ ರಾಷ್ಟ್ರವನ್ನು ನೋಡಿದ ಪ್ರತಿಯೊಬ್ಬ ಮತದಾರನೂ ತನ್ನ ಮತದ ಮಹತ್ವವನ್ನು ಅರಿತಿದ್ದಾನೆ. ಜಗತ್ತಿನಿಂದ ಛೀಮಾರಿಗೊಳಗಾಗುವ, ಜಗತ್ತು ಗಣಿಸದೇ ಇರುವ ರಾಷ್ಟ್ರವಾಗಿ ಬದುಕಿರುವುದಕ್ಕಿಂದ ನೂರಾರು ಸಣ್ಣ-ಪುಟ್ಟ ರಾಷ್ಟ್ರಗಳ ಆಶಾಕಿರಣವಾಗಿ ಬದುಕುವುದು ಭಾರತಕ್ಕೆ ಸೂಕ್ತವಾದ ಮಾರ್ಗ. ಮೋದಿ ಅದೇ ಮಾರ್ಗದಲ್ಲಿ ಭಾರತವನ್ನು ಕೊಂಡೊಯ್ಯುತ್ತಿದ್ದಾರೆ. ಚುನಾವಣೆಯ ದಿನ ಮತ ಹಾಕುವಾಗ ನಾವೆಲ್ಲರೂ ಈ ವಿಚಾರಗಳ ಕುರಿತಂತೆ ಗಮನ ಇಡುವುದು ಅತ್ಯಗತ್ಯ. ನಮ್ಮ ಒಂದು ಮತ ಜಾಗತಿಕ ಮಟ್ಟದಲ್ಲಿ ಭಾರತದ ನೆಲೆಯನ್ನು ಗುರುತಿಸಲಿದೆ. ನಮ್ಮ ಒಂದು ಮತ ಜಗತ್ತಿನ ಭೂಪಟದಲ್ಲಿ ಬಲಶಾಲಿ ಭಾರತವನ್ನು ಗುರುತಿಸಲಿದೆ. ನಮ್ಮ ಒಂದು ಮತ ಏಷ್ಯಾ ಖಂಡದಲ್ಲಿ ಭಾರತವನ್ನು ಹೊಳೆಯುವಂತೆ ಮಾಡಲಿದೆ.

ನೆನಪಿಡಿ, ನಿಮ್ಮ ಕೈ ಬೆರಳಿಗೆ ಹಾಕುವ ಕಪ್ಪುಮಸಿ ಕಲೆಯಲ್ಲ, ಅದು ಭಾರತದ ಭಾಗ್ಯದ ರೇಖೆ. ಈ ಬಾರಿ ಭಾರತಕ್ಕಾಗಿ ಮತ ಚಲಾಯಿಸೋಣ!!

Comments are closed.